Homeಫ್ಯಾಕ್ಟ್‌ಚೆಕ್FACT CHECK : CPI(M) ನಾಯಕ ಸೀತಾರಾಮ್ ಯೆಚೂರಿ ಕ್ರಿಶ್ಚಿಯನ್ನರೇ? ವೈರಲ್ ಫೋಟೋದ ಸತ್ಯಾಸತ್ಯತೆ ಏನು?

FACT CHECK : CPI(M) ನಾಯಕ ಸೀತಾರಾಮ್ ಯೆಚೂರಿ ಕ್ರಿಶ್ಚಿಯನ್ನರೇ? ವೈರಲ್ ಫೋಟೋದ ಸತ್ಯಾಸತ್ಯತೆ ಏನು?

- Advertisement -
- Advertisement -

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಸೆಪ್ಟೆಂಬರ್ 12 ರಂದು ತನ್ನ 72ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನದ ನಂತರ, ಪಾರ್ಥಿವ ಶರೀರವನ್ನು ದೆಹಲಿಯ ಪ್ರತಿಷ್ಠಿತ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ಗೆ ‘ಶವಪೆಟ್ಟಿಗೆ’ಯಲ್ಲಿ ಕೊಂಡೊಯ್ಯಲಾಗಿತ್ತು. ವಿವಿಯ ವಿದ್ಯಾರ್ಥಿಗಳು ಮಾರ್ಕ್ಸ್‌ವಾದಿ ನಾಯಕನಿಗೆ ಅಂತಿಮ ಗೌರವ ಸಲ್ಲಿಸಿದ್ದರು.

ಈ ಕುರಿತ ಫೋಟೋವನ್ನು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳಲಾಗಿತ್ತು. ಫೋಟೋ ಗಮನಿಸಿದ ಅನೇಕ ಬಲಪಂಥೀಯರು ಸೀತಾರಾಂ ಯೆಚೂರಿ ಕ್ರೈಸ್ತ ಧರ್ಮದವರು, ರಾಜಕೀಯ ಜೀವನದಲ್ಲಿ ಹಿಂದೂ ಹೆಸರಿಟ್ಟುಕೊಂಡು ಹಿಂದೂಗಳಿಗೆ ವಂಚನೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದರು.

ಸದಾ ಸುಳ್ಳು ಕೋಮುದ್ವೇಷದ ಸುದ್ದಿಗಳನ್ನು ಹಂಚಿಕೊಳ್ಳುವ ಬಲಪಂಥೀಯ ಎಕ್ಸ್ ಬಳಕೆದಾರ ರಿಶಿ ಬಾಗ್ರೀ ಸೆಪ್ಟೆಂಬರ್ 14ರಂದು ಜೆಎನ್‌ಎಸ್‌ಯು ಪೋಸ್ಟ್‌ಗೆ ಪ್ರತಿಕ್ರಿಯಿಸಿ “ಹಾಗಾದರೆ ಸೀತಾರಾಮ್ ಯೆಚೂರಿ ಅವರು ಕ್ರಿಶ್ಚಿಯನ್. ಅವರು ಹಿಂದೂ ಧರ್ಮವನ್ನು ಏಕೆ ದ್ವೇಷಿಸುತ್ತಿದ್ದರು ಎಂಬುದರಲ್ಲಿ ಆಶ್ಚರ್ಯವಿಲ್ಲ. ಅಂದಹಾಗೆ, ಅವರು ತಮ್ಮ ಸಕ್ರಿಯ ರಾಜಕೀಯ ಜೀವನದಲ್ಲಿ ತಮ್ಮ ಧಾರ್ಮಿಕ ಗುರುತನ್ನು ಏಕೆ ಮರೆ ಮಾಚುತ್ತಿದ್ದರು?” ಎಂದು ಬರೆದುಕೊಂಡಿದ್ದರು.

ಸೀತಾರಾಂ ಯೆಚೂರಿ ಅವರಿಗೆ ಜೆಎನ್‌ಯುನಲ್ಲಿ ಗೌರವ ಸಲ್ಲಿಸಿದ್ದ ಫೋಟೋವನ್ನು ಸೆ.14ರಂದು ಎಕ್ಸ್ ಹಂಚಿಕೊಂಡಿದ್ದ ಮತ್ತೊಂದು ಬಲಪಂಥೀಯ ಎಕ್ಸ್ ಖಾತೆ ಓಕ್‌ಫ್ಲಿಕ್ಸ್ (@wokeflix) “ಹೆಸರು: ಸೀತಾರಾಮ್ ಯೆಚೂರಿ, ಧರ್ಮ: ಕ್ರಿಶ್ಚಿಯನ್ : ಇಷ್ಟು ದಿನ ಅಕ್ಕಿ ಮೂಟೆಯಾಗಿ ತನ್ನ ಹಿಂದೂ ಹೆಸರಿನಿಂದ ಎಷ್ಟು ಜನರನ್ನು ಮೂರ್ಖರನ್ನಾಗಿಸಿದ್ದಾನೆ ಎಂದು ಊಹಿಸಿಕೊಳ್ಳಿ” ಎಂದು ಬರೆದುಕೊಂಡಿತ್ತು.

ಇವಿಷ್ಟೇ ಅಲ್ಲದೆ, ಇನ್ನೂ ಹಲವು ಎಕ್ಸ್‌ ಖಾತೆಗಳಲ್ಲಿ ಸೀತಾರಾಂ ಯೆಚೂರಿ ಕ್ರೈಸ್ತ ಧರ್ಮದವರು ಎಂದು ಪ್ರತಿಪಾದಿಸಿ ಬರೆದುಕೊಳ್ಳಲಾಗಿತ್ತು.

ಫ್ಯಾಕ್ಟ್‌ಚೆಕ್ : ಸೀತಾರಾಂ ಯೆಚೂರಿ ಯಾವ ಧರ್ಮದವರು? ಅವರ ಕೌಟುಂಬಿಕ ಹಿನ್ನೆಲೆ ಏನು? ಎಂಬುವುದರ ಬಗ್ಗೆ 2017ರಲ್ಲಿ ರಾಜ್ಯಸಭೆಯಲ್ಲಿ ಮಾಡಿದ ವಿದಾಯ ಭಾಷಣದಲ್ಲಿ ಸ್ವತಃ ಯೆಚೂರಿ ಅವರೇ ವಿವರಿಸಿದ್ದಾರೆ. ಅವರ ಭಾಷಣವನ್ನು ಕೆಳಗೆ ಅಕ್ಷರ ರೂಪದಲ್ಲಿ ಕೊಡಲಾಗಿದೆ.

“ಈಗ ಚೆನ್ನೈ ಎಂದು ಕರೆಯಲ್ಪಡುವ ಮದ್ರಾಸ್‌ನ ಜನರಲ್ ಆಸ್ಪತ್ರೆಯಲ್ಲಿ ತೆಲುಗು ಮಾತನಾಡುವ ಬ್ರಾಹ್ಮಣ ಕುಟುಂಬದಲ್ಲಿ ನಾನು ಜನಿಸಿದೆ. ನನ್ನ ಅಜ್ಜ ನ್ಯಾಯಾಧೀಶರು…ಗುಂಟೂರಿಗೆ ಹೋಗಬೇಕಾಗಿತ್ತು. 1954ರಲ್ಲಿ ನಾವು ಅಲ್ಲಿಗೆ ಸ್ಥಳಾಂತರಗೊಂಡೆವು. ನಾನು 1952ರಲ್ಲಿ ಜನಿಸಿದೆ. 1956ರಲ್ಲಿ ನಾವು ಹೈದರಾಬಾದ್‌ಗೆ ಸ್ಥಳಾಂತರಗೊಂಡೆವು. ಸ್ವಾತಂತ್ರ್ಯ ದೊರೆತ ಆರಂಭದಲ್ಲಿ ನಾನು ಹೈದರಾಬಾದ್‌ನ ನಿಝಾಮರ ಆಡಳಿತಡಿ ಇಸ್ಲಾಮಿಕ್ ಸಂಸ್ಕೃತಿಯಲ್ಲಿ ನನ್ನ ಶಾಲಾ ಶಿಕ್ಷಣ ಪಡೆದೆ. ನಂತರ ನಾನು ದೆಹಲಿಗೆ ಬಂದೆ, ಇಲ್ಲಿ ಓದಿದೆ. ನಾನು ಒಬ್ಬರು ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ಆಕೆಯ ತಂದೆ ಇಸ್ಲಾಮಿಕ್ ಸೂಫಿ ಪಂಥದವರು ಮತ್ತು ಅವರ ಉಪನಾಮ ಚಿಸ್ತಿ… ಆಕೆಯ ತಾಯಿ ರಜಪೂತ ಸಮುದಾಯದವರು. 8ನೇ ಶತಮಾನದಲ್ಲಿ ವಲಸೆ ಬಂದ ಮೈಸೂರಿನ ರಜಪೂತರು. ನಾವೀಗ 21ನೇ ಶತಮಾನದಲ್ಲಿದ್ದೇವೆ. ನಾನು ಈ ಮಹಿಳೆಯನ್ನು ಮದುವೆಯಾಗಿರುವ ದಕ್ಷಿಣ ಭಾರತದ ಬ್ರಾಹ್ಮಣ ಕುಟುಂಬದಿಂದ ಬಂದವನು. ಹಾಗಾಗಿ, ನನ್ನ ಮಗನನ್ನು ಏನೆಂದು ಕರೆಯುತ್ತಾರೆ ಸರ್?. ನನ್ನ ಮಗನನ್ನು ಭಾರತೀಯ ಎನ್ನುವುದಕ್ಕಿಂತ ಹೆಚ್ಚಾಗಿ ಹೇಳಲು ಸಾಧ್ಯವೇ ಇಲ್ಲ. ಇದು ನಮ್ಮ ದೇಶ. ಇದು ನನ್ನ ಉದಾಹರಣೆ, ಇಂತಹ ಎಷ್ಟು ಜನರಿದ್ದಾರೆ ನೋಡಿ.”

2017ರಲ್ಲಿ ಆಗಿನ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ನೀಡಿದ ಹೇಳಿಕೆಯನ್ನು ಟೀಕಿಸಿದ್ದ ಯೆಚೂರಿ ಅವರು ‘ನಾನು ನಾಸ್ತಿಕ’ ಎಂದು ಎಕ್ಸ್‌ನಲ್ಲಿ ತಿಳಿಸಿದ್ದರು.

ಸೀತಾರಾಮ್ ಯೆಚೂರಿ ಕ್ರೈಸ್ತ ಧರ್ಮದವರು ಎಂಬ ವಾದದ ಕುರಿತು ಖ್ಯಾತ ಫ್ಯಾಕ್ಟ್ ಚೆಕ್ ಸಂಸ್ಥೆ ಆಲ್ಟ್ ನ್ಯೂಸ್ ಸಿಪಿಐ(ಎಂ) ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಅವರಿಂದ ಪ್ರತಿಕ್ರಿಯೆ ಕೇಳಿದೆ. “ಈ ವೇಳೆ ಮಾತನಾಡಿದ ಸಲೀಂ ಅವರು “ನವ ಭಾರತ’ದ ವಿಷಕಾರಿ ಸಾಮಾಜಿಕ-ರಾಜಕೀಯ ವಾತಾವರಣದಲ್ಲಿ, ಎಲ್ಲವನ್ನೂ ಧರ್ಮದೊಂದಿಗೆ ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ಸಾಂಪ್ರದಾಯಿಕವಾಗಿ, ಧಾರ್ಮಿಕ ನಂಬಿಕೆಗಳನ್ನು ಮಾನವ ಮತ್ತು ವೈಯಕ್ತಿಕ  ಹಾಗೂ ಪೂಜಕ ಮತ್ತು ಪೂಜಿಸಲ್ಪಡುವುದರ ನಡುವಿನ ಸಂಬಂಧ ಎಂದು ಪರಿಗಣಿಸಲಾಗುತ್ತದೆ. ಕಾಮ್ರೇಡ್ ಸೀತಾರಾಂ ಯೆಚೂರಿ ಅವರೇ ತಮ್ಮ ರಾಜ್ಯಸಭಾ ಭಾಷಣದಲ್ಲಿ ತಮ್ಮ ಕೌಟುಂಬಿಕ ಹಿನ್ನೆಲೆ ವಿವರಿಸಿದ್ದಾರೆ. ಇನ್ನು ಕ್ರೈಸ್ತರ ರೀತಿಯ ಶವಪೆಟ್ಟಿಗೆ ಬಳಸಿದ್ದರ ಬಗ್ಗೆ ಪ್ರಶ್ನೆ ಎತ್ತಲಾಗಿದೆ. ಸಂಕುಚಿತ ನಂಬಿಕೆಗಳ ಆಧಾರದ ಮೇಲೆ ಎಲ್ಲವನ್ನೂ ವಿಭಜಿಸಲು ಬಯಸುವವರನ್ನು ಹೊರತು, ಶವ ಪೆಟ್ಟಿಗೆಗೆ ಯಾವುದೇ ನಿರ್ದಿಷ್ಟ ಧರ್ಮವಿಲ್ಲ” ಎಂದು ಹೇಳಿದ್ದಾರೆ.

ಸೀತಾರಾಂ ಯೆಚೂರಿಗೆ ಶವಪೆಟ್ಟಿಗೆ ಬಳಸಿದ್ದು ಏಕೆ?

ದೆಹಲಿ ಏಮ್ಸ್‌ನ ಮಾಧ್ಯಮ ಉಸ್ತುವಾರಿ ಮತ್ತು ಪ್ರಾಧ್ಯಾಪಕಿ ಡಾ. ರಿಮಾ ದಾದಾ ಅವರ ಪ್ರಕಾರ, ಸೀತಾರಾಂ ಯೆಚೂರಿ ಅವರ ಕುಟುಂಬವು ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಿದೆ. ಹಾಗಾಗಿ, ದೇಹವನ್ನು ರಕ್ಷಿಸಿಡಬೇಕಾದ ಅಗತ್ಯವಿದೆ. ಬೋಧನಾ ಉದ್ದೇಶಗಳಿಗಾಗಿ ಸಂರಕ್ಷಿಸಿಡಲು ಕೆಲ ಚುಚ್ಚು ಮದ್ದುಗಳನ್ನು ದೇಹಕ್ಕೆ ಚುಚ್ಚಲಾಗುತ್ತದೆ. ಹಾಗಾಗಿ, ದೇಹವನ್ನು ಶವಪೆಟ್ಟಿಗೆಯಲ್ಲಿ ಇಡಲಾಗಿತ್ತು ಎಂದು ತಿಳಿಸಿದ್ದಾರೆ. ಯೆಚೂರಿ ಅವರ ಕುಟುಂಬದ ನಿರ್ಧಾರವನ್ನು ರಿಮಾ ಅವರು ಶ್ಲಾಘಿಸಿದ್ದಾರೆ.

‘ದಿ ಹಿಂದೂ ಪತ್ರಿಕೆ’ಯ ವರದಿಯೊಂದರ ಪ್ರಕಾರ, ಸೀತಾರಾಂ ಯೆಚೂರಿ ಅವರ ದೇಹವನ್ನು ಎಮ್ಸ್‌ಗೆ ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಿದ್ದರಿಂದ ಯಾವುದೇ ಅಂತಿಮ ವಿಧಿಗಳನ್ನು ನಡೆಸಿಲ್ಲ. ಅವರ ಮರಣದ ಒಂದು ದಿನದ ನಂತರ, ದೇಹವನ್ನು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಮತ್ತು ನಂತರ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತ್ತು. ಸೆಪ್ಟೆಂಬರ್ 14, ಶನಿವಾರದಂದು ದೇಹವನ್ನು ದೆಹಲಿಯ ಎಕೆಜಿ ಭವನದಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ತರಲಾಗಿತ್ತು.

ಒಟ್ಟಿನಲ್ಲಿ ಶವ ಪೆಟ್ಟಿಗೆ ಬಳಸಿದ್ದ ಕಾರಣಕ್ಕೆ ಬಲಪಂಥೀಯರು ಸೀತಾರಾಂ ಯೆಚೂರಿ ಕ್ರೈಸ್ತರು ಎಂದು ಸುದ್ದಿ ಹಬ್ಬಿಸಿದ್ದರು. ಅಸಲಿಗೆ ಯೆಚೂರಿ ಯಾವುದೇ ಧರ್ಮದ ಅನುಯಾಯಿ ಎಂದು ಗುರುತಿಸಿಕೊಂಡಿರಲಿಲ್ಲ. ಅವರೇ ಹೇಳಿದಂತೆ, ಯೆಚೂರಿ ಹುಟ್ಟಿದ್ದು ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ. ಆದರೆ, ಅವರು ಧರ್ಮದಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರು ಸತ್ತಾಗ ಯಾವುದೇ ಧರ್ಮದ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ಮಾಡಿಲ್ಲ. ದೇಹವನ್ನು ದೆಹಲಿಯ ಏಮ್ಸ್ ವೈದ್ಯಕೀಯ ಕಾಲೇಜು, ಆಸ್ಪತ್ರೆಗೆ ದಾನ ಮಾಡಲಾಗಿದೆ.

ಇದನ್ನೂ ಓದಿ | FACT CHECK : ಕರ್ನಾಟಕ ಸರ್ಕಾರದಿಂದ ಗಣೇಶ ಮೆರವಣಿಗೆಗೆ ಅಡ್ಡಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಬಲಪಂಥೀಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕೈಯಿಂದ ಮಲ ಹೊರುವ ಪದ್ಧತಿ ಇಲ್ಲ’ ಎಂದ ಸರ್ಕಾರ: ‘ಹಾಗಾದರೆ ನಾವು ಇನ್ನೂ ಏಕೆ ಈ ಕೆಲಸ ಮಾಡುತ್ತಿದ್ದೇವೆ?’ ಎಂದು ಪ್ರಶ್ನಿಸಿದ ಮಹಿಳಾ ಕಾರ್ಮಿಕರು

ನವದೆಹಲಿ: ದೇಶದಲ್ಲಿ ಕೈಯಿಂದ ಮಲ ಹೊರುವ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿರುವ ಬೆನ್ನಲ್ಲೇ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಿಳಾ ನೈರ್ಮಲ್ಯ...

ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅಧಿಕಾರ ಬಾರ್ ಕೌನ್ಸಿಲ್‌ಗಳಿಗೆ ಇಲ್ಲ; ನಲ್ಸಾರ್ ವಿವಿ ವಿರುದ್ಧದ ಬಿಸಿಐ ಅಧ್ಯಕ್ಷರ ಆದೇಶ ಕಾನೂನುಬಾಹಿರ : ಸುಪ್ರೀಂ ಕೋರ್ಟ್

ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಮತ್ತು ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ (ಸೆ.3) ಮಹತ್ವದ...

ದೇಶದ ಆರ್ಥಿಕ ಸ್ಥಿರತೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಸುಳ್ಳು ನಿರೂಪಣೆ ಸೃಷ್ಟಿ: ಶರದ್ ಪವಾರ್

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಸಂಕಷ್ಟದಲ್ಲಿರುವ ನೈಜ ಆರ್ಥಿಕತೆಯನ್ನು ಮರೆಮಾಚಲು ಕೇಂದ್ರ ಸರ್ಕಾರವು 'ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ತಿರುಚುತ್ತಿದೆ' ಎಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ. "ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ...

ಮಹದೇವಪುರ, ಗಾಂಧಿನಗರ ವೋಟರ್ ಲಿಸ್ಟ್ ಹಗರಣ: ಇಸಿಐ ತನಿಖೆಗೆ ರಾಜ್ಯ ಚುನಾವಣಾ ಆಯೋಗ ಶಿಫಾರಸು

ಮಹದೇವಪುರ ಮತ್ತು ಗಾಂಧಿನಗರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸಂಸದ ಮನ್ಸೂರ್ ಅಲಿ ಖಾನ್ ನೀಡಿದ್ದ ದೂರನ್ನು ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಕೇಂದ್ರ ಚುನಾವಣಾ ಆಯೋಗಕ್ಕೆ...

ಬಹುತೇಕ ಧರ್ಮಗಳು ಲಿಂಗ ಸಮಾನತೆಯನ್ನು ಗುರುತಿಸಲು ಹಿಂಜರಿಯುತ್ತವೆ: ಎಂ. ಎ. ಬೇಬಿ

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಉಪಸ್ಥಿತಿಯ ಮೇಲೆ ನಿರ್ಬಂಧಗಳನ್ನು ಹೇರಬೇಕೆಂದು ಪ್ರತಿಪಾದಿಸಿದ್ದ ಇಸ್ಲಾಮಿಕ್ ಪಂಡಿತ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಹೇಳಿಕೆಯನ್ನು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ. ಎ. ಬೇಬಿ ಅವರು ತೀವ್ರವಾಗಿ...

ಭಾಗವತ್ ಕಾರ್ಯಕ್ರಮಕ್ಕೆ ಅಮೆರಿಕದ ಧಾರ್ಮಿಕ ನಾಯಕರ ತೀವ್ರ ಆಕ್ಷೇಪ: ‘ನಮ್ಮನ್ನು ತಪ್ಪುದಾರಿಗೆಳೆದು ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಕರೆಸಲಾಗಿತ್ತು’ ಎಂದು ಆರೋಪ

ನ್ಯೂಯಾರ್ಕ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಇಬ್ಬರು ಅಮೆರಿಕದ ಧಾರ್ಮಿಕ ಮುಖಂಡರು, ಕಾರ್ಯಕ್ರಮದ ನೈಜ ಉದ್ದೇಶ ಮತ್ತು ಭಾಗವತ್ ಅವರ ಭಾಗವಹಿಸುವಿಕೆ...

ನೈತಿಕ ಹೊಣೆ ಹೊತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ: ಎಚ್.ಡಿ. ಕುಮಾರಸ್ವಾಮಿ

ಕೆಪಿಎಸ್‌ಸಿ (KPSC) ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ತೀವ್ರ ಒತ್ತಡ ಹೇರಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಈ...

KPSC: ರಾಜ್ಯದ ಪ್ರಭಾವಿಗಳ ಸಲಹೆಯಂತೆ ಪರಾರಿಯಾಗಿದ್ದ ಜ್ಞಾನೇಂದ್ರ ಕುಮಾರ್ !

ಕೆಪಿಎಸ್‌ಸಿ (KPSC) ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಪರಾರಿಯಾದ ರೋಚಕ ಹಾದಿ ಸಿಐಡಿ (CID) ವಿಚಾರಣೆಯಿಂದ ಬಯಲಾಗಿದೆ. ರಾಜ್ಯದ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳ ಸತತ...

ಪಂಜಾಬ್ SIR : ಕರಡು ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ನಾಪತ್ತೆ; ಎಎಪಿಯ ‘ಸೇಡಿನ ರಾಜಕಾರಣ’ಎಂದ ಸಂಸದ

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ಸಿದ್ಧಪಡಿಸಲಾದ ರಾಜ್ಯದ ಕರಡು ಮತದಾರರ ಪಟ್ಟಿಯಿಂದ ತಮ್ಮ ಹೆಸರು ನಾಪತ್ತೆಯಾದ ನಂತರ, ಪಂಜಾಬ್‌ನ ಆಮ್ ಆದ್ಮಿ ಪಕ್ಷದ(ಎಎಪಿ) ಸರ್ಕಾರದ ವಿರುದ್ಧ ಇತ್ತೀಚೆಗೆ ಬಿಜೆಪಿ ಸೇರಿದ ರಾಜ್ಯಸಭಾ...

ದಿಶಾ ಸಾಲ್ಯಾನ್ ಸಾವು ಪ್ರಕರಣ: ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ (ಸೆಪ್ಟೆಂಬರ್ 2) ಸಿಬಿಐ ತನಿಖೆಗೆ ಆದೇಶಿಸಿದೆ. ಜೂನ್...