Homeಮುಖಪುಟಗೋಹತ್ಯೆ ಶಂಕೆಯ ಮೇಲಷ್ಟೇ ವಾಹನ ಜಪ್ತಿ ಮಾಡುವಂತಿಲ್ಲ: ಸಂತ್ರಸ್ತನಿಗೆ 15 ಲಕ್ಷ ರೂ. ಪರಿಹಾರ ನೀಡಲು...

ಗೋಹತ್ಯೆ ಶಂಕೆಯ ಮೇಲಷ್ಟೇ ವಾಹನ ಜಪ್ತಿ ಮಾಡುವಂತಿಲ್ಲ: ಸಂತ್ರಸ್ತನಿಗೆ 15 ಲಕ್ಷ ರೂ. ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ಆದೇಶ

- Advertisement -
- Advertisement -

ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಗೋಹತ್ಯೆಯ ಶಂಕೆಯ ಆಧಾರದ ಮೇಲೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಂಪೂರ್ಣ ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಯಮಬಾಹಿರವಾಗಿ ವಾಹನ ಜಪ್ತಿ ಮಾಡಿ ಸಂತ್ರಸ್ತನಿಗೆ ನಷ್ಟ ಉಂಟುಮಾಡಿದ ಉತ್ತರ ಪ್ರದೇಶ ಸರ್ಕಾರಕ್ಕೆ, ವಾಹನದ ಮಾಲೀಕನಿಗೆ 15 ಲಕ್ಷಕ್ಕೂ ಅಧಿಕ ರೂಪಾಯಿ ಪರಿಹಾರ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.

ಉತ್ತರ ಪ್ರದೇಶದ ಮಿರ್ಜಾಪುರ ಪೊಲೀಸರು 2023ರ ಸೆಪ್ಟೆಂಬರ್ 18ರಂದು ತೇಜ್ ಪ್ರಕಾಶ್ ಎಂಬುವವರಿಗೆ ಸೇರಿದ ಡಿಸಿಎಂ ಐಷರ್ (DCM Eicher) ವಾಹನವನ್ನು ಜಪ್ತಿ ಮಾಡಿದ್ದರು. ವಾಹನದಲ್ಲಿ ಎರಡು ಎತ್ತುಗಳನ್ನು ಸಾಗಿಸಲಾಗುತ್ತಿತ್ತು. ಮಿರ್ಜಾಪುರ ಜಿಲ್ಲೆಯು ಬಿಹಾರ ರಾಜ್ಯದ ಗಡಿಗೆ ಹೊಂದಿಕೊಂಡಿರುವುದರಿಂದ, ಈ ಎತ್ತುಗಳನ್ನು ಪಶ್ಚಿಮ ಬಂಗಾಳದ ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎನ್ನುವ ಶಂಕೆಯ ಮೇಲೆ ಪೊಲೀಸರು ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯ್ದೆ-1955ರ ಅಡಿ ವಾಹನವನ್ನು ವಶಪಡಿಸಿಕೊಂಡಿದ್ದರು.

ಈ ಪ್ರಕರಣದ ತನಿಖೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಜೈನ್ ಅವರಿದ್ದ ಪೀಠವು, ಕೇವಲ ಗಡಿ ಜಿಲ್ಲೆಯಲ್ಲಿ ವಾಹನ ಸಿಕ್ಕಿಬಿದ್ದಿದೆ ಎಂದ ಮಾತ್ರಕ್ಕೆ ಅದು ಬೇರೆ ರಾಜ್ಯಕ್ಕೆ ಸಾಗಣೆಯಾಗುತ್ತಿದೆ ಅಥವಾ ಗೋಹತ್ಯೆಗೆ ಒಯ್ಯಲಾಗುತ್ತಿದೆ ಎಂದು ಭಾವಿಸಲು ಬರುವುದಿಲ್ಲ. ಇದಕ್ಕೆ ಯಾವುದೇ ಸ್ವತಂತ್ರ ಹಾಗೂ ಪ್ರಬಲ ಸಾಕ್ಷ್ಯಗಳಿಲ್ಲ ಎಂದು ಬಲವಾಗಿ ಹೇಳಿದೆ.

ಉತ್ತರ ಪ್ರದೇಶ ರಾಜ್ಯದ ವ್ಯಾಪ್ತಿಯೊಳಗಿನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಗೋವು ಅಥವಾ ಅದರ ತಳಿಯನ್ನು ಸಾಗಿಸಲು ಯಾವುದೇ ಪರ್ಮಿಟ್ ಅಗತ್ಯವಿಲ್ಲ. ಪಶ್ಚಿಮ ಬಂಗಾಳಕ್ಕೆ ಸಾಗಿಸಲಾಗುತ್ತಿತ್ತು ಎನ್ನಲು ಸೂಕ್ತ ದಾಖಲೆಗಳಿಲ್ಲ. ವಾಹನದಲ್ಲಿ ದನದ ಮಾಂಸವಾಗಲಿ ಅಥವಾ ಹತ್ಯೆಯಾದ ಕುರುಹುಗಳಾಗಲಿ ಸಿಕ್ಕಿಲ್ಲ. ಜೊತೆಗೆ ಎತ್ತುಗಳ ಮೇಲೆ ಕ್ರೌರ್ಯ ಎಸಗಲಾಗಿದೆ ಎನ್ನಲು ಯಾವುದೇ ಪಶುವೈದ್ಯರ ತಪಾಸಣಾ ವರದಿಯೂ ಸಲ್ಲಿಕೆಯಾಗಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಕಾನೂನು ದುರ್ಬಳಕೆ ಮಾಡಿಕೊಂಡು ವಾಹನ ಜಪ್ತಿ ಮಾಡಿದ್ದರಿಂದ ಸಾಲ ಮಾಡಿ ವಾಹನ ಖರೀದಿಸಿದ್ದ ಮಾಲೀಕನು ತನ್ನ ಏಕೈಕ ಜೀವನೋಪಾಯದ ಮೂಲವನ್ನು ಕಳೆದುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಜಪ್ತಿಯಾದ ದಿನಾಂಕದಿಂದ (ಸೆಪ್ಟೆಂಬರ್ 18, 2023) ವಾಹನ ಬಿಡುಗಡೆಯಾಗುವ ದಿನದವರೆಗೆ ಪ್ರತಿ ತಿಂಗಳಿಗೆ 40,000 ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ. ಈ ಒಟ್ಟು ಮೊತ್ತವು 15 ಲಕ್ಷ ರೂಪಾಯಿಗೂ ಅಧಿಕವಾಗುತ್ತದೆ. ಇದರ ಜೊತೆಗೆ, ಮಾಲೀಕನು ಅನುಭವಿಸಿದ ಮಾನಸಿಕ ಕಿರುಕುಳ ಮತ್ತು ಹಣಕಾಸಿನ ಸಂಕಷ್ಟಕ್ಕಾಗಿ ಹೆಚ್ಚುವರಿಯಾಗಿ 25,000 ರೂಪಾಯಿ ನಷ್ಟಪರಿಹಾರ ಪಾವತಿಸಲು ನ್ಯಾಯಾಲಯ ಆದೇಶಿಸಿರುವುದಾಗಿ ವರದಿಯಾಗಿದೆ. ಹಾಗೂ ಈ ಪ್ರಕರಣದಲ್ಲಿ ತಪ್ಪಿತಸ್ಥರಾದ ಅಧಿಕಾರಿಗಳಿಂದ ಇಲಾಖಾ ವಿಚಾರಣೆ ನಡೆಸಿ ಈ ಪರಿಹಾರದ ಮೊತ್ತವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕ್ಯಾಬ್ ಚಾಲಕನಿಂದ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ಎಲ್ಲ ಮೃತದೇಹಗಳೂ ಪತ್ತೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪದ ಪ್ರಕರಣದಲ್ಲಿ, ನವೆಂಬರ್ 9ರ ಸೋಮವಾರ ಕೊನೆಯ ಎರಡೂ ಮೃತದೇಹಗಳನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಶಿರಾಡಿ ಘಾಟ್‌ನ ಅರಣ್ಯ...

ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಆರೋಪಕ್ಕೆ ಕರ್ನಾಟಕ ಸರ್ಕಾರ ಬದ್ಧ: ಸಚಿವ ರಿಜ್ವಾನ್ ಅರ್ಷದ್

ಪೆಟ್ರೋಲ್‌ನಲ್ಲಿ ನಿಗದಿಪಡಿಸಿರುವ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ತನ್ನ ವರದಿಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ...

ಫಿರೋಜಾಬಾದ್‌ನಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಭೀಕರ ಹಲ್ಲೆ: ಆಗ್ರಾ ಆಸ್ಪತ್ರೆಯಲ್ಲಿ 16ರ ಬಾಲಕಿ ಸಾವು 

ಉತ್ತರ ಪ್ರದೇಶ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಮೂವರು ವ್ಯಕ್ತಿಗಳಿಂದ ಸಾಮೂಹಿಕ ಅತ್ಯಾಚಾರ ಮತ್ತು ಅತ್ಯಂತ ಕ್ರೂರ ಹಲ್ಲೆಗೊಳಗಾಗಿದ್ದ 16 ವರ್ಷದ ದಲಿತ ಬಾಲಕಿ, ಒಂದು ವಾರದ ಸಾವು ಬದುಕಿನ ಹೋರಾಟದ ಬಳಿಕ ಶುಕ್ರವಾರ...

ಗ್ಯಾನೇಶ್ ಕುಮಾರ್ ವಿರುದ್ಧ ಭ್ರಷ್ಟಾಚಾರ ತನಿಖೆ: ಕೇರಳದ ವಿಜಿಲೆನ್ಸ್ ಮುಂದೆ ಹಾಜರಾದ ಗುತ್ತಿಗೆದಾರ; ಹಿಂದಿನ ತನಿಖೆ ಸಾಕ್ಷ್ಯ ಮುಚ್ಚಿಹಾಕಿದ ಆರೋಪ

ತಿರುವನಂತಪುರಂ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧದ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ ತನಿಖೆ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನಡೆದ ರಸ್ತೆ...

ಸಿಂಧನೂರು| ಆಂಜನೇಯ ಜಾತ್ರೋತ್ಸವದಲ್ಲಿ ದಲಿತರ ಮೇಲೆ ದೌರ್ಜನ್ಯ; ತಿಡಿಗೋಳದಲ್ಲಿ ಬೃಹತ್‌ ಪ್ರತಿಭಟನೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ತಿಡಿಗೋಳ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ ಆಂಜನೇಯ ಜಾತ್ರೋತ್ಸವದಲ್ಲಿ ದಲಿತರ ಮೇಲೆ ಸವರ್ಣೀಯರಿಂದ ನಡೆದ ದೌರ್ಜನ್ಯ, ಸಾಮೂಹಿಕ ಬಹಿಷ್ಕಾರ ಮತ್ತು ಅಸ್ಪೃಶ್ಯತೆ ಆಚರಣೆ ವಿರೋಧಿಸಿ ದಲಿತ ಮತ್ತು ಪ್ರಗತಿಪರ...

ಗೌರಿ ಲಂಕೇಶ್, ಕಲ್ಬುರ್ಗಿ ಹತ್ಯೆ ಪ್ರಕರಣ: 6 ತಿಂಗಳಲ್ಲಿ ವಿಚಾರಣೆ ಮುಗಿಸಿ ಆರೋಪಿಗಳನ್ನು ಜೈಲಿಗೆ ಕಳುಹಿಸುವೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ಮುಂಬರುವ ಆರು ತಿಂಗಳೊಳಗೆ ಪೂರ್ಣಗೊಳಿಸಿ, ಆರೋಪಿಗಳನ್ನು ಜೈಲಿಗೆ ಕಳುಹಿಸುವುದಾಗಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ. ಕೇರಳದ...

ದೀಪಾವಳಿಯ ಮರುದಿನ ದಟ್ಟ ಹೊಗೆಯಿಂದ ಮುಸುಕಾದ ದೆಹಲಿ ಆಕಾಶ; ಅಪಾಯಕಾರಿ ಮಟ್ಟಕ್ಕೆ ಏರಿದ ವಾಯುಮಾಲಿನ್ಯ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಗದಿತ ಸಮಯ ಮೀರಿಯೂ ನಗರದಾದ್ಯಂತ ಪಟಾಕಿ ಸಿಡಿಸಿದ ಪರಿಣಾಮ, ಸೋಮವಾರ ಬೆಳಗ್ಗೆ ದೆಹಲಿ ತೀವ್ರ ವಾಯುಮಾಲಿನ್ಯದ ಹೊಡೆತಕ್ಕೆ ಸಿಲುಕಿದೆ. ದಟ್ಟ ಬೂದು ಬಣ್ಣದ ಹೊಗೆಯ ಮಂಜು ನಗರದ ಆಕಾಶವನ್ನು...

‘ಉತ್ತರ ಪ್ರದೇಶದಲ್ಲಿ ನಾಗರಿಕ ಸ್ವಾತಂತ್ರ್ಯದ ಸ್ಥಿತಿ ನಾಚಿಕೆಗೇಡಿನದ್ದು’; ಹಕ್ಕುಗಳ ಉಲ್ಲಂಘನೆ ಪೊಲೀಸರಿಗೆ ದಿನನಿತ್ಯದ ಸಂಗತಿ: ಅಲಹಾಬಾದ್ ಹೈಕೋರ್ಟ್

ಲಕ್ನೋ: ಉತ್ತರ ಪ್ರದೇಶದಲ್ಲಿ ಪೊಲೀಸರಿಂದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್, ರಾಜ್ಯದಲ್ಲಿನ ನಾಗರಿಕ ಸ್ವಾತಂತ್ರ್ಯದ ಪರಿಸ್ಥಿತಿಯನ್ನು 'ನಾಚಿಕೆಗೇಡಿನದ್ದು' ಎಂದು ಬಣ್ಣಿಸಿದೆ. ನಾಗರಿಕರ...

ಗಾಜಾದಲ್ಲಿ ಟೆಂಟ್‌ಗಳ ಮೇಲೆ ಕುಸಿದ ಮರಳಿನ ದಿಬ್ಬ; ನಾಲ್ವರು ಮಕ್ಕಳು ಸೇರಿ ಐವರ ಸಾವು

ಮಧ್ಯ ಗಾಜಾದ ದೇರ್ ಅಲ್-ಬಲಾಹ್‌ನಲ್ಲಿ ಸ್ಥಳಾಂತರಗೊಂಡ ಕುಟುಂಬಗಳು ಆಶ್ರಯ ಪಡೆದಿದ್ದ ಟೆಂಟ್‌ಗಳ ಮೇಲೆ ಮರಳಿನ ದಿಬ್ಬ ಕುಸಿದು ಬಿದ್ದ ಪರಿಣಾಮ ನಾಲ್ವರು ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದಂತೆ ಕನಿಷ್ಠ ಐವರು ಪ್ಯಾಲೆಸ್ತೀನಿಯರು...

ಇಸ್ರೇಲ್‌ನ ನೂತನ ಸರ್ಕಾರ ರಚಿಸಲು ಗಾಡಿ ಐಸೆನ್‌ಕೋಟ್‌ಗೆ ಅಧಿಕೃತ ಆಹ್ವಾನ

ಇಸ್ರೇಲ್‌ನ ಯಾಶರ್ ಪಕ್ಷದ ನಾಯಕ ಗಾಡಿ ಐಸೆನ್‌ಕೋಟ್ ಅವರು ದೇಶದ ಮುಂದಿನ ಸರ್ಕಾರ ರಚಿಸುವ ಅಧಿಕೃತ ಹೊಣೆಗಾರಿಕೆಯನ್ನು ಭಾನುವಾರ (ನ.8) ಸ್ವೀಕರಿಸಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ 26ನೇ ನೆಸೆಟ್‌ನ (ಇಸ್ರೇಲ್ ಸಂಸತ್ತು) ಮೊದಲ ಸರ್ಕಾರ...