Homeಮುಖಪುಟನಿಮ್ಮ ಹಳೆಯ ಫೇಸ್‌ಬುಕ್‌ ಪೋಸ್ಟ್‌ಗಳನ್ನು ಒಟ್ಟಿಗೆ ಅಳಿಸಬೇಕೆ? ಹೀಗೆ ಮಾಡಿ...

ನಿಮ್ಮ ಹಳೆಯ ಫೇಸ್‌ಬುಕ್‌ ಪೋಸ್ಟ್‌ಗಳನ್ನು ಒಟ್ಟಿಗೆ ಅಳಿಸಬೇಕೆ? ಹೀಗೆ ಮಾಡಿ…

ನಿಮ್ಮ ಮೊಬೈಲ್‌ ಫೇಸ್‌ಬುಕ್‌ ಆಪ್‌ನಲ್ಲಿ ಹಳೆಯ‌ ಪೋಸ್ಟ್‌ಗಳನ್ನು ಒಟ್ಟಿಗೆ ಅಳಿಸುವ, ದಿನಾಂಕವಾರು ಅಳಿಸುವ ಅಥವಾ ವ್ಯಕ್ತಿವಾರು ಅಳಿಸುವ ಹೊಸ ಫ್ಯೂಚರ್‌ ಅನ್ನು ಫೇಸ್‌ಬುಕ್‌ ಬಿಡುಗಡೆ ಮಾಡಿದೆ.

- Advertisement -
- Advertisement -

ಸಾಮಾಜಿಕ ಜಾಲತಾಣಗಳು ಹೊಸದನ್ನು ಕಲಿಯಲು, ಹೆಚ್ಚು ತಿಳಿದುಕೊಳ್ಳಲು, ಬೇಸರ ನಿವಾರಿಸಲು ಬಹಳಷ್ಟು ಸಹಾಯ ಮಾಡಿವೆ. ಆದರೆ ಕೆಲವರಿಗೆ ಇವು ಸಂಕಷ್ಟಗಳನ್ನು ಸಹ ತಂದಿವೆ. ಫೇಸ್‌ಬುಕ್‌ ನಲ್ಲಿ ಎಂದೋ, ಯಾವುದೋ ಮನಸ್ಥಿತಿಯಲ್ಲಿ ಹಾಕಿದ ಪೋಸ್ಟ್‌ಗಳು ಈಗ ಮತ್ತೆ ಕಾಣಿಸಿಕೊಂಡು ಕೆಲವರಿಗೆ ಮುಜುಗರ ಉಂಟು ಮಾಡುತ್ತಿರುವುದು ಹೌದು. ಹತ್ತು ವರ್ಷದ ಹಿಂದೆ ಹಾಕಿದ ಯಾವುದೋ ಫೋಟೊಗೆ ಯಾರಾದರೂ ಲೈಕ್‌ ಕಮೆಂಟ್‌ ಮಾಡಿದರೆ ಸಾಕು, ಅಥವಾ ಮೆಮೋರಿಸ್‌ ರೂಪದಲ್ಲಿ ಅದು ಮತ್ತೆ ಮೇಲೆ ಬಂದು ಕಾಣಿಸಿಕೊಳ್ಳುತ್ತದೆ. ಇದು ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಕಷ್ಟವಾಗುತ್ತಿರಬಹುದು.

ಅಂತಹ ಸಮಸ್ಯೆಗೆ ಫೇಸ್‌ಬುಕ್‌ ಈಗ ಪರಿಹಾರ ನೀಡಿದೆ. ನಿಮ್ಮ ಮೊಬೈಲ್‌ ಫೇಸ್‌ಬುಕ್‌ ಆಪ್‌ನಲ್ಲಿ ಹಳೆಯ‌ ಪೋಸ್ಟ್‌ಗಳನ್ನು ಒಟ್ಟಿಗೆ ಅಳಿಸುವ, ದಿನಾಂಕವಾರು ಅಳಿಸುವ ಅಥವಾ ವ್ಯಕ್ತಿವಾರು ಅಳಿಸುವ ಹೊಸ ಫ್ಯೂಚರ್‌ ಅನ್ನು ಫೇಸ್‌ಬುಕ್‌ ಬಿಡುಗಡೆ ಮಾಡಿದೆ.

“ಜನರು ತಮ್ಮ ಡೇಟಾವನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ನಾವು ನಂಬುತ್ತೇವೆ, ಮತ್ತು ಹೆಚ್ಚಿನ ಪಾರದರ್ಶಕತೆ ಮತ್ತು ನಿಯಂತ್ರಣಗಳನ್ನು ಒದಗಿಸುವ ಮೂಲಕ ಜನರ ಗೌಪ್ಯತೆಯನ್ನು ಗೌರವಿಸುವ ಹೊಸ ಮಾರ್ಗಗಳನ್ನು ನಾವು ಅಭಿವೃದ್ಧಿಪಡಿಸುತ್ತೇವೆ.” ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ.

ಅಳಿಸುವುದು ಹೇಗೆ?

ನಿಮ್ಮ ಫೇಸ್‌ಬುಕ್‌ನಲ್ಲಿ ಪ್ರೈವೆಸಿ ಸೆಟ್ಟಿಂಗ್‌ನಲ್ಲಿ Activity Log ಒಪನ್‌ ಮಾಡಿ. ನಂತರ Manage Activity ಮೇಲೆ ಕ್ಲಿಕ್‌ ಮಾಡಿದರೆ ನೀವು ಫೇಸ್‌ಬುಕ್‌ನಲ್ಲಿ ಇದುವರೆಗೂ ಮಾಡಿದ ಚಟುವಟಿಕೆಗಳೆಲ್ಲವೂ ಗೋಚರಿಸುತ್ತವೆ. ಅವುಗಳಲ್ಲಿ ಬೇಡವಾದುದನ್ನು ಸೆಲೆಕ್ಟ್‌ ಮಾಡಿ ಡಿಲೀಟ್‌ ಮಾಡಬಹುದು.

ನಂತರ Filters ಮೇಲೆ ಕ್ಲಿಕ್‌ ಮಾಡಿದರೆ Categories ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಪೋಸ್ಟ್‌ಗಳು, ನೀವು ಟ್ಯಾಗ್‌ ಆಗಿರುವುದು, ನಿಮ್ಮ ಚಟುವಟಿಕೆಗಳು, ನಿಮ್ಮ ಗ್ರೂಪ್‌ಗಳು ಈ ರೀತಿ ತೆರೆದಕೊಳ್ಳುತ್ತದೆ. ನಿಮಗೆ ಬೇಡವಾಗಿದ್ದನ್ನು ಡಿಲೀಟ್‌ ಮಾಡಬಹುದು.

ಅದರ ಕೆಳಗಿನ Date ಮೇಲೆ ನೀವು ಕ್ಲಿಕ್‌ ಮಾಡಿದರೆ Start Date End Date ಇರುತ್ತದೆ. ಎಂದಿನಿಂದ ಎಂದಿನವರೆಗೆ ನಿಮಗೆ ಪೋಸ್ಟ್‌ಗಳು ಬೇಡ ಅದನ್ನು ನಮೂದಿಸಿ ಡಿಲಿಟ್‌ ಮಾಡಿದರೆ ಅಲ್ಲಿಗೆ ನಿಮ್ಮ ಅನಗತ್ಯ ಪೋಸ್ಟ್‌ಗಳು ಕಾಣೆಯಾಗುತ್ತವೆ.

ಇನ್ನು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ

Facebook का नया "MANAGE ACTIVITY" feature

Facebook के इस नए फीचर से Delete करें अपनी पुराने से पुरानी Photo, Video या Status, सिर्फ एक क्लिक से.

Posted by Tech Tak on Wednesday, June 3, 2020

ಟ್ವಿಟ್ಟರ್‌ನಲ್ಲಿ ಈ ಸಮಸ್ಯೆಗೆ ಬೇರೆ ಪರಿಹಾರ ಕಂಡುಕೊಂಡಿದೆ. ಬ್ರೆಜಿಲ್‌ನಲ್ಲಿ ಅಲ್ಪಕಾಲಿಕ ಟ್ವೀಟ್ಗಳನ್ನು ಕಳುಹಿಸುವ ಸಾಮರ್ಥ್ಯವನ್ನು “ಫ್ಲೀಟ್ಸ್” ಎಂದು ಕರೆಯಲಾಗುತ್ತದೆ – ಇದು 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ.

ಫೇಸ್‌ಬುಕ್‌ನ ಅಂಗಸಂಸ್ಥೆಯಾದ ಇನ್‌ಸ್ಟಾಗ್ರಾಮ್ ನಲ್ಲಿನ ಪೋಸ್ಟ್‌ಗಳು ಯಾವಾಗಲೂ ಪೂರ್ವನಿಯೋಜಿತವಾಗಿರುತ್ತವೆ, ಅಂದರೆ ಸ್ವಲ್ಪ ಸಮಯದ ನಂತರ ಸ್ವಯಂಚಾಲಿತವಾಗಿ ಅಳಿಸಲ್ಪಡುತ್ತವೆ. 2017 ರಲ್ಲಿ ಕಂಪನಿಯು “ಆರ್ಕೈವ್” ವೈಶಿಷ್ಟ್ಯವನ್ನು ಪರಿಚಯಿಸಿತು, ಬಳಕೆದಾರರು ಸಾಕಷ್ಟು ಲೈಕ್‌ಗಳಿಲ್ಲದ  ಚಿತ್ರಗಳನ್ನು ಅಳಿಸುವ ಪ್ರವೃತ್ತಿ ಹೆಚ್ಚುತ್ತಿದೆ.


ಇದನ್ನೂ ಓದಿ: ಮೂರೇ ವಾರಗಳಲ್ಲಿ ಟ್ವಿಟ್ಟರ್‌ನಲ್ಲಿ ಮೋದಿಯನ್ನು ಅನ್‌ಫಾಲೋ ಮಾಡಿದ ವೈಟ್‌ಹೌಸ್‌!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...