Homeಮುಖಪುಟದೀಪಾವಳಿಯ ಮರುದಿನ ದಟ್ಟ ಹೊಗೆಯಿಂದ ಮುಸುಕಾದ ದೆಹಲಿ ಆಕಾಶ; ಅಪಾಯಕಾರಿ ಮಟ್ಟಕ್ಕೆ ಏರಿದ ವಾಯುಮಾಲಿನ್ಯ

ದೀಪಾವಳಿಯ ಮರುದಿನ ದಟ್ಟ ಹೊಗೆಯಿಂದ ಮುಸುಕಾದ ದೆಹಲಿ ಆಕಾಶ; ಅಪಾಯಕಾರಿ ಮಟ್ಟಕ್ಕೆ ಏರಿದ ವಾಯುಮಾಲಿನ್ಯ

- Advertisement -
- Advertisement -

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಗದಿತ ಸಮಯ ಮೀರಿಯೂ ನಗರದಾದ್ಯಂತ ಪಟಾಕಿ ಸಿಡಿಸಿದ ಪರಿಣಾಮ, ಸೋಮವಾರ ಬೆಳಗ್ಗೆ ದೆಹಲಿ ತೀವ್ರ ವಾಯುಮಾಲಿನ್ಯದ ಹೊಡೆತಕ್ಕೆ ಸಿಲುಕಿದೆ. ದಟ್ಟ ಬೂದು ಬಣ್ಣದ ಹೊಗೆಯ ಮಂಜು ನಗರದ ಆಕಾಶವನ್ನು ಆವರಿಸಿದ್ದು, ರಸ್ತೆಗಳಲ್ಲಿ ಗೋಚರತೆ ಕಡಿಮೆಯಾಗಿದೆ. ಜನರಲ್ಲಿ ಕಣ್ಣು ಮತ್ತು ಗಂಟಲಿನ ಉರಿ, ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಬವಾನಾ, ಬುರಾರಿ, ಜಹಾಂಗೀರ್‌ಪುರಿ, ಸೋನಿಯಾ ವಿಹಾರ್, ಪಂಜಾಬಿ ಬಾಗ್, ಓಖ್ಲಾ ಮತ್ತು ರೋಹಿಣಿ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ‘ತೀವ್ರ ಅಪಾಯಕಾರಿ’ ಮಟ್ಟದಲ್ಲಿದೆ.

ವಾಯು ಗುಣಮಟ್ಟ ಮೇಲ್ವಿಚಾರಣಾ ವೇದಿಕೆಯಾದ ‘AQI.in’ ಪ್ರಕಾರ, ದೀಪಾವಳಿಯ ಬಳಿಕ ದೆಹಲಿಯ ಎಕ್ಯೂಐ 2,283ಕ್ಕೆ ಏರಿತ್ತು. ಸೋಮವಾರ ಬೆಳಗ್ಗೆ ಇದು 637ರಷ್ಟಿದ್ದು, ವೇದಿಕೆಯು ಈ ಮಟ್ಟವನ್ನು ‘ಅತ್ಯಂತ ಅಪಾಯಕಾರಿ’ ಎಂದು ವರ್ಗೀಕರಿಸಿದೆ.

ಸ್ವಿಟ್ಜರ್ಲೆಂಡ್ ಮೂಲದ ವಾಯು ಗುಣಮಟ್ಟ ಮೇಲ್ವಿಚಾರಣಾ ಸಂಸ್ಥೆ ಎಕ್ಯೂಐ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ದೆಹಲಿಯಲ್ಲಿ ಪಿಎಂ2.5 ಕಣಗಳ ಸಾಂದ್ರತೆ ಪ್ರತಿ ಘನ ಮೀಟರ್‌ಗೆ 170 ಮೈಕ್ರೋಗ್ರಾಂ (µg/m³) ದಾಖಲಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ವಾರ್ಷಿಕ ಮಾರ್ಗಸೂಚಿ ಮಿತಿಗಿಂತ ಸುಮಾರು 34 ಪಟ್ಟು ಹೆಚ್ಚಾಗಿದೆ.

ಪಿಎಂ2.5 ಎಂಬುದು ಅತ್ಯಂತ ಸೂಕ್ಷ್ಮ ಗಾತ್ರದ ಮಾಲಿನ್ಯಕಾರಕ ಕಣಗಳಾಗಿದ್ದು, ಶ್ವಾಸಕೋಶದ ಆಳದವರೆಗೆ ಪ್ರವೇಶಿಸುವುದಲ್ಲದೆ ರಕ್ತಪ್ರವಾಹವನ್ನೂ ಸೇರಬಲ್ಲವು. ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಮರ್ಥ್ಯದಿಂದಾಗಿ ಇವು ಪ್ರಮುಖ ವಾಯುಮಾಲಿನ್ಯಕಾರಕಗಳೆಂದು ಪರಿಗಣಿಸಲ್ಪಟ್ಟಿವೆ.

ಎಕ್ಯೂಎಐಆರ್ ಅಂಕಿಅಂಶಗಳ ಪ್ರಕಾರ, ಪಿಎಂ10 ಕಣಗಳ ಸಾಂದ್ರತೆ ಪ್ರತಿ ಘನ ಮೀಟರ್‌ಗೆ 126 ಮೈಕ್ರೋಗ್ರಾಂ ದಾಖಲಾಗಿದೆ. ಓಝೋನ್ ಮಟ್ಟ 31, ನೈಟ್ರೋಜನ್ ಡೈಆಕ್ಸೈಡ್ 44.6, ಸಲ್ಫರ್ ಡೈಆಕ್ಸೈಡ್ 32 ಹಾಗೂ ಕಾರ್ಬನ್ ಮಾನಾಕ್ಸೈಡ್ 1,461.5 ಮೈಕ್ರೋಗ್ರಾಂಗಳಷ್ಟಿದೆ.

ವಾಯು ಗುಣಮಟ್ಟ ಮುನ್ಸೂಚನಾ ವ್ಯವಸ್ಥೆಯು ಸೋಮವಾರ ದೆಹಲಿಯ ವಾಯು ಗುಣಮಟ್ಟ ಮತ್ತಷ್ಟು ಕುಸಿದು ‘ತೀವ್ರ ಅಪಾಯಕಾರಿ’ ವರ್ಗಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯನ್ನೂ ಅದು ತಿಳಿಸಿದೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ವಾಹನಗಳಿಂದ ಹೊರಸೂಸುವ ಹೊಗೆ ಮತ್ತು ನೆರೆಯ ರಾಜ್ಯಗಳಲ್ಲಿ ನಡೆಯುತ್ತಿರುವ ಕೃಷಿ ತ್ಯಾಜ್ಯ (ಕಳೆ) ಸುಡುವಿಕೆ ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಗಾಳಿಯ ಮೂಲಕ ಮಾಲಿನ್ಯಕಾರಕಗಳು ಚದುರಿಹೋಗುವ ಸಾಮರ್ಥ್ಯವನ್ನು ಸೂಚಿಸುವ ವಾತಾಯನ ಸೂಚ್ಯಂಕ ಪ್ರತಿ ಸೆಕೆಂಡಿಗೆ 6,000 ಚದರ ಮೀಟರ್‌ಗಿಂತ ಕಡಿಮೆಯಿದ್ದರೆ ಮತ್ತು ಸರಾಸರಿ ಗಾಳಿಯ ವೇಗ ಗಂಟೆಗೆ 10 ಕಿ.ಮೀ.ಗಿಂತ ಕಡಿಮೆಯಿದ್ದರೆ, ಮಾಲಿನ್ಯಕಾರಕಗಳು ವಾತಾವರಣದಲ್ಲಿ ಚದುರಿಹೋಗಲು ಅನುಕೂಲಕರ ಪರಿಸ್ಥಿತಿ ಇರುವುದಿಲ್ಲ ಎಂದು ವಾಯು ಗುಣಮಟ್ಟ ಮುನ್ಸೂಚನಾ ವ್ಯವಸ್ಥೆ ತಿಳಿಸಿದೆ.

ನಿಯಮ ಉಲ್ಲಂಘಿಸಿ ಪಟಾಕಿ ಸಿಡಿತ

ಪಟಾಕಿ ಬಳಕೆಗೆ ನಿರ್ಬಂಧಗಳಿದ್ದರೂ ದೀಪಾವಳಿ ರಾತ್ರಿ ರಾಷ್ಟ್ರ ರಾಜಧಾನಿಯಾದ್ಯಂತ ಪಟಾಕಿ ಸಿಡಿಸಲಾಗಿದೆ. ನಗರದ 20 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳು ‘ತೀವ್ರ ಅಪಾಯಕಾರಿ’ ಮಟ್ಟದ ಮಾಲಿನ್ಯವನ್ನು ದಾಖಲಿಸಿವೆ. ಸೋನಿಯಾ ವಿಹಾರ್‌ನಲ್ಲಿ ಅತ್ಯಧಿಕ 463 ಎಕ್ಯೂಐ ದಾಖಲಾಗಿದ್ದು, ಜಹಾಂಗೀರ್‌ಪುರಿಯಲ್ಲಿ 450ರಷ್ಟಿತ್ತು.

ಭಾನುವಾರ ದೆಹಲಿಯ ಸರಾಸರಿ ಎಕ್ಯೂಐ 376ಕ್ಕೆ ತಲುಪಿತ್ತು. ದೀಪಾವಳಿ ರಾತ್ರಿ 10 ಗಂಟೆಗೆ ಅಂಕಿಅಂಶ ದಾಖಲಿಸಿದ 59 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 20 ಕೇಂದ್ರಗಳಲ್ಲಿ ‘ತೀವ್ರ ಅಪಾಯಕಾರಿ’, ಆರು ಕೇಂದ್ರಗಳಲ್ಲಿ ‘ಕಳಪೆ’ ಮತ್ತು ಉಳಿದ 33 ಕೇಂದ್ರಗಳಲ್ಲಿ ‘ಅತ್ಯಂತ ಕಳಪೆ’ ಮಟ್ಟದ ವಾಯು ಗುಣಮಟ್ಟ ದಾಖಲಾಗಿತ್ತು.

ಭಾನುವಾರ ಸಂಜೆ 5ರಿಂದ 6 ಗಂಟೆಯ ಸುಮಾರಿಗೆ ಪಿತಾಂಪುರ, ಬುರಾರಿ, ಮಯೂರ್ ವಿಹಾರ್ ಮತ್ತು ಲುಟಿಯನ್ಸ್ ದೆಹಲಿಯ ಕೆಲವು ಭಾಗಗಳಲ್ಲಿ ಪಟಾಕಿ ಸಿಡಿಸುವುದು ಆರಂಭವಾಗಿತ್ತು. ಸಂಜೆಯಾಗುತ್ತಿದ್ದಂತೆ ಸಂಭ್ರಮಾಚರಣೆ ಹೆಚ್ಚಾದ ಪರಿಣಾಮ, ರಸ್ತೆಗಳು ಮತ್ತು ವಸತಿ ಪ್ರದೇಶಗಳಲ್ಲಿ ಹೊಗೆ ದಟ್ಟವಾಗಿ ಆವರಿಸತೊಡಗಿತು.

ರಾತ್ರಿ ಪೂರ್ತಿ ಪಟಾಕಿ ಸಿಡಿತ ಮುಂದುವರಿದಿದ್ದರಿಂದ ಸುಟ್ಟ ಪಟಾಕಿಗಳ ತೀವ್ರ ವಾಸನೆ, ಕಡಿಮೆಯಾದ ಗೋಚರತೆ ಮತ್ತು ಉಸಿರಾಟದ ತೊಂದರೆ ಎದುರಾಗಿದೆ ಎಂದು ನಗರದ ಹಲವು ಪ್ರದೇಶಗಳ ನಿವಾಸಿಗಳು ತಿಳಿಸಿದ್ದಾರೆ.

ಗಂಭೀರ ಮಟ್ಟಕ್ಕೆ ಕುಸಿಯುವ ಮುನ್ಸೂಚನೆ

ರಾಷ್ಟ್ರ ರಾಜಧಾನಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 370ರಷ್ಟಿದ್ದು, ಇದು ‘ಅತ್ಯಂತ ಕಳಪೆ’ ವರ್ಗದಲ್ಲಿದೆ. ಸೋಮವಾರ ಹಗಲಿನಲ್ಲಿ ಇದು ಮತ್ತಷ್ಟು ಕುಸಿದು ‘ತೀವ್ರ ಅಪಾಯಕಾರಿ’ ವರ್ಗಕ್ಕೆ ತಲುಪುವ ನಿರೀಕ್ಷೆಯಿದೆ.

ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಬುರಾರಿ ಕ್ರಾಸಿಂಗ್ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಅತ್ಯಧಿಕ 437 ಎಕ್ಯೂಐ ದಾಖಲಾಗಿದೆ. ಇತರ ನಾಲ್ಕು ಕೇಂದ್ರಗಳಲ್ಲಿ ‘ಕಳಪೆ’ ಮಟ್ಟದ ವಾಯು ಗುಣಮಟ್ಟ ದಾಖಲಾಗಿದ್ದು, ಉಳಿದ ಕೇಂದ್ರಗಳಲ್ಲಿ ‘ಅತ್ಯಂತ ಕಳಪೆ’ ಮಟ್ಟ ಕಂಡುಬಂದಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ವಾಯು ಗುಣಮಟ್ಟ ಸೂಚ್ಯಂಕವನ್ನು ಈ ಕೆಳಗಿನಂತೆ ವರ್ಗೀಕರಿಸಲಾಗುತ್ತದೆ:

ಎಕ್ಯೂಐ ಪ್ರಮಾಣವಾಯು ಗುಣಮಟ್ಟದ ವರ್ಗ
0–50ಉತ್ತಮ (Good)
51–100ತೃಪ್ತಿಕರ (Satisfactory)
101–200ಮಧ್ಯಮ (Moderate)
201–300ಕಳಪೆ (Poor)
301–400ಅತ್ಯಂತ ಕಳಪೆ (Very Poor)
401–500ತೀವ್ರ ಅಪಾಯಕಾರಿ (Severe)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಉತ್ತರ ಪ್ರದೇಶದಲ್ಲಿ ನಾಗರಿಕ ಸ್ವಾತಂತ್ರ್ಯದ ಸ್ಥಿತಿ ನಾಚಿಕೆಗೇಡಿನದ್ದು’; ಹಕ್ಕುಗಳ ಉಲ್ಲಂಘನೆ ಪೊಲೀಸರಿಗೆ ದಿನನಿತ್ಯದ ಸಂಗತಿ: ಅಲಹಾಬಾದ್ ಹೈಕೋರ್ಟ್

ಲಕ್ನೋ: ಉತ್ತರ ಪ್ರದೇಶದಲ್ಲಿ ಪೊಲೀಸರಿಂದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್, ರಾಜ್ಯದಲ್ಲಿನ ನಾಗರಿಕ ಸ್ವಾತಂತ್ರ್ಯದ ಪರಿಸ್ಥಿತಿಯನ್ನು 'ನಾಚಿಕೆಗೇಡಿನದ್ದು' ಎಂದು ಬಣ್ಣಿಸಿದೆ. ನಾಗರಿಕರ...

ಗಾಜಾದಲ್ಲಿ ಟೆಂಟ್‌ಗಳ ಮೇಲೆ ಕುಸಿದ ಮರಳಿನ ದಿಬ್ಬ; ನಾಲ್ವರು ಮಕ್ಕಳು ಸೇರಿ ಐವರ ಸಾವು

ಮಧ್ಯ ಗಾಜಾದ ದೇರ್ ಅಲ್-ಬಲಾಹ್‌ನಲ್ಲಿ ಸ್ಥಳಾಂತರಗೊಂಡ ಕುಟುಂಬಗಳು ಆಶ್ರಯ ಪಡೆದಿದ್ದ ಟೆಂಟ್‌ಗಳ ಮೇಲೆ ಮರಳಿನ ದಿಬ್ಬ ಕುಸಿದು ಬಿದ್ದ ಪರಿಣಾಮ ನಾಲ್ವರು ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದಂತೆ ಕನಿಷ್ಠ ಐವರು ಪ್ಯಾಲೆಸ್ತೀನಿಯರು...

ಇಸ್ರೇಲ್‌ನ ನೂತನ ಸರ್ಕಾರ ರಚಿಸಲು ಗಾಡಿ ಐಸೆನ್‌ಕೋಟ್‌ಗೆ ಅಧಿಕೃತ ಆಹ್ವಾನ

ಇಸ್ರೇಲ್‌ನ ಯಾಶರ್ ಪಕ್ಷದ ನಾಯಕ ಗಾಡಿ ಐಸೆನ್‌ಕೋಟ್ ಅವರು ದೇಶದ ಮುಂದಿನ ಸರ್ಕಾರ ರಚಿಸುವ ಅಧಿಕೃತ ಹೊಣೆಗಾರಿಕೆಯನ್ನು ಭಾನುವಾರ (ನ.8) ಸ್ವೀಕರಿಸಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ 26ನೇ ನೆಸೆಟ್‌ನ (ಇಸ್ರೇಲ್ ಸಂಸತ್ತು) ಮೊದಲ ಸರ್ಕಾರ...

ಎಥನಾಲ್ ಪ್ರಮಾಣವನ್ನು ಶೇ. 20ರಿಂದ 30ಕ್ಕೆ ಏರಿಸಲು ಕೇಂದ್ರ ಸರ್ಕಾರದಲ್ಲಿ ಈ ಹಿಂದೆಯೇ ಚರ್ಚೆಯಾಗಿತ್ತು!: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!

ಬೆಂಗಳೂರು: ಕರ್ನಾಟಕದಲ್ಲಿ E20 ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತಲೂ ಅಧಿಕ ಪ್ರಮಾಣದ ಎಥನಾಲ್ ಬೆರೆಸಿ ಸಾರ್ವಜನಿಕರಿಗೆ ವಂಚಿಸಲಾಗುತ್ತಿದೆ ಎನ್ನುವ ರಾಜ್ಯ ಸರ್ಕಾರದ ಗಂಭೀರ ಆರೋಪಗಳ ನಡುವೆಯೇ, ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ...

ಬಂಗಾಳ ಎಸ್‌ಐಆರ್ ನ್ಯಾಯಮಂಡಳಿಗೆ ನಿವೃತ್ತ ನ್ಯಾಯಾಧೀಶ ಬಿಸ್ವಜಿತ್ ಬಸು ರಾಜೀನಾಮೆ

ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿಸ್ವಜಿತ್ ಬಸು ಪಶ್ಚಿಮ ಬಂಗಾಳ ಎಸ್‌ಐಆರ್ ನ್ಯಾಯಮಂಡಳಿಗಳಿಗೆ ರಾಜೀನಾಮೆ ನೀಡಿದ್ದಾರೆ, ಒಂದು ತಿಂಗಳಲ್ಲಿ ಸಮಿತಿಯಿಂದ ಹೊರಗುಳಿದ 19 ಸದಸ್ಯರಲ್ಲಿ ನಾಲ್ಕನೇ ವ್ಯಕ್ತಿಯಾಗಿದ್ದಾರೆ. ರಾಜ್ಯದ ಮತದಾರರ ಪಟ್ಟಿಯಿಂದ ಹೊರಗುಳಿದ...

‘ನೋಟ್ ಬಂದಿ’ ಆರ್ಥಿಕತೆ ಹಾಳು ಮಾಡಿದೆ, ‘ವೋಟ್ ಬಂದಿ’ ರಾಜಕೀಯ ನಾಶಪಡಿಸುತ್ತಿದೆ: ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದೆ. 2016ರಲ್ಲಿ ಜಾರಿಗೊಳಿಸಿದ 'ನೋಟ್ ಬಂದ್' ದೇಶದ ಆರ್ಥಿಕತೆಯನ್ನು ಹಾಳುಮಾಡಿದ್ದರೆ, ಈಗ ನಡೆಯುತ್ತಿರುವ 'ವೋಟ್ ಬಂದ್' ದೇಶದ ರಾಜಕೀಯ...

“ಪಟಾಕಿಗಳನ್ನು ಸಿಡಿಸುವುದರಿಂದ ಹಲವು ರೋಗ-ರುಜಿನಗಳು ಗುಣಮುಖವಾಗುತ್ತವೆ” – ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ ಹೇಳಿಕೆ!

ಕಾಳಿ ಪೂಜೆ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಹಾಗೂ ಶಬ್ದ ನಿಯಂತ್ರಿಸಲು ಆಡಳಿತ ಮಂಡಳಿಗಳು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ವಿಧಿಸುತ್ತಿರುವ ಬೆನ್ನಲ್ಲೇ, ಕೋಲ್ಕತ್ತಾದ ಟಾಲಿಗಂಜ್ ಕ್ಷೇತ್ರದ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ...

ಎನ್‌ಡಿಎ ಪರೀಕ್ಷೆ; ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶಿವಮೊಗ್ಗದ ವಿದ್ಯಾರ್ಥಿನಿ

ಕರ್ನಾಟಕದ 18 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ...

ಗೂಗಲ್ ‘ರೀಯೂನಿಯನ್’ ಜಾಹೀರಾತು ಬಿಡುಗಡೆಯಾಗಿ 13 ವರ್ಷ: ಕುನಾಲ್ ಕಾಮ್ರಾ ಪೋಸ್ಟ್‌ನಿಂದ ಮತ್ತೆ ನೆನಪಾದ ಗಡಿ ಮೀರಿದ ಸೌಹಾರ್ದತೆ!

13 ವರ್ಷಗಳ ಹಿಂದೆ ಅಂದರೆ 2013ರ ನವೆಂಬರ್ 13ರಂದು ಗೂಗಲ್ ಇಂಡಿಯಾ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದ ಜಾಗತಿಕ ಪ್ರಸಿದ್ಧ ‘ರೀಯೂನಿಯನ್’ (Google Reunion) ಜಾಹೀರಾತು, ಇಂದು ಸಾಮಾಜಿಕ ಜಾಲತಾಣ...

ಕೇಂದ್ರ ಸಚಿವರ ಜೇಬು ತುಂಬಿಸಲು ಎಥನಾಲ್ ದಂಧೆ!: 130 ಕೋಟಿ ಜನರಿಗೆ 20% ಹೆಸರಲ್ಲಿ 40% ಎಥನಾಲ್ – ಪ್ರಿಯಾಂಕ್‌ ಖರ್ಗೆ!

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು (OMCs) ಸರಬರಾಜು ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಯಮಾನುಸಾರ ಇರಬೇಕಾದ ಶೇಕಡಾ 20 ಕ್ಕಿಂತಲೂ ಅಧಿಕ ಪ್ರಮಾಣದ ಎಥನಾಲ್ ಮಿಶ್ರಣ ಮಾಡುತ್ತಿರುವುದು ಈಗ ರಾಜ್ಯ ಸರ್ಕಾರ ನಡೆಸಿದ ತನಿಖೆಯಿಂದ...