ನರೇಂದ್ರ ಮೋದಿ ಆಳ್ವಿಕೆಯಲ್ಲಿ ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ 3.64 ಕೋಟಿ ಜನ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆರೋಪಿಸಿದ್ದಾರೆ.
ದೇಶದ 7 ಪ್ರಮುಖ ಆದ್ಯತ ಸೆಕ್ಟರ್ಗಳು ನಷ್ಟದಲ್ಲಿ ಮುಳುಗಿವೆ ಎಂಬುದು ವರದಿಯಾಗಿದೆ. ಇದರಿಂದ ನಿರುದ್ಯೋಗ ಹೆಚ್ಚಾಗುತ್ತಿದ್ದು, ಇದು ಪ್ರಧಾನ ನರೇಂದ್ರ ಮೋದಿ ಸರ್ಕಾರದ ದೊಡ್ಡ ವೈಫಲ್ಯ ಎಂದು ಅವರು ಕಿಡಿಕಾರಿದ್ದಾರೆ.
नौकरियां देने के तमाम बड़े वादों की हकीकत यही है। देश के सात बड़े क्षेत्रों में करीब साढ़े तीन करोड़ लोग बेरोजगार हो गए हैं।
बड़े-बड़े नामों और विज्ञापनों का नतीजा है 3 करोड़ 64 लाख बेरोजगार लोग। तभी तो सरकार नौकरी पर बात करने से कतराती है। pic.twitter.com/fedOlu9Ljs
— Priyanka Gandhi Vadra (@priyankagandhi) January 27, 2020
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ, ಉದ್ಯೋಗ ನೀಡುವ ಎಲ್ಲ ದೊಡ್ಡ ಭರವಸೆಗಳ ವಾಸ್ತವ ಇದು. ದೇಶದ ಏಳು ಪ್ರಮುಖ ಕ್ಷೇತ್ರಗಳಲ್ಲಿಯೇ ಸುಮಾರು ಮೂರೂವರೆ ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ. ಇದು ಸರ್ಕಾರದ ದೊಡ್ಡ ದೊಡ್ಡ ಮಾತುಗಳ ಮತ್ತು ಜಾಹೀರಾತುಗಳ ಫಲಿತಾಂಶವಾಗಿದೆ. ಅದಕ್ಕಾಗಿಯೇ ಸರ್ಕಾರವು ಕೆಲಸದ ಬಗ್ಗೆ ಮಾತನಾಡುವುದರಿಂದ ದೂರ ಸರಿಯುತ್ತದೆ ಎಂದು ಅವರು ಆರೋಪಿಸಿದ್ದಾರೆ.