HomeಮುಖಪುಟSIR ವಿವಾದ: ಚುನಾವಣಾ ಆಯೋಗಕ್ಕೆ 48 ಪ್ರಶ್ನೆಗಳನ್ನು ಕೇಳಲು ಸುಪ್ರೀಂ ಕೋರ್ಟ್ ಅನುಮತಿ ಕೋರಿದ ರಾಹುಲ್...

SIR ವಿವಾದ: ಚುನಾವಣಾ ಆಯೋಗಕ್ಕೆ 48 ಪ್ರಶ್ನೆಗಳನ್ನು ಕೇಳಲು ಸುಪ್ರೀಂ ಕೋರ್ಟ್ ಅನುಮತಿ ಕೋರಿದ ರಾಹುಲ್ ಗಾಂಧಿ!

- Advertisement -
- Advertisement -

ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಏಕಪಕ್ಷೀಯ ನಿರ್ಧಾರಗಳು ಮತ್ತು ಬೃಹತ್ ಪ್ರಮಾಣದ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಿರುವ ಆರೋಪಗಳಿಗೆ ಸಂಬಂಧಿಸಿದಂತೆ, ಭಾರತೀಯ ಚುನಾವಣಾ ಆಯೋಗಕ್ಕೆ 48 ಔಪಚಾರಿಕ ಲಿಖಿತ ಪ್ರಶ್ನೆಗಳನ್ನು ಕೇಳಲು ಅನುಮತಿ ನೀಡುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರ ವಿಪಕ್ಷ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಕಾನೂನು ಸುದ್ದಿ ಸಂಸ್ಥೆ ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.

ಈ ಅರ್ಜಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಇಬ್ಬರು ಚುನಾವಣಾ ಆಯುಕ್ತರಾದ ಡಾ. ಸುಖ್‌ಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರಿಂದ ಪ್ರಮಾಣಪತ್ರ ಸಲ್ಲಿಸಲು ನಿರ್ದೇಶಿಸುವಂತೆ ಕೋರಲಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಮೂಲ ಅರ್ಜಿಗೆ ಚುನಾವಣಾ ಆಯೋಗವು ಅಕ್ಟೋಬರ್ 26 ಮತ್ತು ನವೆಂಬರ್ 14ರಂದು ಸಲ್ಲಿಸಿರುವ ಪ್ರಮಾಣಪತ್ರಗಳಲ್ಲಿ ಕೇವಲ ಮೇಲ್ನೋಟದ ಸಮರ್ಥನೆಗಳನ್ನು ನೀಡಲಾಗಿದ್ದು, ಪ್ರಮುಖ ಅಧಿಕೃತ ಕಡತಗಳು ಮತ್ತು ದಾಖಲೆಗಳನ್ನು ಮರೆಮಾಚಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಚುನಾವಣಾ ಆಯೋಗವು ತನ್ನ ಪ್ರಮಾಣಪತ್ರದಲ್ಲಿ ಮೂವರು ಸದಸ್ಯರ ಆಯೋಗದ ಸರ್ವಾನುಮತದ ನಿರ್ಧಾರದ ಮೇರೆಗೆ SIR ಆದೇಶಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದೆ. ಆದರೆ, ಈ ನಿರ್ಧಾರಕ್ಕೆ ಪೂರಕವಾಗಿ ಯಾವುದೇ ಕಡತದ ಸಂಖ್ಯೆಗಳು, ದಿನಾಂಕಗಳು ಅಥವಾ ಸಭೆಯ ನಡಾವಳಿಗಳನ್ನು ಬಹಿರಂಗಪಡಿಸಲು ಆಯೋಗ ವಿಫಲವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಅಲ್ಲದೆ, ರಾಷ್ಟ್ರವ್ಯಾಪಿ SIR ಆರಂಭಿಸಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು 2025ರ ಆಗಸ್ಟ್‌ನಲ್ಲಿ ಆಯೋಗವೇ ನೀಡಿದ್ದ ಆರ್‌ಟಿಐ ಉತ್ತರವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಇತರ ಇಬ್ಬರು ಆಯುಕ್ತರ ಗಮನಕ್ಕೆ ತರದೆ ಅಥವಾ ಅವರ ಒಪ್ಪಿಗೆಯಿಲ್ಲದೆ ಆಯೋಗದ ಸಾಮೂಹಿಕ ಅಧಿಕಾರವನ್ನು ಏಕಪಕ್ಷೀಯವಾಗಿ ಬಳಸಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಈ ಪ್ರಶ್ನೆಗಳು ಅತ್ಯಗತ್ಯ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ‘ಮತ ಕಳ್ಳತನ’ದ ಕುರಿತು ಪದೇ ಪದೇ ಎತ್ತಲಾಗುತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸಿಲ್ಲ ಎಂದು ಆರೋಪಿಸಿದೆ. SIR ಪ್ರಕ್ರಿಯೆಯಲ್ಲಿನ ಗಂಭೀರ ಲೋಪಗಳು ಮತ ಕಳ್ಳತನಕ್ಕೆ ದಾರಿ ಮಾಡಿಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು, ಇತರ ಇಬ್ಬರು ಆಯುಕ್ತರು ಮತ್ತು ಐಟಿ ವಿಭಾಗದ ಮಹಾನಿರ್ದೇಶಕರನ್ನು ಪ್ರಶ್ನಿಸಲು ಇಂಡಿಯಾ (INDIA) ಮೈತ್ರಿಕೂಟ ಸುಪ್ರೀಂ ಕೋರ್ಟ್ ಅನುಮತಿ ಕೋರಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ 48 ಪ್ರಶ್ನೆಗಳ ಪಟ್ಟಿಯಲ್ಲಿ ಹಲವು ಗಂಭೀರ ಸಂಗತಿಗಳನ್ನು ಪ್ರಸ್ತಾಪಿಸಲಾಗಿದೆ. 2025ರ ಫೆಬ್ರವರಿ ಮತ್ತು 2026ರ ಅಕ್ಟೋಬರ್ ನಡುವೆ SIR, ಇಸಿಐನೆಟ್ (ECINET), ಫಾರ್ಮ್-6 ಅಥವಾ ನ್ಯಾಯಾಲಯದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಇತರ ಇಬ್ಬರು ಚುನಾವಣಾ ಆಯುಕ್ತರು ಮುಖ್ಯ ಚುನಾವಣಾ ಆಯುಕ್ತರ ಅಭಿಪ್ರಾಯಕ್ಕೆ ಎಷ್ಟು ಬಾರಿ ಲಿಖಿತ ಆಕ್ಷೇಪಣೆ ಅಥವಾ ಭಿನ್ನಮತ ದಾಖಲಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸುವಂತೆ ಕೋರಲಾಗಿದೆ. ದೇಶಾದ್ಯಂತ SIR ನಡೆಸಲು, ಆನ್‌ಲೈನ್ ‘ಫಾರ್ಮ್-6’ನಲ್ಲಿ ಹೊಸ ಘೋಷಣೆಯನ್ನು ಸೇರಿಸಲು ಹಾಗೂ ಇಆರ್‌ಒನೆಟ್ (ERONET) ಮತ್ತು ಇಸಿಐನೆಟ್ ಅನ್ನು ಕೇಂದ್ರೀಕರಿಸಿ ಮತದಾರರ ಪಟ್ಟಿಯನ್ನು ಕೇಂದ್ರದ ನಿಯಂತ್ರಣದಲ್ಲಿಡಲು ನಿರ್ಧರಿಸಿದವರು ಯಾರು ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.

ಇದರ ಜೊತೆಗೆ, ಮತದಾರರ ಪಟ್ಟಿಯ ದತ್ತಾಂಶಕ್ಕೆ (Database) ಖಾಸಗಿ ಗುತ್ತಿಗೆದಾರರು ಅಥವಾ ಮಾರಾಟಗಾರರಿಗೆ ತಿದ್ದುಪಡಿ ಮಾಡುವ ಅಧಿಕಾರ ನೀಡಲಾಗಿತ್ತೇ, ಮತದಾರರ ನೋಂದಣಿ ಅಧಿಕಾರಿಗಳ (ERO) ಆದೇಶವಿಲ್ಲದೆ ಸಾಮೂಹಿಕವಾಗಿ ಹೆಸರುಗಳನ್ನು ಅಳಿಸಲಾಗಿದೆಯೇ ಮತ್ತು ಡಾ. ವಿವೇಕ್ ಜೋಶಿ ಅವರು ಪ್ರಸ್ತಾಪಿಸಿದ್ದ ಆಕ್ಸೆಸ್ ಆಡಿಟ್ (Access audit) ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಐಟಿ ವಿಭಾಗದ ಮಹಾನಿರ್ದೇಶಕರು ಸ್ಪಷ್ಟಪಡಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಕರಡು ಮತ್ತು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರ ರಾಜ್ಯವಾರು ಅಂಕಿಅಂಶಗಳು ಹಾಗೂ ತುರ್ತು ಅನುಮೋದನೆಗಳನ್ನು ವಾಟ್ಸಾಪ್ ಅಥವಾ ವೈಯಕ್ತಿಕ ಇಮೇಲ್ ಮೂಲಕ ಪಡೆಯಲಾಗಿದೆಯೇ ಎಂಬ ಕುರಿತು ವಿವರಣೆ ಕೇಳಲಾಗಿದೆ. ಒಂದು ವೇಳೆ ಚುನಾವಣಾ ಆಯೋಗವು ಯಾವುದೇ ಅಧಿಕೃತ ದಾಖಲೆಗಳ ಗೌಪ್ಯತೆಯ ಹಕ್ಕನ್ನು (Privilege) ಪ್ರತಿಪಾದಿಸಿದರೆ, ಪ್ರತಿ ದಾಖಲೆಗೂ ನಿರ್ದಿಷ್ಟ ಕಾರಣಗಳನ್ನು ನ್ಯಾಯಾಲಯದ ಪರಿಶೀಲನೆಗೆ ಸಲ್ಲಿಸುವಂತೆ ನಿರ್ದೇಶಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಿಶ್ತ್ವಾರ್ ಪೊಲೀಸರ ಹತ್ಯೆ : ‘ಮಸೀದಿ ಘೋಷಣೆ’ ಕುರಿತ ಬಿಜೆಪಿ ಶಾಸಕಿಯ ಹೇಳಿಕೆಗೆ ಆಕ್ರೋಶ; ತನಿಖೆಗೆ ಕಾಂಗ್ರೆಸ್ ಆಗ್ರಹ

ಕಿಶ್ತ್ವಾರ್‌ನಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (ಎಸ್‌ಪಿಒ) ಹತ್ಯೆಯ ಕುರಿತು ಹಲವು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ, ಈ ಘಟನೆಯನ್ನು ಮಸೀದಿ ಘೋಷಣೆಗಳೊಂದಿಗೆ ತಳುಕು ಹಾಕುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಯತ್ನಕ್ಕೆ ಸ್ಥಳೀಯ...

ಶಾಲಾ ಮಕ್ಕಳ ಮುಂದೆ ರಾಜಕೀಯ ದ್ವೇಷ ಭಾಷಣ | ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ : ಸಚಿವ ಮಧು ಬಂಗಾರಪ್ಪ

ಶಾಲಾ ಮಕ್ಕಳ ಮುಂದೆ ರಾಜಕೀಯ ದ್ವೇಷ ಭಾಷಣ ಮಾಡಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು...

ಬಿಲ್ಕಿಸ್ ಬಾನು ಪ್ರಕರಣ: ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಿದ ಸುಪ್ರೀಂ ಕೋರ್ಟ್

2002ರ ಗುಜರಾತ್ ಕೋಮುಗಲಭೆಯ ಸಂದರ್ಭದಲ್ಲಿ ನಡೆದಿದ್ದ ಭೀಕರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬಸ್ಥರ ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿ ಅವರಿಗೆ ಜಾಮೀನು ಮಂಜೂರು...

‘ನೀವು ಆ ಕುರ್ಚಿಯಲ್ಲಿ ಕೂರಲು ಅರ್ಹರಲ್ಲ, ನಿಮಗೆ ಸಮಗ್ರತೆ ಇಲ್ಲ’: ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ಸೂರ್ಯ ಕಾಂತ್ ವಿರುದ್ಧ ವಕೀಲರ ಆಕ್ರೋಶ; ಲೈವ್ ಪ್ರಸಾರ ಮ್ಯೂಟ್!

ನವದೆಹಲಿ: ಭಾರತೀಯ ನ್ಯಾಯಾಂಗದ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ತೀವ್ರ ಘರ್ಷಣೆಯೊಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ನೇತೃತ್ವದ ಪೀಠದ ಮುಂದೆ ವಾದ ಮಂಡಿಸಲು...

ಜಾರ್ಖಂಡ್‌ | ಕಲ್ಲಿದ್ದಲು ಗಣಿ ವಿಸ್ತರಣೆಗೆ ಕೇಂದ್ರ ಅನುಮತಿ : 6 ಲಕ್ಷ ಮರಗಳ ಮಾರಣಹೋಮ, ಆನೆಗಳ ಆವಾಸಸ್ಥಾನ ನಾಶಕ್ಕೆ ಕಾರಣವಾಗಲಿರುವ ಯೋಜನೆ!

ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿನ ಓಪನ್‌ಕಾಸ್ಟ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯ ವಿಸ್ತರಣೆಗಾಗಿ 928.03 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳುವ (ವರ್ಗಾಯಿಸುವ) ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿರುವ ಅರಣ್ಯ...

ಹೈದರಾಬಾದ್‌ನಲ್ಲಿ ಇಸ್ರೇಲಿ ಕಂಪನಿಗಳ ಕಾರ್ಯಕ್ರಮಕ್ಕೆ ವಿರೋಧ : SIO, APCR ನಾಯಕರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ಪೊಲೀಸರು

ಹೈದರಾಬಾದ್‌ನ ಟಿ-ಹಬ್‌ನಲ್ಲಿ ನಡೆಯುತ್ತಿರುವ ಇಸ್ರೇಲಿ ಕಂಪನಿಗಳ ಕಾರ್ಯಕ್ರಮವನ್ನು ವಿರೋಧಿಸಿದ್ದಕ್ಕಾಗಿ ಸೋಮವಾರ (ನ.16) ಮುಂಜಾನೆ ತೆಲಂಗಾಣ ಪೊಲೀಸರು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಮತ್ತು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್)...

ದೋಷಯುಕ್ತ ಬ್ರೇಕ್‌ಗಳೊಂದಿಗೆ 463 ಕಿ.ಮೀ. ಸಂಚರಿಸಿದ ವಂದೇ ಭಾರತ್ ರೈಲು; ತನಿಖೆಗೆ ಆದೇಶ

ಬ್ರೇಕ್ ಸಾಮರ್ಥ್ಯದ ಕೊರತೆಯ ಬಗ್ಗೆ ಲೋಕೋ ಪೈಲಟ್ ಎಚ್ಚರಿಕೆ ನೀಡಿದ್ದರೂ ಸಹ, ಖಾಲಿ ವಂದೇ ಭಾರತ್ ರೈಲನ್ನು ಅಕ್ಟೋಬರ್ 24 ರಂದು ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ನಡುವೆ 463 ಕಿ.ಮೀ. ದೂರ...

ಹಲವು ಸಾವುಗಳು ವರದಿಯಾಗಿದ್ದರೂ, ಇರಾನ್ ಯುದ್ಧದಲ್ಲಿ ‘ಕಳೆದ 5 ತಿಂಗಳಲ್ಲಿ ಒಬ್ಬ ಸೈನಿಕನನ್ನೂ ಕಳೆದುಕೊಂಡಿಲ್ಲ’ ಎಂದ ಟ್ರಂಪ್!

ಇರಾನ್ ವಿರುದ್ಧದ ಅಮೆರಿಕದ ಸೇನಾ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದು, ಕಳೆದ ಐದು ತಿಂಗಳಲ್ಲಿ ಒಬ್ಬ ಅಮೆರಿಕನ್ ಸೈನಿಕನೂ ಪ್ರಾಣ ಕಳೆದುಕೊಂಡಿಲ್ಲ ಎಂದು...

‘ಹೊಸ ಸರ್ಕಾರದಲ್ಲೂ ಸುಲಿಗೆ ದಂಧೆ ಮುಂದುವರಿದಿದೆ’: ಅಕ್ರಮ ತಡೆಯಲು ಒಂದು ವರ್ಷ ಕಾಲಾವಕಾಶ ಕೋರಿದ ಪಶ್ಚಿಮ ಬಂಗಾಳದ ಹಣಕಾಸು ಸಚಿವ!

ಪಶ್ಚಿಮ ಬಂಗಾಳದಲ್ಲಿ ‘ಬದಲಾವಣೆಯ ಭರವಸೆ’ ನೀಡಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ, ರಾಜ್ಯದಲ್ಲಿ ‘ಸಿಂಡಿಕೇಟ್ ಸಂಸ್ಕೃತಿ’ ಮತ್ತು ಸುಲಿಗೆ (Extortion) ದಂಧೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿದಿದೆ ಎಂಬ ಕಠಿಣ...

ದೇಶ ಆಳಲು ಬಿಜೆಪಿ ಅನರ್ಹ: ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜಾತ್ಯತೀತ ಮೌಲ್ಯಗಳ ವಿರೋಧಿ ಪಕ್ಷ:   ಸಿದ್ದರಾಮಯ್ಯ

ಬೆಂಗಳೂರು: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಆಶಯಗಳು ಹಾಗೂ ಜಾತ್ಯತೀತ ಮೌಲ್ಯಗಳಿಗೆ ಬಿಜೆಪಿ ವಿರುದ್ಧವಾಗಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ದೇಶವನ್ನು ಆಳಲು ಅನರ್ಹ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ....