Homeಫ್ಯಾಕ್ಟ್‌ಚೆಕ್FACT CHECK : ರಾಹುಲ್ ಗಾಂಧಿ ಯಾವತ್ತೂ ಹಿಂದೂ ದೇವರ ಪೋಟೋ ಪೋಸ್ಟ್ ಮಾಡಿಲ್ವಾ? ಸತ್ಯಾಸತ್ಯತೆ...

FACT CHECK : ರಾಹುಲ್ ಗಾಂಧಿ ಯಾವತ್ತೂ ಹಿಂದೂ ದೇವರ ಪೋಟೋ ಪೋಸ್ಟ್ ಮಾಡಿಲ್ವಾ? ಸತ್ಯಾಸತ್ಯತೆ ಏನು?

- Advertisement -
- Advertisement -

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಹಿಂದೂ ದೇವರು ‘ಶ್ರೀಕೃಷ್ಣ’ನ ಫೋಟೋ ಬಳಸದೆ ಸಾಮಾಜಿಕ ಜಾಲತಾಣಗಳಲ್ಲಿ ಜನ್ಮಾಷ್ಟಮಿಗೆ ಶುಭಕೋರಿದ್ದಾರೆ ಎಂದು ಬಲಪಂಥೀಯರು ಟೀಕಿಸಿದ್ದಾರೆ.

ಬಲಪಂಥೀಯ ಸುದ್ದಿ ವೆಬ್‌ಸೈಟ್‌ ‘ಓಪ್‌ಇಂಡಿಯಾ‘ ಈ ಕುರಿತು ಲೇಖನವೊಂದನ್ನು ಪ್ರಕಟಿಸಿದ್ದು, ಅದರಲ್ಲಿ ರಾಹುಲ್ ಗಾಂಧಿಯವರು ಹಿಂದೂ ಹಬ್ಬಗಳಿಗೆ ಶುಭಾಷಯ ಕೋರುವಾಗ, ಹಿಂದೂ ದೇವರುಗಳ ಫೋಟೋ ಏಕೆ ಪೋಸ್ಟ್ ಮಾಡುವುದಿಲ್ಲ? ಎಂದು ಪ್ರಶ್ನಿಸಿದೆ. ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುವ ತಟಸ್ಥ ಅಥವಾ ನಿಷ್ಪಕ್ಷಪಾತ ನಿಲುವು ವ್ಯಕ್ತಪಡಿಸಲು ಅವರು ಹಾಗೆ ಮಾಡುತ್ತಿದ್ದಾರೆ ಎಂದಿದೆ.

ಹಿಂದೂ ಧರ್ಮವನ್ನು ಸಂಪೂರ್ಣ ಜಾತ್ಯತೀತ ಎಂದು ವಾದಿಸಿರುವ ಓಪ್‌ಇಂಡಿಯಾದ ಲೇಖಕ, ‘ಧರ್ಮವು ಒಂದು ಪ್ರತ್ಯೇಕ ಅಂಶವಾಗಿದೆ. ಅದು ಜಾತ್ಯತೀತವಾಗಿರಬಾರದು. ಹಳೆಯ ಪಕ್ಷದ (ಕಾಂಗ್ರೆಸ್‌) ರಾಜಕುಮಾರ (ರಾಹುಲ್ ಗಾಂಧಿ) ತನ್ನ ಜಾತ್ಯತೀತೆಯನ್ನು ಬಲಪಡಿಸಲು ಹಿಂದೂ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸದಾ ಕೋಮುದ್ವೇಷ ಪೂರಿತ ಸುದ್ದಿಗಳನ್ನು ಹಂಚಿಕೊಳ್ಳುವ ಬಲಪಂಥೀಯ ಎಕ್ಸ್‌ ಬಳಕೆದಾರ ಮಿ.ಸಿನ್ಹಾ (MrSinha)ರಾಹುಲ್ ಗಾಂಧಿಯವರು ಈ ಹಿಂದೆ ಹಲವು ಹಿಂದೂ ಹಬ್ಬಗಳಿಗೆ ಶುಭಕೋರಿರುವ ಪೋಸ್ಟ್‌ಗಳ ಸ್ಕ್ರೀನ್ ಶಾಟ್ ಹಂಚಿಕೊಂಡು “ನಮ್ಮ ಹಬ್ಬ ಹರಿದಿನಗಳಿಗೆ ಶುಭ ಹಾರೈಸುವಾಗ ರಾಹುಲ್ ಗಾಂಧಿ ಎಂದಿಗೂ ಹಿಂದೂ ದೇವರು/ದೇವತೆಗಳ ಫೋಟೋಗಳನ್ನು ಬಳಸುವುದಿಲ್ಲ. ಅವರು ‘ವಿಗ್ರಹಾರಾಧನೆ ಹರಾಮ್’ ಎಂಬ ತತ್ವವನ್ನು ಅನುಸರಿಸುತ್ತಿದ್ದಾರೆಂದು ತೋರುತ್ತದೆ” ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ನಾಯಕ ಗಿರಿರಾಜ್ ಸಿಂಗ್ (@girirajsinghbjp) ಕೂಡ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಹಿಂದೂ ಹಬ್ಬಗಳಿಗೆ ಶುಭಕೋರಿರುವ ಪೋಸ್ಟ್‌ಗಳ ಸ್ಕ್ರೀನ್ ಶಾಟ್ ಹಂಚಿಕೊಂಡು “OMG”ಎಂದು ಬರೆದುಕೊಂಡಿದ್ದಾರೆ.

ಇನ್ನೂ ಅನೇಕ ಬಲಪಂಥೀಯ ಎಕ್ಸ್‌, ಫೇಸ್‌ಬುಕ್ ಬಳಕೆದಾರರು ರಾಹುಲ್ ಗಾಂಧಿಯ ಪೋಸ್ಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡು ಅವರನ್ನು ಟೀಕಿಸಿದ್ದಾರೆ.

ಓಪ್‌ಇಂಡಿಯಾ ಸುದ್ದಿವೆಬ್‌ಸೈಟ್‌ ಮತ್ತು ಇತರ ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದಂತೆ ರಾಹುಲ್ ಗಾಂಧಿ ಹಿಂದೂ ದೇವರುಗಳ ಫೋಟೋ ಬಳಸಿ ಯಾವತ್ತೂ ಹಬ್ಬಗಳಿಗೆ ಶುಭಕೋರಿಯೇ ಇಲ್ವಾ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಹಿಂದೂ ದೇವರುಗಳ ಫೋಟೋ ಬಳಸುವುದಿಲ್ಲ ಎಂಬ ಆರೋಪದ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ಆ ಆರೋಪ ಸುಳ್ಳು ಎಂಬುವುದು ರುಜುವಾತಾಗಿದೆ. ಏಕೆಂದರೆ, ಈ ಹಿಂದೆ ಹಲವು ಬಾರಿ ಹಿಂದೂ ದೇವರುಗಳ ಫೋಟೋ ಬಳಸಿಕೊಂಡು ರಾಹುಲ್ ಗಾಂಧಿ ಹಬ್ಬಗಳಿಗೆ ಶುಭಕೋರಿದ್ದಾರೆ.

ಆಗಸ್ಟ್ 23, 2019ರಂದು ಹಿಂದೂ ದೇವರು ಶ್ರೀಕೃಷ್ಣ (ಬಾಲಕೃಷ್ಣ) ನ ಫೋಟೋ ಇರುವ ಪೋಸ್ಟರ್‌ ಬಳಸಿಕೊಂಡು ರಾಹುಲ್ ಗಾಂಧಿ ಜನ್ಮಾಷ್ಟಮಿಗೆ ಶುಭಕೋರಿದ್ದಾರೆ.

ಸೆಪ್ಟೆಂಬರ್ 25, 2017ರಂದು ಗುಜರಾತ್‌ನ ಜಾಮ್‌ನಗರದ ಚಂಡೀ ಬಝಾರ್‌ನ ನವರಾತ್ರಿ ಪೆಂಡಾಲ್‌ನ ಫೋಟೋವನ್ನು ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, “ಜಾಮ್‌ನಗರದ ಚಂಡೀ ಬಝಾರ್‌ನ ನವರಾತ್ರಿ ಪೆಂಡಾಲ್‌ಗೆ ಭೇಟಿ ನೀಡುವ ಮೂಲಕ ದಿನ ಮುಕ್ತಾಯಗೊಂಡಿತು” ಎಂದು ಬರೆದುಕೊಂಡಿದ್ದರು. ಆ ಪೆಂಡಾಲ್‌ ಫೋಟೋದಲ್ಲಿ ಹಿಂದೂ ದೇವ, ದೇವತೆಗಳ ಮೂರ್ತಿಗಳನ್ನು ನೋಡಬಹುದು.

ಅಕ್ಟೋಬರ್ 19, 2015ರಂದು ದುರ್ಗಾ ದೇವಿ ಮೂರ್ತಿಯ ಫೋಟೋ ಹಂಚಿಕೊಂಡು ” ದುರ್ಗಾ ಪೂಜೆಗೆ ರಾಹುಲ್ ಗಾಂಧಿ ಶುಭಕೋರಿದ್ದರು.

ಇದಲ್ಲದೆ, ಗಣಪತಿ ಫೋಟೋ ಹಾಕಿ ಗಣೇಶ ಚತುರ್ಥಿಗೆ, ಕೃಷ್ಣನ ಫೋಟೋ ಹಾಕಿ ವಿಶು ಹಬ್ಬಕ್ಕೆ, ಬಸವಣ್ಣನ ಫೋಟೋ ಹಾಕಿ ಬಸವ ಜಯಂತಿಗೆ, ಗೌತಮ ಬುದ್ದನ ಫೋಟೋ ಹಾಕಿ ಬುದ್ದ ಪೂರ್ಣಿಮೆಗೆ ರಾಹುಲ್ ಗಾಂಧಿ ಶುಭ ಕೋರಿರುವ ಪೋಸ್ಟ್‌ಗಳು ಈಗಲೂ ಅವರ ಎಕ್ಸ್‌ ಖಾತೆಯಲ್ಲಿ ಇವೆ.

ಹಾಗಾಗಿ, ರಾಹುಲ್ ಗಾಂಧಿ ಹಿಂದೂ ದೇವರುಗಳ ಫೋಟೋ ಬಳಸಿ ಫೋಸ್ಟ್ ಹಾಕುವುದಿಲ್ಲ. ಅವರು ಹಿಂದೂ ಧರ್ಮ ವಿರೋಧಿ ಎಂಬರ್ಥದ ಓಪ್‌ಇಂಡಿಯಾದ ಲೇಖನ ಮತ್ತು ಇತರ ಬಲಪಂಥೀಯರ ಪೋಸ್ಟ್‌ಗಳು ಸುಳ್ಳು ಮತ್ತು ದಾರಿ ತಪ್ಪಿಸುವಂತಿದೆ ಎಂದು ಹೇಳಬಹುದು.

ಇದನ್ನೂ ಓದಿ : FACT CHECK : ಬಿಜೆಪಿ ಪ್ರತಿಭಟನೆಯಲ್ಲಿ ಯುವತಿಯ ಡ್ಯಾನ್ಸ್… ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...

ಮತದಾನದ ಹಕ್ಕು ಪ್ರಜಾಪ್ರಭುತ್ವದ ಜೀವಾಳ: ತರೀಕೆರೆಯಲ್ಲಿ ಶಾಸಕ G.H ಶ್ರೀನಿವಾಸ್ ಅಭಿಮತ

ರಾಜ್ಯಾದ್ಯಂತ ನಡೆಯುತ್ತಿರುವ ಎಸ್‌ಐಆರ್ (SIR) ವಿರೋಧಿ ಜನಜಾಗೃತಿ ಜಾಥಾದ ನಾಲ್ಕನೇ ದಿನದ ಪಯಣ ಇಂದು ತರೀಕೆರೆಗೆ ತಲುಪಿತು. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಜಾಥಾವನ್ನು, ತರೀಕೆರೆಯ ಜಾಗೃತ...

ಬೆಳಗಾವಿಯ ವಿವಿದೆಡೆ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬೆಳಗಾವಿಯ ವಿವಿಧ ಭಾಗಗಳಲ್ಲಿ ಸೋಮವಾರ (ಜೂ.15) ಜನಜಾಗೃತಿ ಜಾಥಾ ನಡೆಯಿತು. ಬಾಗಲಕೋಟೆಯಿಂದ ಆಗಮಿಸಿದ ಜಾಥಾ ತಂಡವನ್ನು ಯರಗಟ್ಟಿ ಪಟ್ಟಣದಲ್ಲಿ...

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾದ ಎಸ್‌ಐಆರ್ ವಿರೋಧಿ ಜಾಥಾ; ಜನಪರ ಸಂಘಟನೆಗಳ ಬೆಂಬಲ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ನಡೆಯುತ್ತಿರುವ ರಾಜ್ಯ ಮಟ್ಟದ ಜಾಥಾ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಜಾಥಾದ ಮೂರನೇ ದಿನವಾದ ಇಂದು ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದಿಂದ ಆರಂಭವಾದ...