Homeಚಳವಳಿಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

- Advertisement -
- Advertisement -

| ಡಾ. ಹೆಚ್.ಡಿ. ಉಮಾಶಂಕರ್ |

ತಮಿಳಿನ ಯುವ ನಿರ್ದೇಶಕ ಪಾ ರಂಜಿತ್ “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದು ತುಂಬಾ ವಿವಾದಕ್ಕೆ ಈಡಾಗಿದೆ. ಇಲ್ಲಿ ಎರಡು ನೆಲೆಗಳ ಮೂಲಕ  ಈ ದೇಶದ ಮುಖವನ್ನು ಅರ್ಥಮಾಡಿಕೊಳ್ಳಬೇಕಿದೆ.

 

ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ಹೆಸರು ಮಾಡುತ್ತಿರುವ ನಿರ್ದೇಶಕ ಅಂದರೆ ಪಾ. ರಂಜಿತ್. ತಮಿಳಿನ ಸುಪ್ರಸಿದ್ಧ ನಟ ರಜನಿಕಾಂತ್ ಜೊತೆಗೆ ಒಂದು ಸಿದ್ಧಾಂತದಡಿ ಸಿನಿಮಾ ನಿರ್ಮಿಸಿ ಸೈ ಎನಿಸಿಕೊಂಡ ಭೂಪ ಈತ. ಇವರಿಬ್ಬರ ಸಹಯೋಗದಲ್ಲಿ ‘ಕಾಲಾ’ ಎನ್ನುವ ಮರೆಯಲಾಗದ ಸಿನಿಮಾವೊಂದು ಮೂಡಿ ಬಂದು ಇಂದಿಗೂ ನಮ್ಮೆಲ್ಲರೆದೆಯೊಳಗೆ ಹಚ್ಚಹಸಿರಾಗಿ ನಿಂತಿದೆ. “ನನಗೆ ಮತ್ತೊಮ್ಮೆ ಯಾಕೋ ‘ಕಾಲ’ ನೋಡಬೇಕೆನಿಸುತ್ತಿದೆ! ಥಿಯೇಟರಿನಿಂದ ಹೊರಬಂದಾಗ ಅಸಂಖ್ಯಾತ ಜನ ನನ್ನಂತಹ ಕರಿಯರು ‘ಕಾಲ’ನಲ್ಲಿ ಲೀನವಾಗಿ ಯಾವುದೋ ಪ್ರತಿಭಟನೆಯ ಮೆರವಣಿಗೆ ಹೊರಟಂತೆ ಭಾಸವಾಗುತ್ತದೆ!!” ಎಂದು ಸಿ.ಎಸ್. ದ್ವಾರಕಾನಾಥ್ ಬರೆದಿರುವುದನ್ನು ಗಮನಿಸಿದರೆ ಅದರ ಯಶಸ್ಸಿನ ಗುಟ್ಟು ತಿಳಿಯುತ್ತದೆ. ಭಾರತದಾದ್ಯಂತ ಜಗದ್ವಿಖ್ಯಾತ ನಿರ್ದೇಶಕರು, ನಟರು, ನಿರ್ಮಾಪಕರು, ತಂತ್ರಜ್ಞರು, ಸಂಗೀತಗಾರರು ಇದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದವರ ಸಾಲೂ ಇಲ್ಲಿದೆ. ಆದರೆ ಇಲ್ಲಿನ ರೋಗಗ್ರಸ್ತ ಮನಸ್ಥಿತಿಗಳನ್ನು ತಿದ್ದುವ ಸಿನಿಮಾಗಳನ್ನು ನಿರ್ಮಿಸಿದವರ ಸಂಖ್ಯೆ ತೀರಾ ವಿರಳಾತಿ ವಿರಳ ಎಂದರೆ ತಪ್ಪಾಗಲಾರದೇನೋ!

ಮೊನ್ನೆ ಡಾ. ರಾಜ್‍ಕುಮಾರ್ ಅವರ ಕಾಮನಬಿಲ್ಲು ಸಿನಿಮಾವನ್ನು ನೋಡುತ್ತಿದ್ದೆ. ಅದರಲ್ಲಿ ರಾಜ್‍ಕುಮಾರ್ ಅವರು, ಇಬ್ಬರು ಮಕ್ಕಳು ವಿನಾಕಾರಣ ಸಣ್ಣ ಜಗಳ ಮಾಡಿಕೊಂಡ ನಿಮಿತ್ತ ಅಲ್ಲಿಗೆ ಬಂದಾಗ ಇಬ್ಬರ ಜಾತಿಯನ್ನೂ ಕೇಳಿ ಅದರಲ್ಲಿ ಒಬ್ಬ ಒಕ್ಕಲಿಗರವನು ಮತ್ತೊಬ್ಬ ಹೊಲೆಯರವನೆಂದು ತಿಳಿದು ಇಬ್ಬರಿಗೂ ‘ಮಕ್ಕಳು ದೇವರ ಸಮಾನ’ ಅನ್ನುವುದನ್ನು ನೆನಪಿಸುತ್ತಾರೆ. ಒಂದಾಗಿ ಬಾಳುವ ಮಹತ್ವವನ್ನು ತಿಳಿಹೇಳಿ ತಾನೂ ಕೂಡ ಅಲ್ಲಿದ್ದ ಎಲ್ಲ ಮಕ್ಕಳ ಜೊತೆಗೆ ಕಬಡ್ಡಿ ಆಟವನ್ನು ಆಡುತ್ತಾರೆ. ಈ ಘಟನೆ ಅದೆಷ್ಟು ನನಗೆ ಕಾಡಿತೆಂದರೆ ಇಡೀ ಚಿತ್ರರಂಗದಲ್ಲಿ ಈ ತರದ ಜಾತ್ಯತೀತ ನೆಲೆಗಳನ್ನು ಬಿತ್ತಿದ ನಿರ್ದೇಶಕರು ಎಷ್ಟಿರಬಹುದು ಎಂದು ಹುಡುಕಲು ಆರಂಭಿಸಿದೆ. ಈ ಹುಡುಕಾಟದಲ್ಲಿ ಸಿಕ್ಕಿದ್ದು ಅಸ್ಪಷ್ಟ ನೆನಪುಗಳೇ ಹೊರತು ನಿಖರ ನೆನಪು ಇಲ್ಲವೇ ಇಲ್ಲ. ನಾನೇನೂ ಎಲ್ಲ ಸಿನಿಮಾಗಳನ್ನು ನೋಡಿಲ್ಲದ ಕಾರಣ, ಜಾತ್ಯತೀತ ನೆಲೆ ಒಂದೊಮ್ಮೆ ಇದ್ದರೆ ಅದಕ್ಕಿಂತ ಖುಷಿ ಬೇರಿಲ್ಲ ಎಂದುಕೊಂಡೆ. ಹೀಗೆ ಯೋಚಿಸುತ್ತಿರುವಾಗ ಮಹತ್ವದ್ದಾಗಿ ಕಾಡಿಸಿದ ನಿರ್ದೇಶಕನೆಂದರೆ ಪಾ. ರಂಜಿತ್. ಆತ ನಂಬಿರುವ ಸಿದ್ಧಾಂತ; ಜಾತಿ, ಧರ್ಮ, ಮತ ಇವುಗಳ ಬಗೆಗಿನ ನಿರ್ದಿಷ್ಟ ನಿಲುವು, ಇವುಗಳು ಹೇಗೆ ಮನುಷ್ಯನನ್ನು ತುಳಿದಿವೆ ಎನ್ನುವ ನೋವು, ಇದರೊಂದಿಗೇ ಬೆರೆತಿರುವ ಜೀವಪರ ನಿಲುವಿನ ಕಳಕಳಿ ಎಲ್ಲವೂ ಮತ್ತೆ ಮತ್ತೆ ಎದೆಗಿಳಿದು ಒಂದು ರೀತಿಯ ಹೆಮ್ಮೆಯ ಭಾವವನ್ನು ತುಂಬುತ್ತಿದ್ದವು.

ಇಂತಹ ಅಪರೂಪದ ಚಿತ್ರನಿರ್ದೇಶಕ ಪಾ.ರಂಜಿತ್‍ನ ಇತ್ತೀಚಿನ ಹೇಳಿಕೆಯಂತೂ ತುಂಬಾ ಸದ್ದು ಮಾಡುತ್ತಿದೆ. ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇವರು “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದು ತುಂಬಾ ವಿವಾದಕ್ಕೆ ಈಡಾಗಿದೆ. ಇದಕ್ಕೆ ಬಾಲಾ ಎನ್ನುವವವರು ಪೊಲೀಸ್ ಸ್ಟೇಶನ್‍ನಲ್ಲಿ “ರಂಜಿತ್ ಅವರು ಮಾಡುತ್ತಿರುವ ಸಿನಿಮಾ, ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯ ವೈಷಮ್ಯವನ್ನು ಬೆಳೆಸುತ್ತದೆ” ಎನ್ನುವ ಕಾರಣ ಕೊಟ್ಟು ದೂರನ್ನೂ ದಾಖಲಿಸಿದ್ದಾರೆ. ಇಲ್ಲಿ ಎರಡು ನೆಲೆಗಳ ಮೂಲಕ ಈ ದೇಶದ ಮುಖವನ್ನು ಅರ್ಥಮಾಡಿಕೊಳ್ಳಬೇಕು ಎನಿಸುತ್ತದೆ. ಒಂದು ಪಾ. ರಂಜಿತ್‍ನ ಸಂಶೋಧನಾ ಮನೋಭಾವ ಮತ್ತು ಸತ್ಯದ ಹಲವು ಮುಖಗಳನ್ನು ಪರಿಚಯಿಸುವ ದಿಟ್ಟ ನೋಟ. ಇನ್ನೊಂದು ದೂರು ದಾಖಲಿಸಿದವರಲ್ಲಿ ಕಾಣುತ್ತಿರುವ ಅಸಹನೆ. ಇವರದ್ದು ಹಳೆಯ ಹಳಹಳಿಕೆಗಳಲ್ಲೇ ಕಾಲ ಕಳೆಯುವ ಮನ. ಯಥಾಸ್ಥಿತಿ ಚೂರು ಅಲುಗಿದರೂ ಅವರು ದಿಗಿಲುಗೊಳ್ಳುತ್ತಾರೆ ಮತ್ತು ಸತ್ಯಕ್ಕೆ ಬೆನ್ನು ತಿರುಗಿಸಿ ಸದಾ ಸುಳ್ಳಿನ ಪರದೆಯಲ್ಲೇ ಸುತ್ತುವ ಹಿನ್ನೋಟವಿರುವ ಹೀನ ಮನಸ್ಥಿತಿ ಉಳ್ಳವರಾಗಿರುತ್ತಾರೆ. ಇವೆರಡೂ ಒಂದು ರೀತಿಯಲ್ಲಿ ಈ ಘಟನೆಯಿಂದ ಮುಖಾಮುಖಿಗೊಂಡಿವೆ ಎನಿಸುತ್ತಿದೆ.

ಇಂತಹ ಮುಖಾಮುಖಿ ಇವತ್ತಿನದೇನಲ್ಲ; ಇಂತಹ ಸಾಕಷ್ಟು ಮುಖಾಮುಖಿಗಳು ಜಗತ್ತಿನಾದ್ಯಂತ ನಡೆದು ಹೋಗಿವೆ ಮತ್ತು ನಡೆಯುತ್ತಲೇ ಇವೆ. ಅಂಬೇಡ್ಕರ್ ಅವರು ಈ ದೇಶದ ಸಂಸ್ಕೃತಿ, ಪುರಾಣ, ಶಾಸ್ತ್ರ, ಸ್ಮೃತಿ, ಧರ್ಮ, ಇತಿಹಾಸ ಮುಂತಾದವುಗಳ ತಳಸ್ಪರ್ಶಿ ಅಧ್ಯಯನ ಮಾಡಿ ಅದರೊಳಗಿನ ಮಾನವ ವಿರೋಧಿತನವನ್ನು ಬಿಚ್ಚಿಟ್ಟ ಪರಿಣಾಮ ಹಲವರಿಗೆ ಅದನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಚರಿತ್ರೆಯ ಗತಿಯನ್ನು ಸ್ವಲ್ಪ ನಿಂತು ಹಿಂದಿರುಗಿ ನೋಡಿದರೆ ಸತ್ಯವನ್ನು ಯಾರು ಹೇಳಿದರೆ ತಾನೆ ಏನು? ಎನ್ನುವ ಮನೋಭಾವ ಇಲ್ಲಿ ನೆಲೆನಿಂತಂತೆ ಕಂಡುಬರುವುದಿಲ್ಲ. ಅದನ್ನು ಹೇಳಲಿಕ್ಕೆ ಕೆಲವರು ಬೇಕು! ಅವರು ಹೇಳಿದರೆ ಮಾತ್ರ ಅದು ಸತ್ಯವಾಗಿರುತ್ತದೆ! ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವ ಹಾಗೆ! ಸುಳ್ಳಿನ ಸರಮಾಲೆ ಕಟ್ಟಿದರೂ ಸರಿ ಅವರು ಹೇಳಿದ್ದೇ ಸರಿ! ಎಂದು ನಂಬುವ ಭಾರತೀಯ ಪಡೆ ಇಲ್ಲಿ ಸದಾ ಸನ್ನದ್ಧವಾಗಿ ನಿಂತಿದೆ. ಇದರಿಂದಾಗಿಯೇ ಇಲ್ಲಿ ಚರಿತ್ರೆಯನ್ನು ಕಟ್ಟಿದವರು, ಪುರಾಣ, ಶಾಸ್ತ್ರ ಬರೆದಿಟ್ಟು ಹೋದವರೆಲ್ಲ ಬಹುಪಾಲು ಮೇಲ್ಜಾತಿಗೆ ಸೇರಿದವರೇ! ಹೀಗಿರುವಲ್ಲಿ ತಳಸಮುದಾಯದವರ ಮಾತು ಇವರಿಗೆ ಪಥ್ಯವಾಗುವುದಾದರೂ ಹೇಗೆ? ಪಾ. ರಂಜಿತ್ ವಿಷಯದಲ್ಲೂ ಹೀಗೇ ಆಗಿದೆ. ತಳ ಸಮುದಾಯದವರು ಚಿಂತಿಸಿದರೆ ಅನುಮಾನಿಸುವುದು, ಅವರಿಗಾಗುವ ಅನ್ಯಾಯಗಳ ಬಗ್ಗೆ ಮಾತನಾಡಿದರೆ ದೇಶಕ್ಕೆ ಗಂಡಾಂತರವೇನೋ ಕಾದಿದೆ ಎನ್ನುವಂತೆ ನೋಡುವುದು, ಇಂತಹ ಮನಸ್ಥಿತಿ ಈ ದೇಶದಲ್ಲಿ ಅಘೋಷಿತವಾಗೇ ಬೇರುಬಿಟ್ಟು ನಿಂತಿದೆ. ಇಂತಹ ಮನಸ್ಥಿತಿಯೇ ಸತ್ಯ ಹೇಳಲು ಹೊರಟ ರಂಜಿತ್ ಮೇಲೆ ಕೇಸು ಹಾಕುವಂತೆ ಮಾಡಿದೆ. ಅಷ್ಟಕ್ಕೂ ಈ ವಿರೋಧಿ ಪಡೆ ಇನ್ನೊಂದಕ್ಕಂತೂ ಹೆದರಿ ಕುಂತಿದೆ! ಅದ್ಯಾವುದೆಂದರೆ….ರಂಜಿತ್ ಹೇಳುತ್ತಿರುವ ಸತ್ಯ ಬರವಣಿಗೆಯ ಮಾಧ್ಯಮದ ಮೂಲಕ ಕೆಲವರಿಗಷ್ಟೇ ದಕ್ಕುತ್ತಿತ್ತು. ಈಗ ಸಿನಿಮಾ ಬಂದುಬಿಟ್ಟರೆ ಅದು ಏಕಕಾಲದಲ್ಲಿ ಕೋಟ್ಯಾಂತರ ಜನಕ್ಕೆ ಗೊತ್ತಾಗಿ ತಾವು ಕಟ್ಟಿದ ಸುಳ್ಳಿನ ಪರದೆಗೆ ಎಲ್ಲಿ ಬೆಂಕಿ ಬೀಳುವುದೋ ಎನ್ನುವ ಆತಂಕ ಅವರಿಗೆ ಹೆಚ್ಚಾಗಿದೆ. ಈ ಕಾರಣದಿಂದಲೇ ಆತಂಕದ ಮನಸ್ಸುಗಳೆಲ್ಲ ತೊಡೆತಟ್ಟಿ ನಿಂತಿವೆ ಅಷ್ಟೇ.

ಅಷ್ಟಕ್ಕೂ ಇವರು ಕೊಡುತ್ತಿರುವ ಕಾರಣವಾದರೂ ಏನು? ‘ಇದು ಸಮಾಜದಲ್ಲಿ ಜಾತಿಜಾತಿಗಳ ಮಧ್ಯೆ ವೈಮನಸ್ಯ ಬೆಳೆಸುತ್ತದೆ’ ಎಂದು ಅಲ್ಲವೇ? ಇವರನ್ನೇ ನೇರವಾಗಿ ಕೇಳೋಣ… ಹಾಗಾದರೆ ಇಲ್ಲಿ ಜಾತ್ಯತೀತ ವ್ಯವಸ್ಥೆ ಇದೆಯೋ? ಜಾತಿ ವ್ಯವಸ್ಥೆ ಇದೆಯೋ? ಜಾತಿಜಾತಿಗಳ ಮಧ್ಯ ಪ್ರೀತಿ ಇದ್ದರೆ ತಾನೆ ವೈಮನಸ್ಯದ ಬಗ್ಗೆ ಆತಂಕಗೊಳ್ಳಬೇಕು!.. ಇಲ್ಲಿ ಮೊದಲೇ ತುಂಬಿತುಳುಕುತ್ತಿರುವ ಜಾತಿಗ್ರಸ್ತ ರೋಗದ ಮನಸ್ಸುಗಳಿವೆ. ಇಲ್ಲಿ ಈ ಕಾರಣಕ್ಕಾಗಿ ಸಾವಿರಾರು ಕೊಲೆಗಳು, ಅತ್ಯಾಚಾರಗಳು, ಮಾನಭಂಗಗಳು, ಅವಮಾನಗಳು, ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಇವೆಲ್ಲಕ್ಕೂ ಕುರುಡರಂತೆ ಕಣ್ಮುಚ್ಚಿ ಕುಳಿತು ಶೋಧಕನೊಬ್ಬ ಸತ್ಯ ತೋರಿಸಲು ಹೊರಟರೆ ಉಂಟಾಗಬಹುದಾದ ವೈಷಮ್ಯದ ಬಗ್ಗೆ ಮಾತನಾಡುವುದು ಎಷ್ಟು ಸರಿ?

‘ವ್ಯಕ್ತಿ ಸತ್ತರೂ ಸತ್ಯ ಸಾಯುವುದಿಲ್ಲ’ ಎನ್ನುವುದು ಹಳೆಯ ಮಾತಾದರೂ ಇದು ಸತ್ಯವೇ ಸರಿ. ಆದರೂ ವ್ಯಕ್ತಿಗೆ ಏನಾದರೂ ಆಗುವ ಮೊದಲು ಸತ್ಯದ ಪರ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಜೀವಪರ ಇರುವರೆಲ್ಲ ಪಾ. ರಂಜಿತ್ ಪರ ನಿಲ್ಲಬೇಕಿದೆ. ಈ ಮೂಲಕ ಸತ್ಯ ಹೇಳಲು ಹೊರಟವರ ಬಾಯಿ ಮುಚ್ಚಿಸುತ್ತಿರುವ, ಸಂಸ್ಕøತಿ ಹೆಸರಿನಲ್ಲಿ ಹಳೆಯ ಹಳಹಳಿಕೆಯಲ್ಲೇ ಕೂತು ಜಾತಿಗ್ರಸ್ತವಾಗುತ್ತಿರುವ ಹೀನ ಮನಸ್ಸುಗಳ ಹುನ್ನಾರವನ್ನು ಬಯಲುಗೊಳಿಸಿ ಜೀವಪರ ನಿಲುವನ್ನು ಗಟ್ಟಿಗೊಳಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...