Homeಕರೋನಾ ತಲ್ಲಣಪುಣೆಯಲ್ಲಿ 50% ಜನರು ಕೊರೊನಾ ಆಂಟಿಬಾಡಿ ಹೊಂದಿದ್ದಾರೆ: ಸಮೀಕ್ಷೆ

ಪುಣೆಯಲ್ಲಿ 50% ಜನರು ಕೊರೊನಾ ಆಂಟಿಬಾಡಿ ಹೊಂದಿದ್ದಾರೆ: ಸಮೀಕ್ಷೆ

ಪರ್ಸಿಸ್ಟೆಂಟ್ ಫೌಂಡೇಶನ್‌ನಿಂದ ಧನಸಹಾಯ ಪಡೆದ ಮೊದಲ ಸೆರೋ-ಸಮೀಕ್ಷೆಯಲ್ಲಿ, 'ಪುಣೆ ನಗರದಲ್ಲಿ ಕೊರೊನಾ ಸಾಂಕ್ರಾಮಿಕ ಮತ್ತು ಸಿರೊಲಾಜಿಕಲ್ ಕಣ್ಗಾವಲು' ಈ ಫಲಿತಾಂಶಗಳನ್ನು ಬಹಿರಂಗಪಡಿಸಿದೆ.

- Advertisement -
- Advertisement -

ಮುಂಬೈಯನ್ನು ಮೀರಿಸಿ ಪುಣೆ ದೇಶದ ಪ್ರಮುಖ ಕೊರೊನಾ ಹಾಟ್‌ಸ್ಪಾಟ್ ನಗರವಾದ ಕೇವಲ ಎರಡು ದಿನಗಳ ನಂತರ, ಅಲ್ಲಿನ ಶೇಕಡಾ 50 ಕ್ಕೂ ಹೆಚ್ಚು ಜನರು SARS-CoV2 ಅಥವಾ Covid-19 ವಿರುದ್ಧ ಪ್ರತಿಕಾಯಗಳನ್ನು(ಆಂಟಿಬಾಡಿ) ಅಭಿವೃದ್ಧಿಪಡಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪರ್ಸಿಸ್ಟೆಂಟ್ ಫೌಂಡೇಶನ್‌ನಿಂದ ಧನಸಹಾಯ ನಡೆದ ಮೊದಲ ಸೆರೋ-ಸಮೀಕ್ಷೆಯಲ್ಲಿ, ‘ಪುಣೆ ನಗರದಲ್ಲಿ ಕೊರೊನಾ ಸಾಂಕ್ರಾಮಿಕ ಮತ್ತು ಸಿರೊಲಾಜಿಕಲ್ ಕಣ್ಗಾವಲು’ ಎಂಬ ಅಧ್ಯಯನವು ಈ ಫಲಿತಾಂಶಗಳನ್ನು ಬಹಿರಂಗಪಡಿಸಿದೆ.

ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಮ್‌ಸಿ), ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ (ಎಸ್‌ಪಿಪಿಯು), ಟ್ರಾನ್ಸ್ ಲೇಷನಲ್ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಟಿಎಚ್‌ಎಸ್‌ಟಿಐ), ಫರಿದಾಬಾದ್, ಮತ್ತು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್, ವೆಲ್ಲೂರು ಸಂಸ್ಥೆಗಳೊಟ್ಟಿಗೆ, ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್ಇಆರ್) ಜಂಟಿಯಾಗಿ ಈ ಸಮೀಕ್ಷೆಯನ್ನು ನಡೆಸಿವೆ.

ಈ ಅಧ್ಯಯನವು ಸೋಂಕಿಗೆ ಒಳಗಾದ ಮತ್ತು ಕೊರೊನಾ ವಿರುದ್ಧದ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದ ಹೆಚ್ಚಿನ ಸಂಭವನೀಯ ಪ್ರದೇಶಗಳಲ್ಲಿನ ಜನಸಂಖ್ಯೆಯ ಪ್ರಮಾಣವನ್ನು ಅಂದಾಜು ಮಾಡಿದೆ. ಅಧ್ಯಯನವು ಸೋಂಕಿನ ಪ್ರತಿರಕ್ಷೆಯ ಬಗ್ಗೆ ಮಾಹಿತಿ ಒದಗಿಸುವುದಿಲ್ಲ” ಎಂದು ಐಐಎಸ್ಇಆರ್ ಹೇಳಿದೆ.

ಯೆರಾವಾಡಾ, ಲೋಹಿಯಾನಗರ-ಕಾಸೆವಾಡಿ, ರಾಸ್ತಾಪೇತ್-ರವಿವರ್‌ಪೆತ್, ಕಾಸ್ಬಪೆತ್-ಸೋಮವರ್‌ಪೆತ್ ಮತ್ತು ನವಿಪೆತ್-ಪಾರ್ವತಿ ವಾರ್ಡ್‌ಗಳ ಒಟ್ಟು ಜನಸಂಖ್ಯೆ 3.66 ಲಕ್ಷ ಜನ ಸಮೀಕ್ಷೆಗೆ ಒಳಗಾಗಿದ್ದಾರೆ.

ಜುಲೈ 20 ರಿಂದ ಆಗಸ್ಟ್ 5 ರವರೆಗೆ ಐಜಿಜಿ ಪ್ರತಿಕಾಯಗಳ ಇರುವಿಕೆಯನ್ನು ಪತ್ತೆಹಚ್ಚಲು 1,664 ಜನ ಒಪ್ಪಿತ ವ್ಯಕ್ತಿಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು.

5 ವಾರ್ಡ್‌ಗಳಲ್ಲಿ ಸೋಂಕಿನ ವ್ಯಾಪಕ ಹರಡುವಿಕೆ ಕಂಡುಬಂದಿದೆ ಎಂದು ಅಧ್ಯಯನವು ಸೂಚಿಸಿದೆ. ಸೆರೊಪ್ರಿವೆಲೆನ್ಸ್ ಶೇಕಡಾ 36.1 ರಿಂದ 65.4 ರವರೆಗೆ ಇರುತ್ತದೆ ಮತ್ತು ಇದು ಎಲ್ಲಾ ರೀತಿಯ ವಾಸಸ್ಥಳಗಳಲ್ಲಿ ಗಣನೀಯವಾಗಿ ಕಂಡುಬಂದಿದೆ.

ಕೊಳೆಗೇರಿಗಳಲ್ಲಿ ವಾಸಿಸುವವರಲ್ಲಿ ಶೇಕಡಾ 56-62ರಷ್ಟು ಸೆರೊಪೊಸಿಟಿವಿಟಿ ಕಂಡುಬಂದರೆ, ಬಂಗಲೆ ನಿವಾಸಿಗಳಲ್ಲಿ ಶೇಕಡಾ 43.9, ಮತ್ತು ಕಟ್ಟಡಗಳಲ್ಲಿ ಉಳಿದುಕೊಂಡಿರುವವರಲ್ಲಿ ಶೇಕಡಾ 33 ರಷ್ಟಿದೆ. ಸಾಮೂಹಿಕ ಶೌಚಾಲಯಗಳನ್ನು ಹೊಂದಿರುವವರಿಗೆ ಹೋಲಿಸಿದರೆ ಪ್ರತ್ಯೆಕ ಶೌಚಾಲಯಗಳ ಪ್ರವೇಶ ಹೊಂದಿರುವವರಲ್ಲಿ ಹರಡುವಿಕೆ ಕಡಿಮೆ ಎಂದು ಅಧ್ಯಯನ ತಿಳಿಸಿದೆ.

ಪುರುಷರಲ್ಲಿ ಶೇಕಡಾ 52.8 ಮತ್ತು ಮಹಿಳೆಯರಲ್ಲಿ 50.1 ರಷ್ಟು ಸೆರೊಪ್ರೆವೆಲೆನ್ಸ್ ಇದೆ. 66 ವರ್ಷಕ್ಕಿಂತ ಮೇಲ್ಪಟ್ಟವರು 39.8 ಶೇಕಡಾ ಕಡಿಮೆ ಪ್ರಮಾಣವನ್ನು ಹೊಂದಿದ್ದಾರೆ.

5 ವಾರ್ಡ್‌ಗಳಲ್ಲಿ ಶೇಕಡಾವಾರು ಹಿಗಿದೆ. ಲೋಹಿಯಾನಗರ್- ಕಾಸೆವಾಡಿ (65.4), ನವೀಪೇಟ್-ಪಾರ್ವತಿ (56.7), ಯೆರವಾಡ (56.6), ರಸ್ತಪೇಟ್-ರವಿವಾರ್ ಪೇಟ್ (45.7) ಮತ್ತು ಕಸ್ಬಾಪೇಟ್-ಸೋಮವಾರ್ ಪೇಟ್ (35.1).

ದೊಡ್ಡ ಮೊತ್ತದ ಮಾದರಿಗಳೊಂದಿಗೆ ಇನ್ನೂ ಎರಡು ಸಿರೊ-ಸಮೀಕ್ಷೆಗಳನ್ನು ಪ್ರಾರಂಭಿಸಲು ಪಿಎಂಸಿ ಯೋಜಿಸಿದೆ.

ಸೋಮವಾರದವರೆಗೆ, ಪಿಎಂಸಿ 80,407 ಕೊರೊನಾ ಪ್ರಕರಣಗಳು ಮತ್ತು 2,077 ಸಾವುಗಳನ್ನು ದಾಖಲಿಸಿದೆ, ಪುಣೆ ಜಿಲ್ಲೆಯಲ್ಲಿ 132,481 ಪ್ರಕರಣಗಳು ಮತ್ತು 3,247 ಸಾವುಗಳು ದಾಖಲಾಗಿವೆ, ಇದು ಮುಂಬೈ ಮತ್ತು ಥಾಣೆಗಿಂತ ಹೆಚ್ಚಾಗಿದೆ.


ಇದನ್ನೂ ಓದಿ: ಕೊರೊನಾ ಸರಣಿ-1: ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬರುವುದಿಲ್ಲವಾ? – ಡಾ.ವಾಸು ಎಚ್‌.ವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...