HomeUncategorizedಜಮ್ಮು ಕಾಶ್ಮೀರ | ಅತಂತ್ರ ವಿಧಾನಸಭೆ ತಪ್ಪಿಸಲು ಕಾಂಗ್ರೆಸ್ ಜೊತೆ ಮೈತ್ರಿ: ಒಮರ್ ಅಬ್ದುಲ್ಲಾ

ಜಮ್ಮು ಕಾಶ್ಮೀರ | ಅತಂತ್ರ ವಿಧಾನಸಭೆ ತಪ್ಪಿಸಲು ಕಾಂಗ್ರೆಸ್ ಜೊತೆ ಮೈತ್ರಿ: ಒಮರ್ ಅಬ್ದುಲ್ಲಾ

- Advertisement -
- Advertisement -

ರಾಜ್ಯದ ಜನರಿಗೆ ಅತಂತ್ರ ವಿಧಾನಸಭಾ ಪರಿಸ್ಥಿತಿ ತಪ್ಪಿಸುವ ಆಯ್ಕೆಯಾಗಿ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ ಎಂದು ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಭಾನುವಾರ ಹೇಳಿದ್ದಾರೆ. ಪಕ್ಷದ ಝಾದಿಬಲ್ ಅಭ್ಯರ್ಥಿ ತನ್ವಿರ್ ಸಾದಿಕ್ ಅವರನ್ನು ಬೆಂಬಲಿಸಿ ದಾಲ್ ಸರೋವರದಲ್ಲಿ ಶಿಕಾರಾ ರ್ಯಾಲಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ಸೀಟು ಹಂಚಿಕೆ ಒಪ್ಪಂದದ ಪ್ರಕಾರ ನ್ಯಾಷನಲ್ ಕಾನ್ಫರೆನ್ಸ್ 51, ಕಾಂಗ್ರೆಸ್ 32 ಮತ್ತು ಸಿಪಿಐ(ಎಂ) ಒಂದರಲ್ಲಿ ಸ್ಪರ್ಧಿಸಲಿವೆ. ಉಳಿದ ಆರು ಸ್ಥಾನಗಳು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಡುವೆ “ಸೌಹಾರ್ದ ಸ್ಪರ್ಧೆ” ನಡೆಯಲಿದೆ ಎಂದು ವರದಿಯಾಗಿದೆ.

ಇದನ್ನೂಓದಿ:‘ಭಾರತ-ಇಸ್ರೇಲ್ ವ್ಯಾಪಾರ ಶೃಂಗಸಭೆ’ ರದ್ದುಗೊಳಿಸುವಂತೆ ವಿದ್ಯಾರ್ಥಿಗಳು, ಅಧ್ಯಾಪಕರಿಂದ ಬೆಂಗಳೂರಿನ IIScಗೆ ಪತ್ರ

“ಈವಿಎಮ್‌ ಯಂತ್ರದಲ್ಲಿ ಏನಿದೆಯೊ ಗೊತ್ತಿಲ್ಲ. ಆದರೆ ಅತಂತ್ರ ಚುನಾವಣೆಯ ಇದು ಆಗಿರುವುದಿಲ್ಲ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ” ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. “ನಾವು ಜಮ್ಮು ಕಾಶ್ಮೀರ ಚುನಾವಣೋತ್ತರ ಮೈತ್ರಿಗೆ ಹೋಗಬಹುದಿತ್ತು ಆದರೆ ಜನರಿಗೆ ಒಂದು ಆಯ್ಕೆಯನ್ನು ನೀಡಲು (ಚುನಾವಣೆಯ ಮೊದಲು) ಮೈತ್ರಿಯನ್ನು ರಚಿಸಲಾಗಿದೆ. ಇದರಿಂದದಾಗಿ, ಅತಂತ್ರ ವಿಧಾನಸಭೆ ಇರುವುದಿಲ್ಲ ಮತ್ತು ಸರ್ಕಾರ ರಚನೆಯಾಗುವುದಿಲ್ಲ ಎಂಬ ಅನುಮಾನ ಜನರಿಗೆ ಇರುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಆಳ್ವಿಕೆಯನ್ನು ವಿಸ್ತರಿಸಲು ಬಿಜೆಪಿಯು ಅತಂತ್ರ ವಿಧಾನಸಭಾ ಫಲಿತಾಂಶ ಬಯಸುತ್ತದೆ ಎಂದು ಅಬ್ದುಲ್ಲಾ ಹೇಳಿದ್ದಾರೆ. “ಬಿಜೆಪಿಯು ಹಂಗ್ ಅಸೆಂಬ್ಲಿಯನ್ನು ಫಲಿತಾಂಶಕ್ಕಾಗಿ ಬಯಸುತ್ತದೆ., ಇದರಿಂದಾಗಿ ಅವರು (ಲೆಫ್ಟಿನೆಂಟ್) ರಾಜ್ಯಪಾಲರ ಆಳ್ವಿಕೆಯನ್ನು ವಿಸ್ತಬಹುದು. ಆದರೆ ಜನರು ಅದನ್ನು ಸಂಭವಿಸಲು ಬಿಡುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ಉನ್ನತ ನಾಯಕರು ಜಮ್ಮುವಿನಲ್ಲಿ ಮಾಡುವಂತೆ ಕಾಶ್ಮೀರದಲ್ಲಿ ಏಕೆ ಪ್ರಚಾರ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಕಣಿವೆಯಲ್ಲಿ ಅವರಿಗೆ ಏನೂ ದಕ್ಕುವುದಿಲ್ಲ ಎಂದು ಬಿಜೆಪಿಗೆ ತಿಳಿದಿದೆ” ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನೂಓದಿ:ಅರ್ಕಾವತಿ ಬಡಾವಣೆ | ಸಿದ್ದಾಮಯ್ಯ v/s ತಾವರ್‌ಚಂದ್‌ ಸಂಘರ್ಷಕ್ಕೆ ಮತ್ತೊಂದು ವೇದಿಕೆ ಸಿದ್ಧ!

“ಬಿಜೆಪಿಗೆ ಕಾಶ್ಮೀರದಲ್ಲಿ ಏನೂ ದಕ್ಕುವುದಿಲ್ಲ. ಮುಸ್ಲಿಮರ ಬಗ್ಗೆ ಬಿಜೆಪಿಯ ಧೋರಣೆ ನಮಗೆ ಚೆನ್ನಾಗಿ ತಿಳಿದಿದೆ. ದೇಶದ ಹದಿನಾರು ಪ್ರತಿಶತದಷ್ಟು ಜನಸಂಖ್ಯೆಯ ಮುಸ್ಲಿಮಲ್ಲಿ, ಅವರಿಗೆ (ಬಿಜೆಪಿ ನಾಯಕರಿಗೆ) ಒಬ್ಬರನ್ನೂ ಹುಡುಕಲಾಗಲಿಲ್ಲ. ಈ ಜನಸಂಖ್ಯೆಗೆ ಯಾವುದೇ ಪ್ರಾತಿನಿಧ್ಯವಿಲ್ಲದಿರುವಾಗ, ಅವರು ಮುಸ್ಲಿಮರ ಬಗ್ಗೆ ಯಾವ ರೀತಿಯ ಚಿಂತನೆಯನ್ನು ಹೊಂದಿದ್ದಾರೆಂದು ನಮಗೆ ತಿಳಿದಿದೆ” ಎಂದು ಅಬ್ದುಲ್ಲಾ ಹೇಳಿದ್ದಾರೆ.

ಬಿಜೆಪಿ ತನ್ನ ವೈಫಲ್ಯಗಳನ್ನು ಮರೆಮಾಚಲು ಜಮ್ಮು ಕಾಶ್ಮೀರದಲ್ಲಿ “ಮೂರು ಕುಟುಂಬಗಳ ಆಡಳಿತ” ನಡೆಯುತ್ತಿದೆ ಎಂದು ಪ್ರಚಾರ ಮಾಡುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಆರೋಪಿಸಿದ್ದಾರೆ.

“ಕಳೆದ ಐದು ವರ್ಷಗಳಲ್ಲಿ ಜಮ್ಮು ಕಾಶ್ಮೀರಕ್ಕೆ ಏನೂ ಸಿಕ್ಕಿಲ್ಲ. ಬಿಜೆಪಿಗೆ ತೋರಿಸಲು ಏನೂ ಇಲ್ಲ. ಆದ್ದರಿಂದ ಪ್ರಧಾನಿ ಮತ್ತು ಗೃಹ ಸಚಿವರು ಮೂರು ಕುಟುಂಬಗಳನ್ನು ಗುರಿಯಾಗಿಸುತ್ತಿದ್ದಾರೆ. ಅವರು ಏನಾದರೂ ಮಾಡಿದ್ದರೆ ಅವರು ಇದನ್ನು ಮಾಡಬೇಕಾಗಿರಲಿಲ್ಲ” ಅವರು ಹೇಳಿದ್ದಾರೆ.

ಇದನ್ನೂಓದಿ: ಅಲ್-ಜಝೀರಾ ಕಚೇರಿಗೆ ದಾಳಿ ನಡೆಸಿದ ಇಸ್ರೇಲಿ ಪಡೆ : 45 ದಿನಗಳೊಳಗೆ ಮುಚ್ಚುವಂತೆ ಆದೇಶ

ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ 2014 ರ ವಿಧಾನಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ವರ್ಷ ಕಡಿಮೆ ಮತದಾನದ ಆಗರುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

“2014 ಕ್ಕಿಂತ ಕಡಿಮೆ ಮತದಾನ ನಡೆದ ಕೆಲವು ಕ್ಷೇತ್ರಗಳಿವೆ. ಉದಾಹರಣೆಗೆ, ನೂರಾಬಾದ್ (ಈಗ ಡಿ ಎಚ್ ಪೋರಾ) ಭಾಗದಲ್ಲಿ 2014 ರಲ್ಲಿ ಶೇಕಡಾ 80 ರಷ್ಟು ಮತದಾನವಾಗಿತ್ತು ಆದರೆ ಈ ಬಾರಿ ಅದು ಶೇಕಡಾ 20 ರಷ್ಟು ಕಡಿಮೆಯಾಗಿದೆ (ಶೇ 68). ಈ ಬಾರಿ ಬಹಿಷ್ಕಾರ ಇಲ್ಲದಿದ್ದರೂ ಅವರ ಪ್ರಕಾರ ಎಲ್ಲವೂ ಸಹಜವಾಗಿದ್ದರೂ ಈ ಬಾರಿ ಏಕೆ ಹೀಗಾಯಿತು ಎಂಬುದನ್ನು ಈಗಿನ ಸರಕಾರ ಯೋಚಿಸಬೇಕಿದೆ” ಎಂದಿದ್ದಾರೆ.

ಸೋಮವಾರ ರಾಹುಲ್ ಗಾಂಧಿಯವರ ಕಾಶ್ಮೀರ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯನ್ನು ಎದುರಿಸಲು ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ಇನ್ನೂ ಒಂದೆರಡು ಭೇಟಿ ನೀಡುವಂತೆ ಸಲಹೆ ನೀಡಿದ್ದೇನೆ. ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ದಲಿತರಿಗೆ ಅಧಿಕಾರ ಸಿಕ್ಕಾಗ ಕೇಳುವಷ್ಟು ಪ್ರಶ್ನೆಗಳನ್ನು ಬೇರೆಯವರಿಗೆ ಸಿಕ್ಕಾಗ ಕೇಳಲ್ಲ: ಹೆಚ್.ಡಿ. ಉಮಾಶಂಕರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಬ್ಬರು ಮಕ್ಕಳ ಸಾವಿನ ಬಳಿಕ ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ; ಅಶ್ರುವಾಯು ಪ್ರಯೋಗಿಸಿದ ಪೊಲೀಸರು

ಏಪ್ರಿಲ್ 7 ರಂದು ಬಿಷ್ಣುಪುರ ಜಿಲ್ಲೆಯಲ್ಲಿ ಬಾಂಬ್ ದಾಳಿಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ ನಂತರ ಕಣಿವೆ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದ ಕಾರಣ ಬುಧವಾರ (ಏಪ್ರಿಲ್ 8) ಮಣಿಪುರದಾದ್ಯಂತ ಉದ್ವಿಗ್ನತೆ ಉಂಟಾಗಿತ್ತು....

ಮತಕ್ಕಾಗಿ ನಗದು ಪ್ರಕರಣ: ಪಾಲಕ್ಕಾಡ್‌ನಲ್ಲಿ ಎನ್‌ಡಿಎ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಮತದಾನದ ಒಂದು ದಿನಕ್ಕೆ ಮುಂಚಿತವಾಗಿ ಮತದಾರರಿಗೆ ಲಂಚ ನೀಡಿದ ಆರೋಪದ ಮೇಲೆ ಪಾಲಕ್ಕಾಡ್ ಕ್ಷೇತ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರತಿನಿಧಿಗಳ ವಿರುದ್ಧ ಬುಧವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 8 ರಂದು ಬೆಳಿಗ್ಗೆ 10...

ಮಾದಕ ವ್ಯಸನ : 10 ವರ್ಷದಲ್ಲಿ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ವೃದ್ಧ ದಂಪತಿ

ಡ್ರಗ್ ಕಾರಣದಿಂದ ವೃದ್ದ ದಂಪತಿ ತನ್ನ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ಹೃದಯ ವಿದ್ರಾವಕ ಮತ್ತು ಆಘಾತಕಾರಿ ವರದಿ ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ಸುಲ್ತಾನ್‌ಪುರ ಲೋಧಿಯಿಂದ ಬಂದಿದೆ. ಸುಲ್ತಾನ್‌ಪುರ ಲೋಧಿಯ ಪಂಡೋರಿ ಮೊಹಲ್ಲಾ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ...

ಜಮ್ಮು-ಕಾಶ್ಮೀರ: 28 ವರ್ಷಗಳ ಕಾಲ ಸೇನಾ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ ಶ್ರೀನಗರ ನ್ಯಾಯಾಲಯ

1997 ರಲ್ಲಿ ಸೇನಾ ಕಸ್ಟಡಿಗೆ ತೆಗೆದುಕೊಂಡ ಸುಮಾರು 28 ವರ್ಷಗಳ ನಂತರ ಶ್ರೀನಗರ ನ್ಯಾಯಾಲಯವು ಒಬ್ಬ ವ್ಯಕ್ತಿಯನ್ನು ಸತ್ತನೆಂದು ಘೋಷಿಸಿದೆ. ಬಂಧನದಲ್ಲಿದ್ದಾಗ ಕೊಲ್ಲಲ್ಪಟ್ಟಿದ್ದಾನೆ ಎಂಬ ತನಿಖಾ ಸಂಶೋಧನೆಗಳನ್ನು ಉಲ್ಲೇಖಿಸಿ ಮತ್ತು ಸಾವಿನ ಕಾನೂನುಬದ್ಧ...

ದೆಹಲಿ: ವೇತನ ಕೇಳಿದ್ದಕ್ಕೆ ಅಪಾಯಕಾರಿ ಚರಂಡಿ ಸ್ವಚ್ಛಗೊಳಿಸಲು ಒತ್ತಾಯ; ಸುರಕ್ಷತಾ ಸಾಧನಗಳಿಲ್ಲದೆ ಚರಂಡಿಗಿಳಿದ ನೈರ್ಮಲ್ಯ ಕಾರ್ಮಿಕ ಸಾವು

ವಾಲ್ಮೀಕಿ ಸಮುದಾಯದ ಗುತ್ತಿಗೆ ನೈರ್ಮಲ್ಯ ಕಾರ್ಮಿಕ ರಾಹುಲ್ (32) ಮಾರ್ಚ್ 30 ರಂದು ದಿಲ್ಶಾದ್ ಗಾರ್ಡನ್‌ನ ತಹಿರ್‌ಪುರದಲ್ಲಿ 8 ರಿಂದ 10 ಅಡಿ ಆಳದ ಚರಂಡಿಯನ್ನು ಹಸ್ತಚಾಲಿತವಾಗಿ ಹೂಳು ತೆಗೆಯುವಾಗ ಯಾವುದೇ ಸುರಕ್ಷತಾ...

ಗಾಝಾ | ಇಸ್ರೇಲ್ ದಾಳಿಯಲ್ಲಿ ಅಲ್‌-ಜಝೀರಾ ಪತ್ರಕರ್ತ ಸಾವು : ತೀವ್ರ ಖಂಡನೆ ವ್ಯಕ್ತಪಡಿಸಿದ ಮಾಧ್ಯಮ ಸಂಸ್ಥೆ

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಅಲ್-ಜಝೀರಾ ಮಾಧ್ಯಮ ಸಂಸ್ಥೆಯ ಪತ್ರಕರ್ತ ಮೊಹಮ್ಮದ್ ವಿಶಾಹ್ ಸಾವನ್ನಪ್ಪಿದ್ದಾರೆ. ಗಾಝಾ ನಗರದ ಪಶ್ಚಿಮ ಭಾಗದಲ್ಲಿರುವ ಕರಾವಳಿ ರಸ್ತೆಯಾದ ಅಲ್-ರಶೀದ್ ಸ್ಟ್ರೀಟ್‌ನಲ್ಲಿ ಬುಧವಾರ (ಏ.8) ಕಾರಿನ...

ಅಸ್ಸಾಂ : ಮತದಾನದ ಹಿಂದಿನ ದಿನ ಪಕ್ಷಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ!

ಅಸ್ಸಾಂ ವಿಧಾನಸಭೆ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಉದಲ್ಗುರಿ (ಎಸ್‌ಟಿ) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುರೇನ್ ದೈಮರಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಎಂದು ವರದಿಯಾಗಿದೆ. ಪಕ್ಷದ ನಾಯಕತ್ವದಿಂದ...

ವಿಧಾನಸಭೆ ಚುನಾವಣೆ : ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಇಂದು ಮತದಾನ

ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭೆಯ ಚುನಾವಣೆಯ ಮತದಾನ ಇಂದು (ಏ.9, 2026) ಒಂದೇ ಹಂತದಲ್ಲಿ ನಡೆಯಲಿದೆ. ಈಗಾಗಲೇ ಮತದಾನ ಆರಂಭಗೊಂಡಿದೆ. ಅಸ್ಸಾಂನ 126 ಸದಸ್ಯ ಬಲದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯು...

‘ಯುದ್ಧ ಮುಂದುವರಿಸಲು ಸಾಧ್ಯವಾಗದೆ ಅಮೆರಿಕ ಬಲವಂತವಾಗಿ ಕದನ ವಿರಾಮ ಘೋಷಿಸಿತು’: ಭಾರತದಲ್ಲಿ ಇರಾನ್ ಸುಪ್ರೀಂ ಲೀಡರ್ ಪ್ರತಿನಿಧಿ

ನವದೆಹಲಿ: ಸಂಘರ್ಷವನ್ನು ಮುುಂದುವರಿಸಲು ವಿಫಲವಾದ ನಂತರ ಅಮೆರಿಕವು ಇರಾನ್ ಜೊತೆ ಕದನ ವಿರಾಮ ಘೋಷಿಸಲು ಒತ್ತಾಯಿಸಲ್ಪಟ್ಟಿತು ಮತ್ತು ನಿರಂತರ ಹಗೆತನವು ವಾಷಿಂಗ್ಟನ್‌ಗೆ ಮತ್ತಷ್ಟು ಹಿನ್ನಡೆಗೆ ಕಾರಣವಾಗುತ್ತಿತ್ತು ಎಂದು ಇರಾನ್‌ನ ಸರ್ವೋಚ್ಚ ನಾಯಕನ ಭಾರತದಲ್ಲಿನ...

ಶಾರದಾ ಚಿಟ್ ಫಂಡ್ ಹಗರಣ: 13 ವರ್ಷಗಳ ನಂತರ ಪ್ರಮುಖ ಆರೋಪಿ ಸುದೀಪ್ತ ಸೇನ್ ಗೆ ಜಾಮೀನು ಮಂಜೂರು ಮಾಡಿದ ಕೊಲ್ಕತ್ತಾ ಹೈಕೋರ್ಟ್

ಕೊಲ್ಕತ್ತಾ ಹೈಕೋರ್ಟ್ ಬುಧವಾರ ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದ ಪ್ರಮುಖ ಆರೋಪಿ ಸುದೀಪ್ತ ಸೇನ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, 13 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾಗಲು ದಾರಿ ಸುಗಮವಾಗಿದೆ. ಪಶ್ಚಿಮ...