Homeಮುಖಪುಟಸಮರ್ಪಕ ಸಂವಹನ ಕಲೆ: ನಮಗೆ ಎರಡು ಬಾಯಿ ಮತ್ತು ಒಂದು ಕಿವಿ ಇಲ್ಲ. ಆದರೂ ಕೇಳಿಸಿಕೊಳ್ಳುವುದಕ್ಕಿಂತ...

ಸಮರ್ಪಕ ಸಂವಹನ ಕಲೆ: ನಮಗೆ ಎರಡು ಬಾಯಿ ಮತ್ತು ಒಂದು ಕಿವಿ ಇಲ್ಲ. ಆದರೂ ಕೇಳಿಸಿಕೊಳ್ಳುವುದಕ್ಕಿಂತ ಹೆಚ್ಚು ಮಾತನಾಡುತ್ತೇವೆ ಏಕೆ?

ಸಮರ್ಪಕ ಸಂವಹನ ಕಲೆ ಎಂದರೆ “ಸರಿಯಾದ ವ್ಯಕ್ತಿಗೆ, ಸರಿಯಾದ ಮಾಹಿತಿಯನ್ನು, ಸರಿಯಾದ ಸಮಯಕ್ಕೆ ಮತ್ತು ಸರಿಯಾದ ರೀತಿಯಲ್ಲಿ ತಲುಪಿಸುವುದು”. ಮೇಲಿನ ವಾಕ್ಯದಲ್ಲಿ “ಸರಿಯಾದ” ಎಂಬ ಪದ ನಾಲ್ಕು ಬಾರಿ ಬಂದಿದೆ. ಆದ್ದರಿಂದ ಅದರ ಮಹತ್ವ ಏನು ಎಂಬುದು ಸ್ಪಷ್ಟವಾಗಿರಬಹುದು.

- Advertisement -
- Advertisement -

ಜೀವನ ಕಲೆಗಳು : ಅಂಕಣ – 12

ಜೀವನಾವಶ್ಯಕ ಕಲೆಗಳು 3 – ಸಮರ್ಪಕ ಸಂವಹನ ಕಲೆ –1

ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ, ಜೀವನಾವಶ್ಯಕ ಕಲೆಗಳ ಕೇಂದ್ರಬಿಂದು “ಸಮರ್ಪಕ ಸಂವಹನ ಕಲೆ”. ಜೀವವನ್ನೇ ಉಳಿಸಬಲ್ಲ ಶಕ್ತಿ ಹೊಂದಿರುವಂತಹ ಕಲೆ. ಇದನ್ನು ಕಲೆ ಎಂದೂ ಪರಿಗಣಿಸಲಾಗಿದ್ದರೂ ಸಹ ಇದರ ಹಿಂದೆ ವೈಜಾÕನಿಕ ಸಿದ್ಧಾಂತವೂ ಇದೆ. ಮಿಕ್ಕ ಜೀವನಾವಶ್ಯಕ ಕಲೆಗಳಂತೆ ಇದೂ ಸಹ ದೈವದತ್ತವಾಗಿ ಹುಟ್ಟಿನಿಂದ ಬಂದ ಕಲೆ, ಆದರೆ ಅದನ್ನು ಸರಿಯಾಗಿ ರೂಢಿಸಿಕೊಳ್ಳದ ಕಾರಣ ಇದು ಸಮಸ್ಯೆಗೆ ಕಾರಣವಾಗುತ್ತದೆ.

ಸಮರ್ಪಕ ಸಂವಹನ ಕಲೆ ಎಂದರೆ “ಸರಿಯಾದ ವ್ಯಕ್ತಿಗೆ, ಸರಿಯಾದ ಮಾಹಿತಿಯನ್ನು, ಸರಿಯಾದ ಸಮಯಕ್ಕೆ ಮತ್ತು ಸರಿಯಾದ ರೀತಿಯಲ್ಲಿ ತಲುಪಿಸುವುದು”. ಮೇಲಿನ ವಾಕ್ಯದಲ್ಲಿ “ಸರಿಯಾದ” ಎಂಬ ಪದ ನಾಲ್ಕು ಬಾರಿ ಬಂದಿದೆ. ಆದ್ದರಿಂದ ಅದರ ಮಹತ್ವ ಏನು ಎಂಬುದು ಸ್ಪಷ್ಟವಾಗಿರಬಹುದು. ಮಿಕ್ಕ ನಾಲ್ಕು ಪದಗಳು – ವ್ಯಕ್ತಿ, ಮಾಹಿತಿ, ಸಮಯ, ರೀತಿ – ಇವುಗಳಲ್ಲಿ ಯಾವುದೇ ಏರು-ಪೇರಾದರೂ ನಮ್ಮ ಸಂವಹನ ಸಮರ್ಪಕವಾಗಿರುವುದಿಲ್ಲ. ಸಂವಹನ ಎಂಬುದು ಎರಡು ದಿಕ್ಕಿನ ರಸ್ತೆಯಾಗಿದ್ದು, ಮಾಹಿತಿ ಎರಡೂ ದಿಕ್ಕಿನಲ್ಲಿ ಅದೇ ವೇಗದಲ್ಲಿ ಚಲಿಸಬೇಕು. ಹಾಗಿದ್ದರೆ ಮಾತ್ರ ಸಂವಹನ ಸಮರ್ಪಕವಾಗಿರುತ್ತದೆ. ಆಗ ನಮಗೆ ಇನ್ನೊಬ್ಬರನ್ನು ಅಥವಾ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿ, ಅಪೇಕ್ಷಿಸಿದ ಪರಿಣಾಮವನ್ನು ತರುತ್ತದೆ.

ಸಾಮಾನ್ಯ ಸಂವಹನ ಕ್ರಿಯೆಯಲ್ಲಿ ನಾವು ಮೂರು ಮಾಧ್ಯಮಗಳ ಬಳಕೆ ಮಾಡುತ್ತೇವೆ. ಮೊದಲನೆಯದು ದೃಶ್ಯ-ಸಂಜ್ಞಾಮಾಧ್ಯಮ. ಅಂದರೆ ಕಣ್ಣಿಗೆ ಕಾಣುವಂತಹ ಕೈಸಂಜ್ಞೆ, ಕಣ್ಣುಸಂಜ್ಞೆ, ಇತ್ಯಾದಿ ಸದ್ದುಮಾಡದ ಸಂಕೇತಗಳು (ನಾನ್-ವರ್ಬಲ್ ಕಮ್ಯುನಿಕೇಷನ್ ಅಥವಾ ಬಾಡಿ ಲ್ಯಾಂಗ್ವೇಜ್). ಇದು ಸುಮಾರು 65% ಸಮಯ ಬಳಕೆಯಾಗುತ್ತದೆ. ಹೊಸ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್ ಮತ್ತು ಫೇಸ್ಬುಕ್ ಇವುಗಳಲ್ಲೂ ಸಹ ನಾವು ಇಂತಹ, ಎಮೋಟಿಕಾನ್ ಎಂದು ಕರೆಯಲ್ಪಡುವ ಸಂಜ್ಞೆಗಳ ಬಳಕೆಯನ್ನು ಕಾಣುತ್ತೇವೆ.

ಎರಡನೆಯದು ಕಿವಿಗೆ ಕೇಳಿಸುವಂತಹ ಧ್ವನಿಗಳ ಮಾಧ್ಯಮ, ಮುಖ್ಯವಾಗಿ ಧ್ವನಿಯ ಏರಿಳಿತ. ಸುಮಾರು 28% ಸಮಯ ಬಳಕೆಯಾಗುತ್ತದೆ. ಇವು ಸಂಪೂರ್ಣವಾಗಿ ಭಾಷಾಧಾರಿತವಾಗಿರುವುದಿಲ್ಲ.

ಮೂರನೆಯದು ಭಾಷಾಧಾರಿತ ಸಂಭಾಷಣೆ. ಕೇವಲ 7% ಬಳಕೆಯಾಗುವ ಮಾಧ್ಯಮ ಅಂದರೆ ಆಶ್ಚರ್ಯವಲ್ಲವೇ?

ನಾವು ಯಾವುದೇ ಒಂದು ಮಾಧ್ಯಮವನ್ನು ಪ್ರತ್ಯೇಕವಾಗಿ ಬಳಸದೆ, ಅವಶ್ಯಕತೆಗೆ ತಕ್ಕಂತೆ, ಏಕಕಾಲಕ್ಕೆ, ಲಭ್ಯವಿರುವ ಮಾಧ್ಯಮಗಳನ್ನು ಒಟ್ಟುಗೂಡಿಸಿ ಉಪಯೋಗಿಸುತ್ತೇವೆ.

ಸಂವಹನ ಪ್ರಕ್ರಿಯೆಯಲ್ಲಿ ಒಬ್ಬರು ಮಾಹಿತಿ/ಸಂದೇಶದ ರವಾನಿಗನಾದರೆ ಇನ್ನೊಬ್ಬರು ಸಂದೇಶ ಸ್ವೀಕರಿಸುವವರಾಗುತ್ತಾರೆ. ಸಂವಹನ ಪರಸ್ಪರವಾಗಿರಬೇಕಿದ್ದಲ್ಲಿ ಇವರಿಬ್ಬರ ನಡುವೆ ಪ್ರತ್ಯಾದಾನಕ್ಕೂ (ಫೀಡ್-ಬ್ಯಾಕ್) ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ ಸಂವಹನ ಏಕಪಕ್ಷೀಯವಾಗಿ, ವಾರ್ತಾಪ್ರಸಾರವಾಗಿ ಉಳಿಯುತ್ತದೆ.

ಸಮರ್ಪಕ ಸಂವಹನದಿಂದ:

·         ಸಂದೇಶ ರವಾನಿಸುವ ವ್ಯಕ್ತಿಯ ಅಥವಾ ಮಾಹಿತಿ ವಸ್ತುವಿನ ಬಗ್ಗೆ ಸ್ಪಷ್ಟತೆ ಸಿಗುತ್ತದೆ.

·         ಪರಸ್ಪರ ಭಿನ್ನಾಭಿಪ್ರಾಯ ಕಡಿಮೆಯಾಗಿ, ನಂಬಿಕೆ/ಗೌರವ ಹುಟ್ಟುತ್ತದೆ; ಅಸಮರ್ಪಕ ಸಂವಹನದಿಂದ ಮಾಹಿತಿ ಮತ್ತು/ಅಥವಾ ವ್ಯಕ್ತಿಯ ಬಗ್ಗೆ ನಂಬಿಕೆ/ಗೌರವ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

·         ಜನರ ಜೊತೆ ಸರಿಯಾಗಿ ಬಾಂಧವ್ಯ ಬೆಳೆಸಲು ಸಹಕಾರಿಯಾಗುತ್ತದೆ.

·         ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ.

ಸಂವಹನ ಸಮರ್ಪಕವಾಗಿರಬೇಕಾದರೆ ಅದು:

1.      ಸಂಪೂರ್ಣವಾಗಿರಬೇಕು

2.      ಸಂಕ್ಷಿಪ್ತವಾಗಿರಬೇಕು

3.      ಸ್ಪಷ್ಟವಾಗಿರಬೇಕು

4.      ವಿಷಯಕ್ಕೆ ಸೀಮಿತವಾಗಿರಬೇಕು

5.      ಸರಿಯಾಗಿ (ತಪ್ಪಿಲ್ಲದೆ) ಇರಬೇಕು

6.      ಸೌಜನ್ಯಪೂರ್ವಕವಾಗಿರಬೇಕು

7.      ಮಿಕ್ಕವರ ಭಾವನೆಯನ್ನು ಪರಿಗಣನೆಗೆ ತೆಗೆದುಕೊಂಡಿರಬೇಕು

 

ಸಂವಹನ ಸಮರ್ಪಕವಾಗಿರದಂತೆ ತಡೆಯುವ ಶಕ್ತಿಗಳು:

·         ಸಂವಹನ ಕಲೆಯ ಕೊರತೆ

·         ಸ್ವೀಕರಿಸುವವರ ಭಾವನೆಯ ಬಗ್ಗೆ ಸೂಕ್ಷ್ಮತೆಯ ಕೊರತೆ

·         ವಿಷಯವಸ್ತುವಿನ ಬಗ್ಗೆ ಮಾಹಿತಿಯ ಅಭಾವ

·         ಭಾವನೆಗಳ ಅಡ್ಡೈಸುವಿಕೆ

·         ಆತ್ಮಸ್ಥೈರ್ಯದ ಕೊರತೆ

·         ಮಾಧ್ಯಮಗಳ ತಿಕ್ಕಾಟ

·         ಸಂದೇಶ ತೀರಾ ಉದ್ದವಾಗಿರುವುದು/ದಿಕ್ಕುದೆಸೆ ಇಲ್ಲದಂತಹದು.

·         ಸ್ವೀಕರಿಸುವವರಲ್ಲಿ ಉದಾಸೀನತೆ

·         ಪ್ರತ್ಯಾದಾನಕ್ಕೆ ಪರ್ಯಾಪ್ತ ಅವಕಾಶವಿಲ್ಲದಿರುವುದು.

 

ಈ ತಡೆಗಳನ್ನು ಲಾಂಘಿಸುವ ಬಗೆಗಳು:

·         ಸ್ವೀಕರಿಸುವವರ ಜೊತೆ ಸಂಬಂಧ

·         ಸರಳವಾದ ಭಾಷೆಯ ಬಳಕೆ

·         ಸೂಕ್ತವಾದ ದೈಹಿಕ ಭಾಷೆ

·         ಸಾಂಸ್ಕೃತಿಕ ಸೂಕ್ಷ್ಮತೆ

·         ಪ್ರತ್ಯಾದಾನ ಸ್ವೀಕರಿಸುವುದು

·         ಬೇರೆಯವರಿಗೂ ಭಾಗವಹಿಸುವಿಕೆಗೆ ಅವಕಾಶ ನೀಡುವುದು

·         ಸರಿಯಾದ ಪ್ರಶ್ನೆಗಳನ್ನು ಕೇಳುವುದು

·         ಕೊನೆಯಲ್ಲಿ ಹೇಳಿದ್ದನ್ನು ಸಾರಾಂಶಿಸುವುದು

ವಾರ್ತಾಪ್ರಸಾರವನ್ನು ಬಿಟ್ಟು, ನಾವು ಪರಸ್ಪರ ಸಂಪರ್ಕದಲ್ಲಿರುವಾಗ, ನಾಲ್ಕು ವಿಧವಾದ ಕ್ರಿಯೆಗೆ ನಮ್ಮ ಸಮಯವನ್ನು ಕೆಳಕಂಡಂತೆ ಹಂಚಿಕೆ ಮಾಡಿರುತ್ತೇವೆ: ಕೇಳಿಸಿಕೊಳ್ಳುವುದು – 45%, ಮಾತನಾಡುವುದು – 30%, ಓದುವುದು – 16% ಮತ್ತು ಬರೆಯುವುದು – 9% (ಅಥವಾ ಇನ್ನೂ ಕಡಿಮೆ)

ಸಂವಹನ ಕ್ರಿಯೆಯಲ್ಲಿ ಕೇಳಿಸಿಕೊಳ್ಳುವುದು ಬಹಳ ಮುಖ್ಯ. ಕೇವಲ ಕೇಳಿಸಿಕೊಳ್ಳುವುದಷ್ಟೇ ಅಲ್ಲ, ಸಕ್ರಿಯವಾಗಿ ಕೇಳಿಸಿಕೊಳ್ಳಬೇಕು. ಹಾಗಂದರೇನು?

ಸಕ್ರಿಯ ಕೇಳಿಸಿಕೊಳ್ಳುವಿಕೆಯಲ್ಲಿ ನಾಲ್ಕು ವಿಧಗಳಿವೆ:

ಮೆಚ್ಚುಗೆಯ ಕೇಳಿಸಿಕೊಳ್ಳುವಿಕೆ (ಅಪ್ಪ್ರೆಸಿಯೇಟಿವ್ ಲಿಸನಿಂಗ್): ಅಂದರೆ ಅಜ್ಜಿ ಕತೆ ಹೇಳುವಾಗ ಮೊಮ್ಮಕ್ಕಳು ಕೇಳುವ ರೀತಿ.

ವಿಮರ್ಶಾತ್ಮಕ ಕೇಳಿಸಿಕೊಳ್ಳುವಿಕೆ (ಕ್ರಿಟಿಕಲ್ ಲಿಸನಿಂಗ್): ಅಂದರೆ ಕೇಳಿಸಿಕೊಳ್ಳುತ್ತಿರುವುದನ್ನು ನಿಮ್ಮ ಬುದ್ಧಿ ಒರೆಗಲ್ಲಿಗೆ ಹಚ್ಚುತ್ತಿದೆ ಎಂದರ್ಥ

ಭಾವನಾತ್ಮಕ ಕೇಳಿಸಿಕೊಳ್ಳುವಿಕೆ (ರಿಲೇಶನ್ಷಿಪ್ ಲಿಸನಿಂಗ್): ಇದು ನಿಮ್ಮ ನಡುವಣ ಸಂಬಂಧವನ್ನು ಅವಲಂಬಿಸಿರುತ್ತದೆ.

ಸೂಕ್ಷ್ಮಬುದ್ಧಿಯ ಕೇಳಿಸಿಕೊಳ್ಳುವಿಕೆ (ಡಿಸ್ಕ್ರಿಮಿನೇಟಿವ್ ಲಿಸನಿಂಗ್): ಇದೂ ಸಹ ವಿಮರ್ಶಾತ್ಮಕವಾಗಿದ್ದು, ತಪ್ಪನ್ನು ಕೂಡಲೇ ಹಿಡಿಯುವ ಉತ್ಸಾಹದಿಂದ ಕೂಡಿದ ಕೇಳಿಸಿಕೊಳ್ಳುವಿಕೆ.

“ನಾವು ಕೇಳಿಸಿಕೊಳ್ಳುವುದಕ್ಕಿಂತ ಹೆಚ್ಚು ಮಾತನಾಡಬೇಕು ಎಂದು ಸೃಷ್ಟಿಕರ್ತ ನಿರ್ಧರಿಸಿದ್ದರೆ, ನಮಗೆ ಎರಡು ಬಾಯಿ ಮತ್ತು ಒಂದು ಕಿವಿ ಕೊಟ್ಟಿರುತ್ತಿದ್ದ” ಎಂದು ಖ್ಯಾತ ಲೇಖಕ ಮಾರ್ಕ್ ಟ್ವೈನ್ ಹೇಳಿದ್ದಾರೆ. ಇದರಿಂದ ಸಂವಹನೆಯಲ್ಲಿ ಶ್ರವಣದ ಪಾತ್ರ ಎಷ್ಟು ಮುಖ್ಯ ಎನ್ನುವುದು ತಿಳಿಯುತ್ತದೆ. ಸಕ್ರಿಯ ಕೇಳಿಸಿಕೊಳ್ಳುವಿಕೆಯಲ್ಲಿ ನಮ್ಮ ಎಲ್ಲಾ ಗಮನ ಮತ್ತು ಶ್ರವಣೇಂದ್ರಿಯಗಳನ್ನು ಒಟ್ಟುಗೂಡಿಸಿ ಕೇಳಿಸಿಕೊಳ್ಳಬೇಕು. ಕಿವಿಯೊಂದೇ ಸಾಲದೇ ಎಂದು ನೀವು ಪ್ರಶ್ನಿಸಬಹುದು. ಇಲ್ಲ, ನಾವು ಕೇವಲ ಕಿವಿ ಮಾತ್ರವಲ್ಲ, ಕಣ್ಣು, ಮೆದುಳು ಮತ್ತು ಸ್ಪರ್ಶದಿಂದಲೂ ಕೇಳಿಸಿಕೊಳ್ಳಬಹುದು. ಸಕ್ರಿಯ ಕೇಳಿಸಿಕೊಳ್ಳುವಿಕೆ ಎಂದರೆ ಕಲ್ಲಿನಂತೆ ಕುಳಿತು ಕೇಳಿಸಿಕೊಳ್ಳುವುದು ಎಂದರ್ಥವಲ್ಲ. ಹೇಳುತ್ತಿರುವವರಿಗೆ ನಮ್ಮಿಂದ ಸೂಕ್ತ ಪ್ರತಿಕ್ರಿಯೆಯೂ ಕಾಲಕಾಲಕ್ಕೆ ಸಿಗುತ್ತಿರಬೇಕು ಉದಾ: ಮುಗುಳ್ನಗೆ, ದೃಷ್ಟಿ-ಸಂಪರ್ಕ, ತಲೆದೂಗುವುದು ಇತ್ಯಾದಿ. ಕೇಳಿಸಿಕೊಳ್ಳಲು ನೀವು ಕುಳಿತಿರುವ ರೀತಿ (ಪಾಷ್ಚರ್) ಸಹಿತ ಸಂದೇಶ ನೀಡುತ್ತಿರುತ್ತದೆ ಎಂಬುದನ್ನು ನೆನಪಿಡಿ.

( ಜೀವನ ಕಲೆಗಳಿಗೆ ಸಂಬಂಧಿತ ಲೇಖಕರ ಇನ್ನುಳಿದ ಲೇಖನಗಳಿಗಾಗಿ ಮೇಲೆ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿ )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....