HomeಅಂಕಣಗಳುKarnataka against SIRSIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

- Advertisement -
- Advertisement -

“ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ. ಎಸ್‍ಐಆರ್ ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ,” ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ‘ಎಲೆಕ್ಷನ್ ಕಮಿಷನ್ ಚಲೋ’ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘1950ರ ಮತದಾರರ ಪರಿಷ್ಕರಣೆಯೇ ನಮಗೆ ಮಾದರಿ’

“ನಾವು ಸರಿ ಎಂದು ಹೇಳುತ್ತಿರುವುದು 1950ರಲ್ಲಿ ನಡೆದ ಮತದಾರರ ಪರಿಷ್ಕರಣೆಯನ್ನು. ಅಂದು ನಡೆದ ಪ್ರಕ್ರಿಯೆ ಪ್ರತಿಯೊಬ್ಬ ನಾಗರಿಕನನ್ನೂ ಒಳಗೊಳ್ಳುವ (Inclusive) ಕೆಲಸ ಮಾಡಿತು. ಚುನಾವಣಾ ಆಯೋಗವೂ ಪ್ರತಿಯೊಬ್ಬರನ್ನೂ ಒಳಗೊಳ್ಳಬೇಕು ಎಂದೇ ಹೇಳುತ್ತದೆ. ಹಿಂದಿನ ಎಲ್ಲ ಪರಿಷ್ಕರಣೆಗಳು ದೇಶದ ಪ್ರಜೆಗಳಿಗೆ ಸಂಪೂರ್ಣ ಗೌರವ ನೀಡಿ, ಸರಿಯಾಗಿ ನಡೆಯುತ್ತಿದ್ದವು. ಆದರೆ ಇಂತಹ ಪವಿತ್ರ ಪ್ರಕ್ರಿಯೆ ಈಗ ಸಂಚಾಗಿ ಮಾರ್ಪಟ್ಟಿರುವುದೇಕೆ?” ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.

“ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲೇ ದೇಶದ ಪ್ರಜಾಪ್ರಭುತ್ವವನ್ನು ಮೊದಲು ಕೊಲ್ಲಲಾಯಿತು. ಆ ಮೂಲಕ ಚುನಾವಣಾ ಆಯುಕ್ತರನ್ನು ಪ್ರಶ್ನಾತೀತ ಮಾಡಲಾಗಿದೆ. ಅಂಜಲಿ ಭಾರದ್ವಾಜ್ ಅವರು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಅರ್ಜಿ ಹಾಕಿದಾಗ, ಎಸ್‍ಐಆರ್ ಎಂಬುದು ಸ್ವತಃ ಚುನಾವಣಾ ಆಯೋಗದ ನಿರ್ಧಾರವೇ ಅಲ್ಲ ಎಂಬ ಸತ್ಯ ಹೊರಬಿದ್ದಿದೆ. ಹಾಗಿರುವಾಗ ಇದು ಯಾರ ನಿರ್ಧಾರ? ಯಾರ ಸಂಚು?” ಎಂದು ಅವರು ತಾರಾಟೆಗೆ ತೆಗೆದುಕೊಂಡರು.

‘ರಾಜ್ಯದಲ್ಲೇಕೆ ಇಷ್ಟು ಅರ್ಜೆಂಟ್?’

ಎಸ್‍ಐಆರ್ ಪ್ರಕ್ರಿಯೆಯ ಕಾಲಮಿತಿ ಮತ್ತು ಆತುರವನ್ನು ಪ್ರಶ್ನಿಸಿದ ಅವರು, “ದೇಶದ ಪ್ರಜೆಗಳನ್ನು ಪ್ರತಿದಿನ ಪರೀಕ್ಷೆಗೆ ಕೂರಿಸಲು ನೀವು ಯಾರು? ಬಂಗಾಳದಲ್ಲೂ ಹೀಗೆಯೇ ತರಾತುರಿಯಲ್ಲಿ ಎಸ್‍ಐಆರ್ ಮಾಡಿದ್ರಿ. ಅಲ್ಲಿ ಸಾಮಾನ್ಯ ಜನರಷ್ಟೇ ಅಲ್ಲ, ಸ್ವತಃ ಚುನಾವಣಾ ಅಧಿಕಾರಿಗಳ ಮತಗಳೇ ಮಾಯವಾಗಿವೆ. ಅಲ್ಲಿ 38 ಜನರು ಮೇಲ್ಮನವಿ ಸಲ್ಲಿಸಿದ್ದು, ಅವರ ಅರ್ಜಿ ಇತ್ಯರ್ಥವಾಗಲು 20 ವರ್ಷ ಬೇಕು! ಈಗಾಗಲೇ ಅಲ್ಲಿನ ಟ್ರಿಬ್ಯೂನಲ್ ಇತ್ಯರ್ಥ ಮಾಡಿರುವ ಪ್ರಕರಣಗಳಲ್ಲಿ ಚುನಾವಣಾ ಆಯೋಗ ತಪ್ಪು ಮಾಡಿದೆ ಎಂದು ರುಜುವಾತಾಗಿದೆ. ಹೀಗಿರುವಾಗ ಈ ಹುನ್ನಾರವನ್ನು ನಾವು ಹೇಗೆ ಒಪ್ಪಿಕೊಳ್ಳಲಿ?” ಎಂದು ಕಿಡಿಕಾರಿದರು.

“ಬೇರೆ ಬೇರೆ ರಾಜ್ಯಗಳಲ್ಲಿ ಕೋಟಿ ಕೋಟಿ ಮತದಾರರ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ನಮಗೆ ತಿಳಿಸದೆ ಜೂನ್ 16ಕ್ಕೆ ಮತದಾರರ ಪಟ್ಟಿಯನ್ನು ಏಕೆ ಫ್ರೀಝ್ ಮಾಡಿದ್ರಿ? ಒಂದೂವರೆ ತಿಂಗಳಲ್ಲಿ ಒಂದೂವರೆ ಕೋಟಿ ಜನರನ್ನು ಹೇಗೆ ಡಿಲೀಟ್ ಪಟ್ಟಿಗೆ ಹಾಕಿದ್ರಿ? ಬಿಎಲ್‍ಒಗಳು ಮನೆ ಮನೆಗೆ ಹೋಗಬೇಕು ಎನ್ನುತ್ತೀರಿ. ಅವರು ಹೋಗಿದ್ದಾರೆಯೇ? ರಾಜ್ಯದಲ್ಲಿ ಎಸ್‍ಐಆರ್ ಸರಿಯಾಗಿ ನಡೆದಿದೆಯೇ?” ಎಂದು ಸಾಲು ಸಾಲು ಪ್ರಶ್ನೆಗಳನ್ನು ಎಸೆದರು.

‘ಸ್ಥಳಾಂತರಗೊಂಡವರು ಚಂದ್ರಲೋಕಕ್ಕೆ ಹೋದರೆ?’

ಅಧಿಕಾರಿಗಳ ಅಸಮರ್ಪಕ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಅವರು, “ನೀವು ಕೈ-ಕಾಲು ಬೇಡಿ ಮತ ಹಾಕಿಸಿಕೊಂಡು ಅಧಿಕಾರಕ್ಕೆ ಏರಿ, ಈಗ ಮತದಾರರು ದಾಖಲೆಗಳಿಗಾಗಿ ಅಲೆದಾಡುವಂತೆ ಮಾಡುತ್ತಿದ್ದೀರ. ನೀವು ಸ್ಥಳಾಂತರಗೊಂಡಿದ್ದಾರೆ ಎಂದಿರುವ ಮತದಾರರು ಎಲ್ಲಿದ್ದಾರೆ? ಚಂದ್ರಲೋಕಕ್ಕೆ ಹೋಗಿದ್ದಾರೆಯೇ? ಈ ದೇಶದಲ್ಲಿ ಬದುಕಿಗಾಗಿ ಸ್ಥಳಾಂತರಗೊಳ್ಳುವುದು ಮಹಾಪಾಪವೇ?” ಎಂದು ಪ್ರಶ್ನಿಸಿದರು.

“ರಾಜ್ಯದಲ್ಲಿ 16 ಲಕ್ಷ ಜನರು ಸತ್ತೋಗಿದ್ದಾರೆ ಎನ್ನುತ್ತೀರಿ, ಇದನ್ನು ನಾವು ನಂಬಬೇಕೇ? ನೀವು ‘ಅದರ್ಸ್’ (Others) ಎಂದು ಪಟ್ಟಿ ಮಾಡಿರುವವರು ಯಾರು? ಅವರೇನು ಮನುಷ್ಯರೇ, ಕುರಿಗಳೇ ಅಥವಾ ಕಲ್ಲುಗಳೇ? 9 ತಿಂಗಳ ವಯಸ್ಸಿನ ಮಿತಿ ಎನ್ನುತ್ತೀರಿ, ಅವಳಿ ಜವಳಿ ಮಕ್ಕಳು ಏನು ಮಾಡಬೇಕು? 6ಕ್ಕಿಂತ ಹೆಚ್ಚು ಮಕ್ಕಳು ಇರಬಾರದು ಎಂದರೆ 10 ಮಕ್ಕಳನ್ನು ಹೆತ್ತ ತಾಯಂದಿರು ಏನು ಮಾಡಬೇಕು? ನುಸುಳುಕೋರರು ಬಂದಿದ್ದಾರೆ, ಅವರನ್ನು ಹೊರಗೆ ಹಾಕಲು ಎಸ್‍ಐಆರ್ ಎನ್ನುತ್ತೀರಿ. ನುಸುಳುಕೋರರು ಬರುವಾಗ ಗೃಹ ಮಂತ್ರಿ ಅಮಿತ್ ಶಾ ಕಡ್ಲೆಕಾಯಿ ತಿನ್ನುತ್ತಿದ್ದರೇ? ಒಬ್ಬ ನುಸುಳುಕೋರನನ್ನು ತೋರಿಸಿ ಅಂದರೆ ಸುಪ್ರೀಂ ಕೋರ್ಟ್‌ಗೂ ಪಟ್ಟಿ ಕೊಡಲಿಲ್ಲ ಏಕೆ?” ಎಂದು ಕಟುವಾಗಿ ವಿಮರ್ಶಿಸಿದರು.

ದಿನಗೂಲಿ ಕಾರ್ಮಿಕರ ಸ್ವಾಭಿಮಾನಕ್ಕೆ ಧಕ್ಕೆ

ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡ ನಟ, “ನಾನು ಸ್ಯಾಟಲೈಟ್ ಟೌನ್ ಬಳಿ ಹೋದಾಗ ಒಬ್ಬ ಬಿಎಲ್‍ಒ ಬಂದು ಹುಷಾರಿಲ್ಲ ಎಂದು ಹೊರಟುಹೋದರು. ಇನ್ನೊಬ್ಬರು ಬಂದರು, ಅವರಿಗೆ ಏರಿಯಾ ಗೊತ್ತಿಲ್ಲ, ಜನರ ಪರಿಚಯವೂ ಇಲ್ಲ. ಹಾಗಾಗಿ ಎಲ್ಲರನ್ನೂ ‘ಪರ್ಮನೆಂಟ್ ಶಿಫ್ಟ್’ ಎಂದು ಮಾರ್ಕ್ ಮಾಡಿ ಹೊರಟುಹೋದರು. ಈ ಜನರು ಹೂ ಮಾರುವವರು, ಸಣ್ಣ ಹೋಟೆಲ್ ಇಟ್ಟವರು, ಕಟ್ಟಡ ಕಾರ್ಮಿಕರು. ಇವರಿಗೆ ಸರ್ಕಾರ ಕೆಲಸ ಕೊಟ್ಟಿಲ್ಲ, ಅವರೇ ಸ್ವಂತ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ದಿನಗೂಲಿ ಕಾರ್ಮಿಕರು ಚುನಾವಣಾ ಆಯೋಗದ ತಪ್ಪಿಗೆ ಅಧಿಕಾರಿಗಳ ಮುಂದೆ ಕೈಕಟ್ಟಿ ನಿಲ್ಲಬೇಕೇ? ಇದುವರೆಗೆ ಹಾಕಿದ ವೋಟರ್ ಐಡಿ ವ್ಯಾಲಿಡ್ ಅಲ್ಲ ಎನ್ನಲು ನಿಮಗೆ ನಾಚಿಕೆಯಾಗುವುದಿಲ್ಲವೇ?” ಎಂದು ಗುಡುಗಿದರು.

ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

ನಿಮ್ಮ ಕುತಂತ್ರ ನಮಗೆ ಗೊತ್ತಾಗಿದೆ, ಎಸ್‍ಐಆರ್ ತಕ್ಷಣವೇ ರದ್ದಾಗಲೇಬೇಕು. ಈ ಹಿಂದಿನಂತೆಯೇ ಸರಳವಾಗಿ ಪರಿಷ್ಕರಣೆ ಮಾಡಿ. ಜನರನ್ನು ಯಾಕೆ ಭಯ ಪಡಿಸುತ್ತಿದ್ದೀರಿ ನಾವು ಇದನ್ನು ಒಪ್ಪುವುದಿಲ್ಲ. ರಾಜ್ಯ ಸರ್ಕಾರಕ್ಕೆ ಹೇಳುತ್ತಿದ್ದೇನೆ, ನಿಮ್ಮನ್ನು ಆಯ್ಕೆ ಮಾಡಿರುವುದು ಇದೇ ಮತದಾರರು. ಇವರಿಗೆ ತೊಂದರೆಯಾಗುವಾಗ ನೀವು ಇವರ ಜೊತೆ ನಿಲ್ಲಬೇಕು. ಚುನಾವಣಾ ಆಯುಕ್ತರನ್ನು ಕರೆದುಕೊಂಡು ಬನ್ನಿ. ಒಂದೂವರೆ ಕೋಟಿ ಜನರು ಕೈಕಟ್ಟಿ ನಿಲ್ಲುವುದನ್ನು ಕರ್ನಾಟಕದ ಐದು ಕೋಟಿ ಜನರು ಒಪ್ಪುವುದಿಲ್ಲ. ಆಯೋಗದವರು ನಮ್ಮ ಅಳಲು ಕೇಳಲು ಇಲ್ಲಿಗೆ ಬರಬೇಕು, ಇಲ್ಲದಿದ್ದರೆ ಮುತ್ತಿಗೆ ಹಾಕುತ್ತೇವೆ, ಎಂದು ಎಚ್ಚರಿಸಿದರು.

ಕೊನೆಯಲ್ಲಿ, ನಾನೂ ಇವರಂತೆಯೇ ಸಮಾನ ಸಂತ್ರಸ್ತ ಮತದಾರ. ಇವರಿಗೆ ಆದ ಅನ್ಯಾಯ ನಮಗೂ ಆದ ಅನ್ಯಾಯ. ಮಾಧ್ಯಮದವರು ಜನರ ಜೊತೆ ನಿಲ್ಲಬೇಕು, ಇಲ್ಲದಿದ್ದರೆ ನಿಮ್ಮನ್ನೂ ನಾವು ಪ್ರಶ್ನೆ ಮಾಡುತ್ತೇವೆ, ಎಂದರು.

ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ 1.07 ಕೋಟಿಗೂ ಅಧಿಕ (ಸುಮಾರು 1.08 ಕೋಟಿ) ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ.ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಈ ಕರಡು ಪಟ್ಟಿಯ ಪ್ರಕಾರ, ರಾಜ್ಯದ ಒಟ್ಟು ಮತದಾರರ ಸಂಖ್ಯೆ 5.54 ಕೋಟಿಯಿಂದ 4.46 ಕೋಟಿಗೆ ಕುಸಿದಿದೆ. ಅಂದರೆ ರಾಜ್ಯದ ಸುಮಾರು ಶೇ. 19.5 ರಷ್ಟು ಮತದಾರರ ಹೆಸರುಗಳು ಸದ್ಯಕ್ಕೆ ಕರಡು ಪಟ್ಟಿಯಿಂದ ಹೊರಗುಳಿದಿವೆ.

ಇನ್ನು ಬೃಹತ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ, ಬರೋಬ್ಬರಿ 32,74,535 ಮತದಾರರು ‘ಶಾಶ್ವತ ಸ್ಥಳಾಂತರ’ಗೊಂಡಿದ್ದಾರೆ ಎಂದು ವರ್ಗೀಕರಿಸಲಾಗಿದೆ. ಇದರ ಜೊತೆಗೆ 7,27,258 ಗೈರುಹಾಜರಿ, 3,19,113 ಮೃತ ಮತದಾರರು, 63,548 ನಕಲಿ ಅಥವಾ ಬೇರೆಡೆ ದಾಖಲಾದವರು ಹಾಗೂ 3,04,249 ಇತರೆ ಸೇರಿದಂತೆ ಜಿಬಿಎ ವ್ಯಾಪ್ತಿಯಲ್ಲಿ ಮೃತಪಟ್ಟವರು ಮತ್ತು ಸ್ಥಳಾಂತರಗೊಂಡವರ ಒಟ್ಟು ಸಂಖ್ಯೆಯೇ ಭಾರಿ ಅಂದರೆ 35,93,648 ತಲುಪಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...