HomeUncategorizedSIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

- Advertisement -
- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ, ಮ್ಯಾಪ್ ಆಗದ ಅಥವಾ ವ್ಯತ್ಯಾಸಗಳಿರುವ (Anomalies) ಕೋಟ್ಯಂತರ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ಆಯೋಗದ ಅಧಿಕಾರಿಗಳು ಮಾಡುತ್ತಿರುವ ಪ್ರತಿಪಾದನೆಯನ್ನು ಆಲಿಸಿದರೆ, ಈ ಇಡೀ ಪ್ರಕ್ರಿಯೆ ಮುಗಿದ ನಂತರ ರಾಜ್ಯದ ಮತದಾರರ ಪಟ್ಟಿ ಸಂಪೂರ್ಣ ಶುದ್ಧೀಕರಣಗೊಳ್ಳಲಿದೆ, ಎಲ್ಲ ಗೊಂದಲಗಳಿಗೂ ಮುಕ್ತಿ ಸಿಗಲಿದೆ ಎಂದೆನಿಸುತ್ತದೆ.

ವಾಸ್ತವವನ್ನು ಪರಿಶೀಲಿಸಿದರೆ, 2002ರ ಪಟ್ಟಿಯನ್ನೇ ಆಧಾರವಾಗಿಟ್ಟುಕೊಂಡು ಮಾಡುತ್ತಿರುವ ಈ ಪರಿಶೀಲನಾ ಕ್ರಮವೇ ಮೂಲತಃ ಲೋಪಗಳಿಂದ ಕೂಡಿದೆ. 2002ರಲ್ಲಿ ಮ್ಯಾನುವಲ್ ಆಗಿ (ಕೈಯಿಂದ) ದಾಖಲಿಸಲಾದ ಪಟ್ಟಿಗಳಲ್ಲಿ ಇದ್ದ ಅಕ್ಷರ ದೋಷಗಳು, ವಯಸ್ಸಿನ ವ್ಯತ್ಯಾಸಗಳು ಹಾಗೂ ವಿಳಾಸದ ಎಡವಟ್ಟುಗಳಿದ್ದವು. ನಂತರದ ದಿನಗಳಲ್ಲಿ ಬಂದ ಡಿಜಿಟಲ್ ಡೇಟಾ ಎಂಟ್ರಿ ಸಿಬ್ಬಂದಿ ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸುವಾಗ ಅಥವಾ ಸಿಸ್ಟಮ್‌ಗೆ ಸೇರಿಸುವಾಗ ಮತ್ತಷ್ಟು ತಪ್ಪುಗಳನ್ನು ಎಸಗಿದ್ದಾರೆ. ಉದಾಹರಣೆಗೆ, ಇಂಗ್ಲಿಷ್ ಪಟ್ಟಿಯಲ್ಲಿ ರಾಜಮ್ಮ ಎಂಬ ಹೆಸರು ‘ಗೌರಮ್ಮ’ ಎಂದು ತಪ್ಪಾಗಿ ದಾಖಲಾಗಿರುವುದಕ್ಕೆ ಸಿಸ್ಟಮ್‌ನ ಡೇಟಾ ಎಂಟ್ರಿ ದೋಷವೇ ಕಾರಣ ಹೊರತು ಮತದಾರರಲ್ಲ. ಈಗ 2002ರ ಅದೇ ದೋಷಪೂರಿತ ಮೂಲ ದತ್ತಾಂಶವನ್ನೇ ಮಾನದಂಡವನ್ನಾಗಿಟ್ಟುಕೊಂಡು 2026ರ ನಿಜವಾದ ಮತದಾರರನ್ನು ಮ್ಯಾಪ್ ಮಾಡಿರುವುದು ಅತ್ಯಂತ ಅವೈಜ್ಞಾನಿಕ.

“ವಿಶೇಷ ತೀವ್ರ ಪರಿಷ್ಕರಣೆ” (SIR)—ಕೇಳಲು ತೀರಾ ಗಂಭೀರ ಹಾಗೂ ಆಡಳಿತಾತ್ಮಕವಾಗಿ ಅತ್ಯಂತ ಶಿಸ್ತಿನಂತೆ ಕಾಣುವ ಪದವಿದು. ಆದರೆ ಈ ಪದಗಳ ಹಿಂದೆ ಅಡಗಿರುವುದು ಪ್ರಜಾಪ್ರಭುತ್ವದ ಮೂಲಭೂತ ಶಕ್ತಿಯಾದ ‘ಮತದಾನದ ಹಕ್ಕು’ಗಳನ್ನು ಯಾಂತ್ರಿಕವಾಗಿ ಕಸಿಯುವ ಬೃಹತ್ ಕುತಂತ್ರ. ಚುನಾವಣಾ ಆಯೋಗವು ದಿಢೀರನೆ ಜಾಗೃತಗೊಂಡು ಕೋಟ್ಯಂತರ ಮತದಾರರಿಗೆ ನೋಟಿಸ್‌ಗಳನ್ನು ಜಾರಿ ಮಾಡುತ್ತಾ, ವಿಚಾರಣೆಯ ಹೆಸರಿನಲ್ಲಿ ಜನರನ್ನು ಬೀದಿಗೆ ತಳ್ಳುತ್ತಿರುವುದನ್ನು ನೋಡಿದರೆ ಪ್ರಶ್ನೆಗಳು ಮೂಡುವುದು ಸಹಜ.

2002ರ ನಂತರ ನಡೆದ ಚುನಾವಣೆಗಳು ನ್ಯಾಯಸಮ್ಮತವಲ್ಲವೇ?

ಮೊದಲನೆಯದಾಗಿ, 2002 ರಿಂದ ಇಲ್ಲಿಯವರೆಗೆ ನಡೆದ ಪ್ರತಿಯೊಂದು ಚುನಾವಣೆಯೂ ನ್ಯಾಯಸಮ್ಮತವಾಗಿತ್ತೇ? ಆ ಚುನಾವಣೆಗಳ ಫಲಿತಾಂಶಗಳು ಮತ್ತು ಅವುಗಳಿಂದ ರಚನೆಯಾದ ಸರ್ಕಾರಗಳು ಪ್ರಜಾಸತ್ತಾತ್ಮಕವಾಗಿ ಸಿಂಧುವಾಗಿದ್ದವೇ? ಒಂದು ವೇಳೆ ಆ ಪಟ್ಟಿಗಳು ಸರಿಯಾಗಿದ್ದವು ಎಂದಾದರೆ, ಇಷ್ಟು ದೊಡ್ಡ ಮಟ್ಟದ ಮತದಾರರು ಇಂದೇಕೆ ದಿಢೀರನೆ ಅನರ್ಹರಂತೆ ಕಾಣಿಸುತ್ತಿದ್ದಾರೆ? ಅಕಸ್ಮಾತ್ ಹಿಂದಿನ ಪಟ್ಟಿಗಳಲ್ಲಿ ಕೋಟ್ಯಂತರ ನಕಲಿ ಅಥವಾ ಅರ್ಹರಲ್ಲದ ಮತದಾರರಿದ್ದರೆ, ಇಷ್ಟೆಲ್ಲಾ ವರ್ಷ ಆಯೋಗ ಮಾಡುತ್ತಿದ್ದದ್ದೇನು? 2002 ರಿಂದ ಮತದಾರರ ಪಟ್ಟಿ ಸಿದ್ಧಪಡಿಸಲು ಮತ್ತು ಪರಿಷ್ಕರಿಸಲು ಸಾರ್ವಜನಿಕರ ತೆರಿಗೆ ಹಣದಿಂದ ಖರ್ಚು ಮಾಡಿದ ಕೋಟ್ಯಂತರ ರೂಪಾಯಿಗಳ ಲೆಕ್ಕವನ್ನು ಈಗ ಯಾರು ಕೊಡುತ್ತಾರೆ? ಇಷ್ಟು ವರ್ಷ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮೇಲೆ ಆಯೋಗ ಏನು ಕ್ರಮ ಕೈಗೊಂಡಿದೆ?

ತಮ್ಮದಲ್ಲದ ತಪ್ಪಿಗೆ ವಿಚಾರಣೆಯ ಶಿಕ್ಷೆ

“ಆಯೋಗದ ಈ ಯಾಂತ್ರಿಕ ಧಾವಂತ ಹಾಗೂ ತಂತ್ರಜ್ಞಾನದ ವೈಫಲ್ಯಕ್ಕೆ ರಾಜ್ಯಾದ್ಯಂತ ಸಾಲು ಸಾಲು ಉದಾಹರಣೆಗಳು ಸಿಗುತ್ತವೆ. ಬ್ಯಾಟರಾಯನಪುರದಲ್ಲಿ ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿದ್ದರೂ ಅನ್ನಪೂರ್ಣ ಎಂಬುವವರಿಗೆ ಅಜ್ಜನ ವಯಸ್ಸಿನ ನೆಪವೊಡ್ಡಿ ನೋಟಿಸ್ ನೀಡಲಾಗಿದೆ. ಜಯನಗರದಲ್ಲಿ ಅವಳಿ ಮಕ್ಕಳ ನಡುವೆ 9 ತಿಂಗಳ ಅಂತರವಿಲ್ಲ ಎಂಬ ಕಾರಣಕ್ಕೆ ನೋಟಿಸ್ ಜಾರಿಯಾಗಿದ್ದರೆ, ಕುಕ್ ಟೌನ್‌ನಲ್ಲಿ ಅಧಿಕಾರಿಗಳು ಭಾಷಾಂತರದ ವೇಳೆ ಮಾಡಿದ ಕಾಗುಣಿತ ತಪ್ಪಿಗೆ ಮತದಾರ ವಿಚಾರಣೆಗೆ ಅಲೆಯುವಂತಾಗಿದೆ. ಕೊನೆಗೆ ತಂದೆಯ ಹೆಸರನ್ನೇ ಸರ್‌ನೇಮ್ ಆಗಿ ಬಳಸಿದ್ದಕ್ಕೆ ಪತ್ರಕರ್ತೆ ರೋಹಿಣಿ ಮೋಹನ್ ಅವರಿಗೂ ಆಯೋಗದ ಆಲ್ಗರಿದಮ್ ನೋಟಿಸ್ ಜಾರಿಕೆ ಮಾಡಿದೆ. ಈ ಎಲ್ಲಾ ತಪ್ಪುಗಳನ್ನು ಎಸಗಿದ್ದು ಆಯೋಗದ ಸಿಬ್ಬಂದಿ ಮತ್ತು ಸಿಸ್ಟಮ್, ಆದರೆ ಸಾಲಿನಲ್ಲಿ ನಿಂತು ಪ್ರಾಯಶ್ಚಿತ್ತ ಪಡುತ್ತಿರುವುದು ಮಾತ್ರ ಅಮಾಯಕ ಮತದಾರರು. ಇಂತಹ ಸಾವಿರಾರು ಉದಾಹರಣೆಗಳು ನಮ್ಮ ನಡುವೆ ಕಾಣಸಿಗುತ್ತಿವೆ.

ಎರಡನೆಯದಾಗಿ ಈ ಪರಿಷ್ಕರಣೆಯಲ್ಲಿ ಆಯೋಗ ಬಳಸುತ್ತಿರುವ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (ತಾರ್ಕಿಕ ವೈಪರೀತ್ಯ) ಎಂಬ ಯಾಂತ್ರಿಕ ಆಲ್ಗರಿದಮ್ ವ್ಯವಸ್ಥೆಯೇ ಸಂಪೂರ್ಣ ಅವೈಜ್ಞಾನಿಕ. ಡೇಟಾ ಎಂಟ್ರಿ ಮಾಡುವಾಗ ಕಚೇರಿಯ ಸಿಬ್ಬಂದಿ ಎಸಗಿದ ಸಣ್ಣಪುಟ್ಟ ತಪ್ಪುಗಳಿಗೆಲ್ಲ ಮತದಾರರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ. ಇಂಗ್ಲಿಷ್ ಮತ್ತು ಕನ್ನಡ ಭಾಷಾಂತರದ ಲೋಪಗಳಿಗೆ ಮತದಾರರು ತಾಲೂಕು ಕಚೇರಿಗಳ ಮುಂದೆ ಸಾಲಿನಲ್ಲಿ ನಿಲ್ಲಬೇಕಾಗಿದೆ. ಉದಾಹರಣೆಗೆ, ಕನ್ನಡದ ಅಧಿಕೃತ ಪಟ್ಟಿಯಲ್ಲಿ ‘ರಾಜಮ್ಮ’ ಎಂದು ಸರಿಯಾಗಿಯೇ ಇದ್ದ ಹೆಸರು, ಆಯೋಗದ ಸಿಬ್ಬಂದಿ ಇಂಗ್ಲಿಷ್‌ನಲ್ಲಿ ತಪ್ಪಾಗಿ ಉಲ್ಲೇಖಿಸಿದ ‘ಗೌರಮ್ಮ’ ಎಂಬ ಕಾರಣಕ್ಕೆ ಮ್ಯಾಚ್ ಆಗುತ್ತಿಲ್ಲವೆಂದು ನೋಟಿಸ್ ಪಡೆದಿದೆ. ಸಿಸ್ಟಮ್ ಅಥವಾ ಸಿಬ್ಬಂದಿ ಮಾಡಿದ ಎಡವಟ್ಟಿಗೆ ಶ್ರಮಿಕರು ಮತ್ತು ಬಡ ಮತದಾರರು ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ದಾಖಲೆ ಹಿಡಿದು ಅಲೆಯಬೇಕೇ? ತಪ್ಪು ಮಾಹಿತಿಯನ್ನು ದಾಖಲಿಸಿದ ಆಯೋಗದ ಸಿಬ್ಬಂದಿ ಹೊಣೆಗಾರರಾಗಬೇಕಿತ್ತೋ ಅಥವಾ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಶಿಕ್ಷೆ ಅನುಭವಿಸಬೇಕೋ?

ಮೂರನೆಯದಾಗಿ, ದಾಖಲೆಗಳ ಕಟ್ಟುನಿಟ್ಟಿನ ನೆಪವೊಡ್ಡಿ ನಾಗರಿಕರನ್ನು ವಂಚಿಸಲಾಗುತ್ತಿದೆ. ವಿಚಾರಣೆಯ ವೇಳೆ ಆಯೋಗ ಕೋರುವ ನಿರ್ದಿಷ್ಟ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದ ತಕ್ಷಣಕ್ಕೆ ಒಬ್ಬ ವ್ಯಕ್ತಿ ಈ ದೇಶದ ಪ್ರಜೆಯಲ್ಲವೇ? ಅಥವಾ ಆತನ ಮತದಾನದ ಹಕ್ಕು ನಕಲಿಯೇ? ನಮ್ಮ ದೇಶದ ವಾಸ್ತವವೇನೆಂದರೆ, ಇಂದು ಪಟ್ಟಿಯಲ್ಲಿರುವ ಶೇಕಡಾ 50 ಕ್ಕಿಂತಲೂ ಹೆಚ್ಚು ಸಾಮಾನ್ಯ ಜನರ ಬಳಿ ಆಯೋಗ ನಿಗದಿಪಡಿಸಿರುವ ಅಚ್ಚುಕಟ್ಟಾದ ದಾಖಲೆಗಳಿರುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರನ್ನು ಭಾರತೀಯ ನಾಗರಿಕರಲ್ಲ ಎಂದು ಮತದಾರರ ಪಟ್ಟಿಯಿಂದ ಹೊರಹಾಕುತ್ತೀರಾ? ಜನರ ಬಳಿ ಇರುವ ಸರಳ ಆಧಾರಗಳನ್ನು ಪರಿಗಣಿಸುವಷ್ಟು ಕನಿಷ್ಠ ಸೂಕ್ಷ್ಮತೆಯೂ ಆಡಳಿತಶಾಹಿಗೆ ಇಲ್ಲದಿರುವುದು ದುರಂತ.

21ನೇ ಶತಮಾನದ ತಂತ್ರಜ್ಞಾನ ಯುಗದಲ್ಲಿದ್ದುಕೊಂಡು, ಒಂದು ಸರಳ ಹಾಗೂ ಜನಸ್ನೇಹಿ ಮತದಾರರ ಪಟ್ಟಿಯನ್ನು ರೂಪಿಸುವ ಬದಲು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ಮರುಕ ಹುಟ್ಟುವಂತೆ ಚುನಾವಣಾ ಆಯೋಗ ಮಾಡಿದೆ. ನಾಗರಿಕರಿಗೆ ತೊಂದರೆಯಾಗದಂತೆ ಅತ್ಯಂತ ಸರಳವಾಗಿ ನಡೆಸಬಹುದಾಗಿದ್ದ ಒಂದು ಪ್ರಕ್ರಿಯೆಯನ್ನು, ಚುನಾವಣಾ ಆಯೋಗವು ‘ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಯಾಂತ್ರಿಕ ಹಾಗೂ ಅಮಾನವೀಯ ಪ್ರಯೋಗದ ಮೂಲಕ ಸಂಪೂರ್ಣವಾಗಿ ಕೈಚೆಲ್ಲಿದೆ ಎಂಬುದಷ್ಟೇ ವಾಸ್ತವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...