Homeಅಂತರಾಷ್ಟ್ರೀಯಪುಟಿನ್ ವಿರುದ್ಧ ಸಿಡಿದೆದ್ದ ಮಾಜಿ ಆಪ್ತ ವ್ಯಾಗ್ನರ್ ಪಡೆ: ರಷ್ಯಾದಲ್ಲಿ ಆಂತರೀಕ ಯುದ್ಧ ಪ್ರಾರಂಭ

ಪುಟಿನ್ ವಿರುದ್ಧ ಸಿಡಿದೆದ್ದ ಮಾಜಿ ಆಪ್ತ ವ್ಯಾಗ್ನರ್ ಪಡೆ: ರಷ್ಯಾದಲ್ಲಿ ಆಂತರೀಕ ಯುದ್ಧ ಪ್ರಾರಂಭ

- Advertisement -
- Advertisement -

ರಷ್ಯಾದಲ್ಲಿ ಆಂತರೀಕ ಯುದ್ಧ ಪ್ರಾರಂಭವಾಗಿದೆ. ಅಧ್ಯಕ್ಷ ಪುಟಿನ್‌ರವರ ಬೆಂಬಲದಿಂದ ಆರಂಭವಾಗಿದ್ದ ಯೆವ್ಗೆನಿ ಪ್ರಿಗೋಜಿನ್ ನೇತೃತ್ವದ ವ್ಯಾಗ್ನರ್ ಮರ್ಸೆನರಿ ಎಂಬ ಖಾಸಗಿ ಮಿಲಿಟರಿ ಪಡೆಯು ಸದ್ಯ ಪುಟಿನ್ ವಿರುದ್ಧವೇ ತಿರುಗಿ ಬಿದ್ದಿದೆ. ಈ ಪಡೆಯು ಶಶಸ್ತ್ರ ದಂಗೆಯನ್ನು ಆರಂಭಿಸಿದ್ದು ರಷ್ಯಾದ ಎರಡು ನಗರಗಳನ್ನು ವಶಪಡಿಸಿಕೊಂಡಿರುವುದಾಗಿ ಮತ್ತು ಮೂರು ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿರುವಾಗಿ ಹೇಳಿಕೊಂಡಿದೆ.

ಈ ಕುರಿತು ಪುಟಿನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, “ವ್ಯಾಗ್ನರ್ ಸೈನಿಕರ ಶಸ್ತ್ರಸಜ್ಜಿತ ದಂಗೆಯು ‘ಬೆನ್ನಿಗೆ ಇರಿತವಾಗಿದೆ’ ಮತ್ತು ಪ್ರಿಗೋಜಿನ್ ರಷ್ಯಾಕ್ಕೆ ‘ದ್ರೋಹ’ ಮಾಡಿದ್ದಾರೆ. ಅತಿರಂಜಿತ ಮಹತ್ವಾಕಾಂಕ್ಷೆಗಳು ಮತ್ತು ವೈಯಕ್ತಿಕ ಹಿತಾಸಕ್ತಿಗಳು ಈ ದೇಶದ್ರೋಹಕ್ಕೆ ಕಾರಣವಾಗಿವೆ. ಇದರಲ್ಲಿ ಭಾಗಿಯಾದವರು ತಕ್ಕ ಶಿಕ್ಷೆ ಅನುಭವಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ರಷ್ಯಾದ ಅಧ್ಯಕ್ಷರು ತಮ್ಮ ಭಾಷಣದ ಸಮಯದಲ್ಲಿ ತಪ್ಪು ಆಯ್ಕೆ ಮಾಡಿದ್ದಾರೆ ಮತ್ತು ದೇಶವು ಶೀಘ್ರದಲ್ಲೇ ಹೊಸ ಪ್ರಧಾನಿಯನ್ನು ಹೊಂದಲಿದೆ ಎಂದು ವ್ಯಾಗ್ನರ್ ಪಡೆ ಹೇಳಿದೆ. ಪುಟಿನ್‌ರನ್ನು ಕೆಳಗಿಳಿಸುವ ಪ್ರತಿಜ್ಞೆ ಮಾಡಿರುವ ಆ ಪಡೆಯು ಸದ್ಯ ಮಾಸ್ಕೋನತ್ತ ತೆರಳುತ್ತಿದೆ ಎನ್ನಲಾಗಿದೆ.

ಮಾಸ್ಕೋದಲ್ಲಿ ರಷ್ಯಾದ ಮಿಲಿಟರಿಯು ತನ್ನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಕಾರಣಕ್ಕಾಗಿ ನಾವು ದಂಗೆಯನ್ನು ಆರಂಭಿಸಿದ್ದೇವೆ ಎಂದು ಪ್ರಿಗೋಜಿನ್ ಹೇಳಿದ್ದಾರೆ. ‘ನಮ್ಮ ದಾರಿಗೆ ಅಡ್ಡಬರುವ ಎಲ್ಲವನ್ನೂ ನಾಶಮಾಡುತ್ತವೆ ಎಂದಿರುವ ಅವರು “ಇದು ಮಿಲಿಟರಿ ದಂಗೆಯಲ್ಲ, ಆದರೆ ನ್ಯಾಯದ ಮೆರವಣಿಗೆ” ಎಂದಿದ್ದಾರೆ.

ಇನ್ನೊಂದೆಡೆ ಜನತೆ ತನ್ನ ಪರ ನಿಲ್ಲುವಂತೆ ಮನವಿ ಮಾಡಿರುವ ಪುಟಿನ್ ವ್ಯಾಗ್ನರ್ ದಾಳಿಯನ್ನು ಹಿಮ್ಮೆಟ್ಟಿಸಲು ನಮ್ಮ ಸೇನೆ ಸುಸಜ್ಜಿವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಚೆಚೆನ್ ನಾಯಕ ರಂಜಾನ್ ಕದಿರೊವ್ ಅವರು ಪುಟಿನ್ ಬೆಂಬಲಕ್ಕೆ ನಿಂತಿದ್ದು, ವ್ಯಾಗ್ನರ್ ಗುಂಪಿನ ವಿರುದ್ಧ ಹೋರಾಡಲು ಚೆಚೆನ್ ಸೈನಿಕರನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.

ಉಕ್ರೇನ್ ಈ ಬೆಳವಣಿಗೆಯನ್ನು ಗ್ರಹಿಸುತ್ತಿದ್ದು, ಒಬ್ಬರೊಬ್ಬರು ಹಣ ಮತ್ತು ಅಧಿಕಾರಕ್ಕಾಗಿ ಪರಸ್ಪರ ಕಚ್ಚಾಡುತ್ತಿದ್ದಾರೆ ಎಂದು ಹೇಳಿದೆ.

ಯೆವ್ಗೆನಿ ಪ್ರಿಗೋಜಿನ್ ನೇತೃತ್ವದ ವ್ಯಾಗ್ನರ್ ಮರ್ಸೆನರಿ ಎಂಬ ಖಾಸಗಿ ಮಿಲಿಟರಿ ಪಡೆಯು 2014ರಲ್ಲಿ ಆರಂಭಗೊಂಡಿದ್ದು, ಪುಟಿನ್‌ಗೆ ಬೆಂಬಲವಾಗಿ ಕೆಲಸ ಮಾಡಿದೆ. ಇತ್ತೀಚಿಗಿನ ಉಕ್ರೇನ್ ವಿರುದ್ಧದ ಸಂದರ್ಭದಲ್ಲಿಯೂ ಮಹತ್ವದ ಪಾತ್ರವಹಿಸಿದೆ ಎನ್ನಲಾಗಿದೆ. ಆದರೆ ಸದ್ಯ ಅದು ಪುಟಿನ್ ಕೆಳಗಿಳಿಸಲು ಮುಂದಾಗಿದೆ.

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಆ್ಯಪ್ ಸಿದ್ಧಗೊಂಡಿದೆ: ಡಿ.ಕೆ ಶಿವಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆಯಲ್ಲಿ ನರವಾಣೆ ಆತ್ಮಕಥೆ ಗದ್ದಲ : ವಿಪಕ್ಷಗಳ 8 ಮಂದಿ ಸಂಸದರು ಅಮಾನತು

ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಕತೆಯ ವಿಚಾರ ಮಂಗಳವಾರ (ಫೆ.3) ಕೂಡ ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಪುಸ್ತಕದ ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷದ ನಾಯಕ ರಾಹುಲ್...

ಮನ್ರೇಗಾ ಕಾರ್ಮಿಕರ ಮಹಾ ಪಂಚಾಯತ್ ರಾಷ್ಟ್ರಪತಿಗಳಿಗೆ ಬರೆದ ಮನ ಮುಟ್ಟುವ ಪತ್ರ

ಕೇಂದ್ರ ಸರ್ಕಾರ ವಿಬಿಜಿ- ರಾಮ್ ಜಿ 2025 ಕಾನೂನನ್ನು ವಾಪಸ್ ಪಡೆಯಬೇಕು ಹಾಗೂ ನರೇಗಾ ಯೋಜನೆಯನ್ನು ಮರು ಸ್ಥಾಪಿಸಬೇಕು ಎಂದು ಮನ್ರೇಗಾ ಕಾರ್ಮಿಕರ ಮಹಾ ಪಂಚಾಯತ್‌ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದೆ.  2026 ಫೆಬ್ರವರಿ...

ಗುಜರಾತ್‌| ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಕತ್ತಿಯಿಂದ ಹಲ್ಲೆ

ಗುಜರಾತ್‌ನ ಪಠಾನ್ ಜಿಲ್ಲೆಯ ಗ್ರಾಮವೊಂದರಲ್ಲಿ, ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ದಲಿತ ಸಮುದಾಯದ ಯುವಕ ವಿಶಾಲ್ ಚಾವ್ಡಾಗೆ ಮದುವೆಯ ಸಂತೋಷದ ದಿನವು ಜೀವನದ ದುಃಸ್ವಪ್ನವಾಗಿ...

ಗೃಹಲಕ್ಷ್ಮಿ ಯೋಜನೆಯಿಂದ 52 ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಹೊರಕ್ಕೆ: ಆದಾಯ ತೆರಿಗೆ ಇಲಾಖೆ ದಾಖಲೆಗಳು ಕಾರಣ ಎಂದ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: ರಾಜ್ಯಾದ್ಯಂತ 1.26 ಕೋಟಿ ಫಲಾನುಭವಿಗಳಲ್ಲಿ 52,000 ಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ತೆಗೆದುಹಾಕಲಾಗಿದೆ, ಏಕೆಂದರೆ ಅವರು ಜಿಎಸ್ಟಿ ಅಥವಾ ಆದಾಯ ತೆರಿಗೆ ಇಲಾಖೆಗಳ ದಾಖಲೆಗಳಲ್ಲಿ ತೆರಿಗೆದಾರರಾಗಿದ್ದಾರೆ ಎಂದು ಮಹಿಳಾ ಮತ್ತು...

ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಮನರೇಗಾ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ (ಫೆ.3) ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು. ರಾಜ್ಯದ ಗ್ರಾಮೀಣ ಜನರ ಬದುಕಿನ ಹಕ್ಕನ್ನು ಕಾಪಾಡುವ ದೃಷ್ಟಿಯಿಂದ,...

‘ಖಾಸಗಿ ಮಾಹಿತಿಯ ಕಳ್ಳತನ’ : ವಿವಾದಾತ್ಮಕ ಗೌಪ್ಯತೆ ನೀತಿ ಸಂಬಂಧ ವಾಟ್ಸಾಪ್, ಮೆಟಾ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ

ನಾಗರಿಕರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ವಾಟ್ಸಾಪ್ ಮತ್ತು ಅದರ ಪೋಷಕ ಕಂಪನಿ ಮೆಟಾವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಡೇಟಾ ಹಂಚಿಕೆಯ ಹೆಸರಿನಲ್ಲಿ ಬಳಕೆದಾರರ ಖಾಸಗಿ ಡೇಟಾವನ್ನು ಬಳಸಿಕೊಳ್ಳಲು...

‘ಲ್ಯಾಂಡ್ ಲಾರ್ಡ್’ ತೆರಿಗೆ ವಿನಾಯಿತಿಗೆ ಡಿಎಸ್ಎಸ್ ಮನವಿ: ಒಪ್ಪಿದ ಸಿಎಂ ಸಿದ್ದರಾಮಯ್ಯ

ಸಾಮಾಜಿಕ ನ್ಯಾಯ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುವ 'ಲ್ಯಾಂಡ್ ಲಾರ್ಡ್' ಕನ್ನಡ ಸಿನಿಮಾಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವಂತೆ ಡಿಎಸ್ಎಸ್ ಅಂಬೇಡ್ಕರ್ ವಾದ ಮತ್ತು ದಲಿತ ಹೋರಾಟಗಾರರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...

‘ಮೋದಿ ಅಂತಿಮವಾಗಿ ಶರಣಾಗಿದ್ದಾರೆ’: ಇಂಡೋ-ಯುಎಸ್ ವ್ಯಾಪಾರ ಒಪ್ಪಂದ ಎಲ್ಲಾ ಒಪ್ಪಂದಗಳ ಪಿತಾಮಹನಾಗಲು ಸಾಧ್ಯವಿಲ್ಲ: ಕಾಂಗ್ರೆಸ್

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇಂಡೋ-ಯುಎಸ್ ವ್ಯಾಪಾರ ಒಪ್ಪಂದ ಘೋಷಣೆಗೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ "ಅಂತಿಮವಾಗಿ ಶರಣಾಗಿದ್ದಾರೆ" ಮತ್ತು ಈ...

ಎಪ್‌ಸ್ಟೀನ್ ಜೊತೆಗಿನ ಸಂಪರ್ಕ ಬಹಿರಂಗ : ಲೇಬರ್ ಪಕ್ಷಕ್ಕೆ ಲಾರ್ಡ್ ಮ್ಯಾಂಡೆಲ್ಸನ್ ರಾಜೀನಾಮೆ

ಅಮೆರಿಕದ ಮಕ್ಕಳ ಲೈಂಗಿಕ ಹಗರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ದಾಖಲೆಗಳು ಬಹಿರಂಗಗೊಂಡ ಬೆನ್ನಲ್ಲೇ ಬ್ರಿಟನ್ ರಾಜಕಾರಣಿ ಲಾರ್ಡ್ ಪೀಟರ್ ಮ್ಯಾಂಡೆಲ್ಸನ್ ಲೇಬರ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಎಪ್‌ಸ್ಟೀನ್‌ ಜೊತೆಗಿನ ಸಂಪರ್ಕ...

ಭಾರತದ ಕಾರ್ಯತಂತ್ರದ ಸ್ವಾಯತ್ತತೆಗೆ ಏನಾಯಿತು; ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತು ಬಿಜೆಪಿಯನ್ನು ಪ್ರಶ್ನಿಸಿದ ಮನೀಶ್ ತಿವಾರಿ

ಮಂಗಳವಾರ ಅಮೆರಿಕ ಜೊತೆಗಿನ ಹೊಸ ವ್ಯಾಪಾರ ಒಪ್ಪಂದದ ಬಗ್ಗೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು ಮತ್ತು ವ್ಯಾಪಾರ ಒಪ್ಪಂದಕ್ಕಾಗಿ ನವದೆಹಲಿ ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ತ್ಯಾಗ ಮಾಡಿದೆಯೇ ಎಂದು...