Homeಮುಖಪುಟಅಂಬಾನಿ ಮದುವೆಯ ₹3.6 ಲಕ್ಷದ ಒಪ್ಪಂದ ಏಕೆ ತಿರಸ್ಕರಿಸಿದೆ? ನಾಲ್ಕು ಕಾರಣ ಕೊಟ್ಟ ಯೂಟ್ಯೂಬರ್

ಅಂಬಾನಿ ಮದುವೆಯ ₹3.6 ಲಕ್ಷದ ಒಪ್ಪಂದ ಏಕೆ ತಿರಸ್ಕರಿಸಿದೆ? ನಾಲ್ಕು ಕಾರಣ ಕೊಟ್ಟ ಯೂಟ್ಯೂಬರ್

- Advertisement -
- Advertisement -

ಉದ್ಯಮಿ ಮುಕೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿಯ ಮದುವೆಯ ಕುರಿತು ಧನಾತ್ಮಕ ಪ್ರಚಾರ ನಡೆಸಲು ನನಗೆ ₹3.6 ಲಕ್ಷದ ಆಫರ್ ನೀಡಲಾಗಿತ್ತು. ಆದರೆ, ನಾನು ಅದನ್ನು ತಿರಸ್ಕರಿಸಿದೆ ಎಂದು ಖ್ಯಾತ ಕಂಟೆಂಟ್ ಕ್ರಿಯೇಟರ್ (ಯೂಟ್ಯೂಬರ್) ಕಾವ್ಯ ಕರ್ನಾಟಕ್ ತಿಳಿಸಿದ್ದಾರೆ.

“ಅನಂತ್ ಅಂಬಾನಿಯ ಅದ್ದೂರಿ ಮದುವೆ ಭಾರತದ ಆರ್ಥಿಕತೆಯ ಮೇಲೆ ಹೇಗೆ ಧನಾತ್ಮಕ ಪರಿಣಾಮ ಬೀರುತ್ತದೆ ಅಥವಾ ಅರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಪ್ರಚಾರ ಪಡಿಸುವುದು ನನ್ನ ಕೆಲಸವಾಗಿತ್ತು. ಅಂಬಾನಿ ಕುಟುಂಬ ಕೊಟ್ಟ ಆಫರ್ ನನ್ನ ಸಾಮಾನ್ಯ ದರ ಮೂರು ಲಕ್ಷಕ್ಕಿಂತ ಕೊಂಚ ಹೆಚ್ಚೇ ಇತ್ತು. ನನ್ನ ಪೋಷಕರು ಕೂಡ ಒಪ್ಪಂದ ಸ್ವೀಕರಿಸುವಂತೆ ಒತ್ತಾಯಿಸಿದ್ದರು. ಆದರೂ ನಾನು ತಿರಸ್ಕರಿಸಿದೆ” ಎಂದಿರುವ ಕಾವ್ಯ, ಅದಕ್ಕೆ ನಾಲ್ಕು ಕಾರಣಗಳನ್ನು ವಿವರಿಸಿದ್ದಾರೆ.

ಕಾರಣಗಳು ಹೀಗಿದೆ..

1. ವೈವಿದ್ಯತೆ ಮತ್ತು ವೈಯಕ್ತಿಕ ಬ್ರ್ಯಾಂಡ್ : ಎಲ್ಲರೂ ಹೇಳುವ ಅದೇ ವಿಷಯದ ಬಗ್ಗೆ ಮತ್ತೆ ಹೇಳುವುದು ನನಗೆ ಇಷ್ಟವಿರಲಿಲ್ಲ. ವೈವಿಧ್ಯತೆ ಮತ್ತು ಸ್ವಂತಿಕೆಯ ಮೇಲೆ ಬೆಳೆಯುವ ನನ್ನ ವಿಷಯದ ವಿಶಿಷ್ಟತೆ ಮತ್ತು ಮೌಲ್ಯವನ್ನು ಕಾಪಾಡಿಕೊಳ್ಳಲು ನಾನು ಬಯಸುತ್ತೇನೆ. ಅಂಬಾನಿಯವರ ವಿವಾಹದಂತಹ ಅತಿಯಾಗಿ ಪ್ರಚಾರಗೊಂಡ ವಿಷಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ನನ್ನ ಬ್ರ್ಯಾಂಡ್‌ನ ವಿಶಿಷ್ಟತೆಯನ್ನು ದುರ್ಬಲಗೊಳಿಸುತ್ತದೆ.

2. ಪ್ರೇಕ್ಷಕರ ನಂಬಿಕೆ : ಜಿಯೋ ಇಂಟರ್ನೆಟ್ ಶುಲ್ಕವನ್ನು ಹೆಚ್ಚಿಸಿರುವ ಈ ಸಮಯದಲ್ಲಿ, ಅಂಬಾನಿಯಂತಹ ಕಾರ್ಪೊರೇಟ್ ದೈತ್ಯರನ್ನು ಪ್ರಚಾರ ಮಾಡುವುದು ಪ್ರಾಮಾಣಿಕತೆಯಲ್ಲ. ಇದು ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ. ನನ್ನ ಪ್ರೇಕ್ಷಕರು ವಿವೇಚನಾಶೀಲರಾಗಿದ್ದಾರೆ. ಅವರು ಪಾವತಿಸಿದ ಪ್ರಚಾರಗಳು ಮತ್ತು ನಿಜವಾದ ವಿಷಯದ ನಡುವೆ ವ್ಯತ್ಯಾಸವನ್ನು ಅರಿತವರು. ಹೀಗಾಗಿ, ಅವರ ನಂಬಿಕೆಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ.

3. ನೈತಿಕ ಕಾಳಜಿಗಳು : ಜಾತಿ, ವರ್ಗ, ಲಿಂಗ ಮತ್ತು ಧರ್ಮದ ಕಾರಣದಿಂದಾಗಿ ಮದುವೆಗಳು ಹೆಚ್ಚಾಗಿ ರದ್ದುಗೊಳ್ಳುವ ದೇಶದಲ್ಲಿ, ಈ ಮಾನದಂಡಗಳಿಗೆ ಅನುಗುಣವಾಗಿ ನಡೆಯುವ ಉನ್ನತ ಮಟ್ಟದ ವಿವಾಹವನ್ನು ಪ್ರಚಾರ ಮಾಡುವುದು ನನ್ನ ಮೌಲ್ಯಗಳೊಂದಿಗೆ ಹೊಂದಿಕೆಯಾಗುವುದಿಲ್ಲ. ಶಿಕ್ಷಣ ಮತ್ತು ಇತರ ಉತ್ತಮ ವಿಷಯಗಳನ್ನು ತಲುಪಿಸುವ ನಾನು ಮದುವೆಯ ಕುರಿತು ಪ್ರಚಾರ ಮಾಡುವುದು ತಪ್ಪುದಾರಿಗೆಳೆಯಬಹುದು. ಇದು ಫ್ಯಾಷನ್ ಅಥವಾ ಜೀವನಶೈಲಿಯ ಪ್ರಭಾವಿಗಳಿಗೆ ಹೆಚ್ಚು ಸೂಕ್ತವಾಗಿದೆ. ನಾನು ಈ ಹಿಂದೆ ಅಂಬಾನಿಯೊಂದಿಗೆ ಕೆಲಸ ಮಾಡುತ್ತಿದ್ದಾಗ, ವಂತರಾವನ್ನು ಪ್ರಚಾರ ಮಾಡುತ್ತಿದ್ದೆ. ಮದುವೆಯು ಭಾರತೀಯ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂದು ಹೇಳುವುದು ವಾಸ್ತವಿಕವಾಗಿ ಸರಿಯಲ್ಲ.

4. ವೈಯಕ್ತಿಕ ಸಮಗ್ರತೆ : ₹3.6 ಲಕ್ಷದ ವ್ಯವಹಾರವು ಲಾಭದಾಯಕವಾಗಿದೆ. ಆದರೂ, ನನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ದೀರ್ಘಾವಧಿಯ ಪ್ರಯೋಜನಗಳು ಇಂತಹ ಅಲ್ಪಾವಧಿಯ ಆರ್ಥಿಕ ಲಾಭವನ್ನು ಮೀರಿದ್ದಾಗಿದೆ. ಸಮಗ್ರತೆಯು ನಿಷ್ಠಾವಂತ ಅನುಸರಣೆಯನ್ನು ನಿರ್ಮಿಸುತ್ತದೆ, ಅದು ಅಮೂಲ್ಯವಾಗಿದೆ.

ಈ ಮೇಲಿನ ನಾಲ್ಕು ಕಾರಣಗಳನ್ನು ಕಾವ್ಯ ಅವರು ದೊಡ್ಡ ಮೊತ್ತದ ಒಪ್ಪಂದ ತಿರಸ್ಕರಿಸುವುದಕ್ಕೆ ನೀಡಿದ್ದಾರೆ. ದೊಡ್ಡ ಮೊತ್ತದ ಒಪ್ಪಂದ ತಿರಸ್ಕರಿಸುವುದು ಸವಾಲಿನ ಸಂಗತಿಯಾಗಿದೆ. ಅದೃಷ್ಟವಶಾತ್, ನಾನು ನನ್ನ ವೃತ್ತಿಜೀವನದಲ್ಲಿ ಈ ಬಗ್ಗೆ ಆಯ್ಕೆಗಳನ್ನು ಮಾಡಬಹುದಾದ ಹಂತದಲ್ಲಿದ್ದೇನೆ. ಪ್ರತಿಯೊಬ್ಬರೂ ಇಲ್ಲ ಎಂದು ಹೇಳಬಾರದು. ಅದು ವೈಯಕ್ತಿಕ ಸಂದರ್ಭಗಳ ಆಧಾರದ ಮೇಲೆ ನಿರ್ಧಾರವಾಗಿದೆ ಎಂದಿದ್ದಾರೆ.

ಲಿಂಕ್ಡ್‌ ಇನ್‌ನಲ್ಲಿ ಕಾವ್ಯ ಹಾಕಿರುವ ಪೋಸ್ಟ್‌ಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ನಿರ್ಧಾರ ಎಂದಿದ್ದಾರೆ. ಕಾವ್ಯ ಅವರ ಪೋಸ್ಟ್‌ನಿಂದ ಅಂಬಾನಿ ಕುಟುಂಬ ಮದುವೆಯ ಬಗ್ಗೆ ಧನಾತ್ಮಕ ಪ್ರಚಾರ ಮಾಡಲೂ ಕೂಡ ಹಣ ಪಾವತಿಸಿದೆ ಎಂಬ ವಿಷಯವೊಂದು ಬಯಲಾಗಿದೆ.

ಇದನ್ನೂ ಓದಿ : ಬಿಲ್ಕಿಸ್ ಬಾನು ಪ್ರಕರಣ : ಕ್ಷಮಾದಾನ ರದ್ದು ಪ್ರಶ್ನಿಸಿದ್ದ ಅಪರಾಧಿಗಳ ಅರ್ಜಿ ವಜಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...