Homeಮುಖಪುಟಒಡಿಶಾದ ಬುಡಕಟ್ಟು ಪ್ರದೇಶದಲ್ಲಿ ಗಣಿ ಭೂಸ್ವಾಧೀನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಬುಡಕಟ್ಟು ಸಮುದಾಯಗಳ ಪೂರ್ವಾನುಮತಿ ಕಡ್ಡಾಯ...

ಒಡಿಶಾದ ಬುಡಕಟ್ಟು ಪ್ರದೇಶದಲ್ಲಿ ಗಣಿ ಭೂಸ್ವಾಧೀನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಬುಡಕಟ್ಟು ಸಮುದಾಯಗಳ ಪೂರ್ವಾನುಮತಿ ಕಡ್ಡಾಯ ಎಂದು ತೀರ್ಪು

- Advertisement -
- Advertisement -

ಒಡಿಶಾದ ಸುಂದರಗಢ ಜಿಲ್ಲೆಯ ಅನುಸೂಚಿತ ಗ್ರಾಮ ಪ್ರದೇಶಗಳಲ್ಲಿ ಡಾಲ್ಮಿಯಾ ಸಿಮೆಂಟ್ ಸ್ಥಾವರಕ್ಕಾಗಿ ಕೈಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಬುಡಕಟ್ಟು ಪ್ರದೇಶಗಳಲ್ಲಿ ಭೂಸ್ವಾಧೀನಕ್ಕೆ ಮುಂದುವರಿಯುವ ಮೊದಲು ಸ್ಥಳೀಯ ಗ್ರಾಮ ಪಂಚಾಯತ್‌ ಅಥವಾ ಗ್ರಾಮ ಸಭೆಯ ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ಬುಧವಾರ (ನವೆಂಬರ್ 18) ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿರುವುದಾಗಿ ಕಾನೂನು ಸುದ್ದಿ ಸಂಸ್ಥೆ ಲೈವ್‌ ಲಾ ವರದಿ ಮಾಡಿದೆ.

ನ್ಯಾಯಾಲಯದ ಕಲಾಪದಲ್ಲಿ ಪ್ರಕರಣದ ವಿಚಾರಣೆಯ ವೇಳೆ, ಗ್ರಾಮ ಸಭೆಗಳ ನಿರ್ಣಯವನ್ನು ಕಡೆಗಣಿಸಿ ಭೂಸ್ವಾಧೀನಕ್ಕೆ ಮುಂದಾದ ಕ್ರಮದ ಕುರಿತು ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗ್ರಾಮ ಸಭೆಗಳ ಒಪ್ಪಿಗೆ ಕಡ್ಡಾಯವಲ್ಲ ಎಂದು ಹೇಳಿದ್ದ ಒಡಿಶಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಈ ಪ್ರಕರಣದಲ್ಲಿ ಕಾಗದದ ಮೇಲೂ ಯಾವುದೇ ಒಪ್ಪಿಗೆ ಇರಲಿಲ್ಲ; ಬದಲಾಗಿ ಜನವರಿ 26, 2020ರ ಸಭೆಯಲ್ಲಿ ಉಭಯ ಗ್ರಾಮ ಸಭೆಗಳು ಈ ಯೋಜನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದವು ಎಂಬುದನ್ನು ಪೀಠ ಗಮನಿಸಿದೆ. ಗ್ರಾಮ ಸಭೆಯ ಒಪ್ಪಿಗೆ ಪಡೆಯಬೇಕು ಎಂಬ ಕಾನೂನು ನಿಯಮವನ್ನು ಕೇವಲ ಹೆಸರಿಗೆ ಮಾತ್ರ ಮಾಡುವ ಒಂದು ತೋರಿಕೆಯ ಕಾಗದದ ಕೆಲಸದಂತೆ ನೋಡಲು ಆಗುವುದಿಲ್ಲ; ಅದು ನಿಜವಾಗಿಯೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕಾದ ನಿಯಮ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿದ್ದ ಇತರ ಗಂಭೀರ ಲೋಪಗಳೂ ನ್ಯಾಯಾಲಯದ ಗಮನಕ್ಕೆ ಬಂದಿವೆ. ಖಾಸಗಿ ಕಂಪನಿಗಾಗಿ ಭೂಸ್ವಾಧೀನ ಮಾಡುವಾಗ ಸಾಮಾಜಿಕ ಪರಿಣಾಮ ಮೌಲ್ಯಮಾಪನದ ಜೊತೆಗೆ ಕನಿಷ್ಠ ಶೇ. 80ರಷ್ಟು ಬಾಧಿತ ಕುಟುಂಬಗಳ ಒಪ್ಪಿಗೆಯನ್ನು ಮೊದಲೇ ಪಡೆಯಬೇಕು ಎಂಬ ನಿಯಮ ಪಾಲನೆಯಾಗಿಲ್ಲದಿರುವುದು, ಮೌಲ್ಯಮಾಪನದ ವೇಳೆ ಸಾರ್ವಜನಿಕ ವಿಚಾರಣೆಯನ್ನೇ ನಡೆಸದಿರುವುದು ಹಾಗೂ ಕಂಪನಿಯೊಂದಿಗೆ ನಂಟನ್ನು ಹೊಂದಿದ್ದ ಸಲಹೆಗಾರನನ್ನು ತಜ್ಞರ ಗುಂಪಿನಲ್ಲಿ ಸೇರಿಸುವ ಮೂಲಕ ಸಮಿತಿಯ ಸ್ವತಂತ್ರ ಸ್ವರೂಪಕ್ಕೆ ಧಕ್ಕೆ ತಂದಿರುವುದನ್ನು ಪೀಠ ಪ್ರಶ್ನಿಸಿದೆ. ಅಲ್ಲದೆ, ಗಣಿಗಾರಿಕೆ ಗುತ್ತಿಗೆಯ ನೆಪದಲ್ಲಿ ಭೂಮಾಲೀಕರ ಸ್ವಾಮ್ಯದ ಹಕ್ಕುಗಳನ್ನು ಅಥವಾ ಕಾನೂನಿನ ರಕ್ಷಣಾತ್ಮಕ ನಿಯಮಗಳನ್ನು ಬದಿಗೆ ಸರಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಾನೂನಿನ ಪ್ರಕಾರ ಹೊಸ ಪ್ರಕ್ರಿಯೆ ಆರಂಭಿಸುವ ಅವಕಾಶವನ್ನು ತೆರೆದಿಟ್ಟ ಪೀಠ, ಹಾಲಿ ಭೂಸ್ವಾಧೀನ ಅಧಿಸೂಚನೆಗಳನ್ನು ರದ್ದುಗೊಳಿಸಿದೆ.

ಸುಂದರಗಢ ಜಿಲ್ಲೆಯ ಗ್ರಾಮಸ್ಥರ ಹೋರಾಟದ ನಡುವೆ ಹೊರಬಿದ್ದ ಈ ತೀರ್ಪು, ಬುಡಕಟ್ಟು ಪ್ರದೇಶಗಳಲ್ಲಿನ ಭೂಸ್ವಾಧೀನ ಮತ್ತು ಕಾನೂನುಬದ್ಧ ಪ್ರಕ್ರಿಯೆಗಳ ಪಾಲನೆಯ ವಿಚಾರದಲ್ಲಿ ಮಹತ್ವದ ಮೈಲಿಗಲ್ಲಾಗಿ ಗುರುತಿಸಲ್ಪಟ್ಟಿದೆ. ಗ್ರಾಮ ಸಭೆಗಳ ಒಪ್ಪಿಗೆ, ಸಾರ್ವಜನಿಕ ವಿಚಾರಣೆ ಮತ್ತು ನಿಷ್ಪಕ್ಷಪಾತ ಮೌಲ್ಯಮಾಪನದಂತಹ ಕಾನೂನು ಅಗತ್ಯಗಳನ್ನು ಕಡೆಗಣಿಸಲಾಗದು ಎಂಬ ಸುಪ್ರೀಂ ಕೋರ್ಟ್‌ನ ಸ್ಪಷ್ಟನೆ, ಸ್ಥಳೀಯ ಸಮುದಾಯಗಳ ಹಕ್ಕುಗಳು ಮತ್ತು ಆಡಳಿತಾತ್ಮಕ ಪಾರದರ್ಶಕತೆಯ ಸುತ್ತ ನಡೆಯುತ್ತಿರುವ ಚರ್ಚೆಗಳಿಗೆ ಹೊಸ ತಿರುವು ನೀಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಎಸ್ಐಆರ್’ ಬಳಿಕ ‘ಎಸ್ಎಸ್ಆರ್’ ಮೂಲಕ ಮುಖ ಉಳಿಸಿಕೊಳ್ಳಲು ಚುನಾವಣಾ ಆಯೋಗದ ಕಸರತ್ತು: SIR ವಿರೋಧಿ ಜನಪರ ಸಂಘಟನೆಗಳಿಂದ ತೀವ್ರ ಹೋರಾಟದ ಎಚ್ಚರಿಕೆ

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ತರ್ಕಹೀನ, ದೋಷಪೂರಿತ ಎಂದು ಆರೋಪ; SIR ಪಟ್ಟಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯ; ನವೆಂಬರ್ 26ರಿಂದ ದೇಶದ 100 ನಗರಗಳಲ್ಲಿ ಪ್ರಜಾತಂತ್ರ ಮರುಸ್ಥಾಪನಾ ಅಭಿಯಾನಕ್ಕೆ ಸಿದ್ಧತೆ ಬೆಂಗಳೂರು: ಮತದಾರರ...

ಪ್ಯಾಲೆಸ್ತೀನ್ ನಾಯಕ ಯಾಸರ್ ಅರಾಫಾತ್ ಸಲಹೆಗಾರರಾಗಿದ್ದ ಅಹ್ಮದ್ ತಿಬಿ ಇಸ್ರೇಲ್ ಸಂಸತ್ತಿನ ಉಪಸಭಾಪತಿಯಾಗಿ ಆಯ್ಕೆ

ಇಸ್ರೇಲ್‌ ಸಂಸತ್ತಾದ ನೆಸೆಟ್‌ಗೆ (Knesset) ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಆಡಳಿತರೂಢ ಒಕ್ಕೂಟಕ್ಕೆ ಸೋಲಾಗಿರುವುದು ಹಲವು ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಿದೆ. ಅವುಗಳಲ್ಲಿ ಒಂದು ಅಹ್ಮದ್ ತಿಬಿ ಅವರು ಉಪಸಭಾಪತಿಯಾಗಿ...

“ಚುನಾವಣೆ ಬಹಿಷ್ಕರಿಸಿದರೆ ಪ್ರಜಾಪ್ರಭುತ್ವ ಅಂತ್ಯ”: ರಾಹುಲ್ ಗಾಂಧಿ ಎಚ್ಚರಿಕೆ; ಆಯೋಗದೊಳಗಿಂದಲೇ ಮಾಹಿತಿ ಸಿಗುತ್ತಿದೆ ಎಂದ ವಿಪಕ್ಷ ನಾಯಕ

ಅಮೆರಿಕ: ಭಾರತೀಯ ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯ ಎದುರಾಗಿದೆ ಎಂಬ ಮಾಹಿತಿ ಚುನಾವಣಾ ಆಯೋಗದ ಒಳಗಿನಿಂದಲೇ ವಿರೋಧ ಪಕ್ಷಗಳಿಗೆ ಲಭ್ಯವಾಗುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ...

ಸೈನಿಕರು ಸಂಕಲ್ಪ ಮಾಡಿದರೆ ಪಂಜಾಬ್ ಸರ್ಕಾರವನ್ನು ಕಿತ್ತೊಗೆಯಲು ಸಾಧ್ಯ: ಪಂಜಾಬ್‌ನಲ್ಲಿ ಹೊಸ ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್!

ಜಲಂಧರ್: ಪಂಜಾಬ್‌ನ ಆಮ್ ಆದ್ಮಿ ಪಕ್ಷದ (AAP) ಸರ್ಕಾರವನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಂತ ಗುರು ರವಿದಾಸ್...

ಮಹಿಳಾ ಪತ್ರಕರ್ತರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ : ದೆಹಲಿ ಪೊಲೀಸರಿಂದ ದೂರುಗಳ ವಿಚಾರಣೆ ಮುಕ್ತಾಯ

ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಗಳ ವರದಿ ಮಾಡುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮೂವರು ಮಹಿಳಾ ಪತ್ರಕರ್ತರು...

ತಿರುಪರಂಕುಂದ್ರಂ ವಿವಾದ | ಹೈಕೋರ್ಟ್ ಆದೇಶಕ್ಕೆ ತಡೆ ನೀಡದಿದ್ದರೆ ಸಾವಿರಾರು ಸರ್ವೆ ಕಂಬಗಳು ಧಾರ್ಮಿಕ ಸ್ವರೂಪ ಪಡೆಯಲಿವೆ : ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಸರ್ಕಾರ ವಾದ

ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದರ್ಗಾದ ಸಮೀಪದ ಕಲ್ಲಿನ ಸ್ತಂಭದ ಮೇಲೆ ಸಾಂಪ್ರದಾಯಿಕ ಕಾರ್ತಿಕ ದೀಪವನ್ನು ಬೆಳಗಿಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ತಮಿಳುನಾಡು ಸರ್ಕಾರ ಬುಧವಾರ (ನ.18)...

ಇಬ್ಬರು ಅತ್ಯಾಚಾರ ಅಪರಾಧಿಗಳಿಗೆ ಜಾಮೀನು : ಕುಟುಂಬ ಸಮೇತ ಗುಜರಾತ್ ತೊರೆದ ಬಿಲ್ಕಿಸ್ ಬಾನು-ವರದಿ

ಅತ್ಯಾಚಾರ, ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿ, ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ನಿರ್ಧಾರದಿಂದ 'ಭಯಭೀತರಾದ' ಮತ್ತು 'ಆಘಾತಕ್ಕೊಳಗಾದ' ಬಿಲ್ಕಿಸ್ ಬಾನು ಹಾಗೂ ಅವರ ಕುಟುಂಬಸ್ಥರು ಈ ತಿಂಗಳ...

ಪತ್ರಕರ್ತರು ಬೇರೆ, ರೀಲ್-ಮೇಕರ್‌ಗಳು ಬೇರೆ: ರೀಲ್-ಮೇಕರ್‌ಗಳಿಗೆ ಮಾಧ್ಯಮ ರಕ್ಷಣೆ ಅನ್ವಯಿಸುವುದಿಲ್ಲ: ದೆಹಲಿ ಪೊಲೀಸರಿಂದ ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಪತ್ರಕರ್ತರಿಗೆ ನೀಡಲಾದ ರಕ್ಷಣಾ ಆದೇಶಗಳು ಸಾಮಾಜಿಕ ಜಾಲತಾಣಗಳ ರೀಲ್-ಮೇಕರ್‌ಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ...

ಮತ್ತೆ ಉಲ್ಬಣಗೊಂಡ ಸಂಘರ್ಷ : ಕುವೈತ್‌ನ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ವೈಮಾನಿಕ ದಾಳಿ

ಹೊರ್ಮುಝ್ ಜಲಸಂಧಿಯಲ್ಲಿರುವ ಕೇಶ್ಮ್ ದ್ವೀಪದ (Qeshm Island) ಮೇಲೆ ಅಮೆರಿಕ ದಾಳಿ ನಡೆಸಿದ ನಂತರ, ಕುವೈತ್‌ನಲ್ಲಿರುವ ಅಮೆರಿಕದ ಡ್ರೋನ್ ಮತ್ತು ಕ್ಷಿಪಣಿ ನೆಲೆಗಳನ್ನು ರಾತ್ರೋರಾತ್ರಿ ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ. ಇದು...

ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ನಿಷೇಧ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್; ಕಾಯ್ದೆ ತಿದ್ದುಪಡಿ ಮನವಿಗೆ ಸಿಗದ ಮನ್ನಣೆ

ದೇವಸ್ಥಾನಗಳು ಸೇರಿದಂತೆ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ನೀಡುವುದನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂ ಕೋರ್ಟ್ ಬುಧವಾರ (ನವೆಂಬರ್ 18) ವಜಾಗೊಳಿಸಿದೆ ಎಂದು ‘ಬಾರ್...