Homeಮುಖಪುಟಬಿಜೆಪಿ ಕೈಜಾರಿದ ಜಾರ್ಖಂಡ್‌: ಜೆಎಂಎಂ, ಕಾಂಗ್ರೆಸ್‌ ಜಯಭೇರಿ- ರಾಷ್ಟ್ರಮುಖಂಡರು ಏನೇಳುತ್ತಾರೆ??

ಬಿಜೆಪಿ ಕೈಜಾರಿದ ಜಾರ್ಖಂಡ್‌: ಜೆಎಂಎಂ, ಕಾಂಗ್ರೆಸ್‌ ಜಯಭೇರಿ- ರಾಷ್ಟ್ರಮುಖಂಡರು ಏನೇಳುತ್ತಾರೆ??

- Advertisement -
- Advertisement -

ಜಾರ್ಖಂಡ್ ಫಲಿತಾಂಶ ಹೊರಬಿದ್ದಿದ್ದು ಆಡಳಿತರೂಢ ಬಿಜೆಪಿ ಸೋತಿದೆ. ಜೆಎಂಎಂ – ಕಾಂಗ್ರೆಸ್‌ – ಆರ್‌ಡಿ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿದೆ. ಈ ಕುರಿತು ರಾಷ್ಟ್ರನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವುಗಳು ಇಲ್ಲಿವೆ..

ಜನ ಬಿಜೆಪೆಯೇತರರನ್ನು ಬಯಸುತ್ತಿದ್ದಾರೆ: ಶರದ್‌ ಪವಾರ್‌

“ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶವು, ಜನರು ಬಿಜೆಪಿಯಲ್ಲದ ಪಕ್ಷಗಳೊಂದಿಗೆ ಇದ್ದಾರೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಘಡ ಮತ್ತು ಮಹಾರಾಷ್ಟ್ರದ ನಂತರ, ಜಾರ್ಖಂಡ್‌ನಲ್ಲೂ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಜನರು ನಿರ್ಧರಿಸಿದ್ದಾರೆ” ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಜಾರ್ಖಂಡ್‌‌ನಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ: ಹೇಮಂತ್ ಸೊರೆನ್
“ಈ ಜನಾದೇಶಕ್ಕಾಗಿ ಜಾರ್ಖಂಡ್ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಈ ವಿಜಯವನ್ನು ಜಾರ್ಖಂಡ್ ಜನರಿಗೆ ಅರ್ಪಿಸುತ್ತೇನೆ. ಜಾರ್ಖಂಡ್‌‌ನಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ ಮತ್ತು ಜನರ ನಿರೀಕ್ಷೆಗಳು ಈಡೇರುತ್ತವೆ” ಎಂದು ಜೆಎಂಎಂ ಮುಖಂಡ ಮತ್ತು ಭಾವಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ.

ರಾಹುಲ್, ಪ್ರಿಯಾಂಕಾ ಗಾಂಧಿ, ಲಾಲು ಯಾದವ್ ಅವರಿಗೆ ಕೃತಜ್ಞತೆ: ಹೇಮಂತ್ ಸೊರೆನ್
“ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಲಾಲು ಯಾದವ್ ಅವರ ಬೆಂಬಲಕ್ಕಾಗಿ ಕೃತಜ್ಞನಾಗಿರುತ್ತೇನೆ” ಎಂದು ಹೇಮಂತ್ ಸೊರೆನ್ ಹೇಳುತ್ತಾರೆ.

ಜರ್ಖಾಂಡ್‌ನಲ್ಲಿ ಜಯಗಳಿಸಿದ ಜೆಎಂಎಂ, ಆರ್‌ಜೆಡಿ, ಕಾಂಗ್ರೆಸ್‌ಗೆ ಅಭಿನಂದನೆಗಳು. ಜಾರ್ಖಂಡ್‌ನ ಜನರು ತಮ್ಮ ಆಕಾಂಕ್ಷೆಗಳನ್ನು ಈಡೇರಿಸಲು ನಿಮ್ಮನ್ನು ಒಪ್ಪಿದ್ದರೆ. ಜಾರ್ಖಂಡ್‌ನ ಎಲ್ಲ ಸಹೋದರ / ಸಹೋದರಿಯರಿಗೆ ನನ್ನ ಶುಭಾಶಯಗಳು. #CAA_NRC_ ಪ್ರತಿಭಟನೆಯ ಸಮಯದಲ್ಲಿ ಚುನಾವಣೆಗಳು ನಡೆದವು. ಇದು ನಾಗರಿಕರ ಪರವಾದ ತೀರ್ಪು ಎಂದು ಟಿಎಂಸಿಯ ನಾಯಕಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಹೇಮಂತ್ ಸೊರೆನ್‌ರವರಿಗೆ ಅಭಿನಂದನೆಗಳು: ಶಿವಸೇನೆ ಮುಖಂಡೆ ಪ್ರಿಯಾಂಕಾ ಚತುರ್ವೇದಿ
ಹೇಮಂತ್ ಸೊರೆನ್‌ರವರಿಗೆ ಅನೇಕ ಅಭಿನಂದನೆಗಳು, ಇದು ಉತ್ತಮವಾಗಿ ಹೋರಾಡಿದ ಹೋರಾಟವಾಗಿದೆ. ಪ್ರಾದೇಶಿಕ ಪಕ್ಷಗಳನ್ನು ಯಾರೂ ನಿರ್ಲಕ್ಷಿಸಬಾರದು ಅಥವಾ ದುರ್ಬಲಗೊಳಿಸಬಾರದು ಎಂಬುದು ಇದರಿಂದ ಮತ್ತೆ ಸಾಬೀತಾಗಿದೆ ಎಂದು ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...