Homeಮುಖಪುಟಆಪರೇಷನ್ ಸಿಂಧೂರ ಕುರಿತ ಹೇಳಿಕೆಗೆ ಬಂಧನಕ್ಕೊಳಗಾದ ಅಶೋಕ ವಿವಿ ಪ್ರೊಫೆಸರ್ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್

ಆಪರೇಷನ್ ಸಿಂಧೂರ ಕುರಿತ ಹೇಳಿಕೆಗೆ ಬಂಧನಕ್ಕೊಳಗಾದ ಅಶೋಕ ವಿವಿ ಪ್ರೊಫೆಸರ್ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್

- Advertisement -
- Advertisement -

‘ಆಪರೇಷನ್ ಸಿಂಧೂರ’ ಕುರಿತಾದ ಹೇಳಿಕೆಗಾಗಿ ಹರಿಯಾಣ ಪೊಲೀಸರಿಂದ ಬಂಧನಕ್ಕೊಳಗಾದ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ. ಆಪರೇಷನ್ ಸಿಂಧೂರ ಕುರಿತ

ಪ್ರೊಫೆಸರ್ ಮಹ್ಮದಾಬಾದ್ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ರಾಮಕೃಷ್ಣ ಗವಾಯಿ ನೇತೃತ್ವದ ದ್ವಿಸದಸ್ಯ ಪೀಠಕ್ಕೆ ಈ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ದೇಶಭಕ್ತಿಯ ಹೇಳಿಕೆಗಳಿಗಾಗಿ ಬಂಧಿಸಲಾಗಿದೆ ಎಂದು ಪ್ರೊಫೆಸರ್ ಮಹ್ಮದಾಬಾದ್ ಅವರು ಪ್ರತಿಪಾದಿಸಿದ್ದಾರೆ.

ತನ್ನ ಹೇಳಿಕೆಗಳನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದು, ದಯವಿಟ್ಟು ಈ ವಿಷಯವನ್ನು ವಿಚಾರಣೆಗೆ ಪಟ್ಟಿ ಮಾಡಿ ಎಂದು ವಿನಂತಿದ್ದಾರೆ. ಸಿಬಲ್ ಅವರ ಹೇಳಿಕೆಯನ್ನು ಆಲಿಸಿದ ನಂತರ, ಸುಪ್ರೀಂಕೋರ್ಟ್‌ನ ಪೀಠವು ಮೇ 20 ಅಥವಾ 21 ರಂದು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಹೇಳಿದೆ.

ಆಪರೇಷನ್ ಸಿಂಧೂರ ಕುರಿತಾದ ಪ್ರೊಫೆಸರ್ ಅಹ್ಮದಾಬಾದ್ ಅವರ ಸಾಮಾಜಿಕ ಮಾಧ್ಯಮ ಹೇಳಿಕೆಗೆ ಸಂಬಂಧಿಸಿದಂತೆ ಭಾರತದ ಸಾರ್ವಭೌಮತೆ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುವುದು ಸೇರಿದಂತೆ ಗಂಭೀರ ಆರೋಪಗಳ ಅಡಿಯಲ್ಲಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಮತ್ತು ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥರೂ ಆಗಿರುವ ಮಹ್ಮದಾಬಾದ್ ಅವರನ್ನು ಭಾನುವಾರ ನವದೆಹಲಿಯ ಅವರ ನಿವಾಸದಿಂದ ಬಂಧಿಸಲಾಯಿತು. ಅವರ ಬಂಧನದ ನಂತರ, ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು.

ಆಪರೇಷನ್ ಸಿಂಧೂರ ಬಗ್ಗೆ ಅವರು ನೀಡಿದ ಹೇಳಿಕೆ ಮೇಲೆ ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಅವರ ಮೇಲೆ ಆರೋಪ ಹೊರಿಸಿತ್ತು. ಮಹ್ಮದಾಬಾದ್ ಅವರ ಹೇಳಿಕೆಗಳು ಭಾರತೀಯ ಸಶಸ್ತ್ರ ಪಡೆಗಳ ಮಹಿಳಾ ಅಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಯಾಗಿದೆ ಮತ್ತು ಅದು ಕೋಮು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ ಎಂದು ರಾಜ್ಯ ಮಹಿಳಾ ಆಯೋಗವು ಟೀಕಿಸಿತ್ತು. ಆಪರೇಷನ್ ಸಿಂಧೂರ ಕುರಿತ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಸೂರತ್| ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಎರಡು ವರ್ಷಗಳ ಹೋರಾಟ; ಬೌದ್ಧ ಧರ್ಮ ಸ್ವೀಕರಿಸಿದ 80 ದಲಿತ ಕುಟುಂಬಗಳು

ಸೂರತ್| ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಎರಡು ವರ್ಷಗಳ ಹೋರಾಟ; ಬೌದ್ಧ ಧರ್ಮ ಸ್ವೀಕರಿಸಿದ 80 ದಲಿತ ಕುಟುಂಬಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಮತ್ತೊಬ್ಬ ನಾಯಕ, ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿ ಸಾವು

ಟೆಹ್ರಾನ್: ಇಸ್ರೇಲಿ-ಅಮೆರಿಕನ್ ಕ್ಷಿಪಣಿ ದಾಳಿಯಲ್ಲಿ ಇರಾನ್ ವಕ್ತಾರ ಜನರಲ್ ಅಲಿ ಮೊಹಮ್ಮದ್ ನೈನಿ ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಶುಕ್ರವಾರ ದೃಢಪಡಿಸಿದೆ. ಸರ್ಕಾರಿ ಸ್ವಾಮ್ಯದ ತಸ್ನಿಮ್ ಸುದ್ದಿ ಸಂಸ್ಥೆ...

ಶಿವಮೊಗ್ಗ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿ; 26 ವರ್ಷದ ಪಶುವೈದ್ಯೆ ಸಾವು

ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ ಮೃಗಾಲಯದಲ್ಲಿ ಗುರುವಾರ ತಡರಾತ್ರಿ ನೀರಾನೆ ದಾಳಿಗೆ ಒಳಗಾಗಿದ್ದ 26 ವರ್ಷದ ತರಬೇತಿ ವನ್ಯಜೀವಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟದವರಾದ ಸಮೀಕ್ಷಾ,...

ಸಾಮೂಹಿಕ ಮತಾಂತರಕ್ಕೆ ಕಾರಣವಾದವರಿಗೆ ಜೀವಾವಧಿ ಶಿಕ್ಷೆ; ಮಸೂದೆ ಅಂಗೀಕರಿಸಿದ ಛತ್ತೀಸ್‌ಗಢ ವಿಧಾನಸಭೆ

ಬಲವಂತ, ಪ್ರಚೋದನೆ, ವಂಚನೆ ಅಥವಾ ತಪ್ಪು ನಿರೂಪಣೆಯ ಮೂಲಕ ನಡೆಸಲಾಗುವ ಧಾರ್ಮಿಕ ಮತಾಂತರಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಛತ್ತೀಸ್‌ಗಢ ವಿಧಾನಸಭೆಯು ಗುರುವಾರ ಅಂಗೀಕರಿಸಿದೆ. ಸಾಮೂಹಿಕ ಮತಾಂತರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಸೇರಿದಂತೆ...

6 ವರ್ಷಗಳ ಜೈಲುವಾಸದ ನಂತರ ಮಧ್ಯಂತರ ಜಾಮೀನು; ಜೈಲಿನಿಂದ ಹೊರಬಂದ ಶಾರ್ಜೀಲ್ ಇಮಾಮ್‌

ಸಹೋದರನ ಮದುವೆಯಲ್ಲಿ ಭಾಗವಹಿಸಲು ಮತ್ತು ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ದೆಹಲಿ ನ್ಯಾಯಾಲಯವು 10 ದಿನಗಳ ಮಧ್ಯಂತರ ಜಾಮೀನು ನೀಡಿದ ನಂತರ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಶುಕ್ರವಾರ ಸುಮಾರು ಆರು ವರ್ಷಗಳ...

ಉತ್ತಮ್ ನಗರದಲ್ಲಿ ಗೌರವಯುತ-ಶಾಂತಿಯುತ ಈದ್ ಆಚರಿಸುವಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಎಂದು ದೆಹಲಿ ಹೈಕೋರ್ಟ್ ನಿರ್ದೇಶನ

ರಾಷ್ಟ್ರ ರಾಜಧಾನಿಯ ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ನಡುವೆ, ಸಮುದಾಯಗಳ ನಡುವೆ ಶಾಂತಿ ಕಾಪಾಡಿಕೊಳ್ಳುವ ಜೊತೆಗೆ ಶಾಂತಿಯುತ ಮತ್ತು ಘನತೆಯ ಈದ್ ಆಚರಣೆಯನ್ನು ಖಚಿತಪಡಿಸಿಕೊಳ್ಳಲು ಕಾನೂನಿನಡಿಯಲ್ಲಿ ಅನುಮತಿಸಬಹುದಾದ ಎಲ್ಲಾ...

ಕಥುವಾ ಪ್ರಕರಣ: ವೈಯಕ್ತಿಕ ಭದ್ರತೆ ಕಡಿತ; ‘ಮಗಳು ಶಾಲೆಗೆ ಹೋಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದ ವಕೀಲೆ ದೀಪಿಕಾ ಪುಷ್ಕರ್ ನಾಥ್ 

2018 ರ ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಂಟು ವರ್ಷದ ಬಾಲಕಿಯ ಕುಟುಂಬವನ್ನು ಪ್ರತಿನಿಧಿಸಿದ್ದ ಜಮ್ಮುವಿನ ಪ್ರಮುಖ ವಕೀಲೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ದೀಪಿಕಾ ಪುಷ್ಕರ್ ನಾಥ್, ತಮ್ಮ ವೈಯಕ್ತಿಕ...

ಒಡಿಶಾ| ದಲಿತ ವ್ಯಕ್ತಿಗೆ ಭೂಮಿ ಮಾರಾಟ ಮಾಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಸಾಮಾಜಿಕ ಬಹಿಷ್ಕಾರದ ಆತಂಕಕಾರಿ ಪ್ರಕರಣವೊಂದು ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಯ ಕಬಿಸೂರ್ಯನಗರ ಪೊಲೀಸ್ ವ್ಯಾಪ್ತಿಯಲ್ಲಿರುವ ಅರ್ಜುನಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪರಿಶಿಷ್ಟ ಜಾತಿ (ಎಸ್‌ಸಿ) ಗೆ ಸೇರಿದ ವ್ಯಕ್ತಿಗೆ ಭೂಮಿ ಮಾರಾಟ ಮಾಡಿದ್ದಕ್ಕಾಗಿ...

‘ಕೇವಲ ಗಾಳಿಯಲ್ಲಿ ಕ್ರಾಂತಿ ಸಾಧ್ಯವಿಲ್ಲ, ನೆಲದ ಘಟಕವೂ ಬೇಕು’; ಇರಾನ್ ಮೇಲಿನ ಯುದ್ಧದಲ್ಲಿ ‘ಭೂ-ದಾಳಿ’ಯ ಸುಳಿವು ನೀಡಿದ ನೆತನ್ಯಾಹು

‘ನೀವು ಗಾಳಿಯಿಂದ ಕ್ರಾಂತಿಗಳನ್ನು ಮಾಡಲು ಸಾಧ್ಯವಿಲ್ಲ’ ಈ ಹೇಳಿಕೆಯ ಮೂಲಕ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧಕ್ಕೆ 'ನೆಲದ ಅಂಶ'ದ ಸಾಧ್ಯತೆಯ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸುಳಿವು ನೀಡಿದ್ದಾರೆ ಎನ್ನುವ ಸುದ್ದಿ...

ನಕಲಿ ಆಪಲ್ ಪರಿಕರಗಳ ದಂಧೆ ಭೇದಿಸಿದ ಮುಂಬೈ ಪೊಲೀಸರು; ₹16.33 ಲಕ್ಷ ಮೌಲ್ಯದ ಸರಕುಗಳ ವಶ; ಆರು ಜನರ ವಿರುದ್ಧ ಪ್ರಕರಣ 

ಮುಂಬೈ: ನಕಲಿ ಬ್ರಾಂಡ್ ಸರಕುಗಳ ಮಾರಾಟದ ಮೇಲೆ ಪ್ರಮುಖ ದಾಳಿ ನಡೆಸಿರುವ ಮುಂಬೈ ಪೊಲೀಸರು, ಘಾಟ್ಕೋಪರ್ ಪೂರ್ವದಲ್ಲಿ ನಕಲಿ ಆಪಲ್ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಸಂಘಟಿತ ದಂಧೆಯನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ 16.33...

ಇರಾನ್ ನಮ್ಮ ದೀರ್ಘಕಾಲೀನ ಮಿತ್ರ ರಾಷ್ಟ್ರ; ವಿಶ್ವಾಸಾರ್ಹ ಪಾಲುದಾರರೊಂದಿಗೆ ನಿಲ್ಲಲು ವಿಫಲವಾದರೆ ಭಾರತಕ್ಕೆ ಭಾರಿ ನಷ್ಟ: ರಾಜ್ ಠಾಕ್ರೆ

ಸೂಕ್ತ ಸಮಯದಲ್ಲಿ ಕೇಂದ್ರ ಸರ್ಕಾರ ಇರಾನ್‌ಗೆ ಬೆಂಬಲ ನೀಡದಿರುವುದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.​ ಈ ಕುರಿತು ಗುರುವಾರ (ಮಾ.19) ಮಾತನಾಡಿರುವ ಅವರು, "ಇರಾನ್ ಭಾರತದ ದೀರ್ಘಕಾಲೀನ ಮಿತ್ರ...