Homeಮುಖಪುಟಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

- Advertisement -
- Advertisement -

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ (ಆ.31) ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠವು, ವಕೀಲ ಎನ್.ಕೆ. ಗೋಸ್ವಾಮಿ ಸಲ್ಲಿಸಿದ್ದ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿತು. ಬದಲಿಗೆ, ತಮ್ಮ ಕುಂದುಕೊರತೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಹೈಕೋರ್ಟ್ ಅನ್ನು ಸಂಪರ್ಕಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿತು. “ನೀವು ಹೈಕೋರ್ಟ್‌ಗೆ ಹೋಗಿ ಅರ್ಜಿ ಸಲ್ಲಿಸಿ” ಎಂದು ಪೀಠವು ಅರ್ಜಿದಾರರಿಗೆ ತಿಳಿಸಿತು.

ಅರ್ಜಿದಾರರ ವಾದವೇನು?

ವಿಚಾರಣೆ ವೇಳೆ ಅರ್ಜಿದಾರ ಗೋಸ್ವಾಮಿ ತಮ್ಮ ವಾದ ಮಂಡಿಸಿ, “ನಾನು ಕೇಂದ್ರ ಸರ್ಕಾರದ ಎಥನಾಲ್ ಮಿಶ್ರಣ ನೀತಿಯನ್ನು ಪ್ರಶ್ನಿಸುತ್ತಿಲ್ಲ. ಗ್ರಾಹಕರಿಗೆ ಮಾರಾಟ ಮಾಡುವ ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಯುವ ಹಕ್ಕು ನಮಗಿದೆ. ನಾವು ಬಿಸ್ಕತ್ತು ಪ್ಯಾಕೇಜ್ ಖರೀದಿಸಿದಾಗಲೂ ಅದರಲ್ಲಿ ಬಳಸಿರುವ ಪದಾರ್ಥಗಳ ವಿವರವಿರುತ್ತದೆ. ಗ್ರಾಹಕರು ತಾವು ಖರೀದಿಸುವ ಇಂಧನದ ನಿಖರ ಸಂಯೋಜನೆ ತಿಳಿಯುವುದು ಅವರ ಸಂವಿಧಾನಾತ್ಮಕ ಹಕ್ಕು” ಎಂದು ಅವರು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರದ ಆಕ್ಷೇಪವೇನು?

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತದ ಅಟಾರ್ನಿ ಜನರಲ್ (ಎಜಿ) ಆರ್. ವೆಂಕಟರಮಣಿ, “ಅರ್ಜಿದಾರರು ಭಾರತ ಸರ್ಕಾರ ತಮಗೆ ಜವಾಬ್ದಾರಿಯಾಗಿರಬೇಕು ಎಂದು ಬಯಸುತ್ತಿದ್ದಾರೆ. ಅಲ್ಲದೆ, ಇದು ಪ್ರಾಯೋಜಿತ ಅರ್ಜಿ” ಎಂದು ಅಭಿಪ್ರಾಯಪಟ್ಟ ಅವರು, “ಕಳೆದ ವರ್ಷವೂ ಸುಪ್ರೀಂ ಕೋರ್ಟ್ ಇಂತಹದ್ದೇ ಅರ್ಜಿಯನ್ನು ವಜಾಗೊಳಿಸಿತ್ತು” ಎಂಬುದನ್ನು ನೆನಪಿಸಿದರು.

ಅರ್ಜಿದಾರರ ಪ್ರಮುಖ ಬೇಡಿಕೆಗಳು:

ಪೆಟ್ರೋಲ್ ಬಂಕ್‌ಗಳ ಪ್ರತಿ ನೊಜಲ್ ಮತ್ತು ಇಂಧನ ಬಿಲ್‌ಗಳಲ್ಲಿ ಎಥನಾಲ್ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು. ವಾಹನಗಳ ಎಥನಾಲ್ ಹೊಂದಾಣಿಕೆ ಕುರಿತು ಅಧಿಕೃತ ಮಾಹಿತಿ ನೀಡಬೇಕು. ಜೊತೆಗೆ, ಹಳೆಯ ವಾಹನಗಳಿಗೆ ಸೂಕ್ತ ಪರ್ಯಾಯ ಇಂಧನ ಅಥವಾ ಸುಲಭ ಪರಿವರ್ತನೆಯ ಚೌಕಟ್ಟು ಕಲ್ಪಿಸಬೇಕು. ವಾಹನಗಳ ವಾರಂಟಿ, ಇನ್ಶೂರೆನ್ಸ್ ಹಾಗೂ ಎಥನಾಲ್ ಮಿಶ್ರಣದಿಂದಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸಬೇಕು.

ವಿವಾದದ ಹಿನ್ನೆಲೆ:

2025 ರಲ್ಲಿ ದೇಶದಾದ್ಯಂತ ಇ20 (E20 – 20% ಎಥನಾಲ್ ಮಿಶ್ರಿತ) ಪೆಟ್ರೋಲ್ ಅನ್ನು ವ್ಯಾಪಕವಾಗಿ ವಿತರಿಸಲು ಪ್ರಾರಂಭಿಸಲಾಯಿತು. ಆದರೆ, 2023 ಕ್ಕಿಂತ ಮೊದಲು ತಯಾರಾದ ಹಳೆಯ ವಾಹನಗಳ ಎಂಜಿನ್‌ಗೆ ಇ೨೦ ಪೆಟ್ರೋಲ್ ಸೂಕ್ತವಲ್ಲದಿರಬಹುದು. ಇದರಿಂದ ಎಂಜಿನ್ ಕಾಂಪೊನೆಂಟ್‌ಗಳು ಹಾಳಾಗುವ ಹಾಗೂ ಮೈಲೇಜ್ ಕಡಿಮೆಯಾಗುವ ಆತಂಕ ವಾಹನ ಮಾಲೀಕರಲ್ಲಿದೆ.

ಕಳೆದ ವರ್ಷವೂ (ಸೆಪ್ಟೆಂಬರ್ 1, 2025) ಸುಪ್ರೀಂ ಕೋರ್ಟ್ ಇ20 ಪೆಟ್ರೋಲ್ ವಿತರಣೆ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಎಥನಾಲ್ ಮಿಶ್ರಣ ನೀತಿಯು ದೇಶದ ಇಂಧನ ಭದ್ರತೆಯನ್ನು ಹೆಚ್ಚಿಸುತ್ತದೆ, ಕಬ್ಬು ಬೆಳೆಗಾರರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಸುಮಾರು ಶೇಕಡಾ 30 ರಷ್ಟು ಕಡಿಮೆ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಾ ಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ನಿವಾಸದ ಬಳಿಯ ಐತಿಹಾಸಿಕ ಮಸೀದಿ ತೆರವಿಗೆ ಆರು ದಿನಗಳ ಗಡುವು : ವಕ್ಫ್ ಬೋರ್ಡ್ ಕೈಬಿಟ್ಟಿದೆ, ಕುಡಿಯಲು ನೀರೂ ಇಲ್ಲ ಎಂದ ಇಮಾಮ್

ನವದೆಹಲಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಬಳಿ ಇರುವ ಐತಿಹಾಸಿಕ ಮಸೀದಿಯೊಂದಕ್ಕೆ ಅಕ್ಟೋಬರ್ 19, ಸೋಮವಾರದಂದು ತೆರವು ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಭೂಮಿ ಮತ್ತು ಅಭಿವೃದ್ಧಿ ಕಚೇರಿಯು (ಎಲ್&ಡಿಒ)...

‘ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ’: ಎಸ್ಐಆರ್ ವಿರೋಧಿಸಿ ಅ. 28ರಂದು ಮುಂಬೈನಲ್ಲಿ ಬೃಹತ್ ಪ್ರತಿಭಟನೆಗೆ ಪ್ರಕಾಶ್ ಅಂಬೇಡ್ಕರ್ ಕರೆ

ಮುಂಬೈ: ಮತದಾನದ ಹಕ್ಕು ಕೇವಲ ರಾಜಕೀಯ ಪ್ರಕ್ರಿಯೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ,...

ಹೋರಾಟಗಾರನ ಕೊಲೆ, ಅಮಿತ್ ಶಾ ಭೇಟಿ : ಪಂಜಾಬ್‌ನಲ್ಲಿ ಎಎಪಿಗೆ ಮುಳುವಾಗುತ್ತಾ ಡ್ರಗ್ ವಿರೋಧಿ ಜನಾಕ್ರೋಶ?

ಕಳೆದ ವಾರ ಪಂಜಾಬ್‌ನ ಮಾನಸಾ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್ ಮಾಲೀಕನೊಬ್ಬ 42 ವರ್ಷದ ಮಾದಕವಸ್ತು ವಿರೋಧಿ ಕಾರ್ಯಕರ್ತ (Anti-Drugs Activist's) ಪರ್ವಿಂದರ್ ಸಿಂಗ್ ಝೋಟಾ ಅವರನ್ನು ಹತ್ಯೆ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ....

ಜಂತರ್ ಮಂತರ್ ಅತಿಕ್ರಮಣ ಆರೋಪ: ಸಿಜೆಪಿಯ ಅಶುತೋಷ್, ಸೌರವ್ ಬಂಧನ ಮುಂದುವರಿಕೆ, ಅಪರಾಧ ವಿಭಾಗಕ್ಕೆ ತನಿಖೆ ವರ್ಗಾವಣೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಹ-ಸಂಚಾಲಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ವಿರುದ್ಧ ದಾಖಲಾದ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು...

‘ವೋಟ್ ಚೋರಿ ಸರ್ಕಾರ’ದಿಂದ ಗ್ರಾಮೀಣ ಕಾರ್ಮಿಕರ ಕೂಲಿ ಕಳ್ಳತನವೂ ಪರಿಪೂರ್ಣ: ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಬದಲಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆ ಗ್ರಾಮೀಣ ಭಾರತದ ಬಡವರು ಮತ್ತು...

ದೆಹಲಿ ಪೊಲೀಸರಿಂದ ಎನ್‌ಎಸ್‌ಯುಐ ನಾಯಕರ ಮೇಲೆ ಹಲ್ಲೆ : ಜೈಪುರ ಕಮಿಷನರ್ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಿಂದ ಆಹೋರಾತ್ರಿ ಧರಣಿ

ರಾಜಸ್ಥಾನ ಕಾಂಗ್ರೆಸ್‌ನ ಹಿರಿಯ ನಾಯಕರು ಮತ್ತು ರಾಜ್ಯ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಸೇರಿದಂತೆ ಹಲವಾರು ಶಾಸಕರು ಜೈಪುರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಸೋಮವಾರ (ಅಕ್ಟೋಬರ್ 19) ರಾತ್ರಿಯಿಡೀ ಧರಣಿ ಸತ್ಯಾಗ್ರಹ...

ಸೋಶಿಯಲ್ ಮೀಡಿಯಾ ಅಕೌಂಟ್ ಬ್ಲಾಕ್: ಬಳಕೆದಾರರಿಗೆ ಸರ್ಕಾರದ ನೋಟಿಸ್‌ ಪ್ರತಿ ನೀಡುವುದು ಕಡ್ಡಾಯ ಎಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌

ಸಾಮಾಜಿಕ ಜಾಲತಾಣಗಳಲ್ಲಿನ ಖಾತೆ ಅಥವಾ ವಿಷಯಗಳನ್ನು (Content) ತಡೆಹಿಡಿಯಲು ಸರ್ಕಾರವು ಮಧ್ಯವರ್ತಿ ಸಂಸ್ಥೆಗಳಿಗೆ (ಫೇಸ್‌ಬುಕ್, ಟ್ವಿಟರ್ ಇತ್ಯಾದಿ) ಸೂಚನೆ ಅಥವಾ ಆದೇಶ ರವಾನಿಸಿದ ತಕ್ಷಣ, ಆ ಆದೇಶ ಅಥವಾ ನೋಟಿಸ್‌ನ ಪ್ರತಿಯನ್ನು ಸಂಬಂಧಪಟ್ಟ...

ಉತ್ತರ ಪ್ರದೇಶ| ದೇವಾಲಯದಲ್ಲಿ ಪೂಜೆ ಸಲ್ಲಿಸಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ

ದಲಿತ ಸಮುದಾಯದ ವ್ಯಕ್ತಿಯೊಬ್ಬರು ಧಾರ್ಮಿಕ ಸ್ಥಳದಲ್ಲಿ ವಾಸಿಸುತ್ತಿರುವುದಕ್ಕೆ ಮತ್ತು ಅವರು ಪೂಜೆ ಸಲ್ಲಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಬ್ಬರು ವ್ಯಕ್ತಿಗಳು, ಅವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಸಾಲದ್ದಕ್ಕೆ ಅವರನ್ನು ದೇವಾಲಯದೊಳಗೆ...

ಸುಪ್ರೀಂ ಕೋರ್ಟ್‌ ತೀರ್ಪನ್ನು ‘ನ್ಯಾಯ ನಿರಾಕರಣೆ’ ಎಂದು ಟೀಕಿಸುವುದು ಅಪರಾಧವಲ್ಲ : ಕರ್ನಾಟಕ ಹೈಕೋರ್ಟ್

ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿನ ವ್ಯಾಪ್ತಿಯನ್ನು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪೊಂದನ್ನು ಟೀಕಿಸುವ ಘೋಷವಾಕ್ಯಗಳನ್ನು ಸಾರ್ವಜನಿಕ ಗೋಡೆಯ ಮೇಲೆ ಬರೆದಿದ್ದಾರೆ ಎಂಬ ಆರೋಪದ ಮೇರೆಗೆ 13 ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್...

‘ಭಾರತದಲ್ಲಿ ಆಡಳಿತ ಬದಲಾವಣೆ ಆಗುವುದಿಲ್ಲ’: ಪ್ರತಿಭಟನೆ, ಹೋರಾಟಗಳಿಗೆ ಪಶ್ಚಿಮ ದೇಶಗಳ ಪ್ರಭಾವ ಕಾರಣ ಎಂದ ಮೋಹನ್ ಭಾಗವತ್

ನಾಗ್ಪುರ: ಭಾರತದಲ್ಲಿ ಆಡಳಿತ ಬದಲಾವಣೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವ ವಾದವನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರೋಧಿಸಿದ್ದಾರೆ. ಆಡಳಿತ ಬದಲಾವಣೆಗೆ ಕರೆ ನೀಡುವ ಚಳವಳಿಗಳು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಬದಲಿಗೆ,...