Homeಕರ್ನಾಟಕಹನೂರು | ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ : ಇಲಾಖೆಯಿಂದ ತಪ್ಪಾಗಿದೆ ಎಂದ ಸಚಿವ...

ಹನೂರು | ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ : ಇಲಾಖೆಯಿಂದ ತಪ್ಪಾಗಿದೆ ಎಂದ ಸಚಿವ ಪುಟ್ಟರಂಗಶೆಟ್ಟಿ

- Advertisement -
- Advertisement -

ಅರಣ್ಯದಲ್ಲಿ ಬೇಟೆಗೆ ಬಂದಿದ್ದರೆನ್ನಲಾದ ನಾಲ್ವರು ಮತ್ತು ಅರಣ್ಯ ಸಿಬ್ಬಂದಿ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಶನಿವಾರ (ಆ.15) ಮುಂಜಾನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಶಾಗ್ಯ ಗ್ರಾಮದ ಸಮೀಪದ ಮರಿಯ ಮಂಗಲ ಬೀಟ್‌ನಲ್ಲಿ ಘಟನೆ ನಡೆದಿದ್ದು, ಮೃತರನ್ನು ತೊಮಿಯರ್ ಪಾಳ್ಯ ಗ್ರಾಮದ ಅಂತೊಣಿಸ್ವಾಮಿ , ಪೀಟರ್ , ಕುಮಾರ್ ಎಂದು ಗುರುತಿಸಲಾಗಿದೆ. ಮರಿಯ ಮಂಗಲದ ಮಹಿಮಾದಾಸ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದರೆನ್ನಲಾದ ನಾಲ್ವರು ವನ್ಯ ಪ್ರಾಣಿಯನ್ನು ಬೇಟೆಯಾಡಿ, ಅದರ ಮಾಂಸವನ್ನು ಹಂಚಿಕೆ ಮಾಡಿಕೊಳ್ಳುವ ಸಮಯದಲ್ಲಿ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಗುಂಡಿನ ದಾಳಿ ನಡೆದಿದೆ. ಪರಿಣಾಮ ಅಂತೊಣಿಸ್ವಾಮಿ , ಪೀಟರ್ , ಕುಮಾರ್ ಸಾವನ್ನಪ್ಪಿದ್ದು, ಪರಾರಿಯಾಗಿರುವ ಮಹಿಮಾದಾಸ್ ಸೆರೆಗಾಗಿ ಅರಣ್ಯಾಧಿಕಾರಿಗಳು ಶೋಧನಾ ಕಾರ್ಯ ಮುಂದುವರೆಸಿದ್ದಾರೆ ಎಂದು ವರದಿಗಳು ಹೇಳಿವೆ.

ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಮೃತ ದೇಹಗಳನ್ನು ಮೊದಲು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿತ್ತು. ನಂತರ ಪೊಲೀಸ್ ಬಂದೂಬಸ್ತ್ ನೊಂದಿಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳುಹಿಸಲಾಗಿದೆ.

ಗ್ರಾಮಸ್ಥರಿಂದ ಆಕ್ರೋಶ

ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಹತ್ಯೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದ ಕೆಲವರು ಶಾಗ್ಯದಲ್ಲಿರುವ ಸಹಾಯಕ ವಲಯ ಅರಣ್ಯಾಧಿಕಾರಿಗಳ ಕಛೇರಿಯ ಮೇಲೆ ದಾಳಿ ನಡೆಸಿ ಕಛೇರಿಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತುತ ತೊಮಿಯರ್ ಪಾಳ್ಯ, ಶಾಗ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.

ಅರಣ್ಯ ಇಲಾಖೆ ಪ್ರತಿಕ್ರಿಯೆ

“ಮೃತರು ಬೇಟೆಯಾಡಲು ಹೋಗಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಎದುರಾಗಿದ್ದಾರೆ. ಈ ವೇಳೆ ಅವರು ನಾಡಬಂದೂಕಿನಿಂದ ಸಿಬ್ಬಂದಿ ಮೇಲೆ ಗುಂಡು ಹಾರಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಬಳಿಕ ಅವರನ್ನು ರಕ್ಷಣೆ ಮಾಡಲು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಅಷ್ಟರಲ್ಲಿ ಮೂವರೂ ಸಾವನ್ನಪ್ಪಿದ್ದಾರೆ” ಎಂದು ಎಸಿಎಫ್​​​ ಮರಿಸ್ವಾಮಿ ಹೇಳಿರುವುದಾಗಿ ನ್ಯೂಸ್ 18 ಕನ್ನಡದ ವರದಿ ಉಲ್ಲೇಖಿಸಿದೆ.

ಅರಣ್ಯ ಇಲಾಖೆಯಿಂದ ದೊಡ್ಡ ತಪ್ಪಾಗಿದೆ : ಸಚಿವ ಪುಟ್ಟರಂಗಶೆಟ್ಟಿ

“ಶೂಟೌಟ್ ಮಾಡಿದ ಮೇಲೆ ಯಾಕೆ ಮೃತದೇಹಗಳನ್ನು ಮೈಸೂರಿಗೆ ತಂದರು ಎಂದು ನನಗೂ ಗೊತ್ತಿಲ್ಲ. ಒಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪಾಗಿದೆ” ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಘಟನೆಯ ಕುರಿತು ಹೇಳಿದ್ದಾರೆ.

ಮೃತದೇಹಗಳನ್ನು ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, “ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪಾಗಿದೆ. ಪ್ರಕರಣದ ಬಗ್ಗೆ ಇಲಾಖೆಯವರು ನನಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಒಬ್ಬೊಬ್ಬ ಅಧಿಕಾರಿ ಒಂದೊಂದು ರೀತಿ ನಮಗೆ ಸುಳ್ಳು ಹೇಳುತ್ತಿದ್ದಾರೆ. ನನಗೆ ಇಡೀ ಪ್ರಕರಣದ ಬಗ್ಗೆ ಸತ್ಯಾಸತ್ಯತೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಬೇಟೆಯಾಡಿಕೊಂಡು ವಾಪಸ್ ಬರುವಾಗ ಗುಂಡು ಹೊಡೆದರು ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಇದನ್ನು ನಂಬುವ ಸ್ಥಿತಿಯಲ್ಲಿ ನಾನಿಲ್ಲ. ಎನ್‌ಕೌಂಟರ್ ಮಾಡಿದ ಮೇಲೆ ಮೃತ ದೇಹ ಯಾಕೆ ಅಲ್ಲಿಂದ ಮೈಸೂರಿಗೆ ಶಿಫ್ಟ್ ಮಾಡಿದರು. ಯಾರನ್ನು ಕೇಳದೆ ಮೈಸೂರಿಗೆ ಮೃತದೇಹ ಏಕೆ ಬಂತು? ನನಗೆ ಅರಣ್ಯ ಇಲಾಖೆಯವರು ಹೇಳುತ್ತಿರುವುದು ಸುಳ್ಳು. ಈ ಪ್ರಕರಣದ ಬಗ್ಗೆ ಹಲವು ಸಂಶಯಗಳು ಇವೆ. ಈ ಕುರಿತು ಸಮಗ್ರ ತನಿಖೆ ಮಾಡಿಸುತ್ತೇವೆ ಎಂದು ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

ಮೃತಪಟ್ಟಿರುವವರು ಬೇಟೆಗಾರರು ಎಂದು ನನಗೆ ಅನಿಸುವುದಿಲ್ಲ. ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಪ್ರಕರಣದಿಂದ ಸರ್ಕಾರಕ್ಕೂ ಮುಜುಗರ ಆಗಿದೆ. ಪ್ರಕರಣದ ಬಗ್ಗೆ ಇನ್ನು ಯಾರು ದೂರು ಕೊಟ್ಟಿಲ್ಲ. ಎಫ್‌ಐಆರ್ ಆಗದೆ ಮರಣೋತ್ತರ ಪರೀಕ್ಷೆ ಆಗಲ್ಲ‌ ಎಂದು ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್ ಹಾಗೂ ಚುನಾವಣಾ ಆಯೋಗದ ಅಕ್ರಮ ಖಂಡಿಸಿ ‘ಇಂಡಿಯಾ’ ಮೈತ್ರಿಕೂಟದ ರಾಷ್ಟ್ರವ್ಯಾಪಿ ಅಭಿಯಾನ: ಪ್ರಜಾಪ್ರಭುತ್ವ ರಕ್ಷಣೆಗೆ ವಿಪಕ್ಷಗಳಿಂದ 6 ಪ್ರಮುಖ ಬೇಡಿಕೆಗಳು!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಅಕ್ರಮಗಳು, 'ಫಾರ್ಮ್ 6' ನಮೂನೆಯಲ್ಲಿ ಸಾಫ್ಟ್‌ವೇರ್ ಮೂಲಕ ತಂದಿದ್ದ ಅಡೆತಡೆಗಳು ಹಾಗೂ ಮತದಾರರ ಪಟ್ಟಿಯಿಂದ ಅರ್ಹರ ಹೆಸರು ರದ್ದುಗೊಳಿಸಿರುವ ಕ್ರಮಗಳನ್ನು ಖಂಡಿಸಿ 'ಇಂಡಿಯಾ'...

ಮ್ಯಾನ್ಮಾರ್‌ನಲ್ಲಿ ಜನನಿಬಿಡ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 50ಕ್ಕೂ ಹೆಚ್ಚು ಸಾವು; ಗಡೀಪಾರು ನಿಲ್ಲಿಸಲು ಮಲೇಷ್ಯಾಕ್ಕೆ ವಿಶ್ವಸಂಸ್ಥೆ ಕರೆ

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಜನನಿಬಿಡ ಮಾರುಕಟ್ಟೆಯ ಮೇಲೆ ನಡೆದ ಮಿಲಿಟರಿ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ತೀವ್ರವಾಗಿ ಖಂಡಿಸಿದ್ದಾರೆ. ಕ್ಯುಕ್ತಾವ್ ಪಟ್ಟಣದಲ್ಲಿ ನಡೆದ ಈ ದಾಳಿಯಲ್ಲಿ ಮಹಿಳೆಯರು...

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಶಿಕ್ಷಣ ಕ್ಷೇತ್ರದಲ್ಲಿ RSS ಕಾರ್ಯಸೂಚಿಗಳನ್ನು ತಡೆಯುವಂತೆ ಖರ್ಗೆ-ರಾಹುಲ್ ಸೂಚನೆ

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಶಿಕ್ಷಣ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ವಿಭಜಕ ಮತ್ತು ಕೋಮು ಕಾರ್ಯಸೂಚಿಯನ್ನು ಜಾರಿಗೆ ತರುವುದನ್ನು ತಕ್ಷಣವೇ ತಡೆಯಬೇಕು ಹಾಗೂ ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ, ಜಾತ್ಯತೀತ ಶಿಕ್ಷಣ ನೀತಿಗಳನ್ನು...

ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ಸೆಂಗೋಲ್‌’ ಸೇರ್ಪಡೆ

ನೂತನ ಸಂಸತ್ ಭವನದಲ್ಲಿ ಸ್ಥಾಪಿಸಲಾದ ಸೆಂಗೋಲ್‌ (ರಾಜದಂಡ) ಈಗ ಎನ್‌ಸಿಇಆರ್‌ಟಿಯ 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಭಾಗವಾಗಿದೆ. ಪಠ್ಯಪುಸ್ತಕವು ಇದನ್ನು "ಆಡಳಿತ ಮತ್ತು ಉತ್ತಮ ಆಡಳಿತದ ಸಾಂಸ್ಕೃತಿಕ ಸಂಕೇತ" ಎಂದು...

Mangaluru| MRPLನಲ್ಲಿ ಭಾರಿ ಸ್ಫೋಟ: 8 ಮಂದಿಗೆ ಗಾಯ, ಕಂಪಿಸಿದ ಜೋಕಟ್ಟೆಯ ಮನೆಗಳು-ಅಂಗನವಾಡಿ

ಮಂಗಳೂರು ನಗರದ ಹೊರವಲಯದ ಜೋಕಟ್ಟೆ ಬಳಿ ಇರುವ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌‌ ಲಿಮಿಟೆಡ್‌ (MRPL) ಸಂಸ್ಥೆಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ (ಸಿಎಚ್‌ಟಿ) ಬುಧವಾರ ಮಧ್ಯಾಹ್ನ 12:15 ರ ಸುಮಾರಿಗೆ ಭಾರಿ...

ಎಸ್‌ಐಆರ್ ಪೂರ್ಣಗೊಂಡ ರಾಜ್ಯಗಳ ಫಾರ್ಮ್-6 ರಲ್ಲಿನ ‘ಸ್ವಘೋಷಣೆ’ ನಿಯಮಕ್ಕೆ ಬ್ರೇಕ್‌; ವಿವಾದದ ಬೆನ್ನಲ್ಲೇ ಚುನಾವಣಾ ಆಯೋಗದ ನಿರ್ಧಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಂಡಿರುವ ರಾಜ್ಯಗಳಲ್ಲಿ, ಆನ್‌ಲೈನ್ ಮತದಾರರ ನೋಂದಣಿ 'ಫಾರ್ಮ್ 6' ರಲ್ಲಿದ್ದ ಹೆಚ್ಚುವರಿ ಎಸ್‌ಐಆರ್-ಸಂಬಂಧಿತ ಸ್ವಯಂಘೋಷಣಾ ಪತ್ರವನ್ನು ಚುನಾವಣಾ ಆಯೋಗವು ಹಿಂಪಡೆದಿದೆ. ಈ ನಿಯಮವು ಎಸ್‌ಐಆರ್...

‘ಇವಿಎಂ ಬಿಜೆಪಿ ಬಳಸುವ ಸಾಧನ’: ಬ್ಯಾಲೆಟ್ ಪೇಪರ್‌ಗೆ ಮರಳಲು ಖರ್ಗೆ ಒತ್ತಾಯ; ಗ್ಯಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಮತ್ತು ಕೇಂದ್ರದ ಆಡಳಿತಾರೂಢ ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ...

‘ಮಹಿಳೆಯರೇ ಪರಿಸ್ಥಿತಿ ಬದಲಿಸುತ್ತಾರೆ’: ಸುರಕ್ಷತೆ ಹೆಸರಿನಲ್ಲಿ ನಿರ್ಬಂಧ, ಅತ್ಯಾಚಾರ, ಲಿಂಗಾಧಾರಿತ ಹಿಂಸೆ ವಿರುದ್ಧ ದೆಹಲಿ ವಿದ್ಯಾರ್ಥಿನಿಯರ ಪ್ರತಿಭಟನೆ

ನವದೆಹಲಿ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಿರುವ ಬೆನ್ನಲ್ಲೇ, ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಅವರ ಸ್ವಾತಂತ್ರ್ಯ ಮತ್ತು ಚಲನವಲನದ ಮೇಲೆಯೇ ನಿರ್ಬಂಧ ಹೇರುವ ಕ್ರಮಗಳ ವಿರುದ್ಧ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಬೀದಿಗಿಳಿದು...

ಉಮರ್ ಖಾಲಿದ್ – ಶಾರ್ಜೀಲ್ ಇಮಾಮ್ ಅವರ ಮೂರನೇ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು...

Mysore| SIR ವಿರುದ್ಧ ಸರ್ಕಾರ ವಿಶೇಷ ಅಧಿವೇಶನ ನಡೆಸಲಿ: ಪ್ರಕಾಶ್ ರಾಜ್

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹಕ್ಕು ಕಸಿಯಲಾಗುತ್ತಿದ್ದು, ಈ ಅನ್ಯಾಯದ ವಿರುದ್ಧ ನಾಗರಿಕ ಸಂಘಟನೆಗಳು ಸಂಗ್ರಹಿಸಿರುವ...