Homeಕರ್ನಾಟಕಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಗೊಳಿಸಿದ...

ಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

- Advertisement -
- Advertisement -

ಜಾಹೀರಾತಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ಮಂಗಳವಾರ (ಫೆ.17) ರದ್ದುಗೊಳಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಬಾರ್ & ಬೆಂಚ್ ವರದಿ ಮಾಡಿದೆ.

ಪ್ರಕರಣ ರದ್ದುಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನಿಲ್ ದತ್ ಯಾದವ್ ಅವರ ಪೀಠ ಪುರಸ್ಕರಿಸಿದೆ.

"ಅರ್ಜಿಯನ್ನು (ಪ್ರಕರಣ ರದ್ದುಕೋರಿದ್ದ ಅರ್ಜಿ) ಪುರಸ್ಕರಿಸಲಾಗಿದೆ. ವಿಚಾರಣೆಯನ್ನು ಮುಂದುವರಿಸಲು ಅವಕಾಶ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗುತ್ತದೆ. ಅರ್ಜಿದಾರರಿಗೆ (ರಾಹುಲ್ ಗಾಂಧಿ) ಸಂಬಂಧಿಸಿದಂತೆ ವಿಚಾರಣೆಯನ್ನು ರದ್ದುಗೊಳಿಸಲಾಗಿದೆ" ಎಂದು ನ್ಯಾಯಾಲಯ ಹೇಳಿರುವುದಾಗಿ ಬಾರ್ & ಬೆಂಚ್ ವರದಿ ಉಲ್ಲೇಖಿಸಿದೆ.

2023ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ನೀಡಿದ್ದ ಜಾಹೀರಾತುಗಳು ಮತ್ತು ಪ್ರಚಾರ ಘೋಷಣೆಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕ ಕೇಶವ ಪ್ರಸಾದ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಕಾಂಗ್ರೆಸ್‌ ತನ್ನ ಜಾಹೀರಾತುಗಳಲ್ಲಿ, ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸಾರ್ವಜನಿಕ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಮತ್ತು ಇತರರಿಂದ ಶೇಕಡ 40ರಷ್ಟು ಕಮಿಷನ್/ಲಂಚವನ್ನು ಪಡೆಯುತ್ತಿದೆ ಎಂದು ಆರೋಪಿಸಿತ್ತು.

ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ತಮ್ಮ ಪಕ್ಷದ ಸದಸ್ಯರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕರು ಸುಳ್ಳು ಜಾಹೀರಾತುಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಆರೋಪಿಸಿತ್ತು.

ಜೂನ್ 1, 2024 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಪ್ರಕರಣದಲ್ಲಿ ಜಾಮೀನು ನೀಡಿತ್ತು. ಜೂನ್ 7, 2024 ರಂದು ರಾಹುಲ್ ಗಾಂಧಿಗೆ ಮ್ಯಾಜಿಸ್ಟ್ರೇಟ್ ಜಾಮೀನು ನೀಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾತ್ರೋರಾತ್ರಿ ಒಪ್ಪಂದ ಸಾಧ್ಯವಿಲ್ಲ’: ಪಶ್ಚಿಮ ಏಷ್ಯಾ ಯುದ್ಧದ ಕುರಿತು ನಿರಂತರ ಮಾತುಕತೆಗೆ ವಿಶ್ವಸಂಸ್ಥೆ ಒತ್ತಾಯ

ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಅಮೆರಿಕ ಮತ್ತು ಇರಾನ್ ನಡುವೆ ನಿರಂತರ ರಾಜತಾಂತ್ರಿಕ ನಿಶ್ಚಿತಾರ್ಥಕ್ಕೆ ಕರೆ ನೀಡಿದ್ದಾರೆ. "ಒಂದು ಒಪ್ಪಂದವನ್ನು ರಾತ್ರೋರಾತ್ರಿ ತಲುಪಲು ಸಾಧ್ಯವಿಲ್ಲ" ಎಂದು ಒತ್ತಿ ಹೇಳಿದ ಅವರು ಪಶ್ಚಿಮ...

ಡಿಲಿಮಿಟೇಷನ್ ಮೂಲಕ ದಕ್ಷಿಣ ಭಾರತದ ಪ್ರಭಾವ ಕಸಿದುಕೊಳ್ಳಲು ಬಿಜೆಪಿಯಿಂದ ಪಿತೂರಿ: ರೇವಂತ್ ರೆಡ್ಡಿ

ಜನಸಂಖ್ಯೆ ಅನುಪಾತದ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆಯು ದಕ್ಷಿಣ ರಾಜ್ಯಗಳಿಗೆ ಅನ್ಯಾಯವನ್ನುಂಟು ಮಾಡುತ್ತದೆ ಎಂದು ಎಚ್ಚರಿಸಿದ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ರಾಜಕೀಯ ಪಕ್ಷಗಳು ಮತ್ತು ಇತರರೊಂದಿಗೆ ವ್ಯಾಪಕ ಸಮಾಲೋಚನೆಯ...

ನೋಯ್ಡಾ ಕಾರ್ಮಿಕ ಪ್ರತಿಭಟನೆ: 300ಕ್ಕೂ ಹೆಚ್ಚು ಜನರ ಬಂಧನ, 7 ಎಫ್‌ಐಆರ್‌: ಅಶಾಂತಿಯ ಹಿಂದೆ ‘ಸಂಘಟಿತ ಸಿಂಡಿಕೇಟ್’ ಕುರಿತು ತನಿಖೆ

ನೋಯ್ಡಾದಲ್ಲಿ ಹಿಂಸಾತ್ಮಕವಾಗಿ ತಿರುಗಿದ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದಂತೆ 300ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಮತ್ತು ಏಳು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಗೌತಮ್ ಬುದ್ಧ ನಗರ ಪೊಲೀಸ್ ಆಯುಕ್ತ ಲಕ್ಷ್ಮಿ ಸಿಂಗ್ ಮಂಗಳವಾರ ಹೇಳಿದ್ದಾರೆ,...

“ಜೀವನದಲ್ಲಿ ಮೊದಲ ಬಾರಿಗೆ ಒಬ್ರು ನನ್ನನ್ನು ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೇಳಿಕೊಂಡಿದ್ದಾರೆ” : ಕೇಜ್ರಿವಾಲ್ ಅರ್ಜಿ ಕುರಿತ ಆದೇಶ ಕಾಯ್ದಿರಿಸಿದ ನ್ಯಾ. ಶರ್ಮಾ

ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮನ್ನು ಖುಲಾಸೆಗೊಳಿಸಿದ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಹಿಂದೆ ಸರಿಯಬೇಕು ಎಂದು ಕೋರಿ ಮಾಜಿ ಮುಖ್ಯಮಂತ್ರಿ ಅರವಿಂದ್...

ಜಮ್ಮು-ಕಾಶ್ಮೀರ| ನಕಲಿ ಗೋರಕ್ಷಕರು ಬೆನ್ನಟ್ಟಿದ್ದರಿಂದ ನದಿಗೆ ಹಾರಿದ ವ್ಯಕ್ತಿ ಕಣ್ಮರೆ; ನಾಲ್ವರ ಬಂಧನ

ಜಮ್ಮು ಕಾಶ್ಮೀರದ ರಾಂಬನ್ ಜಿಲ್ಲೆಯ ರಾಮ್ಸೂ ಪ್ರದೇಶದ ಹೆದ್ದಾರಿಯಲ್ಲಿ ಗೋರಕ್ಷಕರು ವ್ಯಕ್ತಿಯೊಬ್ಬನನ್ನು ಬೆನ್ನಟ್ಟಿದ್ದರಿಂದ ಹೆದರಿದ ಆತ ಸುರಕ್ಷತೆಗಾಗಿ ನದಿಗೆ ಹಾರಿದ್ದಾನೆ. ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ರಾಂಬನ್ ಜಿಲ್ಲೆಯ ಉಖ್ರಾಲ್ ತಹಸಿಲ್‌ನ ಪೋಗಲ್‌ನ ಮುಂಡ್‌ಖಾಲ್...

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕಾಂಗ್ರೆಸ್ ಹಿರಿಯ ನಾಯಕ ನಸೀರ್ ಅಹ್ಮದ್ ಅವರನ್ನು ವಜಾಗೊಳಿಸಲಾಗಿದೆ. ಈ ಕುರಿತು ಸೋಮವಾರ (ಏ.13) ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ರಾಜ್ಯ ಶಿಷ್ಟಾಚಾರ)...

ಮಹಿಳಾ ಮೀಸಲಾತಿ ಮಸೂದೆ: ಏಪ್ರಿಲ್ 15 ರಂದು ಕಾಂಗ್ರೆಸ್ ಸರ್ವಪಕ್ಷ ಸಭೆ ಕರೆಯಲಿದೆ: ಮಲ್ಲಿಕಾರ್ಜುನ ಖರ್ಗೆ 

ಮಹಿಳಾ ಮೀಸಲಾತಿ ಮಸೂದೆಯನ್ನು ಚರ್ಚಿಸಲು ಏಪ್ರಿಲ್ 15 ರಂದು ಎಲ್ಲಾ ವಿರೋಧ ಪಕ್ಷಗಳ ಸಭೆ ಕರೆಯಲಾಗುವುದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ,...

ಗುಜರಾತ್‌| ಮುಸ್ಲಿಂ ವ್ಯಕ್ತಿಯ ಬೀದಿ ವ್ಯಾಪಾರಕ್ಕೆ ಅಡ್ಡಿಪಡಿಸಿದ ಹಿಂದುತ್ವ ಗೂಂಡಾಗಳು

ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಿಂದೂ ಬಹುಸಂಖ್ಯಾತ ಪ್ರದೇಶವೊಂದರಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ಬೀದಿ ವ್ಯಾಪಾರಿಗೆ ಬಜರಂಗದಳ ಸದಸ್ಯರು ಬೆದರಿಕೆ ಹಾಕಿ ಅಲ್ಲಿಂದ ಅಂಗಡಿ ತೆರವುಗೊಳಿಸಿದ್ದಾರೆ. ಮುಸ್ಲಿಂ ವ್ಯಾಪಾರಿಯ ಗುರುತನ್ನು ಕೇಳಿದ ಹಿಂದುತ್ವ ಗೂಂಡಾಗಳು, ನಂತರ ಅವರನ್ನು...

“ನೀವು ಆರ್‌ಎಸ್‌ಎಸ್ ಸಂಬಂಧಿತ ಕಾರ್ಯಕ್ರಮಗಳಲ್ಲಿ 4 ಬಾರಿ ಭಾಗವಹಿಸಿದ್ದೀರಿ” : ನ್ಯಾಯಮೂರ್ತಿ ಶರ್ಮಾ ಪೀಠದ ಮುಂದೆ ಕೇಜ್ರಿವಾಲ್ ಗಂಭೀರ ವಾದ

ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ (ಏ.13) ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಆರ್‌ಎಸ್‌ಎಸ್ ಸಂಯೋಜಿತ...

ನಕಲಿ ನ್ಯಾಯಾಧೀಶನನ್ನು ಬಂಧಿಸಿದ ದೆಹಲಿ ಪೊಲೀಸರು; ಬಂದೂಕು ಹೊಂದಿದ್ದ ವ್ಯಕ್ತಿಗಳು

ನಕಲಿ ದಾಖಲೆಗಳನ್ನು ಬಳಸಿ ನ್ಯಾಯಾಂಗ ಅಧಿಕಾರಿಯಂತೆ ನಟಿಸುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ನವದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರ ಬಳಿಯಿಂದ ಬಂದೂಕು ಮತ್ತು ಜೀವಂತ ಮದ್ದುಗುಂಡುಗಳೊಂದಿಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಉತ್ತರ...