“ರಾಜಕೀಯ ಪಕ್ಷವಾದ BJP ಶಾಲಾ ಕಾಲೇಜುಗಳಲ್ಲಿ ಮೋದಿಯವರ ಹುಟ್ಟುಹಬ್ಬವನ್ನು ಆಚರಣೆ ಮಾಡಬಹುದೆ? ಇಂತಹ ಮೂರು ಬಿಟ್ಟವರ ಕೆಲಸವನ್ನು BJP ಮಾಡುತ್ತಿದೆ. ನಮ್ಮೂರಿನ ಹೈಸ್ಕೂಲಿನ ಶಾಲಾ ವಿದ್ಯಾರ್ಥಿಗಳನ್ನು ಹೀಗೆ ರಾಜಕೀಯ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲು ಯಾರು ಇವರಿಗೆ ಅನುಮತಿ ಕೊಟ್ಟವರು?
ಪಕ್ಷದ ಚಿಹ್ನೆಗಳನ್ನು ಬಳಸಿಕೊಂಡು, ರಾಜಕೀಯ ನಾಯಕರನ್ನು ಸೇರಿಸಿಕೊಂಡು ಶಾಲಾ ಅವಧಿಯಲ್ಲಿ ಹೀಗೆ ಕಾರ್ಯಕ್ರಮ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇದು ಮಕ್ಕಳ ಬೆಳವಣಿಗೆ ಮೇಲೆ ಪ್ರಭಾವ ಬೀರುವುದಿಲ್ಲವೇ? ನಾಳೆ ಕಾಂಗ್ರೆಸ್, ನಾಳಿದ್ದು ಜೆ.ಡಿ.ಎಸ್ ಕಾರ್ಯಕ್ರಮ ಮಾಡುತ್ತೇವೆ ಎಂದರೆ ಶಾಲಾ ಮುಖ್ಯಸ್ಥರು ಅನುಮತಿ ಕೊಡುತ್ತಾರಾ? ತಾಲ್ಲೂಕಿನ ಶಿಕ್ಷಣಾಧಿಕಾರಿಗಳು ಮಲಗಿದ್ದಾರೆಯೇ? ಚೇ.. ನಾಚಿಕೆ ಆಗುತ್ತಿದೆ ಎಂಬಂತಹ ವಾಟ್ಸಾಪ್ ಸಂದೇಶವೊಂದು ವೈರಲ್ ಆಗಿದೆ. ಜೊತೆಗೆ ಕಾರ್ಯಕ್ರಮದ ಫೋಟೊಗಳು ಹರಿದಾಡುತ್ತಿವೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೆಮಸಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಜೆಪಿ ಮುಖಂಡರು ತಮ್ಮ ಪಕ್ಷದ ಬ್ಯಾನರ್ ಹಾಕಿ ಮೋದಿ ಜನ್ಮದಿನಾಚರಣೆ ಕಾರ್ಯಕ್ರಮ ಮಾಡಿದ್ದಾರೆ. ಭಾಷಣಗಳನ್ನು ಸಹ ಮಾಡಿದ್ದಲ್ಲದೇ, ಮೋದಿಯವರ ಬಗ್ಗೆ ವಿದ್ಯಾರ್ಥಿಗಳಿಂದಲೂ ಮಾತಾಡಿದ್ದಾರೆ. ಈ ಕುರಿತು ಅದೇ ಊರಿನ ಬಹಳಷ್ಟು ಜನರು ಕಾರ್ಯಕ್ರಮದ ಬಗ್ಗೆ ಅಪಸ್ವರ ಎತ್ತಿದ್ದಾರೆ.
ನರೇಂದ್ರ ಮೋದಿಯವರು ನಮ್ಮ ದೇಶದ ಪ್ರಧಾನಿಗಳು. ಅವರಿಗೆ ನಾವು ಗೌರವಿಸುವ, ಶುಭ ಹಾರೈಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಅದು ಖಾಸಗಿಯಾಗಿರಬೇಕೆ ಹೊರತು ಸಾರ್ವಜನಿಕವಾಗಿರಬಾರದು. ಅದರಲ್ಲೂ ಶಾಲಾ ಕಾಲೇಜುಗಳು ಪಕ್ಷರಾಜಕೀಯ ಮುಕ್ತ ಕಲಿಕೆಯ ತಾಣಗಳು. ಅಲ್ಲಿ ಒಂದು ಪಕ್ಷದ ಪರವಾಗಿ ಕಾರ್ಯಕ್ರಮ ಮಾಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಇಂತಹ ಕನಿಷ್ಠ ಸಾಮಾನ್ಯ ಜ್ಞಾನವೂ ಬಿಜೆಪಿಗಿಲ್ಲವೇ? ಅಥವಾ ಗೊತ್ತಿದ್ದೂ ಸಹ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ನಮ್ಮ ಸರಕಾರವೇ ಇದೆ ಎಂಬ ಅಹಂಕಾರದಿಂದ ಹೀಗೆ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಇದೊಂದು ಕೆಟ್ಟ ಮಾದರಿಯಾಗಿದ್ದು, ತೀರಾ ರಾಜಕೀಯ ಲಾಭಕ್ಕಾಗಿ ನಡೆಸಿದ ಕುತಂತ್ರದಂತೆ ಕಾಣುತ್ತಿದೆ. ಬೆಳೆಯುವ ಮಕ್ಕಳ ಮನಸ್ಸಿನಲ್ಲಿ ಯಾವುದೇ ಪಕ್ಷದ ಸಿದ್ಧಾಂತವನ್ನು ತುರುಕುವುದು ಅಕ್ಷಮ್ಯ ಅಪರಾಧ.. ಮಕ್ಕಳು ಸ್ವಂತಂತ್ರವಾಗಿ ಅಭ್ಯಸಿಸಿ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವಂತೆ ಶಿಕ್ಷಣವಿರಬೇಕು. ಚಿಕ್ಕ ವಯಸ್ಸಿನಲ್ಲಿಯೇ ಅವರ ಮೇಲೆ ಬಲವಂತವಾಗಿ ಪಕ್ಷ ರಾಜಕೀಯವನ್ನು ಹೇರುವುದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ವಿಜಯಪುರದಲ್ಲಿ ನಡೆದಿರುವ ಈ ಕಾನೂನು ಬಾಹಿರ ಕಾರ್ಯಕ್ರಮದ ಕುರಿತು ಕೂಡಲೇ ಶಿಕ್ಷಣ ಇಲಾಖೆ ಸಮರ್ಪಕ ತನಿಖೆ ನಡೆಸಿ ಕ್ರಮ ಜರುಗಿಸಬೇಕು. ಮುಂದೆ ಇಂತಹ ಘಟನೆಗಳು ಜರುಗದಂತೆ ಎಚ್ಚರ ವಹಿಸಬೇಕೆಂದು ವಿಜಯಪುರದ ವಕೀಲರು ಮತ್ತು ಯುವಜನ ಹೋರಾಟಗಾರರಾದ ಶ್ರೀನಾಥ್ ಪೂಜಾರಿಯವರು ಒತ್ತಾಯಿಸಿದ್ದಾರೆ.
RSS ಗಾಗಿ ಅರ್ಧವಾರ್ಷಿಕ ಪರೀಕ್ಷೆಯನ್ನು ಮುಂಚಿತವಾಗಿ ನಡೆಸುತ್ತಿರುವ ಉಡುಪಿ ಜಿಲ್ಲಾಡಳಿತ
ಉಡುಪಿಯಲ್ಲಿ ಅರ್ಧವಾರ್ಷಿಕ ಪರೀಕ್ಷೆ ಬಹಳಷ್ಟು ಮುಂಚಿತವಾಗಿ ನಡೆಯಲಿದೆ. ಏಕೆ ಗೊತ್ತೆ? RSS ನವರು ಅಕ್ಟೋಬರ್ 9 ರಿಂದ 16 ರವರೆಗೆ ನಡೆಸುವ ITC ತರಬೇತಿಯಲ್ಲಿ ಮಕ್ಕಳನ್ನು ಭಾಗವಹಿಸಲು ಅನುವು ಮಾಡಿ ಕೊಡುವ ಸಲುವಾಗಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆಯಂತೆ. ಉಸ್ತುವಾರಿ ಸಚಿವರ ಸಭೆಯಲ್ಲಿ RSS ಮುಖಂಡರು ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಕರೆಸಿ ಆದೇಶ ನೀಡಲಾಗಿದೆಯಂತೆ.. ಹೀಗೊಂದು ಸುದ್ದಿ ಉಡುಪಿಯಿಂದ ಹೊರಬಿದ್ದಿದೆ.
“ಶಿಕ್ಷಣದ ಉದ್ದೇಶ ಮಾನವೀಯವಾದ, ಸಮಾನವಾದ, ಪ್ರಜಾತಾಂತ್ರಿಕವಾದ, ಬಹುವೈವಿಧ್ಯತೆಯನ್ನು ಗೌರವಿಸುವ ಸಮಾಜ ನಿರ್ಮಾಣ ಮಾಡುವುದಾಗಿದೆ”. ಆದರೆ ಇಂದು ಬಿಜೆಪಿ ಸೇರಿದಂತೆ ಕೆಲವು ಪಕ್ಷಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಶಾಲಾ ಕಾಲೇಜುಗಳಿಗೆ ಮನಬಂದಂತೆ ನುಗ್ಗಿ ತಮ್ಮ ಅಜೆಂಡಾಗಳನ್ನು ಮಕ್ಕಳ ಮನಸ್ಸಲ್ಲಿ ತುರುಕುತ್ತಿರುವುದು ಅಪಾಯಕಾರಿ ನಡೆಯಾಗಿದೆ. ಇದರ ವಿರುದ್ಧ ಪ್ರಜಾತಂತ್ರವನ್ನು ಉಳಿಸುವ ಎಲ್ಲಾ ಸಂಘಟನೆಗಳು ಒಗ್ಗೂಡಿ ಹೋರಾಡಬೇಕಾದ ಅನಿವಾರ್ಯತೆಯಿದೆ ಎಂದು ಕೆವಿಎಸ್ ಸಂಚಾಲಕ ಸರೋವರ್ ಬೆಂಕಿಕೆರೆ ತಿಳಿಸಿದ್ದಾರೆ.



This is good from childhood patriotism will come. Nice idea. Only frustrated depressed lot can thing negative of this programme. Nothing wrong in conducting and involving future citizens into main stream of future India.?????✌?????