Homeಅಂತರಾಷ್ಟ್ರೀಯಜರ್ಮನಿ ಚುನಾವಣೆ | ಕನ್ಸರ್ವೇಟಿವ್‌ ಮೈತ್ರಿಕೂಟಕ್ಕೆ ಗೆಲುವು : ಫ್ರೆಡ್ರಿಕ್ ಮರ್ಝ್ ಹೊಸ ಚಾನ್ಸೆಲರ್

ಜರ್ಮನಿ ಚುನಾವಣೆ | ಕನ್ಸರ್ವೇಟಿವ್‌ ಮೈತ್ರಿಕೂಟಕ್ಕೆ ಗೆಲುವು : ಫ್ರೆಡ್ರಿಕ್ ಮರ್ಝ್ ಹೊಸ ಚಾನ್ಸೆಲರ್

- Advertisement -
- Advertisement -

ಜರ್ಮನಿಯಲ್ಲಿ ಭಾನುವಾರ (ಫೆ.23) ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಫ್ರೆಡ್ರಿಕ್ ಮರ್ಝ್‌  ನೇತೃತ್ವದ ಸಂಪ್ರದಾಯವಾದಿ ಮೈತ್ರಿಕೂಟ ಗೆಲುವು ಸಾಧಿಸಿದೆ. ತೀವ್ರ ಬಲಪಂಥೀಯ ಪಕ್ಷ ಆಲ್ಟರ್ನೇಟಿವ್ ಫಾರ್ ಜರ್ಮನಿ (ಎಎಫ್‌ಡಿ) ಮತ ಗಳಿಕೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಅಂತಿಮ ಮತ ಎಣಿಕೆಯ ಫಲಿತಾಂಶದ ಪ್ರಕಾರ, ಎಎಫ್‌ಡಿ ತನ್ನ ಮತ ಗಳಿಕೆಯನ್ನು ಈ ಬಾರಿ ದ್ವಿಗುಣಗೊಳಿಸಿಕೊಂಡಿದ್ದು, ಶೇ.19.5ರಷ್ಟು ಪಡೆದುಕೊಂಡಿದೆ. ಎಎಫ್‌ಡಿ ಜರ್ಮನಿಯ ನಾಗರಿಕರಲ್ಲಿ ಬಿತ್ತಿದ ವಲಸೆ ಮತ್ತು ಭದ್ರತೆ ಕುರಿತ ಆತಂಕ ಮತಗಳಿಕೆ ಹೆಚ್ಚಿಸಲು ಕಾರಣವಾಗಿದೆ ಎಂದು ವರದಿಗಳು ಹೇಳಿವೆ.

ಮೆರ್ಜ್ ಅವರ ಸಿಡಿಯು/ಸಿಎಸ್‌ಯು ಮೈತ್ರಿಕೂಟ ಶೇ.28.5ರಷ್ಟು ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದೆ. ನಿರ್ಗಮಿತ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಸೆಂಟರ್-ಲೆಫ್ಟ್ ಸೋಶಿಯಲ್ ಡೆಮಾಕ್ರೇಟ್ಸ್ (ಎಸ್‌ಪಿಡಿ) ಶೇ.16ರಷ್ಟು ಮಗಳನ್ನು ಮಾತ್ರ ಗಳಿಸಲು ಸಫಲವಾಗಿದೆ.

ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರ ಪಕ್ಷದ ದೀರ್ಘಕಾಲದ ಪ್ರತಿಸ್ಪರ್ಧಿ ಮೆರ್ಜ್, ಅಕ್ರಮ ವಲಸೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ತನ್ನ ಕರಾಳ ನಾಜಿ ಇತಿಹಾಸಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಇನ್ನೂ ಪ್ರಯತ್ನಿಸುತ್ತಿರುವ ದೇಶದಲ್ಲಿ ಎಎಫ್‌ಡಿಯ ಮತಗಳಿಕೆ ಎಲ್ಲರನ್ನು ಆಶ್ವರ್ಯಗೊಳಿಸಿದೆ. ಏಕೆಂದರೆ, ಸಿಡಿಯು/ಸಿಎಎಸ್‌ಯು ಸೇರಿದಂತೆ ಎಲ್ಲಾ ಪಕ್ಷಗಳು ಎಎಫ್‌ಡಿ ಹೆಚ್ಚು ಮತಗಳಿಸದಂತೆ ತಡೆಯಲು ಪ್ರಯತ್ನಿಸಿತ್ತು.

ಸದ್ಯಕ್ಕೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಿತ್ರಪಕ್ಷಗಳ ಬೆಂಬಲವನ್ನು ಹೊಂದಿರುವ ಎಎಫ್‌ಡಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಸಜ್ಜಾಗಿದೆ. ಇತರ ಎಲ್ಲಾ ಪಕ್ಷಗಳು ಅದನ್ನು ಅಧಿಕಾರದಿಂದ ದೂರವಿಡುವ ಪ್ರತಿಜ್ಞೆ ಮಾಡಿತ್ತು.

ಆದರೆ, ಎಎಫ್‌ಡಿ ನಾಯಕಿ ಆಲಿಸ್ ವೀಡೆಲ್ ಐತಿಹಾಸಿಕ ಫಲಿತಾಂಶವನ್ನು ಶ್ಲಾಘಿಸಿದ್ದು, ನಮ್ಮ ಪಕ್ಷ ಸಿಡಿಯು/ಸಿಎಸ್‌ಯು ಜೊತೆ ಸೇರಿ ಆಡಳಿತ ನಡೆಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಈಗ ಉಸ್ತುವಾರಿ ಚಾನ್ಸೆಲರ್ ಆಗಿರುವ ನಿರ್ಗಮಿತ ಸ್ಕೋಲ್ಜ್ ಅವರಿಂದ ಅಧಿಕಾರವಹಿಸಿಕೊಳ್ಳಲಿರುವ ಮೆರ್ಜ್ ಅವರು ಹೊಸ ಸಮ್ಮಿಶ್ರ ಸರ್ಕಾರ ರಚಿಸಬೇಕಿದೆ. ಈಸ್ಟರ್ ವೇಳೆಗೆ ಅವರ ಸರ್ಕಾರ ರಚಿಸುವ ಸಾಧ್ಯತೆ ಇದೆ. ಅದುವರೆಗೆ ಜರ್ಮನಿಯ ಸರ್ಕಾರವಿಲ್ಲದೆ ಮುನ್ನಡೆಯಬೇಕಿದೆ.

“ಸಮ್ಮಿಶ್ರ ಸರ್ಕಾರ ರಚಿಸುವ ಸಂಬಂಧ ಸುದೀರ್ಘ ಮಾತುಕತೆ ಮತ್ತು ವಿಳಂಬ ನೀತಿ ಸರಿಯಲ್ಲ. ಹೊರಗಿನ ಜಗತ್ತು ನಮ್ಮನ್ನು ಕಾಯುತ್ತಾ ಕೂತಿಲ್ಲ. ಶೀಘ್ರದಲ್ಲೇ ಸರ್ಕಾರ ರಚಿಸಬೇಕಿದೆ” ಎಂದು ವಿಜಯ ಘೋಷಣೆ ಬಳಿಕ ಮೆರ್ಜ್ ಹೇಳಿದ್ದಾರೆ.

ಬಹುಮತ ಪಡೆಯಲು ಮೆರ್ಜ್ ಅವರು ಮೊದಲು ಎಸ್‌ಪಿಡಿಯನ್ನು ಸಂಪರ್ಕಿಸುವ ಸಾಧ್ಯತೆ ಇದೆ. ಆದರೆ, ಜರ್ಮನಿಯ ಸಾಂಪ್ರದಾಯಿಕ ಕಾರ್ಮಿಕರ ಪಕ್ಷವನ್ನು ಐತಿಹಾಸಿಕವಾಗಿ ಕಳಪೆ ಫಲಿತಾಂಶಕ್ಕೆ ಕೊಂಡೊಯ್ದ ಸ್ಕೋಲ್ಜ್ ಅವರನ್ನು ಹೊರಗಿಟ್ಟು ಮಾತುಕತೆ ನಡೆಯಬಹುದು ಎನ್ನಲಾಗಿದೆ.

ಬಹುಮತ ಪಡೆಯಲು ಸ್ಥಾನಗಳನ್ನು ಪಡೆಯಲು ಮೆರ್ಜ್ ಗ್ರೀನ್ಸ್ ಅನ್ನು ಕೂಡ ಸಂಪರ್ಕಿಸಬಹುದು. ಗ್ರೀನ್ಸ್  ಚುನಾವಣೆಯಲ್ಲಿ ಶೇಖಡ 12 ರಷ್ಟು ಮತಗಳಿಸಿದೆ. ಆದರೆ, ಸಿಡಿಯುನ ಬವೇರಿಯನ್ ಸಹೋದರ ಪಕ್ಷವಾದ ಸಿಎಸ್‌ಯು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.

ಯುಎಸ್‌ಏಡ್‌ನ 2 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದ ಟ್ರಂಪ್ ಆಡಳಿತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...