Homeಮುಖಪುಟಲೋಕಸಭೆ ಚುನಾವಣೆ | ದೇಶದಲ್ಲಿ 96.88 ಕೋಟಿ ಮತದಾರರು : ಚುನಾವಣಾ ಆಯೋಗ

ಲೋಕಸಭೆ ಚುನಾವಣೆ | ದೇಶದಲ್ಲಿ 96.88 ಕೋಟಿ ಮತದಾರರು : ಚುನಾವಣಾ ಆಯೋಗ

- Advertisement -
- Advertisement -

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ದೇಶದ 96.88 ಕೋಟಿ ಮತದಾರರು ಅರ್ಹರಾಗಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಇಂದು (ಫೆ.9) ಘೋಷಿಸಿದೆ. 18 ರಿಂದ 29 ವರ್ಷದೊಳಗಿನ ಎರಡು ಕೋಟಿಗೂ ಹೆಚ್ಚು ಯುವ ಮತದಾರರನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಕಳೆದ ಲೋಕಸಭೆ ಚುನಾವಣೆ ಬಳಿಕ, ಅಂದರೆ 2019 ರಿಂದ ನೋಂದಾಯಿತ ಮತದಾರರಲ್ಲಿ ಶೇ. 6ರಷ್ಟು ಹೆಚ್ಚಳವಾಗಿದೆ. ವಿಶ್ವದಲ್ಲೇ ಅತೀ ಹೆಚ್ಚು ಮತದಾರರು ಮುಂಬರು ಭಾರತದ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಅಣಿಯಾಗಿದ್ದಾರೆ ಎಂದು ಆಯೋಗ ಹೇಳಿದೆ.

ಕರಡು ಪಟ್ಟಿ ಸಿದ್ದಪಡಿಸುತ್ತಿದ್ದ ವೇಳೆ 95,73,52,077 ಇದ್ದ ಮತದಾರರ ಸಂಖ್ಯೆಯು, ಅಂತಿಮ ಪಟ್ಟಿಯ ವೇಳೆ 96,88,21,926ಕ್ಕೆ ಹೆಚ್ಚಳವಾಗಿದೆ. ಈ ಪೈಕಿ 49,72,31,994 ಮಂದಿ ಪುರುಷ ಮತದಾರರು, 47,15,41,888 ಮಂದಿ ಮಹಿಳಾ ಮತದಾರರಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.

48,044 ಮಂದಿ ಲೈಂಗಿಕ ಅಲ್ಪಸಂಖ್ಯಾತರು ಮತ್ತು 88,35,449 ವಿಶೇಷ ಚೇತನ ಮತದಾರರು ಮತ ಚಲಾಯಿಸಲು ನೋಂದಾಯಿಸಿದ್ದಾರೆ. 18ರಿಂದ 19ರ ವಯಸ್ಸಿನ 1,84,81,610 ಮಂದಿ, 20-29 ವಯಸ್ಸಿನ 19,74,37,160 ಮಂದಿ, 80ಕ್ಕಿಂತ ಮೇಲ್ಪಟ್ಟ ವಯಸ್ಸಿನ 1,85,92,918 ಮಂದಿ ಮತದಾರರು ನೋಂದಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಅಂಕಿ ಅಂಶ ಬಿಡುಗಡೆ ಮಾಡಿದೆ.

2,38,791 ಮಂದಿ ಶತಾಯುಷಿಗಳೂ ಮತದಾರರ ಪಟ್ಟಿಯಲ್ಲಿದ್ದಾರೆ. ಇದರ ಜೊತೆಗೆ 17 ವರ್ಷ ದಾಟಿದವರು ಮುಂಗಡವಾಗಿ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ಲಿಂಗ ಅನುಪಾತವು 2023ರಲ್ಲಿ 940 ಇದ್ದದ್ದು, 2024 ರಲ್ಲಿ 948 ಕ್ಕೆ ಏರಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ : ನನಗೆ ಕಳುಹಿಸಿರುವ ಸಮನ್ಸ್‌ಗಳ ಸಂಖ್ಯೆಯಷ್ಟು ಹೊಸ ಶಾಲೆಗಳನ್ನು ತೆರೆಯುತ್ತೇವೆ: ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...