Homeಅಂತರಾಷ್ಟ್ರೀಯಮೊಜ್ತಬಾ ಖಾಮಿನೈ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದ ಇಸ್ರೇಲ್ ಮಾಧ್ಯಮಗಳು : ವಿಡಿಯೋ ಬಿಡುಗಡೆ ಮಾಡಿ...

ಮೊಜ್ತಬಾ ಖಾಮಿನೈ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದ ಇಸ್ರೇಲ್ ಮಾಧ್ಯಮಗಳು : ವಿಡಿಯೋ ಬಿಡುಗಡೆ ಮಾಡಿ ಕೌಂಟರ್ ಕೊಟ್ಟ ಇರಾನ್

- Advertisement -
- Advertisement -

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ಅವರ ಆರೋಗ್ಯ ಸ್ಥಿತಿ ‘ಅತ್ಯಂತ ಗಂಭೀರವಾಗಿದೆ’ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ, ಅವರು ಉತ್ತಮ ಆರೋಗ್ಯದಿಂದ ಇರುವಂತೆ ಕಾಣಿಸುವ ದಿನಾಂಕವಿಲ್ಲದ ವಿಡಿಯೋ ಒಂದನ್ನು ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ, ಖಾಮಿನೈ ತಮ್ಮ ಕೆಲ ಬೆಂಬಲಿಗರೊಂದಿಗೆ ಮಾತುಕತೆ ನಡೆಸುತ್ತಿರುವುದು ಇದೆ.

ಮೆಹರ್ ಸಂಸ್ಥೆಯು ಮೊದಲ ಬಾರಿಗೆ ಬಿಡುಗಡೆ ಮಾಡಿದ ಈ ವಿಡಿಯೋ, ಖಾಮಿನೈ ಅವರ ಆರೋಗ್ಯ ಮತ್ತು ಅವರು ಇರುವ ಸ್ಥಳದ ಕುರಿತು ಹೆಚ್ಚುತ್ತಿರುವ ಊಹಾಪೋಹಗಳನ್ನು ತಡೆಯುವ ಉದ್ದೇಶವನ್ನು ಹೊಂದಿರುವಂತೆ ತೋರುತ್ತದೆ. ಮೆಹರ್ ಸಂಸ್ಥೆಯು ಇರಾನ್ ಸರ್ಕಾರದ ಪ್ರಾಯೋಜಕತ್ವದಲ್ಲಿರುವ ಮತ್ತು ಇಸ್ಲಾಮಿಕ್ ಡೆವಲಪ್‌ಮೆಂಟ್ ಆರ್ಗನೈಸೇಶನ್‌ನಿಂದ ನಡೆಸಲ್ಪಡುವ ಇರಾನ್‌ನ ಒಂದು ಅರೆ-ಅಧಿಕೃತ ಸುದ್ದಿ ಸಂಸ್ಥೆಯಾಗಿದೆ.

ಖಾಮಿನೈ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಆರೋಗ್ಯದ ಕುರಿತು ಇರಾನ್‌ನ ನಾಯಕತ್ವದಲ್ಲಿ ಆತಂಕಗಳು ಹುಟ್ಟಿಕೊಂಡಿವೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಈ ವಿಡಿಯೋ ಹೊರಬಂದಿದೆ.

ಶುಕ್ರವಾರ (ಆ.7) ಇಸ್ರೇಲಿ ಚಾನೆಲ್ 14, ಇರಾನ್ ಒಳಗಿನ ಮೂಲಗಳನ್ನು ಉಲ್ಲೇಖಿಸಿ ಖಾಮಿನೈ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿ ಮಾಡಿತ್ತು. ಇರಾನ್‌ವೈರ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಆಡಳಿತಕ್ಕೆ ಹತ್ತಿರವಿರುವ ಮೂಲಗಳನ್ನು ಉಲ್ಲೇಖಿಸಿ ದಿ ಜೆರುಸಲೆಮ್ ಪೋಸ್ಟ್ ಪ್ರಕಟಿಸಿದ್ದ ಈ ಹಿಂದಿನ ವರದಿಯು ಸಹ ಅವರ ಆರೋಗ್ಯದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿತ್ತು.

ದಿ ಜೆರುಸಲೆಮ್ ಪೋಸ್ಟ್ ಉಲ್ಲೇಖಿಸಿದ ಒಂದು ಮೂಲವು ಒಂದು ಹೆಜ್ಜೆ ಮುಂದೆ ಹೋಗಿ, “ಶೀಘ್ರದಲ್ಲೇ ಅವರ ಹುತಾತ್ಮತೆಯ ಸುದ್ದಿ ಕೇಳಿಬಂದರೂ ನಮಗೆ ಆಶ್ಚರ್ಯವಾಗುವುದಿಲ್ಲ” ಎಂದು ಹೇಳುವ ಮಟ್ಟಿಗೆ ತಲುಪಿತ್ತು.

ಮೆಹರ್ ಸುದ್ದಿ ಸಂಸ್ಥೆಯು ವಿಡಿಯೋ ಬಿಡುಗಡೆ ಮಾಡಿರುವುದು, ಇರಾನ್ ಸರ್ಕಾರದ ನಂಟು ಹೊಂದಿರುವ ಮಾಧ್ಯಮಗಳು ಆ ವರದಿಗಳನ್ನು (ಇಸ್ರೇಲಿ ಮಾಧ್ಯಮಗಳ) ತಳ್ಳಿಹಾಕಲು ಮತ್ತು ಸರ್ವೋಚ್ಚ ನಾಯಕನ ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ಭರವಸೆ ನೀಡಲು ನಡೆಸಿದ ಪ್ರಯತ್ನದಂತೆ ತೋರುತ್ತದೆ. ಆದಾಗ್ಯೂ, ಈ ವಿಡಿಯೋದಲ್ಲಿ ಯಾವುದೇ ದಿನಾಂಕ ಉಲ್ಲೇಖವಿಲ್ಲದ ಕಾರಣ, ಇದರ ನಿಖರವಾದ ಸಮಯ ಅಥವಾ ಸಂದರ್ಭಗಳನ್ನು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವರದಿಗಳು ಹೇಳಿವೆ.

ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಹೇಳಿಕೆಯೊಂದು ಮೊಜ್ತಾಬಾ ಖಾಮಿನೈ ಅವರ ಆರೋಗ್ಯದ ಕುರಿತಾದ ಎಲ್ಲಾ ಊಹಾಪೋಹಗಳಿಗೆ ಪುಷ್ಠಿ ನೀಡುವಂತಿದೆ. ಎಎನ್‌ಐ ವರದಿಯ ಪ್ರಕಾರ, ಸರ್ಕಾರಿ ದೂರದರ್ಶನ ಸಂದರ್ಶನವೊಂದರಲ್ಲಿ ಮಾತನಾಡಿದ ಪೆಜೆಶ್ಕಿಯಾನ್, ಖಾಮಿನೈ ಅವರೊಂದಿಗೆ ನೇರ ಸಂವಹನ ನಡೆಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ತಮ್ಮ ತಂದೆ ಆಯತುಲ್ಲಾ ಅಲೀ ಖಾಮಿನೈ ಮರಣ ಹೊಂದಿದ ನಂತರ, 56 ವರ್ಷದ ಇಸ್ಲಾಮಿಕ್ ಧರ್ಮಗುರು ಮೊಜ್ತಾಬಾ ಖಾಮಿನೈ ಅವರು ಇರಾನ್‌ನ ಸರ್ವೋಚ್ಚ ನಾಯಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಹುದ್ದೆಯನ್ನು ವಹಿಸಿಕೊಂಡಾಗಿನಿಂದ, ಅವರು ಯಾವುದೇ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಂಡಿಲ್ಲ ಮತ್ತು ಕೇವಲ ಲಿಖಿತ ಹೇಳಿಕೆಗಳ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದಾರೆ. ಅವರು ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲೂ ಸಹ ಭಾಗವಹಿಸಿಲ್ಲ.

ಸರ್ವೋಚ್ಚ ನಾಯಕನ ಸುದೀರ್ಘ ಅನುಪಸ್ಥಿತಿಯು ಅವರ ಮರಣದ ಕುರಿತಾದ ಹಿಂದಿನ ಊಹಾಪೋಹಗಳನ್ನು ಪುಷ್ಠಿಗೊಳಿಸುತ್ತಿದೆ. ಆದರೆ, ಈ ಎಲ್ಲಾ ವದಂತಿಗಳನ್ನು ತಳ್ಳಿಹಾಕಿರುವ ಖಾಮಿನೈ ಅವರ ಕಚೇರಿಯು ಸರ್ವೋಚ್ಚ ನಾಯಕರು ಆರೋಗ್ಯವಾಗಿದ್ದಾರೆ ಮತ್ತು ಅವರೇ ಎಲ್ಲಾ ವ್ಯವಹಾರಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಕಳೆದ ಮೇ ತಿಂಗಳಲ್ಲಿ ತಿಳಿಸಿತ್ತು.

“ನಮ್ಮ ಶತ್ರು ಪಡೆಗಳು ಇಂತಹ ಪ್ರತಿಕ್ರಿಯೆಗಳ ಮೂಲಕ ತಮ್ಮ ಪಿತೂರಿಗಳನ್ನು ಮುನ್ನಡೆಸಲು ವದಂತಿಗಳನ್ನು ಹಬ್ಬಿಸುತ್ತಿವೆ ಹಾಗೂ ಆ ಮೂಲಕ ನಮ್ಮಿಂದ ಪ್ರತಿಕ್ರಿಯೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿವೆ” ಎಂದು ಖಾಮಿನೈ ಅವರ ಕಚೇರಿಯ ಅಂತಾರಾಷ್ಟ್ರೀಯ ವ್ಯವಹಾರಗಳ ಉಪ ಮುಖ್ಯಸ್ಥರು ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಲ್ವಾರ್ ತೆಗೆಯಲು ಯತ್ನ, ಎದೆ ಒತ್ತುವುದು ಅತ್ಯಾಚಾರ ಯತ್ನವಲ್ಲವೇ?’: ಪಾಟ್ನಾ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಚಾಟಿ 

ನವದೆಹಲಿ: ಮಹಿಳೆಯ ಸಲ್ವಾರ್ ತೆಗೆಯಲು ಯತ್ನಿಸುವುದು ಮತ್ತು ಆಕೆಯ ಎದೆಯನ್ನು ಒತ್ತುವುದು ಸೇರಿದಂತೆ ಲೈಂಗಿಕ ದೌರ್ಜನ್ಯದ ಆರೋಪಗಳು ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ...

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಜಾಗೊಳಿಸಿ; ಕೂಡಲೇ ಎಸ್‌ಐಆರ್ ನಿಲ್ಲಿಸಿ: ವಿಪಕ್ಷಗಳ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರು ಗಂಭೀರ ಕಳವಳ ವ್ಯಕ್ತಪಡಿಸಿರುವುದು ದೊಡ್ಡ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. "ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್...

‘ಸಹೋದರಿಯರು, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧ’: ಮುಸ್ಲಿಂ ಮಹಿಳೆಯರ ವಿರುದ್ಧ ಮಧ್ಯಪ್ರದೇಶ ಬಿಜೆಪಿ ಶಾಸಕನ ಅತ್ಯಾಚಾರ ಬೆದರಿಕೆ

ಭೋಪಾಲ್: ನವರಾತ್ರಿ ಸಂದರ್ಭದಲ್ಲಿ ನಡೆಯುವ ಗರ್ಬಾ ಕಾರ್ಯಕ್ರಮಗಳಿಗೆ ಮುಸ್ಲಿಂ ಯುವಕರು ಆಗಮಿಸುವುದನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ನೀಡಿರುವ ಹೇಳಿಕೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. “ಮುಸ್ಲಿಂ ಹುಡುಗರು ಮಾತ್ರ...

BWSSB ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ: ಜಲಮಂಡಳಿ ಗುತ್ತಿಗೆ ಕಾರ್ಮಿಕರ ಸರಣಿ ಸಾವಿಗೆ ಆಕ್ರೋಶ, ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಹೋರಾತ್ರಿ ಸುಗಮವಾಗಿ ನಿರ್ವಹಿಸುವ BWSSB ಜಲಮಂಡಳಿಯ ಸಾವಿರಾರು ಗುತ್ತಿಗೆ ಕಾರ್ಮಿಕರು ತಮ್ಮ ಜೀವಭದ್ರತೆ ಹಾಗೂ ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿ ಇಂದು (ಸೆಪ್ಟೆಂಬರ್ 23)...

ಕೋಲ್ಕತ್ತಾ: ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಉಪಾಸನಾ ಚೌಧರಿ ಮನೆ ಮೇಲೆ ಕಲ್ಲುತೂರಾಟ, ಮಾಜಿ ಶಾಸಕ ಹುಮಾಯೂನ್ ಕಬೀರ್ ಮೇಲೂ ಹಲ್ಲೆ!

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಮುಕುಂದಪುರದಲ್ಲಿ ಮಂಗಳವಾರ (ಸೆ. 22) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಹಾಗೂ ವಕ್ತಾರೆ...

SIR ಏಕಪಕ್ಷೀಯ ತೀರ್ಮಾನ ಖಂಡಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು

ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ (ECI) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರಿ ಸ್ವರೂಪದ ಬಿರುಕು ಮೂಡಿದೆ. ಎಸ್‌ಐಆರ್ (Special Intensive Revision – SIR / ವಿಶೇಷ...

‘ವಂದೇ ಮಾತರಂ’ ಹಾಡಲು ಬಾರದ ಬಿಜೆಪಿಗರಿಗೆ ಕೋರ್ಟ್ ಆದೇಶ ನೆಮ್ಮದಿ ತಂದಿದೆ: ಬಿ.ಕೆ. ಹರಿಪ್ರಸಾದ್ ವ್ಯಂಗ್ಯ

'ವಂದೇ ಮಾತರಂ' ಹಾಡದಿದ್ದರೆ ಒಬ್ಬ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಸಂವಿಧಾನಾತ್ಮಕ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸ್ವಾಗತಿಸಿದ್ದಾರೆ. ಧಾರ್ಮಿಕ...

ರಾಯಚೂರು ದಲಿತ ದೌರ್ಜನ್ಯ: ಪ್ರಕರಣಗಳನ್ನು CIDಗೆ ಒಪ್ಪಿಸುವಂತೆ ಆಗ್ರಹಿಸಿ ಗೃಹ ಸಚಿವರನ್ನು ಭೇಟಿಯಾದ ನಿಯೋಗ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ದಲಿತರ ಮೇಲೆ ಸಾಲು ಸಾಲು ದೌರ್ಜನ್ಯ, ಕೊಲೆ ಹಾಗೂ ಅತ್ಯಾಚಾರದಂತಹ ಭೀಕರ ಕೃತ್ಯಗಳು ಹೆಚ್ಚಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿ, ದಲಿತ ಹಕ್ಕುಗಳ ಹೋರಾಟಗಾರರ ಹಾಗೂ ಪ್ರಮುಖ ಮುಖಂಡರ ನಿಯೋಗವು ಗೃಹ...

ಶಾರ್ಜೀಲ್ ಇಮಾಮ್‌ಗೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರು

ವಿದ್ಯಾರ್ಥಿ ಹೋರಾಟಗಾರ ಶಾರ್ಜೀಲ್ ಇಮಾಮ್‌ಗೆ ಅವರ ಸೋದರಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ದೆಹಲಿ ನ್ಯಾಯಾಲಯವು ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಜಾಮೀನು ಅಕ್ಟೋಬರ್ 4 ರಿಂದ ಅಕ್ಟೋಬರ್ 10 ರವರೆಗೆ ಇರಲಿದೆ...

ಎಬಿವಿಪಿ ಒತ್ತಡಕ್ಕೆ ಮುಸ್ಲಿಂ ಪ್ರಾಧ್ಯಾಪಕಿ ರಾಜೀನಾಮೆ; ಕಾಲೇಜು ಆವರಣ ‘ಶುದ್ಧೀಕರಣ’ ಮಾಡಿದ ಬಲಪಂಥೀಯ ಗುಂಪು

ಕೋಲ್ಕತ್ತಾದ ಸುರೇಂದ್ರನಾಥ ಕಾಲೇಜಿನ ಮುಸ್ಲಿಂ ಪ್ರಾಧ್ಯಾಪಕಿ ಮೊಹಮ್ಮದಿ ತರನ್ನುಮ್ ಅವರನ್ನು ಹಾಜರಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಂದು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ಇದಾದ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು...