Homeಕರ್ನಾಟಕಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ಆರೋಪ: 'ಸೌಜನ್ಯಾ ನ್ಯಾಯಕ್ಕಾಗಿ ಹೋರಾಟ ಸಮಿತಿ'ಯಿಂದ ತುರ್ತು ಕರೆ!

ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ಆರೋಪ: ‘ಸೌಜನ್ಯಾ ನ್ಯಾಯಕ್ಕಾಗಿ ಹೋರಾಟ ಸಮಿತಿ’ಯಿಂದ ತುರ್ತು ಕರೆ!

- Advertisement -
- Advertisement -

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಗಳ ಆರೋಪಗಳು ಇಡೀ ದೇಶವನ್ನು ಬೆಚ್ಚಿ ಬೀಳಿಸಿವೆ. “ಸೌಜನ್ಯಾ ನ್ಯಾಯಕ್ಕಾಗಿ ಹೋರಾಟ ಸಮಿತಿ”ಯು ಮಾಧ್ಯಮ, ನಾಗರಿಕ ಸಮಾಜ, ಮಾನವ ಹಕ್ಕುಗಳ ಸಂಸ್ಥೆಗಳು ಹಾಗೂ ಪ್ರಜ್ಞಾವಂತ ನಾಗರಿಕರಿಗೆ ತುರ್ತು ಮನವಿ ಮಾಡಿದೆ. ಇದು ಕೇವಲ ಒಂದು ಹಗರಣವಲ್ಲ, ಬದಲಿಗೆ “ಪವಿತ್ರ ದೇವಾಲಯದ ಪಟ್ಟಣದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಿದ ಒಂದು ಭಯಾನಕ ಮಾನವ ಹಕ್ಕುಗಳ ಕಥೆ” ಎಂದು ಸಮಿತಿ ಬಣ್ಣಿಸಿದೆ.

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಭೀಕರ ಘಟನೆಗಳು ದೇಶದ ಆತ್ಮಸಾಕ್ಷಿಯನ್ನೇ ತಟ್ಟಿವೆ. 1995ರಿಂದ 2014 ರವರೆಗೆ ದೇವಸ್ಥಾನದಲ್ಲಿ ನೈರ್ಮಲ್ಯ ಕೆಲಸಗಾರನಾಗಿ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬರು ನೀಡಿರುವ ಹೇಳಿಕೆ ದೇಶವನ್ನು ಬೆಚ್ಚಿ ಬೀಳಿಸಿದೆ ಎಂದು ಸಮಿತಿ ತಿಳಿಸಿದೆ. ಪ್ರಭಾವಿ ವ್ಯಕ್ತಿಗಳ ಬೆದರಿಕೆಗೆ ಒಳಗಾಗಿ, ಲೈಂಗಿಕ ದೌರ್ಜನ್ಯಕ್ಕೊಳಗಾದ ನೂರಾರು ಮಹಿಳೆಯರು ಮತ್ತು ಹೆಣ್ಣುಮಕ್ಕಳ ಶವಗಳನ್ನು ಹೂಳಲು ಮತ್ತು ಸುಡಲು ಒತ್ತಾಯಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ನೇತ್ರಾವತಿ ನದಿಯ ಬಳಿ ಈ ಅಮಾನವೀಯ ಕೃತ್ಯಗಳು ನಡೆದಿವೆ. ಈ ಶವಗಳು ಹೆಚ್ಚಾಗಿ ಬಟ್ಟೆಯಿಲ್ಲದ, ಅತ್ಯಾಚಾರಕ್ಕೊಳಗಾದ, ಕತ್ತು ಹಿಸುಕಿರುವ, ಸುಟ್ಟಗಾಯಗಳ ಅಥವಾ ಆಸಿಡ್ ದಾಳಿಯ ಸ್ಪಷ್ಟ ಕುರುಹುಗಳನ್ನು ಹೊಂದಿದ್ದವು ಎಂದು ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ. ಗುರುತು ಸಿಗದಂತೆ ಮಾಡಲು ಮುಖಗಳನ್ನು ಸುಡಲಾಗುತ್ತಿತ್ತು ಮತ್ತು ವಿಧಿವಿಜ್ಞಾನ ಪುರಾವೆಗಳನ್ನು ಅಳಿಸಲು ಬಟ್ಟೆಗಳನ್ನು ನಾಶಪಡಿಸಲಾಗುತ್ತಿತ್ತು ಎಂದು ಸಾಕ್ಷಿ ಹೇಳಿರುವುದಾಗಿ ಎಂದು ಸಮಿತಿ ತಿಳಿಸಿದೆ.

ಸಮಿತಿಯು ನೀಡಿರುವ ಹೇಳಿಕೆಯ ಪ್ರಕಾರ, ನೈರ್ಮಲ್ಯ ಕೆಲಸಗಾರರಿಗೆ “ನಿನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ, ನಿನ್ನ ಶವವನ್ನು ಬೇರೆಯವರಂತೆ ಹೂಳುತ್ತೇವೆ” ಎಂದು ಬೆದರಿಕೆ ಹಾಕಲಾಗಿತ್ತು. ಹಿಂದಿನ ಕೆಲಸಗಾರರಿಗೂ ಇದೇ ರೀತಿ ಘೋರ ಅಂತ್ಯ ಎದುರಾಗಿತ್ತು ಎಂದು ಅವರಿಗೆ ಎಚ್ಚರಿಸಲಾಗಿತ್ತು. ಈ ವ್ಯಕ್ತಿ ಗುರುತಿಸಿದ ಸಮಾಧಿ ಸ್ಥಳಗಳಲ್ಲಿ ಅಸ್ಥಿಪಂಜರದ ಅವಶೇಷಗಳು, ತಲೆಬುರುಡೆಗಳು ಪತ್ತೆಯಾಗಿದ್ದು, ಇವುಗಳೊಂದಿಗೆ ಆಧಾರ್, ಮತದಾರರ ಗುರುತಿನ ಚೀಟಿ, ಮತ್ತು ಹಳೆಯ ದೇವಾಲಯದ ಗುರುತಿನ ಚೀಟಿಗಳಂತಹ ಗುರುತಿನ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

“ಈ ದೂರಿನಲ್ಲಿ ನಾನು ಆರೋಪಿಸಿರುವವರು ಧರ್ಮಸ್ಥಳ ದೇವಸ್ಥಾನದ ಆಡಳಿತ ಮತ್ತು ಅದರ ಸಿಬ್ಬಂದಿಗೆ ಸಂಬಂಧಿಸಿದ್ದಾರೆ. ಶವಗಳನ್ನು ಹೂಳಲು ನನಗೆ ಸೂಚನೆ ನೀಡಿದವರು ಅವರೇ, ಮತ್ತು ಅವರು ನನಗೆ ನಿರಂತರವಾಗಿ ಸಾವಿನ ಬೆದರಿಕೆ ಹಾಗೂ ಹಿಂಸೆಗೆ ಒಳಪಡಿಸಿದರು,” ಎಂದು ಆ ಪ್ರತ್ಯಕ್ಷದರ್ಶಿ ಸ್ಪಷ್ಟಪಡಿಸಿದ್ದಾರೆ ಎಂದು ಸಮಿತಿ ಉಲ್ಲೇಖಿಸಿದೆ. ಸಾಕ್ಷಿ ಸಂರಕ್ಷಣಾ ಕಾಯ್ದೆ 2018ರ ಅಡಿಯಲ್ಲಿ ಕಾನೂನು ರಕ್ಷಣೆ ಸಿಕ್ಕರೆ, ಅಪರಾಧಿಗಳನ್ನು ಹೆಸರಿಸಲು ಮತ್ತು ಸಮಾಧಿ ಸ್ಥಳಗಳಿಗೆ ತನಿಖಾಧಿಕಾರಿಗಳನ್ನು ಕರೆದೊಯ್ಯಲು ಅವರು ಸಿದ್ಧರಿರುವುದಾಗಿ ಸಮಿತಿ ತಿಳಿಸಿದೆ.

2025ರ ಜುಲೈ 3ರಂದು ಔಪಚಾರಿಕ ಕ್ರಿಮಿನಲ್ ದೂರು ದಾಖಲಾಗಿದ್ದು, ಜುಲೈ 4ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಅಸ್ಥಿಪಂಜರದ ಅವಶೇಷಗಳು ಮತ್ತು ಛಾಯಾಚಿತ್ರಗಳನ್ನು ವಶಪಡಿಸಿಕೊಂಡು, ವಿಧಿವಿಜ್ಞಾನ ತಂಡಗಳೊಂದಿಗೆ ಸಮಾಲೋಚಿಸಿದ್ದಾರೆ. ಜುಲೈ 11ರಂದು ಮಾಹಿತಿ ನೀಡಿದ ವ್ಯಕ್ತಿ ತನ್ನ ಹೇಳಿಕೆಯನ್ನು ದಾಖಲಿಸಲು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ/ಜೆಎಂಎಫ್‌ಸಿ ಮುಂದೆ ಹಾಜರಾಗಿದ್ದರು. ಅವರಿಗೆ ರಾಜ್ಯ ಯೋಜನೆಯ ಮೂಲಕ ಸಾಕ್ಷಿ ರಕ್ಷಣೆ ನೀಡಲಾಗಿದ್ದರೂ, ಜುಲೈ 16, 2025 ರಂದು ಆ ವ್ಯಕ್ತಿ ತಮ್ಮ ವಕೀಲರು ಮತ್ತು ಮಾಧ್ಯಮದವರೊಂದಿಗೆ ಆರೋಪಿತ ಸಮಾಧಿ ಸ್ಥಳಕ್ಕೆ ಹೋದಾಗ, ಪೊಲೀಸರು ಸ್ಥಳದಲ್ಲಿ ಇರಲಿಲ್ಲ. ಸ್ಥಳವನ್ನು ಸುತ್ತುವರಿಯದೆ ಬಹಿರಂಗವಾಗಿ ಬಿಡಲಾಗಿದ್ದು, ಯಾವುದೇ ರಕ್ಷಣೆ ನೀಡಲಾಗಿರಲಿಲ್ಲ. ಅಚ್ಚರಿ ಎಂದರೆ, ಪೊಲೀಸರು ನಂತರ ಸಾಕ್ಷಿ “ಕಾಣೆಯಾಗಿದ್ದಾನೆ” ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಇದನ್ನು ಸಾಕ್ಷಿಯ ವಕೀಲರು ತಕ್ಷಣವೇ ನಿರಾಕರಿಸಿದ್ದಾರೆ. ಈ ನಿರ್ಲಕ್ಷ್ಯ ಸಾಕ್ಷಿಯ ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.

ಈ ಬೆಳವಣಿಗೆಯನ್ನು “ನಿರ್ಲಕ್ಷ್ಯವಲ್ಲ – ಇದು ಉದ್ದೇಶಪೂರ್ವಕ ಬೇಜವಾಬ್ದಾರಿತನ” ಎಂದು ಬಲವಾಗಿ ಹೇಳಲಾಗಿದೆ. ಈ ವ್ಯವಸ್ಥಿತ ನಿರ್ಲಕ್ಷ್ಯವು ಮಾಹಿತಿ ನೀಡಿದ ವ್ಯಕ್ತಿ, ಅವರ ಕುಟುಂಬ, ವಕೀಲರು ಮತ್ತು ಇತ್ತೀಚೆಗೆ ಮುಂದೆ ಬಂದ ಇತರ ಸಂತ್ರಸ್ತರ ಕುಟುಂಬ ಸದಸ್ಯರ ಜೀವಕ್ಕೆ ದೊಡ್ಡ ಅಪಾಯವನ್ನುಂಟುಮಾಡಿದೆ. ಇದು ಕೇವಲ ಒಂದು ಆಕಸ್ಮಿಕ ಘಟನೆಯಲ್ಲ, ಬದಲಿಗೆ ಬೇಕು ಬೇಕೆಂದೇ ನ್ಯಾಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.

ಈ ಪ್ರಕರಣದಲ್ಲಿ ರಾಜ್ಯ ಆಡಳಿತ ಮತ್ತು ಪೊಲೀಸರ ಸಂಪೂರ್ಣ ವೈಫಲ್ಯವನ್ನು ಸಮಿತಿ ತೀವ್ರವಾಗಿ ಖಂಡಿಸಿದೆ. ತಕ್ಷಣದ ಕ್ರಮಕ್ಕಾಗಿ ಸಮಿತಿಯು ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿದೆ: ಅಲ್ಲದೆ, ಮಾಹಿತಿ ನೀಡಿದ ವ್ಯಕ್ತಿ, ಅವರ ಕುಟುಂಬ ಮತ್ತು ವಕೀಲರಿಗೆ ಸಾಕ್ಷಿ ಸಂರಕ್ಷಣಾ ಸುರಕ್ಷತೆಗಳ ಪ್ರಕಾರ ಪೂರ್ಣ 24×7 ರಕ್ಷಣೆ ನೀಡಬೇಕು. ಇದರ ಜೊತೆಗೆ, ವೇಗದ ವಿಧಿವಿಜ್ಞಾನ ಸ್ಥಳ ಸಂರಕ್ಷಣೆ ಮತ್ತು ಅಗೆದು ತೆಗೆಯುವಿಕೆಗೆ ಅನುಮೋದನೆಗಳನ್ನು ನೀಡಬೇಕು. ಹಾಗೆಯೇ, ಕಳೆದ 40 ವರ್ಷಗಳಲ್ಲಿ ಧರ್ಮಸ್ಥಳ/ಬೆಳ್ತಂಗಡಿ ಪ್ರದೇಶದಲ್ಲಿನ ಅಸ್ವಾಭಾವಿಕ ಸಾವುಗಳು ಮತ್ತು ಕಾಣೆಯಾದ ಮಹಿಳೆಯರ ಡೇಟಾವನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಸಮಿತಿ ಆಗ್ರಹಿಸಿದೆ. ಇಷ್ಟು ಮಾತ್ರವಲ್ಲದೆ ಸ್ಥಳೀಯ ಪ್ರಭಾವದಿಂದ ಮುಕ್ತವಾದ ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಉನ್ನತ-ಸಮಗ್ರತೆಯ ವಿಶೇಷ ತನಿಖಾ ತಂಡ (SIT)  ರಚನೆಯಾಗಿದ್ದನ್ನು ಸಮಿತಿ ಸ್ವಾಗತಿಸಿದೆ.

ಈ ಪ್ರಕರಣದ ಹಿನ್ನೆಲೆಯಾಗಿ 800 ವರ್ಷಗಳ ಇತಿಹಾಸವಿರುವ ಶ್ರೀ ಧರ್ಮಸ್ಥಳ ಮಂಜುನಾಥ ದೇವಾಲಯ ಮತ್ತು ಅದನ್ನು ನಿರ್ವಹಿಸುವ ಹೆಗ್ಗಡೆ ಕುಟುಂಬದ ಅಪಾರ ಪ್ರಭಾವವನ್ನು ಸಮಿತಿ ಎತ್ತಿ ತೋರಿಸಿದೆ. ಪದ್ಮಭೂಷಣ ಮತ್ತು ಪದ್ಮವಿಭೂಷಣ ಪುರಸ್ಕೃತರಾದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರಸ್ತುತ ಬಿಜೆಪಿ ನಾಮನಿರ್ದೇಶಿತ ರಾಜ್ಯಸಭಾ ಸಂಸದರಾಗಿದ್ದಾರೆ. ಅವರ ಕುಟುಂಬವು ವಾಣಿಜ್ಯ, ಶೈಕ್ಷಣಿಕ ಸಂಸ್ಥೆಗಳ ಬೃಹತ್ ಜಾಲವನ್ನು ನಿಯಂತ್ರಿಸುತ್ತದೆ. ಈ ಪ್ರಭಾವವು ಪ್ರಕರಣದ ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ಸಮಿತಿಯ ಕಳವಳ ವ್ಯಕ್ತಪಡಿಸಿದೆ.

2012ರಲ್ಲಿ ಧರ್ಮಸ್ಥಳದಲ್ಲಿ ನಡೆದ 17 ವರ್ಷದ ಸೌಜನ್ಯಾಳ ಕೊಲೆ ಪ್ರಕರಣದಲ್ಲಿ ಹೆಗ್ಗಡೆ ಕುಟುಂಬ ಸದಸ್ಯರ ಹೆಸರು ಕೇಳಿಬಂದಿತ್ತು. ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದರೂ, 2023ರಲ್ಲಿ ಆರೋಪಿಯನ್ನು ಖುಲಾಸೆಗೊಳಿಸಲಾಯಿತು. ನಿಜವಾದ ಅಪರಾಧಿಗಳು ದೇವಾಲಯದ ಆಡಳಿತಕ್ಕೆ ಸಂಬಂಧಿಸಿದವರೇ ಎಂದು ಸೌಜನ್ಯಾ ಕುಟುಂಬದವರು ಗಂಭೀರವಾಗಿ ಆರೋಪಿಸಿದ್ದರು, ಆದರೆ ಅವರ ಮಾತುಗಳಿಗೆ ಕಿವಿಗೊಡಲಾಗಿಲ್ಲ. ಈ ಪ್ರಕರಣ ನ್ಯಾಯ ಸಿಗದೆ ಅಂತ್ಯಗೊಂಡಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

2025ರ ಆರಂಭದಲ್ಲಿ ಕನ್ನಡ ಯೂಟ್ಯೂಬರ್ ಸಮೀರ್ ಎಂ.ಡಿ. ಅವರು ಈ ಪ್ರಕರಣದ ಕುರಿತು ಬಿಡುಗಡೆ ಮಾಡಿದ ವಿಡಿಯೋಗಳು ಜನರ ಗಮನ ಸೆಳೆದವು. ಆದರೆ, “ತಪ್ಪು ಮಾಹಿತಿ ನೀಡಿದೆ” ಎಂಬ ಆರೋಪದಡಿ ಈ ವಿಡಿಯೋಗಳನ್ನು ಅಳಿಸಿಹಾಕಲಾಯಿತು ಮತ್ತು ಸಮೀರ್ ವಿರುದ್ಧ ಪ್ರಕರಣ ದಾಖಲಿಸಲಾಯಿತು. ನ್ಯಾಯಾಲಯದ ಆದೇಶದ ನೆಪದಲ್ಲಿ 2000ಕ್ಕೂ ಹೆಚ್ಚು ವಿಡಿಯೋಗಳನ್ನು ತೆಗೆದುಹಾಕಿರುವುದು “ವ್ಯವಸ್ಥಿತ ಸೆನ್ಸಾರ್‌ಶಿಪ್ ಅಭಿಯಾನ” ಎಂದು ಸಮಿತಿ ಬಲವಾಗಿ ಆಕ್ಷೇಪಿಸಿದೆ. ಸ್ಥಳೀಯ ಅಧಿಕಾರಿಗಳು ಮತ್ತು ಮಾಜಿ ಬಿಜೆಪಿ ನಾಯಕರು ಆರೋಪಗಳನ್ನು ನಿರಾಕರಿಸಿದರೂ, ಈ ಪ್ರದೇಶದಲ್ಲಿ ನೂರಾರು ಅಸ್ವಾಭಾವಿಕ ಸಾವುಗಳು ನಡೆದಿರುವುದನ್ನು ಅವರು ಅಲ್ಲಗಳೆಯುತ್ತಿಲ್ಲ. ಆದರೂ, ಯಾವುದೇ ಸಾಂಸ್ಥಿಕ ಸಂಪರ್ಕವನ್ನು ನಿರಾಕರಿಸುತ್ತಿರುವುದು ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಮಿತಿ ಗಮನಸೆಳೆದಿದೆ.

ಮಾಜಿ ಸಿಬಿಐ ಉದ್ಯೋಗಿ ಸುಜಾತಾ ಭಟ್ ಅವರು ತಮ್ಮ ಮಗಳು ಅನನ್ಯಾ ಭಟ್ ಅವರ ಅಸ್ಥಿಪಂಜರದ ಅವಶೇಷಗಳನ್ನು ಮರಳಿ ಪಡೆಯಲು ಪೊಲೀಸ್ ದೂರು ದಾಖಲಿಸಿದ್ದಾರೆ. ಮಣಿಪಾಲದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಅನನ್ಯಾ, ಎರಡು ದಶಕಗಳ ಹಿಂದೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು. ಈ ಬೆಳವಣಿಗೆಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ ಎಂದು ಸಮಿತಿ ಹೇಳಿದೆ.

“ನಮ್ಮೊಂದಿಗೆ ಕೈಜೋಡಿಸಿರಿ. ಈಗಲೇ ಸಾಕ್ಷಿಯಾಗಿರಿ. ಸತ್ಯದೊಂದಿಗೆ ಸಮಾಧಿಗಳು ಹೂಳುವುದನ್ನು ತಡೆಯಿರಿ,” ಎಂದು ಸಮಿತಿಯು ಹೃದಯಪೂರ್ವಕವಾಗಿ ಮನವಿ ಮಾಡಿದೆ. ಈ ಘೋರ ಅಪರಾಧಗಳನ್ನು ಮುಚ್ಚಿಹಾಕಲು ಧರ್ಮ, ಜಾತಿ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸಮಿತಿ ಬಲವಾಗಿ ನಂಬಿದೆ. ಒಬ್ಬಂಟಿ ದಲಿತ ನೈರ್ಮಲ್ಯ ಕೆಲಸಗಾರನ ಧೈರ್ಯವು ನಮ್ಮೆಲ್ಲರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ಈ ಪ್ರಕರಣದಲ್ಲಿ ನ್ಯಾಯ ಸಿಗದಿದ್ದರೆ, ಅಪರಾಧಿಗಳು ನಿರಂಕುಶವಾಗಿ ಮುಂದುವರೆಯಲು ನಾವು ಅವಕಾಶ ನೀಡಿದಂತೆ. ಮುಂದಿನ ಬಲಿಪಶುಗಳ ರಕ್ತಪಾತಕ್ಕೆ ನಾವೇ ಕಾರಣರಾಗುತ್ತೇವೆ ಎಂದು ಸಮಿತಿ ಸ್ಪಷ್ಟಪಡಿಸಿದೆ.

ಧರ್ಮಸ್ಥಳದಲ್ಲಿ ಬಯಲಿಗೆ ಬಂದಿರುವ ಅತ್ಯಾಚಾರ ಮತ್ತು ಕೊಲೆಗಳ ಸಮಗ್ರ ತನಿಖೆಗಾಗಿ ಸಿಟ್‌ ರಚನೆಗೆ ಆಗ್ರಹಿಸಿ ಜು.21 ರಾಜ್ಯಾದ್ಯಂತ ಪ್ರತಿಭಟನೆ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...