Homeಫ್ಯಾಕ್ಟ್‌ಚೆಕ್FACT CHECK : ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಗೆ ಸರ್ಕಾರಿ ರಜೆ ಇಲ್ಲ ಎಂಬ ಅಮಿತ್...

FACT CHECK : ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಗೆ ಸರ್ಕಾರಿ ರಜೆ ಇಲ್ಲ ಎಂಬ ಅಮಿತ್ ಶಾ ಹೇಳಿಕೆ ಸುಳ್ಳು

- Advertisement -
- Advertisement -

ಚುನಾವಣಾ ಭಾಷಣಗಳಲ್ಲಿ ಧರ್ಮದ ವಿಚಾರವನ್ನು ಉಲ್ಲೇಖಿಸುವುದು, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಆರೋಪಗಳನ್ನು ಮಾಡುವುದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಸೇರಿದಂತೆ ಬಿಜೆಪಿ ನಾಯಕರಿಗೆ ಈಗ ಸಾಮಾನ್ಯ ವಿಷಯವಾಗಿಬಿಟ್ಟಿದೆ.

ಇತ್ತೀಚೆಗೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸೆರಾಂಪೋರ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನ್ನು ಗುರಿಯಾಗಿಸಿ ಎರಡು ಆರೋಪಗಳನ್ನು ಮಾಡಿದ್ದರು.

ಅಮಿತ್ ಶಾ ಅವರ ಭಾಷಣವದ ವಿಡಿಯೋವನ್ನು ಮೇ 15, 2024ರಂದು ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಒಟ್ಟು 27 ನಿಮಿಷ 8 ಸೆಕೆಂಡ್ ಅವಧಿಯ ವಿಡಿಯೋದಲ್ಲಿ 18 ನಿಮಿಷ 21 ಸೆಕೆಂಡ್‌ನಿಂದ ಅಮಿತ್ ಶಾ ಈ ಕೆಳಗಿನಂತೆ ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯವರು ರಂಝಾನ್ ಸಮಯದಲ್ಲಿ ಮುಸ್ಲಿಮರಿಗೆ ರಜೆ ನೀಡುತ್ತಾರೆ. ಆ ಬಗ್ಗೆ ನಮಗೇನು ಅಭ್ಯಂತರವಿಲ್ಲ, ಬೇಕಿದ್ದರೆ ರಜೆ ಕೊಡಲಿ. ಆದರೆ, ದುರ್ಗಾ ಪೂಜೆಯ ಸಮಯದಲ್ಲಿ ಯಾಕೆ ರಜೆ ಕೊಡುತ್ತಿಲ್ಲಎಂಬುವುದಕ್ಕೆ ನಮಗೆ ಉತ್ತರಬೇಕು. ಯಾಕೆ ಈ ತಾರತಮ್ಯ?”

ವಿಡಿಯೋದಲ್ಲಿ 17 ನಿಮಿಷ 46 ಸೆಕೆಂಡ್‌ನಿಂದ ಅಮಿತ್ ಅವರು ಮತ್ತೊಂದು ಆರೋಪ ಮಾಡಿರುವುದು ಇದೆ. ಅದು ಹೀಗಿದೆ…“ಈ ಇಮಾಮ್‌ಗಳು ಮತ್ತು ಮುಲ್ಲಾಗಳು ಬಂಗಾಳದ ಲಾಕರ್‌ಗಳಿಂದ ಸಂಬಳ ಪಡೆಯಬೇಕೇ? ಇಲ್ಲ ಎಂದು ಹೈಕೋರ್ಟ್ ಹೇಳಿದ್ದರಿಂದ ಮಮತಾ ಬ್ಯಾನರ್ಜಿ ಅವರು ನಿಧಿಗಾಗಿ ವಕ್ಫ್ ಮಂಡಳಿಯ ಮೊರೆ ಹೋಗಿದ್ದಾರೆ”

ಫ್ಯಾಕ್ಟ್‌ಚೆಕ್ : ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಎರಡು ಆರೋಪಗಳನ್ನು ಮಾಡಿದ್ದಾರೆ. ಒಂದು ದುರ್ಗಾ ಪೂಜೆಗೆ ಪಶ್ಚಿಮ ಬಂಗಾಳ ಸರ್ಕಾರ ರಜೆ ನೀಡುತ್ತಿಲ್ಲ ಎಂಬುವುದು. ಮತ್ತೊಂದು ಮಸೀದಿಯ ಇಮಾಮ್‌ಗಳಿಗೆ ವಕ್ಫ್ ಮಂಡಳಿಯಿಂದ ಸಂಬಳ ನೀಡಲಾಗ್ತಿದೆ ಎಂಬುವುದು. ಈ ಬಗ್ಗೆ ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ.

ಪಶ್ಚಿಮ ಬಂಗಾಳ ಸರ್ಕಾರದ 2024ರ ಸಾರ್ವಜನಿಕ ರಜಾ ದಿನಗಳನ್ನು ಎರಡು ಪಟ್ಟಿಗಳಾಗಿ ವಿಂಗಡಿಸಲಾಗಿದೆ. ಹಣಕಾಸು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪಟ್ಟಿ-1ರ ಪ್ರಕಾರ, ಅಕ್ಟೋಬರ್ 2 ರಂದು ಮಹಾಲಯ, ಅಕ್ಟೋಬರ್ 10 ರಂದು ದುರ್ಗಾ ಪೂಜೆ, ಮಹಾ ಸಪ್ತಮಿ, ಅಕ್ಟೋಬರ್ 11 ರಂದು ದುರ್ಗಾ ಪೂಜೆ, ಮಹಾ ಅಷ್ಟಮಿ ಮತ್ತು ಮಹಾ ನಾಬಮಿ ಮತ್ತು ಅಕ್ಟೋಬರ್ 12 ರಂದು ದುರ್ಗಾ ಪೂಜೆ, ದಶಮಿ ರಜಾದಿನಗಳಿವೆ.

ಪಟ್ಟಿ-2ರಲ್ಲಿ ಕೋಲ್ಕತ್ತಾದ ರಿಜಿಸ್ಟ್ರಾರ್ ಆಫ್ ಅಶ್ಯೂರೆನ್ಸ್ ಮತ್ತು ಕೋಲ್ಕತ್ತಾದ ಸ್ಟಾಂಪ್ ರೆವಿನ್ಯೂ ಕಲೆಕ್ಟರ್ ಹೊರತುಪಡಿಸಿ ಪಶ್ಚಿಮ ಬಂಗಾಳ ಸರ್ಕಾರದ ಅಧೀನದ ಕಚೇರಿಗಳಿಗೆ ಅಕ್ಟೋಬರ್ 7 ರಂದು ದುರ್ಗಾ ಪೂಜೆ, ಮಹಾ ಚತುರ್ಥಿ, ಅಕ್ಟೋಬರ್ 8 ರಂದು ದುರ್ಗಾ ಪೂಜೆ, ಮಹಾ ಪಂಚಮಿ, ಅಕ್ಟೋಬರ್ 9 ರಂದು ದುರ್ಗಾ ಪೂಜೆ ಮಹಾ ಷಷ್ಠಿ ಮತ್ತು ಅಕ್ಟೋಬರ್ 14 ಮತ್ತು 15 ರಂದು ಹೆಚ್ಚಿನ ದುರ್ಗಾ ಪೂಜೆಗೆ ಹೆಚ್ಚುವರಿ ರಜೆಗಳನ್ನು ನೀಡಲಾಗಿದೆ. ಪಟ್ಟಿ-2 ಸಾರ್ವಜನಿಕ ರಜಾದಿನಗಳ ಅಡಿಯಲ್ಲಿ ಬರುವುದಿಲ್ಲ. ಇದನ್ನು ಹೆಚ್ಚುವರಿ ರಜೆಗಳೆಂದು ಪರಿಗಣಿಸಲಾಗಿದೆ.

ಪಶ್ಚಿಮ ಬಂಗಾಳ ಸರ್ಕಾರದ ಅಧಿಕೃತ ಪ್ರಕಟನೆಯಲ್ಲಿ ದುರ್ಗಾ ಪೂಜೆಗೆ 4 ದಿನಗಳ ಸಾರ್ವಜನಿಕ ರಜೆ ಮತ್ತು 5 ದಿನಗಳ ಹೆಚ್ಚುವರಿ ರಜೆ ಸೇರಿ ಒಟ್ಟು 9 ದಿನಗಳ ರಜೆ ನೀಡಲಾಗಿದೆ. ಹಾಗಾಗಿ, ದುರ್ಗಾ ಪೂಜೆಗೆ ರಜೆ ನೀಡಿಲ್ಲ ಎಂಬ ಅಮಿತ್ ಶಾ ಅವರ ಹೇಳಿಕೆ ಸುಳ್ಳು.

ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ 

ಇಮಾಮ್‌ಗಳು ಮಾತ್ರ ಬಂಗಾಳ ಸರ್ಕಾರದಿಂದ ಗೌರವಧನ ಪಡೆಯುತ್ತಿದ್ದಾರೆಯೇ?

ಅಮಿತ್ ಶಾ ಅವರು ತನ್ನ ಭಾಷಣದಲ್ಲಿ ಮಾಡಿರುವ ಎರಡನೇ ಆರೋಪದ ಬಗ್ಗೆ ನಾವು ಮಾಹಿತಿ ಕಲೆ ಹಾಕಿದ್ದೇವೆ. ನಮಗೆ ಲಭ್ಯವಾದ ಮಾಹಿತಿ ಪ್ರಕಾರ..

2012 ರಲ್ಲಿ, ಮಮತಾ ಬ್ಯಾನರ್ಜಿ ಸರ್ಕಾರವು ಪಶ್ಚಿಮ ಬಂಗಾಳದ ಮಸೀದಿಗಳ ಇಮಾಮ್‌ಗಳು ಮತ್ತು ಮುಅಝ್ಝಿನ್‌ಗಳಿಗೆ ಗೌರವಧನವನ್ನು ಘೋಷಿಸಿತ್ತು. ಈ ನಿರ್ಧಾರವನ್ನು ಆ ಸಮಯದಲ್ಲಿ ಕಲ್ಕತ್ತಾ ಹೈಕೋರ್ಟ್ ತಳ್ಳಿಹಾಕಿತ್ತು. ಅಂದಿನಿಂದ ಮಾಸಿಕ ಗೌರವಧನವನ್ನು ವಕ್ಫ್ ಬೋರ್ಡ್ ಮೂಲಕ ನೀಡಲಾಗ್ತಿದೆ.

ಸೆಪ್ಟೆಂಬರ್ 2020ರಲ್ಲಿ, ಮಮತಾ ಬ್ಯಾನರ್ಜಿ ಸರ್ಕಾರ ರಾಜ್ಯದ ಸುಮಾರು 8,000 ಹಿಂದೂ ಪುರೋಹಿತರಿಗೆ ತಿಂಗಳಿಗೆ 1,000 ರೂಪಾಯಿ ಗೌರವಧನವನ್ನು ಘೋಷಿಸಿದ್ದರು. ಆ ವರ್ಷ ದುರ್ಗಾಪೂಜೆಗೂ ಮುನ್ನ ಗೌರವಧನ ಆರಂಭಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಕ್ರಿಶ್ಚಿಯನ್ ಪಾದ್ರಿಗಳು ಸೇರಿದಂತೆ ಎಲ್ಲಾ ಧರ್ಮಗಳ ಧರ್ಮಗುರುಗಳು ಗೌರವಧನ ಕೇಳಿದರೆ ಅವರಿಗೆ ಸಹಾಯ ಮಾಡಲು ನಮ್ಮ ಸರ್ಕಾರ ಸಿದ್ಧವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.

ಈ ಘೋಷಣೆಯ ನಂತರ ವಿರೋಧ ಪಕ್ಷಗಳು ಸರ್ಕಾರದ ಕ್ರಮವನ್ನು ಟೀಕಿಸಿದ್ದವು. ಮಮತಾ ಬ್ಯಾನರ್ಜಿ ಧರ್ಮವನ್ನು ರಾಜಕೀಯದೊಂದಿಗೆ ಬೆರೆಸಿದ್ದಾರೆ ಎಂದು ಆರೋಪಿಸಿತ್ತು.

ಆಗಸ್ಟ್ 2023ರಲ್ಲಿ, ಮುಸ್ಲಿಂ ಧರ್ಮಗುರುಗಳು ಮತ್ತು ಹಿಂದೂ ಪುರೋಹಿತರ ಮಾಸಿಕ ಭತ್ಯೆಗಳಲ್ಲಿ 500ರೂ. ಹೆಚ್ಚಳ ಮಾಡಿ ಮಮತಾ ಬ್ಯಾನರ್ಜಿ ಸರ್ಕಾರ ಆದೇಶಿಸಿತ್ತು. 2012ರಿಂದ ಅಲ್ಲಿಯವರೆಗೆ, ಇಮಾಮ್‌ಗಳು ಮಾಸಿಕ 2,500 ರೂ. ಮತ್ತು ಮುಅಝ್ಝಿನ್‌ಗಳು 1,000 ಪಡೆಯುತ್ತಿದ್ದರು. ಹೆಚ್ಚಳದ ನಂತರ, ಇಮಾಮ್‌ಗಳು ರೂ. 3000 ಮತ್ತು ಮುಅಝ್ಝಿನ್‌ಗಳು 1,500 ಪಡೆಯುತ್ತಿದ್ದಾರೆ. ಹಿಂದೂ ಪುರೋಹಿತರ ಗೌರವಧನ 1,500ಕ್ಕೆ ಹೆಚ್ಚಳವಾಗಿದೆ.

ನಮಗೆ ದೊರೆತ ಮಾಹಿತಿ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಇಮಾಮ್‌ಗಳು ಮತ್ತು ಮುಅಝ್ಝಿನ್‌ಗಳು ಮಾತ್ರ ಸರ್ಕಾರದಿಂದ ಗೌರವಧನ ಪಡೆಯುತ್ತಿಲ್ಲ. ಹಿಂದೂ ಪುರೋಹಿತರು ಕೂಡ ಗೌರವಧನ ಪಡೆಯುತ್ತಿದ್ದಾರೆ. ಆದರೆ, ಎರಡು ಕಡೆಯವರ ಗೌರವಧನದ ಮೊತ್ತದಲ್ಲಿ ವ್ಯತ್ಯಾಸಗಳಿವೆ. ಅಲ್ಲದೆ, ಇಮಾಮ್ ಮತ್ತು ಮುಅಝ್ಝಿನ್‌ಗಳಿಗೆ ಗೌರವಧನ ಘೋಷಿಸಿದ ಎಂಟು ವರ್ಷಗಳ ಬಳಿಕ ಹಿಂದೂ ಪುರೋಹಿತರಿಗೆ ಗೌರವಧನ ಘೋಷಿಸಲಾಗಿದೆ.

ಇದನ್ನೂ ಓದಿ : FACT CHECK : 2014ಕ್ಕಿಂತ ಮೊದಲು ಭಾರತದಲ್ಲಿ ಕೇವಲ 300 ಸ್ಟಾರ್ಟ್ ಅಪ್‌ಗಳಿದ್ದವು ಎಂಬುವುದು ಸುಳ್ಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...

ಕಾವೇರಿ ಪ್ರತಿಭಟನೆ ವೇಳೆ ಆಕ್ಷೇಪಾರ್ಹ ಹೇಳಿಕೆ : ತಮಿಳುನಾಡಿನ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಬಂಧನ

ಸೋಮವಾರ (ಆ.3) ತಂಜಾವೂರಿನಲ್ಲಿ ನಡೆದ ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಉದಯನಿಧಿ ಬಂಧನಕ್ಕೂ...

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...