Homeಕರ್ನಾಟಕಅತಿ ಕಡಿಮೆ ಖರ್ಚಿನಲ್ಲಿ ಲೆಕ್ಚರ್ ಆಗುವ, ನೆಟ್ ಎಕ್ಸಾಂ ತರಬೇತಿ ಪಡೆಯುವ ಸುವಣಾವಕಾಶ ಇಲ್ಲಿದೆ ನೋಡಿ

ಅತಿ ಕಡಿಮೆ ಖರ್ಚಿನಲ್ಲಿ ಲೆಕ್ಚರ್ ಆಗುವ, ನೆಟ್ ಎಕ್ಸಾಂ ತರಬೇತಿ ಪಡೆಯುವ ಸುವಣಾವಕಾಶ ಇಲ್ಲಿದೆ ನೋಡಿ

ಯಶಸ್ವಿ ಬೋಧನೆಗೊಂದು ಬೆಳಕಿಂಡಿ ಬದುಕು ಕಮ್ಯೂನಿಟಿ ಕಾಲೇಜು. ಕಲಿಯಲು, ಕಲಿತು ಕಲಿಸಲು ಆಸಕ್ತಿ ಇರುವವರಿಗೆ ಒಂದೊಳ್ಳ ಅವಕಾಶ

- Advertisement -
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಕನಸು ಎಲ್ಲರಲ್ಲಿಯೂ ಚಿಗುರುತ್ತದೆ. ಅಂತಹ ಕನಸುಗಳನ್ನು ನನಸು ಮಾಡಲು ಕೆಲವರಿಗೆ ತಮ್ಮ ಕೌಟುಂಬಿಕ ಹಿನ್ನೆಲೆ ಸಹಾಯವಾದರೆ, ಮತ್ತೂ ಕೆಲವರಿಗೆ ಕನಸನ್ನ ಕನಸಾಗಿಯೇ ಉಳಿಸಿಬಿಡುತ್ತದೆ. ಅದರಲ್ಲೂ ಖಾಸಗೀಕರಣದ ದವಡೆಯಲ್ಲಿರುವ ಇಂದಿನ ಕಾಲಘಟ್ಟದಲ್ಲಿ ಎಲ್ಲವೂ ದುಭಾರಿಯೇ ಸರಿ. ಉತ್ತಮ ಶೈಕ್ಷಣಿಕ ಸೌಲಭ್ಯ, ಸಾಧನೆಯ ಹಾದಿಯಲ್ಲಿ ಒಂದಷ್ಟು ಮಾರ್ಗದರ್ಶನ ಪಡೆದುಕೊಳ್ಳಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಅಂತಹ ಬಯಕೆಗಳಿಗೆ ಆರ್ಥಿಕ ಪರಿಸ್ಥಿತಿಗಳಂತಹ ಹಲವು ಸಮಸ್ಯೆಗಳು ಎದುರಾಗುತ್ತವೆ.

- Advertisement -

ಈ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿಯೂ ಉತ್ತಮ ಬೋಧಕರಾಗಬೇಕು, ಆಪ್ತ ಸಮಾಲೋಚಕರಾಗಬೇಕು, ಜೆಆರ್‍ಎಫ್-ಎನ್‍ಇಟಿಗಳನ್ನು ಪಾಸು ಮಾಡಿ ಪಿಎಚ್‍ಡಿ ಪದವಿ ಪಡೆಯಬೇಕೆಂದು, ಅದರೊಂದಿಗೆ ಸಮಾಜದಲ್ಲಿ ಏನನ್ನಾದರೂ ಕೊಡುಗೆ ಕೊಡಬೇಕು ಎಂದು ಬಯಸುವವರು ಸಾಕಷ್ಟಿದ್ದಾರೆ. ಅಂತಹವರಿಗೆ ಈಗೊಂದು ಸುವರ್ಣಾವಕಾಶವನ್ನು ಬದುಕು ಕಮ್ಯುನಿಟಿ ಕಾಲೇಜು ತೆರೆದಿಟ್ಟಿದೆ.

ಕಡಿಮೆ ಖರ್ಚಿನಲ್ಲಿ ಕೋಚಿಂಗ್ ನೀಡುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುತ್ತಿರುವ ಈ ಸಂಸ್ಥೆ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಾಯೋಗಿಕ ತರಬೇತಿಗೆ ಹೆಚ್ಚು ಒತ್ತು ನೀಡುತ್ತಿರುವ ಸಂಸ್ಥೆ ಕಲಿಕೆಗೆ ಬರುವ ವಿದ್ಯಾರ್ಥಿಗಳನ್ನು ತಮ್ಮ ಆಯ್ಕೆಯ ವಿಷಯದಲ್ಲಿ ಹಿಡಿತ ಸಾಧಿಸಲು ನೆರವಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವೇದಿಕೆಯ ನಿರ್ಮಾಣವಾಗಿದೆ. ಈ ಕಾಲೇಜು ಪ್ರಾಯೋಗಿಕ ಕಲಿಕೆ, ಸುಸಜ್ಜಿತ ಓದಿನ ಸಂಪನ್ಮೂಲಗಳು, ವಿಷಯ ತಜ್ಞರು-ಶಿಕ್ಷಣ ತಜ್ಞರಿಂದ ಮಾರ್ಗದರ್ಶನ, ಅಧ್ಯಯನ ಪ್ರವಾಸ ಮತ್ತು ವಸತಿ ವ್ಯವಸ್ಥೆಗಳನ್ನು ಒಳಗೊಂಡಿದೆ. ಇಲ್ಲಿ ಮೂರು ತಿಂಗಳ ಅವಧಿಗೆ ಜುಲೈ 15ರಿಂದ ಆರಂಭವಾಗುತ್ತಿರುವ ಐeಚಿಡಿಟಿiಟಿg ಐಇಓSಇS ಕೋರ್ಸುಗಳಿಗೆ ಜುಲೈ 05 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯಾವ ಯಾವ ಕೋರ್ಸುಗಳು ಲಭ್ಯ
· ಸೃಜನಶೀಲ ಬೋಧನಾ ಕಲಿಕೆ
· ಆಪ್ತ ಸಮಾಲೋಚನಾ ಕೌಶಲ್ಯ ಕಲಿಕೆ
· ಡಿಜಿಟಲ್ ಕ್ಲಾಸ್ ರೂಂ ನಿರ್ವಹಣೆ
· ಜೆಆರ್‍ಎಫ್, ನೆಟ್ ಮತ್ತು ಸ್ಲೆಟ್ ಸಿದ್ಧತೆಗೆ ತರಬೇತಿ
· ಪಿಎಚ್‍ಡಿ ಮತ್ತು ಕಿರುಸಂಶೋಧನೆಗಳ ಸಿದ್ಧತೆಗೆ ಮಾರ್ಗದರ್ಶನ
· ಕಾಲೇಜುಗಳಲ್ಲಿ ನಡೆಯುವ ನೇಮಕಾತಿ ಸಂದರ್ಶನಗಳಿಗೆ ಸಹಾಯ

ಯಾರು ಅರ್ಜಿ ಸಲ್ಲಿಸಬಹುದು
· ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.
· ಸಂಶೋಧನಾ ವಿದ್ಯಾರ್ಥಿ/ನಿಯರು.
· ಈಗಾಗಲೇ ಅಧ್ಯಾಪಕ ವೃತ್ತಿಯಲ್ಲಿದ್ದು, ಮತ್ತಷ್ಟು ಸೃಜನಶೀಲತೆ ಕಲಿಯುವ ಆಸಕ್ತಿ ಇರುವವರು.

ಮೇಲಿನ ಕೋರ್ಸುಗಳಿಗೆ ಕೇವಲ 30 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವನ್ನು ಕಲ್ಪಸಲಾಗುವುದು. ಅಸಕ್ತ ವಿದ್ಯಾರ್ಥಿಗಳು ತಮ್ಮ ವೈಯಕ್ತಿಯ ಮಾಹಿತಿ(ರೆಸುಮ್)ಯನ್ನು ಜುಲೈ 05 ರೊಳಗೆ ಕೆಳಕಂಡ ವಿಳಾಸಕ್ಕೆ ತಲುಪಿಸಿ ಅಥವಾ ಇ-ಮೇಲ್ ಮಾಡಬಹುದು.

ಸಂಪರ್ಕ: ಸಂವಾದ, ಬದುಕು ಕಮ್ಯುನಿಟಿ ಕಾಲೇಜು, #7, 2ನೇ ಕ್ರಾಸ್, ಡಯಾಗನಲ್ ರಸ್ತೆ, ಸಿಟಿ ಸೆಂಟ್ರಲ್ ಲೈಬ್ರರಿ ಹಿಂಭಾಗ, ಜಯನಗರ 3ನೇ ಹಂತ, ಬೆಂಗಳೂರು. 560011…
7899769899, 9739286217, 8050599001

ಇ-ಮೇಲ್: [email protected]

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನ.1ರ ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಬೆಂಬಲ ಘೋಷಿಸಿದ ‘ಪೀಪಲ್ ಅಗೆನ್ಸ್ಟ್ ಎಸ್‌ಐಆರ್’

ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸಲಿರುವ ಬೃಹತ್ ರ‍್ಯಾಲಿಗೆ ಪೀಪಲ್ ಅಗೆನೆಸ್ಟ್ ಎಸ್‌ಐಆರ್‌ ಬೆಂಬಲ ಘೋಷಿಸಿದೆ. ಪ್ರಜಾಪ್ರಭುತ್ವವನ್ನು ಉಳಿಸಲು, ಎಸ್‌ಐಆರ್ ರದ್ದುಗೊಳಿಸಲು, ಮುಖ್ಯ ಚುನಾವಣಾ ಆಯುಕ್ತ...

‘ನುಸುಳುಕೋರರನ್ನು’ ಹೊರಹಾಕಲು SIR ಎಂದಿತ್ತು ಬಿಜೆಪಿ ಮತ್ತು ಚು. ಆಯೋಗ : ಆರು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಕೇವಲ 1,600 ವಿದೇಶಿಯರು ಮಾತ್ರ

'ನುಸುಳುಕೋರರನ್ನು' ಪತ್ತೆ ಹಚ್ಚುವುದು ಅಥವಾ 'ವಿದೇಶಿ ಅಕ್ರಮ ವಲಸಿಗರನ್ನು' ಪತ್ತೆ ಹಚ್ಚುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿತ್ತು....

ಸಂತ್ರಸ್ತೆ ಮತ್ತು ಆರೋಪಿ ನಡುವಿನ ‘ಒಪ್ಪಂದ’ವನ್ನಷ್ಟೇ ಆಧರಿಸಿ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪಕ್ಷಕಾರರ (ಸಂತ್ರಸ್ತೆ ಮತ್ತು ಆರೋಪಿ) ನಡುವಿನ ರಾಜಿ ಸಂಧಾನದ ಆಧಾರದ ಮೇಲೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೇವಲ ಒಪ್ಪಂದದ ಆಧಾರದ ಮೇಲೆ ಗಂಭೀರ ಅಪರಾಧಗಳನ್ನು...

DELHI SIR : 2026ರ ಮತದಾರರ ಪಟ್ಟಿಯಲ್ಲಿದ್ದರೂ ಕೂಡ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸುವಂತೆ ಸೂಚಿಸಿದ್ದು ಏಕೆ? ಚು. ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ, 2026ರ ಮತದಾರರ ಪಟ್ಟಿಯಲ್ಲಿದ್ದರೂ ಸಹ ಗಣತಿ ನಮೂನೆಗಳನ್ನು (enumeration forms) ಭರ್ತಿ ಮಾಡದ ಕಾರಣಕ್ಕಾಗಿ ಕರಡು ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ವ್ಯಕ್ತಿಗಳು,...

ಮರ್ಯಾದೆಗೇಡು ಹತ್ಯೆ ಶಂಕೆ: ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿಯ ಸಹೋದರ ಬಂಧನ

ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನನ್ನು ಇಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಶಂಕೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪತ್ನಿಯ ಹಿರಿಯ...

Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ಗೆ ಬಹಿರಂಗ ಸವಾಲು

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಅ.27) ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಹೋರಾಟಗಾರರು ತಿರಸ್ಕರಿಸಿದ್ದು, ಹೋರಾಟ ಮುಂದುವರಿಸುವ ಘೋಷಣೆ ಮಾಡಿದ್ದಾರೆ. ಬುಧವಾರ (ಅ.28) ಬೆಂಗಳೂರಿನ ಶಾಸಕರ ಭವನದಲ್ಲಿ...

ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ; ಪ್ರತಿಭಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ಸಾಧ್ಯತೆ

ಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡುವ ನಿರೀಕ್ಷೆಯಿರುವ ಬೆನ್ನಲ್ಲೇ, ವಿದ್ಯಾರ್ಥಿಗಳ ಹೋರಾಟಕ್ಕೆ ಪಕ್ಷವು ಬೆಂಬಲ ವ್ಯಕ್ತಪಡಿಸಿದೆ. ವಿದ್ಯಾರ್ಥಿ ಸಂಘವನ್ನು (ಜೆಎಂಐಎಸ್‌ಯು)...

ಎಂಎಲ್‌ಸಿ ಚುನಾವಣೆ ಸೋಲಿನ ಹಿಂದಿರುವ ರಾಜಕೀಯ – ಸಂಘಟನಾತ್ಮಕ ಕಾರಣಗಳ ಕುರಿತು ಪರಾಮರ್ಶಿಸುತ್ತೇವೆ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್

ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಸೋಲಿನ ಹಿಂದಿರುವ ರಾಜಕೀಯ ಹಾಗೂ ಸಂಘಟನಾತ್ಮಕ ಕಾರಣಗಳ ಕುರಿತು ಸಮಗ್ರ ಪರಾಮರ್ಶೆ ನಡೆಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್...

ಸ್ಪೇನ್‌ನಲ್ಲಿ ಅತಿ ವೇಗದ ರೈಲುಗಳ ನಡುವೆ ಡಿಕ್ಕಿ; ಕನಿಷ್ಠ 46 ಮಂದಿ ಸಾವು

ಸ್ಪೇನ್‌ನ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಎರಡು ಅತಿ ವೇಗದ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪೇನ್‌ನ ಎಬಿಸಿ (ಎಬಿಸಿ) ಸುದ್ದಿ ಸಂಸ್ಥೆ ವರದಿ ಮಾಡಿದೆ....

ಇಸ್ರೇಲ್ ಚುನಾವಣೆಯಲ್ಲಿ ಸಿಗದ ಬಹುಮತ; ಆದರೂ ಗೆಲುವಿನ ಹಕ್ಕು ಮಂಡಿಸಿದ ನೆತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಜೆರುಸಲೇಮ್‌ನಲ್ಲಿರುವ ಲಿಕುಡ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಹೂದಿ ಮತ್ತು ಝಿಯೋನಿಸ್ಟ್...