Homeಅಂಕಣಗಳುಬಂಡವಾಳವಾದ, ಇತಿಹಾಸ ಕುರಿತ  ಲೋಹಿಯಾ ಚಿಂತನೆಗಳು

ಬಂಡವಾಳವಾದ, ಇತಿಹಾಸ ಕುರಿತ  ಲೋಹಿಯಾ ಚಿಂತನೆಗಳು

- Advertisement -
ಅಧುನಿಕ ಭಾರತದ ಪುರೋಗಾಮಿ ಚಿಂತಕರಲ್ಲಿ ಲೋಹಿಯಾ ಅಗ್ರಗಣ್ಯರು. ಭಾರತದ ಆಧುನಿಕಪೂರ್ವ ಮತ್ತು ಆಧುನಿಕ ಸಾಮಾಜಿಕ ಚಿಂತನೆಯನ್ನು ಲೋಹಿಯಾರನ್ನು ಹೊರತಾಗಿಸಿ ನೋಡಲು ಸಾಧ್ಯವಿಲ್ಲ. ಮೊದಲನೆಯದಾಗಿ ಲೋಹಿಯಾ ಎಲ್ಲಾ ರೀತಿಯ ಅನ್ಯಾಯ ಅಸಮಾನತೆಗಳ ವಿರುದ್ಧ ಕಿಡಿಕಾರಿದ ಒಬ್ಬ ಮಾನವತಾವಾದಿ.  ಸಾಮಾನ್ಯವಾಗಿ ಎಲ್ಲಾ ಪ್ರಮುಖ  ಕ್ರಾಂತಿಕಾರಿಗಳೂ ಮಾನವತಾವಾದಿಗಳೇ, ಆದರೆ ಎಲ್ಲಾ ಮಾನವತಾವಾದಿಗಳೂ, ಲೋಕಹಿತೈಷಿಗಳೂ ಕ್ರಾಂತಿಕಾರಿಗಳಾಗಿರುವುದಿಲ್ಲ. ಅಂದರೆ ಅವರಿಂದ ಮೂಲಭೂತ ಬದಲಾವಣೆ ಸಾಧ್ಯವಾಗುವುದಿಲ್ಲ. ಇದು ಲೋಹಿಯಾರವರಿಗೂ, ಅನೇಕ ಸಂತರಿಗೂ ಅನ್ವಯವಾಗುವಂತಹದು.
ಲೋಹಿಯಾ ಚಿಂತನೆಗಳು ಮತ್ತು ಅವರ ಸಮಾಜವಾದಿ ಪಕ್ಷ ನಮ್ಮ ಜಾತ್ಯತೀತತೆಗೂ, ಹಿಂದುಳಿದ ಜಾತಿ ಜನಾಂಗಗಳ ಉನ್ನತಿಯ ವಿಚಾರಗಳಿಗೂ, ಜನಾಂಗೀಯ ಭೇದಭಾವದ ವಿರುದ್ಧವೂ, ಜಾತಿವ್ಯವಸ್ಥೆಯ ವಿನಾಶಕ್ಕೂ, ವಿಚಾರವಾದಕ್ಕೂ, ಪ್ರಜಾಸತ್ತಾತ್ಮಕತೆಗೂ, ರೈತರು ಮತ್ತು ಇತರೆ ದುಡಿಯುವ ವರ್ಗಗಳ ಸಂಘಟನೆ ಹೋರಾಟಗಳಿಗೂ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಇವುಗಳ ವಿವರಣೆಯನ್ನು ಇಲ್ಲಿ ನಾನು ಮಾಡುವುದಿಲ್ಲ. ಜೊತೆಜೊತೆಗೆ ಸಲ್ಲದ ಸೈದ್ಧಾಂತಿಕ, ರಾಜಕೀಯ ರಾಜಿಗಳೂ, ಇದಲ್ಲದೆ ಅವರ ಸಿದ್ಧಾಂತಗಳ ಮೂಲಭೂತ ದೋಷಗಳೇನು ಎಂದು ತಿಳಿದುಕೊಳ್ಳುವುದು ಇನ್ನೂ ಅತಿ ಮುಖ್ಯವಾದುದು. ಈ ಸರಣಿ ಲೇಖನದಲ್ಲಿ ನಾನು ಈ ವಿಷಯದ ಬಗ್ಗೆ ಗಮನಹರಿಸಲು ಪ್ರಯತ್ನಿಸಿರುವೆ.
ಲೋಹಿಯಾ ಜಗತ್ತಿನ ರಾಜಕೀಯ ಸಿದ್ಧಾಂತಗಳನ್ನು ಅಧ್ಯಯನ ಮಾಡಿದವರು. ಆದರೆ ಅವರ ಓದು ಮತ್ತು ಗ್ರಹಿಕೆಗಳಲ್ಲಿ ಅಪಾರವಾದ ಗೊಂದಲಗಳಿರುವುದು ಅವರ ಬರಹಗಳಿಂದ ಕಂಡುಬರುತ್ತದೆ. ರಾಜಕೀಯ ಸಿದ್ಧಾಂತಗಳ ಕುರಿತ ಅವರ ಗ್ರಹಿಕೆ ತುಂಬಾ ಅವಸರದ್ದು, ಈ ಕಾರಣಕ್ಕಾಗಿ, ಅವರ ಬರಹಗಳು ತುಂಬಾ ಉಳುಚಿಕೊಳ್ಳುತ್ತಾ ಹೋಗುತ್ತವೆ. ಪ್ರಕೃತಿಗೆ ಹೇಗೆ ನಿಯಮಗಳಿವೆಯೋ ಹಾಗೆಯೇ ಸಮಾಜದ ಬೆಳವಣಿಗೆ, ಚಲನವಲನಗಳಿಗೂ ಅದರದ್ದೇ ಆದ ನಿಯಮಗಳಿವೆ ಎನ್ನುವುದನ್ನು ಸಾರಾಸಗಟಾಗಿ ತಿರಸ್ಕರಿಸಿ, ತಾವು ಯಾವುದು ಒಳ್ಳೆಯದು, ಉಚಿತವಾದದ್ದು, ಆದರ್ಶವಾದುದು ಎಂದು ಕಲ್ಪಿಸಿಕೊಳ್ಳುತ್ತಾರೋ ಅದನ್ನು ಸಂಕಲ್ಪಶಕ್ತಿಯಿಂದ ಸಾಧಿಸುವುದು ಎನ್ನುವ ದಾರಿಯನ್ನು ಹಿಡಿದುಕೊಂಡವರು.
ಲೋಹಿಯಾರ ಮಾನವ ಸಮಾಜದ ಇತಿಹಾಸದ ತಿಳಿವಳಿಕೆ ಬಹಳ ಗೊಂದಲಮಯವಾದದ್ದು. ಲೋಹಿಯಾರವರ ಪ್ರಕಾರ `ಇಲ್ಲಿಯವರೆಗಿನ ಎಲ್ಲಾ ಮಾನವ ಇತಿಹಾಸವು ಜಾತಿ ಮತ್ತು ವರ್ಗಗಳ ನಡುವಿನ ಆಂತರಿಕ ಓಲಾಟ ಹಾಗೂ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಶಕ್ತಿ ಮತ್ತು ಸಮೃದ್ಧಿಗಳ  ಸ್ಥಳಾಂತರವಾದುದಾಗಿದೆ.’ `ವರ್ಗ ಎಂದರೆ ಚಲನ ಸಾಮಥ್ರ್ಯವುಳ್ಳ ಜಾತಿ.’ `ಜಾತಿ ಎಂದರೆ ಚಲನರಹಿತ ವರ್ಗ’. ಇದು ಒಂದು ತರಹ ಚಲನರಹಿತತೆ ಚಲನಶೀಲತೆಗಳ ನಡುವೆ ವ್ಯತ್ಯಾಸವೇ ಇಲ್ಲದ ಅಸಂಬದ್ಧ ತೀರ್ಮಾನದಂತಿದೆ. `ಒಮ್ಮೆ ರೋಮ್, ಒಮ್ಮೆ ಗ್ರೀಸ್, ಒಮ್ಮೆ ಚೈನಾ, ಒಮ್ಮೆ ಅರೇಬಿಯಾ, ಒಮ್ಮೆ ಮೆಕ್ಸಿಕೊ, ಒಮ್ಮೆ ಇಂಡಿಯಾ ಇತಿಹಾಸದ ಶಿಖರಾಗ್ರದಲ್ಲಿ ಆಸೀನವಾಗಿದ್ದವು’ ಎಂದು ಲೋಹಿಯಾ ಇದನ್ನು ಶಕ್ತಿ ಸಮೃದ್ಧಿಗಳ ಖಂಡಾಂತರ ಪಲ್ಲಟ ಎಂದು ಹೇಳುತ್ತಾರೆ. ಇದು ಇತಿಹಾಸದ ಬೇರೆಬೇರೆ ಕಾಲಘಟ್ಟದಲ್ಲಿ ಬೇರೆಬೇರೆ ಪ್ರದೇಶಗಳು ಹೆಚ್ಚು ಮುಂದುವರಿದಿದ್ದು ಆಗಿರುವುದೇ ಹೊರತು ಖಂಡಾಂತರ ಪಲ್ಲಟವೇನೂ ಆಗಿಲ್ಲ. ಮಕ್ಕಳಿಗೆ ಹೇಳಿಕೊಡುವ ಕಾಗೆ-ಗುಬ್ಬಚ್ಚಿಯ ಸುಂದರವಾದ ಕಥೆಯಂತಿರುವ ಲೋಹಿಯಾರವರ ಈ ವಿವರಣೆ ಇತಿಹಾಸದ ಚಲನೆಯ ಬಗೆಗೆ ಏನನ್ನೂ ತಿಳಿಸದು.
ಸಮಾಜಗಳ ಸ್ವರೂಪ ಮತ್ತು ಬದಲಾವಣೆಗಳು ಅವುಗಳ ಸತ್ವಗಳಲ್ಲಾಗಿರುವ ಬದಲಾವಣೆಯಿಂದಾಗಿವೆ. ಈ ಸತ್ವದ ಬದಲಾವಣೆಗಳನ್ನು ತಿರಸ್ಕರಿಸಿ ಮೇಲ್‍ಸ್ತರದ ಅಂಶಗಳಿಂದಷ್ಟೇ ಇತಿಹಾಸವನ್ನು ಅರ್ಥೈಸುವ ಲೋಹಿಯಾರವರು `ಹುಟ್ಟಿದ್ದು ಸಾಯಲೇಬೇಕೆಂಬ ಮಾತು ಸತ್ಯವಾದರೆ…… ಸತ್ತದ್ದು ಮತ್ತೆ ಹುಟ್ಟಲೇ ಬೇಕು’. `ಯುಗಗಳೂ ಪ್ರದೇಶಗಳೂ ಸದಾ ತಿರುಗುತ್ತಲೇ ಇರುತ್ತವೆ. ಸಮಾನತೆಯಿಂದ ವರ್ಗ, ವರ್ಗದಿಂದ ವಿಘಟನೆ, ಈ ಕ್ರಿಯೆಯಿಂದ ಅದರ ವಿರುದ್ಧ ಕ್ರಿಯೆಯಾದ ನ್ಯಾಯದಿಂದ ಜಾತಿ, ಜಾತಿಯಿಂದ ಜಡತ್ವ, ಮತ್ತೆ ಪನಃ ಸಮಾನತೆಯ ಕಡೆಗೆ- ಇದು ಮಾನವ ನಿಯತಿಯ ಪೂರ್ಣ ಚಕ್ರ’ `ನಾಗರಿಕತೆಗಳು ಈ ವಿಧಿಯ ಆಟದ ರಂಗಸ್ಥಳ’ ಎಂದು ‘ಬೊಂಬೆಯಾಟವಯ್ಯ’ ಎಂದು ಹಳೆಯ ಸಿನಿಮಾದಲ್ಲಿ ನಾರದ ಮುನಿಯ ಪಾತ್ರಧಾರಿ ಇಂಪಾಗಿ ಹಾಡುವಂತೆ, ಮಾನವ ಇತಿಹಾಸ ಒಂದು ವಿಧಿಯ ಆಟವಾಗಿದೆ ಎನ್ನುವ ವಿಧಿವಾದ  ಅಥವಾ ಹಣೆಯಬರಹವಾದವನ್ನೇ ಲೋಹಿಯಾ  ಮುಂದಿಡುತ್ತಾರೆ.
`ನಾಗರಿಕತೆಗಳ ಏಳುಬೀಳುಗಳನ್ನು ನೋಡುತ್ತಾ, ತನ್ನ ಮುಂದೆ ಇತಿಹಾಸದ ಅನಂತ ಮರುಭೂಮಿ ಹರಡಿರುವುದನ್ನು ನೋಡುತ್ತಾ, ವರ್ಗದ ಕೊಂಬೆಯಿಂದ ಜಾತಿಯ ಕೊಂಬೆಗೆ ಕೋತಿಯಂತೆ ಜಿಗಿಯುತ್ತಿರುವುದೇ ಮಾನವನ ಸದಾ ಕಾಲದ ಹಣೆಯಬರಹವೆ’. `ಶಕ್ತಿ ಮತ್ತು ಸಮೃದ್ಧಿ, ಬಡತನ ಮತ್ತು ಸುಪ್ತಾವಸ್ಥೆಗಳ ನಡುವೆ ಯುಗಗಳೂ ಪ್ರದೇಶಗಳೂ ಓಲಾಡುತ್ತಾ ಸದಾ ತಿರುಗುತ್ತಲೇ ಇರುತ್ತವೆ’ `ಮಾನವ ಕುಲಕ್ಕೆ ವರ್ಗರಹಿತ ಸಮಾಜ ಅಥವಾ ಏಕಜಗತ್ತಿನ ಸಾಧನೆಯ ಭರವಸೆ ತೀರಾ ಅತ್ಯಲ್ಪ’. `ಬಡತನ  ಮತ್ತು ಯುದ್ಧಗಳನ್ನು ಸಂಪೂರ್ಣವಾಗಿ ಕೊನೆಗೊಳಿಸಿರುವ, ಮನುಷ್ಯನು ಅಂತರಂಗದ ತೃಪ್ತಿಯನ್ನೂ, ಬಹಿರಂಗದ ಶಾಂತಿಯನ್ನೂ ಸಾಧಿಸುವ ಜೀವನಕ್ರಮವನ್ನು ಹೊಂದುವಂಥ ಸುವರ್ಣಯುಗ ಒಂದು  ಹಳೆಯ ಭ್ರಾಂತಿಯೆಂದು ತೋರುತ್ತದೆ’ ಎನ್ನುವ ಅಪರಿಮಿತವಾದ ನಿರಾಶಾವಾದವನ್ನು ಲೋಹಿಯಾ ಮಂಡಿಸುತ್ತಾರೆ.
ಲೋಹಿಯಾರವರ ಪ್ರಕಾರ ಇಲ್ಲಿಯವರೆಗೂ ಇತಿಹಾಸ ನಿರ್ಮಿಸಿರುವುದು ಮಾನವರಲ್ಲ, ಬದಲು `ಇತಿಹಾಸವೇ ಇತಿಹಾಸವನ್ನು ನಿರ್ಮಿಸಿದೆ’. ಅದು ವಿಧಿಯ ಆಟವಾಗಿದೆ. ಹೀಗಾಗಿ ಲೋಹಿಯಾ ಇತಿಹಾಸ ಚಲನೆಯ ಪ್ರೇರಕಶಕ್ತಿಯನ್ನೇ  ಕಾಣಲಿಲ್ಲ. `ಪುನರ್ಜನ್ಮ ಮತ್ತು ಕರ್ಮಸಿದ್ಧಾಂತ ವ್ಯಕ್ತಿಗೆ ಸಂಬಂಧಪಟ್ಟಂತೆ ಸಮಂಜಸವಿಲ್ಲದಿರಬಹುದೇನೋ. ಆದರೆ ರಾಷ್ಟ್ರ ಮತ್ತು ಗುಂಪುಗಳಿಗೆ ಸಂಬಂಧಪಟ್ಟಂತೆ ಅದು ಸಮಂಜಸವಾದುದೆಂದು ತೋರುತ್ತದೆ’ ಎನ್ನುವುದರ ಮೂಲಕ ಹಿಂದೂ ಧರ್ಮದ ಪುನರ್ಜನ್ಮ ಸಿದ್ಧಾಂತವನ್ನು ನಾಗರಿಕತೆಗಳ ಇತಿಹಾಸಕ್ಕೆ ಅಳವಡಿಸಿದ ದೃಷ್ಟಿಯೇ ಆಗಿದೆ ಎನ್ನುವುದು ಲೋಹಿಯಾರವರ ಆ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಲೋಹಿಯಾ ‘ಮಾಕ್ರ್ಸ್ ನಂತರದ ಅರ್ಥಶಾಸ್ತ್ರ’ ಎನ್ನುವ ಶೀರ್ಷಿಕೆಯಲ್ಲಿ ದೀರ್ಘ ಲೇಖನವೊಂದನ್ನು ಬರೆದಿದ್ದಾರೆ. ಇದನ್ನು ಕೆಲವು ಲೋಹಿಯಾವಾದಿಗಳು ಅವರ ‘ಮ್ಯಾಗ್ನಮ್ ಓಪಸ್’ ಎಂದು ಬಣ್ಣಿಸಿರುವುದುಂಟು. ಅದು ಒಂದು ರೀತಿಯ ಭ್ರಮೆ ಹಾಗೂ ಪೊಳ್ಳುವಾದ. ಆ ಲೇಖನವು ಹೇಗೆ ಮಾಕ್ರ್ಸ್‍ವಾದದ ಬಗ್ಗೆ ಲೋಹಿಯಾರವರ ಅತ್ಯಂತ ಕಳಪೆ ತಿಳಿವಳಿಕೆಯೇ ಆಗಿದೆ. ಹೆಚ್ಚಿನ ಲೋಹಿಯಾವಾದಿಗಳು ಮಾಕ್ರ್ಸ್‍ವಾದವನ್ನು ಓದಿದವರಲ್ಲ. ಲೋಹಿಯಾ ಮಾಕ್ರ್ಸ್‍ವಾದದ ಬಗ್ಗೆ ಏನು ಹೇಳಿದರೋ ಅದು ಅದ್ಭುತ ಸತ್ಯ ಎಂದೇ ಭಾವಿಸಿಬಿಟ್ಟರು. ಲೋಹಿಯಾ ಟೀಕಿಸಿದ್ದು ಮಾಕ್ರ್ಸ್ ಏಂಗೆಲ್ಸ್ ರೂಪಿಸಿದ ಮಾಕ್ರ್ಸ್‍ವಾದವನ್ನಲ್ಲ, ಬದಲಿಗೆ ಲೋಹಿಯಾ ಟೀಕಿಸಿದ್ದು ತನ್ನ ಕಲ್ಪನೆಯ ಮಾಕ್ರ್ಸವಾದವನ್ನು.
ಅವರು ಹೇಳುವುದೇನೆಂದರೆ `ಮಾಕ್ರ್ಸ್‍ವಾದದ ಬಂಡವಾಳಶಾಹಿ ಚಿತ್ರಣ ಒಂದು ಪಶ್ಚಿಮ ಯೂರೋಪಿನ ಒಳಕ್ರಿಯೆ ಯಾಗಿದೆಯಷ್ಟೆ. ಬಂಡವಾಳಶಾಹಿಯ ಚಲತ್ವವನ್ನು  ಆಂತರಿಕ ರಚನೆಯಲ್ಲಿ; ಮೌಲ್ಯ-ಉಪಯೋಗಮೌಲ್ಯಗಳ ವೈರುಧ್ಯದಲ್ಲಿ; ಒಂದೇ ರಚನೆಯ ಕಾರ್ಮಿಕವರ್ಗ-ಬಂಡವಾಳಗಾರ ವರ್ಗಗಳ ವೈರುಧ್ಯದಲ್ಲಿ ಮಾತ್ರ ಕಾಣಲಾಗಿದೆ. ಮಾಕ್ರ್ಸ್‍ರವರ ಬಂಡವಾಳಶಾಹಿ ಚಿತ್ರಣ ಸ್ವಯಂಚಲನೆ ಹೊಂದಿದ ಪಶ್ಚಿಮ ಯೂರೋಪಿನ ಒಳ ವೃತ್ತವಾಗಿದೆ’ ‘ಮಾಕ್ರ್ಸ ವಸಾಹತುಶಾಹಿ ಶೋಷಣೆಯನ್ನು ಕಾಣಲಿಲ್ಲವೆಂದೂ, ವಸಾಹತುಗಳ ಶೋಷಣೆಯಿಂದಲೇ ಬಂಡವಾಳಶಾಹಿ ಬೆಳೆದುಬಂದುದನ್ನು ಕಾಣಲಿಲ್ಲವೆಂದೂ’ ಲೋಹಿಯಾ ಆರೋಪಿಸುತ್ತಾರೆ.
ಮಾಕ್ರ್ಸ್‍ವಾದ ನಿಜಕ್ಕೂ ಹೀಗಿದೆಯೇ? ಎಂದು ಪರಿಶೀಲಿಸೋಣ. 1847ರಲ್ಲಿ ಪ್ರಕಟವಾದ ಕಮ್ಯುನಿಸ್ಟ್ ಮ್ಯಾನಿಫೆಸ್ಟೋದಲ್ಲಿ ಮಾಕ್ರ್ಸ್ ಮತ್ತು ಏಂಗಲ್ಸ್ ನೀಡಿದ ಬಂಡವಾಳಶಾಹಿ ಚಿತ್ರಣ ಇದು. `ಮಧ್ಯಯುಗದ ಜೀತಗಾರರಿಂದ ಮೊದಲ ಪಟ್ಟಣಗಳ ಚಾರ್ಟರ್ಡ್ ಬರ್ಗರ್ಸ್ ಉದಯವಾದರು. ಈ  ಬರ್ಗರ್ಸ್‍ಗಳಿಂದ ಬಂಡವಾಳಶಾಹಿಯ ಮೊದಲ ಅಂಶಗಳು ಬೆಳೆದುಬಂದವು. ಅಮೆರಿಕವನ್ನು ಕಂಡುಹಿಡಿದುದು, ಗುಡ್‍ಹೋಪ್ ಭೂಶಿರವನ್ನು ಬಳಸಿ ಜಲಮಾರ್ಗಗಳ ಶೋಧನೆ ನಡೆಸಿದುದು, ಮೊಳಕೆಯೊಡೆಯುತ್ತಿದ್ದ ಬಂಡವಾಳಶಾಹಿಗೆ ಹೊಸ ನೆಲೆಗಳನ್ನು ತೆರೆಯಿತು. ಪೂರ್ವಭಾರತ ಮತ್ತು ಚೈನಾ ಮಾರುಕಟ್ಟೆಗಳು, ಅಮೆರಿಕದ ವಸಾಹತೀಕರಣ, ವಸಾಹತುಗಳೊಂದಿಗಿನ ವ್ಯಾಪಾರ, ಕ್ರಯವಸ್ತುಗಳಲ್ಲಿ ಹಾಗೂ ವಿನಿಮಯ ಸಾಧನಗಳಲ್ಲಿ ಆದ ಬೆಳವಣಿಗೆಗಳು ಸಾಮಾನ್ಯವಾಗಿ ವಾಣಿಜ್ಯ, ನೌಕಾಯಾನ, ಕೈಗಾರಿಕೆಗಳಿಗೆ ಹಿಂದೆಂದೂ ಇರದಷ್ಟು ಉತ್ತೇಜನ ನೀಡಿತು. ಇದು ತತ್ತರಿಸುತ್ತಿದ್ದ ಪಾಳೆಯಗಾರಿ ಸಮಾಜ ವ್ಯವಸ್ಥೆಯ ಗರ್ಭದೊಳಗಿದ್ದ ಕ್ರಾಂತಿಕಾರಿ ಅಂಶಕ್ಕೆ ತ್ವರಿತಗತಿಯ ಬೆಳವÀಣಿಗೆಯನ್ನು ಉಂಟುಮಾಡಿತು.
ಆಧುನಿಕ ಕೈಗಾರಿಕೆ ವಿಶ್ವಮಾರುಕಟ್ಟೆಯನ್ನು ಸ್ಥಾಪಿಸಿದೆ. ಇದಕ್ಕೆ ಅಮೆರಿಕದ ಶೋಧನೆ ನಾಂದಿಯಾಯಿತು. ಈ ವಿಶ್ವಮಾರುಕಟ್ಟೆಯು ವಾಣಿಜ್ಯ, ನೌಕಾಯಾನ, ಭೂಸಂಪರ್ಕ ವ್ಯವಸ್ಥೆಯ ತ್ವರಿತಗತಿಯ ಬೆಳವಣಿಗೆಗೆ ಪ್ರೇರಕವಾಯಿತು. ತಾನು ಉತ್ಪಾದಿಸಿದ ಮಾಲುಗಳಿಗೆ ಸತತವಾಗಿ ಮಾರುಕಟ್ಟೆಯು ವಿಸ್ತರಣೆಯಾಗಬೇಕಾದ ಅಗತ್ಯವು ಬಂಡವಾಳಶಾಹಿಯನ್ನು ಭೂಗೋಳದ ಮೇಲ್ಮೈಯಾದ್ಯಂತ ಓಡಿಸುತ್ತದೆ……… ವಿಶ್ವಮಾರುಕಟ್ಟೆಯ ಶೋಷಣೆಯಿಂದ ಬಂಡವಾಳಶಾಹಿಯು ಪ್ರತಿಯೊಂದು ದೇಶದ ಉತ್ಪಾದನೆ ಬಳಕೆಗಳಿಗೆ ಸಾರ್ವತ್ರಿಕವಾದ ಲಕ್ಷಣಗಳನ್ನು ನೀಡುತ್ತಿದೆ. ಸ್ಥಳೀಯ ಕಚ್ಚಾಪದಾರ್ಥಗಳಿಂದಲ್ಲದೆ ಯಾವುದೋ ಮೂಲೆಯ ವಲಯಗಳಿಂದ ತರುವ ಕಚ್ಚಾಪದಾರ್ಥಗಳ ಮೇಲೆಯೇ ನಡೆಯುವ; ಉತ್ಪನ್ನಗಳು ದೇಶದೊಳಗಡೆಯಷ್ಟೇ ಬಳಸಲ್ಪಡದೆ  ಭೂಮಿಯ ಪ್ರತಿಯೊಂದು ಮೂಲೆಗಳಲ್ಲೂ ಬಳಸಲ್ಪಡುವ ಕೈಗಾರಿಕೆಗಳು, ದೇಶದ ಉತ್ಪಾದನೆಯಿಂದಲೇ ನೀಗಿಸಲ್ಪಡುತ್ತಿದ್ದ ಬೇಡಿಕೆಗಳ ಬದಲು ದೂರದ, ಭಿನ್ನವಾದ ಭೂವಾತಾವರಣಗಳ ಉತ್ಪನ್ನಗಳೇ ಬೇಕಾಗುವ ಬೇಡಿಕೆಗಳು ಉಂಟಾಗುವುದು ನಾವು ಕಾಣುತ್ತೇವೆ. ಹಳೆಯ, ಸ್ಥಳೀಯ, ರಾಷ್ಟ್ರೀಯ ಪ್ರತ್ಯೇಕತೆ, ಸಂಕುಚಿತತೆ, ಸ್ವಂತಕ್ಕೆ ಸಾಕಾಗುವಷ್ಟು ಉತ್ಪಾದನೆ, ಇವುಗಳ ಬದಲು ಪ್ರತಿಯೊಂದು ದಿಕ್ಕಿನಲ್ಲೂ ಪರಸ್ಪರ ವ್ಯವಹಾರ, ವಿಶ್ವದಾದ್ಯಂತ ರಾಷ್ಟ್ರಗಳ ಪರಸ್ಪರಾವಲಂಬನೆಗಳು ಏರ್ಪಟ್ಟಿವೆ. ಬಂಡವಾಳಶಾಹಿಯು ಹಳ್ಳಿಗಳನ್ನು ನಗರಗಳ ಆಡಳಿತಕ್ಕೆ ಒಳಮಾಡಿದಂತೆ, ಅನಾಗರಿಕ ಅರೆನಾಗರಿಕ ದೇಶಗಳನ್ನು ನಾಗರಿಕ ದೇಶಗಳ ಮೇಲೆ, ರೈತರ ರಾಷ್ಟ್ರಗಳನ್ನು ಬಂಡವಾಳಶಾಹಿ ರಾಷ್ಟ್ರಗಳ ಮೇಲೆ ಬಲಾತ್ಕಾರದ ಪರಾವಲಂಬನೆಗೆ ಒಳಪಡಿಸಿದೆ’.  (ಕಮ್ಯುನಿಸ್ಟ್ ಮ್ಯಾನಿಫೆಸ್ಟೋ)
ಹೀಗೆ ಕಮ್ಯುನಿಸ್ಟ್ ಮ್ಯಾನಿಫೆಸ್ಟೋದ ಮೊದಲಿನ ಪುಟಗಳಲ್ಲೇ ಈ ರೀತಿಯಾಗಿ ಬಂಡವಾಳಶಾಹಿಯ ವಿಶ್ವವ್ಯಾಪಿ ಅಂಶಗಳನ್ನೂ, ಪರಿಣಾಮಗಳನ್ನೂ ವಿವರಿಸಿರುವಾಗ ‘ಮಾಕ್ರ್ಸ್‍ರವರ ಬಂಡವಾಳಶಾಹಿ ಚಿತ್ರಣ ಪಶ್ಚಿಮ ಯೂರೋಪಿನ ವೃತ್ತವಾಗಿದೆ ಅಥವಾ ಒಳಕ್ರಿಯೆಯಷ್ಟೇಯಾಗಿದೆ’ ಎಂದು ಹೇಳಲು ಸಾಧ್ಯವಿದೆಯೇ? ಮಾಕ್ರ್ಸ್‍ರವರ ಬಂಡವಾಳಶಾಹಿ ಚಿತ್ರ ವಾಸ್ತವವಾಗಿ ಜಾಗತಿಕ  ಯೂರೋಪಿನ ಬಂಡವಾಳಶಾಹಿ ಬೆಳವಣಿಗೆಗೆ ಬಂಡವಾಳದಪೂರ್ವ ಶೇಖರಣೆ  ಹೇಗಾಯಿತೆನ್ನುವುದನ್ನು ಅಲ್ಲಿ ವಸಾಹತುವಾದ ಏಕೆ ಅನಿವಾರ್ಯವಾಯಿತೆಂದೂ ಮಾಕ್ರ್ಸ್ ತಮ್ಮ ‘ಬಂಡವಾಳ’ ಗ್ರಂಥದಲ್ಲಿ ಹಾಗೂ ಇನ್ನಿತರ ಬರಹಗಳಲ್ಲಿ ವಿವರಿಸಿದ್ದಾರೆ.
ಲೋಹಿಯಾರವರ ಮೂಲ ಆರೋಪಕ್ಕೆ ಆಧಾರವೇ ಇಲ್ಲದಿರುವಾಗ, ಅದರಿಂದ ಹುಟ್ಟುವ ಇತರೆ ಆರೋಪಗಳೂ ತಾವಾಗಿಯೇ ಉದುರಿಹೋಗುತ್ತವೆ. ಹೆಚ್ಚಿನ ವಿವರಗಳಿಗೆ ನನ್ನ ‘ಲೋಹಿಯಾ ವಿಚಾರಗಳ ಒಂದು ವಿಮರ್ಶೆ’ ಪುಸ್ತಕವನ್ನು ನೋಡಬಹುದು.
(ಮುಂದುವರಿಯುವುದು)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...