Homeಮುಖಪುಟನೊಬೆಲ್ ಸಾಹಿತ್ಯ 2022; ಅಕ್ಷರ ಲೋಕದ ಪುರಾತತ್ವಜ್ಞೆ ಆನಿ ಎರ್ನೊ

ನೊಬೆಲ್ ಸಾಹಿತ್ಯ 2022; ಅಕ್ಷರ ಲೋಕದ ಪುರಾತತ್ವಜ್ಞೆ ಆನಿ ಎರ್ನೊ

- Advertisement -
- Advertisement -

ಎಡುವರ್ಡೋ ಗೆಲಿಯಾನೊ ಲ್ಯಾಟಿನ್ ಅಮೆರಿಕದ ಶ್ರೇಷ್ಠ ಬರಹಗಾರ. ಆತನನ್ನು ಕನ್ನಡಕ್ಕೆ ತಂದು ಪರಿಚಯಿಸಿದ್ದು ಕೆ ಪಿ ಸುರೇಶ್. ಬೆಂಕಿಯ ನೆನಪು ಎಂಬ ಪುಟ್ಟ ಪುಸ್ತಕದ ಇತಿಹಾಸ ಮತ್ತು ಜನರ ಸ್ಮೃತಿಯ ಕುರಿತು ಹೊಸ ಚಿಂತನೆಯ ಕಿಡಿ ಹೊತ್ತಿಸಿತ್ತು.

ನಾಲ್ಕು ದಿನಗಳ ಹಿಂದೆ 2022ರ ನೊಬೆಲ್ ಸಾಹಿತ್ಯ ಪುರಸ್ಕಾರ ಘೋಷಣೆಯಾದಾಗ ನನಗೆ ಗೆಲಿಯಾನೊ ನೆನಪಾದ. ಫ್ರೆಂಚ್ ಕಾದಂಬರಿಕಾರ್ತಿ, ಲೇಖಕಿ ಆನಿ ಎರ್ನೊಗೆ ಈ ಬಾರಿಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಘೋಷಿಸುತ್ತಾ, ಸ್ವೀಡಿಷ್ ಅಕಾಡೆಮಿ, ವ್ಯಕ್ತಿಗತ ನೆನಪುಗಳನ್ನು ದಾಖಲಿಸುವ ವಿಶಿಷ್ಟ ಬರವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತ್ತು.

ಹಿಂದೆ ನಡೆದಿದ್ದನ್ನು ನಾವು ನೆನಪಿಸಿಕೊಳ್ಳುತ್ತೇವೆ. ಇತಿಹಾಸದ ಹೆಸರಿನಲ್ಲಿ ದಾಖಲಾಗುವ ಹಲವು ಹಿತಾಸಕ್ತಿಗಳು ಆ ನೆನಪುಗಳ ಹಿಂದಿರುತ್ತವೆ. ಹಾಗಾಗಿ ಆ ಇತಿಹಾಸಕ್ಕೆ ಬಹು ಆಯಾಮಗಳಿರುತ್ತವೆಯೇ ಎಂಬ ಅನುಮಾನ ಎಂದಿಗೂ ಉಳಿದಿರುತ್ತದೆ. ಅದಕ್ಕೆ ಗೆಲಿಯಾನೊ, ಜನರ ಇತಿಹಾಸ ದಾಖಲಾಗಬೇಕೆಂದು ವಾದಿಸಿ, ಅದನ್ನು ’ಮೆಮೊರಿ ಆಫ್ ಫೈರ್’, ’ಮಿರರ್’ ಪುಸ್ತಕಗಳಲ್ಲಿ ಗಟ್ಟಿಯಾಗಿ ಪ್ರತಿಪಾದಿಸಿದ.

ಗೆಲಿಯಾನೊ ಹೇಳಿದ ಆ ಜನರ ಇತಿಹಾಸಕ್ಕೂ, ಆನಿ ಅವರು ತಮ್ಮ ವ್ಯಕ್ತಿಗತ ನೆನಪುಗಳನ್ನು ದಾಖಲಿಸುವುದಕ್ಕೂ ಸಾಮ್ಯತೆ ಇರಬಹುದೆ ಎಂಬ ಕುತೂಹಲ ನನ್ನನ್ನು ಕಾಡಲಾರಂಭಿಸಿತ್ತು. ಏಳು ದಶಕಗಳ ಕಾಲ ಫ್ರಾನ್ಸಿನ ಬದುಕುಗಳನ್ನು ನೋಡುತ್ತಾ, ಅಲ್ಲಿನ ಆಗು ಹೋಗುಗಳನ್ನು ದಾಖಲಿಸಿರುವ ಆನಿ ಸಾಮಾನ್ಯರ ಚರಿತ್ರೆಯನ್ನೇ ದಾಖಲಿಸಿದ್ದಾರೆಂದು ಹೇಳುವುದರಲ್ಲಿ ತಪ್ಪಿಲ್ಲ ಅನ್ನಿಸುತ್ತದೆ. ಅದಕ್ಕೆ ಆಕೆಯನ್ನು ಫ್ರಾನ್ಸಿನ ಸಮುದಾಯಗಳ ಸ್ಮೃತಿಗಳ ರಕ್ಷಕಿ ಎಂದು ಕರೆದಿರುವುದು.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕಾಲಘಟ್ಟದ ಕಥನದಲ್ಲಿ ತಾನಿದ್ದೂ ಇಲ್ಲದಂತೆ ದಾಖಲಿಸುವ ಈ ವಿಶಿಷ್ಟ ಬರವಣಿಗೆಯ ಕುರಿತು ಮಾತನಾಡುತ್ತಾ ಆನಿ, “ಒಂದು ಕಾಲಘಟ್ಟದಲ್ಲಿ ಬದುಕಿನ ಹೆಣ್ಣಿನ ಕಥೆಯನ್ನ ಹೇಳಬೇಕೆಂದುಕೊಂಡಿದ್ದೆ. ಆದರೆ ಅದನ್ನು ಹೇಗೆ ಹೇಳುವುದು ಎಂದು ತಿಳಿದಿರಲಿಲ್ಲ. ಆಕೆಯನ್ನು ಹೊರಗಿಟ್ಟು ಕತೆ ಹೇಳಲು ಹೊರಟಿದ್ದರೆ, ಅದು ಇತಿಹಾಸವಾಗುತ್ತಿತ್ತು. ನಾನು ಬರೆಯುವ ಕಥನದಲ್ಲಿ ಅಂತಃಶಕ್ತಿ ಇರಬೇಕು ಎಂದು ನನಗೆ ಗಟ್ಟಿಯಾಗಿ ಅನ್ನಿಸುತ್ತಿತ್ತು. ನಾನು ಚಿತ್ರಗಳನ್ನು, ವ್ಯಕ್ತಿಗತವಾದ ಮತ್ತು ವ್ಯಕ್ತಿಗತವಲ್ಲದ ನೆನಪುಗಳನ್ನು ಸಂಗ್ರಹಿಸಲಾರಂಭಿಸಿದೆ. ಸಿನಿಮಾ, ಪುಸ್ತಕ, ಭಾವಗೀತೆಗಳು ಎಲ್ಲವನ್ನೂ ಸಂಗ್ರಹಿಸಲಾರಂಭಿಸಿದೆ. ಯಾರದ್ದು ಎಂದು ಹೇಳಲಿಲ್ಲ. ನಾನು ಈ ಜಗತ್ತಿಗೆ ಕಾಲಿಟ್ಟ ಸಂದರ್ಭದಿಂದ ಆರಂಭಿಸಿದೆ. ನನ್ನ ಬಗ್ಗೆ ನಾನು ಬರೆಯುತ್ತಿರಲಿಲ್ಲ. ನಿರೂಪಣೆಗಳ ಮೂಲಕ, ನನ್ನದೇ ಆದ ರೀತಿಯಲ್ಲಿ ತಿಳಿಯುವ ಮೂಲಕ, ನನ್ನದೇ ಆದ ರೀತಿಯಲ್ಲಿ ಜಗತ್ತನ್ನು ಎದುರುಗೊಳ್ಳುವ ಮೂಲಕ ಆದ ಅನುಭವಗಳನ್ನು ದಾಖಲಿಸಲಾರಂಭಿಸಿದೆ. ಒಬ್ಬ ವ್ಯಕ್ತಿಯ ಅನುಭವವಾಗಿರಲಿಲ್ಲ. ಇದು ಜನರ, ಕಾರ್ಮಿಕರ, ಹಳೆಯ ದಿನಗಳ ಇತಿಹಾಸವಾಗಿತ್ತು” ಎಂದು ವಿವರಿಸಿದ್ದರು.

ಆನಿ, ಕಾರ್ಮಿಕ ವರ್ಗದ ಕುಟುಂಬವೊಂದರಲ್ಲಿ ಜನಿಸಿದಾಕೆ. ತಂದೆ ತಾಯಿಯರಿಬ್ಬರು ಕೆಫೆ ಮತ್ತು ತರಕಾರಿ ಅಂಗಡಿ ನಡೆಸುತ್ತಿದ್ದರು. ಇಪ್ಪತ್ತನೆಯ ವಯಸ್ಸಿಗೆ ಲಂಡನ್ನಿಗೆ ಬಂದ ಆನಿ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಈ ಸಂದರ್ಭದ ಅನುಭವಗಳನ್ನು ತನ್ನ ’ಎ ಗರ್ಲ್ಸ್ ಸ್ಟೋರಿ’ ಕಾದಂಬರಿಯಲ್ಲಿ ವಿವರಿಸಿದ್ದಾರೆ. ಫ್ರಾನ್ಸಿಗೆ ಮರಳಿ ವಿದ್ಯಾಭ್ಯಾಸ ಮುಂದುವರಿಸಿದ ಆನಿ, ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ಓದು ಅಧ್ಯಯನ ಮುಂದುವರಿಸಿ, ನ್ಯಾಷನಲ್ ಸೆಂಟರ್ ಫಾರ್ ಡಿಸ್ಟನ್ಸ್ ಎಜುಕೇಷನ್ ಸೇರಿಕೊಂಡರು. ಇಲ್ಲಿಯೇ ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದರು.

ಜೀವನದ ಈ ಎಲ್ಲ ಓಡಾಟಗಳ ನಡುವೆ ಬರವಣಿಗೆಯ ಹುಕಿ ಉಸಿರು ತುಂಬಿಕೊಂಡು ಬಂದಿದ್ದ ಆನಿಯವರ 34ನೇ ವಯಸ್ಸಿಗೆ. ಆಗ ಮೊದಲ ಕಾದಂಬರಿಯನ್ನು ಪ್ರಕಟಿಸಿದರು. ಬರವಣಿಗೆಯನ್ನೇ ತನ್ನ ಜೀವನದುದ್ದಕ್ಕೂ ಆರಿಸಿಕೊಳ್ಳಲಿರುವ ದಾರಿಯ ಸೂಚನೆ ಈ ಮೊದಲ ಕೃತಿಯಲ್ಲಿಯೇ ಇತ್ತು. ’ಕ್ಲೀನ್ಡ್ ಔಟ್’ ಹೆಸರಿನ ಈ ಮೊದಲ ಪ್ರಕಟಿತ ಪುಸ್ತಕ ಆತ್ಮಕಥಾ ಶೈಲಿಯ ಕಾದಂಬರಿಯಾಗಿತ್ತು. ನಂತರ ಬಂದ ’ಎ ಮ್ಯಾನ್ಸ್ ಲೈಫ್’ ಫ್ರಾನ್ಸಿನ ಪುಟ್ಟ ಪಟ್ಟಣದಲ್ಲಿ ತಂದೆಯೊಂದಿಗಿನ ಯುವತಿಯೊಬ್ಬಳ ಸಂಬಂಧವನ್ನು ಕಟ್ಟಿಕೊಟ್ಟರು. ಇಲ್ಲೂ ಆತ್ಮಕಥಾನಕ ಅಂಶಗಳೇ ಇದ್ದವು. ಶೈಲಿ ಮತ್ತು ಭಾಷೆಯ ಕಾರಣಕ್ಕೆ ಮೆಚ್ಚುಗೆ ಪಡೆದ ಈ ಕೃತಿ ಆನಿಯ ಸೃಜನಶೀಲ ಪ್ರಯೋಗವನ್ನು ಗಟ್ಟಿಯಾಗಿ ದಾಖಲಿಸಿತು.

ತನ್ನ ಪೋಷಕರ ಸಾಮಾಜಿಕ ಪ್ರಗತಿ, ಹರೆಯದ ದಿನಗಳು, ಮದುವೆ, ಪೂರ್ವ ಯುರೋಪಿನ ವ್ಯಕ್ತಿಯೊಂದಿಗೆ ಸಂಬಂಧ, ಗರ್ಭಪಾತ, ತನ್ನ ತಾಯಿಯ ಸಾವು, ಸ್ತನ ಕ್ಯಾನ್ಸರ್, ಹೀಗೆ ತನ್ನ ಬದುಕಿನ ಘಟ್ಟದ ತೀವ್ರ ಅನುಭವಗಳನ್ನು ಕಥನದ ಮೂಸೆಯಲ್ಲಿ ಕರಗಿಸಿ ಎರಕ ಹೊಯ್ದ ಆನಿ ನೆನಪುಗಳ ದಟ್ಟ ಅನುಭವವನ್ನು, ಬರವಣಿಗೆಯ ಮೂಲಕ ಆ ಕಾಲ, ಸಮಾಜದ ಅನುಭವವನ್ನಾಗಿಸಿ ಜಗತ್ತಿಗೆ ದಾಟಿಸಲಾರಂಭಿಸಿದರು. ಹೀಗೆ ವ್ಯಕ್ತಿಗತ ಅನುಭವಗಳನ್ನು ಬರೆಯುತ್ತಲೇ ದನಿಯಿಲ್ಲದ, ದಾಖಲಾದ ಎಷ್ಟೋ ಕತೆಗಳಿಗೆ ದನಿಯಾದರು.

ಆದರೆ ಹೀಗೆ ತನ್ನ ಬದುಕಿನ ಮೂಲಕ ಲೋಕದ ನೆನಪುಗಳನ್ನು ಹೆಕ್ಕಿ ತೆಗೆದು ದಾಖಲಿಸಿದ ಮೇಲೆ ಅವುಗಳನ್ನೇ ಅನುಮಾನಿಸುವುದು ಆನಿಯ ಇನ್ನೊಂದು ವೈಶಿಷ್ಟ್ಯ. ಇಪ್ಪತ್ತು ಕೃತಿಗಳನ್ನು ನೀಡಿರುವ ಆನಿ ವ್ಯಕ್ತಿಗತವಾದ ಬದುಕನ್ನು ದಾಖಲಿಸುತ್ತಿದ್ದರೂ, ಸಾಮಾಜಿಕ, ರಾಜಕೀಯ ಪರಿಸರವನ್ನು ಕಟ್ಟಿಕೊಟ್ಟಿದ್ದಾರೆ. ಉತ್ಖನನದಲ್ಲಿ ಸಿಕ್ಕುವ ಪ್ರತಿ ವಸ್ತುವು ಐತಿಹಾಸಿಕ ಕಾಲಘಟ್ಟದ ಹೊಸ ಮಗ್ಗಲನ್ನು ಅರಿಯುವಂತೆ ಮಾಡುವ ರೀತಿಯಲ್ಲೇ, ಆನಿಯ ಕಥನಗಳು ಬಿಚ್ಚಿಕೊಳ್ಳುತ್ತವೆ. ಹಾಗಾಗಿ ಆಕೆಯನ್ನು ಅಕ್ಷರ ಲೋಕದ ಪುರಾತತ್ವಶಾಸ್ತ್ರಜ್ಞೆ ಎಂದಿರುವುದು.

ಬರವಣಿಗೆಯ ಮೂಲಕ ಮುಕ್ತಿ ಹೊಂದುವ ಕ್ರಿಯೆ ಅತ್ಯಂತ ಸಂಕೀರ್ಣವಾದದ್ದು ಎನ್ನುವ ಆನಿ, ವ್ಯಕ್ತಿಗತ ಸತ್ಯದ ಹುಡುಕಾಟದ ಬಗ್ಗೆ ಅಪಾರ ಆಸ್ಥೆ, ಕುತೂಹಲದಿಂದ ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. ಅವರ ಒಟ್ಟು ಸೃಜನಶೀಲ ಪಯಣದ ಹಿಂದಿರುವ ಚೈತನ್ಯ, ಸ್ಫೂರ್ತಿ ಈ ಕುತೂಹಲವೇ ಆಗಿದೆ.

ಎಸ್ ಕುಮಾರ್

ಎಸ್ ಕುಮಾರ್
ಸಂಪಾದಕರು ಈದಿನ.ಕಾಂ


ಇದನ್ನೂ ಓದಿ: ಅಲೈನ್ ಆಸ್ಪೆಕ್ಟ್, ಜಾನ್ ಎಫ್. ಕ್ಲೌಸರ್, ಆಂಟನ್ ಝೈಲಿಂಗರ್‌ರವರಿಗೆ 2022ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...