HomeಅಂಕಣಗಳುSIRಸ್ಥಳಾಂತರಗೊಂಡ ಮತದಾರರು ಫಾರಂ-6 ಅಥವಾ ಎಸ್‌ಐಆರ್ ಎನ್ಯುಮರೇಷನ್ ಫಾರಂ ಸಲ್ಲಿಸಿದರೆ ಸುಳ್ಳು ಘೋಷಣೆ ಮಾಡಿದಂತಾಗುತ್ತದೆ, ಕಾನೂನು...

ಸ್ಥಳಾಂತರಗೊಂಡ ಮತದಾರರು ಫಾರಂ-6 ಅಥವಾ ಎಸ್‌ಐಆರ್ ಎನ್ಯುಮರೇಷನ್ ಫಾರಂ ಸಲ್ಲಿಸಿದರೆ ಸುಳ್ಳು ಘೋಷಣೆ ಮಾಡಿದಂತಾಗುತ್ತದೆ, ಕಾನೂನು ಕ್ರಮ ಎದುರಿಸಬೇಕಾದೀತು : ಬಾಂಬೆ ಹೈಕೋರ್ಟ್

- Advertisement -
- Advertisement -

ವಾಸಸ್ಥಳ ಬದಲಾಯಿಸಿದ ಅಥವಾ ಸ್ಥಳಾಂತರಗೊಂಡ ಮತದಾರರು ಕೇವಲ ‘ಫಾರಂ-8’ ಅನ್ನು ಮಾತ್ರ ಭರ್ತಿ ಮಾಡಬಹುದು; ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ ಮೊದಲೇ ಭರ್ತಿ ಮಾಡಲಾದ ಗಣತಿ ನಮೂನೆ (enumeration form) ಅಥವಾ ‘ಫಾರಂ 6’ (ಹೊಸ ಸೇರ್ಪಡೆ) ಅನ್ನು ಭರ್ತಿ ಮಾಡುವಂತೆ ಅವರನ್ನು ಒತ್ತಾಯಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಹೇಳಿದೆ. ಸ್ಥಳಾಂತರಗೊಂಡಿದ್ದಕ್ಕೆ ಫಾರಂ-6 ಅಥವಾ ಮೊದಲೇ ಭರ್ತಿ ಮಾಡಲಾದ ಗಣತಿ ನಮೂನೆಯನ್ನು ಭರ್ತಿ ಮಾಡುವುದು ಸುಳ್ಳು ಘೋಷಣೆ ಮಾಡಿದಂತಾಗುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ವಾಲ್ಮೀಕಿ ಮೆನೆಜಸ್ ಮತ್ತು ಅಮಿತ್ ಜಮ್‌ಸಾಂದೇಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಫಾರಂ 6 ಮತ್ತು ಗಣತಿ ನಮೂನೆಗಳು ತಮ್ಮದೇ ಆದ ನಿರ್ದಿಷ್ಟ ಘೋಷಣೆಗಳನ್ನು ಒಳಗೊಂಡಿರುತ್ತವೆ ಎಂಬುದನ್ನು ಗಮನಿಸಿದೆ. ಫಾರಂ 6ಕ್ಕೆ ಸಂಬಂಧಿಸಿದಂತೆ, ಅರ್ಜಿದಾರರು (ಸದರಿ ಫಾರಂ ಭರ್ತಿ ಮಾಡುವವರು) ತಾವು ಯಾವುದೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಮತ್ತು ಮತದಾರರಾಗಿ ನೋಂದಣಿಗಾಗಿ ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದೇವೆ ಎಂಬ ಘೋಷಣೆಯನ್ನು ಮಾಡಬೇಕಾಗುತ್ತದೆ. ಇನ್ನು ಗಣತಿ ನಮೂನೆಯು ಸದರಿ ಮತದಾರರು ಮೊದಲೇ ಭರ್ತಿ ಮಾಡಲಾದ ಫಾರಂನಲ್ಲಿ ಉಲ್ಲೇಖಿಸಿರುವ ವಿಳಾಸದಲ್ಲೇ ಮುಂದುವರಿದು ವಾಸಿಸುತ್ತಿದ್ದಾರೆ ಎಂಬ ಘೋಷಣೆಯೊಂದಿಗೆ ಬರುತ್ತದೆ ಎಂದು ಹೇಳಿದೆ.

ಫಾರಂ-8 ಎಂಬುವುದು ಈಗಾಗಲೇ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿದ್ದು, ಕೇವಲ ತಮ್ಮ ಕ್ಷೇತ್ರದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಾಸಸ್ಥಳವನ್ನು ಬದಲಾಯಿಸಿರುವ ಮತದಾರರಿಗಾಗಿ ಮಾತ್ರ ಉದ್ದೇಶಿಸಲಾಗಿದೆ ಎಂಬುದನ್ನು ನ್ಯಾಯಾಧೀಶರು ಗಮನಿಸಿದ್ದಾರೆ.

"ಹೊಸ ಮತದಾರರು ಮಾಡಬೇಕಾದ ನಿರ್ದಿಷ್ಟ ಘೋಷಣೆಗಳನ್ನು, ವಾಸಸ್ಥಳ ಬದಲಾವಣೆಗಾಗಿ ಅರ್ಜಿ ಸಲ್ಲಿಸುವ ಮತದಾರರು ಮಾಡಬೇಕಾದ ಘೋಷಣೆಗಳೊಂದಿಗೆ ಹೋಲಿಸಿ ಪರಿಶೀಲಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ; ಈ ಅರ್ಜಿದಾರರ ಪ್ರಕರಣದಲ್ಲಿರುವಂತೆ ವಾಸಸ್ಥಳ ಬದಲಾಯಿಸುವ ಮತದಾರರು ಫಾರಂ 6 ರಲ್ಲಿ ಅರ್ಜಿ ಸಲ್ಲಿಸಿದರೆ, ಅವರು ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುತ್ತಿರುವುದಾಗಿ ಸುಳ್ಳು ಘೋಷಣೆ ಮಾಡುವುದು ಮಾತ್ರವಲ್ಲದೆ, ಈ ಹಿಂದೆ ಯಾವುದೇ ವಿಧಾನಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರಲಿಲ್ಲ ಎಂದೂ ಸಹ ಸುಳ್ಳು ಘೋಷಣೆ ಮಾಡಿದಂತಾಗುತ್ತದೆ. ಒಂದು ವಾಸಸ್ಥಳದಿಂದ ಮತ್ತೊಂದಕ್ಕೆ ಬದಲಾಗುವ ಮತದಾರರು ಕೇವಲ ಫಾರಂ 8 ರಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ. ಏಕೆಂದರೆ ಅವರ ಹೆಸರು ಈಗಾಗಲೇ ಕ್ಷೇತ್ರದ ಯಾವುದಾದರೊಂದು ಭಾಗದಲ್ಲಿ ಅಸ್ತಿತ್ವದಲ್ಲಿರುತ್ತದೆ ಮತ್ತು ಅವರು ಅದೇ ಕ್ಷೇತ್ರದ ಮತ್ತೊಂದು ಭಾಗಕ್ಕೆ ಅಥವಾ ಬೇರೆ ಕ್ಷೇತ್ರಕ್ಕೆ ವಾಸಸ್ಥಳವನ್ನು ಬದಲಾಯಿಸುತ್ತಿರುತ್ತಾರೆ," ಎಂದು ನ್ಯಾಯಪೀಠವು ಹೇಳಿದೆ.

“ಗಣತಿ ನಮೂನೆಗೆ ಸಂಬಂಧಿಸಿದಂತೆ, ಅದರ ವಿಷಯಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ, ಈಗಾಗಲೇ ಕ್ಷೇತ್ರದ ಮತ್ತೊಂದು ಭಾಗಕ್ಕೆ ವಾಸಸ್ಥಳವನ್ನು ಬದಲಾಯಿಸಿರುವ ಅರ್ಜಿದಾರರನ್ನು ಅದನ್ನು ಭರ್ತಿ ಮಾಡುವಂತೆ ಕೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನ್ಯಾಯಪೀಠವು, ‘ಗಣತಿ ನಮೂನೆಯಲ್ಲಿರುವ ಘೋಷಣೆಗಳಿಗೆ ಸಹಿ ಮಾಡುವಂತೆ ಅವರನ್ನು ಎಂದಿಗೂ ಒತ್ತಾಯಿಸಲು ಸಾಧ್ಯವಿಲ್ಲ, ಏಕೆಂದರೆ ಅವು ಸ್ಪಷ್ಟವಾಗಿ ಸುಳ್ಳು ಘೋಷಣೆಗಳಾಗುತ್ತವೆ. ಆದ್ದರಿಂದ, ಅರ್ಜಿದಾರರು ಎದುರಿಸುತ್ತಿದ್ದ ಇಂತಹ ಸಂದರ್ಭಗಳಲ್ಲಿ, ಅವರ ಮುಂದಿದ್ದ ಏಕೈಕ ಆಯ್ಕೆಯೆಂದರೆ ಫಾರಂ 8 ಅನ್ನು ಸಲ್ಲಿಸುವುದಾಗಿತ್ತು ಮತ್ತು ಅದನ್ನೇ ಅವರು ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟಿದೆ.

"ಅರ್ಜಿದಾರರಿಗೆ ಈ ನಮೂನೆಯನ್ನು (ಗಣತಿ ನಮೂನೆ) ನೀಡಿದ್ದರೂ ಸಹ, ಅವರು ಸುಳ್ಳು ಘೋಷಣೆಯನ್ನೇ ಸಲ್ಲಿಸಿದಂತಾಗುತ್ತಿತ್ತು. ಏಕೆಂದರೆ ಆ ನಮೂನೆಯಲ್ಲಿ ಅವರು ಈಗಾಗಲೇ ಖಾಲಿ ಮಾಡಿದ್ದ ಹಳೆಯ ವಾಸಸ್ಥಳದ ವಿಳಾಸವನ್ನು ಮುಂಚಿತವಾಗಿಯೇ ಭರ್ತಿ ಮಾಡಲಾಗಿತ್ತು. ಅರ್ಜಿದಾರರ ಹೊಸ ವಾಸಸ್ಥಳದಲ್ಲಿ ಅವರಿಗೆ ಮುಂಚಿತವಾಗಿ ಭರ್ತಿ ಮಾಡದ ಖಾಲಿ ನಮೂನೆಯನ್ನು ನೀಡುವ ಯಾವುದೇ ವ್ಯವಸ್ಥೆ ಇರಲಿಲ್ಲ. ಪ್ರತಿ ಅಫಿಡವಿಟ್‌ನಲ್ಲಿ ತಿಳಿಸಿರುವಂತೆ, ಬಿಎಲ್‌ಒ ಅಥವಾ ಇಆರ್‌ಒ ಅವರು ಅರ್ಜಿದಾರರು ಫಾರಂ 6 ಅನ್ನು ಭರ್ತಿ ಮಾಡಲೇಬೇಕೆಂದು ಒತ್ತಾಯಿಸಿರುವುದು ನಮ್ಮ ಅಭಿಪ್ರಾಯದಲ್ಲಿ ಸಂಪೂರ್ಣವಾಗಿ ತಪ್ಪು. ನಮ್ಮ ಪ್ರಕಾರ, ಮುಂಚಿತವಾಗಿ ಭರ್ತಿ ಮಾಡಲಾದ ಗಣತಿ ನಮೂನೆಯಲ್ಲಿ ಅಥವಾ ಫಾರಂ 6 ರಲ್ಲಿ ಅಥವಾ ಎಸ್‌ಐಆರ್‌ನ ಅನುಬಂಧ 'ಡಿ' ಯಲ್ಲಿ ನೀಡಲಾದ ನಮೂನೆಯಲ್ಲಿ ಅರ್ಜಿದಾರರು ನೀಡಬೇಕಾಗಿದ್ದ ಘೋಷಣೆಗಳೆಲ್ಲವೂ ಸುಳ್ಳು ಘೋಷಣೆಗಳಾಗುತ್ತಿದ್ದವು. ಇದು ಅರ್ಜಿದಾರರನ್ನು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 31 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳ ಕಾನೂನು ಕ್ರಮಕ್ಕೆ ಗುರಿಪಡಿಸುತ್ತಿತ್ತು" ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. 

ನ್ಯಾಯಪೀಠವು ಗೋವಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಎಸ್‌ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾಗಿದ್ದ ಸಾಲಗಾಂವ್ಕರ್ ಕುಟುಂಬದ ಆರು ಸದಸ್ಯರ ಹೆಸರುಗಳನ್ನು ಮರುಸೇರ್ಪಡೆ ಮಾಡುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸುವಾಗ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾಂತಾಕ್ರೂಝ್ ಕ್ಷೇತ್ರದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಾಸಸ್ಥಳ ಬದಲಾಯಿಸಿದ್ದ ಈ ಕುಟುಂಬದ ಸದಸ್ಯರು, ತಮ್ಮ ವಾಸಸ್ಥಳ ಬದಲಾವಣೆಗಾಗಿ ‘ಫಾರಂ 8’ ಸಲ್ಲಿಸಿದ್ದರು. ಆದರೆ, ಅರ್ಜಿದಾರರು ಫಾರಂ 8 ರ ಜೊತೆಗೆ ಗಣತಿ ನಮೂನೆಯನ್ನು ಸಲ್ಲಿಸಿಲ್ಲ ಎಂಬ ಕಾರಣ ನೀಡಿ ಚುನಾವಣಾ ಅಧಿಕಾರಿಗಳು ಸದರಿ ಫಾರಂ 8 ಅನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅವರ ಫಾರಂ 8 ಅನ್ನು ತಿರಸ್ಕರಿಸುವಾಗ, ಅಧಿಕಾರಿಗಳು ಆ ಕುಟುಂಬಕ್ಕೆ ‘ಫಾರಂ 6’ ಅನ್ನು ಭರ್ತಿ ಮಾಡುವಂತೆ ಸೂಚಿಸಿದ್ದರು.

Courtesy :livelaw.in














ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್ಮುಂದೆ ಸರ್ಕಾರಿ ಯೋಜನೆಗಳ ಅರ್ಹತೆಗೆ ‘ಆಧಾರ್’ ಬದಲು ‘ವೋಟರ್ ಐಡಿ’?: ಕೇಂದ್ರ ಸಚಿವರ ಹೇಳಿಕೆಗೆ ರಾಹುಲ್ ಗಾಂಧಿ ತೀವ್ರ ಆಕ್ರೋಶ!

ಕೇಂದ್ರ ಸರ್ಕಾರಿ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಹಾಗೂ ಪಾವತಿ ಪ್ರಕ್ರಿಯೆಗಳನ್ನು ನಡೆಸಲು ಇನ್ಮುಂದೆ ಆಧಾರ್ ಕಾರ್ಡ್ ಬದಲು 'ವೋಟರ್ ಐಡಿ' (ಮತದಾರರ ಗುರುತಿನ ಚೀಟಿ) ಹಾಗೂ ಬಯೋಮೆಟ್ರಿಕ್ ಪರಿಶೀಲನೆಯನ್ನು ಆಧಾರವಾಗಿ ಬಳಸಲಾಗುವುದು...

AMU ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾದ ನಶ್ರಾ ನಯೀಮ್ : ಮೊದಲ ಬಾರಿಗೆ ಉನ್ನತ ಹುದ್ದೆಗೆ ಮಹಿಳೆ ಆಯ್ಕೆ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (AMUSU) 105 ವರ್ಷಗಳ ಇತಿಹಾಸದಲ್ಲೇ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕಾನೂನು ವಿದ್ಯಾರ್ಥಿನಿ ನಶ್ರಾ ನಯೀಮ್ ಪಾತ್ರರಾಗಿದ್ದಾರೆ. ಶುಕ್ರವಾರ (ನ.6) ಪ್ರಕಟಗೊಂಡ ಚುನಾವಣೆಯ...

ವಿಳಾಸ ಬದಲಿಸಿದ್ದಕ್ಕೆ ಫಾರಂ-8 ಸಲ್ಲಿಸಿದ್ದರೂ ಒಂದೇ ಕುಟುಂಬದ 6 ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ : ಮರುಸೇರ್ಪಡೆಗೆ ಬಾಂಬೆ ಹೈಕೋರ್ಟ್ ಆದೇಶ

ಗೋವಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದ ಒಂದೇ ಕುಟುಂಬದ ಆರು ಸದಸ್ಯರ ಹೆಸರುಗಳನ್ನು ಮರುಸೇರ್ಪಡೆಗೊಳಿಸುವಂತೆ ಬಾಂಬೆ ಹೈಕೋರ್ಟ್ ಗುರುವಾರ (ನ.5) ಭಾರತೀಯ ಚುನಾವಣಾ...

ಪ್ರಧಾನಿಗೆ ಪತ್ರ ಬರೆಯಿರಿ, ಸಂಸತ್ತಿನಲ್ಲಿ ಎಸ್‌ಐಆರ್ ಕುರಿತು ಚರ್ಚಿಸಿ: ರಾಹುಲ್‌ಗೆ ಅಮಿತ್ ಶಾ ಸವಾಲು

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚರ್ಚೆಯ ಸವಾಲನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವೀಕರಿಸಿದ್ದಾರೆ. ಸಂಸತ್ತಿನಲ್ಲಿ ಚರ್ಚಿಸಲು ಗಂಭೀರವಾದ ವಿಷಯಗಳನ್ನು ಎತ್ತಿಕೊಳ್ಳುವಂತೆ ವಿಪಕ್ಷ ನಾಯಕರಿಗೆ ಅವರು ಸಲಹೆ...

ಫಾರಂ-7 ದುರುಪಯೋಗದ ವಿರುದ್ಧ ಪೊಲೀಸ್ ತನಿಖೆ : ಸಿಎಂ ಡಿ.ಕೆ ಶಿವಕುಮಾರ್

ಮತಗಳ್ಳತನಕ್ಕೆ ಕುಮ್ಮಕ್ಕು ನೀಡಿದ ಹಾಗೂ ಫಾರಂ-7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆ ನಡೆಸಲು ನಮ್ಮ ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂಡಿಯಾ ಒಕ್ಕೂಟ...

ಸಿಜೆಪಿ ನಾಯಕರಾದ ಸೌರವ್ ದಾಸ್ – ಅಶುತೋಷ್ ರಾಂಕಾ ವಿಚಾರಣೆ ನಡೆಸಿದ ಕ್ರೈಂ ಬ್ರಾಂಚ್

'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು, ಗುರುವಾರ (ನ.5) ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಮುಂದೆ ಹಾಜರಾದರು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ...

ಬೆಂಗಳೂರು : ಇಂಡಿಯಾ ಒಕ್ಕೂಟದಿಂದ ಬೃಹತ್ ‘ಮತ ಉಳಿಸಿ, ದೇಶ ಉಳಿಸಿ’ ಪ್ರತಿಭಟನೆ

'ಮತ ಉಳಿಸಿ, ದೇಶ ಉಳಿಸಿ' ಎಂಬ ಶಿರ್ಷಿಕೆಯಡಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಇಂಡಿಯಾ ಒಕ್ಕೂಟ'...

ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ, ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಅರ್ಹತೆ ಮತ್ತು ಪ್ರತಿಭೆಯ ಆಧಾರದಲ್ಲಿ ನೇಮಕಾತಿ ಮಾಡುವುದರ ಜೊತೆಗೆ, ಕರ್ನಾಟಕದ ಖಾಸಗಿ ಕಂಪನಿಗಳು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲು ನೀಡಬೇಕು. ಪ್ರತಿಭಾವಂತ ಕನ್ನಡಿಗರಿಗೆ ನೇಮಕಾತಿಯಲ್ಲಿ ಆದ್ಯತೆ ದೊರೆಯಬೇಕು ಎಂದು ಮುಖ್ಯಮಂತ್ರಿ ಡಿ.ಕೆ....

‘ನೀವು ನಮ್ಮೊಂದಿಗಿದ್ದೀರಾ, ಇಲ್ಲ ನಮ್ಮ ವಿರುದ್ಧ ಇದ್ದೀರಾ’: ಇರಾನ್ ತೈಲ ವ್ಯಾಪಾರಕ್ಕೆ ನೆರವು ಆರೋಪ; ಭಾರತ ಮೂಲದ ದಂಪತಿಗೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್: ಇರಾನ್‌ನ ತೈಲ ವ್ಯಾಪಾರಕ್ಕೆ ನೆರವು ನೀಡುವ ಮೂಲಕ ಅಮೆರಿಕದ ಆರ್ಥಿಕ ನಿರ್ಬಂಧಗಳನ್ನು ಉಲ್ಲಂಘಿಸಲು ಸಹಕರಿಸಿದ ಆರೋಪದ ಮೇಲೆ ಭಾರತ ಮೂಲದ ದಂಪತಿ ಮತ್ತು ಅವರೊಂದಿಗೆ ಸಂಪರ್ಕ ಹೊಂದಿರುವ ಹಲವು ಕಂಪನಿಗಳ ವಿರುದ್ಧ...

ಆರು ರಾಜ್ಯಗಳು – ಕೇಂದ್ರಾಡಳಿತ ಪ್ರದೇಶಗಳ ‘ಎಸ್‌ಎಸ್‌ಆರ್’ ಪ್ರಕ್ರಿಯೆ ಘೋಷಿಸಿದ ಚುನಾವಣಾ ಆಯೋಗ

ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು, ಮಿಜೋರಾಂ, ಒಡಿಶಾ ಮತ್ತು ಸಿಕ್ಕಿಂಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (Special Summary Revision -...