Homeಕರ್ನಾಟಕಭವ್ಯ ನರಸಿಂಹಮೂರ್ತಿ ಎಂಬ ದಿಟ್ಟ ಹುಡುಗಿಯ ಪ್ರಶ್ನೆಗಳಿಗೆ ಮೋದಿ-ಶಾ ಬಳಿ ಉತ್ತರವಿವೆಯೇ?

ಭವ್ಯ ನರಸಿಂಹಮೂರ್ತಿ ಎಂಬ ದಿಟ್ಟ ಹುಡುಗಿಯ ಪ್ರಶ್ನೆಗಳಿಗೆ ಮೋದಿ-ಶಾ ಬಳಿ ಉತ್ತರವಿವೆಯೇ?

ಸಂವಿಧಾನಕ್ಕೆ ಅಪಾಯ ಬಂದಿರುವ ಸಮಯದಲ್ಲಿ ಅದನ್ನು ಸಂರಕ್ಷಿಸುವುದು ನಮ್ಮ ನೈತಿಕ ಹೊಣೆಯಲ್ಲವೆ? ಅದಕ್ಕಾಗಿ ನಾನು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುತ್ತೇನೆ..

- Advertisement -
- Advertisement -

ಅಂದು ಡಿಸೆಂಬರ್‌ 19. CAA, NRC ವಿರುದ್ಧ ಕರ್ನಾಟಕದಲ್ಲಿ, ಅದರಲ್ಲಿಯೂ ಬೆಂಗಳೂರಿನಲ್ಲಿ ಪ್ರತಿಭಟಿಸಲು ಲಕ್ಷಾಂತರ ಜನ ಸಜ್ಜುಗೊಂಡಿದ್ದರು. ಗುಪ್ತಚರ ಇಲಾಖೆಯ ಮೂಲಕ ಮಾಹಿತಿ ಪಡೆದ ಬಿಜೆಪಿ ಸರ್ಕಾರ ಅದರ ಹಿಂದಿನ ರಾತ್ರಿಯೇ ಹಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿತು. ಬೆಂಗಳೂರು ಕಮಿಷನರ್‌ ಭಾಸ್ಕರ್‌ ರಾವ್‌ ಯಾರೂ ಪ್ರತಿಭಟನೆ ನಡೆಸುವಂತಿಲ್ಲ, ಆದೇಶ ಉಲ್ಲಂಘಿಸಿದರೆ ಜೈಲು ಗ್ಯಾರಂಟಿ ಎಂದು ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದರು…

ಇಂತಹ ಸಂದರ್ಭದಲ್ಲಿ ದಿಟ್ಟ ಹುಡುಗಿಯೊಬ್ಬಳು ಬೆಂಗಳೂರಿನಲ್ಲಿ ಏಕಾಂಗಿಯಾಗಿ ಗಾಂಧಿ ಫೋಟೊ ಇದ್ದ ಪೋಸ್ಟರ್‌ ಹಿಡಿದು CAA, NRC ವಿರುದ್ಧ ಪ್ರತಿಭಟನೆಗಿಳಿದಳು. ಪೊಲೀಸರಿಗೆ ಹೆದರದೆ ನೀವು ನನ್ನನ್ನು ಬಂಧಿಸುವಂತಿಲ್ಲ ಎಂದು ತಾಕೀತು ಮಾಡಿದ್ದಲ್ಲದೇ ಅಲ್ಲಿ ಆಕೆ ಇಂಗ್ಲಿಷ್‌ನಲ್ಲಿ ಮಾಡಿದ 3 ನಿಮಿಷಗಳ ಭಾಷಣ ದೇಶಾದ್ಯಂತ ವೈರಲ್‌ ಆಗಿದೆ. ತದನಂತರ ಎಂ.ಎಸ್‌ ಗೋಳ್ವಾಲ್ಕರ್‌, ಹಿಟ್ಲರ್‌ ಕುರಿತಂತೆ ಆಕೆ ಮಾಡಿದ ಇನ್ನೊಂದು ಭಾಷಣ ಕೂಡ ಮತ್ತೆ ವೈರಲ್‌ ಆಗಿದೆ. ಬಹಳ ಸ್ಪಷ್ಟ ಮಾತುಗಳಲ್ಲಿ ಸರ್ಕಾರದ ಪೌರತ್ವ ಕಾಯ್ದೆಯ ಹುನ್ನಾರಗಳನ್ನು ಬಯಲು ಮಾಡಿದ ಆಕೆ ಯಾರು, ಏನು ಎಂಬುದನ್ನು ತಿಳಿಯುವ ಮೊದಲ ಆಕೆಯ ಮೊದಲ ಮೂರು ನಿಮಿಷದ ಭಾಷಣ ಓದಿಬಿಡಿ.

“ನಾನು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧವಿದ್ದೇನೆ. ಈ ಕಾಯ್ದೆಯನ್ನು ಬಳಸಿಕೊಂಡು ಅಮಿತ್‌ ಶಾ ಮತ್ತು ನರೇಂದ್ರ ಮೋದಿಯವರು ಕೋಮುವಾದವನ್ನು ಕಾನೂನುಬದ್ದ, ಸಹಜ ಮತ್ತು ನೈಸರ್ಗಿಕಗೊಳಿಸಲು ಹೊರಟಿದ್ದಾರೆ. ಎಂ.ಎಸ್‌ ಗೋಳ್ವಾಲ್ಕರ್‌ ತನ್ನ ಪುಸ್ತಕವೊಂದರಲ್ಲಿ 60 ಲಕ್ಷ ಯಹೂದಿಗಳನ್ನು ಕೊಂದುದ್ದಕ್ಕಾಗಿ ನಾಝಿಗಳನ್ನು ಅಭಿನಂದಿಸಿದ್ದಾರೆ. ಗೋಳ್ವಾಲ್ಕರ್‌‌ರವರಿಂದ ಭಾರತೀಯರು ಕಲಿಯಬೇಕು. ಹಿಂದೂತ್ವವನ್ನು ಅನುಸರಿಸದವರಿಗೆ ಒತ್ತಾಯ ಮಾಡಿಯಾದರೂ ಸರಿಯೇ ಹಿಂದೂತ್ವವನ್ನುಒಪ್ಪಿಕೊಳ್ಳುವಂತೆ ಮಾಡಬೇಕು ಎಂದು ಬರೆದಿದ್ದಾರೆ. ಅದನ್ನೆ ಅಮಿತ್‌ ಶಾ ಅನುಸರಿಸಲು ಹೊರಟಿದ್ದಾರೆ.”

ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಅಮಿತ್‌ ಶಾ ದೇಶದ ಜನರ ಸೇವೆ ಮಾಡಲು ಬಂದಿರುವವರೆ ಹೊರತು ಡಿಕ್ಟೇಟ್‌ ಮಾಡಲು ಅಲ್ಲ. ನಮ್ಮ ಭವಿಷ್ಯಕ್ಕಾಗಿ ನಾವೆಲ್ಲರೂ ಇಂದು ಬೀದಿಗಿಳಿಯಬೇಕಾಗಿದೆ. ಈ ರೀತಿಯ ಕಾಯ್ದೆಗಳನ್ನು ತರುವ ಮೂಲಕ ಅವರು ಆರ್ಥಿಕ ಕುಸಿತವನ್ನು, ನಿರುದ್ಯೋಗದಂತಹ ನೈಜ ಸಮಸ್ಯೆಗಳಿಂದ ನಮ್ಮನ್ನು ದಿಕ್ಕುತಪ್ಪಿಸುತ್ತಿದ್ದಾರೆ. ನಾವು ಭಾರತೀಯರು, ನಮ್ಮ ದೇಶಕ್ಕೆ ಗೌರವವಿದೆ. ನಮ್ಮದು ಜಾತ್ಯಾತೀತ ರಾಷ್ಟ್ರ. ನನಗೆ ಎಲ್ಲಾ ಧರ್ಮದ ಸ್ನೇಹಿತರಿದ್ದಾರೆ. ನನ್ನ ದೇಶದ ಈ ಉದಾತ್ತ ಮೌಲ್ಯಗಳನ್ನು ಉಳಿಸಿಕೊಳ್ಳಲು ನಾನೊಬ್ಬಳೆ ಆದರೂ ಪರವಾಗಿಲ್ಲ ನಾನು ನಿಲ್ಲುತ್ತೇನೆ. ನನ್ನನ್ನು ಬಂಧಿಸಿದರೂ ಸಹ. ಇಂದು ಬೆಳಿಗ್ಗೆ ರಾಮಚಂದ್ರ ಗುಹಾರಂತ ಮಹಾನ್‌ ಲೇಖಕರನ್ನೆ ಅರೆಸ್ಟ್‌ ಮಾಡಿದ್ದಾರೆ ಅಂದರೆ ಇನ್ನು ನಮ್ಮದೇನು? ಅವರ ಜೊತೆ ನಾವು ನಿಲ್ಲುತ್ತೇವೆ. ಭಾರತದ ಜೊತೆ ನಾವು ನಿಲ್ಲುತ್ತೇವೆ.

ಸೆಕ್ಷನ್‌ 144 ಬ್ರಿಟೀಷ್‌ ಕಾನೂನು. ನಮ್ಮನ್ನು ತಡೆಯಲು ಅಮಿತ್‌ ಶಾ, ನರೇಂದ್ರ ಮೋದಿಯಿಂದ ತಡೆಯಲು ಸಾಧ್ಯವಿಲ್ಲ. ನಾವು ಇಬ್ಬರು ಇದ್ದೇವೆ. ನೀವು ನಮ್ಮನ್ನು ಬಂಧಿಸಲು ಸಾಧ್ಯವಿಲ್ಲ. ಪೊಲೀಸರೆ ನಿಮಗೂ ಮಕ್ಕಳಿದ್ದಾರೆ. ನರೇಂದ್ರ ಮೋದಿ ಸರ್ಕಾರ ಮಕ್ಕಳ ಶಿಕ್ಷಣದಿಂದ 3000 ಕೋಟಿ ರೂಗಳನ್ನು ಕಡಿತ ಮಾಡಿದೆ. ಇದರ ಬಗ್ಗೆ ದನಿಯೆತ್ತಬೇಕೋ ಇಲ್ಲವೋ?…

ಇವಿಷ್ಟು ಆಕೆಯ ಸ್ಪಷ್ಟ ನುಡಿಗಳು.. ಆಕೆಯ ಹೆಸರು ಭವ್ಯ ನರಸಿಂಹ ಮೂರ್ತಿ. ಯುಪಿಎಸ್ಸಿ ಪರೀಕ್ಷೆ ಮೇಲೆ ಕಣ್ಣಿಟ್ಟಿದ್ದ ಇವರು ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಮುಗಿಸಿ ’ಸಾರ್ವಜನಿಕ ಆಡಳಿತ’ ವಿಷಯದಲ್ಲಿ ಅಮೆರಿಕದ ಕೊಲಂಬಿಯಾ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನೂರು ವರ್ಷದ ಹಿಂದೆ ಅಂಬೇಡ್ಕರ್‌ರವರು ಮತ್ತು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಮಾ ಕೂಡ ಅದೇ ವಿವಿಯಲ್ಲಿ ಓದಿದ್ದೇ ನಾನು ಆ ವಿ.ವಿಯನ್ನು ಆಯ್ದುಕೊಳ್ಳಲು ಕಾರಣ ಎನ್ನುವುದು ಅವರ ಅಭಿಪ್ರಾಯ. ತದನಂತರ ವಿಶ್ವಸಂಸ್ಥೆಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಎಲ್ಲಾ ದೇಶಗಳು ಮಾಡಿರುವ ಕೆಲಸವನ್ನು ಕ್ರೋಢಿಕರಿಸುವ ’ಗ್ಲೋಬಲ್‌ ಡಾಟಾಬೇಸ್‌’ ರೂಪಿಸುವಲ್ಲಿ ಅವರು ಕೆಲಸ ಮಾಡಿದ್ದಾರೆ.

ನಂತರ ಅರಬ್‌ ರಾಷ್ಟ್ರಗಳಲ್ಲಿ ’ಲಿಂಗ ಆಧಾರಿತ ಹಿಂಸೆ’ ಅಂದರೆ 15 ಅರಬ್‌ ದೇಶಗಳಲ್ಲಿ ಮಹಿಳೆಯರ ಮೇಲಿನ ಹಿಂಸೆ ತಡೆಗಟ್ಟುವ ಕುರಿತು ಕೆಲಸ ಮಾಡಿದ್ದಾರೆ. ಆನಂತರ ಯುನಿಸೆಫ್‌ ವತಿಯಿಂದ ನೇಪಾಳದಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ಕೆಲಸ ಮಾಡಿದ ಅವರು ಕೊನೆಗೂ ತಮ್ಮ ಸ್ವಂತ ಸ್ಥಳ ಕರ್ನಾಟಕಕ್ಕೆ ಮರಳಿದರು. ಇಷ್ಟೆಲ್ಲಾ ಕೆಲಸಗಳ, ಹೋರಾಟದ ಅನುಭವದಿಂದ ಅವರು ತಮ್ಮ ಯುಪಿಎಸ್ಸಿ ಕನಸನ್ನು ಮರತೆಬಿಟ್ಟಿದ್ದರು ಮಾತ್ರವಲ್ಲ ತನ್ನ ಆದ್ಯತೆಯೇನಿದ್ದರು ಜನಪರ ಹೋರಾಟ ಮತ್ತು ಚಳವಳಿಗಳತ್ತ ಎನ್ನುತ್ತಾರೆ…

ನನ್ನ ವಿದ್ಯಾಭ್ಯಾಸದ ಅವಧಿಯಲ್ಲಿ ಓದಿದ ಹಲವು ಪುಸ್ತಕಗಳಲ್ಲಿ ಎಂ.ಎಸ್‌ ಗೋಳ್ವಾಲ್ಕರ್‌ ರವರ ಪುಸ್ತಕ ತುಂಬಾ ಕಾಡಿಸಿತು. ಅದರಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಯ ಅಂಶಗಳು ಭಾರತವನ್ನು ವಿಭಜಿಸುತ್ತವೆ ಎಂಬುದು ಅರಿವಾಯಿತು. ಅದೇ ಸಮಯದಲ್ಲಿ ಡಿಸೆಂಬರ್‌ 19ರಂದು ಈ ವಿಚಾರದ ಕುರಿತು ಹೋರಾಟ ಮಾಡಿದ ಪ್ರಖ್ಯಾತ ಇತಿಹಾಸಕಾರ ರಾಮಚಂದ್ರಗುಹಾರವರ ಬಂಧನದ ವಿಷಯ ತಿಳಿತು. ಆಗ ನಾನು ಕೂಡ ಹೋರಾಟಕ್ಕೆ ಹೊರಟೆ ಎನ್ನುತ್ತಾರೆ ಭವ್ಯ ನರಸಿಂಹಮೂರ್ತಿ..

ನಾನು ಕೊಲಂಬಿಯಾ ವಿವಿಯಲ್ಲಿ ಓದುವಾಗ ನಮ್ಮ ಲೈಬ್ರರಿಯಲ್ಲಿರುವ ಬಾಬಾಸಾಹೇಬ್‌ ಅಂಬೇಡ್ಕರ್‌ರವರ ಪ್ರತಿಮೆಯನ್ನು ನೋಡುತ್ತಿದ್ದೆ. ಇಷ್ಟೊಂದು ವೈವಿಧ್ಯತೆಯಿರುವ ನಮ್ಮ ಭಾರತವನ್ನು ಈ ಒಬ್ಬ ಮನುಷ್ಯ ಎಷ್ಟು ಚೆನ್ನಾಗಿ ಅರಿತು ಸಂವಿಧಾನ ಬರೆದಿದ್ದಾರೆ. ಇವತ್ತು ಭಾರತ ಪ್ರಪಂಚದಲ್ಲಿ ಉತ್ತಮ ಹೆಸರನ್ನು ಗಳಿಸಲು ಅದಕ್ಕೆ ಮುಖ್ಯ ಕಾರಣ ಅಂಬೇಡ್ಕರ್‌ ಮತ್ತು ಅವರು ರಚಿಸಿದ ಸಂವಿಧಾನ…

ಆ ಸಂವಿಧಾನಕ್ಕೆ ಅಪಾಯ ಬಂದಿರುವ ಸಮಯದಲ್ಲಿ ಅದನ್ನು ಸಂರಕ್ಷಿಸುವುದು ನಮ್ಮ ನೈತಿಕ ಹೊಣೆಯಲ್ಲವೆ? ಅದಕ್ಕಾಗಿ ನಾನು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುತ್ತೇನೆ ಎಂದು ಅವರು ಖಡಾಖಂಡಿತವಾಗಿ ಹೇಳುತ್ತಾರೆ

ಇನ್ನು ವೈರಲ್‌ ಆದ ಮತ್ತೊಂದು ವಿಡಿಯೋದಲ್ಲಿ ಅವರಾಡಿದ ಮಾತುಗಳ ಅನುವಾದ ಇಲ್ಲಿದೆ ನೋಡಿ.

ಸಿಎಎ ಮೂಲ ಎಲ್ಲಿದೆ? ಅಮಿತ್‌ ಶಾಗೆ ಎಂ.ಎಸ್‌ ಗೋಳ್ವಾಲ್ಕರ್‌ ದೇವರಾಗಿದ್ದಾರೆ. ಅವರು ಬರೆದ ಪುಸ್ತಕದಲ್ಲಿ ಈ ಚಿಂತನೆಯಿದೆ. ಸಿಎಎ ನಮ್ಮನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತದೆ. ಇದರಿಂದ ಹಿಂದುಗಳು ಸುರಕ್ಷಿತರು ಎಂದು ತಿಳಿದರೆ ಅದು ಸುಳ್ಳು. ಈಗ ಧರ್ಮದ ಆಧಾರದಲ್ಲಿ ಶೋಷಣೆ ನಂತರ ಲಿಂಗದ ಆಧಾರದಲ್ಲಿ, ನಂತರ ಜಾತಿಯ ಆಧಾರದಲ್ಲಿ ಶೋಷಿಸುತ್ತಾರೆ. ಹಿಂದೂ ಧರ್ಮದವರು ಕೂಡ ಇದಕ್ಕೆ ಬಲಿಪಶುಗಳು. ಹಾಗಾಗಿ ಹಿಂದು ಎಂಬ ಕಾರಣಕ್ಕೆ ನಾವು ಸುರಕ್ಷಿತರಲ್ಲ. ಭವಿಷ್ಯದ ಬಗ್ಗೆ, ನಿಮ್ಮ ಮಕ್ಕಳ ಬಗ್ಗೆ ಯೋಚಿಸಿ ಇದನ್ನು ವಿರೋಧಿಸಿ.

ಅವರು ಪಾಕಿಸ್ತಾನದ ಬಗ್ಗೆ ಮಾತಾಡುತ್ತಾರೆ. ನಮ್ಮದು ಜಾತ್ಯಾತೀತ ರಾಷ್ಟ್ರ ಅದಕ್ಕಾಗಿಯೇ ನಾವು ಅಮೆರಿಕದ ಜೊತೆ ಸ್ಪರ್ಧಿಸುತ್ತಿದ್ದೇವೆ, ಪಾಕಿಸ್ತಾನದ ಜೊತೆಗಲ್ಲ. ನಾವು ಆರ್ಥಿಕವಾಗಿ ಸ್ಪರ್ಧಿಸಬೇಕೆ ಹೊರತು ಧರ್ಮದ ಆಧಾರದಲ್ಲಿ ಅಲ್ಲ. ಇದುವರೆಗಿನ ಭಾರತದ ಅಭಿವೃದ್ದಿಯ ಇದೇ ಕಾರಣವಾಗಿದೆ. ಈ ಜನರು ನಮ್ಮ ದೇಶವನ್ನು 50 ವರ್ಷ ಹಿಂದಕ್ಕೆ ಎಳೆದೊಯ್ಯುತ್ತಿದ್ದಾರೆ. ನಾವು ಇಷ್ಟು ಅಭಿವೃದ್ದಿ ಹೊಂದಲು ಬಹಳಷ್ಟು ಜನ ಶ್ರಮಪಟ್ಟಿದ್ದಾರೆ. ನಾನಿಲ್ಲಿ ಒಬ್ಬ ಹುಡುಗಿಯಾಗಿ ನಿಂತು ಮಾತನಾಡುತ್ತಿರುವುದರ ಹಿಂದೆ ಸಾಕಷ್ಟು ಬೆವರು ಹರಿದಿದೆ. ಅದು ಕಳೆದ 50 ವರ್ಷಗಳ ಶ್ರಮವೇ ಹೊರತು ಕೇವಲ ಕಳೆದ 5 ವರ್ಷಗಳಲ್ಲಿ ಆದುದ್ದಲ್ಲ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಊರುಗಳ ಹೆಸರುಗಳನ್ನು ಬದಲಾಯಿಸುವುದರಲ್ಲಿಯೇ ತಮ್ಮ ಸಮಯ ಕಳೆಯುತ್ತಿದ್ದಾರೆ. ನಿನ್ನೆ ಅವರು ಮೀರತ್‌ ನಗರವನ್ನು ನಾಥುರಾಂ ಗೋಡ್ಸೆ ನಗರ ಎಂದು ಬದಲಿಸಲು ಯೋಚಿಸುತ್ತಿದ್ದಾರೆ. ಗೋಡ್ಸೆಯಂತ ಗಾಂಧಿಯವರ ಹಂತಕನ ಹೆಸರಿಡುವುದಕ್ಕೆ ನಾಚಿಕೆಯಾಗುವುದಿಲ್ಲವೇ? ಇದರ ಬದಲು ಉತ್ತರ ಪ್ರದೇಶದ ಮಹಿಳೆಯರ ಬಗ್ಗೆ ಅವರು ಯೋಚಿಸಬೇಕು. ನಿನ್ನೆ ಉತ್ತರ ಪ್ರದೇಶದ ಬಿಜೆಪಿ ಶಾಸಕನಿಂದ ಅತ್ಯಚಾರಕ್ಕೊಳಗಾದ ಸಂತ್ರಸ್ತೆ ದಿಟ್ಟ ಹೋರಾಟ ನಡೆಸಿ ಜಯ ಸಾಧಿಸಿದ್ದಾಳೆ. ತನ್ನ ತಂದೆಯನ್ನು, ಚಿಕ್ಕಮ್ಮನನ್ನು ಕಳೆದುಕೊಂಡರು ಆಕೆ ಹೋರಾಡಿದ್ದಾಳೆ. ಆತನಿಗೆ ಜೀವಾವಧಿ ಶಿಕ್ಷೆ ಘೋಷಣೆಯಾಗಿದೆ. ಇದು ಭಾರತದ ಮಹಿಳೆಯರ ಶಕ್ತಿ. ಈ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಅವರು ಸಿಎಎ ಅನ್ನು ವಾಪಸ್‌ ಪಡೆಯುವವರೆಗೂ ನಾವು ಪ್ರತಿಭಟಿಸುತ್ತೇವೆ. ಅದನ್ನ ವಾಪಸ್‌ ಪಡೆಯುವಂತೆ ಮಾಡುತ್ತೇವೆ. ನಾವು ಇದಕ್ಕಾಗಿ ಮನವಿ ಮಾಡುವುದಿಲ್ಲ ಬದಲಾಗಿ ಆಗ್ರಹಿಸುತ್ತೇವೆ.

ಸದ್ಯಕ್ಕೆ ಕರ್ನಾಟಕ ಕಾಂಗ್ರೆಸ್‌ ಪಕ್ಷದ ಪ್ರಿಯದರ್ಶಿನಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಇವರು ಮಹಿಳೆಯರ ಹಕ್ಕುಗಳ ಕುರಿತು ತೊಡಗಿಸಿಕೊಳ್ಳಲು ಬಯಸುತ್ತಾರೆ. ಆದರೆ ಕೇಂದ್ರ ಸರ್ಕಾರದ ಈ ಕಾಯ್ದೆಗಳು ಹೆಚ್ಚಾಗಿ ಮಹಿಳೆಯರನ್ನೇ ಬಾದಿಸುತ್ತವೆ. ಪೌರತ್ವ ಕಾಯ್ದೆ ಹಿಂದೂ ಮುಸ್ಲಿಂ ಸಮಸ್ಯೆಯಲ್ಲ. ಅದು ಸಂವಿಧಾನ ಪರ ಇರುವವರು ಮತ್ತು ಸಂವಿಧಾನ ವಿರೋಧಿಗಳ ನಡುವಿನ ಹೋರಾಟ. ಎನ್‌ಆರ್‌ಸಿ ಬಡವರು ಮತ್ತು ಶ್ರೀಮಂತರ ನಡುವಿನ ಹೋರಾಟ. ನಮ್ಮ ದೇಶದ ಜಾತ್ಯಾತೀತ ಮೌಲ್ಯಗಳನ್ನು ಉಳಿಸುವಲ್ಲಿ ನಾನು ಸದಾ ತೊಡಗಿಸಿಕೊಳ್ಳಲು ಬಯಸುತ್ತೇನೆ ಎನ್ನುವುದು ಅವರ ಅಭಿಮತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...