Homeಅಂಕಣಗಳುಕಾರ್ಮಿಕ ಹಿತದ ಕಾನೂನುಗಳಿಗೆ ಎಳ್ಳು ನೀರು ಬಿಡಲು ಸರ್ಕಾರವೇ ಮುಂದಾಗಿರುವುದು ಜನದ್ರೋಹದ ಕೃತ್ಯ

ಕಾರ್ಮಿಕ ಹಿತದ ಕಾನೂನುಗಳಿಗೆ ಎಳ್ಳು ನೀರು ಬಿಡಲು ಸರ್ಕಾರವೇ ಮುಂದಾಗಿರುವುದು ಜನದ್ರೋಹದ ಕೃತ್ಯ

- Advertisement -
- Advertisement -

ಸಾಮಾಜಿಕ-ರಾಜಕೀಯ ವ್ಯಾಖ್ಯಾನಕಾರ ಪ್ರೊ.ಯೋಗೇಂದ್ರ ಯಾದವ್ ಅವರು ಈ ವ್ಯಥೆಯ ವಿದ್ಯಮಾನವನ್ನು ಸರ್ಕಾರಿ ಕೃಪಾಪೋಷಿತ ಒತ್ತೆಯಾಳು ಪ್ರಹಸನ ಎಂದು ಬಣ್ಣಿಸಿದ್ದಾರೆ. ಮಹಾನಗರಗಳ ಆರ್ಥಿಕ ಚಟುವಟಿಕೆಗಳ ದೈತ್ಯಚಕ್ರವನ್ನು ತಿರುಗಿಸಲೆಂದು ವಲಸೆ ಕಾರ್ಮಿಕರನ್ನು ಕೈಗಾರಿಕೋದ್ಯಮಗಳ ಒತ್ತೆಯಾಳುಗಳನ್ನಾಗಿ ಕೈವಶ ಮಾಡಿಕೊಳ್ಳಲಾಗುತ್ತಿದೆ. ಈ ಕ್ರೂರ ಮಸಲತ್ತಿನಲ್ಲಿ ಸರ್ಕಾರವೇ ಮುಖ್ಯ ಪಾತ್ರಧಾರಿ. ನೈತಿಕ ದಿಕ್ಸೂಚಿಯನ್ನೇ ಕಳೆದುಕೊಂಡಿರುವ ಸಮಾಜ, ಅಶ್ಲೀಲ ಹಂತ ತಲುಪಿರುವ ವರ್ಗ ಅಸಮಾನತೆಗಳು, ಪಾಶ್ರ್ವವಾಯುಪೀಡಿತ ರಾಜಕಾರಣ ಹಾಗೂ ನಂಜುಭರಿತ ಮೀಡಿಯಾ ಸರ್ಕಾರದೊಂದಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಕೈ ಕಲೆಸಿರುವ ಅಪರಾಧಿಗಳು.

ಲಾಕ್ ಡೌನ್ ಕಾರಣ ನೇರವಾಗಿ ಉದ್ಯೋಗ ಕಳೆದುಕೊಂಡಿರುವವರ ಸಂಖ್ಯೆ 12 ಕೋಟಿಗೂ ಅಧಿಕ. ಈ ಪೈಕಿ ವಲಸೆ ಕಾರ್ಮಿಕರು ನಾಲ್ಕು ಕೋಟಿ ಮಂದಿ. ತ್ರಿಶಂಕುಗಳಾಗಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರ ಸ್ಥಿತಿಗತಿಗಳ ಕುರಿತು SWAN (Stranded Workers Action Network) ನಡೆಸಿದ ಸಮೀಕ್ಷೆಯಲ್ಲಿ ಹೊರಬಿದ್ದಿರುವ ಅಂಶಗಳು ಸಮಾಜದ ಆತ್ಮಸಾಕ್ಷಿಯನ್ನೂ ಚುಚ್ಚಿಲ್ಲ, ಇತ್ತ ಸರ್ಕಾರದ ಕಣ್ಣನ್ನೂ ತೆರೆಸಿಲ್ಲ. ದೀನದಲಿತರ ಪಾಲಿಗೆ ಸರ್ಕಾರದ ಕಣ್ಣುಗಳು ಶಾಶ್ವತವಾಗಿ ಕುರುಡಾಗಿವೆ ಎಂಬ ಹಳೆಯ ಸತ್ಯವನ್ನು ಈ ಪ್ರಹಸನ ಮತ್ತೊಮ್ಮೆ ಬಯಲಿಗೆಳೆದಿದೆ.

SWAN ಸಮೀಕ್ಷೆಯ ಪ್ರಕಾರ ಶೇ.78ರಷ್ಟು ವಲಸೆ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯಲ್ಲಿ ಸಂಬಳ ಸಿಕ್ಕಿಲ್ಲ. ಶೇ.82ರಷ್ಟು ಮಂದಿಗೆ ಸರ್ಕಾರದಿಂದ ಯಾವುದೇ ಬಗೆಯ ದಿನಸಿ ದೊರೆತಿಲ್ಲ. ಶೇ.64ರಷ್ಟು ಕಾರ್ಮಿಕರ ಜೇಬುಗಳಲ್ಲಿ ಉಳಿದಿದ್ದ ಹಣ ನೂರು ರುಪಾಯಿಗೂ ಕಡಿಮೆ. ಯಾವ ಆಸರೆಯೂ ಇಲ್ಲದೆ ಹಸಿದು ಕಂಗೆಟ್ಟವರು ಸಾಯುವುದಿದ್ದರೂ ಅದು ಸ್ವಂತ ಊರಿನಲ್ಲೇ ಎಂದು ಹಂಬಲಿಸುವುದು ಅಪರಾಧವೇ? ಕೋಟಿ ಮಂದಿಗೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ನೋಂದಣಿ ಮಾಡಿಸಿಕೊಂಡಿದ್ದಾರೆ.

ತಾನು ಚಹಾ ಮಾರಿದ ಬಡವನೆಂದು ಹೇಳಿಕೊಳ್ಳುತ್ತಲೇ ಸುಖ ಸುಪ್ಪತ್ತಿಗೆಗಳಲ್ಲಿ ಓಲಾಡುವ ಪ್ರಧಾನಮಂತ್ರಿಯವರು ಬಡ ಕಾರ್ಮಿಕರನ್ನು ಲೆಕ್ಕಕ್ಕೇ ಇಡದಿರುವುದು ಅತ್ಯಂತ ಸೋಜಿಗದ ಮತ್ತು ಆಘಾತಕಾರಿ ಅಂಶ. ಈ ವಿಶಾಲ ದೇಶದಲ್ಲಿ ಕೋಟ್ಯಂತರ ವಲಸೆ ಕಾರ್ಮಿಕರು ನಾನಾ ರಾಜ್ಯಗಳಲ್ಲಿ ಹೊಟ್ಟೆಪಾಡಿಗಾಗಿ ಹರಡಿ ಹಬ್ಬಿದ್ದಾರೆ. ಆರ್ಥಿಕ ಚಟುವಟಿಕೆಯ ರಥಚಕ್ರಗಳನ್ನು ತಿರುಗಿಸುತ್ತಿದ್ದಾರೆ ಎಂಬ ಕಿಂಚಿತ್ ಅರಿವು ಅವರಿಗೆ ಇದ್ದಿದ್ದರೆ ಲಾಕ್ ಡೌನ್ ಅನ್ನು ಯೋಜಿಸಿಕೊಂಡು ಘೋಷಿಸುತ್ತಿದ್ದರು. ಟ್ರಂಪ್‍ಗೆ ರತ್ನಗಂಬಳಿ ಹಾಸಲೆಂದು, ಮಧ್ಯಪ್ರದೇಶದ ಸರ್ಕಾರ ಕೆಡವಲೆಂದು ಕರೋನಾ ಮಹಾಮಾರಿಯನ್ನು ನಿರ್ಲಕ್ಷಿಸಿದ್ದು ಸರ್ಕಾರದ ಅಪರಾಧ. ಇಲ್ಲವಾದರೆ ಲಾಕ್ ಡೌನನ್ನು ಮುಂಚಿತವಾಗಿಯೇ ಯೋಜಿಸಿ ವಲಸೆ ಕಾರ್ಮಿಕರು ಬಯಸಿದರೆ ಅವರ ರಾಜ್ಯಗಳು- ಊರುಗಳಿಗೆ ಮರಳಲು ವಾರದೊಪ್ಪತ್ತು ಅವಕಾಶ ಕಲ್ಪಿಸಬಹುದಿತ್ತು. ಸರ್ಕಾರದ ಈ ಬೇಜವಾಬ್ದಾರಿತನಕ್ಕೆ ಕೋಟ್ಯಂತರ ಕಾರ್ಮಿಕರು ಯಾಕೆ ಬೆಲೆ ತೆರಬೇಕಿತ್ತು? ಲಾಕ್ ಡೌನ್ ಘೋಷಣೆಗೆ ಮುನ್ನ ಮೋದಿಯವರು ನೀಡಿದ ಕಾಲಾವಕಾಶ ನಾಲ್ಕು ದಿನಗಳಲ್ಲ, ಬದಲಾಗಿ ಕೇವಲ ನಾಲ್ಕು ತಾಸುಗಳು!

ಈ ಬೇಜವಾಬ್ದಾರಿ ಘೋಷಣೆಯ ನಂತರ ಕಾರ್ಮಿಕರಿಗೊಂದು ಕನಿಷ್ಠ ಭದ್ರತೆ ಒದಗಿಸುವ ಕೆಲಸವನ್ನಾದರೂ ಮಾಡಬೇಕಿತ್ತು. ಆದರೆ ಈ ಕೋಟ್ಯಂತರ ಕಾರ್ಮಿಕರು ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ನಡೆದುಕೊಂಡಿತು ಮೋದಿ ಸರ್ಕಾರ. ಅಂತಹ ಜೀವಿಗಳು ನಮ್ಮ ನಡುವೆ ಇದ್ದಾರೆಂದೂ, ಹಸಿವು ನಿದ್ರೆ ನೀರಡಿಕೆಗಳು ಅವರನ್ನೂ ಬಾಧಿಸುತ್ತವೆಂದೂ ಸರ್ಕಾರ ಮತ್ತು ಸಮಾಜ ಗಮನಿಸಿದ್ದು ಅವರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೆದ್ದಾರಿಗಳಿಗೆ ಇಳಿದಾಗಲೇ. ಆಗಲೂ ಅವರ ಘನತೆಯನ್ನು ಕಾಲಕಸವಾಗಿ ಕಾಣಲಾಯಿತು. ಅಂದು ಶುರುವಾದ ಪೊಲೀಸರ ಲಾಠಿ ಬೂಟುಗಳ ಹೊಡೆತಗಳು, ಅಮ್ಮ ಅಕ್ಕ ಪತ್ನಿಯ ಪ್ರಸ್ತಾಪಿಸಿ ಬೈಯ್ಯುವ ಕೆಟ್ಟ ಬೈಗಳು ಈಗಲೂ ನಿಂತಿಲ್ಲ. ಯಾವ ಅಪರಾಧಕ್ಕೆ ಅವರಿಗೆ ಇಂತಹ ಶಿಕ್ಷೆ?

ಆತ್ಮನಿರ್ಭರತೆ ಅಥವಾ ಸ್ವಾವಲಂಬನೆಯ ಪಾಠವನ್ನು ಪ್ರಧಾನಿ ಹೇಳಿದ್ದಾರೆ. ಆದರೆ ತಮ್ಮನ್ನು ಸದಾ ತುಳಿದು ಅಂಚಿಗೆ ಅಟ್ಟುತ್ತಿರುವ ಅಸಮಾನ ವ್ಯವಸ್ಥೆಯ ವಿರುದ್ಧ ನಿರ್ಗತಿಕ ಶ್ರಮಿಕ ವರ್ಗ ತನ್ನ ಅಸ್ತಿತ್ವಕ್ಕಾಗಿ ಸೆಣೆಸುತ್ತಲೇ ಬಂದಿದೆ. ಅದು ಆರಂಭದಿಂದಲೂ ಸ್ವಾವಲಂಬಿ. ಅಳಿದುಳಿದ ತನ್ನ ಪಾಪಪ್ರಜ್ಞೆಯನ್ನು ತೊಳೆದುಕೊಳ್ಳಲು ಈ ವರ್ಗಕ್ಕೆ ಭಿಕ್ಷೆಯ ಕಾಸು ಎಸೆಯುತ್ತ ಬಂದಿರಬಹುದು ಸರ್ಕಾರಗಳು.

ಈ ದೇಶದ ಬಂಡವಾಳಶಾಹಿ ಕಾರ್ಪೊರೇಟ್ ವಲಯಕ್ಕೆ ವರ್ಷ ವರ್ಷ ಬಜೆಟ್ಟಿನಲ್ಲಿ ಬಿಟ್ಟುಕೊಡಲಾಗುವ ಲಕ್ಷಾಂತರ ಕೋಟಿ ತೆರಿಗೆಗಳಿಗೆ ಹೋಲಿಸಿದರೆ ಶ್ರಮಿಕ ವರ್ಗಕ್ಕೆ ಸರ್ಕಾರ ನೀಡುವುದು ಬಿಡಿಗಾಸಲ್ಲದೆ ಇನ್ನೇನೂ ಅಲ್ಲ. ಮನೆಗಳಿಗೆ ಮರಳಲು ಈ ಜನವರ್ಗ ರೇಲುಗಾಡಿಯ ಟಿಕೆಟ್ ದರವನ್ನು ಕಾಸಿಗೆ ಕಾಸು ತೆತ್ತು ಭರಿಸಿದೆ ಎಂಬುದು ನೆನಪಿರಲಿ.

ಸಮಾನತೆಯ ಆಧಾರದ ಮೇಲೆ ಕಟ್ಟಲಾದ ಸಮಾಜಗಳಲ್ಲಿ ಬಂಡವಾಳದ ಹೆಗಲನ್ನು ಬೆವರು ಸವಾರಿ ಮಾಡಬೇಕು. ಆದರೆ ವಾಸ್ತವವಾಗಿ ಬೆವರಿನ ಬಡ ಹೆಗಲುಗಳು ಬಂಡವಾಳದ ಒಜ್ಜೆಯಡಿ ತತ್ತರಿಸಿವೆ.

ದೇಶದ 45 ಕೋಟಿ ಕಾರ್ಮಿಕರ ಪೈಕಿ ಸಂಘಟಿತ ವಲಯದ ಶ್ರಮಿಕರ ಸಂಖ್ಯೆ ಕೇವಲ 1.10 ಕೋಟಿ. ಉಳಿದವರಿಗೆ ಕಾಯಿದೆ ಕಾನೂನುಗಳ ರಕ್ಷಣೆ ಇಲ್ಲ. ಈಗ ಮಹಾಮಾರಿಯ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು, ಸಂಘಟಿತ ವಲಯದ ಕಾರ್ಮಿಕರಿಗೂ ಕಾನೂನು ರಕ್ಷಣೆಯ ನೆರಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕಾರ್ಮಿಕ ಕಾನೂನುಗಳನ್ನು ಕಾರ್ಮಿಕರ ಹಿತದ ವಿರುದ್ಧ ಬಗ್ಗಿಸಲಾಗುತ್ತಿದೆ. ಈಗಾಗಲೆ ಜರ್ಝರಿತಗೊಂಡಿರುವ ಶ್ರಮಿಕ ಶಕ್ತಿಯ ಹೊಟ್ಟೆ ಮತ್ತು ಬೆನ್ನುಗಳ ಮೇಲೆ ಬಾರಿಸಲಾಗುತ್ತಿದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯಿದೆ, ಜೀತದಾಳು ಪದ್ಧತಿ ರದ್ದು ಕಾಯಿದೆ ಹಾಗೂ ಸಕಾಲಕ್ಕೆ ಕೂಲಿ ಪಾವತಿ ಮಾಡುವ ಕಾನೂನನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಮಿಕ ರಕ್ಷಣಾ ಕಾಯಿದೆ ಕಾನೂನುಗಳನ್ನು ಉತ್ತರಪ್ರದೇಶ ಸರ್ಕಾರ ಮೂರು ವರ್ಷಗಳ ಕಾಲ ರದ್ದು ಮಾಡಿದೆ. ಗುಜರಾತ್ ಸರ್ಕಾರ 1,200 ದಿನಗಳ ಕಾಲ ಈ ಕಾಯಿದೆಗಳಿಂದ ಕೈಗಾರಿಕೆಗಳಿಗೆ ವಿನಾಯಿತಿ ಘೋಷಿಸಿದೆ. ಹಾಲಿ ಎಂಟು ತಾಸುಗಳ ದುಡಿಮೆ ಹನ್ನೆರಡು ತಾಸುಗಳಿಗೆ ಹೆಚ್ಚಲಿದೆ. ಮಧ್ಯಪ್ರದೇಶ ಸರ್ಕಾರ ಮುಂದಿನ ಸಾವಿರ ದಿನಗಳ ಅವಧಿಯಲ್ಲಿ ಅರಂಭಿಸುವ ಕೈಗಾರಿಕೆಗಳಿಗೆ ಎಲ್ಲ ಕಾರ್ಮಿಕ ಕಲ್ಯಾಣ ಕಾನೂನುಗಳಿಂದ ವಿನಾಯಿತಿ ನೀಡಿದೆ.

ರಾಜಸ್ತಾನ, ಪಂಜಾಬ್, ಮಧ್ಯಪ್ರದೇಶ, ಹರಿಯಾಣ ಇದೇ ಹಾದಿ ತುಳಿದಿವೆ. ಮುಂಬರುವ ದಿನಗಳಲ್ಲಿ ಕರ್ನಾಟಕವೂ ಸೇರಿದಂತೆ ಹೆಚ್ಚು ಹೆಚ್ಚು ರಾಜ್ಯಗಳು ಈ ಸಾಲನ್ನು ಸೇರಲಿವೆ.

ಬಡ ಕಾರ್ಮಿಕ ವರ್ಗವನ್ನು ಬಂಡವಾಳಕ್ಕೆ ಒತ್ತೆಯಾಳಾಗಿ ಇರಿಸಲು ಸರ್ಕಾರವೇ ಮುಂದಾಗಿರುವುದು ವಿಕಟ ವಿಡಂಬನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...