Homeಕರ್ನಾಟಕಜೆಡಿಎಸ್ ಹೊಸ ಅಧ್ಯಕ್ಷರದ್ದೂ ಡಮ್ಮಿ ಕಾಯಕವಾ?

ಜೆಡಿಎಸ್ ಹೊಸ ಅಧ್ಯಕ್ಷರದ್ದೂ ಡಮ್ಮಿ ಕಾಯಕವಾ?

- Advertisement -
- Advertisement -

| ಆಕಾಶ್ ಕೆರೆಕಟ್ಟೆ |

ಈ ಸರ್ಕಾರ ಇರುತ್ತಾ ಅಥವಾ ಉರುಳುತ್ತಾ? ರಾಜೀನಾಮೆಗಳು ಸ್ವೀಕಾರ ಆಗ್ತಾವಾ ಅಥವಾ ಶಾಸಕರೇ ಅನರ್ಹರಾಗ್ತಾರಾ? ಅನ್ನೋ ಹೈಡ್ರಾಮಾಗಳ ನಡುವೆ ಗಮನಿಸಲೇಬೇಕಾದ ಇನ್ನೊಂದು ರಾಜಕೀಯ ವಿದ್ಯಮಾನ ನಡೆದಿದೆ. ಅದು ಜೆಡಿಎಸ್‍ಗೆ ನೂತನ ರಾಜ್ಯಾಧ್ಯಕ್ಷರ ಆಯ್ಕೆ. ವಿಶೇಷ ಅಂದ್ರೆ ಜೆಡಿಎಸ್ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ದಲಿತರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದೊಂದನ್ನು ಹೊರತುಪಡಿಸಿದರೆ ಈ ಆಯ್ಕೆಯಲ್ಲಿ ಇನ್ನ್ಯಾವ ವಿಶೇಷವೂ ಇಲ್ಲ. ಯಾಕೆಂದರೆ ದೇವೇಗೌಡರ ಕುಟುಂಬದ ಹೊರತಾಗಿ ಜೆಡಿಎಸ್‍ಗೆ ಯಾರೇ ಅಧ್ಯಕ್ಷರಾದರು ಅವರು ಡಮ್ಮಿಯಾಗಿರಬೇಕಾಗುತ್ತೆ ಅನ್ನೋದನ್ನು ನಿರ್ಗಮಿತ `ಬಾಂಬೆಹಕ್ಕಿ’ ಎಚ್.ವಿಶ್ವನಾಥ್ ಸಾಬೀತು ಮಾಡಿಹೋಗಿದ್ದಾರೆ.

ಸಿದ್ರಾಮಯ್ಯನವರ ಹೊರತಾಗಿ ಅಧ್ಯಕ್ಷರಾದ ಗೌಡರ ಕುಟುಂಬೇತರ ವ್ಯಕ್ತಿಗಳಾದ ತಿಪ್ಪಣ್ಣ, ಮಿರಾಜುದ್ದೀನ್ ಪಟೇಲ್, ಕೃಷ್ಣಪ್ಪ ಇವರೆಲ್ಲ ಹೆಸರಿಗಷ್ಟೇ ಅಧ್ಯಕ್ಷರಾಗಿದ್ದರೆ ವಿನಾಃ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಯಾವ ಸ್ವತಂತ್ರವೂ ಅವರಿಗಿರಲಿಲ್ಲ. ರಾಜೀನಾಮೆ ಗೀಚಿ ಬಾಂಬೆ ಹೊಟೇಲ್ ಸೇರಿಕೊಂಡಿರುವ ಎಚ್.ವಿಶ್ವನಾಥ್ ಕೆ.ಆರ್.ನಗರದ ಪುರಸಭೆ ಎಲೆಕ್ಷನ್‍ಗೆ ತನಗೆ ಬೇಕಾದವರಿಗೆ ಟಿಕೇಟು ಕೊಡಿಸುವುದಕ್ಕೂ ಸಾಧ್ಯವಾಗಿರಲಿಲ್ಲ ಅಂದಮೇಲೆ `ಜೆಡಿಎಸ್ ಅಧ್ಯಕ್ಷ’ ಹುದ್ದೆ ಅದಿನ್ನೆಷ್ಟು ಗಟ್ಟಿಯದ್ದಾಗಿರಬೇಡ!

ಅಂಥಾ ಸ್ಥಾನಕ್ಕೆ ಈಗ ಎಚ್.ಕೆ.ಕುಮಾರಸ್ವಾಮಿಯನ್ನು ತಂದು ಕೂರಿಸಲಾಗಿದೆ. ನೋ ಡೌಟ್, ಇಂದಿನ ನಿದರ್ಶನಗಳಂತೆ ಅವರೂ ಡಮ್ಮಿ ಅಧ್ಯಕ್ಷರಾಗೇ ಕಾಲ ತಳ್ಳಬೇಕಾಗುತ್ತೆ. ಯಾಕೆಂದರೆ ಬರೋಬ್ಬರಿ ಐದು ಬಾರಿ ಶಾಸಕರಾಗಿರುವ ಸದ್ರಿ ಕುಮಾರಸ್ವಾಮಿ ಈ ಮೈತ್ರಿ ಸರ್ಕಾರದಲ್ಲಿ ತನಗೊಂದು ಮಂತ್ರಿ ಸ್ಥಾನ ಕೊಡಿ ಎಂದು ಕೇಳಿ ಗಿಟ್ಟಿಸಿಕೊಳ್ಳಲಾಗದಷ್ಟು ಮೆತ್ತೆ ಮನುಷ್ಯ. ಇಂಥಾ ವ್ಯಕ್ತಿ ಜೆಡಿಎಸ್ ಅಧ್ಯಕ್ಷಗಿರಿಗಿರುವ ಹಳೇ ಸಂಪ್ರದಾಯ ಮುರಿಯುವ ಯಾವ ಸಾಧ್ಯತೆಯೂ ಇಲ್ಲ. ರಾಜ್ಯ ರಾಜಕಾರಣದ ಮಾತು ಒತ್ತಟ್ಟಿಗಿರಲಿ ತವರು ಜಿಲ್ಲೆ ಹಾಸನದಲ್ಲೇ ಅವರ ಮಾತು ನಡೆಯೋದಿಲ್ಲ ಅನ್ನೋದನ್ನು ಜೆಡಿಎಸ್ ಕಾರ್ಯಕರ್ತರೇ ಮಾತಾಡಿ ಕೊಳ್ಳುತ್ತಿದ್ದಾರೆ. ಯಾಕೆಂದರೆ ಹಾಸನದ ಇಡೀ ರಾಜಕಾರಣವನ್ನು ಮುಷ್ಠಿಯಲ್ಲಿ ಹಿಡಿದು ಕೂತಿರೋದು ಎಚ್.ಡಿ.ರೇವಣ್ಣ. ಅವರ ಮುಂದೆ ಎಚ್.ಕೆ.ಕುಮಾರಸ್ವಾಮಿ ಗಟ್ಟಿಯಾಗಿ ದನಿಬಿಚ್ಚುವ ಧೈರ್ಯ ತೋರುವುದೇ ಡೌಟು.

ಹಾಸನದಲ್ಲಿ ತನ್ನ ಬಿಟ್ಟರೆ ಮತ್ತ್ಯಾವ ಶಕ್ತಿಕೇಂದ್ರಗಳೂ ಸೃಷ್ಟಿ ಆಗಬಾರದೆನ್ನುವ ಕಾರಣಕ್ಕೇ ರೇವಣ್ಣ, ಎಚ್‍ಕೆ ಕುಮಾರಸ್ವಾಮಿ ಮಂತ್ರಿಯಾಗುವುದಕ್ಕೆ ಅಡ್ಡಗಾಲು ಹಾಕಿದ್ದು ಎನ್ನಲಾಗುತ್ತಿದೆ. ಆರಂಭದಲ್ಲಿ ಕುಮಾರಸ್ವಾಮಿ ಹೆಸರು ಮಂತ್ರಿಯಾಗುವವರ ಯಾದಿಯಲ್ಲಿ ಕೇಳಿಬಂದದ್ದು ಸುಳ್ಳಲ್ಲ. ದಲಿತ ವ್ಯಕ್ತಿಗೆ ಮಂತ್ರಿಯಾಗುವ ಅವಕಾಶ ತಪ್ಪಿಸಿ, ಈಗ ಅದೇ ವ್ಯಕ್ತಿಗೆ ಅಧ್ಯಕ್ಷ ಪಟ್ಟ ಕಟ್ಟಿ ದಲಿತರ ಮೂಗಿಗೆ ತುಪ್ಪ ಸವರುವ ಯತ್ನವೂ ಇದರ ಹಿಂದಿದೆ. ಆದರೆ ಗೌಡರ ಹಟ್ಟಿಯ ಪಾರ್ಟಿಯ ಅಧ್ಯಕ್ಷಗಿರಿಯ ವಜನ್ನು ಎಂತದ್ದು ಎಂಬುದು ಗೊತ್ತಿರುವ ಸತ್ಯವಾಗಿರೋದ್ರಿಂದ ದಲಿತರ್ಯಾರು ಈ ಆಯ್ಕೆಯಿಂದ ಹಿಗ್ಗಿಲ್ಲ ಅನ್ನೋದು ವಾಸ್ತವ.

ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷರಾಗಿದ್ದರಿಂದ ಆದ ಒಂದೇ ಲಾಭ ಅಂದ್ರೆ, ಜೆಡಿಎಸ್ ಶಾಸಕರು ತಾಜ್‍ವೆಸ್ಟ್‍ಎಂಡ್‍ನಿಂದ ದೇವನಹಳ್ಳಿ ರೆಸಾರ್ಟ್‍ಗೆ ಹೊರಡುವಾಗ ಮಾಧ್ಯಮಗಳ ಫೋಟೋಗ್ರಾಫರ್‍ಗಳಿಗೆ ಪ್ರಮುಖವಾಗಿ ಕಾಣಲೆಂದು ಅವರಿಗೆ ಬಸ್‍ನಲ್ಲಿ ಮುಂದಿನ ಸೀಟ್ ಸಿಕ್ಕಿದ್ದಷ್ಟೇ!

ಈ ಆಯ್ಕೆಯಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಪಕ್ಷದ ಯುವ ಘಟಕದ ಅಧ್ಯಕ್ಷರನ್ನಾಗಿ ನಿಖಿಲ್ ಕುಮಾರಸ್ವಾಮಿಯನ್ನು ಆಯ್ಕೆ ಮಾಡಿರೋದು. ಅಂತೂ ದೇವೇಗೌಡರು ಕುಟುಂಬ ರಾಜಕಾರಣದ ಹಳಿ ಬಿಟ್ಟು ಪಕ್ಕಕ್ಕೆ ಸರಿಯಲಾರರು ಎಂಬುದು ಇದರಿಂದ ಸಾಬೀತಾಗಿದೆ. ಜೊತೆಗೆ ರೇವಣ್ಣನವರ ಮಗ ಪ್ರಜ್ವಲ್ ಗೆದ್ದು ಸಂಸದನಾದ ನಂತರ ಕುಟುಂಬದೊಳಗೆ ಹುಟ್ಟಿಕೊಂಡಿದ್ದ ದಾಯಾದಿ ಅಸಮಾಧಾನವನ್ನು ಈ ರೀತಿ ಸರಿದೂಗಿಸಲಾಗಿದೆ. ಆದ್ರೆ ಒಂದಂತೂ ಸತ್ಯ, ಹಾಲಿ ಜೆಡಿಎಸ್ ಅಧ್ಯಕ್ಷ ಎಚ್ಕೆ ಕುಮಾರಸ್ವಾಮಿ ದೊಡ್ಡ ಗೌಡರು, ರೇವಣ್ಣ, ಕುಮಾರಣ್ಣನ ಎದುರು ಗಟ್ಟಿ ದನಿಯಾಗುವ ಮಾತಂತಿರಲಿ, ನಿಖಿಲ್ ಎದುರೂ ಗಡುಸಾಗಿ ಮಾತಾಡುವುದಕ್ಕೆ ಸಾಧ್ಯವಿಲ್ಲ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...