Homeದಲಿತ್ ಫೈಲ್ಸ್ಜಾತಿ ದೌರ್ಜನ್ಯ ವಿರೋಧಿಸಿ ಪುಣೆಯಿಂದ ಮುಂಬೈಗೆ ದಲಿತ ಕುಟುಂಬದ ಪಾದಯಾತ್ರೆ

ಜಾತಿ ದೌರ್ಜನ್ಯ ವಿರೋಧಿಸಿ ಪುಣೆಯಿಂದ ಮುಂಬೈಗೆ ದಲಿತ ಕುಟುಂಬದ ಪಾದಯಾತ್ರೆ

- Advertisement -
- Advertisement -

ಕೈಯಲ್ಲಿ ಕೇವಲ ₹70, ನ್ಯಾಯಕ್ಕಾಗಿ ಮನವಿ; 35 ವರ್ಷದ ರತನ್ ತಮ್ಮ ಇಬ್ಬರು ಸಹೋದರಿಯರು ಮತ್ತು ಇಬ್ಬರು ಚಿಕ್ಕ ಮಕ್ಕಳೊಂದಿಗೆ ಪುಣೆಯಿಂದ ಮುಂಬೈಗೆ 150 ಕಿ.ಮೀ.ಗೂ ಹೆಚ್ಚು ನಡೆದುಕೊಂಡು ತಲುಪಿದ್ದಾರೆ. ತಮ್ಮ ಕಷ್ಟದ ಸ್ಥಿತಿಯನ್ನು ವಿವರಿಸುವ ಪೋಸ್ಟರ್‌ಗಳನ್ನು ಹಿಡಿದು, ಫೆಬ್ರವರಿ 7 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ಫೆಬ್ರವರಿ 13 ರಂದು ಆಜಾದ್ ಮೈದಾನಕ್ಕೆ ಆಗಮಿಸಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಲು ಬಯಸಿದರು. ಆದರೆ, ಹತ್ತು ದಿನಗಳ ನಂತರವೂ ಅವರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ.

ಅವರ ಈ ಪಾದಯಾತ್ರೆಯು ಜಾತಿ ಆಧಾರಿತ ಹಿಂಸೆ ಮತ್ತು ಸರ್ಕಾರಿ ಸಾಂಸ್ಥಿಕ ನಿರ್ಲಕ್ಷ್ಯದ ವಿರುದ್ಧವಾಗಿದೆ. ಪಿಂಪ್ರಿ-ಚಿಂಚ್‌ವಾಡ್‌ನ ಥೆರ್‌ಗಾಂವ್ ನಿವಾಸಿಗಳಾದ ರತನ್ ಮತ್ತು ಅವರ ಕುಟುಂಬವು ಮತಂಗ್ (ಮಾಂಗ್) ಸಮುದಾಯಕ್ಕೆ ಸೇರಿದವರು; ಈ ಸಮುದಾಯವು ಐತಿಹಾಸಿಕವಾಗಿ ಅಂಚಿನಲ್ಲಿರುವ ಮತ್ತು ತಾರತಮ್ಯಕ್ಕೆ ಒಳಗಾದ ಪರಿಶಿಷ್ಟ ಜಾತಿಯಾಗಿದೆ. ಎರಡು ವರ್ಷಗಳ ಹಿಂದೆ ರತನ್ ಅವರ 14 ವರ್ಷದ ಮಗ ಕರಣ್ ಮೇಲೆ ಜಾತಿ ನಿಂದನೆ ಮಾಡಿ, ನೆರೆಹೊರೆಯ ಪ್ರಬಲ ಜಾತಿ ವ್ಯಕ್ತಿಗಳು ಕ್ರೂರವಾಗಿ ಹಲ್ಲೆ ನಡೆಸಿದ್ದರು. ಬಳಿಕ, ಅವರ ಕುಟುಂಬಕ್ಕೆ ಸಂಕಷ್ಟ ಪ್ರಾರಂಭವಾಯಿತು.

ಅಂದಿನಿಂದ, ಪದೇಪದೆ ಮೇಲ್ಜಾತಿಯ ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಜಾತಿ ಆಧಾರಿತ ಅವಮಾನಗಳನ್ನು ನಡೆಸಿ, ದೈಹಿಕವಾಗಿ ಹಲ್ಲೆ ಮಾಡಿ, ಅವರ ಜೀವನವನ್ನು ಅಸಹನೀಯವಾಗಿಸಿದ್ದಾರೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

“ನನ್ನ ಸೋದರಳಿಯನಿಗೆ, ನೀವು ಮಂಗಿಗಳೇ, ಬೆಳಿಗ್ಗೆ ಯಾಕೆ ನಿಮ್ಮ ಮುಖವನ್ನು ತೋರಿಸುತ್ತೀರಿ ಎಂದು ಅವಮಾಣಿಸಲಾಯಿತು” ಎಂದು ರತನ್ ಅವರ ಸಹೋದರಿ 32 ವರ್ಷದ ರೇಷ್ಮಾ ಚೌಹಾಣ್ ಹೇಳಿದರು. “ಅವರು ಯಾವುದೇ ಕಾರಣವಿಲ್ಲದೆ ಜಗಳವಾಡುತ್ತಾರೆ, ಈಗ ನಮಗೆ ಜೀವ ಭಯವಿದೆ” ಎಂದು ಹೇಳಿದರು.

ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಫಲವಾದಾಗ ಕುಟುಂಬದ ತೊಂದರೆಗಳು ಇನ್ನಷ್ಟು ಹೆಚ್ಚಾದವು. ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪೊಲೀಸರಿಗೆ ಹಲವಾರು ದೂರುಗಳನ್ನು ನೀಡಿದ್ದರೂ, ಯಾವುದೇ ಎಫ್‌ಆಐಆರ್‌ ದಾಖಲಾಗಿಲ್ಲ. ಬದಲಾಗಿ, ಆರು ತಿಂಗಳ ಹಿಂದೆ ಯಾವುದೇ ಮುನ್ಸೂಚನೆಯಿಲ್ಲದೆ ನಮ್ಮ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಬಾಪುಜಿ ಬುವಾ ದೇವಸ್ಥಾನದ ಬಳಿಯ ಸಾರ್ವಜನಿಕ ತೊಟ್ಟಿಯಿಂದ ನೀರು ತರಲು ಒತ್ತಾಯಿಸಲಾಯಿತು. ನಾವು ಮತ್ತಷ್ಟು ಅವಮಾನವನ್ನು ಎದುರಿಸಿದೆವು, ಸ್ಥಳೀಯರು ನಮ್ಮನ್ನು ಓಡಿಸಲು ನಮ್ಮ ನೀರಿನ ಪಾತ್ರೆಗಳಿಗೆ ಸತ್ತ ಇಲಿಗಳನ್ನು ಎಸೆದರು” ಎಂದು ರೇಷ್ಮಾ ತಾವು ಅನುಭವಿಸುತ್ತಿರುವ ದೌರ್ಜನ್ಯದ ಕುರಿತು ವಿವರಿಸಿದ್ದಾರೆ.

ರತನ್ ಅವರ ಕಿರಿಯ ಸಹೋದರಿ 23 ವರ್ಷದ ಸೋನಮ್ ಲೊಂಡೆ ಮಾತನಾಡಿ, ತಮ್ಮ ಮನೆಗೆ ಬಲವಂತವಾಗಿ ಪ್ರವೇಶಿಸುವುದು ಸೇರಿದಂತೆ ಹಲವು ಭಾರಿ ದೈಹಿಕ ಹಿಂಸೆಯ ಘಟನೆಗಳ ನಂತರ ದೌರ್ಜನ್ಯಗಳನ್ನು ದಾಖಲಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ ಎಂದು ಹೇಳಿದರು. “ದುರದೃಷ್ಟವಶಾತ್, ಅವರು ಕೆಲವು ಅಪರಿಚಿತರೊಂದಿಗೆ ಬಂದು, ಸಿಸಿಟಿವಿಯನ್ನು ಬಟ್ಟೆಯಿಂದ ಮುಚ್ಚಿ, ಕ್ಯಾಮೆರಾದಿಂದ ಮೆಮೊರಿ ಚಿಪ್ ಅನ್ನು ತೆಗೆದರು” ಎಂದು ಅವರು ಹೇಳಿದರು.

ಒಳಚರಂಡಿ ಕಾಮಗಾರಿ ನಮ್ಮ ಆಸ್ತಿಯನ್ನು ಅತಿಕ್ರಮಿಸುತ್ತಿರುವ ಬಗ್ಗೆ ನೆರೆಹೊರೆಯವರಲ್ಲಿ ಒಬ್ಬರನ್ನು ಪ್ರಶ್ನಿಸಿದಾಗ ವಾದವು ಉಲ್ಬಣಗೊಂಡಿತು ಎಂದು ಲೊಂಡೆ ನೆನಪಿಸಿಕೊಂಡರು. “ವಾಕಾಡ್ ಪೊಲೀಸರು ನನ್ನನ್ನು ಠಾಣೆಗೆ ಕರೆದೊಯ್ದು ಒಂದು ರಾತ್ರಿ ಬಂಧನದಲ್ಲಿಟ್ಟರು” ಎಂದು ಅವರು ಹೇಳಿದರು.

“ನಾವು ಇಲ್ಲಿ ವಾಸಿಸುವ ಎರಡನೇ ತಲೆಮಾರಿನವರಾಗಿದ್ದರೂ, ಮಾಲೀಕತ್ವದ ದಾಖಲೆಗಳನ್ನು ತೋರಿಸಲು ನಮ್ಮನ್ನು ಕೇಳಲಾಯಿತು. ಇದು ಜಾತಿ ಆಧಾರಿತ ಹಿಂಸಾಚಾರವನ್ನು ಮುಚ್ಚಿಹಾಕುವ ಪ್ರಯತ್ನವಾಗಿರಬಹುದು ಅಥವಾ ನಮ್ಮಿಂದ ಏನನ್ನಾದರೂ ಪಡೆಯಲು ಜಾತಿ ಆಧಾರಿತ ಘಟನೆಗಳಿಗೆ ನಮ್ಮನ್ನು ಪ್ರಚೋದಿಸಿರಬಹುದು” ಎಂದು ಲೊಂಡೆ ಹೇಳಿದರು.

ಕಳೆದ ನವೆಂಬರ್‌ನಲ್ಲಿ, ಕುಟುಂಬವು ಹೊರಗೆ ಅಡುಗೆ ಮಾಡುತ್ತಿದ್ದಾಗ, ಕಿರುಕುಳ ನೀಡುತಿದ್ದವರು ಪೊಲೀಸರೊಂದಿಗೆ ಬಂದು ಕೂಗಾಡಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ. “ಅವರು ನನ್ನ 10 ವರ್ಷದ ಮಗಳು ನೂತನ್‌ಗೆ ಹೊಡೆದು, ನಾವು ದಾಖಲಿಸಿದ್ದ ಸಾಕ್ಷ್ಯವನ್ನು ಅಳಿಸಲು ನನ್ನ ಫೋನ್ ಕಸಿದುಕೊಂಡರು. ನಮ್ಮ ಮೊಬೈಲ್ ಫೋನ್ ಇನ್ನೂ ಅವರ ಬಳಿಯೇ ಇದೆ” ಎಂದು ರತನ್ ಹೇಳಿದರು.

ಇದರ ನಂತರ, ಸಂತ್ರಸ್ತರು ಆಯುಕ್ತರನ್ನು ಭೇಟಿ ಮಾಡಲು ಪಿಸಿಎಂಸಿ ಕಚೇರಿಗೆ ಹೋದರು. ಆದರೆ, ಅವರು ವಿಫಲರಾದರು ಎಂದು ರತನ್ ಹೇಳಿದರು. “ನಮ್ಮನ್ನು ಕಾಲೇವಾಡಿ ಪೊಲೀಸ್ ಠಾಣೆಗೆ ತೆರಳುವಂತೆ ನಿರ್ದೇಶಿಸಲಾಯಿತು, ಅಲ್ಲಿ ಅಧಿಕಾರಿಗಳು ಬೆಳಿಗ್ಗೆ 11 ಗಂಟೆಯಿಂದ ಮಧ್ಯರಾತ್ರಿಯವರೆಗೆ ಬಂಧಿಸಿ, ನೆಲವನ್ನು ಸ್ವಚ್ಛಗೊಳಿಸಲು ಒತ್ತಾಯಿಸಿ, ಪ್ರಕರಣ ದಾಖಲಿಸದೆ ನಮ್ಮನ್ನು ಕಳುಹಿಸಿದರು” ಎಂದು ರೇಷ್ಮಾ ಆರೋಪಿಸಿದರು.

ಫೆಬ್ರವರಿ 5 ರಂದು, ಪೊಲೀಸ್ ದೂರು ದಾಖಲಿಸಲು ಮತ್ತೊಂದು ವಿಫಲ ಪ್ರಯತ್ನದ ನಂತರ, ಕುಟುಂಬವು ಮರುದಿನ ಪಿಸಿಎಂಸಿ ಆಯುಕ್ತರ ಕಚೇರಿಗೆ ಲಿಖಿತ ದೂರು ಸಲ್ಲಿಸಿತು. ಯಾವುದೇ ಆಯ್ಕೆಗಳು ಉಳಿದಿಲ್ಲದ ಕಾರಣ, ಅವರು ನ್ಯಾಯಕ್ಕಾಗಿ ಮುಂಬೈಗೆ ಮೆರವಣಿಗೆ ನಡೆಸಲು ನಿರ್ಧರಿಸಿದರು.

ಇದನ್ನೂ ಓದಿ; ಉತ್ತರ ಪ್ರದೇಶ| ದಲಿತರ ಮದುವೆ ಮೆರವಣಿಗೆಯ ಮೇಲೆ ದಾಳಿ ನಡೆಸಿದ 8 ಜನರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಪುನಃ ಅಗ್ರಸ್ಥಾನ ಪಡೆದ ಗೌತಮ್ ಅದಾನಿ; ಶೇ. 13 ರಷ್ಟು ಸಂಪತ್ತು ಹೆಚ್ಚಳ

ಎಂ3ಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026 ರ ಪ್ರಕಾರ, ಭಾರತದ ಬಿಲಿಯನೇರ್‌ಗಳ ಸಂಖ್ಯೆಯು ದಾಖಲೆಯ 391 ಕ್ಕೆ ತಲುಪಿದ್ದು, ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿರುವ ಗೌತಮ್ ಅದಾನಿ ಮತ್ತು ಅವರ ಕುಟುಂಬವು...

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ: SIR ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರು, ತಜ್ಞರ ಕಳವಳ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದೊಳಗೆ ದಾಖಲಾಗಿರುವ ಭಿನ್ನಾಭಿಪ್ರಾಯಗಳು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ದಿ ಇಂಡಿಯನ್ ಎಕ್ಸ್‌ಪ್ರೆಸ್  ನಡೆಸಿದ ತನಿಖಾ ವರದಿ ಪ್ರಕಾರ,...

ಚಲಿಸುವ ರೈಲಿನಲ್ಲಿ ಹಲ್ಲೆ ನಡೆಸಿ ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಒತ್ತಾಯ: ಮುಸ್ಲಿಂ ಯುವಕನ ಆರೋಪ

ಮುಂಬೈಯಿಂದ ಉತ್ತರ ಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮುಸ್ಲಿಂ ಯುವಕನೊಬ್ಬ ಆರೋಪಿಸಿದ್ದಾನೆ. ದಾಳಿಕೋರರು ತನ್ನ ಶರ್ಟ್ ಹರಿದು, ಥಳಿಸಿ, ಬಲವಂತವಾಗಿ "ಜೈ ಶ್ರೀ ರಾಮ್" ಎಂದು ಜಪಿಸುವಂತೆ...

ಫಾರ್ಮ್ 6 ರಲ್ಲಿನ ಬದಲಾವಣೆಗಳು ಕಾನೂನುಬಾಹಿರ; ಆಯೋಗದೊಳಗಿನ ಭಿನ್ನಾಭಿಪ್ರಾಯ ಗಂಭೀರ: ಮಾಜಿ ಸಿಇಸಿ ಓ.ಪಿ. ರಾವತ್

"ಶಾಸನಬದ್ಧ ಮತದಾರರ ನೋಂದಣಿ ಫಾರ್ಮ್ ನಂ 6 ರಲ್ಲಿ ಮಾಡಲಾದ ಬದಲಾವಣೆಗಳು ಸಂಪೂರ್ಣವಾಗಿ ತಪ್ಪು ಮತ್ತು ಕಾನೂನುಬಾಹಿರ" ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಓ.ಪಿ. ರಾವತ್ ತಿಳಿಸಿದ್ದಾರೆ. "ಚುನಾವಣಾ ಆಯೋಗದೊಳಗಿನ...

‘ಸಲ್ವಾರ್ ತೆಗೆಯಲು ಯತ್ನ, ಎದೆ ಒತ್ತುವುದು ಅತ್ಯಾಚಾರ ಯತ್ನವಲ್ಲವೇ?’: ಪಾಟ್ನಾ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಚಾಟಿ 

ನವದೆಹಲಿ: ಮಹಿಳೆಯ ಸಲ್ವಾರ್ ತೆಗೆಯಲು ಯತ್ನಿಸುವುದು ಮತ್ತು ಆಕೆಯ ಎದೆಯನ್ನು ಒತ್ತುವುದು ಸೇರಿದಂತೆ ಲೈಂಗಿಕ ದೌರ್ಜನ್ಯದ ಆರೋಪಗಳು ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ...

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಜಾಗೊಳಿಸಿ; ಕೂಡಲೇ ಎಸ್‌ಐಆರ್ ನಿಲ್ಲಿಸಿ: ವಿಪಕ್ಷಗಳ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರು ಗಂಭೀರ ಕಳವಳ ವ್ಯಕ್ತಪಡಿಸಿರುವುದು ದೊಡ್ಡ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. "ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್...

‘ಸಹೋದರಿಯರು, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧ’: ಮುಸ್ಲಿಂ ಮಹಿಳೆಯರ ವಿರುದ್ಧ ಮಧ್ಯಪ್ರದೇಶ ಬಿಜೆಪಿ ಶಾಸಕನ ಅತ್ಯಾಚಾರ ಬೆದರಿಕೆ

ಭೋಪಾಲ್: ನವರಾತ್ರಿ ಸಂದರ್ಭದಲ್ಲಿ ನಡೆಯುವ ಗರ್ಬಾ ಕಾರ್ಯಕ್ರಮಗಳಿಗೆ ಮುಸ್ಲಿಂ ಯುವಕರು ಆಗಮಿಸುವುದನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ನೀಡಿರುವ ಹೇಳಿಕೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. “ಮುಸ್ಲಿಂ ಹುಡುಗರು ಮಾತ್ರ...

BWSSB ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ: ಜಲಮಂಡಳಿ ಗುತ್ತಿಗೆ ಕಾರ್ಮಿಕರ ಸರಣಿ ಸಾವಿಗೆ ಆಕ್ರೋಶ, ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಹೋರಾತ್ರಿ ಸುಗಮವಾಗಿ ನಿರ್ವಹಿಸುವ BWSSB ಜಲಮಂಡಳಿಯ ಸಾವಿರಾರು ಗುತ್ತಿಗೆ ಕಾರ್ಮಿಕರು ತಮ್ಮ ಜೀವಭದ್ರತೆ ಹಾಗೂ ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿ ಇಂದು (ಸೆಪ್ಟೆಂಬರ್ 23)...

ಕೋಲ್ಕತ್ತಾ: ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಉಪಾಸನಾ ಚೌಧರಿ ಮನೆ ಮೇಲೆ ಕಲ್ಲುತೂರಾಟ, ಮಾಜಿ ಶಾಸಕ ಹುಮಾಯೂನ್ ಕಬೀರ್ ಮೇಲೂ ಹಲ್ಲೆ!

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಮುಕುಂದಪುರದಲ್ಲಿ ಮಂಗಳವಾರ (ಸೆ. 22) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಹಾಗೂ ವಕ್ತಾರೆ...

SIR ಏಕಪಕ್ಷೀಯ ತೀರ್ಮಾನ ಖಂಡಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು

ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ (ECI) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರಿ ಸ್ವರೂಪದ ಬಿರುಕು ಮೂಡಿದೆ. ಎಸ್‌ಐಆರ್ (Special Intensive Revision – SIR / ವಿಶೇಷ...