Homeಅಂತರಾಷ್ಟ್ರೀಯನಿಮಿಷಾ ಪ್ರಿಯಾ ಮರಣದಂಡನೆ ರದ್ದಾಗಿದೆ: ಡಾ. ಕೆ.ಎ ಪೌಲ್ ಹೇಳಿಕೆ

ನಿಮಿಷಾ ಪ್ರಿಯಾ ಮರಣದಂಡನೆ ರದ್ದಾಗಿದೆ: ಡಾ. ಕೆ.ಎ ಪೌಲ್ ಹೇಳಿಕೆ

- Advertisement -
- Advertisement -

ಯೆಮನ್‌ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ ರದ್ದಾಗಿದೆ ಎಂದು ಗ್ಲೋಬಲ್ ಪೀಸ್ ಇನಿಶಿಯೇಟಿವ್‌ನ ಸಂಸ್ಥಾಪಕ ಡಾ. ಕೆ.ಎ ಪೌಲ್ ಹೇಳಿದ್ದಾರೆ.

ಆದರೆ, ಈ ಕುರಿತು ಭಾರತ ಸರ್ಕಾರ, ನಿಮಿಷಾ ಪ್ರಿಯಾ ಕುಟುಂಬಸ್ಥರು ಮತ್ತು ಮರಣದಂಡನೆ ಮುಂದೂಡಿಕೆ ಕಾರಣರಾದ ಗ್ರ್ಯಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ಕಚೇರಿಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಇದುವರೆಗೂ ಹೊರ ಬಂದಿಲ್ಲ.

ಸೋಮವಾರ (ಜು.21) ರಾತ್ರಿ ಯೆಮೆನನ್‌ನ ಸನಾದಿಂದ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ ಪೌಲ್ ಅವರು, ಯೆಮೆನ್ ನಾಯಕತ್ವದ ಶಕ್ತಿಯುತ ಮತ್ತು ಪ್ರಾರ್ಥನಾಪೂರ್ವಕ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದಿದ್ದಾರೆ.

“ಇದನ್ನು ದೊಡ್ಡ ಯಶಸ್ಸಿಗೆ ಕೊಂಡೊಯ್ಯುವಲ್ಲಿ ಸಹಕರಿಸಿದ ಎಲ್ಲಾ ನಾಯಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ದೇವರ ದಯೆಯಿಂದ, ನಿಮಿಷಾ ಪ್ರಿಯಾ ಅವರ ಮರಣದಂಡನೆ ರದ್ದುಗೊಳಿಸಲಾಗಿದೆ. ಅವರನ್ನು ಬಿಡುಗಡೆ ಮಾಡಿ ಭಾರತಕ್ಕೆ ಕರೆದೊಯ್ಯಲಾಗುವುದು. ನಿಮಿಷಾ ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲು ರಾಜತಾಂತ್ರಿಕರನ್ನು ಕಳುಹಿಸಲು ತಯಾರಿ ನಡೆಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ,” ಎಂದು ಹೇಳಿದ್ದಾರೆ.

ನಿಮಿಷಾ ಅವರ ಮರಣದಂಡನೆ ರದ್ದಾಗಿರುವುದನ್ನು ಖಚಿತಪಡಿಸಿ ಯಾವುದೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿಲ್ಲ.

ಇಸ್ರೇಲ್ ದಿಗ್ಬಂಧನ ಪರಿಣಾಮ: ಗಾಜಾದಲ್ಲಿ 24 ಗಂಟೆಗಳಲ್ಲಿ ಹಸಿವಿನಿಂದ 19 ಸಾವುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾಮೂಹಿಕ ಮತಾಂತರಕ್ಕೆ ಕಾರಣವಾದವರಿಗೆ ಜೀವಾವಧಿ ಶಿಕ್ಷೆ; ಮಸೂದೆ ಅಂಗೀಕರಿಸಿದ ಛತ್ತೀಸ್‌ಗಢ ವಿಧಾನಸಭೆ

ಬಲವಂತ, ಪ್ರಚೋದನೆ, ವಂಚನೆ ಅಥವಾ ತಪ್ಪು ನಿರೂಪಣೆಯ ಮೂಲಕ ನಡೆಸಲಾಗುವ ಧಾರ್ಮಿಕ ಮತಾಂತರಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಛತ್ತೀಸ್‌ಗಢ ವಿಧಾನಸಭೆಯು ಗುರುವಾರ ಅಂಗೀಕರಿಸಿದೆ. ಸಾಮೂಹಿಕ ಮತಾಂತರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಸೇರಿದಂತೆ...

6 ವರ್ಷಗಳ ಜೈಲುವಾಸದ ನಂತರ ಮಧ್ಯಂತರ ಜಾಮೀನು; ಜೈಲಿನಿಂದ ಹೊರಬಂದ ಶಾರ್ಜೀಲ್ ಇಮಾಮ್‌

ಸಹೋದರನ ಮದುವೆಯಲ್ಲಿ ಭಾಗವಹಿಸಲು ಮತ್ತು ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ದೆಹಲಿ ನ್ಯಾಯಾಲಯವು 10 ದಿನಗಳ ಮಧ್ಯಂತರ ಜಾಮೀನು ನೀಡಿದ ನಂತರ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಶುಕ್ರವಾರ ಸುಮಾರು ಆರು ವರ್ಷಗಳ...

ಉತ್ತಮ್ ನಗರದಲ್ಲಿ ಗೌರವಯುತ-ಶಾಂತಿಯುತ ಈದ್ ಆಚರಿಸುವಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಎಂದು ದೆಹಲಿ ಹೈಕೋರ್ಟ್ ನಿರ್ದೇಶನ

ರಾಷ್ಟ್ರ ರಾಜಧಾನಿಯ ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ನಡುವೆ, ಸಮುದಾಯಗಳ ನಡುವೆ ಶಾಂತಿ ಕಾಪಾಡಿಕೊಳ್ಳುವ ಜೊತೆಗೆ ಶಾಂತಿಯುತ ಮತ್ತು ಘನತೆಯ ಈದ್ ಆಚರಣೆಯನ್ನು ಖಚಿತಪಡಿಸಿಕೊಳ್ಳಲು ಕಾನೂನಿನಡಿಯಲ್ಲಿ ಅನುಮತಿಸಬಹುದಾದ ಎಲ್ಲಾ...

ಕಥುವಾ ಪ್ರಕರಣ: ವೈಯಕ್ತಿಕ ಭದ್ರತೆ ಕಡಿತ; ‘ಮಗಳು ಶಾಲೆಗೆ ಹೋಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದ ವಕೀಲೆ ದೀಪಿಕಾ ಪುಷ್ಕರ್ ನಾಥ್ 

2018 ರ ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಂಟು ವರ್ಷದ ಬಾಲಕಿಯ ಕುಟುಂಬವನ್ನು ಪ್ರತಿನಿಧಿಸಿದ್ದ ಜಮ್ಮುವಿನ ಪ್ರಮುಖ ವಕೀಲೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ದೀಪಿಕಾ ಪುಷ್ಕರ್ ನಾಥ್, ತಮ್ಮ ವೈಯಕ್ತಿಕ...

ಒಡಿಶಾ| ದಲಿತ ವ್ಯಕ್ತಿಗೆ ಭೂಮಿ ಮಾರಾಟ ಮಾಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಸಾಮಾಜಿಕ ಬಹಿಷ್ಕಾರದ ಆತಂಕಕಾರಿ ಪ್ರಕರಣವೊಂದು ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಯ ಕಬಿಸೂರ್ಯನಗರ ಪೊಲೀಸ್ ವ್ಯಾಪ್ತಿಯಲ್ಲಿರುವ ಅರ್ಜುನಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪರಿಶಿಷ್ಟ ಜಾತಿ (ಎಸ್‌ಸಿ) ಗೆ ಸೇರಿದ ವ್ಯಕ್ತಿಗೆ ಭೂಮಿ ಮಾರಾಟ ಮಾಡಿದ್ದಕ್ಕಾಗಿ...

‘ಕೇವಲ ಗಾಳಿಯಲ್ಲಿ ಕ್ರಾಂತಿ ಸಾಧ್ಯವಿಲ್ಲ, ನೆಲದ ಘಟಕವೂ ಬೇಕು’; ಇರಾನ್ ಮೇಲಿನ ಯುದ್ಧದಲ್ಲಿ ‘ಭೂ-ದಾಳಿ’ಯ ಸುಳಿವು ನೀಡಿದ ನೆತನ್ಯಾಹು

‘ನೀವು ಗಾಳಿಯಿಂದ ಕ್ರಾಂತಿಗಳನ್ನು ಮಾಡಲು ಸಾಧ್ಯವಿಲ್ಲ’ ಈ ಹೇಳಿಕೆಯ ಮೂಲಕ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧಕ್ಕೆ 'ನೆಲದ ಅಂಶ'ದ ಸಾಧ್ಯತೆಯ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸುಳಿವು ನೀಡಿದ್ದಾರೆ ಎನ್ನುವ ಸುದ್ದಿ...

ನಕಲಿ ಆಪಲ್ ಪರಿಕರಗಳ ದಂಧೆ ಭೇದಿಸಿದ ಮುಂಬೈ ಪೊಲೀಸರು; ₹16.33 ಲಕ್ಷ ಮೌಲ್ಯದ ಸರಕುಗಳ ವಶ; ಆರು ಜನರ ವಿರುದ್ಧ ಪ್ರಕರಣ 

ಮುಂಬೈ: ನಕಲಿ ಬ್ರಾಂಡ್ ಸರಕುಗಳ ಮಾರಾಟದ ಮೇಲೆ ಪ್ರಮುಖ ದಾಳಿ ನಡೆಸಿರುವ ಮುಂಬೈ ಪೊಲೀಸರು, ಘಾಟ್ಕೋಪರ್ ಪೂರ್ವದಲ್ಲಿ ನಕಲಿ ಆಪಲ್ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಸಂಘಟಿತ ದಂಧೆಯನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ 16.33...

ಇರಾನ್ ನಮ್ಮ ದೀರ್ಘಕಾಲೀನ ಮಿತ್ರ ರಾಷ್ಟ್ರ; ವಿಶ್ವಾಸಾರ್ಹ ಪಾಲುದಾರರೊಂದಿಗೆ ನಿಲ್ಲಲು ವಿಫಲವಾದರೆ ಭಾರತಕ್ಕೆ ಭಾರಿ ನಷ್ಟ: ರಾಜ್ ಠಾಕ್ರೆ

ಸೂಕ್ತ ಸಮಯದಲ್ಲಿ ಕೇಂದ್ರ ಸರ್ಕಾರ ಇರಾನ್‌ಗೆ ಬೆಂಬಲ ನೀಡದಿರುವುದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.​ ಈ ಕುರಿತು ಗುರುವಾರ (ಮಾ.19) ಮಾತನಾಡಿರುವ ಅವರು, "ಇರಾನ್ ಭಾರತದ ದೀರ್ಘಕಾಲೀನ ಮಿತ್ರ...

ಕೇರಳ: 2026 ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಹಾಲಿ ಸಂಸದರು, ಲೈಂಗಿಕ ಪ್ರಕರಣದ ಆರೋಪಿಗಳಿಗಿಲ್ಲ ಸ್ಥಾನ

ತಿರುವನಂತಪುರಂ: ಬಹಳ ದಿನಗಳ ನಂತರ, ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಕೇರಳದ ಉಳಿದ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.  ಕಣ್ಣೂರು ಕಾರ್ಪೊರೇಷನ್‌ನ ಮಾಜಿ ಮೇಯರ್ ಟಿ.ಒ. ಮೋಹನನ್ ಅವರನ್ನು ಕಣ್ಣೂರಿನಲ್ಲಿ...

‘ನೀವು ಶಂಕಿತ’ : ಮುಹಮ್ಮದ್ ದೀಪಕ್‌ಗೆ ಉತ್ತರಾಖಂಡ ಹೈಕೋರ್ಟ್ ತರಾಟೆ!

ಇತ್ತೀಚೆಗೆ ಹಿಂದುತ್ವವಾದಿಗಳ ದಾಳಿಯಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿ ಶ್ಲಾಘನೆಗೆ ಪಾತ್ರರಾದ ಮುಹಮ್ಮದ್ ದೀಪಕ್ (ದೀಪಕ್ ಕುಮಾರ್) ಅವರನ್ನು ಉತ್ತರಾಖಂಡ ಹೈಕೋರ್ಟ್ ಗುರುವಾರ (ಮಾ.19) ತೀವ್ರ ತರಾಟೆಗೆ ತೆಗೆದುಕೊಂಡಿದೆ ಎಂದು barandbench.com ವರದಿ...