Homeಮುಖಪುಟವಿಶ್ವ ಹಿಂದೂ ಪರಿಷತ್ ಸಭೆಯಲ್ಲಿ ಭಾಗವಹಿಸಿದ 30 ನಿವೃತ್ತ ನ್ಯಾಯಾಧೀಶರು : ವಕ್ಫ್ ಮಸೂದೆ, ಮತಾಂತರ...

ವಿಶ್ವ ಹಿಂದೂ ಪರಿಷತ್ ಸಭೆಯಲ್ಲಿ ಭಾಗವಹಿಸಿದ 30 ನಿವೃತ್ತ ನ್ಯಾಯಾಧೀಶರು : ವಕ್ಫ್ ಮಸೂದೆ, ಮತಾಂತರ ಕಾನೂನು ಕುರಿತು ಚರ್ಚೆ

- Advertisement -
- Advertisement -

ವಿಶ್ವ ಹಿಂದೂ ಪರಿಷತ್‌ನ(ವಿಹೆಚ್‌ಪಿ) ‘ವಿಧಿ ಪ್ರಕೋಷ್ಠ’ (ಕಾನೂನು ಕೋಶ) ಭಾನುವಾರ (ಸೆ.8) ಆಯೋಜಿಸಿದ್ದ ಸಭೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳ ಸುಮಾರು 30 ನಿವೃತ್ತ ನ್ಯಾಯಾಧೀಶರು ಭಾಗವಹಿಸಿದ್ದು, ವಾರಣಾಸಿ, ಮಥುರಾ ದೇವಸ್ಥಾನ-ಮಸೀದಿ ಕಾನೂನು ವಿವಾದ, ವಕ್ಫ್ (ತಿದ್ದುಪಡಿ) ಮಸೂದೆ, ಧಾರ್ಮಿಕ ಮತಾಂತರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

“ನಾವು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನಿವೃತ್ತ ನ್ಯಾಯಾಧೀಶರನ್ನು ಸಭೆಗೆ ಆಹ್ವಾನಿಸಿದ್ದೆವು. ಸಮಾಜದ ಮುಂದಿರುವ ಸಾಮೂಹಿಕ ಸಮಸ್ಯೆಗಳಾದ ವಕ್ಫ್ (ತಿದ್ದುಪಡಿ) ಮಸೂದೆ, ದೇವಸ್ಥಾನಗಳನ್ನು ವಾಪಸ್ ಪಡೆಯುವುದು, ಸರ್ಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳನ್ನು ಸಮಾಜಕ್ಕೆ ಹಸ್ತಾಂತರಿಸುವುದು, ಮತಾಂತರ ಇತ್ಯಾದಿಗಳ ಕುರಿತು ಚರ್ಚಿಸಲಾಗಿದೆ. ನ್ಯಾಯಾಧೀಶರು ಮತ್ತು ವಿಹೆಚ್‌ಪಿ ನಡುವೆ ಮುಕ್ತ ಅಭಿಪ್ರಾಯ ವಿನಿಮಯ ಸಭೆಯ ಉದ್ದೇಶವಾಗಿದೆ. ಇದರಿಂದ ಎರಡೂ ಕಡೆಯವರು ಪರಸ್ಪರ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ” ಎಂದು ವಿಹೆಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ವಿಚಾರ ವಿನಿಮಯಕ್ಕೆ ಇದೊಂದು ವೇದಿಕೆಯಾಗಿದೆ. ರಾಷ್ಟ್ರೀಯತೆ ಮತ್ತು ಹಿಂದುತ್ವದ ಬಗ್ಗೆ ಚರ್ಚೆ ನಡೆದಿದೆ. ಹಿಂದೂಗಳ ಮೇಲೆ ಪರಿಣಾಮ ಬೀರುವ ಕಾನೂನುಗಳು, ದೇವಾಲಯಗಳ ವಿಮೋಚನೆ, ಧಾರ್ಮಿಕ ಮತಾಂತರ, ಗೋಹತ್ಯೆ ಮತ್ತು ವಕ್ಫ್ ಬೋರ್ಡ್ ಕುರಿತು ಚರ್ಚಿಸಲಾಗಿದೆ” ಎಂದು ವಿಹೆಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಹೇಳಿರುವುದಾಗಿ ವರದಿ ತಿಳಿಸಿದೆ.

ಭಾನುವಾರ ರಾತ್ರಿ ಸಚಿವ ಮೇಘವಾಲ್ ಅವರು ಹಲವಾರು ಮಾಜಿ ನ್ಯಾಯಾಧೀಶರ ಜೊತೆ ಅಲೋಕ್ ಕುಮಾರ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರಂತಹ ಹಿರಿಯ ವಿಹೆಚ್‌ಪಿ ನಾಯಕರನ್ನು ಒಳಗೊಂಡ ಫೋಟೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. “ಇಂದು ವಿಶ್ವ ಹಿಂದೂ ಪರಿಷತ್ತಿನ ಕಾನೂನು ಕೋಶ ಆಯೋಜಿಸಿದ್ದ ಸಭೆಯಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಉದ್ದೇಶದಿಂದ ನ್ಯಾಯಾಂಗ ಸುಧಾರಣೆಗಳ ಕುರಿತು ವಿವರವಾದ ಚರ್ಚೆ ನಡೆಯಿತು. ನಿವೃತ್ತ ನ್ಯಾಯಾಧೀಶರು, ನ್ಯಾಯಶಾಸ್ತ್ರಜ್ಞರು, ಹಿರಿಯ ವಕೀಲರು ಮತ್ತು ಬುದ್ಧಿಜೀವಿಗಳು ಉಪಸ್ಥಿತರಿದ್ದರು”ಎಂದು ಬರೆದುಕೊಂಡಿದ್ದರು.

ವಿಹೆಚ್‌ಪಿ ಮೂಲಗಳ ಪ್ರಕಾರ, ಸಮಕಾಲೀನ ಕಾನೂನು ಸಮಸ್ಯೆಗಳನ್ನು ಚರ್ಚಿಸುವುದರ ಜೊತೆಗೆ, ನಿವೃತ್ತಿಯ ನಂತರ ನ್ಯಾಯಾಧೀಶರ ಪಾತ್ರ ಕೊನೆಗೊಳ್ಳುವುದಿಲ್ಲ. ಅವರು ‘ರಾಷ್ಟ್ರ ನಿರ್ಮಾಣ’ ದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೊಡುಗೆ ನೀಡಬೇಕು ಎಂದು ಹಿರಿಯ ವಿಹೆಚ್‌ಪಿ ನಾಯಕರೊಬ್ಬರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸಂಘ ಪರಿವಾರದ ಹಲವಾರು ಸೈದ್ಧಾಂತಿಕ ಪ್ರಕರಣಗಳು ಪ್ರಸ್ತುತ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವುದರಿಂದ ಈ ಬೆಳವಣಿಗೆಯು ಮಹತ್ವದ್ದಾಗಿದೆ. ವಾರಣಾಸಿಯ ಕಾಶಿ ವಿಶ್ವನಾಥ್-ಜ್ಞಾನವಾಪಿ ಮಸೀದಿ ಸಂಕೀರ್ಣ ಮತ್ತು ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಮಸೀದಿ ಈದ್ಗಾ ವಿವಾದಗಳು ಇದರಲ್ಲಿ ಸೇರಿವೆ.

ವಿವಿಧ ಬಿಜೆಪಿ ಆಡಳಿತದ ರಾಜ್ಯಗಳು ಜಾರಿಗೆ ತಂದ ಕೆಲವು ಮತಾಂತರ ವಿರೋಧಿ ಕಾನೂನುಗಳು ನ್ಯಾಯಾಲಯಗಳ ಪರಿಶೀಲನೆಗೆ ಒಳಪಟ್ಟಿವೆ. ವಕ್ಫ್ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಗಿದೆ. ಬಿಜೆಪಿ ಪ್ರಮುಖ ಮಿತ್ರಪಕ್ಷಗಳಾದ ಜೆಡಿ(ಯು) ಮತ್ತು ಎಲ್‌ಜೆಪಿ ಈ ವಿಚಾರದಲ್ಲಿ ವ್ಯತಿರಿಕ್ತ ಅಭಿಪ್ರಾಯ ಹೊಂದಿದೆ.

ಇದನ್ನೂ ಓದಿ : ‘ಲೋಕಸಭೆ ಚುನಾವಣೆಗೂ ಮುನ್ನ ಜನರಲ್ಲಿ ಇದ್ದ ಭಯದ ಭಾವನೆ ಈಗ ಮಾಯವಾಗಿದೆ..’; ರಾಹುಲ್ ಅಭಿಪ್ರಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯುಎಪಿಎ ಕಾಯಿದೆಯಡಿ ಆರೋಪ ಹೊರಿಸಿದ ಮಾತ್ರಕ್ಕೆ ವಿದೇಶ ಪ್ರಯಾಣದ ಹಕ್ಕು ಕಸಿಯಲಾಗದು: ನತಾಶಾ ನರ್ವಾಲ್‌ಗೆ ದೆಹಲಿ ಹೈಕೋರ್ಟ್ ಅಭಯ

ಒಬ್ಬ ವ್ಯಕ್ತಿಯ ವಿರುದ್ಧ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ (UAPA) ಯಂತಹ ಕಠಿಣ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಒಂದೇ ಕಾರಣಕ್ಕೆ, ಅವರ ವಿದೇಶ ಪ್ರಯಾಣದ ಮೂಲಭೂತ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು...

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ಅಭಿಜಿತ್ ದೀಪ್ಕೆಗೆ ‍‍ಜಾಮೀನು : ಪೊಲೀಸ್ ಕಸ್ಟಡಿಯಿಂದ ಬಿಡುಗಡೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಶನಿವಾರ (ಅಕ್ಟೋಬರ್ 17) ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ದೆಹಲಿಯ ಮಂದಿರ್ ಮಾರ್ಗ್ ಠಾಣೆ ಪೊಲೀಸರ ಕಸ್ಟಡಿಯಿಂದ ಬಿಡುಗಡೆಯಾಗಿದ್ದಾರೆ ಎಂದು...

ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಇಂಟರ್‌ನೆಟ್ ಬಳಕೆ ಮೂಲಭೂತ ಹಕ್ಕು : ಸುಪ್ರೀಂ ಕೋರ್ಟ್

ಮಹತ್ವದ ತೀರ್ಪಿನಲ್ಲಿ, ಸಂವಿಧಾನದ 21 ಮತ್ತು 19(1)(ಎ) ವಿಧಿಗಳ ಅಡಿಯಲ್ಲಿ ಇಂಟರ್‌ನೆಟ್ ಪಡೆಯುವ ಮತ್ತು ಬಳಸುವ ಹಕ್ಕನ್ನು ಸುಪ್ರೀಂ ಕೋರ್ಟ್ 'ಮೂಲಭೂತ ಹಕ್ಕು' ಎಂದು ಘೋಷಿಸಿದೆ. ಮಕ್ಕಳು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಈ...

ಸಿಜೆಐ ಸೂರ್ಯಕಾಂತ್ ವಿರುದ್ಧದ ಪೋಸ್ಟ್: ಕೇರಳ ಕಾಂಗ್ರೆಸ್ ಅಧ್ಯಕ್ಷರಿಗೆ ಎಸ್‌ಸಿಬಿಎ ಜಂಟಿ ಕಾರ್ಯದರ್ಶಿಯಿಂದ ಲೀಗಲ್ ನೋಟಿಸ್!

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರನ್ನು ಗುರಿಯಾಗಿಸಿ ಕೇರಳ ಕಾಂಗ್ರೆಸ್‌ನ ಅಧಿಕೃತ ಎಕ್ಸ್ (X) ಖಾತೆಯಿಂದ ಮಾಡಲಾಗಿತ್ತು ಎನ್ನಲಾದ ಪೋಸ್ಟ್‌ಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ (SCBA) ಜಂಟಿ...

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ನೇಹಾ ಬೋರಾ ಬಿಡುಗಡೆ : ಅಭಿಜಿತ್ ದೀಪ್ಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿರುವ ಪೊಲೀಸರು

ಶುಕ್ರವಾರ (ಅಕ್ಟೋಬರ್ 16) ಬಂಧಿತರಾಗಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ ಅವರನ್ನು ಶನಿವಾರ (ಅ.17) ಮುಂಜಾನೆ ಬಿಡುಗಡೆ ಮಾಡಲಾಗಿದ್ದು, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್...

ಬೆಂಗಳೂರಿನಲ್ಲಿ ತಿರಂಗ ಯಾತ್ರೆಗೆ ಪೊಲೀಸರ ಷರತ್ತುಬದ್ಧ ಅನುಮತಿ: ಪ್ರತಿಭಟನೆ, ಘೋಷಣೆಗಳಿಗೆ ನಿರ್ಬಂಧ

ಬೆಂಗಳೂರು: ದೆಹಲಿಯಲ್ಲಿ ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆ ವಿಚಾರವಾಗಿ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಅಕ್ಟೋಬರ್ 16ರಂದು ಟೌನ್ ಹಾಲ್‌ನಿಂದ ಬನ್ನಪ್ಪ ಪಾರ್ಕ್‌ನಲ್ಲಿರುವ ಕ್ವಿಟ್ ಇಂಡಿಯಾ ಸ್ಮಾರಕದವರೆಗೆ ಹಮ್ಮಿಕೊಂಡಿರುವ ತಿರಂಗ...

ಸುಪ್ರೀಂ ವಿಚಾರಣೆಗೆ ಸಜ್ಜಾಗುತ್ತಿದ್ದಂತೆ ಸಿಜೆಪಿಯ ತಿರಂಗಾ ಮೆರವಣಿಗೆ ಆರಂಭ; ಪೊಲೀಸರ ನೋಟಿಸ್ ಧಿಕ್ಕರಿಸಿ ತೆರಳುತ್ತಿದ್ದ ಅಭಿಜೀತ್ ದೀಪ್ಕೆ ವಶಕ್ಕೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಹಕ್ಕಿನ ಕುರಿತ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಜ್ಜಾಗುತ್ತಿದ್ದ ಬೆನ್ನಲ್ಲೇ, ದೆಹಲಿ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ‘ಲೆಹ್ರಾ ದೋ ತಿರಂಗಾ’...

‘ದಿಮಾಗಿ ನಕ್ಸಲ್’, ‘ದೇಶದ್ರೋಹಿ’ ಎಂದು ಪಟ್ಟ ಕಟ್ಟುವುದು ಅಧಿಕಾರ ಕಳೆದುಕೊಳ್ಳುವ ಭೀತಿಯ ಸಂಕೇತ”: ಮೋದಿ-ಅಮಿತ್ ಶಾ ವಿರುದ್ಧ ಪವನ್ ಖೇರಾ ವಾಗ್ದಾಳಿ!

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ತನ್ನ ನೀತಿಗಳು ಮತ್ತು ನಡೆಯನ್ನು ಪ್ರಶ್ನಿಸುವ ನಾಗರಿಕರಿಗೆ ‘ರಾಷ್ಟ್ರವಿರೋಧಿ’, ‘ಎಡಪಂಥೀಯ’ ಹಾಗೂ ‘ದಿಮಾಗಿ ನಕ್ಸಲ್’ ಎಂದು ಪಟ್ಟ ಕಟ್ಟುತ್ತಿರುವುದು ಅದರ ಅಧಿಕಾರ ಕಳೆದುಕೊಳ್ಳುವ ಭೀತಿಯನ್ನು ತೋರಿಸುತ್ತದೆ ಎಂದು...

ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೆ ಹೆಚ್ಚಿದ ನಿರ್ಬಂಧ: 25 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ, ಸೆಂಟ್ರಲ್ ಪಾರ್ಕ್ ಬಂದ್

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)...

ಸಿಜೆಪಿಯ ತಿರಂಗಾ ಮೆರವಣಿಗೆ: ಸೆಂಟ್ರಲ್ ಪಾರ್ಕ್ ಮುಚ್ಚುವಿಕೆ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಮುಚ್ಚುವ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಕಾಕ್ರೋಚ್ ಜನತಾ ಪಾರ್ಟಿ...