Homeರಾಷ್ಟ್ರೀಯ18 ದಿನಗಳಲ್ಲಿ 8 ವೈಫಲ್ಯ ಘಟನೆ: ಸ್ಪೈಸ್‌ಜೆಟ್‌ಗೆ ಶೋಕಾಸ್‌ ನೋಟಿಸ್‌ ನೀಡಿದ ಸರ್ಕಾರ

18 ದಿನಗಳಲ್ಲಿ 8 ವೈಫಲ್ಯ ಘಟನೆ: ಸ್ಪೈಸ್‌ಜೆಟ್‌ಗೆ ಶೋಕಾಸ್‌ ನೋಟಿಸ್‌ ನೀಡಿದ ಸರ್ಕಾರ

- Advertisement -
- Advertisement -

ಕಳೆದ 18 ದಿನಗಳಲ್ಲಿ ಎಂಟು ವೈಫಲ್ಯದ ಘಟನೆಗಳ‌ನ್ನು ಉಲ್ಲೇಖಿಸಿ ವೈಮಾನಿಕ ನಿಯಂತ್ರಕ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬುಧವಾರ ಸ್ಪೈಸ್‌ಜೆಟ್‌ಗೆ ಶೋಕಾಸ್ ನೋಟಿಸ್ ನೀಡಿದೆ. ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ಸ್ಪೈಸ್‌ಜೆಟ್‌ಗೆ ಮೂರು ವಾರಗಳ ಕಾಲಾವಕಾಶ ನೀಡಿದೆ.

ನೋಟೀಸ್‌ನಲ್ಲಿ ಡಿಜಿಸಿಎ, “ನಿಯಮ 134 ಮತ್ತು ಏರ್‌ಕ್ರಾಫ್ಟ್ ರೂಲ್ಸ್-1937 ರ ವೇಳಾಪಟ್ಟಿ XI ರ ಅಡಿಯಲ್ಲಿ ‘ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ವಾಯು ಸೇವೆಗಳನ್ನು ನೀಡಲು’ ಸ್ಪೈಸ್‌ಜೆಟ್ ವಿಫಲವಾಗಿದೆ” ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಡಿಜಿಸಿಎ ಸೂಚನೆಗೆ ಪ್ರತಿಕ್ರಿಯಿಸಿರುವ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಪ್ರಯಾಣಿಕರ ಸುರಕ್ಷತೆಯೇ ಅತಿಮುಖ್ಯ ಎಂದು ಪ್ರತಿಪಾದಿಸಿದ್ದು, “ಸುರಕ್ಷತೆಗೆ ಅಡ್ಡಿಯಾಗುವ ಸಣ್ಣ ದೋಷವನ್ನು ಸಹ ಕೂಲಂಕಷವಾಗಿ ತನಿಖೆ ಮಾಡಲಾಗುತ್ತದೆ” ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಸ್ಸು, ಕಾರು ಓಕೆ, ವಿಮಾನ ತಳ್ಳುವುದನ್ನು ನೋಡಿದ್ದೀರಾ? ಇಲ್ಲವಾದರೆ ಇಲ್ಲಿ ನೋಡಿ

“ಕಳಪೆ ಆಂತರಿಕ ಸುರಕ್ಷತಾ ಮೇಲ್ವಿಚಾರಣೆ ಯಿಂದ ಹಿಡಿದು, ಬಿಡಿಭಾಗಗಳ ಮಾರಾಟಗಾರರಿಗೆ ಸಮಯಕ್ಕೆ ಸರಿಯಾಗಿ ಪಾವತಿಸದಿರುವ ಸಮಸ್ಯೆಗಳಿಂದ ಸ್ಪೈಸ್‌ಜೆಟ್‌ಗೆ ಬಿಡಿಭಾಗಗಳ ಕೊರತೆಯಾಗಿದೆ” ಎಂದು ನೋಟಿಸ್ ಹೇಳಿದೆ.

ನಿನ್ನೆ, ಚೀನಾಕ್ಕೆ ಹಾರುತ್ತಿದ್ದ ಸ್ಪೈಸ್‌ಜೆಟ್‌ನ ಸರಕು ವಿಮಾನದ ಹವಾಮಾನ ರಾಡಾರ್ ಕೆಲಸ ಮಾಡುವುದು ನಿಲ್ಲಿಸಿದ ಕಾರಣ ಕೋಲ್ಕತ್ತಾದಲ್ಲಿ ಇಳಿಯಿತು. ಕಳೆದ 18 ದಿನಗಳ ನಡುವೆ ಸ್ಪೈಸ್ ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಎಂಟನೇ ಘಟನೆ ಇದಾಗಿದೆ.

ಸ್ಪೈಸ್‌ಜೆಟ್ ವಿಮಾನವನ್ನು ಒಳಗೊಂಡ ಇತ್ತೀಚಿನ ಕೆಲವು ಘಟನೆಗಳು:

ಮೇ 4: ಆಯಿಲ್ ಫಿಲ್ಟರ್ ವಾರ್ನಿಂಗ್‌ನಿಂದಾಗಿ ಅದರ ಇಂಜಿನ್ ಒಂದನ್ನು ಹಾರಾಡುತ್ತಿರಬೇಕಾದರೆ ಸ್ಥಗಿತಗೊಳಿಸಬೇಕಾಗಿ ಬಂದು ಚೆನ್ನೈ-ದುರ್ಗಾಪುರ ವಿಮಾನವು ಹಾಗೆಯೆ ಹಿಂತಿರುಗಿತ್ತು.

ಮೇ 28: ಮುಂಬೈ-ಗೋರಖ್‌ಪುರ ತೆರಳುತ್ತಿದ್ದ ವಿಮಾನದ ವಿಂಡ್‌ಶೀಲ್ಡ್ 23,000 ಅಡಿಗಳಷ್ಟು ಎತ್ತರದಲ್ಲಿ ಬಿರುಕುಗೊಂಡ ನಂತರ ಮರಳಿತ್ತು.

ಇದನ್ನೂ ಓದಿ:  ಚೀನಾ ವಿಮಾನ ನಿಲ್ದಾಣದ ಚಿತ್ರ ಹಾಕಿ ಯುಪಿಯದ್ದು ಎಂದ ಬಿಜೆಪಿ ನಾಯಕರು!

ಜೂನ್ 19: ತಾಂತ್ರಿಕ ಸಮಸ್ಯೆಯಿಂದ ಜಬಲ್ಪುರಕ್ಕೆ ಹೊರಟ ವಿಮಾನ ದೆಹಲಿಗೆ ಮರಳಿತು.

ಜೂನ್ 19: ಪಟ್ನಾ-ದೆಹಲಿ ವಿಮಾನವು ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ಹಕ್ಕಿಯೊಂದಕ್ಕೆ ಡಿಕ್ಕಿ ಹೊಡೆದು ಅದರ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡು ತುರ್ತು ಭೂಸ್ಪರ್ಶ ಮಾಡಿತು.

ಜುಲೈ 2: ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಜಬಲ್‌ಪುರಕ್ಕೆ ಹೊರಟಿದ್ದ ವಿಮಾನ ದೆಹಲಿಗೆ ಮರಳಿತು.

ಜುಲೈ 5: ವಿಮಾನದ ವಿಂಡ್ ಶೀಲ್ಡ್ ಬಿರುಕು ಬಿಟ್ಟ ಪರಿಣಾಮ ಕಾಂಡ್ಲಾ-ಮುಂಬೈ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು.

ಜುಲೈ 5: ಇಂಧನ ಸೂಚಕವು ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ದೆಹಲಿ-ದುಬೈ ವಿಮಾನವು ಕರಾಚಿಯಲ್ಲಿ ಇಳಿಯಿತು.

ಇದನ್ನೂ ಓದಿ: ವಿಮಾನಗಳಲ್ಲಿ ಮಾಂಸಾಹಾರ ನಿಷೇಧಿಸುವಂತೆ ಒಕ್ಕೂಟ ಸರ್ಕಾರಕ್ಕೆ ಪತ್ರ

ಜುಲೈ 5: ಹವಾಮಾನ ರಾಡಾರ್ ವಿಫಲವಾದ ಕಾರಣ ಚೀನಾಕ್ಕೆ ತೆರಳುತ್ತಿದ್ದ ಕಾರ್ಗೋ ವಿಮಾನ ಕೋಲ್ಕತ್ತಾಗೆ ಹಿಂತಿರುಗಿತು.

ಕಳೆದ ಮೂರು ವರ್ಷಗಳಿಂದ ಸ್ಪೈಸ್ ಜೆಟ್ ನಷ್ಟದ ಹಾದಿ ಹಿಡಿದಿದೆ. 2018-19, 2019-20 ಮತ್ತು 2020-21 ರಲ್ಲಿ ಕ್ರಮವಾಗಿ 316 ಕೋಟಿ ರೂ., 934 ಕೋಟಿ ರೂ. ಮತ್ತು 998 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...