Homeಕರ್ನಾಟಕಶಿಕ್ಷಣ ದಾನ ಅಥವಾ ಭಿಕ್ಷೆಯಲ್ಲ ಮೂಲಭೂತ ಹಕ್ಕು, ಬೇಡಿಕೆ ಈಡೇರುವವರೆಗೆ ಫ್ರೀಡಂ ಪಾರ್ಕ್‌ ಬಿಟ್ಟು ಕದಲುವುದಿಲ್ಲ...

ಶಿಕ್ಷಣ ದಾನ ಅಥವಾ ಭಿಕ್ಷೆಯಲ್ಲ ಮೂಲಭೂತ ಹಕ್ಕು, ಬೇಡಿಕೆ ಈಡೇರುವವರೆಗೆ ಫ್ರೀಡಂ ಪಾರ್ಕ್‌ ಬಿಟ್ಟು ಕದಲುವುದಿಲ್ಲ : ನಿರಂಜನಾರಾಧ್ಯ

- Advertisement -
- Advertisement -

ಶಿಕ್ಷಣ ದಾನ ಅಥವಾ ಭಿಕ್ಷೆಯಲ್ಲ, ಅದು ನಮ್ಮ ಮೂಲಭೂತ ಹಕ್ಕು. ನಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೆ ಫ್ರೀಡಂ ಪಾರ್ಕ್‌ ಬಿಟ್ಟು ಕದಲುವುದಿಲ್ಲ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಹೇಳಿದರು.

ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಸಮಗ್ರ ಜಾರಿಗೆ ಆಗ್ರಹಿಸಿ ಮತ್ತು ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ಕೊಡುವುದನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ (ನ.26) ಪ್ರಾರಂಭಿಸಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಇದೊಂದು ನಿರ್ಣಾಯಕ ಹೋರಾಟ, ನಿರ್ಣಾಯಕ ತೀರ್ಮಾನ ತೆಗೆದುಕೊಳ್ಳದೆ ನಾವು ಈ ಜಾಗ ಬಿಟ್ಟು ಕದಳಲುವುದಿಲ್ಲ ಎಂದು ಹೇಳಿದರು. ನಾವಿಲ್ಲಿ ನಿಸ್ವಾರ್ಥವಾಗಿ ಬಂದು ಸೇರಿರುವುದು. ನಮ್ಮ ರಾಜ್ಯದ ಎಲ್ಲಾ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿ, ಎಲ್ಲಾ ಮೂಲಭೂತ ಸೌಲಭ್ಯ ಕೊಡಿ ಎಂದು ಕೇಳಲು. ಇದು ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ ಸೀಮಿತವಾದ ಹೋರಾಟ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸಂವಿಧಾನದಲ್ಲಿ ನಾವು ಕೆಲವು ಮೂಲಭೂತ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. ಅದರಲ್ಲಿ ಶಿಕ್ಷಣದ ಹಕ್ಕು ಕೂಡ ಒಂದು. ಹಾಗಾಗಿ ಎಲ್ಲಾ ಮಕ್ಕಳಿಗೆ ಶಿಕ್ಷಣದ ಮೂಲಭೂತ ಹಕ್ಕು ಸಿಗಬೇಕು. ಅದಕ್ಕಾಗಿ ತಂದ ಶಿಕ್ಷಣದ ಹಕ್ಕು ಕಾಯ್ದೆ (ಆರ್‌ಟಿಇ) ಸಮಗ್ರವಾಗಿ ಜಾರಿಯಾಗಬೇಕು. ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಸಿಗಬೇಕು. ಶಾಲೆಗಳು ಗಟ್ಟಿಯಾಗಬೇಕು ಎಂದರು.

ಸರ್ಕಾರಿ ಶಾಲೆಗಳು ದಲಿತರು, ಬಡವರು, ಅಲ್ಪಸಂಖ್ಯಾತರದ್ದು. ಈ ಶಾಲೆಗಳಲ್ಲಿ 60ರಷ್ಟು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿದ್ದಾರೆ. ಶೇ.51ರಷ್ಟು ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನಾವೆಲ್ಲ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಭಾಷಣ ಮಾಡುತ್ತೇವೆ. ಆದರೆ, ಈ ಶಾಲೆಗಳಲ್ಲಿ ಶೇ. 35ರಷ್ಟು ಅತಿಥಿ ಶಿಕ್ಷಕರಿದ್ದಾರೆ. ರಾಜ್ಯದಲ್ಲಿ ಶೇ. 60 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಈ ಪೈಕಿ ಶೇ.50ರಷ್ಟು, ಅಂದರೆ 30 ಸಾವಿರ ಹುದ್ದೆಗಳು ಉತ್ತರ ಕರ್ನಾಟಕದ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇದೆ ಎಂದು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದಲ್ಲಿ ಒಮ್ಮೆ ಭಾಷಣ ಮಾಡುವಾಗ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕೈ ಮುಗಿದು, “ನಮಗೆ ಶಿಕ್ಷಕರನ್ನು ಒಂದು ಒಟ್ಟು ಬಿಡಿ, ಇನ್ನೇನು ಬೇಡ” ಎಂದು ಕೈ ಮುಗಿದು ಬೇಡಿಕೊಂಡಿದ್ದರು. ಕೆಲವೊಂದು ಶಾಲೆಗಳಲ್ಲಿ ಶೂನ್ಯ (ಎಲ್ಲಾ ಅತಿಥಿ) ಶಿಕ್ಷಕರಿದ್ದಾರೆ. ಶೇ.38ರಷ್ಟು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಇಲ್ಲ. ದೇಶಕ್ಕೆ ಪ್ರಧಾನಿ, ರಾಜ್ಯಕ್ಕೆ ಸಿಎಂ ಇಲ್ಲ ಅಂದ್ರೆ ಏನಾಗಬಹುದು? 100ಕ್ಕೆ 38 ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಇಲ್ಲ ಎಂದು ವಿವರಿಸಿದರು.

ಶೇ. 23ರಷ್ಟು ಶಾಲೆಗಳಲ್ಲಿ ಕೊಠಡಿಗಳು ಬಳಸಲು ಯೋಗ್ಯವಾಗಿಲ್ಲ. ಶೇ. 19ರಷ್ಟು ಶಾಲೆಗಳಲ್ಲಿ ಬಿಸಿಯೂಟ ಕೊಠಡಿಗಳು ಇಲ್ಲ. ಆರ್‌ಟಿಇ ಕಾಯ್ದೆ ಪ್ರಕಾರ ಸುಮಾರು ಶೇ. 50ರಷ್ಟು ಶಾಲೆಗಳಲ್ಲಿ ಶೌಚಾಲಯ ಇದ್ದರೂ ಕೂಡ ಅದು ಕಾರ್ಯ ನಿರ್ವಹಿಸುತ್ತಿಲ್ಲ. ಶೇ.16ರಷ್ಟು ಶಾಲೆಗಳಲ್ಲಿ ಶೌಚಾಲಯ ಬಳಸಲು ಯೋಗ್ಯವಾಗಿಲ್ಲ. ಅಂದರೆ, ಅವುಗಳಲ್ಲಿ ನೀರಿಲ್ಲ. ಹೆಣ್ಣು ಮಕ್ಕಳು ಬಳಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

“ಭೇಟಿ ಬಚಾಚೋ ಭೇಟಿ ಪಡಾವೋ” ಎನ್ನುತ್ತಾರೆ. ಕನಿಷ್ಠ ಶೌಚಾಲಯ ಇಲ್ಲದ ಶಾಲೆಗಳಿಗೆ ಹೆಣ್ಣು ಮಕ್ಕಳನ್ನು ಹೇಗೆ ಕಳಿಸುವುದು ಎಂದು ನಿರಂಜನರಾಧ್ಯ ಪ್ರಶ್ನಿಸಿದರು. ಶೇ. 40ರಷ್ಟು ಶಾಲೆಗಳಲ್ಲಿ ಆಟದ ಮೈದಾನ ಇಲ್ಲ. ಶೇ.30ರಷ್ಟು ಶಾಲೆಗಳಲ್ಲಿ ತಡೆಗೋಡೆ ಇಲ್ಲ. ಶೇ. 32ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿಲ್ಲ. ಬಹುತೇಕ ತಂದೆ- ತಾಯಂದಿರು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಅಂಕಿ ಅಂಶ ಮುಂದಿಟ್ಟರು.

ಅನೇಕ ಶಾಲೆಗಳಿಗೆ ಭೇಟಿ ಕೊಟ್ಟಾಗ ಶಿಕ್ಷರು ಇರಲಿಲ್ಲ. ಕೇಳಿದ್ರೆ ಅವರ ಡೆಪ್ಯೂಟೇಶನ್ ಮೇಲೆ ಹೋಗಿದ್ದಾರೆ, ಎಸ್‌ಐಆರ್ ಮಾಹಿತಿ ಸಂಗ್ರಹ ತೆರಳಿದ್ದಾರೆ ಮತ್ತು ಇತರ ಕೆಲಸಗಳಿಗೆ ಹೋಗಿದ್ದಾರೆ ಎನ್ನುತ್ತಾರೆ. ಬಹುತೇಕ ಶಾಲೆಗಳಲ್ಲಿ ಗಣಿತ, ಇಂಗ್ಲಿಷ್, ವಿಜ್ಞಾನಕ್ಕೆ ಶಿಕ್ಷಕರಿಲ್ಲ. ಮೊದಲ ಬಾರಿ ಶಾಲೆಗೆ ಹೋಗುವ ಕುಟುಂಬದ ಮಕ್ಕಳಿಗೆ ಹೆಚ್ಚುವರಿ ಕಲಿಸುವವರಿಲ್ಲ ಎಂದು ರಾಜ್ಯದ ಸರ್ಕಾರಿ ಶಾಲೆಗಳ ದುಸ್ಥಿತಿ ವಿವರಿಸಿದರು.

ಸರ್ಕಾರಿ ಶಾಲೆಗಳ ಪುಸ್ತಕದಲ್ಲಿರುವ ಮಕ್ಕಳ ಹಾಜರಾತಿಗೂ, ಮಕ್ಕಳ ದೈಹಿಕ ಉಪಸ್ತಿಗೂ ತಾಳೆಯಾಗುತ್ತಿಲ್ಲ. ದಲಿತ ಅಡುಗೆ ಸಿಬ್ಬಂದಿ ಇರುವಲ್ಲಿ ಇವತ್ತಿಗೂ ಅಸ್ಪೃಶ್ಯತೆ ಜೀವಂತ ಇದೆ. ದಿನದಿಂದ ದಿನಕ್ಕೆ ನಮ್ಮ ಶಾಲೆಗಳು ಅದೋಗತಿಗೆ ಹೋಗುತ್ತಿವೆ. ಆರ್‌ಟಿಇ ಕಾಯ್ದೆ ಜಾರಿಯಾದ ಮೂರು ವರ್ಷಕ್ಕೆ ಎಲ್ಲಾ ಸೌಲಭ್ಯಗಳು ಇರಬೇಕು ಎಂದದೆ. ಆದರೆ, ಕಾಯ್ದೆ ಜಾರಿಯಾಗಿ 16 ವರ್ಷಗಳು ಕಳೆದರೂ ಏನೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಅನುಷ್ಠಾನ ಮಾಡಿಯೇ ಇಲ್ಲ. ಮಕ್ಕಳನ್ನು ಖಾಸಗಿ ಶಾಲೆಗೆ ಹೋಗಿ ಎನ್ನಲು ಸರ್ಕಾರಕ್ಕೆ ನಾಚಿಕೆಯಾಗಬೇಕು. ಶಿಕ್ಷಣದ ಹಕ್ಕು ಕಾಯ್ದೆಯ ಸಮಗ್ರ ಜಾರಿ ಬಗ್ಗೆ ಲಿಖಿತ ಭರವಸೆ ಸಿಗುವವರಿಗೆ ನಾವು ಇಲ್ಲಿಂದ (ಫ್ರೀಡಂ ಪಾರ್ಕ್‌) ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಬಜೆಟ್ ಅಧಿವೇಶನದಲ್ಲಿ ಆರ್‌ಟಿಇ ಕಾಯ್ದೆಯ ಸಮಗ್ರ ಜಾರಿ ಬಗ್ಗೆ ಘೋಷಣೆ ಮಾಡಬೇಕು. ಅದಕ್ಕಾಗಿ ಹಣ ಮೀಸಲಿಡಬೇಕು. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ಕೊಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ಕೊಡುವುದಾದರೆ ವಿಧಾನಸೌಧ, ನಿಮ್ಮ ಸರ್ಕಾರವನ್ನೂ ಕೊಟ್ಟು ಕೊಡಿ. ಬೇರೆಯವರು ನಡೆಸಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಶಿಕ್ಷಣ ದಾನ ಅಥವಾ ಭಿಕ್ಷೆ ಅಲ್ಲ. ಅದು ನಮ್ಮ ಮೂಲಭೂತ ಹಕ್ಕು. ಸಿಎಂ ಮಗಳು ಸರ್ಕಾರಿನ ಶಾಲೆ ಮಕ್ಕಳಿಗೆ ಹಳೆ ಬಸ್ ಕೊಡ್ತೀವಿ ಎನ್ನುತ್ತಾರೆ. ಬಡವರ ಮಕ್ಕಳು ಭಿಕ್ಷುಕರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳು ಗಟ್ಟಿಯಾಗಬೇಕು ಎನ್ನುವುದು ಒಂದು ರಾಜಕೀಯ ಹೋರಾಟ. ನೀವು ಈ ವಿಷಯದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳದಿದ್ದರೆ ನಮಗೊಂದು ಸಾರ್ವಭೌಮ ಇದೆ. ಅದು ನಮ್ಮ ಮತದಾನದ ಹಕ್ಕು. ನೀವು ಜನ ವಿರೋಧಿ ಕ್ರಮ ನಿಲ್ಲಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ನಾವು ಏನೆಂದು ನಿಮಗೆ ತೋರಿಸುತ್ತೇಬೆ ಎಂದು ನಿರಂಜನರಾಧ್ಯ ಸರ್ಕಾರಿ ಎಚ್ಚರಿಕೆ ನೀಡಿದರು.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸರ್ಕಾರಿ ಶಾಲೆಗಳನ್ನು ನಡೆಸಬೇಕಿರುವುದು ಸರ್ಕಾರ, ಕಂಪನಿಗಳಲ್ಲ’: ರಾಜ್ಯ ಸರ್ಕಾರದ ವಿರುದ್ಧ ಶ್ರೀಪಾದ್ ಭಟ್ ವಾಗ್ದಾಳಿ 

‘ಸರ್ಕಾರಿ ಶಾಲೆಗಳನ್ನು ನಡೆಸಬೇಕಿರುವುದು ಸರ್ಕಾರವೇ ಹೊರತು ಅಂಬಾನಿ, ಅದಾನಿ ಅಥವಾ ಟೊಯೋಟಾ ಕಂಪನಿಗಳಲ್ಲ. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡಲು ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿಲ್ಲ. ಶಿಕ್ಷಕರು, ಶೌಚಾಲಯ, ಪಠ್ಯಪುಸ್ತಕ ಸೇರಿದಂತೆ...

ಸೌರವ್ ದಾಸ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ: ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ

ಬ್ರಿಟನ್‌ಗೆ ಪ್ರಯಾಣಿಸಲು ಮುಂದಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ ಸಂಚಾಲಕ ಸೌರವ್ ದಾಸ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಬೈ ಪೊಲೀಸರು ಅವರ ವಿರುದ್ಧ ಲುಕ್ ಔಟ್ ಸರ್ಕ್ಯುಲರ್...

ಉತ್ತರ ಪ್ರದೇಶ: ಸಂವಿಧಾನ ದಿನದಂದೇ ಸಂವಿಧಾನ ರಕ್ಷಾ ಮೆರವಣಿಗೆಗೆ ತಡೆ; ಯೋಗಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ 

ಲಕ್ನೋ: ಉತ್ತರ ಪ್ರದೇಶದಲ್ಲಿ ಸಂವಿಧಾನ ರಕ್ಷಾ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಅನುಮತಿ ನಿರಾಕರಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮೆರವಣಿಗೆಗೆ ಅನುಮತಿ ನೀಡದಿದ್ದರೂ ಪ್ರತಿಭಟನೆಯಿಂದ ಹಿಂದೆ ಸರಿಯುವ...

ಹತ್ತು ವರ್ಷಗಳಲ್ಲಿ ಇ.ಡಿ. ಬಳಕೆ ಶೇ.600ರಷ್ಟು ಏರಿಕೆ: ಬಿಜೆಪಿ ಸೇರಿದ ಬಳಿಕ ತನಿಖೆಯಿಂದ ನಿರಾಳತೆ ಪಡೆದ ವಿರೋಧ ಪಕ್ಷದ ನಾಯಕರು?

ನವದೆಹಲಿ: ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ (HRW), ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಕೇಂದ್ರದ ಬಿಜೆಪಿ...

ಸಂಯುಕ್ತ ಕಿಸಾನ್ ಮೋರ್ಚಾದ ಜಂತರ್ ಮಂತರ್ ಪ್ರತಿಭಟನಾ ಮೆರವಣಿಗೆಗೆ ದೆಹಲಿ ಪೊಲೀಸರಿಂದ ಅನುಮತಿ ನಿರಾಕರಣೆ

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸದಸ್ಯರು ಮತ್ತು ಇತರ ಹೋರಾಟಗಾರರು ಗುರುವಾರ (ನ.26) ಕಾಳಿ ಬಾರಿಯಿಂದ ಜಂತರ್ ಮಂತರ್‌ವರೆಗೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ನವದೆಹಲಿ ಜಿಲ್ಲೆಯಲ್ಲಿ...

ರಾಹುಲ್ ಗಾಂಧಿ ಹೆಸರು, ಫೋಟೋ ಇರುವ ಪೋಸ್ಟ್‌ಗಳಿಗೆ ನಿರ್ಬಂಧ : ಮೆಟಾ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಯುವ ಕಾಂಗ್ರೆಸ್

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೆಸರು ಅಥವಾ ಫೋಟೋ ಹೊಂದಿರುವ ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸ್ವಯಂಚಾಲಿತವಾಗಿ ನಿರ್ಬಂಧಿಸುತ್ತಿವೆ ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್...

ಯುಪಿಎ ಅವಧಿಗೆ ಹೋಲಿಸಿದರೆ ಮೋದಿ ಆಡಳಿತದಲ್ಲಿ ಶೇ.16–28ರಷ್ಟು ಮಸೂದೆಗಳಷ್ಟೇ ಸಂಸದೀಯ ಸಮಿತಿಗಳಿಗೆ ರವಾನೆ: ತರಾತುರಿ ಕಾನೂನುಗಳಿಗೆ ಹ್ಯೂಮನ್‌ ರೈಟ್ಸ್‌ ವಾಚ್ ಕಳವಳ!

ನವದೆಹಲಿ: ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ (HRW), ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ...

ತಿರುವಪ್ಪರಂಕುಂದ್ರಂ ‘ಕಾರ್ತಿಕ ದೀಪ’ ವಿವಾದ: ಸುಪ್ರೀಂ ಕೋರ್ಟ್‌ಗೆ ಮಧುರೈ ಜಿಲ್ಲಾಧಿಕಾರಿ ನೀಡಿದ ವಿವರಣೆ ಏನು?

ತಮಿಳುನಾಡಿನ ತಿರುವಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗಿಸುವ ವಿಚಾರವಾಗಿ ವಿವಾದ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮಧುರೈ ಜಿಲ್ಲಾಧಿಕಾರಿ ಸುಪ್ರೀಂ ಕೋರ್ಟ್‌ಗೆ ಹಾಜರಾಗಿ ನ್ಯಾಯಾಲಯದ ಆದೇಶದಂತೆ ಬೆಟ್ಟದ ಮೇಲಿರುವ ದೀಪಸ್ತಂಭದಲ್ಲಿ ದೀಪ ಬೆಳಗಿಸದೆ, ಸಾಂಪ್ರದಾಯಿಕ ಸ್ಥಳದಲ್ಲೇ...

ಎಸ್‌ಐಆರ್ ವಿರುದ್ಧ ಜಾರ್ಖಂಡ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ; ತಕ್ಷಣ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹ

ದೇಶಾದ್ಯಂತ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಜಾರ್ಖಂಡ್ ವಿಧಾನಸಭೆ ಬುಧವಾರ (ನ.25) ನಿರ್ಣಯವೊಂದನ್ನು ಅಂಗೀಕರಿಸಿದೆ. ಧ್ವನಿಮತದ ಮೂಲಕ ಅಂಗೀಕರಿಸಲಾದ ಈ ನಿರ್ಣಯದಲ್ಲಿ ಎಸ್‌ಐಆರ್...

ಪಶ್ಚಿಮ ಬಂಗಾಳ| ಎಸ್‌ಐಆರ್‌ನಲ್ಲಿ ತಂದೆಯ ಹೆಸರು ಡಿಲೀಟ್; ಮಗುವಿಗೆ ಜನನ ಪ್ರಮಾಣಪತ್ರ ನಿರಾಕರಣೆ!

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವೇಳೆ ತಂದೆಯ ಹೆಸರು ಮತದಾರರ ಪಟ್ಟಿಯಿಂದ ಅಳಿಸಲ್ಪಟ್ಟಿರುವ ಕಾರಣಕ್ಕೆ ಸುಮಾರು ಮೂರು ತಿಂಗಳ ಹಸುಗೂಸಿಗೆ ಜನನ ಪ್ರಮಾಣಪತ್ರ ನೀಡಲು ಪಂಚಾಯತ್ ಅಧಿಕಾರಿಗಳು...