Homeಸಾಮಾಜಿಕಮಂಗಳೂರು ಯೂನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಗಂಡಾಗುಂಡಿ

ಮಂಗಳೂರು ಯೂನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಗಂಡಾಗುಂಡಿ

- Advertisement -
- Advertisement -

ಮಂಗಳೂರು ವಿಶ್ವವಿದ್ಯಾಲಯಕ್ಕೆ “ಮಂಗಳ ಗಂಗೋತ್ರಿ” ಎಂಬ ಚಂದದ ಹೆಸರಿಡಲಾಗಿದೆ ವಿಕಟ ವ್ಯಂಗ್ಯವೆಂದರೆ, ಈ ಯೂನಿವರ್ಸಿಟಿ ಶುದ್ಧ ಅವ್ಯವಹಾರ, ಅಕ್ರಮ, ಅನ್ಯಾಯ, ಅನಾಚಾರದ ಗಂಗೋತ್ರಿಯಂತಾಗಿ ಅದ್ಯಾವುದೋ ಕಾಲವಾಗಿ ಹೋಗಿದೆ! ಇಲ್ಲಿಗೆ ಉಪಕುಲಪತಿಗಳಾಗಿ ವಕ್ಕರಿಸುವ ಭೂಪರಿಲ್ಲ ಸಿಕ್ಕóಷ್ಟು ಸ್ವಾಹಾ ಮಾಡುವ ಹಿಡನ್ ಅಜೆಂಡಾ ಇಟ್ಟುಕೊಂಡೇ ಬರುತ್ತಿದ್ದಾರೆ. ಹೀಗಾಗಿ ಮಂಗಳೂರು ವಿಶÀ್ವವಿದ್ಯಾಲಯ ಒಂದಲ್ಲ ಒಂದು ಬುರ್ನಾಸ್ ಭಾನ್ಗಡಿಯ ಸುದ್ದಿಗೀಡಾಗುತ್ತಲೇ ಇದೆ. ಈ ಪರಿಯ ಕವರ್iಕಾಂಡ, ಕಾಮಕತೆಗಳೆಲ್ಲವೂ ಲೋಕ ಪ್ರಸಿದ್ದ! ಮಂಗಳ ಗಂಗೋತ್ರಿಯಲ್ಲಾಗುವುದು ಕೋಟಿಗಳ ಲೆಕ್ಕದ ಬಿಲ್ ವಿದ್ಯೆ!! ಕಾಮಗಾರಿ, ನೇಮಕಾತಿ, ಖರೀದಿಯಲ್ಲಿ ಘನಘೋರ ಭ್ರಷ್ಟಾಚಾರ ನಡೆಯುತ್ತಿರುವ ಮಂಗಳೂರು ಯೂನಿವರ್ಸಿಟಿಯಲ್ಲಿ ಉಪನ್ಯಾಸಕಿಯರ, ವಿದ್ಯಾರ್ಥಿನಿಯರ ಲೈಂಗಿಕ ಶೋಷಣೆ ನಿತ್ಯಕರ್ಮದಂತಾಗಿದೆ.
ಅಂಕಪಟ್ಟಿ ಹಗರಣ 2007 ರಲ್ಲಿ ನಡೆದಾಗ ಅಲ್ಲೋಲಕಲ್ಲೋಲವೇ ಮಂಗಳ ಗಂಗೋತ್ರಿಯಲ್ಲಾಗಿತ್ತು! ಅದನ್ನು ಮರೆಯದ ಚರ್ಚೆಯ ಸಂಗತಿಯಾಗಿ ಇದೆಯೇ ವಿನಾಃ ನಿಷ್ಠುರ ತನಿಖೆ ಎಂಬುದಾಗಲೇ ಇಲ್ಲ. ಅಂದು ಎಬಿವಿಪಿಯ ರಣಧೀರ ಕಂಠೀರವನಾಗಿದ್ದ ಇಂದಿನ ಬೆಳ್ತಂಗಡಿಯ ಚೆಡ್ಡಿ ಶಾಸಕ ಹರೀಶ್‍ರೈ ಆ ಹಗರಣದ ಫಲಾನುಭವಿಗಳಲ್ಲಿ ಒಬ್ಬ!! ಮಂಗಳೂರು ವಿವಿಯಲ್ಲಿ ಆಕಾಡೆಮಿಕ್ ವಾತಾವರಣದ ಬದಲು ಸ್ವಚ್ಛಂದ ಮೋಜಿನ ಮೂಡ್ ನೆಲೆನಿಂತಿದ್ದೆ. ಸಂಘ ಪರಿವಾರದ ಹಾವಳಿಯಂತೂ ಹೇಳತೀರದು. ಸಿದ್ದು ಕಾಲಾವಧಿಯಲ್ಲಿ ಉಪಕುಲಪತಿಯಾಗಿ ನೇಮಕವಾಗಿದ್ದ ಭೈರಪ್ಪ ವಾರ್ಸಿಟಿಯ ಶೆಕ್ಷಣಿಕ ಸುಧಾರಣೆಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಆತ ಎಲ್ಲೆಲ್ಲಿ ಎಷ್ಟೆಷ್ಟು ಗುಳುಂ ಮಾಡಲು ಸಾಧ್ಯವೆಂದು ತಲಾಸ್ ನಡೆಸಿ ಹೊಟ್ಟೆತುಂಬ ಉಂಡು ಎದ್ದು ಹೋಗಿದ್ದಾರೆ. ಈ ಭೈರಪ್ಪ ಮಂಗಳ ಗಂಗೋತ್ರಿಯಿಂದ ತೊಲಗಿ ಆದಿಚುಂಚನಗಿರಿ ಶೆಕ್ಷಣಿಕ ಸಾಮ್ರಾಜ್ಯದ ಪ್ರೋಚಾನ್ಸಲರ್ ಆಗಿ ಅಮರಿಕೊಂಡು ತಿಂಗಳೆರಡು ಗತಿಸಿದರೂ ಆತನ ಗೋಲ್‍ಮಾಲ್ ಲೀಲೆಗಳ ಆವಾಜ್ ಮಾತ್ರ ಇವತ್ತಿಗೂ ನಿಂತಿಲ್ಲ…………
ಯಾರ್ಯಾರ ದೌರ್ಬಲ್ಯ ಎಂತೆಂಥದೆಂದು ಕರಾರುವಾಕ್ಕಾಗಿ ಕಂಡುಹಿಡಿದು ಆ ಚೋರ ಚಂಡಾಲರನ್ನು ತನ್ನ ಮನೋಗಡಕ್ಕೆ ಬಳಸಿಕೊಳುವ ಕಲೆ ಕರಗತ ಮಾಡಿಕೊಂಡಿದ್ದ ಭೈರಪ್ಪ ಸಾಹೇಬರು ತನಗೆ ವಿಸಿಯಾಗಿ ಪ್ರಾತಿಷ್ಠಾಪಿಸಿದ್ದ ಕಾಂಗ್ರೆಸಿಗರಷ್ಟೇ ಆದÀರಿಂದ ಬಿಜೆಪಿಗರನ್ನು ನೋಡಿಕೊಳ್ಳುತ್ತಿದ್ದರು ಕೇಸರಿ ಕಿತಾಪತಿಗಾರರ ಆಡ್ಡೆಯಂತಾಗಿರುವ ಮಂಗಳೂರಲ್ಲಿ ಬಿಜೆಪಿ ಪರಿವಾರಿಗರ ಯಶಸ್ವಿಯಾಗಿ ನಿಭಾಯಿಸಿದ್ದ ಭೈರಪ್ಪ ವಿವಿಯನ್ನು ಮಾವನ ಮನೆಯಿಂದ ಬಂದ ಬಳುವಳಿಯಂತೆ ದರ್ಬಾರು ನಡೆಸುತ್ತಿದ್ದರು! ತನ್ನ ರಣ ಹಸಿವು ಅರ್ಥ ಮಾಡಿಕೊಂಡವರ ವಿವಿಯ ಆಯಕಟ್ಟಿನ ಜಾಗದಲ್ಲಿ ನಿಭಾಯಿಸಿದ್ದ ಈ ವಿಸಿ ತನ್ನ ಒಣ ಸೈದ್ದಾಂತಿಕತೆ, ಸ್ವಪ್ರತಿಷ್ಠೆ ಮತ್ತು ಹಣದ ಹಪಾಹಪಿಗೆ ತಕ್ಕಂತೆ ಆಡಳಿತ ನಡೆಸಿಕೊಂಡಿದ್ದರು!!
ಪ್ರತಿ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದು ಮಂಗಳೂರು ವಿವಿಯ ಸಂಪ್ರದಾಯ ಎಂಬಂತಾಗಿದೆ! ಭೈರಪ್ಪನ ಪರ್ವದಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗವಾದಾಗ ದೊಡ್ಡ ಗದ್ದಲವೂ ಆಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ವ್ಯವಸ್ಥಿತ ಜಾಲದಲ್ಲಿ ವೀಸಿ ಸಾಹೇಬರೂ ಇದ್ದಾರೆಂಬ ಪುಕಾರುಗಳು ಎದ್ದಿದ್ದವು. ತುಂಬ ನಾಜೂಕಾಗಿ ಪ್ರಕರಣ ನಿಭಾಯಿಸಿದ ವಿಸಿ ಭೈರಪ್ಪ ಎಲ್ಲಾ ಮುಚ್ಚಿಹಾಕಿ ಬಚಾವಾದರು. ಅಂಕಪಟ್ಟಿ ಅಕ್ರಮದಲ್ಲಂತೂ ಬಹುಕೋಟಿ ವ್ಯವಹಾರ ರಾಜಾರೋಷವಾಗೇ ನಡೆದುಹೋಗಿದೆ. ಇದರಲ್ಲಿ ವಿಸಿ ಸಾಹೇಬರಿಗೆ ದೊಡ್ಡದೊಂದು ಪಾಲು ದಕ್ಕಿದೆಯೆಂದು ಯೂನಿವರ್ಸಿಟಿಯ ಕಂಬ-ಕಂಬವೂ ಪಿಸುಗುಡುತ್ತದೆ. ಕೆಎಸ್‍ಓಯು ಯುಜಿಸಿ ಮಾನ್ಯತೆ ಕಳೆದುಕೊಂಡಿತು. ಈ ಕೆಎಸ್‍ಓಯು ಮತ್ತು ದೂರಶಿಕ್ಷಣ ನಿರ್ದೇಶನಾಲಯವನ್ನು ದುಡ್ಡು ಮಾಡುವ ಅಡ್ಡೆಯಂತಾಗಿಸಲಾಯಿತು. ಕಾಸು ಕೊಟ್ಟವರಿಗೆಲ್ಲಾ ಪದವಿ ರಾತ್ರಿ ಬೆಳಗಾಗುವುದರಲ್ಲಿ ಮಂಗಳಗಂಗೋತ್ರಿಯಲ್ಲಿ ಸಲೀಸಾಗಿ ಸಿಗುತ್ತಿದೆ.
ಮಂಗಳ ಗಂಗೋತ್ರಿಯ ಅಷ್ಟೂ ಅವ್ಯವಹಾರ ತಾಯಿಬೇರು ಖರೀದಿ ಕಮಿಟಿ(ಪರ್ಚೆಸ್ ಕಮಿಟಿ) ವೀಸಿ ಕಣ್ಗಾವಲಿನಲ್ಲಿರುವ ಈ ಕಮಿಟಿಯಲ್ಲಿ ಡೀನ್‍ಗಳೆಲ್ಲ ಇರುತ್ತಾರೆ. ಇಲ್ಲಾಗುವ ಖೋಟಾ ಖರೀದಿ, ಕಮಿಷನ್, ಕಿಕ್‍ಬ್ಯಾಕ್‍ಗಳು ಲಕ್ಷದ ಲೆಕ್ಕದಲ್ಲೇ ಇರುತ್ತದೆ! ಖರೀದಿಗಳು ಕೊಟ್ಯಾಂತರ ರೂಪಾಯಿಗಳಾದರೆ ಲಫಡಾ ಲಕ್ಷಾಂತರ ರೂಪಾಯಿಗಳದು. ಪೀಠೋಪಕರಣ, ಎಲೆಕ್ಟ್ರಿಕಲ್ ಸಾಮಾನು, ಕಂಪ್ಯೂಟರ್ ಮುಂತಾದ ವಸ್ತು ಕೊಳ್ಳುವಾಗ ವಿಪರೀತ ಬೆಲೆ ನಮೂದಿಸಿ ಪರ್ಸೆಂಟೇಜ್ ಹೊಡೆಯುವುದು ಸದ್ರಿ ವಾರ್ಸಿಟಿ ವಾಡಿಕೆ. ಈ ಕಮಾಯಿ ಭೈರಪ್ಪನ ಟೀಮು ಹಗಲೂ-ಇರುಳೂ ನಡೆಸಿ ದುಂಡಗಾಗಿದೆ. ಈ ಪರ್ಚೆಸ್ ಪರಾಕ್ರಮದ ಸರಿಯಾದ ತನಿಖೆ ನಡೆದರೆ ಭೈರಪ್ಪ ಅಂಡ್‍ಕೋದ ಲೂಟಿ ಲೆಕ್ಕಸಿಗುತ್ತದೆ. ಆ ತಾಕತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರಿಗಿದೆಯಾ? ಸ್ವಜಾತಿ ಬಂಧುವಾದ ಭೈರಪ್ಪರ ಮುಟ್ಟುವ ಮನಸ್ಸು ಮಂತ್ರಿ ದೇವೇಗೌಡರಿಗಿಲ್ಲ ಎಂದು ವಾರ್ಸಿಟಿಯ ಮಂದಿ ಮುಸಿಮುಸಿ ನಗುತ್ತಾರೆ.
ವಿಸಿ ಭೈರಪ್ಪರ ಡಬ್ಬಲ್ ವೆಂಚರ್ ಎಂದೇ ಕುಖ್ಯಾತವಾಗಿದೆ ವಿವಿಯಲ್ಲಿ ಬೇಕಾಬಿಟ್ಟಿಯಾಗಿ ಅಳವಡಿಸಿರುವ ಸಿಸಿ ಕ್ಯಾಮರಾ ಮತ್ತು ಸೋಲಾರ್ ಹಗರಣಗಳು!! ಎರಡೂ ಕೋಟಿ ಕರಾಮತ್ತೇ. ಸೋಲಾರ್ ಗುತ್ತಿಗೆ ಕಡಿಮೆ ಮೊತ್ತದ ಬಿಡ್‍ದಾರನ ಬದಲಿಗೆ ದೊಡ್ಡ ಬಿಡ್‍ದಾರನಿಗೆ ಭೈರಪ್ಪರ ಗ್ಯಾಂಗು ದಯಪಾಲಿಸಿದೆ. ಇದರಲ್ಲಿ ಲಕ್ಷಾಂತರ ಕಮಿಷನ್ ಪಡೆದಿರುವ ವೀಸಿ ಬಳಗ ಬರೊಬ್ಬರಿ ನಾಲ್ಕು ಕೋಟಿ ರೂಪಾಯಿಗಳ ಸಿಸಿ ಕ್ಯಾಮರಾ ಅಳವಡಿಕೆಯಲ್ಲಿ ಬುದ್ಧಿಪೂರ್ವಕವಾಗೇ ಟೆಂಡರ್ ನಿಯಮ ಧಿಕ್ಕರಿಸಿದೆ. ಯಾವುದೇ ಟೆಂಡರ್ ಇಲ್ಲದೆ ಮುಗುಮ್ಮಾಗಿ ಆಗಿ ನಡೆದಿರುವ ಈ ಸಿಸಿಕ್ಯಾಮರಾ ಅಳವಡಿಕೆ ಕಾಮಗಾರಿ ವೀಸಿ ಭೈರಪ್ಪರ ದೆಸೆಯನ್ನೇ ಬದಲಿಸಿದೆ!
ಗುತ್ತಿಗೆ ಆಧಾರದಲ್ಲಿ ನೇಮಕಾತಿಯಾಗುವ ದುರ್ಬಲರ ಸಂಬಳಕ್ಕೂ ನಾಲಿಗೆ ಚಾಚುವ ಭೈರಪ್ಪರ ಬಣದ ಚಾಳಿ ಮಂಗಳೂರು ವಿವಿ ವ್ಯಾಪ್ತಿಯ ಅಷ್ಟೂ ಶಿಕ್ಷಣ ಸಂಸ್ಥೆಗಳಲ್ಲಿ ಸುಪ್ರಸಿದ್ಧ!! ಸೆಕ್ಯೂರಿಟಿ, ಸಿಫಾಯಿ, ಅಟೆಂಡರ್, ಗುಮಾಸ್ತರಂಥ ಸಣ್ಣ-ಪುಟ್ಟ ಕರ್ಮಚಾರಿಗಳನ್ನು ವಿವಿಯಲ್ಲಿ ಗುತ್ತಿಗೆಯಲ್ಲಿ ತೆಗೆದುಕೊಳ್ಳಲಾಗಿದೆ. ಇವರಿಗೆಲ್ಲಾ ಅಬ್ಬಬ್ಬಾ ಎಂದರೆ ಏಳೆಂಟು ಸಾವಿರ ರೂಪಾಯಿ ಪಗಾರು ಕೊಡಲಾಗುತ್ತಿದೆ. ಆದರೆ ಇವರ ಹೆಸರಲ್ಲಿ ಹದಿನೈದು ಸಾವಿರದಿಂದ ಇಪ್ಪತ್ತೈದು ಸಾವಿರ ರೂಪಾಯಿಗಳ ತನಕ ಖರ್ಚು ಹಾಕಲಾಗಿದೆಯಂತೆ. ವ್ಯತ್ಯಾಸದ ಕಾಸು ಎಲ್ಲಿ ಹೋಗಿದೆ ಎಂಬುದು ಭೈರಪ್ಪರಿಗೆ ಮಾತ್ರ ಗೊತ್ತಿದೆ! ಪೆವಿಲಿಯನ್ ಮತ್ತು ಕಟ್ಟಡಗಳ ನಿರ್ಮಾಣದಲ್ಲಿ ಕೋಟಿ-ಕೋಟಿ ನಾಯಿ-ನರಿ ಪಾಲಾಗಿದೆ ಎಂಬ ಆರೋಪಗಳಿವೆ. ಒಟ್ಟಿನಲ್ಲಿ ವಿವಿ ದುಡ್ಡಲ್ಲಿ ವಿಸಿಯಾಗಿದ್ದ ಭೈರಪ್ಪ ಭರ್ಜರಿ ಯಲ್ಲಮ್ಮನ ಜಾತ್ರೆ ಮಾಡಿಹೋಗಿದ್ದಾರೆ.
ಮಂಗಳಗಂಗೋತ್ರಿಯ ಮತ್ತೊಂದು ಮಗ್ಗುಲಲ್ಲಿ ಅವ್ಯವಹಾರ-ಅಕ್ರಮಗಳಷ್ಟೇ ಬಿರುಸಾಗಿ ಕಾಮಕಾಂಡವೂ ನಡೆದಿದೆ. ಉಪನ್ಯಾಸಕರ ವೃತ್ತಿಗೆ ನಾಲಾಯಕ್ ಆಗಿರುವವರೆಲ್ಲ ಅಮಾಯಕ ವಿದ್ಯಾರ್ಥಿನಿಯರ ನಡುವೆ ಅನಾಹುತಕಾರಿಗಳಂತೆ ಅಂಡಲೆಯುತ್ತಿದ್ದಾರೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಅಧ್ಯಾಪಕ ಡಾ|| ಉಮೇಶ್‍ನಾಯ್ಕ್ ಲ್ಯಾಬ್ ಮತ್ತು ಲೈಬ್ರರಿಯಲ್ಲಿ ಹುಡುಗಿಯರ ಜತೆ ಅಸಹ್ಯವಾಗಿ ವರ್ತಿಸುತ್ತಾನೆಂಬ ಗುಲ್ಲೆದ್ದಿದೆ. ಮರೈನ್ ಬಾಯಲಾಜಿ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟು ಸಿಕ್ಕಿಬಿದ್ದಿದ್ದ. ಡಾ|| ಸುಜಾತ ಎಂಬ ಉಪನ್ಯಾಸಕಿ ತನಗೆ ಸಹೋದ್ಯೋಗಿ ಪ್ರೊಫೆಸರ್ ಡಾ|| ರಶೀದ್ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಡೆತ್‍ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಳು. ಬರೋಬ್ಬರಿ ಒಂಭತ್ತು ವರ್ಷ ಆಕೆಗೆ ರಶೀದ್ ಪೀಡಿಸುತ್ತಿದ್ದನಂತೆ. ಈ ಕಾಮಕತೆಗಳು ಮಂಗಳಗಂಗೋತ್ರಿ ಹೆಣ್ಣು ಕು¯ಕ್ಕೆ ಸುರಕ್ಷಿತವಲ್ಲ ಎಂಬ ಸಂದೇಶ ಕಳಿಸಿದೆ. ಅನಾಚಾರ-ಅವ್ಯವಹಾರ-ಅಕಾಡಮಿಕ್ ಪರಿಸರಕ್ಕೆ ಗಂಡಾಂತರಿಕಾರಿಯಾದ ಕುಕೃತ್ಯಗಳು ಒಂದರ ಹಿಂದೊಂದರಂತೆ ನಡೆದರೂ ಯಾವುದೂ ಸರಿಯಾದ ತನಿಖೆಗೆ ಒಳಪಡದೆ ಘಟಿಂಗರು ಪಾರಮ್ಯ ಮೆರೆಯುತ್ತಿದ್ದಾರೆ.
ಮಂಗಳ ಗಂಗೋತ್ರಿಯನ್ನು ಹಳಿಗೆ ತರುವ ಕೆಲಸ ಉನ್ನತ ಶಿಕ್ಷಣ ಮಂತ್ರಿ ಜಿ.ಟಿ. ದೇವೇಗೌಡರ ಕೈಲಿ ಸಾಧ್ಯವಾ? ಆ ಖಾತೆ ನಿಭಾಯಿಸುವ ಧೈರ್ಯ ತನಗಿಲ್ಲವೆಂಬ ಕೀಳಮೆಯ ದೇವೇಗೌಡರಿದ್ದಾರೆ. ಹಾಗಾಗಿ ವಿವಿ ಕುಲಾಧಿಪತಿಯಾಗಿರುವ ರಾಜ್ಯಪಾಲ ವಾಲಾ ಮೂಗು ತೂರಿಸುವ ಮೋದಲೇ ಸಿಎಂ ಕುಮ್ಮಿ ಎಚ್ಚೆತ್ತುಕೊಳ್ಳುವರಾ?!

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...