Homeಮುಖಪುಟಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

- Advertisement -
- Advertisement -

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ ಅನಿವಾರ್ಯವಾಗಿ ನಿವಾಸಿಗಳು ಕಲುಷಿತಗೊಂಡ ಸಮೀಪದ ನದಿಯಿಂದ ನೀರನ್ನು ತರಬೇಕಾದ ಅಥವಾ ಮುನ್ಸಿಪಲ್ ವಾಟರ್ ಟ್ಯಾಂಕರ್‌ಗಳಿಂದ ಹಣ ನೀಡಿ ನೀರನ್ನು ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಅವರ ದೈನಂದಿನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಸುಮಾರು ಶೇಕಡಾ 95ರಷ್ಟು ಮುಸ್ಲಿಂ ಸಮುದಾಯದವರೇ ವಾಸಿಸುವ ಈ ಕಾಲೋನಿಯಲ್ಲಿ, ಅಸಂಘಟಿತ ವಲಯದ ಕಾರ್ಮಿಕರೇ ಹೆಚ್ಚಿದ್ದಾರೆ. ನೀರಿನ ಬಿಕ್ಕಟ್ಟು ಅವರ ದೈನಂದಿನ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಜನರು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ), ಪೊಲೀಸ್ ಇಲಾಖೆ ಹಾಗೂ ಇತರ ಅಧಿಕಾರಿಗಳನ್ನು ಸಂಪರ್ಕಿಸಿ ಅಹವಾಲು ಸಲ್ಲಿಸಿದ್ದರೂ ಸಹ, ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಯಾವುದೇ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.

“ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ರಾಜ್ಯ ಸರ್ಕಾರ ನಮ್ಮನ್ನು ಗುರಿಯಾಗಿಸಿಕೊಂಡು, ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಗುರುತಿನ ಆಧಾರದ ಮೇಲೆ ತಾರತಮ್ಯ ಎಸಗಿದೆ. ಅಲ್ಲದೆ, ಈ ಕೊಳಚೆ ಪ್ರದೇಶದಿಂದ (ಸ್ಲಂ) ನಮ್ಮನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಉದ್ದೇಶಪೂರ್ವಕವಾಗಿಯೇ ನೀರಿನ ಸಂಪರ್ಕವನ್ನು ಕಡಿತಗೊಳಿಸಿದೆ” ಎಂದು ಕಾಲೋನಿಯ ನಿವಾಸಿಗಳು ಗಂಭೀರ ಆರೋಪ ಮಾಡಿರುವುದಾಗಿ altnews.in ವರದಿ ಮಾಡಿದೆ.

“ನದಿಯಿಂದ ನೀರು ತರುವುದು ಹಿರಿಯ ವಯಸ್ಸಿನವರಿಗೆ ಅಪಾಯಕಾರಿಯಾಗಿದೆ. ನದಿಯ ಕೆಸರು ತುಂಬಿದ ಮೆಟ್ಟಿಲುಗಳು ಜಾರುತ್ತಿದ್ದು, ಈಗಾಗಲೇ ನೀರು ತರಲು ಹೋದ ಹಲವರು ಬಿದ್ದು ಗಾಯಗೊಂಡಿದ್ದಾರೆ. ನೀರಿನ ಕೊರತೆಯಿಂದಾಗಿ ಜನರು ‘ವುಝೂ’ (ನಮಾಝ್‌ಗೆ ಮುನ್ನ ಮಾಡುವ ಅಂಗ ಶುದ್ಧೀಕರಣ) ಮಾಡಲು ಸಾಧ್ಯವಾಗುತ್ತಿಲ್ಲ, ಇದರಿಂದ ತಮ್ಮ ಧಾರ್ಮಿಕ ಆಚರಣೆಗೂ ಅಡ್ಡಿಯುಂಟಾಗಿದೆ” ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಜುಲೈ 27 ಮತ್ತು 29ರ ನಡುವೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಕಾರ್ಮಿಕರು ಪೈಪ್‌ಲೈನ್ ದುರಸ್ತಿ ಕಾರ್ಯವನ್ನು ಕೈಗೊಂಡ ನಂತರ ನೀರಿನ ಸರಬರಾಜನ್ನು ಕಡಿತಗೊಳಿಸಲಾಗಿತ್ತು. ಜುಲೈ 29ರಂದು ರಾತ್ರಿ ಸುಮಾರು 11:30 ರ ವೇಳೆಗೆ ನೀರು ಸರಬರಾಜು ಇದ್ದಕ್ಕಿದ್ದಂತೆ ಸಂಪೂರ್ಣವಾಗಿ ಸ್ಥಗಿತಗೊಂಡಿತು ಎಂದು foej.in ವರದಿ ಹೇಳಿದೆ.

“ಪೈಪ್‌ಲೈನ್ ಕೆಲಸ ನಡೆಯುತ್ತಿತ್ತು. ಕಾರ್ಮಿಕರು ಎರಡು ಗುಂಡಿಗಳನ್ನು ತೋಡಿದ್ದರು; ಒಂದು ಕೊಳಚೆ ಪ್ರದೇಶದ (ಸ್ಲಂ) ಪ್ರವೇಶದ್ವಾರದಲ್ಲಿ ಮತ್ತು ಇನ್ನೊಂದನ್ನು ಅದರ ಮತ್ತೊಂದು ತುದಿಯಲ್ಲಿ ತೋಡುವ ಮೂಲಕ ಅದರ ಗಡಿಗಳನ್ನು ಗುರುತಿಸಿದ್ದರು. ಜುಲೈ 28ರಂದು ರಾತ್ರಿ ಸುಮಾರು 11 ಗಂಟೆಗೆ ನೀರಿನ ಸರಬರಾಜನ್ನು ಕಡಿತಗೊಳಿಸಲಾಯಿತು. ಮರುದಿನ ಬೆಳಿಗ್ಗೆ ನೀರು ಸರಬರಾಜು ಪುನರಾರಂಭಗೊಳ್ಳಬಹುದು ಎಂದು ನಾವು ಕಾಯುತ್ತಿದ್ದೆವು, ಆದರೆ ಅಂದಿನಿಂದ ಇದುವರೆಗೆ ನೀರು ಸರಬರಾಜು ಮತ್ತೆ ಆರಂಭವಾಗಿಲ್ಲ” ಎಂಬುವುದಾಗಿ ನಿವಾಸಿಗಳು ತಿಳಿಸಿದ್ದಾರೆ ಎಂದು foej.in ವರದಿ ವಿವರಿಸಿದೆ.

ಸ್ಥಳೀಯ ನಿವಾಸಿಗಳ ಪ್ರಕಾರ, ಜ್ಯೋತಿನಗರ ಕಾಲೋನಿಯಲ್ಲಿ ನೀರಿನ ಸರಬರಾಜು ಸರಿಯಾಗಿತ್ತು. ಪೈಪ್ ದುರಸ್ಥಿ ಮಾಡುವಂತೆ ಸ್ಥಳೀಯ ಮುನ್ಸಿಪಾಲಿಟಿಗಾಗಲಿ, ಅಥವಾ ಇತರ ಯಾವುದೇ ಅಧಿಕಾರಿಗಳಿಗಾಗಲಿ ಇಲ್ಲಿನ ನಿವಾಸಿಗಳು ಯಾವುದೇ ದೂರುಗಳನ್ನು ನೀಡಿರಲಿಲ್ಲ. ಆದಾಗ್ಯೂ, ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಜುಲೈ 26ರಿಂದ 28 ರವರೆಗೆ ಆ ಪ್ರದೇಶದಲ್ಲಿ ಪೈಪ್‌ಲೈನ್ ಕಾಮಗಾರಿಯನ್ನು ಕೈಗೊಂಡಿತ್ತು.

ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದಾಗ ರಾತ್ರಿ ಸಮಯದಲ್ಲಿ ಪೈಪ್‌ಲೈನ್‌ಗಳನ್ನು ಮುಚ್ಚಲಾಗಿದೆ ಎಂದು ಕಾಲೋನಿಯ ಶೇಖ್ ಎಂಬವರು ಮತ್ತು ಇತರ ನಿವಾಸಿಗಳು ಆರೋಪಿಸಿದ್ದಾರೆ. “ಅವರು ಮಧ್ಯರಾತ್ರಿಯ ಕತ್ತಲೆಯನ್ನು ಬಳಸಿಕೊಂಡು ಪೈಪ್‌ಲೈನ್‌ಗಳನ್ನು ಮುಚ್ಚಿ, ರಸ್ತೆಗಳನ್ನು ದುರಸ್ತಿ ಮಾಡಿದ್ದಾರೆ. ಇದರಿಂದಾಗಿ ನಮಗೆ ಮುಂಜಾನೆಯಿಂದಲೇ ನೀರು ನೀರಿನ ಸಮಸ್ಯೆ ಆಗಿದೆ” ಎಂಬುವುದಾಗಿ ನಿವಾಸಿಗಳು ಹೇಳಿದ್ದಾರೆ ಎಂದು altnews.in ವರದಿ ಉಲ್ಲೇಖಿಸಿದೆ.

ಜುಲೈ 29ರಂದು ನೀರು ಮತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಂಡ ನಂತರ, ಮರುದಿನ ಜನರು ಸಂಬಂಧಪಟ್ಟ ನಿಗಮದ ಕಚೇರಿಗೆ ತೆರಳಿ ದೂರು ನೀಡಿದ್ದರು ಎಂದು ಸ್ಥಳೀಯ ನಿವಾಸಿ ಆಲಂಗೀರ್ ಹೇಳಿದ್ದಾರೆ. “ಅವರು ನನ್ನ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು, ಈ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದ್ದರು. ಆದರೆ, ಏನೂ ಆಗಿಲ್ಲ. ಮರುದಿನ, ನಾವು ಹತಿಬಗನ್‌ನಲ್ಲಿರುವ ನಿಗಮದ ಮುಖ್ಯ ಕಚೇರಿಯಲ್ಲಿ ಲಿಖಿತ ದೂರು ಸಲ್ಲಿಸಿದ್ದೆವು. ಆಗಲೂ ಅವರು ಅದನ್ನು ಪರಿಶೀಲಿಸಲು ಪ್ರಯತ್ನಿಸುವುದಾಗಿ ನಮಗೆ ತಿಳಿಸಿದ್ದರು. ಆದಾಗ್ಯೂ, ಎಲ್ಲರಿಗೂ ಕಾಣುವಂತೆ, ಇಲ್ಲಿಯವರೆಗೆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ” ಎಂದು ಆಲಂಗೀರ್ ವಿವರಿಸಿದ್ದಾರೆ.

ಸಮಸ್ಯೆ ಬಗೆಹರಿಸಲು ನೆರವು ಕೋರಿ ಹಲವು ನಿವಾಸಿಗಳು ಸ್ಥಳೀಯ ಪೊಲೀಸ್ ಠಾಣೆ, ಕೌನ್ಸಿಲರ್ ಮತ್ತು ಶಾಸಕ ತಿವಾರಿ ಅವರನ್ನು ಸಂಪರ್ಕಿಸಿದ್ದರು; ಆದರೆ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲು ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳು ಕಾಲೋನಿಗೆ ಭೇಟಿ ನೀಡಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಮಹಿಳೆಯರ ಗುಂಪೊಂದು ತಿವಾರಿ ಅವರನ್ನು ಸಂಪರ್ಕಿಸಿದಾಗ, ನೀರು ಸರಬರಾಜಿನಲ್ಲಿ ಉಂಟಾಗಿರುವ ವ್ಯತ್ಯಯಕ್ಕೆ ತಾನು ಜವಾಬ್ದಾರನಲ್ಲ ಎಂದು ಹೇಳಿ ಅವರು ಆ ಮಹಿಳೆಯರನ್ನು ನಿರ್ಲಕ್ಷಿಸಿದ್ದಲ್ಲದೆ, ನೀರು ಸರಬರಾಜನ್ನು ಪುನಃಸ್ಥಾಪಿಸಲು ನಿರಾಕರಿಸಿದರು ಎಂದು ನಿವಾಸಿಗಳು ತಿಳಿಸಿದ್ದಾಗಿ altnews.in ವರದಿ ಉಲ್ಲೇಖಿಸಿದೆ.

ಇದಲ್ಲದೆ, ತಿವಾರಿ ಅವರು ಕೋಮು ನಿಂದನೆಗಳನ್ನು ಬಳಸಿದ್ದಾರೆ ಮತ್ತು ಸ್ಥಳೀಯರನ್ನು ಅಲ್ಲಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪಿಂಕಿ ಬಿಬಿ ಎಂಬವರು ಆರೋಪಿಸಿದ್ದಾರೆ. “ಜನರೊಂದಿಗೆ ಮಾತನಾಡುತ್ತಿದ್ದಾಗ ಅವರು, ‘ನಾನು ಬಯಸಿದರೆ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ಮಸೀದಿಯನ್ನು ಧ್ವಂಸಗೊಳಿಸಬಹುದು ಮತ್ತು ಅದರೊಂದಿಗೆ ಇಡೀ ಕಾಲೋನಿಯನ್ನೇ ತೆರವುಗೊಳಿಸಬಹುದು’ ಎಂದು ಬೆದರಿಕೆ ಹಾಕಿದ್ದಾರೆ” ಎಂದು ಅವರು ಪಿಂಕಿ ಬೀಬಿ ಹೇಳಿದ್ದಾರೆ.

ಕ್ಷೇತ್ರದ ಜನರ ಸಂಕಷ್ಟದ ಕುರಿತು ಶಾಸಕ ತಿವಾರಿ ಅವರನ್ನು ಕೇಳಿದಾಗ, ಈ ವಿಚಾರದಿಂದ ದೂರ ಸರಿದ ಅವರು, “ಆ ಜಾಗ ಬಂದರಿಗೆ ಸೇರಿದ್ದು, ಜನರಿಗೆ ಬಂದರಿನೊಂದಿಗೆ ದ್ವೇಷವಿದೆ, ಬಂದರು ಅವರನ್ನು ಖಾಲಿ ಮಾಡುವಂತೆ ಆದೇಶಿಸಿತ್ತು. ನಂತರ ಹೈಕೋರ್ಟ್ ತೆರವುಗೊಳಿಸುವುದಕ್ಕೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿತ್ತು. ಕೆಎಂಸಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ, ಇಲ್ಲಿ ನಾನು ಏನು ಹೇಳಬಲ್ಲೆ? ರಾಜಕೀಯ ನಾಯಕರು ಯಾವುದೇ ಕಾಮೆಂಟ್ ಮಾಡುವುದನ್ನು ತಡೆಯಿರಿ” ಎಂದು ಹೇಳಿರುವುದಾಗಿ altnews.in ತಿಳಿಸಿದೆ.

ತಮ್ಮ ಕ್ಷೇತ್ರದ ಜನರ ಪರವಾಗಿ ನಿಂತು ಅವರ ನೀರಿನ ಪೂರೈಕೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಬಹುದೇ ಎಂದು ಕೇಳಿದಾಗ, “ಇದು ನನ್ನ ಕೆಲಸವಲ್ಲ… ಅವರು [ನಿವಾಸಿಗಳು] ಈಗಾಗಲೇ ಪ್ರಭಾವಿ ರಾಜಕೀಯ ನಾಯಕರ ಸಹಾಯವನ್ನು ಕೋರಿದ್ದಾರೆ… ಹಾಗಾಗಿ, ತಾವು ಸಂಪರ್ಕಿಸಿದ ಆ ನಾಯಕರ ಮೇಲೆ ಅವರು ವಿಶ್ವಾಸವಿಡಬೇಕು. ಅಷ್ಟೊಂದು ಬೇಗನೆ ಆ ವಿಶ್ವಾಸವನ್ನು ಕಳೆದುಕೊಳ್ಳಬೇಕೇ?” ಎಂದು ಶಾಸಕ ಹಾರಿಕೆಯ ಉತ್ತರ ನೀಡಿದ್ದಾರೆ ಎಂದು altnews.in ಉಲ್ಲೇಖಿಸಿದೆ.

“ನಿಮ್ಮ ಸ್ವಂತ ಕ್ಷೇತ್ರದ ಜನರಿಗೆ ನೀವು ಯಾಕೆ ಸಹಾಯ ಮಾಡುತ್ತಿಲ್ಲ?” ಎಂದು ಕೇಳಿದ್ದಕ್ಕೆ, “ನನ್ನ ಕೆಲಸವನ್ನು ನೀವೇ ಯಾಕೆ ಮಾಡಬಾರದು?” ಎಂದು ಶಾಸಕರು ಬಂಗಾಲಿ ಭಾಷೆಯಲ್ಲಿ ಬೇಜವ್ದಾರಿಯ ಉತ್ತರ ಕೊಟ್ಟಿದ್ದಾರೆ ಎಂದು ವರದಿ ಹೇಳಿದೆ.

















ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...