Homeಅಂಕಣಗಳುಮಧ್ಯಪ್ರದೇಶದಲ್ಲಿ 'ಲವ್ ಜಿಹಾದ್' ವಿರೋಧಿ ದಳದ ರಚನೆ ಮತ್ತು ಪೊಲೀಸ್, ಬಜರಂಗದಳ

ಮಧ್ಯಪ್ರದೇಶದಲ್ಲಿ ‘ಲವ್ ಜಿಹಾದ್’ ವಿರೋಧಿ ದಳದ ರಚನೆ ಮತ್ತು ಪೊಲೀಸ್, ಬಜರಂಗದಳ

- Advertisement -
- Advertisement -

ಮಧ್ಯಪ್ರದೇಶ ಪೊಲೀಸರು ಅಪರಾಧ ಆರೋಪಿಗಳನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡುತ್ತಾ, ‘ಪೊಲೀಸರು ನಮ್ಮ ತಂದೆ’ ಮತ್ತು ‘ಹಸು ನಮ್ಮ ತಾಯಿ’ ಮುಂತಾದ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸುತ್ತಿರುವ ವೀಡಿಯೊಗಳ ಸರಣಿ ಈ ಹಿಂದೆ ಬಂದಿತ್ತು. ಈಗ ಭೋಪಾಲ್‌ ನಿಂದ ಬಂದಿರುವ ಹೊಸ ವೀಡಿಯೊಯೊಂದರಲ್ಲಿ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರು ಮುಸ್ಲಿಮರನ್ನು ಜಿಮ್‌ನಿಂದ ಹೊರಗಿಡುವಂತೆ ಎಚ್ಚರಿಸುತ್ತಿರುವುದು ಕಂಡುಬಂದಿದೆ. ಇದು ಕೋಮುಭಾವನೆಗಳನ್ನು ಕೆರಳಿಸುವಲ್ಲಿ ಪೊಲೀಸರು ಕೂಡ ಪಾಲ್ಗೊಂಡಿರುವ ಕುರಿತು ಹೊಸ ಕಳವಳವನ್ನು ಹುಟ್ಟುಹಾಕಿದೆ.

ಈ ಬಾರಿ ವಿವಾದವಾಗಿರುವ ವೀಡಿಯೊವು ಸಬ್-ಇನ್‌ಸ್ಪೆಕ್ಟರ್ ದಿನೇಶ್ ಶುಕ್ಲಾ ಅವರ ಮೇಲೆ ಕೇಂದ್ರೀಕೃತವಾಗಿದೆ. ಅವರು ಜಿಮ್‌ನೊಳಗೆ ಬಜರಂಗದಳ ಸದಸ್ಯರೊಂದಿಗೆ ಕುಳಿತುಕೊಂಡು ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಯಾವುದೇ ಮೊಹಮ್ಮದೀಯರು ಜಿಮ್ಮಿಗೆ ತರಬೇತಿ ಪಡೆಯುವುದಕ್ಕಾಗಲಿ ಅಥವಾ ನೀಡಲಿಕ್ಕಾಗಲಿ ಬರುವುದಿಲ್ಲ. ನಾನು ಅದನ್ನು ಹೇಳಿದ್ದೇನೆ ಎಂದು ವೀಡಿಯೊದಲ್ಲಿ ಹೇಳಿದ್ದಾರೆ.

ವ್ಯಾಪಕವಾಗಿ ಪ್ರಸಾರವಾದ ವೀಡಿಯೊವೊಂದರಲ್ಲಿ, ಜಿಮ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ವ್ಯಕ್ತಿಗಳ ಉಪಸ್ಥಿತಿಯ ಮೇಲೆ ಅನೌಪಚಾರಿಕ ನಿಷೇಧವನ್ನು ಜಾರಿಗೊಳಿಸುತ್ತಿರುವಂತೆ ಕಾಣುತ್ತಿದೆ. ಇದು ‘ಲವ್ ಜಿಹಾದ್’ ಎಂಬ ಪಿತೂರಿ ಸಿದ್ಧಾಂತವನ್ನು ಮುಂದಿಡುವ ಬಲಪಂಥೀಯ ಗುಂಪುಗಳು ಬಳಸುವ ಭಾಷೆಯನ್ನು ಪ್ರತಿಬಿಂಬಿಸುತ್ತದೆ. ಇದಕ್ಕೆ ಸಂಬಂಧಿಸಿ ಸಬ್ ಇನ್ಸ್‌ಪೆಕ್ಟರ್ ಅವರನ್ನು ಬಂಧಿಸಲಾಗಿದ್ದರೂ, ಸ್ವಯಂ ಘೋಷಿತ ಧರ್ಮ ರಕ್ಷಕರ ಜೊತೆಗೆ ಅವರ ಉಪಸ್ಥಿತಿಯ ಕುರಿತು ಸಾರ್ವಜನಿಕರಲ್ಲಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮರ್ಯಾದೆ ಹೆಸರಿನಲ್ಲಿ ಘೋಷಣೆಗಳು, ದಾಳಿಗಳು ಮತ್ತು ಬೆದರಿಕೆಗಳು

ಹಿಂದುತ್ವವಾದಿಗಳು “ಲವ್ ಜಿಹಾದ್” ನೆಪದಲ್ಲಿ ಮಧ್ಯಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಗಳನ್ನು ಹೆಚ್ಚಾಗಿ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಈ “ಲವ್ ಜಿಹಾದ್” ಪದಕ್ಕೆ ಯಾವುದೇ ಕಾನೂನು ಆಧಾರವಿಲ್ಲ. ಆದರೆ ಮುಸ್ಲಿಂ ವ್ಯಕ್ತಿಗಳು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲು ಪ್ರಣಯ ಸಂಬಂಧಗಳಿಗೆ ಆಮಿಷವೊಡ್ಡುತ್ತಾರೆ ಎಂದು ಆರೋಪಿಸಲು ಈ ಪದವನ್ನು ಬಳಸಲಾಗುತ್ತದೆ.

ಮಧ್ಯಪ್ರದೇಶ ಪೊಲೀಸರು ಇತ್ತೀಚೆಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಬಲವಂತದ ಧಾರ್ಮಿಕ ಮತಾಂತರದ ಆರೋಪಗಳನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡ (SIT)ವನ್ನು ರಚಿಸಿದೆ.

ಹಿಂದುತ್ವ ಸಂಘಟನೆಗಳ ಸದಸ್ಯರು ಜಿಮ್‌ಗೆ ಭೇಟಿ ನೀಡಿದ ನಂತರ ಈ ಘಟನೆ ನಡೆದಿದೆ ಎಂದು ಅಯೋಧ್ಯಾ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ (SHO) ಮಹೇಶ್ ಲಿಲ್ಹಾರೆ ದಿ ವೈರ್‌ಗೆ ದೃಢಪಡಿಸಿದ್ದಾರೆ ಮತ್ತು ಈ ವಿಷಯ ತನಿಖೆಯಲ್ಲಿದೆ ಎಂದು ಅವರು ಹೇಳಿದ್ದಾರೆ. ಆದರೆ ಹರಿದಾಡುತ್ತಿರುವ ಈ ವೀಡಿಯೊವನ್ನು ತಿರುಚಿರುವಂತೆ ತೋರುತ್ತದೆ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ ಭೋಪಾಲ್‌ನ ಜಿಮ್‌ಗೆ ಸಂಬಂಧಿಸಿದ ಮತ್ತೊಂದು ವೀಡಿಯೊದಲ್ಲಿ ಹಿಂದುತ್ವ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು “ಜೈ ಶ್ರೀ ರಾಮ್”, “ಲವ್ ಜಿಹಾದ್ ಮಾಡುವವರನ್ನು ಬಡಿಯಿರಿ” ಎಂಬ ಘೋಷಣೆಗಳನ್ನು ಕೂಗುತ್ತಾ ಜಿಮ್‌ಗೆ ನುಗ್ಗುತ್ತಿರುವುದು ಕಾಣಬಹುದು.

ಇನ್ನೊಂದು ವೀಡಿಯೊದಲ್ಲಿ ಎಸ್‌ಐ ದಿನೇಶ್ ಶುಕ್ಲಾ ಅವರೊಂದಿಗೆ ಕಾಣಿಸಿಕೊಂಡಿರುವ ವ್ಯಕ್ತಿಗಳಲ್ಲಿ ಒಬ್ಬನು ಜಿಮ್ ನಿರ್ವಹಣೆಗೆ ಸಲಹೆ ನೀಡುತ್ತಾ, ”ಹುಡುಗಿಯರಿಗೆ ಯಾರು ತರಬೇತಿ ನೀಡುತ್ತಾರೆ?” ಎಂದು ಪ್ರಶ್ನಿಸುತ್ತಿದ್ದಾನೆ. ಮತ್ತೆ ಮುಂದುವರೆದು “ಒಂದು ವಿಷಯವನ್ನು ನೆನಪಿನಲ್ಲಿಡಿ, ನಿಮ್ಮ ಜಿಮ್‌ನಿಂದ ಒಂದೇ ಒಂದು ಲವ್ ಜಿಹಾದ್ ಪ್ರಕರಣ ಕಂಡುಬಂದರೆ, ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ” ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾನೆ. ”ದಿ ವೈರ್” ಈ ವೀಡಿಯೊಗಳ ಸತ್ಯಾಸತ್ಯತೆಯನ್ನು ದೃಢೀಕರಿಸಲು ಸಾಧ್ಯವಿಲ್ಲ.

ಇದೇ ವ್ಯಕ್ತಿ ಮುಂದುವರಿದು ಇದೇ ವೀಡಿಯೋದಲ್ಲಿ, “ಜಿಮ್ಮಿನಲ್ಲಿ ಹಿಂದೂ ಯುವತಿಯರಿಗೆ ಹಿಂದೂ ತರಬೇತುದಾರರನ್ನು ಮಾತ್ರ ನೇಮಿಸಬೇಕೆಂದು ನಾವು ವಿನಂತಿಸುತ್ತೇವೆ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಲವ್ ಜಿಹಾದ್‌ನಿಂದ ರಕ್ಷಿಸುವುದು ನಮ್ಮ ಮುಖ್ಯ ಗುರಿ” ಎಂದು ಹೇಳುತ್ತಿದ್ದಾನೆ.

ಹಿಂದಿನ ಘಟನೆಗಳನ್ನು ಉಲ್ಲೇಖಿಸುತ್ತಾ ಅವರು, “ಈ ಹಿಂದೆ ಇಂದೋರ್‌ನಲ್ಲಿ ಟಿಐಟಿ ಕಾಲೇಜಿನಲ್ಲಿ ಏನಾಗಿತ್ತು? ”ಲವ್ ಜಿಹಾದ್” ಅನ್ನು ಸಹಿಸಲಾಗುವುದಿಲ್ಲ” ಎಂದು ಹೇಳುತ್ತಾನೆ. ಈ ವೀಡಿಯೊವು ಬಲಪಂಥೀಯ ಸಂಘಟನೆಯ ಸದಸ್ಯರು “ಲವ್ ಜಿಹಾದ್ ಮುರ್ದಾಬಾದ್” ಎಂಬ ಘೋಷಣೆ ಕೂಗುವುದರೊಂದಿಗೆ ಕೊನೆಗೊಳ್ಳುತ್ತದೆ.

2024ರಲ್ಲಿ ದ್ವೇಷ ಭಾಷಣದ ಘಟನೆಗಳು ಸುಮಾರು 581 ದಾಖಲಾಗಿವೆ. ಈ ಎಲ್ಲಾ ದ್ವೇಷ ಭಾಷಣಗಳು ಸುಮಾರು ಅರ್ಧದಷ್ಟು ಪಿತೂರಿ ಸಿದ್ಧಾಂತಗಳನ್ನು ಉಲ್ಲೇಖಿಸುತ್ತವೆ. ಅಂದರೆ “ಲವ್ ಜಿಹಾದ್”, “ಭೂ ಜಿಹಾದ್”, “ಜನಸಂಖ್ಯಾ ಜಿಹಾದ್”, “ಉಗುಳುವ ಜಿಹಾದ್” ಮತ್ತು “ಮತ ಜಿಹಾದ್” ಎಂಬಿತ್ಯಾದಿ ಪದಗಳು ಈ ದ್ವೇಷ ಭಾಷಣದಲ್ಲಿ ಸಾಮಾನ್ಯವಾಗಿದ್ದವು ಎಂದು ‘2024ರ ಇಂಡಿಯಾ ಹೇಟ್ ಲ್ಯಾಬ್’ ವರದಿ ಹೇಳಿದೆ.

ಪೊಲೀಸ್ ಠಾಣಾಧಿಕಾರಿ ಮಹೇಶ್ ಲಿಲ್ಹರೆ ಅವರು ಮಾತನಾಡಿ, “ಹಿಂದೂ ಅಲ್ಲದ ಜಿಮ್ ತರಬೇತುದಾರರು ”ಲವ್ ಜಿಹಾದ್” ಅಥವಾ ”ಧಾರ್ಮಿಕ ಮತಾಂತರ”ವನ್ನು ನಡೆಸುವ ಉದ್ದೇಶದಿಂದ ಹಿಂದೂಗಳ ಹೆಸರುಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿ ಹಿಂದುತ್ವ ಸಂಘಟನೆಗಳಿಂದ ದೂರು ಬಂದಿತ್ತು. ಹೀಗಾಗಿ ನಮ್ಮ ಪೊಲೀಸ್ ಸಿಬ್ಬಂದಿಗಳು ಹಲವಾರು ಬಲಪಂಥೀಯ ಸಂಘಟನೆಯ ಸದಸ್ಯರೊಂದಿಗೆ ಜಿಮ್‌ಗೆ ಹೋದರು. ಆ ಜಿಮ್‌ನ ಹೆಸರು ಇನ್ನೂ ತಿಳಿದು ಬಂದಿಲ್ಲ, ಆದರೆ ವಿವರಗಳನ್ನು ಪರಿಶೀಲಿಸಲು ನಾವು ಯುವತಿಯರನ್ನು ಸಂಪರ್ಕಿಸುತ್ತಿದ್ದೇವೆ. ನಾವು ಸಂಬಂಧಿಸಿದ ಸಬ್ ಇನ್‌ಸ್ಪೆಕ್ಟರ್‌ರೊಂದಿಗೆ ಮಾತನಾಡಿದ್ದೇವೆ. ಅವರು ವೀಡಿಯೋವನ್ನು ತಿರುಚಲಾಗಿದೆ ಎಂದು ಹೇಳುತ್ತಿದ್ದಾರೆ. ನಾನು ಅಂತಹ ಹೇಳಿಕೆ ನೀಡಿಲ್ಲ ಎಂದು ಸಬ್ ಇನ್‌ಸ್ಪೆಕ್ಟರ್‌ ನಿರಾಕರಿಸುತ್ತಿದ್ದಾರೆ. ನಾವು ಈ ವೀಡಿಯೊವನ್ನು ಗಮನಿಸಿದ್ದೇವೆ ಮತ್ತು ಅದು ಅಧಿಕೃತವೇ ಅಥವಾ ತಿರುಚಲಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಯಾವುದೇ ಜಾತಿ ಅಥವಾ ಸಮುದಾಯದ ವಿರುದ್ಧ ಕ್ರಮಕೈಗೊಳ್ಳುವ ಉದ್ದೇಶವನ್ನು ಪೊಲೀಸರು ಹೊಂದಿರಲಿಲ್ಲ ಎಂದು ಠಾಣಾಧಿಕಾರಿ ಲಿಲ್ಹರೆ ಹೇಳುತ್ತಾರೆ. “ತನಿಖೆಯ ಫಲಿತಾಂಶದ ಆಧಾರದ ಮೇಲೆ ನೀತಿ ನಿಯಮಗಳಿಗನುಸಾರವಾಗಿ ಕ್ರಮ ಕೈಗೊಳ್ಳಲಾಗುತ್ತೇವೆ. ಪೊಲೀಸರು ಯಾವುದೇ ಧರ್ಮ ಅಥವಾ ಗುಂಪನ್ನು ಪ್ರತಿನಿಧಿಸುವುದಿಲ್ಲ. ಐಪಿಸಿ, ಸಿಆರ್‌ಪಿಸಿ, ಬಿಎನ್‌ಎಸ್ ಮತ್ತು ಬಿಎನ್‌ಎಸ್‌ಎಸ್ ಅಡಿಯಲ್ಲಿ ಆದೇಶಿಸಿದಂತೆ ನಾವು ನಮ್ಮ ಕರ್ತವ್ಯವನ್ನು ಮಾಡುತ್ತಿದ್ದೇವೆ. ನಾವು ಬಳಸುವ ಯಾವುದೇ ಭಾಷೆ ಅಥವಾ ಪರಿಭಾಷೆಯು ಕಾನೂನು ನಿಬಂಧನೆಗಳಿಗೆ ಕಟ್ಟುನಿಟ್ಟಾಗಿರುತ್ತದೆ” ಎಂದಿದ್ದಾರೆ.

ಪೊಲೀಸರು ಕಾನೂನು ಪ್ರಕ್ರಿಯೆಯ ಅನುಸರಣೆಯನ್ನು ಒತ್ತಿಹೇಳುತ್ತಿದ್ದರೂ, “ಲವ್ ಜಿಹಾದ್” ಎಂಬ ಪದವು  ಸಾರ್ವಜನಿಕ ಭಾಷಣದಲ್ಲಿ ಸ್ಥಿರವಾಗಿ ನುಸುಳಿದೆ. ಇದನ್ನು ರಾಜಕೀಯ ನಾಯಕರು ಮತ್ತು ಮಾಧ್ಯಮಗಳು ಮುಕ್ತವಾಗಿ ಬಳಸುತ್ತಾ ವಿವಾದವನ್ನು ಹುಟ್ಟು ಹಾಕಲಾಗುತ್ತಿದೆ.

ಭೋಪಾಲ್ ಸಂಸದ ಅಲೋಕ್ ಶರ್ಮಾ ಅವರು ಮಾತನಾಡಿ, “ನಾವು ಪಟ್ಟಿಯನ್ನು ತಯಾರಿಸುತ್ತಿದ್ದೇವೆ ಮತ್ತು ಅದನ್ನು ಪೊಲೀಸರಿಗೆ ಸಲ್ಲಿಸುತ್ತೇವೆ. ಪೊಲೀಸರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ, ಕಾನೂನು ತನ್ನ ಕೆಲಸವನ್ನು ಮಾಡುತ್ತದೆ ಮತ್ತು ಮಧ್ಯಪ್ರದೇಶದಲ್ಲಿ ಡಾ. ಮೋಹನ್ ಯಾದವ್ ನೇತೃತ್ವದ ಸರ್ಕಾರವು ‘ಲವ್ ಜಿಹಾದ್’ ಅಥವಾ ‘ಭೂ ಜಿಹಾದ್‌’ನಲ್ಲಿ ತೊಡಗಿಸಿಕೊಳ್ಳಲು ಯಾರಿಗೂ ಅನುಮತಿ ನೀಡುವುದಿಲ್ಲ. ಅಂತಹ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ” ಎಂದಿದ್ದಾರೆ.

ಶರ್ಮಾ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ”ಲವ್ ಜಿಹಾದ್‌”ನಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದವರಿಗೆ ಶಿಕ್ಷೆಯ ರೂಪವಾಗಿ ಅವರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ಅವರು ಸಾರ್ವಜನಿಕವಾಗಿ ಒತ್ತಾಯಿಸಿ ವಿವಾದಕ್ಕೊಳಗಾಗಿದ್ದರು. ಮಧ್ಯಪ್ರದೇಶದ ಸಚಿವ ವಿಶ್ವಾಸ್ ಸಾರಂಗ್ ಅವರು ಇದೇ ರೀತಿಯ ಭಾಷಣ ಮಾಡಿದ್ದರು. “ಲವ್ ಜಿಹಾದ್” ಮಾಡುವ ವ್ಯಕ್ತಿಗಳ ಎದೆಗೆ ಗುಂಡಿಕ್ಕಬೇಕು ಎಂದು ಈ ಹಿಂದೆ ಸಾರಂಗ್ ಹೇಳಿದ್ದರು.

ಕಳೆದ ತಿಂಗಳಿನಲ್ಲಿ ಭೋಪಾಲ್ ನಿವಾಸಿಯೊಬ್ಬರು ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ “ಲವ್ ಜಿಹಾದ್” ಎಂಬ ಪದವನ್ನು ಪ್ರಮುಖ ಹಿಂದಿ ದಿನಪತ್ರಿಕೆಗಳು ಬಳಸುವುದರ ವಿರುದ್ಧ ಅರ್ಜಿ ಸಲ್ಲಿಸಿದರು. ಅತ್ಯಾಚಾರ ಪ್ರಕರಣವೊಂದಕ್ಕೆ ಕೋಮುವಾದದ ದೃಷ್ಟಿಕೋನವನ್ನು ನೀಡಿದ್ದಾರೆ ಮತ್ತು ಹಾಗೆ ಮಾಡುವುದರ ಮೂಲಕ ಅಪರಾಧವನ್ನು ಇಡೀ ಮುಸ್ಲಿಂ ಸಮುದಾಯಕ್ಕೆ ಜೋಡಿಸಿದ್ದಾರೆ ಎಂದು ಆರೋಪಿಸಿದ್ದರು. ಜೂನ್ 19ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ವಕೀಲ ದೀಪಕ್ ಬುಂಡೆಲೆ ದಿ ವೈರ್‌ಗೆ ತಿಳಿಸಿದ್ದಾರೆ.

ಇಂಗ್ಲೀಷ್ ಮೂಲ: ದಿ ವೈರ್

ಕನ್ನಡಕ್ಕೆ: ಪೃಥ್ವಿ ಕಣಸೋಗಿ

ಮಹಿಳೆಯರು ಮೈಗಂಟಿದ ಉಡುಪು ಧರಿಸುವುದು ನನಗೆ ಇಷ್ಟವಿಲ್ಲ: ಬಿಜೆಪಿ ಸಚಿವ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ; ವೀಡಿಯೊ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...