Homeಅಂತರಾಷ್ಟ್ರೀಯಅತ್ಯುತ್ತಮ ಶಿಕ್ಷಣ ನೀಡುವ ರಾಷ್ಟ್ರಗಳಲ್ಲಿ ಫಿನ್‍ಲ್ಯಾಂಡ್ ನಂಬರ್ 1 ಆಗಿದ್ದು ಹೇಗೆ ಗೊತ್ತೆ?

ಅತ್ಯುತ್ತಮ ಶಿಕ್ಷಣ ನೀಡುವ ರಾಷ್ಟ್ರಗಳಲ್ಲಿ ಫಿನ್‍ಲ್ಯಾಂಡ್ ನಂಬರ್ 1 ಆಗಿದ್ದು ಹೇಗೆ ಗೊತ್ತೆ?

- Advertisement -
- Advertisement -

| ಪ್ರೊ. ಅನಿಲ್ ಸದ್ಗೋಪಾಲ್ |

ಇದು ಒಂದು ಪುಟ್ಟ ದೇಶದ ಕಥೆ. ಆ ದೇಶದ ಹೆಸರು ಫಿನ್‍ಲ್ಯಾಂಡ್. ನೀವುಗಳು ಈ ದೇಶದ ಹೆಸರನ್ನು ಬೇರೊಂದು ಪರೋಕ್ಷ ಕಾರಣಕ್ಕಾಗಿ ಕೇಳಿರುತ್ತೀರಿ. ಆ ದೇಶದ ಒಂದು ಉತ್ಪನ್ನ ನಮ್ಮೆಲ್ಲರ ಜೇಬು ಅಥವ ಕೈಗಳಲ್ಲಿರುತ್ತದೆ. ‘ನೋಕಿಯಾ’.

ಮೂರು ದಶಕಗಳ ಹಿಂದೆ ಯುರೋಪಿಯನ್ ದೇಶಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ನಡೆದ ಅಧ್ಯಯನ ವರದಿಯು ಫಿನ್‍ಲ್ಯಾಂಡ್‍ನ ಶಿಕ್ಷಣದ ಸ್ಥಿತಿಗತಿ ಇಡೀ ಪಟ್ಟಿಯಲ್ಲಿ ಕೊಟ್ಟಕೊನೆಯಲ್ಲಿದೆ ಎಂಬುದನ್ನು ತೋರಿಸಿತು. ವರದಿಯು ಈ ವಿಚಾರವನ್ನ ಹೊರಗೆಡವಿದ ಕೂಡಲೇ ಫಿನ್‍ಲ್ಯಾಂಡ್‍ನ ಸರ್ಕಾರ ಯಾವುದೋ ಕೆಲವು ಯೋಜನೆಗಳನ್ನು ಘೋಷಿಸಿ ಅದಕ್ಕೊಂದಿಷ್ಟು ಬಜೆಟ್‍ನ್ನು ನಿಗದಿಪಡಿಸಿ ಸುಮ್ಮನಾಗಲಿಲ್ಲ. ಇದರ ಕಾರಣಗಳ ಬಗ್ಗೆ ತನ್ನದೇ ಆದ ಪರಿಶೋಧನೆಗಳನ್ನು ನಡೆಸಿತು. ಅದರ ನಂತರ ಅಲ್ಲಿನ ಸರ್ಕಾರ ಒಂದು ನಿರ್ಧಾರಕ್ಕೆ ಬಂತು.

ತಮ್ಮ ಶಿಕ್ಷಣ ವ್ಯವಸ್ಥೆಯನ್ನು ಕೇವಲ ಸುಧಾರಿಸುವುದಲ್ಲ ಬದಲಿಗೆ ಅದರಲ್ಲಿ ಒಂದು ಕ್ರಾಂತಿಕಾರಕ ಪರಿವರ್ತನೆಯನ್ನೇ ತರಬೇಕು ಎಂದು ಪ್ರಯತ್ನ ಆರಂಭವಾಯಿತು. ಮೂವತ್ತು ವರ್ಷಗಳ ನಂತರ, ಮೂರು ದಶಕಗಳ ಹಿಂದೆ ಅಧ್ಯಯನ ನಡೆಸಿದ್ದ ಅದೇ ಸಂಸ್ಥೆಯು ನಡೆಸಿದ ಶೈಕ್ಷಣಿಕ ಸ್ತಿತಿಗತಿಗಳ ಅಧ್ಯಯನದ ವರದಿಯು, ಫಿನ್‍ಲ್ಯಾಂಡ್ ಯುರೋಪಿನ ದೊಡ್ಡ ಸಂಖ್ಯೆಯ ದೇಶಗಳ ಪಟ್ಟಿಯಲ್ಲಿ ಶೈಕ್ಷಣಿಕವಾಗಿ ಮೊದಲ ಸ್ಥಾನಕ್ಕೆ ಏರಿರುವುದು ಮಾತ್ರವಲ್ಲ ಇಡೀ ಪ್ರಪಂಚದಲ್ಲೇ ಫಿನ್‍ಲ್ಯಾಂಡ್ ನಂ.1 ಸ್ಥಾನದಲ್ಲಿರುವುದನ್ನು ಸಾಬೀತುಪಡಿಸಿತು. ಶಿಕ್ಷಣದ ಗುಣಮಟ್ಟ-ಶಿಕ್ಷಕರ ಗುಣಮಟ್ಟ, ಪಠ್ಯಕ್ರಮ ಮತ್ತು ಬೋಧನಾಕ್ರಮದ ಗುಣಮಟ್ಟ, ಶಿಕ್ಷಣ ಪಡೆಯುವುದಕ್ಕೆ ಸಮಾನ ಅವಕಾಶಗಳು ಮತ್ತು ಸಾರ್ವತ್ರಿಕವಾಗಿ ಎಲ್ಲರಿಗೂ ಒಂದೇ ರೀತಿಯ ಉತ್ತಮ ಉಚಿತ ಶಿಕ್ಷಣ ವ್ಯವಸ್ಥೆ- ಇವುಗಳನ್ನು ಫಿನ್‍ಲ್ಯಾಂಡ್ ಸಾಧಿಸಿದೆ ಎಂಬುದು ಜಗತ್ತಿಗೆ ತಿಳಿಯಿತು. ಈಗಾಗಲು ಕಾರಣಗಳೇನು ಎಂಬುದನ್ನು ನೋಡೋಣ.

ಮೊದಲನೇಯದಾಗಿ ಫಿನ್‍ಲ್ಯಾಂಡ್‍ನ ಸರ್ಕಾರ ಅಲ್ಲಿನ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾತ್ರೋರಾತ್ರಿ ವಶಕ್ಕೆ ತೆಗೆದುಕೊಂಡಿತು. ಏಕೆಂದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ ಹಾಗೂ ಎಲ್ಲರಿಗೂ ಸಾರ್ವತ್ರಿಕವಾಗಿ ಏಕರೂಪವಾಗಿ ದೊರಕಬೇಕಿರುವ ಸಮಾನ ಅವಕಾಶಗಳು ಮೊಟಕಾಗುತ್ತವೆ ಎಂಬುದು ಇದಕ್ಕೆ ಕಾರಣ. ಆದ್ದರಿಂದ ಪೂರ್ವಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರದ ವರೆಗಿನ ಸಂಪೂರ್ಣ ಶಿಕ್ಷಣವನ್ನು ಸರ್ಕಾರ ತನ್ನ ನೇರ ಉಸ್ತುವಾರಿಗೆ ತೆಗೆದುಕೊಂಡಿತು.

ಎರಡನೇಯದಾಗಿ, ಫಿನ್‍ಲ್ಯಾಂಡ್ ಸರ್ಕಾರ ಪ್ರತೀ ಕುಟುಂಬಕ್ಕೂ ಒಂದು ಆದೇಶ ಹೊರಡಿಸಿತು; ಇನ್ನು ಮೇಲೆ ದೇಶದ ಎಲ್ಲಾ ಕುಟುಂಬಗಳು ತಮ್ಮ ಮಕ್ಕಳನ್ನು ಹತ್ತಿರದ ಸರ್ಕಾರಿ ವೆಚ್ಚದಲ್ಲಿ ನಡೆಯುವ ಶಾಲೆಗಳಿಗೇ ಕಳಿಸಬೇಕು ಎಂದು. ಮನೆಯ ಸಮೀಪದ ಸರ್ಕಾರಿ ವೆಚ್ಚದಲ್ಲಿ ನಡೆಯುವ ಸಾರ್ವಜನಿಕ ಶಾಲೆಗೇ ಎಲ್ಲಾ ಮಕ್ಕಳೂ ಹೋಗಲಾರಂಭಿಸಿದ ಕೂಡಲೇ ಅಂತಹ ಎಲ್ಲಾ ಶಾಲೆಗಳೂ ನಿಜವಾದ ಅರ್ಥದಲ್ಲಿ ನೆರೆಹೊರೆ ಶಾಲೆಗಳಾದವು. ಆ ಶಾಲೆಗಳನ್ನು ಬಿಟ್ಟರೆ ಬೇರೆ ಶಾಲೆಗಳಿಗೆ ಯಾವ ಪೋಷಕರೂ ಮಕ್ಕಳನ್ನು ಕಳಿಸುವ ಆಯ್ಕೆಯನ್ನೇ ಅವರಿಗೆ ಕೊಡಲಾಗಿರಲಿಲ್ಲ. ನಮ್ಮಂತಹ ದೇಶದಲ್ಲಿ ಬಂಡವಾಳಶಾಹಿ ಮೌಲ್ಯವಾದ ‘ಆಯ್ಕೆಯ ಸ್ವಾತಂತ್ರ್ಯ’ದ ಬಗ್ಗೆ ತುಂಬಾ ಮಾತನಾಡಲಾಗುತ್ತದೆ (ನ್ಯಾಯಾಲಯಗಳೂ ಸೇರಿ). ಪೋಷಕರಿಗೆ ಆಯ್ಕೆ ಇರಬೇಕು, ಅವರನ್ನು ಹೇಗೆ ಒತ್ತಾಯಿಸಲು ಸಾಧ್ಯ ಎಂದು ಕೇಳಲಾಗುತ್ತದೆ. ಈ ಆಯ್ಕೆಯ ಪರಿಕಲ್ಪನೆಯೇ ತುಂಬಾ ಪೊಳ್ಳಾದುದು. ನಮ್ಮ ದೇಶದಲ್ಲಿ ಪ್ರಜಾತಾಂತ್ರಿಕ ಎಂದು ಕರೆಯಲಾಗುವ ಆಯ್ಕೆಯ ವಿಚಾರವನ್ನು ಫಿನ್‍ಲ್ಯಾಂಡ್ ಲಾಭಗಳಿಕೆಯ ಹುನ್ನಾರ ಎಂದು ನೋಡಿತು.

ಮೂರನೇಯ ಮತ್ತು ಅತ್ಯಂತ ಮುಖ್ಯವಾದ ವಿಚಾರವೆಂದರೆ, ಈ ಎಲ್ಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು-ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು- ಹೊಂದಿರುವ ಬೋಧಕ ಸಿಬ್ಬಂದಿಯು ದೇಶದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಗುಂಪಿಗೆ ಸೇರಿಸಲ್ಪಟ್ಟರು. ಅಲ್ಲಿನ ಮಂತ್ರಿಗಳಿಗಿಂತಲೂ ಉನ್ನತ ಅಧಿಕಾರಿಗಳಿಗಿಂತಲೂ ಶಿಕ್ಷಕರ ವೇತನ ಹೆಚ್ಚಾಯಿತು. ಫಿನ್‍ಲ್ಯಾಂಡ್ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ನಂತರ ಅಲ್ಲಿನ ಶಿಕ್ಷಣ ಸಚಿವರನ್ನು ಈ ಅದ್ಭುತವನ್ನು ಅವರು ಸಾಧಿಸಿದ್ದು ಹೇಗೆ ಎಂಬುದನು ಅಮೇರಿಕನ್ನರಿಗೆ ತಿಳಿಸುವುದಕ್ಕಾಗಿ ಯುಎಸ್‍ಎ ಗೆ ಕರೆಸಲಾಗಿತ್ತು. ಆಗ, ಮಾಧ್ಯಮದ ಜನರು ‘ನೀವು ಶಿಕ್ಷಕರಿಗೆ ಯಾಕೆ ಅತಿ ಹೆಚ್ಚು ಸಂಬಳ ಕೊಡಲು ನಿರ್ಧರಿಸಿದಿರಿ’ ಎಂದು ಕೇಳಿದರು. ಅವರ ಉತ್ತರ ನೆನಪಿನಲ್ಲಿರಿಸಿಕೊಳ್ಳಬೇಕಾದಂಥದ್ದು. ಶಿಕ್ಷಣ ಮಂತ್ರಿ ಉತ್ತರಿಸಿದರು. “ಏಕೆಂಧರೆ ನಾವು ಮಕ್ಕಳಿಗೆ ಸರಿಯಾಗಿ ತರಬೇತುಗೊಳಿಸುವುದು ಎಲ್ಲಾ ಕೆಲಸಗಳಲ್ಲಿ ಅತಿ ಕಷ್ಟದ ಕೆಲಸ ಎಂದು ಅರಿತೆವು. ಹಾಗೆಯೇ ಆ ಕೆಲಸಕ್ಕೆ ಬೇಕಾದ ಅತ್ಯುನ್ನತ ಅರ್ಹತೆ ಹೊಂದಿದವರು ಅಲ್ಲಿಗೆ ಬರಬೇಕಾಗಿದ್ದು ನಮಗೆ ಅತ್ಯಗತ್ಯವಾಗಿತ್ತು. ಆದ್ದರಿಂದ ಈ ಕ್ರಮ ಕೈಗೊಂಡೆವು” ಎಂದು ಉತ್ತರಿಸಿದರು.

ಉಚಿತ ಶಿಕ್ಷಣ ಸಾಧ್ಯವೇ? ಜರ್ಮನಿಯಲ್ಲಿ ಹೇಗಿದೆ?
ಜರ್ಮನಿ! ಜರ್ಮನಿ ಸ್ವಲ್ಪ ಸಮಯದ ಹಿಂದೆ ಇಂತಹ ಪವಾಡ ಎಂದು ಕರೆಯಬಹುದಾದ ವಿಚಾರವನ್ನು ಮಾಡಿ ತೋರಿಸಿತು. ಪೂರ್ವ ಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರದವರೆಗೆ ಸಂಪೂರ್ಣ ಉಚಿತ ಶಿಕ್ಷಣ. ಯಾವ ಪೋಷಕರೂ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಏನನ್ನೂ ವೆಚ್ಚ ಮಾಡುವ ಅಗತ್ಯವಿಲ್ಲ. ಇಂಜಿನಿಯರ್‍ಗಳಾಗಲೂ ಸಹಾ! ಮ್ಯಾನೇಜ್‍ಮೆಂಟ್ ಕಲಿಯಲೂ ಸಹಾ!
ಒಮ್ಮೆ ನಾನು ಒಬ್ಬ ಜರ್ಮನ್ ಶಿಕ್ಷಣತಜ್ಞನನ್ನು ಭೇಟಿ ಮಾಡಿದ್ದೆ. ಜರ್ಮನರು ಇಂಗ್ಲೀಷ್ ಕಲಿಯುವುದರ ಬಗ್ಗೆ ಅಷ್ಟೇನೂ ಉತ್ಸುಕರಾಗಿರುವುದಿಲ್ಲ. ಹೀಗಾಗಿ ನಾನು ಆತನನ್ನು “ನೀವು ಮಕ್ಕಳಿಗೆ ಶಿಕ್ಷಣ ನೀಡಲು ಎಷ್ಟು ಹಣ ಪಡೆಯುತ್ತೀರಿ?” ಎಂದು ಕೇಳಿದೆ. ಆತನಿಗೆ ಅರ್ಥ ಆಗಲಿಲ. “ಮಕ್ಕಳಿಂದ ಹಣ, ಯಾಕೆ?” ಎಂದ. “ಯಾಕೆಂದರೆ ಅವರು ನಿಮ್ಮ ಶಿಕ್ಷಣ ಸಂಸ್ಥೆಯನ್ನು ಕಲಿಯಲು ಉಪಯೋಗಿಸಿರುತ್ತಾರಲ್ಲ ಅದಕ್ಕೆ” ಎಂದೆ. ಆತ “ನಮ್ಮ ದೇಶದ ಪ್ರತಿಯೊಂದು ಮಗುವಿಗೂ ಸರ್ಕಾರದಿಂದ ಶಿಕ್ಷಣ ಪಡೆಯುವ ಹಕ್ಕು ಇದೆ, ಅದಕ್ಕಾಗಿ ಅವರು ಹಣ ಏಕೆ ಕಟ್ಟಬೇಕು? ಅದು ನಮ್ಮ ಜವಾಬ್ದಾರಿ ಅಲ್ಲವೇ?” ಎಂದ.

ಇದು ಇಂದಿನ ಭಾರತದಲ್ಲಿ ಬಹುಶಃ ಕಲ್ಪನೆಗೂ ಮೀರಿದ ವಿಚಾರ. ನಮ್ಮನ್ನು ನಾವು ಪ್ರಜಾಪ್ರಭುತ್ವ, ಅಥವಾ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆ ಅಥವಾ ನಮ್ಮ ದೇಶ ಯಾವ ವ್ಯವಸ್ಥೆಯಡಿ ನಡೆಯುತ್ತಿದೆ ಮೆಂಬುದೇ ಸ್ವಲ್ಪ ಗೊಂದಲದ ಸಂಗತಿ-ಒಟ್ಟಿನಲ್ಲಿ ಶಿಕ್ಷಣದ ವಿಚಾರದಲ್ಲಿ ಬಹುದೂರ ಸಾಗಬೇಕಿರುವ ನಮ್ಮ ದೇಶದಲ್ಲಿ ಹಣವಸೂಲಿಯೇ ಪ್ರತಿಯೊಂದು ಕೋರ್ಸ್‍ನ ಮೂಲಭೂತ ವಿಷಯ ಆಗಿಬಿಟ್ಟಿದೆ. ಆದರೆ, ಬಂಡವಾಳಶಾಹಿ ಸಿದ್ಧಾಂತದ ಅಡಿಯಲ್ಲಿ ನಡೆಯುವ ಜರ್ಮನಿಯ ಶಿಕ್ಷಣ ಸಂಸ್ಥೆಗಳಲ್ಲಿ ಹಣ ವಸೂಲಿಯೆಂಬ ಕಲ್ಪನೆಯೇ ಅಪರಿಚಿತ! ಆದ್ದರಿಂದ ಉಚಿತ ಶಿಕ್ಷಣ ಎಂಬುದು ನಾವು ಸಾಧಿಸಬೇಕಾದ ಬಹುಮುಖ್ಯವಾದ ಗುರಿ.

ಅಮೇರಿಕಾದಲ್ಲಿ ಯಾವ ಪದ್ದತಿ ಇದೆ?

ನಾನು ಮೂರನೇ ಉದಾಹರಣೆ ತೆಗೆದುಕೊಳ್ಳುತ್ತೇನೆ. ಈಗ ನಾವು ಚರ್ಚಿಸುತ್ತಿರುವುದು ಬಂಡವಾಳಶಾಹಿ ರಾಷ್ಟ್ರಗಳಲ್ಲೇ ಅತಿ ಬಲಾಢ್ಯ ರಾಷ್ಟ್ರವಾದ ಅಮೇರಿಕಾ ಸಂಯುಕ್ತ ಸಂಸ್ಥಾನದ ವಿಚಾರ. ಕಳೆದ 2-3 ದಶಕಗಳಲ್ಲಿ ಅಮೇರಿಕದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ದಿನೇ ದಿನೇ ನವ ಉದಾರವಾದಿ ದಾಳಿಗೆ ಗುರಿಯಾಗುತ್ತಿದೆ. ಆ ದೇಶದ ಒಳ್ಳೆಯ ಜನರು – ಲಾಭಕೋರ ಆರ್ಥಿಕ ನೀತಿಗಳು ಶಿಕ್ಷಣ ವ್ಯವಸ್ಥೆಯನ್ನು ನುಂಗುತ್ತಿರುವುದರ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಆದರೆ ಆ ಸಂಯುಕ್ತ ಸಂಸ್ಥಾನದ ಕೆಲವು ರಾಜ್ಯಗಳಲ್ಲಿ ದಾಳಿಯ ಪ್ರಭಾವ ಬಲವಾಗಿಯೇ ಇದೆ. ನಾನು ಈಗ ಹೇಳಲು ಹೊರಟಿರುವುದು ಆ ಬಲವಾದ ದಾಳಿಯನ್ನೂ ಕೂಡಾ ಹಿಮ್ಮೆಟ್ಟಿಸುವಲ್ಲಿ ಶಕ್ತವಾಗಿರುವ ಅಮೇರಿಕಾದ ಕ್ಯಾಲಿಫೊರ್ನಿಯಾ ರಾಜ್ಯದ ಬಗ್ಗೆ.

ನಾನು ಅವರ ಸಮಾನ ಶಾಲಾ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಸ್ವಲ್ಪ ಸಮಯ ಕಳೆದಿದ್ದೇನೆ. ಅಲ್ಲಿನ ನನ್ನ ಸ್ನೇಹಿತರಿಗೆ ಸಾರ್ವಜನಿಕ ವೆಚ್ಚದ ಶಾಲೆಗಳ ಜೊತೆಗೆ ಒಂದು ಖಾಸಗಿ ಶಾಲೆಯನ್ನೂ ತೋರಿಸಬೇಕೆಂದು ಮನವಿ ಮಾಡಿದ್ದೆ. ನಾನು ಮಾತನಾಡುತ್ತಿರುವುದು ಹೆಚ್ಚು ಸಂಪತ್ಭರಿತವಾದ, ಹಾಲಿವುಡ್ ಪ್ರದೇಶವನ್ನು ಹೊಂದಿರುವ ಪಶ್ಚಿಮ ಕ್ಯಾಲಿಫೋರ್ನಿಯಾದ ಬಗ್ಗೆ. ಅಲ್ಲಿನ ನನ್ನ ಗೆಳೆಯರು ಬಹಳ ಪ್ರಾಮಾಣಿಕವಾಗಿ ಶ್ರಮ ಹಾಕಿ ಬಹಳ ಕಷ್ಟದಿಂದ ಒಂದು ಖಾಸಗಿ ಶಾಲೆಯನ್ನು ನನಗಾಗಿ ಹುಡುಕಿ ತೋರಿಸಿದರು. ಆದರೆ, ಅದನ್ನು ಖಾಸಗಿ ಶಾಲೆಯೆಂದು ನಂಬಲು ಸಾಧ್ಯವಾಗದಂತೆ ಬಹಳ ದಯನೀಯ ಸ್ಥಿತಿಯಲ್ಲಿತ್ತು. ಸಾರ್ವಜನಿಕ ಶಾಲೆಗಳು ಅತ್ಯುತ್ತಮವಾಗಿದ್ದವು.

ಅಲ್ಲಿ ನಮ್ಮಲ್ಲಿನ ರೆವಿನ್ಯೂ ಕ್ಷೇತ್ರಗಳ ಹಾಗೆ ಶೈಕ್ಷಣಿಕ ಕ್ಷೇತ್ರಗಳಿರುತ್ತವೆ. ಪ್ರತೀ ಶಾಲೆಗೂ ಜನರಿಂದ ಆಯ್ಕೆಯಾದ ಉಸ್ತುವಾರಿ ಸಮಿತಿಗಳಿರುತ್ತವೆ. ಅಂತಹ ಒಂದು ಕ್ಷೇತ್ರದ ಹಣಕಾಸು ಅಧಿಕಾರಿಯನ್ನು ನಾನು ಭೇಟಿಯಾದೆ. ನಾನು ಕೆಲವು ಪ್ರಶ್ನೆಗಳನ್ನು ಕೇಳಿದೆ. “ನಿಮ್ಮ ರಾಜ್ಯದ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಏನು ಮಾಡುತ್ತೀರಿ?”. “ಅಂತಹ ಎಲ್ಲಾ ಮಕ್ಕಳನ್ನೂ ಹತ್ತಿರದ ಸಮಾನ ಶಾಲೆಗೆ ಕಳಿಸುವುದು ಅಂತಹ ಎಲ್ಲಾ ಬಡ ಕುಟುಂಬಗಳ ಜವಾಬ್ದಾರಿ ಮತ್ತು ಅದು ಅವರಿಗೆ ಕಡ್ಡಾಯ. ಅಷ್ಟು ಮಾತ್ರವಲ್ಲ ಅದು ಇಡೀ ಆ ಶೈಕ್ಷಣಿಕ ಕ್ಷೇತ್ರದ ಆಯ್ಕೆಯಾದ ಸಮಿತಿಯ ಜವಾಬ್ದಾರಿಯೂ ಸಹಾ” ಎಂದು ಅವರು ಹೇಳಿದರು.

ಆಗ ನನ್ನ ಪ್ರಶ್ನೆ “ಕಪ್ಪುಜನರ ಮಕ್ಕಳಿಗೆ ಮತ್ತು ಅಂತಹ ಲ್ಯಾಟಿನ್ ಅಮೇರಿಕಾದಿಂದ ವಲಸೆ ಬಂದ ಹಿಂದುಳಿದ ಮಕ್ಕಳಿಗೆ ನೀವು ಶಿಕ್ಷಣ ಖಾತ್ರಿಪಡಿಸುವುದು ಹೇಗೆ?” ಅದಕ್ಕೆ ಅವರ ಉತ್ತರ ಬಹಳ ಆಸಕ್ತಿಕರ. “ನೋಡಿ ಕ್ಯಾಲಿಫೋರ್ನಿಯಾದಲ್ಲಿ ಶಿಕ್ಷಣಕ್ಕೆ ವೆಚ್ಚವಾಗುವ ಹಣದ ಬಹುಭಾಗ ಒಕ್ಕೂಟ ವ್ಯವಸ್ಥೆಯ ಫೆಡರಲ್ ಸರ್ಕಾರದಿಂದ ಮತ್ತು ಉಳಿದದ್ದು ರಾಜ್ಯ ಸರ್ಕಾರದಿಂದ ಬರುತ್ತದೆ. ಇಡೀ ವರ್ಷದ ಎಲ್ಲಾ ಶೈಕ್ಷಣಿಕ ಖರ್ಚನ್ನು ಪೂರೈಸಲು ಒಂದು ಸೂತ್ರ ಮಾಡಿಕೊಂಡಿದ್ದೇವೆ. ಇಡೀ ವರ್ಷದ ಎಲ್ಲಾ ಖರ್ಚನ್ನು ಕೂಡಿಸಿ ಪ್ರತೀ ಮಗುವಿಗಾಗುವ ತಲಾ ಖರ್ಚನ್ನು ಲೆಕ್ಕ ಹಾಕಿ ಪ್ರತೀ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಷ್ಟನ್ನು ಪ್ರತೀ ಶಾಲೆಗೆ ನೀಡುತ್ತೇವೆ. ಯಾವ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕಪ್ಪು ಮಕ್ಕಳು ಅಥವಾ ವಲಸೆ ಕಾರ್ಮಿಕರ ಮಕ್ಕಳು ಇರುತ್ತಾರೋ ಆ ಶಾಲೆಗೆ ಹೆಚ್ಚಿನ ಪ್ರಮಾಣದ ಅನುದಾನ ದೊರೆಯುತ್ತದೆ. ಅದರಿಂದ ಆ ಶಾಲೆಗಳು ಹೆಚ್ಚಿನ ಸಂಖ್ಯೆಯ ಶಿಕ್ಷಕರನ್ನು, ಕ್ರೀಡೆ ಸಂಗೀತ ನೃತ್ಯ ಮೊದಲಾದ ವಿಶೇಷ ಶಿಕ್ಷಕರನ್ನು, ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನೂ ದೊರಕಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಎಲ್ಲಾ ಶಾಲೆಗಳು ತಮ್ಮ ವ್ಯಾಪ್ತಿಯಲ್ಲಿರುವ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳನ್ನು ಹೊರಗಿಡುವ ಬದಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಶಾಲೆಗಳಿಗೆ ತಂದುಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಶಾಲೆಯಲ್ಲಿ ಎಲ್ಲಾ ಜನವಿಭಾಗಗಳ ಮಕ್ಕಳೂ ಇರುವಂತಹ ಪ್ರಾತಿನಿಧ್ಯದ ವ್ಯವಸ್ಥೆ ಸಾಧ್ಯವಾಗಿದೆ” ಎಂದು ಆ ಅಧಿಕಾರಿ ವಿವರಿಸಿದರು.

“ಇದು ನಮ್ಮ ದೇಶದಲ್ಲಿ ತದ್ವಿರುದ್ಧವಾಗಿದೆ” ಎಂದೆ. ಅದಕ್ಕೆ ಅವರು, “ಹೌದು ನನಗೆ ಗೊತ್ತಿದೆ; ನಾನು ಬೌದ್ಧ ಧರ್ಮದೆಡೆಗೆ ಆಕರ್ಷಿತನಾಗಿ ಬೋಧ್‍ಗಯಾಕ್ಕೆ ಬಂದಿದ್ದೆ. ಆಗ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದೆ. ಇಡೀ ವಿಶ್ವದ ನಮ್ಮಂತಹ ಎಷ್ಟೋ ಜನರಿಗೆ ಸಮಾನತೆ, ಸಹಬಾಳ್ವೆಯ ತತ್ವಗಳನ್ನು ಬಹಳ ಹಿಂದೆಯೇ ಕೊಡಮಾಡಿದ ಧರ್ಮ ಹುಟ್ಟಿದ ಕಡೆ ಶಿಕ್ಷಣದಲ್ಲಿ ಇಂತಹ ಅಸಮಾನತೆ ಇರುವುದು ವಿಪರ್ಯಾಸ” ಎಂದು ಆತ ವಿಷಾದದಿಂದ ನುಡಿದರು.

ನಾನು ಈಗ ನಿಮ್ಮ ಮುಂದೆ ಮೂರು ದೇಶಗಳ ಉದಾಹರಣೆಗಳನ್ನು ಇರಿಸಿದ್ದೇನೆ. ಬಂಡವಾಳಶಾಹಿ ದೇಶಗಳು ಒಂದು ಮಟ್ಟಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪಾಲಿಸುವಂತಹ ಒತ್ತಡವನ್ನು ಅಲ್ಲಿನ ಪ್ರಜ್ಞಾವಂತ ಜನತೆ ಉಂಟುಮಾಡಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಈ ತತ್ವಗಳು ನಿರಂತರವಾಗಿ ಉಲ್ಲಂಘನೆಯಾಗಿವೆ. ಆದ್ದರಿಂದಲೇ ಇಂದು ಶೋಷಿತ ಸಮುದಾಯಗಳು ಗುಣಮಟ್ಟದ ಶಿಕ್ಷಣದಿಂದ ಹೊರಗುಳಿಯುವುದು ಸಾಮಾನ್ಯ ನಿಯಮ ಎಂಬಂತಾಗಿ ಬಿಟ್ಟಿದೆ. ಅವರಿಗಾಗಿ ಇಲ್ಲಿನ ಸರ್ಕಾರಗಳು ಏನೂ ಮಾಡುವುದಿಲ್ಲ; ಏನಾದರೂ ಮಾಡಿದರೆ ಅದು ಕೇವಲ ಬಾಯುಪಚಾರದ ತೋರಿಕೆಗಾಗಿ ಅಷ್ಟೇ! ಸಮಾಜದ ಶೋಷಿತ ಸಮುದಾಯಗಳ ಪ್ರತ್ಯೇಕತೆ ಇಂದು ಸ್ಥಾಪಿತ ಸತ್ಯ. ಇದರ ವಿರುದ್ಧ ನಾನು ಹೋರಾಟನಿರತನಾಗಿದ್ದೇನೆ. ನೀವು ನಮ್ಮೊಂದಿಗೆ ಕೈಜೋಡಿಸುವಿರಾ?

ಇದನ್ನು ಓದಿ : ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಸಿಗಲು ಕಾರಣರಾದ ನಿಜವಾದ ಶಿಕ್ಷಣದ ಸಂತ ಅನಿಲ್ ಸದ್ಗೋಪಾಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...