Homeಕರ್ನಾಟಕಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್...

ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ ಸಂದರ್ಶನ

- Advertisement -
- Advertisement -

‘ಇಷ್ಟು ಕೋಟಿ ರೊಕ್ಕ ಕೊಟ್ಟರ ಅದನ್ನ ಎಲ್ಲಿಡೋದು ಅಂತ ನಮಗ ಗೊತ್ತಾಗವಲ್ದು ರೀ’ ಎಂದು ವಿಧಾನಸಭೆಯಲ್ಲಿ ಬಿ.ನಾರಾಯಣರಾವ್ ಅವರು ಮಾತನಾಡಿದಾಗ ಕರ್ನಾಟಕದ ಮತದಾರ ಬಂಧುಗಳಿಗೆ ಅದನ್ನು ಹೇಗೆ ಸ್ವೀಕರಿಸಬೇಕು ಎಂದು ಗೊತ್ತಾಗಲಿಲ್ಲ. ಮಾತಾಡುತ್ತಿದ್ದ ವ್ಯಕ್ತಿ ಪ್ರಾಮಾಣಿಕವಾಗಿದ್ದಂತೆ ಎಲ್ಲರಿಗೂ ಅನ್ನಿಸುತ್ತಿತ್ತಾದರೂ, ಇಂದಿನ ರಾಜಕಾರಣದಲ್ಲಿ ಇಂತಹ ಒಬ್ಬ ಶಾಸಕ ಇರಲು ಸಾಧ್ಯವೇ ಎಂಬ ಗುಮಾನಿಯೂ ಇತ್ತು. ನಾರಾಯಣರಾವ್‍ರನ್ನು ಬಲ್ಲವರಿಗೆ ಅಂತಹ ಅನುಮಾನವೇನೂ ಇಲ್ಲ. ‘80ರ ದಶಕದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸ್ಥಾಪನೆಯಾಗಬೇಕೆಂದು ಒತ್ತಾಯಿಸಿ ಬೀದರ್‌ನಿಂದ ಬೆಂಗಳೂರಿನವರೆಗೆ ಸೈಕಲ್ ಜಾಥಾ ಮಾಡಿದ ಉತ್ಸಾಹಿ ಅವರು. ಬಸವಕಲ್ಯಾಣದ ಹಿಂದುಳಿದ ಜಾತಿಯ ಅವರು ನಿರಂತರವಾಗಿ ರಾಜಕಾರಣದಲ್ಲಿದ್ದರೂ ಅಧಿಕಾರದ ಹತ್ತಿರಕ್ಕೆ ಎಂದೂ ಬಂದಿರಲಿಲ್ಲ. ಆ ನಂತರ ದೇವೇಗೌಡರೊಮ್ಮೆ ತಮ್ಮ ಪಕ್ಷದಿಂದ ‘89ರಲ್ಲಿ ಎಂಎಲ್‍ಎ ಟಿಕೆಟ್ ಕೊಟ್ಟಿದ್ದರಾದರೂ ಯಶಸ್ವಿಯಾಗಲಿಲ್ಲ. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತು, 2018ರಲ್ಲಿ ಗೆದ್ದರು. ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಅತಿಥಿಗೃಹದಲ್ಲಿ ಪತ್ರಿಕೆಯ ತಂಡಕ್ಕೆ ನಾರಾಯಣರಾವ್ ಮಾತಿಗೆ ಸಿಕ್ಕರು.

ಚಿತ್ರಕೃಪೆ: ಯೋಯೋ ಟಿವಿ

ಪತ್ರಿಕೆ: ವಿಧಾನಸಭೆಯಲ್ಲಿ ನೀವು ಮಾತಾಡಿದ್ದನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು. ನಿಮ್ಮಂತಹ ವ್ಯಕ್ತಿಗಳು ರಾಜಕಾರಣ ಮಾಡುವ ಪರಿಸ್ಥಿತಿ ಇದೆಯೇ? ನೀವು ಬಯಸುವಂತಹ ಬದಲಾವಣೆ ರಾಜಕಾರಣದಲ್ಲಿ ಸಾಧ್ಯವೇ?

ಬಿ.ನಾರಾಯಣರಾವ್: ಯಾರು ಬದಲಾವಣೆ ಆಗುತ್ತಾರೋ ಬಿಡುತ್ತಾರೋ ಅದು ನಮಗೆ ಸಂಬಂಧಿಸಿಲ್ಲ. ನಾವು, ನಮ್ಮಂತಹ ನಿಷ್ಠಾವಂತರು ಪ್ರಾಮಾಣಿಕರು, ಜನಪರ ಕಾಳಜಿಯಿಟ್ಟು ಹೋರಾಟ ಮಾಡಿದಂತವರು ಬದಲಾಗಬಾರದು.

ಯಾರು ಏನ್ ಮಾಡ್ತರೋ ಬಿಡ್ತಾರೋ ಗೊತ್ತಿಲ್ಲ. ಈ ದೇಶದಲ್ಲಿ ಮಹಾತ್ಮಗಾಂಧಿ ಎಲ್ಲರಿಗಿಂತ ಭಿನ್ನವಾದ ನಾಯಕತ್ವ ಕೊಟ್ಟರು. ಹಾಗಾಗಿ ನಮ್ಮಂತವರು ಅಲ್ಲೊಬ್ಬರು ಇಲ್ಲೊಬ್ಬರು ಉಳಿದುಕೊಂಡಿದ್ದೇವೆ. ಇದು ಬದಲಾವಣೆ ಆಗುವುದಿಲ್ಲ ಅಂತ ನಾವು ಕೆಟ್ಟವರ ಜೊತೆ ಹೋಗೋಕ್ಕಾಗಲ್ಲ.

ಪತ್ರಿಕೆ: ಅನರ್ಹ ಶಾಸಕರು – ಮಾರಿಕೊಂಡು ಹೋದವರನ್ನು ನಿಮ್ಮ ಪಕ್ಷದವರು, ನೀವು ಬೈದಿರಿ. ಆದರೆ ಅಂತಹವರಿಗೆ ಟಿಕೆಟ್ ಕೊಟ್ಟಿದ್ದೇ ನಿಮ್ಮ ಪಕ್ಷವಲ್ಲವೇ?

ವಿಧಾನಸಭೆಯಲ್ಲೇ ನಾನು ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮೂರು ಜನರಿಗೆ ಸೇರಿಸಿ ಹೇಳಿದ್ದೀನಿ. ಚುನಾವಣೆಗೆ ಕೇವಲ ಹದಿನೈದು ದಿನ ಇದ್ದಾಗ, ಹಣವಂತರು, ಸಾರಾಯಿ ಮಾರುವವರು, ರಿಯಲ್ ಎಸ್ಟೇಟ್‍ನವರು ಕಪ್ಪು ಹಣ ಉಳ್ಳವರಿಗೆ ಟಿಕೆಟ್ ಕೊಟ್ಟಿದ್ದೇ ಈ ಅನಾಹುತಕ್ಕೆ ನಿಜವಾದ ಕಾರಣ.

ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯನು ಕಟ್ಟಿ,
ಸವಿಜೇನು ಹಾಲು ತುಪ್ಪವನ್ನು ಎರೆದರೆ
ಕಹಿಯಲ್ಲದೇ ಸಿಹಿಯಾಗಬಲ್ಲುದೇ
ನಮ್ಮ ಕೂಡಲ ಸಂಗಮದೇವ

ಎಂದು ಬಸವಣ್ಣನವರು 800 ವರ್ಷಕ್ಕಿಂತ ಮುಂಚೆಯೇ ಹೇಳಿದ ಕಟುಸತ್ಯವನ್ನು ಉಲ್ಲೇಖಿಸಿದ್ದೆ. ಬೇವು ಬೀಜ ಬಿತ್ತಿದರೆ ಬೇವೇ ಸಿಗುತ್ತದೆ. ಮಾವು ಬಿತ್ತಿದರೆ ಮಾವೇ ಸಿಗುತ್ತದೆ ಎಂಬುದು ಇವರಿಗೆ ಗೊತ್ತಿಲ್ಲವೇ?

ಪತ್ರಿಕೆ: ನೀವು ಬಸವ ತತ್ವದ ಕುರಿತು ಇಷ್ಟೊಂದು ಮಾತಾಡುತ್ತೀರಿ. ಆದರೆ ಅದೇಕೆ ಬೆಳೆದು ನಿಲ್ಲಲಿಲ್ಲ?

ಬಿ.ನಾರಾಯಣರಾವ್: ಬಸವ ತತ್ವ ದ್ರಾವಿಡಿಯನ್ ಭಾಗದಲ್ಲಿ ನಮ್ಮ ದಕ್ಷಿಣದಲ್ಲಿ ಹುಟ್ಟಿರುವುದರಿಂದ ಇದು ಬೆಳೆದಿಲ್ಲ. ವಿಂಧ್ಯಪರ್ವತದ ಆಚೆ ಹುಟ್ಟಿದ ಧರ್ಮಗಳು – ಉದಾಹರಣೆಗೆ ಬುದ್ಧ ಧರ್ಮ ಇವತ್ತು ವಿಶ್ವವ್ಯಾಪಿಯಾಗಿಲ್ಲವೇ? ಮಹಾವೀರನ ಧರ್ಮವೂ ಬೆಳೆದಿದೆ. ಮೂರ್ನಾಲ್ಕು ಧರ್ಮಗಳು ವಿಂಧ್ಯ ಪರ್ವತದ ಆಚೆ ಹುಟ್ಟಿದವು ವಿಶ್ವವ್ಯಾಪಿಯಾಗಿವೆ.

ವಿಂಧ್ಯಪರ್ವತ ಈಚೆ ಹುಟ್ಟಿರುವುದು ಒಂದೇ ಒಂದು ಧರ್ಮ ಅದು ಬಸವಣ್ಣನವರ ನೇತೃತ್ವದಲ್ಲಿ ಲಿಂಗಾಯಿತ ಧರ್ಮ. ಅಂಥ ಒಂದು ಧರ್ಮಕ್ಕೆ ರಾಜಕೀಯ ರಕ್ಷಣೆ ಸಿಕ್ಕಿಲ್ಲ. ರಾಜಾಶ್ರಯ ಸಿಕ್ಕಿಲ್ಲ. ಇದು ಒಂದೇ ಧರ್ಮಕ್ಕೆ ರಾಜಾಶ್ರಯ ಸಿಕ್ಕಿಲ್ಲ. ಬೌದ್ಧ ಧರ್ಮಕ್ಕೂ ರಾಜಾಶ್ರಯ ಸಿಕ್ಕಿತ್ತು.

ಪತ್ರಿಕೆ: ಲಿಂಗಾಯಿತ ಸಮುದಾಯದ ಯಡಿಯೂರಪ್ಪನವರು ಸಿಎಂ ಆಗಿದ್ದಾರೆ.. ಅದು ರಾಜಾಶ್ರಯ ಸಿಕ್ಕ ಹಾಗಲ್ಲವೇ?
ಬಿ.ನಾರಾಯಣರಾವ್: ಯಡಿಯೂರಪ್ಪನವರು ಎಷ್ಟು ಕೆಲಸ ಮಾಡುತ್ತಾರೋ ಅಷ್ಟನ್ನು ನಾವು ಸ್ವಾಗತಿಸುತ್ತೇವೆ. ಅವರ ಮನಸ್ಸು ಬಸವಣ್ಣನವರ ಬಗ್ಗೆ ತುಡಿತ ಇದ್ರೂ, ಕಾಳಜಿ ಇದ್ರೂ ಕೂಡ ಅವರು ವೈದಿಕ ವ್ಯವಸ್ಥೆಯ ಭಾಗವಾಗಿರುವುದರಿಂದ ಅವರು ಪೂರ್ಣ ಪ್ರಮಾಣದಲ್ಲಿ ಮಾಡಲಿಕ್ಕೆ (ಆ ವ್ಯವಸ್ಥೆ) ಬಿಡುವುದಿಲ್ಲ. ವೈದಿಕ ವ್ಯವಸ್ಥೆಯನ್ನು ಸಮಾಧಾನಪಡಿಸಲಿಕ್ಕೇನೇ ಅವರ ಒಂದು ಜೀವಮಾನ ಹೋಯ್ತು.

ಪ: ನೀವು ವ್ಯಕ್ತಿಗತ ನೆಲೆಯಲ್ಲಿ ಮಾತಾಡುತ್ತಿದ್ದೀರಿ. ಆದರೆ, ಸಮಗ್ರ ಬದಲಾವಣೆ ಬರಬೇಕಾದರೆ ಒಂದು ಪಕ್ಷ, ಸಂಘಟನೆ ಸರಿಯಿರಬೇಕು. ನಿಮ್ಮ ಪಕ್ಷವೂ ಸರಿಯಿಲ್ಲ. ಹೀಗಿದ್ದ ಮೇಲೆ ಸಮಾಜ ಬದಲಾವಣೆ ಹೇಗೆ ಸಾಧ್ಯ?

ಬಿ.ನಾರಾಯಣರಾವ್: ಹಾಗಂತ ನಾವು ಮನುವಾದಿಗಳ ಜೊತೆ, ಬಿಜೆಪಿ ಗುರುತಿಸಿಕೊಳ್ಳಲು ಆಗುವುದಿಲ್ಲ. ಅದು ನಾಗ್ಪುರದಿಂದ ನಡೆಯುವ ಪಕ್ಷ. ಆರ್‌ಎಸ್‍ಎಸ್‍ನವರ ಕೈಯಲ್ಲಿ ಅದರ ಜುಟ್ಟಿದೆ. ಮೋದಿ ಕೂಡ ಅವರ ಕೈಗೊಂಬೆ. ಯಡಿಯೂರಪ್ಪನವರು ಸಹ ಕೈಗೊಂಬೆಯೇ.. ಅವರು ಪೇಟಿ ಬಾರಿಸುತ್ತಾರೆ ಇವರು ಕುಣಿತಾರೆ. ಕಾನೂನುಗಳು ನಾಗ್ಪುರದಲ್ಲಿ ತಯಾರಾಗ್ತಾವೆ. ಅವರು ಪುಟ ಓದೋದು ಪಾರ್ಲಿಮೆಂಟಲ್ಲಿ. ಇದು ಕಟುಸತ್ಯ. ಎರಡು ಮಾತಿಲ್ಲ. ಈಗ ನಾವು ಇದ್ದುದರಲ್ಲಿ ಇಲ್ಲಿರಬೇಕು.. ಜೆಡಿಎಸ್ ಒಂದು ಕುಟುಂಬದ ಪಕ್ಷ ಆಗಿಬಿಟ್ಟಿದೆ. ಬಿಜೆಪಿಗೆ ನಾವು ಹೋಗುವಂತಿಲ್ಲ. ಕಾಂಗ್ರೆಸ್ಸೂ ಕೂಡ ನೈತಿಕವಾಗಿ ಅಷ್ಟೇನು ಒಳ್ಳೆದಿಲ್ಲ. ಅಲ್ಲಿ ಕೂಡ ಜನಪರ ಕಾಳಜಿ ಇರುವವರು ಒಂದು ಕಡೆ ಇದ್ದಾರೆ, ವೈದಿಕ ವ್ಯವಸ್ಥೆಯನ್ನು ಒಪ್ಪಿ ಕೊಂಡಿರುವವರು ಸಹ ಇದ್ದಾರೆ. ಅಲ್ಲಿ ಎಲ್ಲಾ ಸಾಚಾ ಇಲ್ಲ. ಇದಕ್ಕಿಂತ ಒಳ್ಳೆಯ ವ್ಯವಸ್ಥೆ ಬರಬೇಕೆಂಬ ತುಡಿತ ನಮಗೂ ಇದೆ.

ಪ: ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಕಚ್ಚಾಟ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಸಹಾ ಇಲ್ಲ. ಈ ದುರಂತಕ್ಕೆ ಏನು ಹೇಳುತ್ತೀರಿ?

ಬಿ.ನಾರಾಯಣರಾವ್: ಅದೆಲ್ಲಾ 9ನೇ ತಾರೀಖಿಗೆ ಮುಕ್ತಾಯವಾಗುತ್ತದೆ ಸರ್. ಒಂದು ಹೇಳುತ್ತೇನೆ. ಈ ರಾಜ್ಯದಲ್ಲಿ ಜನನಾಯಕರಿರುವುದು ಇಬ್ಬರೆ. ಮೂರು ಪಕ್ಷ ಇವೆ ಮೂರು ಜನ ಇದ್ದಾರೆ. ಕಾಂಗ್ರೆಸ್‍ಗೆ ಸಿದ್ದರಾಮಯ್ಯ, ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್‍ಗೆ ದೇವೇಗೌಡ. ಈಗ ಅವರದು – ಜೆಡಿಎಸ್‍ದು ಮುಗಿದಿದೆ. ಇನ್ನು ಯಡಿಯೂರಪ್ಪನವರದು ಎಷ್ಟು ದಿನ ನೋಡಬೇಕು. ಜನರಿಗೆ ನಾಟಕ ನೋಡಬೇಕಾಗಿದೆ. ಜೆಡಿಎಸ್ ನಾಟಕ ಮುಗಿದಿದೆ. ಈಗ ಬಿಜೆಪಿದು ಇದೆ. ಇದು ಎಷ್ಟು ದಿನ ನಡೆಯುತ್ತದೆ ನೋಡಬೇಕು. ಇದು ಮುಗಿದರೆ ಅನಿವಾರ್ಯವಾಗಿ ಕಾಂಗ್ರೆಸ್ ಬರಲೇಬೇಕು ಸರ್. ಇವೂ ಮೂರು ಬೇಡ ಅಂದ್ರೆ ಮತ್ತೊಂದು ಹುಟ್ಟಿದ್ದರೆ ಅದಕ್ಕೆ ಸೇರಬೇಕು.

ಪ: ಲಿಂಗಾಯಿತರು ಬಸವತತ್ವ ವಿರೋಧಿ ಸಿದ್ಧಾಂತ ಹೊಂದಿರುವ ಬಿಜೆಪಿಗೆ ಮತ ಕೊಡುತ್ತಾರಲ್ಲಾ. ಅದರ ಬಗ್ಗೆ ನೀವೇನು ಹೇಳುತ್ತೀರಿ?

ಬಿ.ನಾರಾಯಣರಾವ್: ಲಿಂಗಾಯಿತರು ಕಾಂಗ್ರೆಸ್‍ಗೆ ಮತ ಕೊಡದಿದ್ದರೂ ಪರವಾಗಿಲ್ಲ. ಆದರೆ ಬಸವಣ್ಣನವರಿಗೆ ಅನ್ಯಾಯ ಮಾಡದಂತೆ ಅವರ ತತ್ವದ ಮೇಲೆ ಅವರು ನಡೆದರೆ ಸಾಕು. ಅವರಿಗೆ ಶರಣು ಶರಣಾರ್ಥಿ. ತಮಗಿಷ್ಟ ಬಂದವರಿಗೆ ಮತ ಹಾಕುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಬಸವ ವಿರೋಧಿಯಾಗಿ, ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಬಸವಣ್ಣನವರು ಯಾವ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದಾರೋ ಆ ವ್ಯವಸ್ಥೆಯ ಒಳಗೆ ಹೋಗಬಾರದು ಅಷ್ಟೇ.

ಸಂದರ್ಶನ:
ಡಾ.ವಾಸು.ಎಚ್.ವಿ ಮತ್ತು
ಸಿದ್ದಪ್ಪ ಮೂಲಗೆ


ಕೊರೊನಾ: ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ನಿಧನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಾರಾಯಣ ರಾವ್ ಅವರ ಅನಿಸಿಕೆಗಳು ವಾಸ್ತವಿಕವಾಗಿವೆ. ಈಗ ಈಗಿರುವ ಮೂರೂ ಪಕ್ಷಗಳ ಬದಲಿಗೆ ಇನ್ನೊಂದು ಪಕ್ಷ ದೆಹಲಿ ಅವಶ್ಯಕತೆಯಿದೆ. ದುದೈ೯ವವೆಂರರೆ ಅಂತಹ ಪಕ್ಷವನ್ನು ಕಟ್ಟುವ, ಬೆಳೆಸುವ ನಾಯಕನಿಲ್ಲ. ಹಾಗೆ ನೋಡಿದರೆ ಹಳೆಯ ಜನತಾ ದಳ ಭರವಸೆಯ ಪಕ್ಷ ವಾಗಿತ್ತು. ಆದರೆ ಪುನರ್ ಜೀವನವಾಗಬೇಕಾಗಿದೆ.

  2. ಹಳೇಪಕ್ಶಗಳಿಗೆ ಅಂಟಿಕೊಳ್ಳುವುದು ಸರಿಯಲ್ಲ.
    ದರ್ಮದ ಹಂಗಿಲ್ಲದ, ಕುಟುಂಬ ರಾಜಕಾರಣದ ಹಂಗಿಲ್ಲದ ಕನ್ನಡನೆಲೆಯ ಹೊಸಕೂಟ ಗಟ್ಟಿಯಾಗಬೇಕು.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...