Homeಅಂಕಣಗಳುಸದ್ಯಕ್ಕೆ ಯಡಿಯೂರಪ್ಪನವರ ಕುರ್ಚಿಗೆ ಅಪಾಯವಿಲ್ಲ. ಏಕೆಂದರೆ..

ಸದ್ಯಕ್ಕೆ ಯಡಿಯೂರಪ್ಪನವರ ಕುರ್ಚಿಗೆ ಅಪಾಯವಿಲ್ಲ. ಏಕೆಂದರೆ..

ಬಿಜೆಪಿ ಶಾಸಕರಲ್ಲಿ ಅತೃಪ್ತರು ಬಹಳ ಮಂದಿ ಇದ್ದಾರೆ. ಅವರು ಏನು ಮಾಡಲು ಹೇಸುವುದಿಲ್ಲ. ಅವರಿಗೆ ಸ್ವಾರ್ಥ ಬಿಟ್ಟು ಬೇರೇನೂ ಗೊತ್ತಿಲ್ಲ. ಸಂಸ್ಥೆ ಅವರಿಗೊಂದು ಆಸರೆಯ ನೆಲೆ ಅಷ್ಟೇ. ಅವರಿಗೆ ಪಾವಿತ್ರ್ಯತೆ ಕಾಪಾಡಬೇಕೆಂಬ ಆಸಕ್ತಿ ಲವಲೇಶವೂ ಇಲ್ಲ. ಈ ವ್ಯಾಧಿ ಬಿಜೆಪಿಯಲ್ಲಿ ಮಾತ್ರ ಬೇರೂರಿದೆ ಎಂದೇನಿಲ್ಲ.

- Advertisement -
- Advertisement -

ಮುಖ್ಯಮಂತ್ರಿ ಯಡಿಯೂರಪ್ಪನವರ ಭವಿಷ್ಯಕ್ಕೆ ಕುತ್ತು ಇದೆ ಎಂಬುದು ಇತ್ತೀಚಿನ ಬಿಜೆಪಿ ಶಾಸಕರ ನಡಾವಳಿಗಳಿಂದ ವ್ಯಕ್ತವಾಗುತ್ತದೆ. ಯಡಿಯೂರಪ್ಪನವರು ಕೊರೊನಾ ತಡೆಗಟ್ಟುವ ಕೆಲಸದಲ್ಲಿ ತನ್ಮಯತೆಯಿಂದ ಕಾರ್ಯನಿರ್ವಹಿಸಿದ್ದಾರೆ, ಅದರಲ್ಲಿ ಎರಡು ಮಾತಿಲ್ಲ. ಕೊರೊನಾ ತಡೆಗೆ ಬಳಸಲಾದ ಅಪಾರ ಹಣದಲ್ಲಿ ದೊಡ್ಡ ಮೊತ್ತದ ಗೋಲ್‍ಮಾಲ್ ಆಗಿದೆ. ತಿನ್ನುವುದಕ್ಕೆ ಅವಕಾಶ ಇರುವ ಎಲ್ಲ ಧನಪಿಶಾಚಿ ಮಂತ್ರಿಗಳು, ಶಾಸಕರು, ಅಧಿಕಾರಿಗಳು ತಿಂದು ಹಾಕಿದ್ದಾರೆ. ಈ ಹಣ ದುರುಪಯೋಗದ ತನಿಖೆಯನ್ನು ಯಡಿಯೂರಪ್ಪನವರು ತಡ ಮಾಡದೆ ಆರಂಭಿಸಬೇಕು. ಈ ಹಗರಣದಲ್ಲಿ ಯಡಿಯೂರಪ್ಪನವರದು ಯಾವ ಪಾತ್ರವೂ ಇಲ್ಲವೆಂದು ನನಗನಿಸುತ್ತದೆ. ಆದ್ದರಿಂದ ಭ್ರಷ್ಟ ಪ್ರಕರಣಗಳನ್ನು ಮುಚ್ಚಿಡುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಆಲಸ್ಯ ತೋರಬಾರದು.

ಬಿಜೆಪಿ ಶಾಸಕರಲ್ಲಿ ಅತೃಪ್ತರು ಬಹಳ ಮಂದಿ ಇದ್ದಾರೆ. ಅವರು ಏನು ಮಾಡಲು ಹೇಸುವುದಿಲ್ಲ. ಅವರಿಗೆ ಸ್ವಾರ್ಥ ಬಿಟ್ಟು ಬೇರೇನೂ ಗೊತ್ತಿಲ್ಲ. ಸಂಸ್ಥೆ ಅವರಿಗೊಂದು ಆಸರೆಯ ನೆಲೆ ಅಷ್ಟೇ. ಅವರಿಗೆ ಪಾವಿತ್ರ್ಯತೆ ಕಾಪಾಡಬೇಕೆಂಬ ಆಸಕ್ತಿ ಲವಲೇಶವೂ ಇಲ್ಲ. ಈ ವ್ಯಾಧಿ ಬಿಜೆಪಿಯಲ್ಲಿ ಮಾತ್ರ ಬೇರೂರಿದೆ ಎಂದೇನಿಲ್ಲ. ಇದು ಇತರ ಪಕ್ಷಗಳಲ್ಲೂ ಇರುವ ವ್ಯಾಧಿಯೇ. ಇಂತಹವರ ಮಧ್ಯೆ ಸರ್ಕಾರವನ್ನು ಸುಗುಮವಾಗಿ ನಡೆಸುವುದು ಸುಲಭ ಸಾಧ್ಯವಲ್ಲ. ಇದು ಯಡಿಯೂರಪ್ಪನವರಿಗೆ ತಿಳಿಯದ ವಿಷಯವೇನಲ್ಲ.

ಕೃಪೆ: ಪ್ರೆಸ್ ರೀಡರ್

ಯಡಿಯೂರಪ್ಪನವರ ಮುಖ್ಯಮಂತ್ರಿ ಪದವಿ ಕಸಿಯಲು ಈ ಸ್ವಾರ್ಥ ರಾಜಕಾರಣಿಗಳ ಮಸಲತ್ತು ಎಷ್ಟು ಅಪಾಯಕಾರಿಯೋ, ಅಷ್ಟೇ ಆಘಾತಕಾರಿ ಬೆಳವಣಿಗೆ ಕೂಡ. ಆರ್‍ಎಸ್‍ಎಸ್ ವಲಯದಿಂದ ಮತ್ತು ಮೋದಿ, ಷಾದ್ವಯರಿಂದ ಯಡಿಯೂರಪ್ಪನವರಿಗೆ ತೊಂದರೆಯಾಗುವ ಎಲ್ಲ ಲಕ್ಷಣಗಳೂ ನನಗೆ ಕಾಣುತ್ತಿದೆ. ಆರ್‍ಎಸ್‍ಎಸ್‍ನ ಪರಿವಾರದವರಿಬ್ಬರನ್ನು ಯಡಿಯೂರಪ್ಪನವರು ತಮ್ಮ ಸಹಜ ಉತ್ಸಾಹದಿಂದ ಮುನ್ನಡೆಯಲು ಅವಕಾಶವಿಲ್ಲದಂತೆ ಕಡಿವಾಣ ಹಾಕುವುದರಲ್ಲಿ ಯಶಸ್ಸು ಕಂಡಿದ್ದಾರೆ. ಅವರಲ್ಲಿ ಒಬ್ಬರು ಕರ್ನಾಟಕದಲ್ಲೇ ಇದ್ದುಕೊಂಡು ಎಡೆಬಿಡದೆ ಕಾಟ ಕೊಡುತ್ತಿದ್ದಾರೆ. ಇನ್ನೊಬ್ಬರು ದೆಹಲಿಯಲ್ಲಿ ಮೋದಿ ಷಾರವರೊಂದಿಗೆ ಬೆರೆತು ಕಾಟ ಕೊಡುತ್ತಿದ್ದಾರೆ. ಈ ಎರಡೂ ಕಾಟದಿಂದ ಪಾರಾಗಲು ಯಡಿಯೂರಪ್ಪನವರಿಗೆ ಸಾಧ್ಯವೇ ಇಲ್ಲದ ವಾತಾವರಣ ಸೃಷ್ಠಿಯಾಗಿದೆ. ಅಶೋಕ್, ಅಶ್ವತ್ಥನಾರಾಯಣ, ಜಾರಕಿಹೊಳಿಯಂಥ ಮುಂತಾದದವರು ಕೊಚ್ಚಿಕೊಳ್ಳುವಂತೆ ಯಾವರೀತಿಯಲ್ಲೂ ಯಡಿಯೂರಪ್ಪನವರಿಗೆ ಬೆಂಬಲಿಸುವ ಯೋಗ್ಯತೆ ಇವರಿಗೆ ಇವತ್ತಿನ ಪರಿಸ್ಥಿತಿಯಲ್ಲಿ ಸಾಧ್ಯವೇ ಇಲ್ಲ. ಮೋದಿ ಮತ್ತು ಷಾರವರಿಗೆ ಇವರಿಂದ ಆಗಬೇಕಾದದ್ದು ಏನೂ ಇಲ್ಲ. ಇವರೆಲ್ಲ ಅಧಿಕಾರದಾಹ ಉಳ್ಳವರೇ ಹೊರತು ಆಡಳಿತ ಚತುರರೇನಲ್ಲ. ಈ ವಿಚಾರ ಅನುಭವಿ ರಾಜಕಾರಣಿ ಯಡಿಯೂರಪ್ಪನವರಿಗೆ ತಿಳಿಯದೇನಿಲ್ಲ.

ಈ ಸಂದರ್ಭದಲ್ಲಿ ಮಹತ್ವಾಕಾಂಕ್ಷಿಗಳಾದ ಮೋದಿ, ಷಾ ಇವರ ವಿಚಾರ ಸರಣಿ ಏನಿರಬಹುದು? ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಂತಹವರನ್ನು ಕೂಡಿಸುವ ದುರಾಲೋಚನೆ ಇದೆ. ಆ ಛದ್ಮವೇಷದ ಕಾವಿಯ ವಸ್ತ್ರ ಧಾರಿಯಂತಹವರನ್ನು ತಂದು ಕೂಡಿಸುವ ತವಕ ಇದೆ. ಅಷ್ಟೇ ರುತ್‍ಲೆಸ್ ಆದ ವ್ಯಕ್ತಿಯೊಬ್ಬನ ತಲಾಷಿನಲ್ಲಿದ್ದಾರೆ ಅವರು. ಶಾಸಕರಲ್ಲಿ ಈ ಅರ್ಹತೆ ಉಳ್ಳವರು ಯಾರು ಇಲ್ಲ. ಆರ್‍ಎಸ್‍ಎಸ್‍ನಲ್ಲಾದರೂ, ಕರ್ನಾಟಕದಲ್ಲಿ ಇಂತಹ ಧೂರ್ತರು ಇದ್ದಾರೆಯೇ ಎಂದು ತಲಾಷ್ ಮಾಡುತ್ತಿದ್ದಾರೆ. ಪ್ರಹ್ಲಾದ್ ಜೋಷಿ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಯೇನೋ ಹೌದು. ಆದರೆ ಉತ್ತರಪ್ರದೇಶದ ಕಾವಿ ಮುಖ್ಯಮಂತ್ರಿಯ Ruthlessnessನ ಸಾವಿರದಲ್ಲಿ ಒಂದು ಅಂಶಕೂಡ ಪ್ರಹ್ಲಾದ್ ಜೋಶಿಯಲಿಲ್ಲ ಎಂಬುದು ಮೋದಿ-ಷಾಗಳಿಗೆ ಗೊತ್ತಿದೆ. ಉತ್ತರ ಪ್ರದೇಶದ ಛದ್ಮವೇಷಾದಾರಿಯಂತಹ ಕಾಠಿಣ್ಯ ಮನುಷ್ಯ ಮೋದಿ ಷಾ ಅವರಿಗೆ ಸಿಗುವವರೆಗೂ ಯಡಿಯೂರಪ್ಪನವರಿಗೆ ಅಧಿಕಾರದ ಜೀವದಾನ ಮುಂದುವರೆಯುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.

  • ಎಚ್.ಎಸ್ ದೊರೆಸ್ವಾಮಿ.

ಇದನ್ನು ಓದಿ: ಜನರ ಭಯದ ದುರುಪಯೋಗ: ರಾಮ್‌ದೇವ್ ಪತಂಜಲಿಗೆ 10 ಲಕ್ಷ ರೂ ದಂಡ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...