HomeಅಂಕಣಗಳುSIRಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ SIR ಮತಪಟ್ಟಿ ಬಳಸಬೇಡಿ; 2025ರ ಪಟ್ಟಿಯನ್ನೇ ಪರಿಷ್ಕರಿಸಿ ಬಳಸಿ : ರಾಜ್ಯ...

ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ SIR ಮತಪಟ್ಟಿ ಬಳಸಬೇಡಿ; 2025ರ ಪಟ್ಟಿಯನ್ನೇ ಪರಿಷ್ಕರಿಸಿ ಬಳಸಿ : ರಾಜ್ಯ ಚುನಾವಣಾ ಆಯುಕ್ತರಿಗೆ ಹೋರಾಟಗಾರರ ಮನವಿ

- Advertisement -
- Advertisement -

ಮುಂಬರುವ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ವಿವಾದಾತ್ಮಕ ಹಾಗೂ ದೋಷಪೂರಿತವಾಗಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಅಂತಿಮ ಮತದಾರರ ಪಟ್ಟಿಯನ್ನು ಬಳಸದೆ, 2025ರ ಮತಪಟ್ಟಿಯನ್ನೇ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ ಬಳಸಬೇಕು ಎಂದು ‘SIR ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ’ ರಾಜ್ಯ ಚುನಾವಣಾ ಆಯುಕ್ತ ಡಾ. ಜಿ.ಎನ್. ಸಂಗ್ರೇಶಿ ಅವರಿಗೆ ಮಂಗಳವಾರ (ನ. 24) ಮನವಿ ಸಲ್ಲಿಸಿದೆ.

ಎಸ್‌ಐಆರ್ ಪ್ರಕ್ರಿಯೆಯು ಅಸಂವಿಧಾನಿಕವಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ. ತಪ್ಪಾಗಿ ಹೆಸರು ಡಿಲೀಟ್ ಆದವರಿಂದ ಮತ್ತೆ ಫಾರಂ-6 ತುಂಬಿಸಿಕೊಂಡಿದ್ದು ಹಾಗೂ ಮನೆ ಬದಲಾಯಿಸಿದವರ ಹೆಸರು ಅಳಿಸಿದ್ದು ತಪ್ಪು ಎಂದು ಕೇಂದ್ರ ಚುನಾವಣಾ ಆಯೋಗವೇ ಪರೋಕ್ಷವಾಗಿ ಒಪ್ಪಿಕೊಂಡು, ನವೆಂಬರ್ 6ರಂದು ಹೊಸ ಕಾರ್ಯಸೂಚಿ ಹೊರಡಿಸಿದೆ ಎಂದು ಒಕ್ಕೂಟ ತಿಳಿಸಿದೆ.

ಸರ್ಕಾರಿ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 5.2 ಕೋಟಿ ವಯಸ್ಕರಿದ್ದಾರೆ. ಆದರೆ ಎಸ್‌ಐಆರ್ ಅಂತಿಮ ಪಟ್ಟಿಯಲ್ಲಿ ಕೇವಲ 4.5 ಕೋಟಿ ಮತದಾರರು ಮಾತ್ರ ಉಳಿದಿದ್ದು, ಬರೋಬ್ಬರಿ 70 ಲಕ್ಷ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿಯೇ ಅರ್ಧದಷ್ಟು ಮತದಾರರು ಕಣ್ಮರೆಯಾಗಿರುವುದು ತರ್ಕಹೀನವಾಗಿದೆ ಎಂದು ಒಕ್ಕೂಟ ಪ್ರಶ್ನಿಸಿದೆ.

‘ಮತ ಕಾವಲು ಸಮಿತಿ’ಯು ರಾಜ್ಯದ 73 ಬೂತ್‌ಗಳಲ್ಲಿ ನಡೆಸಿದ ಪರಿಶೀಲನೆಯಲ್ಲಿ ಅರ್ಹ ಮತದಾರರ ಹೆಸರುಗಳು ಅಕ್ರಮವಾಗಿ ಡಿಲೀಟ್ ಆಗಿರುವ ನೂರಾರು ಉದಾಹರಣೆಗಳು ಪತ್ತೆಯಾಗಿವೆ. ಇಡೀ ರಾಜ್ಯದ 54 ಸಾವಿರ ಬೂತ್‌ಗಳಲ್ಲಿ ಇಂತಹ ಎಷ್ಟು ಪ್ರಕರಣಗಳಿರಬಹುದು ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

ಎಸ್‌ಐಆರ್ ಅಂತಿಮ ಪಟ್ಟಿಯಲ್ಲಿ ಸರಿಯಾದ ವಿಳಾಸವೇ ಇಲ್ಲದ 20 ಲಕ್ಷ ಎಂಟ್ರಿಗಳಿರುವುದನ್ನು ಒಕ್ಕೂಟದ ಡಾಟಾ ತಂಡ ಪತ್ತೆಹಚ್ಚಿದೆ. ಅಲ್ಲದೆ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ. 25ರಷ್ಟು ಯುವ ಮತದಾರರು ನೋಂದಣಿಯಾಗದೆ ಹೊರಗುಳಿದಿದ್ದಾರೆ ಎಂದು ಬಿಕ್ಕಂ ಗುಜ್ಜ ಅವರ ಅಧ್ಯಯನ ತಿಳಿಸಿದೆ. ಇಡೀ ದೇಶದಲ್ಲೇ ಅತಿ ಹೆಚ್ಚು ಮತದಾರರ ಹೆಸರು ಡಿಲೀಟ್ ಆಗಿರುವುದು ಕರ್ನಾಟಕದಲ್ಲಿಯೇ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಒಕ್ಕೂಟದ ಪ್ರಮುಖ ಹಕ್ಕೊತ್ತಾಯಗಳು :

ರಾಜಸ್ಥಾನ ಮತ್ತು ಉತ್ತರ ಪ್ರದೇಶದ ರಾಜ್ಯ ಚುನಾವಣಾ ಆಯೋಗಗಳು ಎಸ್‌ಐಆರ್ ಪಟ್ಟಿಯನ್ನು ಕೈಬಿಟ್ಟು 2025ರ ಮತಪಟ್ಟಿಯನ್ನೇ ಬಳಸಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ದೋಷಪೂರಿತ ಹಾಗೂ ನ್ಯಾಯಾಂಗ ವಿಚಾರಣೆಯಲ್ಲಿರುವ ಎಸ್‌ಐಆರ್ ಪಟ್ಟಿಯನ್ನು ಬಳಸಬಾರದು.

2025ರ ಮತದಾರರ ಪಟ್ಟಿಯನ್ನು ‘ಚುನಾವಣಾ ಆಯೋಗದ ಮ್ಯಾನ್ಯುಯಲ್ 2023’ರ ಪ್ರಕಾರ ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳ ಮೂಲಕ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ ಪರಿಷ್ಕರಿಸಿ, ಸ್ಥಳೀಯ ಚುನಾವಣೆಗಳಿಗೆ ಬಳಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಕೆ.ಎಂ. ವೀರಸಂಗಯ್ಯ, ನಾಗೇಶ್ ಅರಳಕುಪ್ಪೆ, ಆರ್. ಬೆಳ್ಳಂಕೊಂಡ, ನಯನಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕದ ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ಮತದಾರನನ್ನೂ ಕೈಬಿಟ್ಟಿಲ್ಲವೇ? ವಾಸ್ತವ ಬೇರೆಯೇ ಇದೆ! (ಭಾಗ-1)

ಲೇಖಕರು: ಅಮನ್ ಭಾರ್ಗವಮೂಲ: Diagram Chasingಕನ್ನಡಕ್ಕೆ: ಸೋಮಶೇಖರ್ ಚಲ್ಯ "ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ನಾಗರಿಕನನ್ನೂ ಹೊರಗಿಟ್ಟಿಲ್ಲ; ಒಬ್ಬ ಅನರ್ಹ ವ್ಯಕ್ತಿಯನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸಿಲ್ಲ" - ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ, ಅಕ್ಟೋಬರ್ 27,...

ಪಂಜಾಬ್‌ ಚುನಾವಣೆಗೆ ಬಿಜೆಪಿ-ಎಸ್‌ಎಡಿ ಮೈತ್ರಿ : ಮತ್ತೆ ಎನ್‌ಡಿಎಗೆ ಮರಳಿದ ಅಕಾಲಿದಳ

ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮೈತ್ರಿ ಘೋಷಣೆ ಮಾಡಿವೆ. ಇದರೊಂದಿಗೆ ಅಕಾಲಿ ದಳ ಮತ್ತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ...

ದಿಲ್ಜಿತ್ ದೋಸಾಂಜ್ ಬೆಂಗಳೂರು ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ; ಮಾದಾವರ ಮೆಟ್ರೋ ನಿಲ್ದಾಣದಲ್ಲೂ ಐಇಡಿ ಸ್ಫೋಟದ ಎಚ್ಚರಿಕೆ

ಬೆಂಗಳೂರು: ಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಬೆಂಗಳೂರಿನಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ನವೆಂಬರ್ 29ರಂದು ಮಾದಾವರದ ನೈಸ್ ಮೈದಾನದಲ್ಲಿ ನಡೆಯಲಿರುವ...

SIR ವಿರುದ್ಧದ ಹೋರಾಟದೇಶಕ್ಕೆ ಮಾದರಿಯಾದ ಕರ್ನಾಟಕ

ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ನಿರ್ಣಾಯಕ ಹೋರಾಟಕ್ಕೆ ಪ್ರಸ್ತುತ ದೇಶದ ಜನರು ಧುಮುಕಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಹಿಡಿದು, ನಮ್ಮ ಕರ್ನಾಟಕದ ಕೊಡಗಿನ ಆದಿವಾಸಿ ಹಾಡಿಗಳವರೆಗೆ ಹೋರಾಟದ ಕಿಚ್ಚು ಹಬ್ಬಿದೆ. ಕಳೆದ 10-12 ವರ್ಷಗಳಲ್ಲಿ...

ಎಫ್‌ಐಆರ್ ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ವಿವಾದಿತ ‘ಬಸವ ಮಂಟಪ’ ಕೃತಿ ಲೇಖಕ ರವಿ ಹಂಜ್‌

‘ಬಸವ ಮಂಟಪ’ ಕೃತಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಲೇಖಕ ರವಿ ಹಂಜಗಿಮಠ ಅವರು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ತಮ್ಮ ಅರ್ಜಿಯಲ್ಲಿ, ತಾನು ಬದ್ಧ ವೀರಶೈವ ಲಿಂಗಾಯತ ಧರ್ಮದ...

ದೇವಾಲಯ ಆವರಣದಲ್ಲಿನ ಪೆರಿಯಾರ್ ಪ್ರತಿಮೆ ಸ್ಥಳಾಂತರಿಸಲು ಹೈಕೋರ್ಟ್ ಸೂಚನೆ: ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸರ್ಕಾರ ಮೇಲ್ಮನವಿ

ತಂಜಾವೂರು (ತಮಿಳುನಾಡು): ತಂಜಾವೂರು ಜಿಲ್ಲೆಯ ಅರುಳ್ಮಿಗು ಬ್ರಹ್ಮಸಿರಕಂಡೀಶ್ವರರ್ ದೇವಾಲಯದ ಸಮೀಪ ಸ್ಥಾಪಿಸಲಾಗಿರುವ ದ್ರಾವಿಡ ಚಳವಳಿಯ ನಾಯಕ ಹಾಗೂ ಸಮಾಜ ಸುಧಾರಕ ಇ.ವಿ. ರಾಮಸ್ವಾಮಿ (ಪೆರಿಯಾರ್) ಅವರ ಪ್ರತಿಮೆಯನ್ನು ತೆರವುಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ...

ಬಿಲ್ ಬಾಣ – ಭಾಗ 2 ಬಡತನವೇ ಮರಣದಂಡನೆಯಾದಾಗ

ಹಿಂದಿನ ಅಂಕಣದಲ್ಲಿ ಹಣ ಪಾವತಿಸಬಲ್ಲವರು ಮತ್ತು ವಿಮೆ ಹೊಂದಿರುವವರು ಹೇಗೆ ಅನಗತ್ಯ ಪರೀಕ್ಷೆಗಳು, ಶಸ್ತ್ರಚಿಕಿತ್ಸೆಗಳು, ದುಬಾರಿ ಬಿಲ್ಲಿಂಗ್ ಮತ್ತು ವಿಮಾ ಹಕ್ಕುಗಳ ನಿರಾಕರಣೆಯಿಂದ ಶೋಷಿಸಲ್ಪಡುತ್ತಾರೆ ಎಂಬುದನ್ನು ನೋಡಿದ್ದೇವೆ. ಆರೋಗ್ಯ ವ್ಯವಸ್ಥೆಯ ಆ ಮುಖದಲ್ಲಿ...

ಹಗ್ಗಿಂಗ್‌ಫೇಸ್ ಮೇಲೆ ಓಪನ್‌ಎಐ ಏಜೆಂಟ್‌ಗಳ ಸೈಬರ್ ದಾಳಿ: ಎಐ ನಿಯಂತ್ರಣದ ಕುರಿತು ಜಾಗತಿಕ ಕಳವಳ

2026ರ ಜುಲೈ 11ರಂದು, ಚಾಟ್‌ಜಿಪಿಟಿ ಖ್ಯಾತಿಯ ಓಪನ್‌ಎಐ (OpenAI) ಕಂಪನಿಯು ನಿರ್ಮಿಸಿದ ಸ್ವಾಯತ್ತ ಕೃತಕ ಬುದ್ಧಿಮತ್ತೆ (ತಮ್ಮಷ್ಟಕ್ಕೆ ತಾವೇ ನಿರ್ಧಾರ ಕೈಗೊಳ್ಳುವ ಎಐ) ಏಜೆಂಟ್‌ಗಳು, ಮಷೀನ್ ಲರ್ನಿಂಗ್ ಮಾದರಿಗಳನ್ನು ಹೋಸ್ಟ್ ಮಾಡುವ ‘ಹಗ್ಗಿಂಗ್...

ಕಿರುಕುಳ ಆರೋಪ : ಟಿವಿಕೆ ಶಾಸಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಹಿಳಾ ಜಿಲ್ಲಾಧಿಕಾರಿ, ಎಫ್‌ಐಆರ್ ದಾಖಲು

ಕಿರುಕುಳ ಮತ್ತು ಅನುಚಿತ ವರ್ತನೆ ಆರೋಪಿಸಿ ತಮಿಳುನಾಡಿನ ಆಡಳಿತರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಸಿ. ಅರುಳ್ ವಿಘ್ನೇಶ್ ವಿರುದ್ಧ ಕಳ್ಳಕುರಿಚಿ ಜಿಲ್ಲಾಧಿಕಾರಿ ಜೆ.ಇ. ಪದ್ಮಜಾ ಅವರು ಪೊಲೀಸರಿಗೆ ಅಧಿಕೃತ...

ಬಾಂಗ್ಲಾದೇಶಕ್ಕೆ ಮರಳಲು ‘ವಿಜಯ ದಿನ’ವನ್ನೇ ಆಯ್ದುಕೊಂಡ ಶೇಖ್ ಹಸೀನಾ; ಡಿ.16ರಂದು ಭಾರತದಿಂದ ವಾಪಸಾಗುವ ಯೋಜನೆ

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿರುವುದರಿಂದ ತಾಯ್ನಾಡಿಗೆ ಮರಳಲು ಡಿಸೆಂಬರ್ 16ರ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಗಳಿಸಿದ ದಿನದ ಸ್ಮರಣಾರ್ಥ...