- Advertisement -
- Advertisement -
ಹಿರಿಯ ಸಾಹಿತಿ ದೇವನೂರು ಮಹಾದೇವರವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಕುಸುಮಬಾಲೆ’ ರಂಗಕೃತಿಯ ವಾಚಿಕಾಭಿನಯವು ಇಂದು ಸಂಜೆ 6.30 ರಿಂದ ರಂಗಾಯಣದ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಿದೆ.
ಇಂದು ಮಧ್ಯಾಹ್ನ ಮೈಸೂರಿನ ರಂಗಾಯಣ ಆವರಣದಲ್ಲಿ ಇದರ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ರಂಗಾಯಣದ ವಿನ್ಯಾಸ ಕಲಾವಿದರಾದ ಎಚ್.ಕೆ.ದ್ವಾರಕಾನಾಥ್, ಕುಸುಮಬಾಲೆ ಕುರಿತಂತೆ ರಚಿಸಿದ್ದ ಚಿತ್ರಕಲೆಯನ್ನು ರಂಗಕರ್ಮಿಗಳಾದ ಬಿ.ವಿ.ರಾಜಾರಾಮ್ ಬಿಡುಗಡೆ ಮಾಡಿದರು.
ಈ ವಾಚನಾಭಿನಯವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ದೇವನೂರರ ‘ಕುಸುಮಬಾಲೆ ವಾಚಿಕಾಭಿನಯ’: ಇಂದಿನಿಂದ ಯೂಟ್ಯೂಬ್, ಫೇಸ್‌ಬುಕ್‌ನಲ್ಲಿ ಪ್ರಸಾರ


