Homeಅಂಕಣಗಳುಸಂಪ್ರದಾಯ ಎಂಬುದು ನಮ್ಮ ಬದುಕಿಗಿಂತ ಘನವಾದದ್ದೇ?

ಸಂಪ್ರದಾಯ ಎಂಬುದು ನಮ್ಮ ಬದುಕಿಗಿಂತ ಘನವಾದದ್ದೇ?

- Advertisement -
- Advertisement -

ಭಾರತವನ್ನೂ ಒಳಗೊಂಡಂತೆ ಜಗತ್ತಿನ ಸಾಂಪ್ರದಾಯಿಕ ಸಮಾಜಗಳು ಪರಂಪರೆ, ಧರ್ಮ ಮತ್ತು ಚರಿತ್ರೆಗಳನ್ನು ಪರಿಭಾವಿಸುವ ಪರಿ ಕಾಲದಿಂದ ಕಾಲಕ್ಕೆ ಆತಂಕಗಳನ್ನು ಹುಟ್ಟುಹಾಕುತ್ತಲೇ ಬಂದಿದೆ. ಪರಂಪರೆ, ಸಂಸ್ಕøತಿ, ಚರಿತ್ರೆ, ಧರ್ಮ, ರಾಷ್ಟ್ರೀಯತೆ, ಸಂಪ್ರದಾಯ, ಆಚರಣೆಗಳು ಯಾವತ್ತೂ ಅಬಾಧಿತವಾಗಿರಬೇಕು. ಇವು ಸರ್ವಕಾಲಕ್ಕೂ ಮೂಲರೂಪದಲ್ಲಿಯೇ ಉಳಿಯಬೇಕು. ಬರುವ ತಲೆಮಾರುಗಳು ಇವುಗಳನ್ನು ಖಿಲಗೊಳ್ಳದಂತೆ ಕಾಪಾಡಿಕೊಂಡು ಬರಬೇಕು ಎಂಬ ತಲ್ಲಣರೂಪಿ ಹಪಾಹಪಿ ಈ ಸಮಾಜಗಳಲ್ಲಿ ಉಳಿದುಕೊಂಡು ಬಂದಿದೆ. ಪರಂಪರೆ, ಧರ್ಮ ಇತ್ಯಾದಿಗಳು ನಮ್ಮ ಜೀವನದ ಅನೂಹ್ಯ ಅವಕಾಶದಲ್ಲಿದ್ದು (Sಠಿಚಿಛಿe) ನಮ್ಮ ಬದುಕನ್ನು ರೂಪಿಸುತ್ತಾ ಬಂದಿವೆ ಎಂದು ಈ ಸಮಾಜಗಳು ನಂಬಿಕೊಂಡು ಬಂದಿವೆ. ಈ ಕಾರಣಕ್ಕಾಗಿ ಸಾಂಪ್ರದಾಯಿಕ ಸಮಾಜದ ನಿತ್ಯದ ಬದುಕು ಮತ್ತು ಅದರ ಆಗುಹೋಗುಗಳ ನಿಯಂತ್ರಕ ಶಕ್ತಿಗಳಾಗಿ ಪರಂಪರೆ, ಧರ್ಮ ಮತ್ತು ಚರಿತ್ರೆಗಳು ಭಾವಿಸಲ್ಪಟ್ಟಿವೆ. ವರ್ತಮಾನದ ತಲ್ಲಣಗಳು ಬಾಧಿಸುವಾಗೆಲ್ಲ ಈ ಸಮಾಜಗಳು ಚರಿತ್ರೆಯ ಇಲ್ಲವೆ ಪುರಾಣಗಳ ಆವರಣದಲ್ಲಿ ಪರಿಹಾರಗಳನ್ನು ಹುಡುಕಲು ಧಾವಿಸುತ್ತವೆ. ನಿತ್ಯದ ಬವಣೆಗಳನ್ನು ಮತ್ತು ಹಿಂಜರಿಕೆಗಳನ್ನು ನೀಗಿಕೊಳ್ಳಲು ಈ ಸಮುದಾಯಗಳು ಪುರಾಣಗಳ ಕಡೆ ಮುಖ ಮಾಡುವುದು ಒಂದು ಬಗೆಯ ವ್ಯಸನದಂತೆ ಭಾಸವಾಗುತ್ತಿದೆ. ಪರಂಪರೆ, ಚರಿತ್ರೆ, ಸಂಸೃತಿ ಎಂಬ ಅಮೂರ್ತ ಸಂಗತಿಗಳಿಗೆ ವರ್ತಮಾನವನ್ನು ರೂಪಿಸಿಬಿಡುವ ಇಂತಹ ಅಗಾಧ ಶಕ್ತಿ ಇದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಇಂತಹ ಪ್ರಶ್ನೆಯನ್ನು ಕೇಳಿಕೊಂಡ ಸಮುದಾಯಗಳು ಮಧ್ಯಕಾಲೀನ ಯುರೋಪಿನ ಹಣೆಬರಹವನ್ನೇ ಬದಲಿಸಿದವು. ಕ್ಯಾಥೋಲಿಕ್ ಚರ್ಚ್‍ನ ಮೂಲಭೂತವಾದ ಮತ್ತು ಅದು ಹುಟ್ಟುಹಾಕಿದ್ದ ಅಂದಿನ ಊಳಿಗಮಾನ್ಯ ದುರಾಡಳಿತವನ್ನು ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದ ದುಡಿವ ಜನ ಮೂಲೋತ್ಪಾಟನೆ ಮಾಡಿದರು. ಹೊಸ ಯುರೋಪ್ ಜನ್ಮ ತಾಳಿತು. ಯುರೋಪ್ ಪುನರುಜ್ಜೀವನಗೊಂಡು ಹೊಸ ದಿಕ್ಕಿಗೆ ನಡೆದುಕೊಂಡು ಹೋಯಿತು. ಹೊಸ ಬದುಕು ಅರಳಿ ನಿಂತು ಹಳೆಯ ಪರಂಪರೆ, ಸಂಸ್ಕøತಿಯ ಹೆಸರಲ್ಲಿ ಅಸ್ತಿತ್ವದಲ್ಲಿದ್ದ ಮೂಲಭೂತವಾದ ಮತ್ತು ಊಳಿಗಮಾನ್ಯ ದುರಾಡಳಿತಗಳು ಕೊನೆಗೊಂಡವು. ಹಳೆಯ ಪರಂಪರೆ ಮತ್ತು ಧಾರ್ಮಿಕ ನಂಬಿಕೆಗಳಿಗಾಗಿ ಮಧ್ಯಕಾಲೀನ ಯುರೋಪಿನ ಸಮುದಾಯಗಳು ತಮ್ಮ ಬದುಕನ್ನು ಅರಳಿಸುವ ಹೊಸ ಕನಸುಗಳನ್ನು ಕಳೆದುಕೊಳ್ಳಲಿಲ್ಲ. ಫ್ರಾನ್ಸ್‍ನಲ್ಲಿ ಆದ ರಾಜಕೀಯ ಬದಲಾವಣೆಗಳು, ರಷ್ಯಾ, ಚೀನಾ, ವಿಯಟ್ನಾಮ್, ಭಾರತ ಮತ್ತು ಕ್ಯೂಬಾಗಳ ಮರುಹುಟ್ಟು ಕೇವಲ ಪರಂಪರೆಯ ರೂಢಿಗತ ಸಂಗತಿಗಳಿಂದ ಆದದ್ದಲ್ಲ. ಬದುಕುವ ಸ್ವಾತಂತ್ರ್ಯವನ್ನು ಹಂಬಲಿಸುವ ಜನ ದೇಶಕಾಲಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ. ಪರಂಪರೆ, ಸಂಸ್ಕøತಿ, ಚರಿತ್ರೆಗಳು ಅಪೌರುಷೇಯವಾದವುಗಳಲ್ಲ. ಅವು ಜನರ ಬದುಕಿನ ಉತ್ಪನ್ನಗಳು. ಮನುಷ್ಯನ ಬದುಕು ಬದಲಾದಂತೆ ಇವೂ ಬದಲಾಗುತ್ತವೆ. ಬದಲಾಗದೇ ಇರುವ ಸಂಗತಿಗಳು ಅವಶೇಷಗಳಂತಿದ್ದು, ಒಂದು ದಿನ ನಶಿಸಿ ಹೋಗುತ್ತವೆ. ಆದರೆ ಬದಲಾವಣೆಗಳನ್ನು ಬಯಸದ ಜನ, ಪರಂಪರೆ, ಸಂಸ್ಕøತಿ ಮತ್ತು ಧರ್ಮಗಳ ಹೆಸರಲ್ಲಿ ಅವಶೇಷಗಳನ್ನೇ ಮೋಹಿಸುತ್ತಾ ಬಂದಿದ್ದಾರೆ. ಭಯೋತ್ಪಾದನೆ, ಜಾತಿವಾದ, ಕೋಮುವಾದ, ಫ್ಯಾಸಿಸಮ್‍ಗಳ ಮೂಲಗಳಿರುವುದು ಪರಂಪರೆಯ ಈ ಮೋಹದಲ್ಲಿ. ಬದಲಾವಣೆಗಳನ್ನು ದ್ವೇಷಿಸುವ ಮೂಲಭೂತವಾದ ಜಗತ್ತಿನ ಎಲ್ಲ ಅಮಾಯಕರ ರಕ್ತದ ರುಚಿ ನೋಡಿದೆ, ನೋಡುತ್ತಲೂ ಇದೆ.
ಶಬರಿಮಲೆಯ ಅಯ್ಯಪ್ಪನ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿರಾಕರಿಸುತ್ತಿರುವ ಜನರ ಮೌಢ್ಯವನ್ನು ನೋಡಿ ಮೇಲಿನ ಟಿಪ್ಪಣಿಯನ್ನು ಬರೆಯಬೇಕಾಯಿತು. ಶಬರಿಮಲೆಯ ದೇವಾಲಯಕ್ಕೆ ಪ್ರವೇಶಿಸುವ ಮಹಿಳೆಯರನ್ನು ತಡೆಯಬಾರದೆಂದೂ, ದೇವಾಲಯ ಪ್ರವೇಶ ಮಹಿಳೆಯರ ಹಕ್ಕು ಎಂದು ಸುಪ್ರಿಮ್ ಕೋರ್ಟ್ ಬಹುಮತದ ತೀರ್ಪು ನೀಡಿದೆ. ಈ ತೀರ್ಪು ಒಂದು ಅರ್ಥದಲ್ಲಿ ಪರಂಪರೆಯನ್ನು ಕುರುಡಾಗಿ ಮೋಹಿಸುವ ಜನರಿಗೆ ಚಾಟಿ ಬೀಸಿದೆ. 1965ರಲ್ಲಿ 10 ರಿಂದ 50 ವರ್ಷಗಳ ಒಳಗಿನ ಮಹಿಳೆಯರಿಗೆ ಕೇರಳ ಸರ್ಕಾರ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶವನ್ನು ನಿರಾಕರಿಸಿತ್ತು. 10 ರಿಂದ 50 ವರ್ಷಗಳ ವಯಸ್ಸಿನ ಮಹಿಳೆಯರು ಮುಟ್ಟಾಗುವುದರಿಂದ ಅವರು ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಅನರ್ಹರು ಎಂಬ ಕೇರಳ ಸರ್ಕಾರದ ನಿರ್ಧಾರ ಈ ತೀರ್ಪಿನಿಂದಾಗಿ ರದ್ದಾದಂತಾಗಿದೆ. ಆದರೆ, ಮಹಿಳೆಯರ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವುದು ಕೇವಲ ಕೇರಳ ಸರ್ಕಾರದ ನಿರ್ಧಾರವಲ್ಲ. ಆರಾಧನಾ ಸ್ಥಳಗಳ ಪ್ರವೇಶವನ್ನು ನಿರ್ಬಂಧಿಸುವ ವಿಧಿಗಳು ಹಿಂದೂ ಧರ್ಮದಲ್ಲಿ ಹಾಸುಹೊಕ್ಕಾಗಿವೆ. ಯಾರು ತಪಸ್ಸು ಮಾಡಬೇಕು, ಯಾರು ಓದಬೇಕು, ಜ್ಞಾನವನ್ನು ಪಡೆಯಲು ಯಾರು ಅರ್ಹರು, ಯಾರು ದೇವರಿಗೆ ಹತ್ತಿರವಾಗಬೇಕು, ಯಾರು ದೇವರನ್ನು ಸಮೀಪಿಸಬಹುದು ಎಂಬ ವಿಧಿಗಳು ಹಿಂದೂ ಧರ್ಮಶಾಸ್ತ್ರದಲ್ಲಿ ಪದೇಪದೇ ಸ್ಪಷ್ಟಪಡಿಸಲ್ಪಟ್ಟಿವೆ. ಈ ವಿಧಿಗಳನ್ನು ಪರಂಪರೆಯ ವ್ಯಾಮೋಹಿಗಳು

ಕಾಲದಿಂದ ಕಾಲಕ್ಕೆ ಜೀವಂತವಾಗಿಟ್ಟುಕೊಂಡೇ ಬಂದಿದ್ದಾರೆ. ಕೆಳಜಾತಿಯ ದುಡಿವ ಜನರನ್ನು ಮತ್ತು ಮಹಿಳೆಯರನ್ನು ಆರಾಧನಾ ಸ್ಥಳಗಳಿಂದ ಕಟ್ಟುನಿಟ್ಟಾಗಿ ಬಹಿಷ್ಕರಿಸಿದ್ದು ಮತ್ತು ಅದನ್ನು ಪರಂಪರೆಯ ಹೆಸರಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಧರ್ಮವೆಂದರೆ ಅದು ಹಿಂದು ಧರ್ಮ ಮಾತ್ರ. ಹಿಂದೂ ಧರ್ಮದ ಈ ಜೀವವಿರೋಧಿ ಪರಂಪರೆಗೆ ಪರ್ಯಾಯವಾಗಿ ಅನೇಕ ದರ್ಶನಗಳು ಭಾರತದಲ್ಲಿ ಹುಟ್ಟಿವೆ. ಬೌದ್ಧ ದರ್ಶನ ಮತ್ತು ವಚನ ಚಳುವಳಿಯ ಆಶಯಗಳು, ಹಿಂದೂ ಧರ್ಮದ ರೂಢಿಗತ ಚಿಂತನೆಗಳಿಗೆ ಪರ್ಯಾಯಗಳನ್ನು ಮಾತ್ರ ರೂಪಿಸಲಿಲ್ಲ. ಈ ದೇಶದ ಬಹುಸಂಖ್ಯಾತ ದುಡಿವ ಜನರ ಅಂತಃಸ್ಸತ್ವವನ್ನು ನ್ಯಾಯಬದ್ಧಗೊಳಿಸುವ ತತ್ವದರ್ಶನವನ್ನು ರೂಪಿಸಿದವು. ತೀರಾ ಇತ್ತೀಚೆಗೆ, ದೇವಾಲಯ ಪ್ರವೇಶವನ್ನು ಎಲ್ಲ ಜನರ ಹಕ್ಕು ಎಂದು ಪ್ರತಿಪಾದಿಸಿದ್ದು ಅಂಬೇಡ್ಕರ್. ಅದಕ್ಕೂ ಮೊದಲು ನಾರಾಯಣಗುರು ಕೆಳಜಾತಿಗಳ ಮತ್ತು ಮಹಿಳೆಯರ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದರು. ಆದರೆ ಪೆರಿಯಾರ್ ಹಿಂದೂ ದೈವಗಳನ್ನು ಮಾತ್ರವಲ್ಲ, ದೇವಾಲಯಗಳನ್ನೇ ನಿರಾಕರಿಸಿದರು. ತನ್ನೆಲ್ಲಾ ಮೂರ್ತಿಭಂಜಕ ಚಿಂತನೆಗಳಿಂದ ಪೆರಿಯಾರ್ ದಲಿತರು ಮತ್ತು ಮಹಿಳೆಯರನ್ನೂ ಒಳಗೊಂಡಂತೆ ಬಹಿಷ್ಕøತ ಭಾರತದ ಬಹುಸಂಖ್ಯಾತ `ಹತಭಾಗ್ಯರು’ ನಡೆಯಬಹುದಾದ ಹಾದಿಗೆ ದಿಕ್ಸೂಚಿಯೇ ಆಗಿದ್ದರು, ಆಗಿದ್ದಾರೆ ಸಹ.

ಮಹಿಳೆಯರು, ಶಬರಿಮಲೆಯ ದೇವಾಲಯ ಪ್ರವೇಶದ ಕುರಿತ ನ್ಯಾಯಾಲಯದ ತೀರ್ಪು ಮೇಲ್ನೋಟಕ್ಕೆ ಕ್ರಾಂತಿಕಾರಿ ನಡೆಯಂತೆ ಕಾಣುತ್ತಿದೆ. ಈ ತೀರ್ಪು ಸಾರಾಂಶದಲ್ಲಿ, ಸಂವಿಧಾನದಲ್ಲಿರುವ ಸಹಜ ಹಕ್ಕುಗಳ ಪ್ರತಿಪಾದನೆ ಮಾಡಿದೆಯಷ್ಟೆ. ನ್ಯಾಯಾಲಯದ ಈ ತೀರ್ಪನ್ನು ಸಂಭ್ರಮಿಸುವ ಕಾಲಘಟ್ಟದಲ್ಲಿ ನಾವು ಬದುಕುತ್ತಿಲ್ಲ. ಸಂವಿಧಾನವನ್ನು ಒಪ್ಪದ, ಬಹುಸಂಖ್ಯಾತ ದುಡಿವ ಜನರ ಹಕ್ಕುಗಳನ್ನು ನಿರಾಕರಿಸುವ ಮೂಲಭೂತವಾದಿ ನವಬ್ರಾಹ್ಮಣ್ಯ ಎಲ್ಲೆಡೆ ಸಂಚಯಿಸುತ್ತಿದೆ. ಮುಟ್ಟಾಗುವ ಮಹಿಳೆಯರ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವ ಮೂಲಭೂತವಾದಿ ಮನಸ್ಥಿತಿಯ ಹಿಂದೆ ಕೇವಲ ಮಡಿಮೈಲಿಗೆಯ ಕರ್ಮಠತೆ ಮಾತ್ರ ಕೆಲಸ ಮಾಡುತ್ತಿಲ್ಲ. ಎಲ್ಲಾ ಜಾತಿಯ ಬಹುಸಂಖ್ಯಾತ ದುಡಿವ ಜನರ ಸಹಜ ಹಕ್ಕುಗಳನ್ನು ದಮನ ಮಾಡುವ ಹುನ್ನಾರು ಈ ಕರ್ಮಠತೆಯ ಹಿಂದೆ ಅಡಗಿ ಕುಳಿತಿದೆ. ಅಂಬೇಡ್ಕರ್, ಅಸ್ಪøಶ್ಯರ ದೇವಾಲಯ ಪ್ರವೇಶವನ್ನು ಅತ್ಯಂತಿಕವೆಂದು ಭಾವಿಸಿರಲಿಲ್ಲ. ಸಾಮಾಜಿಕ ಅಸಮಾನತೆಯನ್ನು ನಿರ್ಲಜ್ಜವಾಗಿ ಸಮರ್ಥಿಸುತ್ತಿದ್ದ ಮತ್ತು ಆಚರಣೆಯಲ್ಲಿಡುತ್ತಿದ್ದ ದೇವಾಲಯಗಳು, ಕೆರೆಗಳು ಮುಂತಾದ ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕೆಂದು ಅಂಬೇಡ್ಕರ್ ಬಯಸಿದ್ದರು. ದೇವಾಲಯಗಳು, ದೈವಗಳು, ನಂಬಿಕೆ ಸಂಪ್ರದಾಯಗಳು ಈ ದೇಶದ ಬಹುಸಂಖ್ಯಾತ ದುಡಿವ ಜನರನ್ನು ವಿಮೋಚನೆಗೊಳಿಸಲಾರವು ಎಂಬ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು ‘ಹಿಂದುವಾಗಿ ಸಾಯಲಾರೆ’ ಎಂದು ಬೌದ್ಧ ಧಮ್ಮದ ಕಡೆ ನಡೆದುಹೋದರು. ಅಂಬೇಡ್ಕರ್, ಧರ್ಮವನ್ನು ಮತ್ತು ಅದರ ಕರ್ಮಠ ಆವರಣವನ್ನು ಸಂಪೂರ್ಣವಾಗಿ ನಿರಾಕರಿಸಿದರು. ಅವರು ಬೌದ್ಧ ಧಮ್ಮವನ್ನು ನೆಚ್ಚಿಕೊಳ್ಳುವುದರ ಮೂಲಕ ಹೊಸ ಆಧ್ಯಾತ್ಮಿಕ ಅವಕಾಶವನ್ನು ಶೋಷಿತರ ಮುಂದೆ ತೆರೆದಿಟ್ಟರು. ಕರ್ಮಠ ನಂಬಿಕೆಗಳಿಗೆ, ಮೂಲಭೂತವಾದಕ್ಕೆ, ಸಾಂಸ್ಥಿಕ ಧರ್ಮವೊಂದಕ್ಕೆ ಬುದ್ಧನ ಚಿಂತನೆಗಳ ಮೂಲಕ ಎದುರೇಟು ಕೊಟ್ಟರು. ಹೀಗಾಗಿ, ಅಂಬೇಡ್ಕರ್ ಬುದ್ಧಿಸಮ್‍ನ್ನು ಧರ್ಮವನ್ನಾಗಿ ಮಾತ್ರ ಪರಿಭಾವಿಸಲಿಲ್ಲ. ಬುದ್ಧಿಸಮ್ ಶೋಷಿತರ ವಿಮೋಚನೆಯನ್ನು ಸಾಧ್ಯವಾಗಿಸಬಲ್ಲ, ಅಸಮಾನತೆಯ ಆಚರಣೆಗೆ ಆಸ್ಪದ ನೀಡದ ಒಂದು ಪ್ರತಿದರ್ಶನ ಎಂದೇ ಅಂಬೇಡ್ಕರ್ ಭಾವಿಸಿದ್ದರು. ಈ ಮೂಲಕ, ನಿತ್ಯದ ಬದುಕಲ್ಲಿ ತಮಗೆ ಬೇಕಾದದ್ದನ್ನು ಸ್ವೀಕರಿಸಿ, ಬೇಡವಾದದ್ದನ್ನು ನಿರಾಕರಿಸಿಬಿಡುವ ಮುಕ್ತ ಅವಕಾಶವನ್ನು ಅಂಬೇಡ್ಕರ್ ಶೋಷಿತರ ಮುಂದೆ ತೆರೆದಿಟ್ಟರು.
ಸಾವಿರಾರು ವರ್ಷಗಳಿಂದ ಪೂಜಿಸಲ್ಪಡುತ್ತಿರುವ ದೈವಗಳಿಗೆ ತಮ್ಮ ಸುತ್ತ ನಡೆಯುತ್ತಿರುವ ಕ್ರೂರ ಶೋಷಣೆ ಮತ್ತು ಅಸಮಾನತೆಗಳನ್ನು ತೊಡೆದು ಹಾಕುವ ಸಾಮಥ್ರ್ಯವಿಲ್ಲ ಎಂದಾದ ಮೇಲೆ ಅವುಗಳನ್ನು ನಾವೇಕೆ ಪೂಜಿಸಬೇಕು? ಲಿಂಗಭೇದವನ್ನು, ಅಸ್ಪøಶ್ಯತೆಯನ್ನು ಆಚರಿಸುವ ಕೇಂದ್ರಗಳಂತಿರುವ ದೇವಾಲಯಗಳು ನಮಗೆ ಯಾಕೆ ಬೇಕು? ದೇವಾಲಯ ಪ್ರವೇಶ ನಮಗೆ ವರ್ತಮಾನದ ತುರ್ತಾಗಬೇಕೆ? ಅಂಬೇಡ್ಕರ್ ಹೇಳಿದಂತೆ, ಸಾಮಾಜಿಕ ಗುಲಾಮರಿಗೆ ಅವಕಾಶ ಮಾಡಿಕೊಡುವ ಎಲ್ಲವನ್ನೂ ನಾವು ನಿರಾಕರಿಸುವ ಅಗತ್ಯವಿದೆ. ವಿಮೋಚನೆಗಾಗಿ ಇದು ಸಂಪೂರ್ಣ ನಿರಾಕರಣೆಯ ಹಠಯೋಗ. ನಮಗೀಗ ಬೇಕಿರುವುದು ಲಿಂಗಭೇದ, ಅಸ್ಪøಶ್ಯತೆಯನ್ನ ಆಚರಿಸುವ ಕೂಪಗಳಂತಾಗಿರುವ ದೇವಾಲಯಗಳಲ್ಲ. ನಮ್ಮನ್ನು ಕುಬ್ಜರನ್ನಾಗಿಸುವ ನಂಬಿಕೆ, ಸಂಪ್ರದಾಯ, ಧರ್ಮಗಳು ನಮಗೆ ಬೇಕಿಲ್ಲ. ಮನುಷ್ಯನ ಬದುಕಿನ ಘನತೆಯನ್ನು ಎತ್ತಿಹಿಡಿಯದಿದ್ದಲ್ಲಿ ಅವುಗಳ ವರ್ತಮಾನದ ಅಗತ್ಯವನ್ನು ಪ್ರಶ್ನಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಯಾವುದೇ ಪರಂಪರೆಗೆ ಎಷ್ಟೇ ಸಾವಿರ ವರ್ಷದ ಇತಿಹಾಸವಿರಲಿ, ಆ ಪರಂಪರೆ ವರ್ತಮಾನವನ್ನು ನಿನ್ನೆಗಳಿಗೆ ಬಲಿಕೊಡುವಂತಿದ್ದರೆ ಅದು ನಮಗೆ ಬೇಡ. ಅಂತಹ ಪರಂಪರೆ ನಮ್ಮ ಬದುಕಿಗಿಂತ ಘನವಾದದ್ದೇನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....