Homeಮುಖಪುಟರಾಹುಲ್ ಗಾಂಧಿ ‘ಕಲ್ಲಿದ್ದಲು ಒಲೆ' ಹೇಳಿಕೆಯನ್ನು ಲೇವಡಿ ಮಾಡಿದ ಬಿಜೆಪಿಗರು; ವಾಸ್ತವ ಏನು?

ರಾಹುಲ್ ಗಾಂಧಿ ‘ಕಲ್ಲಿದ್ದಲು ಒಲೆ’ ಹೇಳಿಕೆಯನ್ನು ಲೇವಡಿ ಮಾಡಿದ ಬಿಜೆಪಿಗರು; ವಾಸ್ತವ ಏನು?

- Advertisement -
- Advertisement -

ಮಣಿಪುರದಿಂದ ಆರಂಭವಾಗಿರುವ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯು ಅಸ್ಸಾಂ ಪ್ರವೇಶಿಸಿದ ದಿನದಿಂದ ಈವರೆಗೆ, ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರ ಗಮನ ರಾಹುಲ್ ಗಾಂಧಿ ಮೇಲೆ ಕೇಂದ್ರೀಕೃತವಾದಂತೆ ಭಾಸವಾಗುತ್ತಿದೆ. ಏಕೆಂದರೆ, ರಾಹುಲ್ ಅವರ ಗುವಾಹಟಿ ನಗರ ಪ್ರವೇಶಕ್ಕೆ ಅನುಮತಿ ನಿರಾಕರಣೆಯಿಂದ ಹಿಡಿದು, ಅವರನ್ನು ರಾವಣ ಎಂದು ಟೀಕಿಸಿ, ಅವರ ಭಾಷಣದ ಕುರಿತು ಸಿಎಂ ಟ್ವೀಟ್ ಮಾಡುವ ಮೂಲಕ ತಮ್ಮ ಚಿತ್ತವನ್ನು ಕಾಂಗ್ರೆಸ್ ನಾಯಕನ ಮೇಲಿರಿಸಿದ್ದಾರೆ.

ಅಸ್ಸಾಂನ ಇದುಬ್ರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ‘ಕಲ್ಲಿದ್ದಲು ಒಲೆ’ ಬಳಕೆಯ ಕುರಿತು ಮಾತನಾಡಿದ್ದರು. ಅವರ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಶರ್ಮಾ, ‘ಒಲೆಯಲ್ಲಿ ಕಲ್ಲಿದ್ದಲು? ಆಲೂಗಡ್ಡೆಯಿಂದ ಚಿನ್ನವನ್ನು ತಯಾರಿಸುವವಂತೆ, ನೀವು ಕಲ್ಲಿದ್ದಲನ್ನು ಒಲೆಗೆ ಹಾಕುವ ಕಲ್ಪನೆ ಪಡೆದುಕೊಂಡಿದ್ದೀರ. ನಿಮ್ಮ ಹೇಳಿಕೆ ನಮ್ಮನ್ನು ಗೊಂದಲಕ್ಕೀಡುಮಾಡಿದೆ. ನೀವು ಎಚ್ಚರವಾಗಿದ್ದೀರಾ?’ ಎಂದು ವ್ಯಂಗ್ಯ ಮಾಡಿದ್ದಾರೆ.

‘ಬೆಳಗ್ಗೆ ಎದ್ದು ಒಲೆಯ ಮೇಲೆ ಕಲ್ಲಿದ್ದಲನ್ನು ಹಾಕಿ ಚಹಾ ತಯಾರಿಸುವಾಗ ಕಲ್ಲಿದ್ದಲಿನ ಲಾಭ ನಿಮ್ಮ ಮುಖ್ಯಮಂತ್ರಿಯದ್ದು, ನೀವು ಕುಡಿಯುವ ಚಹಾ, ಅದರ ತೋಟಗಳು ನಿಮ್ಮ ಮುಖ್ಯಮಂತ್ರಿಯವರಿಗೆ ಸೇರಿದ್ದು. ನೀವು ಓದುವ ಪತ್ರಿಕೆ ಮತ್ತು ನೀವು ನೋಡುವ ದೂರದರ್ಶನ ಎರಡೂ ನಿಮ್ಮ ಮುಖ್ಯಮಂತ್ರಿಗಳ ಒಡೆತನದಲ್ಲಿದೆ’ ಎಂದು ರಾಹುಲ್ ಮಾತನಾಡಿದ್ದರು.

ಜನಸಾಮಾನ್ಯರ ಜೀವನದ ಭಾಗವಾಗಿರುವ ಎಲ್ಲ ವಸ್ತುಗಳಲ್ಲೂ ಹಿಮಂತ ಶರ್ಮಾ ಪಾಲನ್ನು ಹೊಂದಿದ್ದಾರೆ ಎಂದು ರಾಹುಲ್ ಆರೋಪಿಸಿದರು.

ಮಣಿಪುರದ ನಂತರ ರಾಹುಲ್ ನೇತೃತ್ವದ ಯಾತ್ರೆ ಅಸ್ಸಾಂಗೆ ಪ್ರವೇಶಿಸಿದಾಗಿನಿಂದಲೂ ಅಸ್ಸಾಂ ರಾಜ್ಯ ನಾಯಕತ್ವ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ವಿನಿಮಯ ನಡೆಯುತ್ತಲೆ ಇದೆ. ಸುಮಾರು ಎರಡು ತಿಂಗಳಲ್ಲಿ 14 ರಾಜ್ಯಗಳನ್ನು ಸುತ್ತುವ ಗುರಿಯನ್ನು ಹೊಂದಿರುವ ಯಾತ್ರೆಯು ಮಂಗಳವಾರ ಅಸ್ಸಾಂಗೆ ಮರುಪ್ರವೇಶಿಸುವ ಮೊದಲು ಅರುಣಾಚಲ ಪ್ರದೇಶದಲ್ಲಿ ಒಂದು ದಿನವನ್ನು ಕಳೆದಿದೆ. ಅಸ್ಸಾಂನಲ್ಲಿ ನಡೆದ ತಮ್ಮ ಯಾತ್ರೆಯ ಆರಂಭಿಕ ರ‍್ಯಾಲಿಗಳಲ್ಲಿ, ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ ಅಸ್ಸಾಂ ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿದರು.

ಕಾಂಗ್ರೆಸ್ ಯಾತ್ರೆಯು ಪ್ರಸ್ತುತ ಅಸ್ಸಾಂನಲ್ಲಿದ್ದು, ಗುವಾಹಟಿ ನಗರದ ಪ್ರವೇಶ ನಿರಾಕರಣೆ ನಂತರ ಅಲ್ಲಿ ಪೊಲೀಸರೊಂದಿಗೆ ಘರ್ಷಣೆಗಳು, ಬ್ಯಾರಿಕೇಡ್‌ಗಳನ್ನು ಮುರಿಯುವ ಘಟನೆಗಳು ನಡೆದವು. ಹಿಂಸಾಚಾರವನ್ನು ಪ್ರಚೋದಿಸಿದ ಮತ್ತು ಅನುಮೋದಿಸಿದ ಮಾರ್ಗವನ್ನು ಅನುಸರಿಸದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಎಫ್ಐಆರ್ ದಾಖಲಿಸಿದೆ.

ಈ ಎಲ್ಲಾ ಬೆಳವಣಿಗೆಯ ನಂತರ ರಾಹುಲ್ ಗಾಂಧಿಯವರ ‘ಕಲ್ಲಿದ್ದಲು ಒಲೆ’ಯ ಕುರಿತು ನೀಡಿರುವ ಹೇಳಿಕೆಯನ್ನು ಹಿಮಂತ್ ಬಿಸ್ವಾ ಶರ್ಮಾ ಸೇರಿದಂತೆ ದೇಶದ ಹಲವು ಬಿಜೆಪಿ ನಾಯಕರು ವ್ಯಂಗ್ಯ ಮಾಡಿದ್ದಾರೆ. ‘ಒಲೆಯಲ್ಲಿ ಕಲ್ಲಿದ್ದಲು ಬಳಸುವ ಭೂಮಿಯ ಮೇಲಿನ ಏಕೈಕ ವ್ಯಕ್ತಿ ರಾಹುಲ್ ಗಾಂಧಿ. ಅವರು ಭಾರತದ ಪ್ರಧಾನಿಯಾಗಲು ಬಯಸುತ್ತಾರೆ’ ಎಂದು ಬಿಜೆಪಿ ಮಾಜಿ ಶಾಸಕ ಸಿಟಿ ರವಿ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ.

ಆದರೆ, ಕಾಂಗ್ರೆಸ್ ಬೆಂಬಲಿಗರು ಬಿಜೆಪಿಗರ ಟ್ರೋಲಿಗೆ ತಿರುಗೇಟು ಕೊಟ್ಟಿದ್ದಾರೆ. ದೇಶದಲ್ಲಿ ಹಲವು ಜನರು ಕಲ್ಲಿದ್ದಲು ಒಲೆ ಬಳಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಮಾಹಿತಿ ಕೊರತೆ ಇದೆ ಎಂದು ಕಿಡಿಕಾರಿದ್ದಾರೆ.

‘ಮೊದಲನೆಯದಾಗಿ, ನೀವು (ಹಿಮಂತ್ ಬಿಸ್ವಾ ಶರ್ಮಾ) ಮುಖ್ಯಮಂತ್ರಿಯೋ ಅಥವಾ ಟ್ರೋಲ್ ಮಾಡುವವರೋ? ಎರಡನೆಯದಾಗಿ, ಕಲ್ಲಿದ್ದಲು ಒಲೆಯ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಅದು ತುಂಬಾ ಗಂಭೀರವಾದ ವಿಷಯವಾಗಿದೆ. ವಾಟ್ಸಾಪ್ ನಲ್ಲಿ ಬಂದದ್ದನ್ನು ಇಲ್ಲಿ ಪೇಸ್ಟ್ ಮಾಡಿದ್ದೀರಿ. ಕಲ್ಲಿದ್ದಲು ಒಲೆಯ ಫೋಟೋ ಕೆಳಗೆ ಇದೆ ಅದು ನಿಮ್ಮ ಜ್ಞಾನವನ್ನು ಸುಧಾರಿಸುತ್ತದೆ ಎಂದು ಭಾವಿಸುತ್ತೇವೆ. ಇನ್ನೊಂದು ವಿಷಯ, ರಾಹುಲ್ ಗಾಂಧಿಗೆ ನೀವು ಭಯಪಡುತ್ತೀರಿ ಯಾಕೆ’ ಎಂದು ಕರ್ನಾಟಕದ ಕಾಂಗ್ರೆಸ್ ಬೆಂಬಲಿಗರಾದ ಸ್ವಾತಿ ದೀಕ್ಷಿತ್ ಎಂಬುವವರು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ಪ್ರತಿಕ್ರಿಯಿಸಿದ್ದಾರೆ.

ಕಲ್ಲಿದ್ದಲು ಒಲೆ ಬಳಕೆಯಲ್ಲಿ ಇಲ್ಲವಾ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಕಲ್ಲಿದ್ದಲು ಒಲೆ ವಿಚಾರವಾಗಿ ಬಿಜೆಪಿಗರು ಟ್ರೋಲ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಬೃಹತ್ ಕೈಗಾರಿಕೆ, ವಿದ್ಯುತ್ ಉತ್ಪಾದನಾ ಘಟಕಗಲ್ಲಿ ಹೆಚ್ಚಾಗಿ ಕಲ್ಲಿದ್ದಲು ಬಳಕೆ ಮಾಡಲಾಗುತ್ತದೆ. ಜತೆಗೆ, ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಅಡುಗೆ ಮಾಡಲು ವಿಶೇಷ ಕಲ್ಲಿದ್ದಲು ಸ್ಟೋವ್‌ಗಳು ಬಳಕೆಯಲ್ಲಿವೆ.

ಭಾರತ ಸೇರಿದಂತೆ ಹಲವು ಶೀತ ಪ್ರದೇಶಗಳಲ್ಲಿ ಮತ್ತು ಅಭಿವೃದ್ಧಿಯಾಗದ ದೇಶಗಳಲ್ಲಿ ಕಲ್ಲಿದ್ದಲನ್ನು ಇನ್ನೂ ಅಡುಗೆಗೆ ಇಂಧನವಾಗಿ, ಶಾಖದ ಮೂಲವಾಗಿ ಬಳಸಲಾಗುತ್ತದೆ. ಕಟ್ಟಿಗೆಯಂತೆ ಕಲ್ಲಿದ್ದಲು ಬೇಗ ಧಹಿಸುವುದಿಲ್ಲ. ಒಂದು ಪೌಂಡ್ ಆಂಥ್ರಾಸೈಟ್ ಕಲ್ಲಿದ್ದಲು ಒಂದು ಪೌಂಡ್ ಮರಕ್ಕಿಂತ ಹೆಚ್ಚು ಶಾಕವನ್ನು ಉತ್ಪಾದಿಸುತ್ತದೆ. ಅಡುಗೆ ಅನಿಲಗಳ ಬೆಲೆ ಏರಿಕೆ, ಒಣ ಕಟ್ಟಿಗೆಗಳ ಅಲಭ್ಯತೆ ಕಾರಣಗಳಿಂದಾಗಿ ಭಾರತದಲ್ಲೂ ಕೆಲ ಪ್ರದೇಶಗಳಲ್ಲಿ ಕಲ್ಲಿದ್ದಲು ಒಲೆ ಬಳಕೆಯಲ್ಲಿವೆ. ಮುಖ್ಯವಾಗಿ, ಆನ್‌ಲೈನ್ ಮಾರಾಟ ಡೊಮೈನ್‌ಗಳಲ್ಲಿಯೂ ಕೂಡ ಕಲ್ಲಿದ್ದಲು ಒಲೆಗಳು ಲಭ್ಯವಿರುವದನ್ನು ನಾವು ಗಮನಿಸಬಹುದು.

ಬೆಲೆ ಏರಿಕೆಯಿಂದ ಕಟ್ಟಿಗೆ ಬಳಕೆ ಹೆಚ್ಚಳ:

ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು; ಅಂದರೆ, ಸುಮಾರು 2.4 ಶತಕೋಟಿ ಜನರು ಪ್ರಸ್ತುತ ಹೊಗೆರಹಿತ ಅನಿಲ ಬಳಕೆ ಸೌಲಭ್ಯವನ್ನು ಹೊಂದಿಲ್ಲ. ಕಲ್ಲಿದ್ದಲು ಮತ್ತು ಕಟ್ಟಿಗೆ ಬಳಕೆಯಿಂದ ಜಾಗತಿಕವಾಗಿ, ಪ್ರತಿ ವರ್ಷ ಸುಮಾರು 2.3 ಮಿಲಿಯನ್ ಜನರು ಅಕಾಲಿಕವಾಗಿ ಸಾಯುತ್ತಾರೆ.

ಅಡುಗೆ ಮನೆಯಲ್ಲಿ ಕಟ್ಟಿಗೆ ಬಳಸುವ ವಿಚಾರದಲ್ಲಿ ಭಾರತವು ಹಿಂದೆ ಉಳಿದಿಲ್ಲ. ಸರ್ಕಾರದ ಹಲವು ಪ್ರಯತ್ನಗಳ (ಪ್ರಚಾರ) ಹೊರತಾಗಿಯೂ ಗ್ರಾಮೀಣ ಭಾರತದ ಹೆಚ್ಚಿನ ಭಾಗಗಳು, ಅಡುಗೆ ಮಾಡಲು ಸಾಂಪ್ರದಾಯಿಕ ಒಲೆಗಳಿಗೆ ಹೆಚ್ಚು ಮಾಲಿನ್ಯಕಾರಕ ಇಂಧನಗಳನ್ನು ಸುಡುವುದನ್ನು ಮುಂದುವರಿಸಿದ್ದಾರೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ ಪ್ರಕಾರ, ಗ್ರಾಮೀಣ ಭಾರತದಲ್ಲಿ 56 ಪ್ರತಿಶತದಷ್ಟು ಕುಟುಂಬಗಳು ಅಥವಾ ಸುಮಾರು 520 ಮಿಲಿಯನ್ ಜನರು ಇನ್ನೂ ಕೆಲವು ರೀತಿಯ ಮರ, ಇದ್ದಿಲು, ಸೀಮೆಎಣ್ಣೆ, ಕಲ್ಲಿದ್ದಲು, ಕೃಷಿ ಅವಶೇಷಗಳು, ಪ್ರಾಣಿಗಳ ತ್ಯಾಜ್ಯ ಅಥವಾ ಇತತೆ ಅಪಾಯಕಾರಿ ವಸ್ತುಗಳನ್ನು ಅಡುಗೆ ಮಾಡಲು ಬಳಸುತ್ತಾರೆ.

ದಿನಕ್ಕೆ ಮೂರು ಬಾರಿ ಅಪಾಯಕಾರಿ ಉರುವಲುಗಳನ್ನು ಬಳಸುವುದರಿಂದ ಮನೆಯ ಗಾಳಿಯ ಗುಣಮಟ್ಟವನ್ನು (ಪರಿಸರ ಮತ್ತು ಒಳಾಂಗಣ) ಹದಗೆಡಿಸಬಹುದು; ಇದರಿಂದ ಪ್ರತಿಕೂಲ ದೀರ್ಘಕಾಲೀನ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುತ್ತದೆ.

2009 ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿದ ರಾಜೀವ್ ಗಾಂಧಿ ಗ್ರಾಮ್ ಎಲ್‌ಪಿಜಿ ವಿತರಕ್ ಯೋಜನೆ (ಆರ್ಜಿಜಿಎಲ್ವಿ ಯೋಜನೆ ಎಂದೂ ಕರೆಯುತ್ತಾರೆ), ಈ ದಿಕ್ಕಿನಲ್ಲಿ ಭರವಸೆಯ ಹೆಜ್ಜೆಯಾಗಿತ್ತು. ಈ ಯೋಜನೆಯನ್ನು ನಂತರ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಎಂದು ಮರುಪ್ರಾರಂಭಿಸಲಾಯಿತು. ಇದು ಭಾರತದಲ್ಲಿನ ನಗರ ಮತ್ತು ಗ್ರಾಮೀಣ ಕುಟುಂಬಗಳಲ್ಲಿ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಯೊಂದಿಗೆ ಘನ ಮತ್ತು ಇತರ ಜೈವಿಕ-ಆಧಾರಿತ ಮಾಲಿನ್ಯಕಾರಕ ಅಡುಗೆ ಇಂಧನಗಳನ್ನು ಬದಲಿಸುವ ಗುರಿಯನ್ನು ಹೊಂದಿದೆ.

ಯೋಜನೆಯ ಮೂಲಕ, ಭಾರತದಲ್ಲಿ 96 ಮಿಲಿಯಲ್‌ಗಿಂತಲೂ ಹೆಚ್ಚು ಕುಟುಂಬಗಳು 2022ರ ಅಂತ್ಯದವರೆಗೆ ಎಲ್‌ಪಿಜಿ ಸಿಲಿಂಡರ್‍‌ಗಳನ್ನು ಪಡೆದಿವೆ. ಭಾರತವು ಒಟ್ಟು 310 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಎಲ್‌ಪಿಜಿ ಸಿಲಿಂಡರ್ ಗ್ರಾಹಕರನ್ನು ಹೊಂದಿದೆ, ಒಂದು ವರ್ಷದಲ್ಲಿ ಸರಿಸುಮಾರು 2,480 ಮಿಲಿಯನ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸಲಾಗುತ್ತಿದೆ. (ಸರಾಸರಿ ಒಂದು ವರ್ಷದಲ್ಲಿ ಪ್ರತಿ ಮನೆಗೆ ಎಂಟು ಸಿಲಿಂಡರ್‌ಗಳು).

ಸರ್ಕಾರದ ಯೋಜನೆಯ ಭಾಗವಾಗಿ ಹೊಸ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆದ ಶೇ.50ರಷ್ಟು ಕುಟುಂಬಗಳು ದುಬಾರಿ ಬೆಲೆ ಏರಿಕೆ ಕಾರಣಕ್ಕಾಗಿ ಮರುಪೂರಣ ಮಾಡಿಸಿಲ್ಲ. ಕೆಲವರಿಗೆ ಸಿಲಿಂಡರ್ ಬಳಕೆಯ ಬಗ್ಗೆ ಅಜ್ಞಾನದ ಜತೆಗೆ, ಭಯವೂ ಇದೆ. ಫೆಬ್ರವರಿ 2022ರ ಹೊತ್ತಿಗೆ, ಭಾರತದಾದ್ಯಂತ ಸಿಲಿಂಡರ್ ಮರುಪೂರಣದ (14.2 ಕೆಜಿ) ಸರಾಸರಿ ವೆಚ್ಚವು ಸರಿಸುಮಾರು 1,100 ರೂ. ಆಗಿತ್ತು. ಒಂದು ಕುಟುಂಬಕ್ಕೆ ಒಂದು ವರ್ಷದಲ್ಲಿ ಕೇವಲ ಅಡುಗೆ ಮಾಡಲು ಅಂತಹ ಎಂಟು ಸಿಲಿಂಡರ್‌ಗಳು ಬೇಕಾಗುತ್ತವೆ, ಅಡುಗೆ ಇಂಧನಕ್ಕಾಗಿ ವಾರ್ಷಿಕವಾಗಿ ಸುಮಾರು 8,800 ರೂ. ಖರ್ಚು ಮಾಡಬೇಕಾಗಿರುತ್ತದೆ.

ಅಡುಗೆ ಅನಿಲ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ಅನಿಯಂತ್ರಿತ ಬೆಲೆ ಏರಿಕೆಯ ಕಾರಣದಿಂದ ದೇಶದ ಗ್ರಾಮೀಣ ಭಾಗದ ಜನರು ಸಿಲಿಂಡರ್ ಕೊಳ್ಳುವುದನ್ನು ನಿಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಕಲ್ಲಿದ್ದಲು ದೊರೆಯುವ ರಾಜ್ಯಗಳಲ್ಲಿ ಮತ್ತು ಅರಣ್ಯ ಪ್ರದೇಶದ ಆಸುಪಾಸಿನಲ್ಲಿ ವಾಸಿಸುವ ಜನರು ಸಾಂಪ್ರದಾಯಿಕ ಅಡುಗೆ ಪದ್ಧತಿಗೆ ಮೊರೆ ಹೋಗಿದ್ದಾರೆ ಎನ್ನಲಾಗಿದ್ದು, ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ಕಲ್ಲಿದ್ದಲು ಒಲೆಯ ವಿಚಾರವನ್ನು ಪ್ರಸ್ತಾಪಿಸಿದ್ದರು. ಆದರೆ, ಅಸ್ಸಾಂ ಸಿಎಂ ಸೇರಿದಂತೆ ಹಲವು ಬಿಜೆಪಿ ನಾಯಕರು ರಾಹುಲ್ ಮಾತಿನ ಗಂಭೀರತೆ ಅರಿಯದೆ ಟ್ರೋಲ್ ಮಾಡಿದ್ದಾರೆ.

ದನ್ನೂ ಓದಿ; ವಿಧಾನಸಭೆಯಲ್ಲೂ ಮುಂದುವರಿದ ಮುಸುಕಿನ ಗುದ್ದಾಟ; 2 ನಿಮಿಷಕ್ಕೆ ಭಾಷಣ ಮುಗಿಸಿದ ಕೇರಳ ರಾಜ್ಯಪಾಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...