HomeUncategorized'ಪ್ರತಿ ಗಲ್ಲಿಯೂ ಜಂತರ್ ಮಂತರ್..'; ಎಸ್‌ಐಆರ್‌ ವಿರುದ್ಧ ಅ.23ರಂದು ದೇಶಾದ್ಯಂತ ಪ್ರತಿಭಟನೆ

‘ಪ್ರತಿ ಗಲ್ಲಿಯೂ ಜಂತರ್ ಮಂತರ್..’; ಎಸ್‌ಐಆರ್‌ ವಿರುದ್ಧ ಅ.23ರಂದು ದೇಶಾದ್ಯಂತ ಪ್ರತಿಭಟನೆ

- Advertisement -
- Advertisement -

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್‌ ಕುಮಾರ್‌ ಅವರನ್ನು ಸಂಸತ್ತಿನ ಮೂಲಕ ಪದಚ್ಯುತಗೊಳಿಸಬೇಕು ಹಾಗೂ “ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕು” ಎಂದು ಆಗ್ರಹಿಸಿ “ಪೀಪಲ್‌ ಅಗೇನ್ಸ್ಟ್‌ ಎಸ್‌ಐಆರ್‌’ ಸಂಘಟನೆ ನೇತೃತ್ವದಲ್ಲಿ ವಿವಿಧ ಜನಪರ ಸಂಘಟನೆಗಳು ಅಕ್ಟೋಬರ್‌ 23ರ ಶುಕ್ರವಾರ ದೇಶಾದ್ಯಂತ ಶಾಂತಿಯುತ ಮೆರವಣಿಗೆಗಳಿಗೆ ಕರೆ ನೀಡಿದೆ.

ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ನಾಯಕಿ ನೇಹಾ ಬೋರಾ, ‘ಕಾಕ್ರೋಚ್‌ ಜನತಾ ಪಾರ್ಟಿ’ (ಸಿಜೆಪಿ) ಸ್ಥಾಪಕ ಅಭಿಜೀತ್‌ ದಿಪ್ಕೆ, ನಟ ಹಾಗೂ ರಾಜಕಾರಣಿ ಪ್ರಕಾಶ್‌ ರಾಜ್‌, ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳನ್ನು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ.

ಅಕ್ಟೋಬರ್‌ 14ರಂದು ಸ್ಥಾಪನೆಯಾದ ‘ಪೀಪಲ್‌ ಅಗೇನ್ಸ್ಟ್‌ ಎಸ್‌ಐಆರ್‌’ ದೇಶವ್ಯಾಪಿ ಒಕ್ಕೂಟವಾಗಿದೆ. ನಾಗರಿಕ ಸಮಾಜದ ಸಂಘಟನೆಗಳು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ಆದಿವಾಸಿಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಸಂಘಟನೆಗಳು ಹಾಗೂ ಜಾಲಗಳನ್ನು ಇದು ಒಗ್ಗೂಡಿಸಿದೆ.

‘ಗಲ್ಲಿಗಲ್ಲಿಯೂ ಜಂತರ್ ಮಂತರ್’

ಅಕ್ಟೋಬರ್‌ 23ರ ಪ್ರತಿಭಟನೆಯನ್ನು ‘ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು ಜನರ ಮೆರವಣಿಗೆ’ ಎಂದು ಒಕ್ಕೂಟ ಕರೆದಿದೆ. “ಪ್ರತಿ ಬೀದಿಯೂ ಜಂತರ್ ಮಂತರ್, ಪ್ರತಿ ಗ್ರಾಮವೂ ಜಂತರ್ ಮಂತರ್, ನನ್ನ ಮನೆಯೇ ಜಂತರ್ ಮಂತರ್” ಎಂಬ ಘೋಷವಾಕ್ಯದಡಿ ಈ ಪ್ರತಿಭಟನೆ ನಡೆಯಲಿದೆ.

ಎಸ್‌ಐಆರ್‌ ರದ್ದುಗೊಳ್ಳುವವರೆಗೆ, ಅರ್ಹ ನಾಗರಿಕರೆಲ್ಲರ ಮತದಾನದ ಹಕ್ಕುಗಳನ್ನು ಮರುಸ್ಥಾಪಿಸುವವರೆಗೆ ಮತ್ತು 2023ರ ಚುನಾವಣಾ ಆಯುಕ್ತರ ಕಾಯ್ದೆಗೆ ತಿದ್ದುಪಡಿ ತರುವವರೆಗೆ ಈ ಮೆರವಣಿಗೆಯು ಒಗ್ಗಟ್ಟಿನ ಹೋರಾಟಕ್ಕೆ ನಾಂದಿ ಹಾಡಲಿದೆ ಎಂದು ಒಕ್ಕೂಟ ತಿಳಿಸಿದೆ.

ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳು, ರಾಜ್ಯ ರಾಜಧಾನಿಗಳು ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಧ್ವಜ ಹಿಡಿದು ಶಾಂತಿಯುತ ಮೆರವಣಿಗೆಗಳಲ್ಲಿ ಭಾಗವಹಿಸುವಂತೆ ನಾಗರಿಕರಿಗೆ ಕರೆ ನೀಡಲಾಗಿದೆ.

“ಕಾನೂನುಬಾಹಿರ ಎಸ್‌ಐಆರ್‌ ರದ್ದುಗೊಳಿಸಿ! ಗ್ಯಾನೇಶ್‌ ಅವರನ್ನು ಪದಚ್ಯುತಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ! ನಮ್ಮ ಮತದಾರರ ಪಟ್ಟಿಯನ್ನು ಮರುರೂಪಿಸಿ!” ಎಂದು ಹೇಳಿಕೆಯಲ್ಲಿ ಒಕ್ಕೂಟ ತನ್ನ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.

ದೆಹಲಿ ಪೊಲೀಸರಿಂದ ಅನುಮತಿ ಕೋರಿಲ್ಲ

ಮೆರವಣಿಗೆಗೆ ದೆಹಲಿ ಪೊಲೀಸರಿಂದ ಯಾವುದೇ ಅನುಮತಿ ಕೋರಿಲ್ಲ ಎಂದು ಒಕ್ಕೂಟ ತಿಳಿಸಿದೆ. ಪ್ರತಿಭಟನಾಕಾರರನ್ನು ತಡೆದರೆ, ನಾವು ಶಾಂತಿಯುತವಾಗಿ ‘ಜನತಾ ಸಂಸತ್‌’ ಸಭೆಗಳನ್ನು ನಡೆಸಲಿದ್ದೇವೆ ಎಂದು ಒಕ್ಕೂಟ ಹೇಳಿದೆ.

ಈ ಸಭೆಗಳಲ್ಲಿ ಪ್ರಾತಿನಿಧ್ಯ, ಚುನಾವಣೆಗಳಲ್ಲಿ ಹಣಬಲ ಮತ್ತು ತೋಳ್ಬಲಕ್ಕೆ ಕಡಿವಾಣ ಹಾಕುವುದು ಹಾಗೂ ಚುನಾವಣೆಗಳಿಗೆ ಸರ್ಕಾರದಿಂದ ಹಣಕಾಸು ನೆರವು ನೀಡುವ ವ್ಯವಸ್ಥೆಗೆ ಕಾನೂನು ಮಾನ್ಯತೆ ಕಲ್ಪಿಸುವುದು ಸೇರಿದಂತೆ ಸಮಗ್ರ ಚುನಾವಣಾ ಸುಧಾರಣೆಗಳಿಗೆ ಆಗ್ರಹಿಸಲಾಗುತ್ತದೆ.

ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವ ಪ್ರತಿಜ್ಞೆ ಮತ್ತು ರಾಷ್ಟ್ರಗೀತೆಯ ಗಾಯನದೊಂದಿಗೆ ಸಭೆಗಳು ಮುಕ್ತಾಯಗೊಳ್ಳಲಿವೆ ಎಂದು ಒಕ್ಕೂಟ ತಿಳಿಸಿದೆ.

“ಪ್ರಜಾಪ್ರಭುತ್ವವನ್ನು ಮರಳಿ ಪಡೆಯಲು ನಡೆಯುವ ಜನರ ಮೆರವಣಿಗೆಗೆ ಎಲ್ಲಿಯೂ ಪೊಲೀಸರ ಅನುಮತಿ ಕೋರಲಾಗುವುದಿಲ್ಲ” ಎಂದು ಒಕ್ಕೂಟ ಹೇಳಿದೆ. ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಪೊಲೀಸರು, ಅರೆಸೇನಾ ಪಡೆಗಳು ಮತ್ತು ಜೈಲು ಅಧಿಕಾರಿಗಳು ಬಲಪ್ರಯೋಗ ಮಾಡಬಾರದು ಎಂದು ಎಚ್ಚರಿಸಿದೆ.

ನವದೆಹಲಿ ಜಿಲ್ಲೆಯಲ್ಲಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 163 ಜಾರಿ

ನವದೆಹಲಿಯಾದ್ಯಂತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್‌) ಸೆಕ್ಷನ್‌ 163ರ ಅಡಿಯಲ್ಲಿ ವಿಧಿಸಲಾಗಿರುವ ನಿರ್ಬಂಧಕ ಆದೇಶ ಇನ್ನೂ ಜಾರಿಯಲ್ಲಿದೆ.

ದೆಹಲಿಯಲ್ಲಿ ಪ್ರತಿಭಟನೆಗಳಿಗೆ ಗೊತ್ತುಪಡಿಸಲಾಗಿದ್ದ ಸ್ಥಳಗಳ ಪಟ್ಟಿಯಿಂದ ಜಂತರ್‌ ಮಂತರ್‌ ಅನ್ನು ಕೈಬಿಟ್ಟಿರುವುದನ್ನೂ ಒಕ್ಕೂಟ ಟೀಕಿಸಿದೆ. ಈ ಆದೇಶವನ್ನು ಹಿಂಪಡೆಯಬೇಕು ಎಂದು ಅದು ಆಗ್ರಹಿಸಿದೆ.

ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯನ್‌ ನ್ಯಾಷನಲ್‌ ಡೆವಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್‌ (ಇಂಡಿಯಾ)ಕ್ಕೂ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಆಹ್ವಾನಿತ ವ್ಯಕ್ತಿಗಳಿಂದ ಈ ಮೆರವಣಿಗೆಯಲ್ಲಿ ಭಾಗವಹಿಸುವ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಅಥವಾ ದೃಢೀಕರಣ ಲಭ್ಯವಾಗಿಲ್ಲ.

ಬಂಗ್ಲಾ ಸಾಹಿಬ್‌ನಿಂದ ಚುನಾವಣಾ ಆಯೋಗದ ಕಚೇರಿವರೆಗೆ ಮೆರವಣಿಗೆ

ದೆಹಲಿಯಲ್ಲಿ ನಡೆಯಲಿರುವ ಮೆರವಣಿಗೆಯು ಕನ್ನಾಟ್‌ ಪ್ಲೇಸ್‌ನಲ್ಲಿರುವ ಬಂಗ್ಲಾ ಸಾಹಿಬ್‌ ಗುರುದ್ವಾರದಿಂದ ಆರಂಭವಾಗಿ, ಪಟೇಲ್‌ ಚೌಕ್‌ ಸಮೀಪದಲ್ಲಿರುವ ಚುನಾವಣಾ ಆಯೋಗದ ಕಚೇರಿಯತ್ತ ಸಾಗಲಿದೆ ಎಂದು ಒಕ್ಕೂಟ ತಿಳಿಸಿದೆ. ಈ ಪ್ರತಿಭಟನೆಗಳ ಕುರಿತು ದೆಹಲಿ ಪೊಲೀಸರು ಕೂಡ ಈವರೆಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಂತಿಮ ಪಟ್ಟಿಯಲ್ಲಿದ್ದ 13 ಸಾವಿರಕ್ಕೂ ಹೆಚ್ಚು ಮತದಾರರ ಹೆಸರುಗಳಲ್ಲಿ ಬದಲಾವಣೆ : ಯುಪಿಯಲ್ಲಿ ಮತಗಳ್ಳತನದ ಹೊಸ ಸಂಚು ಬೆಳಕಿಗೆ; ಇಬ್ಬರು ಚುನಾವಣಾ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ

ಉತ್ತರ ಪ್ರದೇಶದ ಪಿಲಿಭಿತ್ ವಿಧಾನಸಭಾ ಕ್ಷೇತ್ರದ ಇಬ್ಬರು ಚುನಾವಣಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬುಧವಾರ (ಅಕ್ಟೋಬರ್ 21) ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಸೂಚಿಸಿದ್ದಾರೆ. ಆಂತರಿಕ ತನಿಖೆಯಲ್ಲಿ ಮತದಾರರ ಗುರುತಿನ...

ಪ್ರಜಾಪ್ರಭುತ್ವ ಉಳಿವಿಗಾಗಿ ಜನತೆಯ ಮೆರವಣಿಗೆ; ಎಸ್‌ಐಆರ್ ವಿರೋಧಿ ಪ್ರತಿಭಟನೆ ನಿಮ್ಮೂರಲ್ಲೆಲ್ಲಿ ಗೊತ್ತಾ?

ಎಸ್ಐಆರ್ ರದ್ದುಪಡಿಸುವಂತೆ ಆಗ್ರಹಿಸಿ ಹಾಗೂ ನವದೆಹಲಿಯ 'ಜಂತರ್ ಮಂತರ್' ಮೈದಾನದಲ್ಲಿ ಪ್ರತಿಭಟನೆ ಮಾಡದಂತೆ ನಿರ್ಬಂಧಿಸಿರುವ ದೆಹಲಿ ಪೊಲೀಸರ ಪ್ರಜಾಪ್ರಭುತ್ವ ವಿರೋಧಿ ನಿಲುವು ಖಂಡಿಸಿ ದೇಶದಾದ್ಯಂತ ಜನಪರ ಸಂಘಟನೆಗಳು ಏಕಕಾಲದಲ್ಲಿ 'ಪ್ರಜಾಪ್ರಭುತ್ವ ಉಳಿವಿಗಾಗಿ ಜನತೆಯ...

‘ಯುದ್ಧದ ಮುಂಚೂಣಿ ರೇಖೆಗಳ ಸ್ಥಗಿತಕ್ಕೆ ಸಿದ್ಧ..’; ಉಕ್ರೇನ್‌ನ ಶೇ. 25ರಷ್ಟು ಭೂಭಾಗವನ್ನು ರಷ್ಯಾಕ್ಕೆ ಬಿಟ್ಟುಕೊಡಲು ಒಪ್ಪಿದರೇ ಝೆಲೆನ್‌ಸ್ಕಿ?

ರಷ್ಯಾದೊಂದಿಗಿನ ಶಾಂತಿ ಒಪ್ಪಂದದ ಭಾಗವಾಗಿ ಪ್ರಸ್ತುತ ಯುದ್ಧದ ಮುಂಚೂಣಿ ರೇಖೆಗಳನ್ನು ಸ್ಥಗಿತಗೊಳಿಸಲು ಸಿದ್ಧವಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. 2022ರ ಫೆಬ್ರವರಿಯಲ್ಲಿ ಆರಂಭವಾದ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಅಗತ್ಯ...

ಸೌದಿ ಅರೇಬಿಯಾದ ದಮ್ಮಾಮ್‌ ವಿಮಾನ ನಿಲ್ದಾಣದ ಮೇಲೆ ದಾಳಿ : ಭಾರತೀಯ ಪ್ರಜೆ ಸೇರಿ ಇಬ್ಬರು ಸಾವು, 8 ಮಂದಿಗೆ ಗಾಯ

ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿರುವ ಕಿಂಗ್ ಫಹದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಒಬ್ಬರು ಭಾರತೀಯ ಪ್ರಜೆ, ಮತ್ತೊಬ್ಬರು ಸೌದಿ ಪ್ರಜೆ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ...

ಸಿಇಸಿ ಗ್ಯಾನೇಶ್ ಕುಮಾರ್ ಸಹೋದರನ ನೇತೃತ್ವದ ದೆಹಲಿ ಕಸ್ಟಮ್ಸ್‌ನಲ್ಲಿ ಪಂಜಾಬ್‌ ಮುಖ್ಯಮಂತ್ರಿಯನ್ನು ತಡೆದು ದಂಡ ವಿಧಿಸಲಾಯಿತೇ?

ಪ್ರಸ್ತುತ ಇಡೀ ದೇಶದ ಜನರ ಆಕ್ರೋಶಕ್ಕೆ ಗುರಿಯಾಗಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಸಹೋದರ ಮನೀಶ್ ಕುಮಾರ್ ಮುಖ್ಯ ಆಯುಕ್ತರಾಗಿರುವ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ...

ಸಂಸತ್ತಿನ ಅನುಮೋದನೆ ಇಲ್ಲದೆ ಕೇಂದ್ರ ಸರ್ಕಾರ ಫಾರ್ಮ್‌-6 ತಿದ್ದುಪಡಿ ಮಾಡಬಹುದೇ?

ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಹೆಸರನ್ನು ನೋಂದಾಯಿಸಲು ಬಳಸುವ ಫಾರ್ಮ್‌-6 ಅನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬಹುದು. ಆದರೆ, ಇಂತಹ ಬದಲಾವಣೆಗಳನ್ನು ಕಾನೂನಿನಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಯ ಅನುಸಾರವೇ ಕೈಗೊಳ್ಳಬೇಕು. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ...

ಸುಪ್ರೀಂ ಕೋರ್ಟ್ ನಿರ್ದೇಶನದ ಬೆನ್ನಲ್ಲೇ ಆಂಧ್ರ ಪ್ರದೇಶ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಥಗಿತ

ಸುಪ್ರೀಂ ಕೋರ್ಟ್‌ನ ನಿರ್ದೇಶನದ ಹಿನ್ನೆಲೆ, ಅಕ್ಟೋಬರ್ 14ರಂದು ಅಧಿಸೂಚನೆ ಹೊರಡಿಸಲಾಗಿದ್ದ ಎಲ್ಲಾ 100 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯುವಂತೆ ಆಂಧ್ರ ಪ್ರದೇಶ ರಾಜ್ಯ ಚುನಾವಣಾ ಆಯುಕ್ತ (ಎಸ್‌ಇಸಿ) ಅನಿಲ್...

ಜೆಎನ್‌ಯು ಪಿಎಚ್‌ಡಿ ಪ್ರವೇಶದಲ್ಲಿ ಪಾಲನೆಯಾಗದ ಮೀಸಲಾತಿ ಮಾನದಂಡ; 56 ಕೋರ್ಸ್‌ಗಳಲ್ಲಿ ಇಲ್ಲ ಒಂದೇ ಒಂದು ಎಸ್‌ಟಿ ಸೀಟ್

ಮೀಸಲಾತಿ ಸೀಟುಗಳ ಹಂಚಿಕೆ ವ್ಯತ್ಯಾಸಕ್ಕೆ ವಿವರಣೆ ನೀಡುವಂತೆ ಬಾಪ್ಸಾ ಆಗ್ರಹ 2026-27ನೇ ಶೈಕ್ಷಣಿಕ ಸಾಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪಿಎಚ್‌ಡಿ ಪ್ರವೇಶ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿ ಪ್ರಮಾಣದಲ್ಲಿ ಕೊರತೆಯಾಗಿದೆ ಎಂದು...

ಜೀವನ ನಿರ್ವಹಣಾ ವೆಚ್ಚದ ಏರಿಕೆ ವಿರುದ್ಧ ಫ್ರಾನ್ಸ್‌ನಲ್ಲಿ ಪ್ರತಿಭಟನೆ: ಭಾರತೀಯ ಪ್ರಜೆಗಳಿಗೆ ಎಚ್ಚರಿಕೆ

ಜೀವನ ನಿರ್ವಹಣಾ ವೆಚ್ಚದ ಏರಿಕೆಯ ವಿರುದ್ಧದ ಪ್ರತಿಭಟನೆಗಳು ಹಿಂಸಾತ್ಮಕ ಘರ್ಷಣೆಗಳಿಗೆ ತಿರುಗಿದ ಹಿನ್ನೆಲೆಯಲ್ಲಿ, ಪಶ್ಚಿಮ ಯುರೋಪಿಯನ್ ದೇಶದಲ್ಲಿರುವ ಮತ್ತು ಅಲ್ಲಿಗೆ ಪ್ರಯಾಣಿಸುತ್ತಿರುವ ತಮ್ಮ ನಾಗರಿಕರು ಎಚ್ಚರಿಕೆಯಿಂದಿರಬೇಕು ಎಂದು ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು...

ನ್ಯಾಯಾಂಗ ಬಂಧನದಿಂದ ಬಿಡುಗಡೆ ಬೆನ್ನಲ್ಲೇ ಸಿಜೆಪಿ ನಾಯಕರಿಗೆ ದೆಹಲಿ ಕ್ರೈಮ್ ಬ್ರಾಂಚ್ ಸಮನ್ಸ್

ದೆಹಲಿ ಪೊಲೀಸ್ ಅಪರಾಧ ವಿಭಾಗವು (ಕ್ರೈಮ್ ಬ್ರಾಂಚ್) ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಗುರುವಾರ (ಅ.22) ಮಧ್ಯಾಹ್ನ 12...